News Kadaba

ಚಿತ್ರದುರ್ಗ ಬಸ್ ದುರಂತ: ಮೃತರ ಕುಟುಂಬಕ್ಕೆ ರೂ. 2 ಲಕ್ಷ ಪರಿಹಾರ ಘೋಷಿಸಿದ ಪ್ರಧಾನಿ ಮೋದಿ

(ನ್ಯೂಸ್‌ ಕಡಬ)com,ಡಿ.25: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಗೊರ್ಲತ್ತು ಕ್ರಾಸ್ ಬಳಿ ಸಂಭವಿಸಿದ ಭೀಕರ ಬಸ್ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಕೇಂದ್ರ ಸರ್ಕಾರ ತಲಾ ರೂ. 2 ಲಕ್ಷ ಪರಿಹಾರ ಘೋಷಿಸಿದೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ತೀವ್ರ ಸಂತಾಪ ಸೂಚಿಸಿದ್ದು, ಪ್ರಧಾನ ಮಂತ್ರಿಯವರ ರಾಷ್ಟ್ರೀಯ ಪರಿಹಾರ ನಿಧಿಯಿಂದ ನೆರವು ನೀಡುವುದಾಗಿ ತಿಳಿಸಿದ್ದಾರೆ. ಪ್ರಧಾನಿ ಕಾರ್ಯಾಲಯವು ಎಕ್ಸ್ ಮೂಲಕ ಮಾಹಿತಿ ಹಂಚಿಕೊಂಡಿದ್ದು, “ಕರ್ನಾಟಕದ ಚಿತ್ರದುರ್ಗ ಜಿಲ್ಲೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಜೀವಹಾನಿಯಾಗಿರುವುದು ಅತ್ಯಂತ ದುಃಖಕರ. ತಮ್ಮ […]

ಚಿತ್ರದುರ್ಗ ಬಸ್ ದುರಂತ: ಮೃತರ ಕುಟುಂಬಕ್ಕೆ ರೂ. 2 ಲಕ್ಷ ಪರಿಹಾರ ಘೋಷಿಸಿದ ಪ್ರಧಾನಿ ಮೋದಿ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಸಂಪಾಜೆ: ಬಾವಿಗೆ ಬಿದ್ದ ಮಹಿಳೆಯನ್ನು ರಕ್ಷಿಸಿದ ರಿಕ್ಷಾಚಾಲಕ

(ನ್ಯೂಸ್‌ ಕಡಬ)com,ಡಿ.25: ಸಂಪಾಜೆ ಗ್ರಾಮದ ಕಲ್ಲುಗುಂಡಿ ಕೈಪಡ್ಕ ಎಂಬಲ್ಲಿ ಆಕಸ್ಮಿಕವಾಗಿ ಬಾವಿಗೆ ಬಿದ್ದ ಮಹಿಳೆಯೊಬ್ಬರನ್ನು ಆಟೋ ಚಾಲಕ ಗುರುಪ್ರಕಾಶ್ ಅವರು ರಕ್ಷಿಸಿದ್ದಾರೆ. ಮಂಗಳವಾರದಂದು ಕೈಪಡ್ಕದಲ್ಲಿ ಮಹಿಳೆಯೊಬ್ಬರು ಆಕಸ್ಮಿಕವಾಗಿ ಬಾವಿಗೆ ಬಿದ್ದಿದ್ದರು. ಈ ಸಂದರ್ಭದಲ್ಲಿ ಅದೇ ರಸ್ತೆಯಲ್ಲಿ ಆಟೋ ಚಾಲನೆ ಮಾಡಿಕೊಂಡು ಹೋಗುತ್ತಿದ್ದ ಗುರುಪ್ರಕಾಶ್ ಅವರಿಗೆ ವಿಷಯ ತಿಳಿದಿದೆ. ಕೂಡಲೇ ಕಾರ್ಯಪ್ರವೃತ್ತರಾದ ಅವರು ಬಾವಿಗೆ ಜಿಗಿದು, ಸ್ಥಳೀಯರ ಸಹಾಯದೊಂದಿಗೆ ಮಹಿಳೆಯನ್ನು ಸುರಕ್ಷಿತವಾಗಿ ಮೇಲೆತ್ತಿದ್ದಾರೆ. ಬಳಿಕ ಮಹಿಳೆಯನ್ನು ಚಿಕಿತ್ಸೆಗಾಗಿ ಸುಳ್ಯದ ಆಸ್ಪತ್ರೆಗೆ ದಾಖಲಿಸಲಾಗಿದೆ. ಗುರುಪ್ರಕಾಶ್ ಅವರ ಸಮಯಪ್ರಜ್ಞೆಗೆ, ಅವರ ಧೈರ್ಯಕ್ಕೆ

ಸಂಪಾಜೆ: ಬಾವಿಗೆ ಬಿದ್ದ ಮಹಿಳೆಯನ್ನು ರಕ್ಷಿಸಿದ ರಿಕ್ಷಾಚಾಲಕ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಬಂಟ್ವಾಳ: ಹಿಟ್ & ರನ್ ಪ್ರಕರಣ-ಆರೋಪಿ ರಿಕ್ಷಾ ಚಾಲಕ ಅರೆಸ್ಟ್

(ನ್ಯೂಸ್‌ ಕಡಬ)com,ಡಿ.25: ಬಂಟ್ವಾಳದಲ್ಲಿ ಸ್ಕೂಟರ್ ಒಂದಕ್ಕೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ರಿಕ್ಷಾವನ್ನು ಬಂಟ್ವಾಳ ಟ್ರಾಫಿಕ್ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ರಾಮಲ್ ಕಟ್ಟೆ ನಿವಾಸಿ ಉಸ್ಮಾನ್ ಎಂಬವರ ಸ್ಕೂಟರ್ ಗೆ ಅಪರಿಚಿತ ರಿಕ್ಷಾ ಡಿಕ್ಕಿ ಹೊಡೆದು ಬಳಿಕ ಪರಾರಿಯಾಗಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಉಸ್ಮಾನ್ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದರು. ಆದರೆ ಎರಡು ಹಿಟ್ ರನ್ ಆಗಿದ್ದ ರಿಕ್ಷಾ ಪತ್ತೆಯಾಗಿರಲಿಲ್ಲ. ರಿಕ್ಷಾ ಡಿಕ್ಕಿಯಾಗಿ ಪರಾರಿಯಾಗಿರುವುದನ್ನು ಅಲ್ಲಿನ ಸ್ಥಳೀಯರು ನೋಡಿದ್ದಲ್ಲದೆ, ಸಿ.ಸಿ.ಕ್ಯಾಮರಾದಲ್ಲಿ

ಬಂಟ್ವಾಳ: ಹಿಟ್ & ರನ್ ಪ್ರಕರಣ-ಆರೋಪಿ ರಿಕ್ಷಾ ಚಾಲಕ ಅರೆಸ್ಟ್ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಚಿತ್ರದುರ್ಗ: ಭೀಕರ ರಸ್ತೆ ಅಪಘಾತ; ಬಸ್-ಲಾರಿ ಡಿಕ್ಕಿ, 17 ಮಂದಿ ಮೃತ್ಯು

(ನ್ಯೂಸ್‌ ಕಡಬ)com,ಡಿ.25: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಗೊರ್ಲತ್ತು ಕ್ರಾಸ್ ಸಮೀಪ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಕನಿಷ್ಠ 17 ಮಂದಿ ಮೃತಪಟ್ಟಿದ್ದಾರೆ. ಬೆಂಗಳೂರುದಿಂದ ಗೋಕರ್ಣಕ್ಕೆ ತೆರಳುತ್ತಿದ್ದ ಸೀಬರ್ಡ್ ಸ್ಲೀಪರ್ ಕೋಚ್ ಬಸ್‌ಗೆ ಎದುರಿನಿಂದ ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ, ಬಸ್ ಬೆಂಕಿ ಹೊತ್ತಿಕೊಂಡು ಸಂಪೂರ್ಣವಾಗಿ ಸುಟ್ಟು ಹೋಗಿದೆ. ಅಪಘಾತದ ವೇಳೆ ಬಸ್‌ನಲ್ಲಿದ್ದ ಹಲವರು ಬೆಂಕಿಯಲ್ಲಿ ಸಿಲುಕಿ ಮೃತಪಟ್ಟಿದ್ದಾರೆ. ಘಟನೆ ಸಂಭವಿಸಿದ ತಕ್ಷಣ ಬಸ್ ಚಾಲಕ ಮತ್ತು ನಿರ್ವಾಹಕರು ಬಸ್‌ನಿಂದ ಹೊರಗೆ ಜಿಗಿದು

ಚಿತ್ರದುರ್ಗ: ಭೀಕರ ರಸ್ತೆ ಅಪಘಾತ; ಬಸ್-ಲಾರಿ ಡಿಕ್ಕಿ, 17 ಮಂದಿ ಮೃತ್ಯು Read More »

ಕರ್ನಾಟಕ

ಭಾರತದ ವಿಮಾನಯಾನ ಮಾರುಕಟ್ಟೆಗೆ ಅಲ್ ಹಿಂದ್ ಏರ್ ಮತ್ತು ಫ್ಲೈಎಕ್ಸ್ಪ್ರೆಸ್ ಎಂಟ್ರಿ

(ನ್ಯೂಸ್‌ ಕಡಬ)com,ಡಿ.25: ಇತ್ತೀಚೆಗಷ್ಟೇ ಶಂಖ್ ಏರ್ ಸಂಸ್ಥೆಗೆ ವಿಮಾನ ಹಾರಾಟ ಸೇವೆಗೆ ಅನುಮತಿಸಿದ್ದ ಕೇಂದ್ರ ಸರ್ಕಾರ ಇದೀಗ ಇನ್ನೂ ಎರಡು ಸಂಸ್ಥೆಗಳಿಗೆ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ಕೊಟ್ಟಿದೆ ಕೇರಳ ಮೂಲದ ಅಲ್ ಹಿಂದ್ ಹಾಗೂ ಹೈದರಾಬಾದ್ ಮೂಲದ ಫ್ಲೈ ಎಕ್ಸ್​ಪ್ರೆಸ್ ಸಂಸ್ಥೆಗಳಿಗೆ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯವು ಎನ್‌ಒಸಿ ನೀಡಿದೆ. ಈ ಹಿನ್ನೆಲೆ ಭಾರತದ ನಾಗರಿಕ ವಿಮಾನಯಾನ ಮಾರುಕಟ್ಟೆಯಲ್ಲಿ ಪ್ರಾಬಲ್ಯವನ್ನು ಹೊಂದಿರುವ ಇಂಡಿಗೋ ಮತ್ತು ಏರ್ ಇಂಡಿಯಾಗೆ ಹೊಡೆತ ಬೀಳುವ ಸಾಧ್ಯತೆ ಇದೆ. ಈ ಬಗ್ಗೆ ಮಾಹಿತಿ ನೀಡಿ

ಭಾರತದ ವಿಮಾನಯಾನ ಮಾರುಕಟ್ಟೆಗೆ ಅಲ್ ಹಿಂದ್ ಏರ್ ಮತ್ತು ಫ್ಲೈಎಕ್ಸ್ಪ್ರೆಸ್ ಎಂಟ್ರಿ Read More »

ಬ್ರೇಕಿಂಗ್ ನ್ಯೂಸ್

LVM3-M6 ರಾಕೆಟ್ ಉಡಾವಣೆ: ಇಸ್ರೋವನ್ನ ಅಭಿನಂದಿಸಿದ ಪ್ರಧಾನಿ ಮೋದಿ

(ನ್ಯೂಸ್‌ ಕಡಬ) newskadaba.com,ಡಿ.24: ಅಮೆರಿಕಾದ ಸಂವಹನ ಉಪಗ್ರಹ ‘ಬ್ಲೂಬರ್ಡ್ ಬ್ಲಾಕ್-2’ ಅನ್ನು ಇಸ್ರೋದ ಅತ್ಯಂತ ಭಾರವಾದ ಎಲ್‌ವಿಎಂ3-ಎಂ ರಾಕೆಟ್ ನಭಕ್ಕೆ ಯಶಸ್ವಿಯಾಗಿ ಸೇರಿಸಿದೆ. ಇದರ ಬೆನ್ನಲ್ಲೇ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ. ಬ್ಲೂಬರ್ಡ್ -2 ಯಶಸ್ವಿ ಉಡಾವಣೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಶೇರ್ ಮಾಡಿರುವ ಪ್ರಧಾನಿ ಮೋದಿ, “ಇಸ್ರೋ ಸಾಧನೆಯನ್ನು ಶ್ಲಾಘಿಸಿದ್ದಾರೆ. ಇದು ಭಾರತದ ಬಾಹ್ಯಾಕಾಶ ಕ್ಷೇತ್ರದ ಒಂದು ಪ್ರಮುಖ ಸಾಧನೆಯಾಗಿದೆ. ಇದರೊಂದಿಗೆ ದೇಶದ ಅತಿ ಭಾರದ

LVM3-M6 ರಾಕೆಟ್ ಉಡಾವಣೆ: ಇಸ್ರೋವನ್ನ ಅಭಿನಂದಿಸಿದ ಪ್ರಧಾನಿ ಮೋದಿ Read More »

ಬ್ರೇಕಿಂಗ್ ನ್ಯೂಸ್

ರಾಜ್ಯಾದ್ಯಂತ ಸರ್ಕಾರಿ ಶಾಲೆಗಳಲ್ಲಿ 2,200 ಕೊಠಡಿಗಳ ನಿರ್ಮಾಣಕ್ಕೆ ಅನುಮೋದನೆ

(ನ್ಯೂಸ್‌ ಕಡಬ) newskadaba.com,ಡಿ.24: ಪ್ರಸಕ್ತ 2025-26 ನೇ ಸಾಲಿನಲ್ಲಿ ರಾಜ್ಯಾದ್ಯಂತ ಸರ್ಕಾರಿ ಶಾಲೆಗಳಲ್ಲಿ ಸುಮಾರು 360.01 ಕೋಟಿ ರೂ. ವೆಚ್ಚದಲ್ಲಿ ಸುಮಾರು 2,200 ತರಗತಿ ಕೊಠಡಿಗಳ ನಿರ್ಮಾಣಕ್ಕೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅನುಮತಿ ನೀಡಿ ಆದೇಶಿಸಿದೆ. ಶಾಲಾ ಶಿಕ್ಷಣ ಇಲಾಖೆ ಆಯುಕ್ತರಿಗೆ ಕೊಠಡಿಗಳ ನಿರ್ಮಾಣ ಕಾಮಗಾರಿಯನ್ನು ಶಾಲಾವಾರು ಪಟ್ಟಿಯಂತೆ ಹಾಗೂ ಷರತ್ತು ಮತ್ತು ನಿಬಂಧನೆಗಳಿಗೆ ಅನುಗುಣವಾಗಿ ನಿಗಧಿತ ಕಾಲಾವಧಿಯಲ್ಲಿ ಅನುಷ್ಠಾನಗೊಳಿಸಲು ಅನುಮೋದನೆ ನೀಡಿ ಆದೇಶಿಸಲಾಗಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಬೆಳಗಾವಿ ಮತ್ತು ಕಲಬುರಗಿ ವಿಭಾಗಗಳಲ್ಲಿ

ರಾಜ್ಯಾದ್ಯಂತ ಸರ್ಕಾರಿ ಶಾಲೆಗಳಲ್ಲಿ 2,200 ಕೊಠಡಿಗಳ ನಿರ್ಮಾಣಕ್ಕೆ ಅನುಮೋದನೆ Read More »

ಕರ್ನಾಟಕ

ಜಮ್ಮು-ಕಾಶ್ಮೀರದಲ್ಲಿ ಗುಂಡಿನ ದಾಳಿ; ಸೇನಾ ಘಟಕದ ಜೆಸಿಒ ಹುತಾತ್ಮ

(ನ್ಯೂಸ್‌ ಕಡಬ)com,ಡಿ.24: ಸೇನಾ ಶಿಬಿರದೊಳಗೆ ನಡೆದ ಗುಂಡಿನ ದಾಳಿಯಲ್ಲಿ ಸೇನೆಯ ಜೂನಿಯರ್ ಕಮಿಷನ್ಡ್ ಆಫೀಸರ್ ಒಬ್ಬರು ಹುತಾತ್ಮರಾಗಿರುವ ಘಟನೆ ಜಮ್ಮು- ಕಾಶ್ಮೀರದ ಸಾಂಬಾ ಜಿಲ್ಲೆಯಲ್ಲಿ ಸಂಭವಿಸಿದೆ. ಈ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ. ಘಟನೆ ತನಿಖೆ ಹಂತದಲ್ಲಿದೆ. ಗುಂಡಿನ ದಾಳಿಯ ಹಿಂದೆ ಯಾವುದೇ ಭಯೋತ್ಪಾದಕ ಕೃತ್ಯದ ಸಾಧ್ಯತೆ ಇಲ್ಲ ಎಂದು ರಕ್ಷಣಾ ವಕ್ತಾರರು ಬುಧವಾರ ಮಾಹಿತಿ ನೀಡಿದ್ದಾರೆ. ಸಾಂಬಾದಲ್ಲಿರುವ ಸೇನಾ ಘಟಕದ ಜೆಸಿಒ ಒಬ್ಬರು ಜಮ್ಮುವಿನಲ್ಲಿ ಕರ್ತವ್ಯದಲ್ಲಿದ್ದಾಗ ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಹುತಾತ್ಮರಾಗಿದ್ದಾರೆ. ಈ

ಜಮ್ಮು-ಕಾಶ್ಮೀರದಲ್ಲಿ ಗುಂಡಿನ ದಾಳಿ; ಸೇನಾ ಘಟಕದ ಜೆಸಿಒ ಹುತಾತ್ಮ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಅತಿಯಾಗಿ ಫಾಸ್ಟ್ ಫುಡ್ ಸೇವಿಸಿ 11ನೇ ತರಗತಿಯ ವಿದ್ಯಾರ್ಥಿನಿ ಸಾವು

(ನ್ಯೂಸ್‌ ಕಡಬ) newskadaba.com,ಡಿ.24: ಅತಿಯಾಗಿ ಫಾಸ್ಟ್ ಫುಡ್ ತಿಂದು 11ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ತೀವ್ರ ಅಸ್ವಸ್ಥಗೊಂಡು ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ ಅಮ್ರೋಹಾದಲ್ಲಿ ನಡೆದಿದೆ. ವಿದ್ಯಾರ್ಥಿನಿ ಅಹಾನಾ ಎಂಬಾಕೆ ದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ ಎಂದು ತಿಳಿದುಬಂದಿದೆ. ಅಹಾನಾ ಸುಮಾರು ದಿನಗಳಿಂದ ಹೊರಗಿನ ಆಹಾರಗಳನ್ನು ಹೆಚ್ಚು ಸೇವನೆ ಮಾಡಿದ ಕಾರಣ ಆಕೆಯ ಸ್ಥಿತಿ ಹದಗೆಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ. ಆಕೆಯ ಕರುಳುಗಳು ಒಟ್ಟಿಗೆ ಅಂಟಿಕೊಂಡಿವೆ ಮತ್ತು ಅವರ ಜೀರ್ಣಾಂಗ ವ್ಯವಸ್ಥೆಯು ಸಂಪೂರ್ಣವಾಗಿ ಹಾನಿಗೊಳಗಾಗಿದೆ.

ಅತಿಯಾಗಿ ಫಾಸ್ಟ್ ಫುಡ್ ಸೇವಿಸಿ 11ನೇ ತರಗತಿಯ ವಿದ್ಯಾರ್ಥಿನಿ ಸಾವು Read More »

ಬ್ರೇಕಿಂಗ್ ನ್ಯೂಸ್

‘ಬಾಂಗ್ಲಾ ಮೇಲೆ ಭಾರತ ದಾಳಿ ನಡೆಸಿದ್ರೆ ನಮ್ಮ ಸೈನ್ಯ, ಕ್ಷಿಪಣಿ ಪ್ರತಿಕ್ರಿಯಿಸುತ್ತೆ’- ಪಾಕ್ ನಾಯಕ

(ನ್ಯೂಸ್‌ ಕಡಬ) newskadaba.com,ಡಿ.24: ಬಾಂಗ್ಲಾದೇಶದ ಮೇಲೆ ಭಾರತದಿಂದ ಯಾವುದೇ ದಾಳಿ ನಡೆದರೆ ಪಾಕಿಸ್ತಾನದ ಸೈನ್ಯ ಮತ್ತು ಕ್ಷಿಪಣಿಗಳು ಅದಕ್ಕೆ ಪ್ರತಿಕ್ರಿಯಿಸುತ್ತವೆ ಎಂದು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರ ಪಕ್ಷವಾದ ಪಾಕಿಸ್ತಾನ ಮುಸ್ಲಿಂ ಲೀಗ್ (ಪಿಎಂಎಲ್)ನ ಯುವ ವಿಭಾಗದ ನಾಯಕ ಕಮ್ರಾನ್ ಸಯೀದ್ ಉಸ್ಮಾನಿ ಇಂದು ಭಾರತಕ್ಕೆ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ವಿಡಿಯೋ ಹೇಳಿಕೆ ನೀಡಿರುವ ಪಾಕಿಸ್ತಾನದ ನಾಯಕ ಕಮ್ರಾನ್ ಸಯೀದ್ ಉಸ್ಮಾನಿ, “ಬಾಂಗ್ಲಾದೇಶವನ್ನು ಭಾರತದ ಸೈದ್ಧಾಂತಿಕ ಪ್ರಾಬಲ್ಯಕ್ಕೆ ತಳ್ಳುವುದನ್ನು ಪಾಕಿಸ್ತಾನ ಒಪ್ಪುವುದಿಲ್ಲ. ಒಂದುವೇಳೆ ಭಾರತ

‘ಬಾಂಗ್ಲಾ ಮೇಲೆ ಭಾರತ ದಾಳಿ ನಡೆಸಿದ್ರೆ ನಮ್ಮ ಸೈನ್ಯ, ಕ್ಷಿಪಣಿ ಪ್ರತಿಕ್ರಿಯಿಸುತ್ತೆ’- ಪಾಕ್ ನಾಯಕ Read More »

ಬ್ರೇಕಿಂಗ್ ನ್ಯೂಸ್
Scroll to Top