News Kadaba

ಅಕ್ರಮ ಜಾನು​ವಾರು ಸಾಗಾ​ಟ ➤ ಮೂವರು ಖದೀಮರ ಅರೇಸ್ಟ್

(ನ್ಯೂಸ್ ಕಡಬ) newskadaba.com  ಕಾರವಾರ ನ. 05: ಕಾರವಾರದ ಯಲ್ಲಾಪುರ ಪಟ್ಟಣದಜೋಡುಕೆರೆ ಬಳಿ ಅಕ್ರಮವಾಗಿ ಸಾಗಿಸುತ್ತಿದ್ದ ಆರು ಜಾನುವಾರುಗಳನ್ನು ರಕ್ಷಿಸಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂದಿತ ಆರೋಪಿಗಳನ್ನು ಹರಿಯಾಣ ಮೂಲದ ಮನಪೂಲ್‍ಸಿಂಗ್ ಜಗನ್ನಾಥ, ಈಶ್ವರ್ ಸಿಂಗ್, ವಿಜಯ್ ಸಿಂಗ್ ಹಾಗೂ ಕೇರಳದ ರಿಜಿ ಫಿಲೀಫ್ ಎಂದು ಗುರುತಿಸಲಾಗಿದೆ. ಇವರು ಹರಿಯಾಣದಿಂದ ಕೇರಳದ ಕಡೆಗೆ ಮಿನಿ ಲಾರಿಯಲ್ಲಿ 5 ಎಮ್ಮೆಗಳನ್ನು ಹಾಗೂ ಒಂದು ಹಸುವನ್ನು ಹಿಂಸಾತ್ಮಕವಾಗಿ ತುಂಬಿಕೊಂಡು ಸಾಗಿಸುತ್ತಿದ್ದರು ಎನ್ನಲಾಗಿದೆ. ಜೋಡುಕೆರೆ ಬಳಿ ಪೊಲೀಸರು ಲಾರಿಯನ್ನು ತಡೆದು ತಪಾಸಣೆ ನಡೆಸಿದಾಗ […]

ಅಕ್ರಮ ಜಾನು​ವಾರು ಸಾಗಾ​ಟ ➤ ಮೂವರು ಖದೀಮರ ಅರೇಸ್ಟ್ Read More »

ಕರಾವಳಿ

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಎಮರ್ಜೆನ್ಸಿ ಘೋಷಣೆ.!

(ನ್ಯೂಸ್ ಕಡಬ) newskadaba.com ಬೆಂಗಳೂರು ನ. 05: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಮರ್ಜೆನ್ಸಿ ಘೋಷಿಸಲಾಗಿದೆ. 78 ಪ್ರಯಾಣಿಕರಿದ್ದ ವಿಮಾನದಲ್ಲಿ ಟೇಕಾಫ್ ವೇಳೆ ತಾಂತ್ರಿಕ ದೋಷ ಕಂಡುಬಂದುದರಿಂದ, ಎಮರ್ಜೆನ್ಸಿ ಘೋಷಿಸಲಾಗಿದೆ.   ಲುಫ್ತಾನ್ಸಾ ಏರ್ ಲೈನ್ಸ್ ವಿಮಾನ ಟೇಕಾಫ್ ವೇಳೆ ತಾಂತ್ರಿಕ ದೋಷ ಕಂಡು ಬಂದಿದ್ದು, ವಿಷಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಬಳಿಕ, ವಿಮಾನವನ್ನು ಸುರಕ್ಷಿತವಾಗಿ ಭೂಸ್ಪರ್ಷ ಮಾಡಿಸಲಾಗಿದೆ ಎಂದು ತಿಳಿದು ಬಂದಿದೆ. ಎಮರ್ಜೆನ್ಸಿ ಘೋಷಿಸಿದ ಕಾರಣ ವಿಮಾನ ನಿಲ್ದಾಣದಲ್ಲಿ ಕೆಲವು ಕ್ಷಣ ಆತಂಕ ಸೃಷ್ಟಿಯಾಯಿತು ಎಂದು ವರದಿಗಳು ತಿಳಿಸಿವೆ.

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಎಮರ್ಜೆನ್ಸಿ ಘೋಷಣೆ.! Read More »

ಕರಾವಳಿ

ಬಾವಿಗೆ ಬಿದ್ದ ಗೊಬ್ಬರ ತುಂಬಿದ್ದ ಲಾರಿ ➤ 1.36 ಲಕ್ಷ ಮೊತ್ತದ ಗೊಬ್ಬರ ಬಾವಿ ಪಾಲು

(ನ್ಯೂಸ್ ಕಡಬ) newskadaba.com ಕಾರ್ಕಳ ನ. 05: ರಸಗೊಬ್ಬರ ಸಾಗಾಟದ ಲಾರಿಯೊಂದು ಬಾವಿಗೆ ಬಿದ್ದ ಘಟನೆ ಕಾರ್ಕಳ ತಾಲೂಕಿನಲ್ಲಿ ಮಂಗಳವಾರ ನಡೆದಿದೆ.‌ಉಡುಪಿ ಜಿಲ್ಲೆಯ ಕಾರ್ಕಳದ ಟಿಎಪಿಎಂಸಿ ಬಳಿ ಚಾಲಕ ಹಾಗೂ ಕ್ಲೀನರ್​ ಇಬ್ಬರ ಅಜಾಗರೂಕತೆಯಿಂದಾಗಿ ಅಪಘಾತ ಸಂಭವಿಸಿದೆ. ಗೊಬ್ಬರ ತುಂಬಿದ್ದ ಲಾರಿಯನ್ನು ಚಾಲಕ ರಿವರ್ಸ್ ತೆಗೆಯುತ್ತಿದ್ದಾಗ ಅಲ್ಲೇ ಪಕ್ಕದಲ್ಲಿದ್ದ ದೊಡ್ಡ ಬಾವಿಗೆ ಹಿಂಭಾಗ ಜಾರಿದೆ. ಬಳಿಕ ಇಡೀ ಲಾರಿ ಮುಂಭಾಗ ಮೇಲ್ಮುಖವಾಗಿ ಬಾವಿಗೆ ಜಾರಿದ್ದು, 30 ಅಡಿ ಆಳದ ಬಾವಿಯೊಳಗೆ ಲಾರಿ ಸಿಲುಕಿಕೊಂಡಿದೆ. ಲಾರಿಯಲ್ಲಿದ್ದ ಒಟ್ಟು 1.36

ಬಾವಿಗೆ ಬಿದ್ದ ಗೊಬ್ಬರ ತುಂಬಿದ್ದ ಲಾರಿ ➤ 1.36 ಲಕ್ಷ ಮೊತ್ತದ ಗೊಬ್ಬರ ಬಾವಿ ಪಾಲು Read More »

ಕರಾವಳಿ, ಕರ್ನಾಟಕ

ಜಲ್ಲಿ ಸಾಗಾಟ ಮಾಡುತ್ತಿದ್ದ ಟಿಪ್ಪರ್ ಲಾರಿ ಪಲ್ಟಿ ➤ ಚಾಲಕ ಮೃತ್ಯು

(ನ್ಯೂಸ್ ಕಡಬ) newskadaba.com ವಿಟ್ಲ ನ. 04: ಪುಣಚ ಬಳಿ ಜಲ್ಲಿ ಸಾಗಾಟ ಮಾಡುತ್ತಿದ್ದ ಟಿಪ್ಪರ್ ಲಾರಿ ರಸ್ತೆಯಲ್ಲಿ ಪಲ್ಟಿ ಹೊಡೆದಿದೆ. ಪರಿಣಾಮ ಲಾರಿ ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮತ್ತೊಬ್ಬರು ಸಣ್ಣಪುಟ್ಟ ಗಾಯಗೊಂಡ ಘಟನೆ ಪುಣಚ ಬುಳೇರಿಕಟ್ಟೆ ರಸ್ತೆಯಲ್ಲಿ ಸಂಭವಿಸಿದೆ. ಪುಣಚ ಬಳಿ ಇರುವ ಕೋರೆಯಿಂದ ಜಲ್ಲಿ ಸಾಗಾಟ ಮಾಡುತ್ತಿದ್ದ ವೇಳೆ ಪುಣಚ ಗ್ರಾಮದ ಪಾಲತ್ತಡ್ಕ ಎಂಬಲ್ಲಿ ನಿಯಂತ್ರಣ ಕಳೆದು ರಸ್ತೆಗೆ ಉರುಳಿ ಬಿದ್ದಿದೆ.ಈ ವೇಳೆ ಚಾಲಕ ಟಿಪ್ಪರ್ ಕೆಳಗಡೆ ತುಂಬ ಹೊತ್ತು ಸಿಲುಕಿಕೊಂಡಿದ್ದಾರೆ. ಹೊರ ಬರಲಾಗದೆ ಸ್ಥಳದಲ್ಲಿಯೇ

ಜಲ್ಲಿ ಸಾಗಾಟ ಮಾಡುತ್ತಿದ್ದ ಟಿಪ್ಪರ್ ಲಾರಿ ಪಲ್ಟಿ ➤ ಚಾಲಕ ಮೃತ್ಯು Read More »

ಕರಾವಳಿ

ಡಾರ್ಲಿಂಗ್​ ಕೃಷ್ಣ-ಮಿಲನಾ ನಾಗರಾಜ್​ ಮದುವೆ ದಿನಾಂಕ ರಿವೀಲ್

(ನ್ಯೂಸ್ ಕಡಬ) newskadaba.com ಬೆಂಗಳೂರು ನ. 04: ಹಲವು ವರ್ಷಗಳಿಂದ ಪ್ರೀತಿಯಲ್ಲಿದ್ದ ‘ಡಾರ್ಲಿಂಗ್’ ಕೃಷ್ಣ-ಮಿಲನಾ ನಾಗರಾಜ್‌, ಈ ವರ್ಷದ ಆರಂಭದಲ್ಲಿ ನಾವಿಬ್ಬರು ಪ್ರೀತಿ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದರು. ಈ ವಿಚಾರ ಕೇಳಿ ಅವರ ಫ್ಯಾನ್ಸ್ ತುಂಬ ಖುಷಿಯಾಗಿದ್ದರು. ಈ ವಿಚಾರವನ್ನು ಬಹಿರಂಗಪಡಿಸುವುದಕ್ಕಾಗಿಯೇ ಒಂದು ಕಲರ್‌ಫುಲ್ ಫೋಟೋಶೂಟ್ ಮಾಡಿಸಿರುವ ಜೋಡಿ, ನಮ್ಮ ಮದುವೆ ದಿನವನ್ನು ತಿಳಿಸಲು ಸಂತೋಷವಾಗುತ್ತಿದೆ. ಫೆಬ್ರವರಿ 14, 2021 ರಂದು ಮದುವೆ ನಡೆಯಲಿದೆ. ನಮ್ಮನ್ನು ಆಶೀರ್ವದಿಸಿ ಎಂದು ಅವರು ತಿಳಿಸಿದ್ದಾರೆ.  ಜೊತೆಗೆ ಕೃಷ್ಣ-ಮಿಲನಾ ಜೋಡಿಗೆ ಸಿನಿಪ್ರಿಯರು, ಚಿತ್ರರಂಗದ ಗಣ್ಯರು,

ಡಾರ್ಲಿಂಗ್​ ಕೃಷ್ಣ-ಮಿಲನಾ ನಾಗರಾಜ್​ ಮದುವೆ ದಿನಾಂಕ ರಿವೀಲ್ Read More »

ಕರ್ನಾಟಕ, ಸಿನಿಮಾ

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದಲ್ಲಿ ಸುದರ್ಶನ ಹೋಮ

(ನ್ಯೂಸ್ ಕಡಬ) newskadaba.com ಕುಕ್ಕೆ ಸುಬ್ರಹ್ಮಣ್ಯ ನ. 04: ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಕಾಲೇಜಿನಲ್ಲಿ ಮಂಗಳವಾರ ರಾತ್ರಿ ಸುದರ್ಶನ ಹೋಮ ನಡೆಸಲಾಯಿತು.     ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಶುಪಾಲರಾದ ಉದಯಕುಮಾರ್ ದಂಪತಿಗಳು ಪೂಜೆಯಲ್ಲಿ ಕುಳಿತು ಪೂಜಾ ಕಾರ್ಯ ನೆರವೇರಿಸಿದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಎಮ್ ವೆಂಕಪ್ಪ ಗೌಡ, ಕಾಲೇಜಿನ ಪ್ರಾಧ್ಯಪಕರಾದ ಉಷಾ ಅಂಕೋಲೇಖರ್,ಡಾ.ತಾರಕೇಶ್ವರಿ ಯು.ಎಸ್, ಶಿಕ್ಷಕ ರಕ್ಷಕ ಸಂಘದ ಸದಸ್ಯರಾದ ಗೀತಾ ಕಲ್ಲೆಮಠ, ಬಿಂದು ಹರಿಹರಪಲ್ಲತಡ್ಕ ಸೇರಿದಂತೆ ಮತ್ತಿತರರಸು ಪೂಜೆಯಲ್ಲಿ ಉಪಸ್ಥಿತರಿದ್ದರು.    

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದಲ್ಲಿ ಸುದರ್ಶನ ಹೋಮ Read More »

ಕರಾವಳಿ

ಮಂಗಳೂರಿನಲ್ಲಿ ಮುಂದುವರಿದ ದುಷ್ಕರ್ಮಿಗಳ ಅಟ್ಟಹಾಸ ➤ ಹಾಡಹಗಲೇ ಉದ್ಯಮಿಯ ಹತ್ಯೆ.!

(ನ್ಯೂಸ್ ಕಡಬ) newskadaba.com ಮಂಗಳೂರು ನ. 04: ಕೇರಳ ಮೂಲದ ಉದ್ಯಮಿಯೊಬ್ಬರನ್ನು ದುಷ್ಕರ್ಮಿಗಳು ಚೂರಿಯಿಂದ ಹಾಡಹಗಲೇ ಇರಿದು ಹತ್ಯೆ ಮಾಡಿದ ಘಟನೆ ನಗರದ ಕಾವೂರಿನಲ್ಲಿ ಮಂಗಳವಾರ ನಡೆದಿದೆ. ಕಾವೂರು ಮಲ್ಲಿ ಲೇಔಟ್ ನಿವಾಸಿ ಸುರೇಂದ್ರನ್ (60) ಕೊಲೆಯಾದ ವ್ಯಕ್ತಿ ಎಂದು ತಿಳಿದುಬಂದಿದೆ. ಫಾರ್ಮ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದ ಮೂಲತಃ ಕೇರಳದವರಾದ ಸುರೇಂದ್ರನ್ ಅವರು ಹಲವು ವರ್ಷಗಳಿಂದ ಕಾವೂರು ಮಲ್ಲಿ ಲೇಔಟ್‌ನಲ್ಲೇ ಸ್ವಂತ ಮನೆ ಮಾಡಿ ತನ್ನ ಪತ್ನಿ ಜತೆ ವಾಸಿಸುತ್ತಿದ್ದರು.  ಮಧ್ಯಾಹ್ನ 1 ಗಂಟೆ ವೇಳೆಗೆ ಸುರೇಂದ್ರನ್ ಅವರು ಮನೆಗೆ

ಮಂಗಳೂರಿನಲ್ಲಿ ಮುಂದುವರಿದ ದುಷ್ಕರ್ಮಿಗಳ ಅಟ್ಟಹಾಸ ➤ ಹಾಡಹಗಲೇ ಉದ್ಯಮಿಯ ಹತ್ಯೆ.! Read More »

ಕರಾವಳಿ, ಕ್ರೈಮ್ ನ್ಯೂಸ್

ಚಿಕ್ಕಮಗಳೂರು :ಭಾರಿ ಪ್ರಮಾಣದ ಖೋಟಾ ನೋಟು ವಶಕ್ಕೆ

(ನ್ಯೂಸ್ ಕಡಬ) newskadaba.com ಚಿಕ್ಕಮಗಳೂರು  ನ. 03: ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ಠಾಣಾ ವ್ಯಾಪ್ತಿಯ ಹಾಂದಿ ಸರ್ಕಲ್ ಬಳಿ ಅನುಮಾನಾಸ್ಪದವಾಗಿ ಬರುತ್ತಿದ್ದ ಪುತ್ತೂರು ನೋಂದಾವಣೆಯ ಮಾರುತಿ ಕಾರನ್ನು ತಡೆದ ಪೊಲೀಸರ ತಂಡವು ತನಿಖೆ ನಡೆಸಿದಾಗ ಬರೋಬ್ಬರಿ 5. 50 ಲಕ್ಷ ನಕಲಿ ನೋಟು ಪತ್ತೆಯಾಗಿದೆ. ಕಾರಿನಲ್ಲಿದ್ದ ಬೆಳ್ತಂಗಡಿಯ ಸಂತೋಷ್ ಮತ್ತು ಸುರತ್ಕಲ್ ನ ನಝೀರ್ ಎಂಬವರನ್ನು ಪೊಲೀಸರು ವಶಕ್ಕೆ ಪಡೆದು ತೀವ್ರವಾಗಿ ವಿಚಾರಣೆ ನಡೆಸಿದಾಗ ಅಂತರ್ ರಾಜ್ಯ ಖೋಟಾನೋಟು ಜಾಲವು ಬೆಳಕಿಗೆ ಬಂದಿದೆ. ದೇಶದ್ರೋಹ ಪ್ರಕರಣದ ಕಿಂಗ್

ಚಿಕ್ಕಮಗಳೂರು :ಭಾರಿ ಪ್ರಮಾಣದ ಖೋಟಾ ನೋಟು ವಶಕ್ಕೆ Read More »

ಕರಾವಳಿ

ನಟಿಮಣಿಯರ ಜಾಮೀನು ಅರ್ಜಿ ವಜಾ ➤ ರಾಗಿಣಿ, ಸಂಜನಾಗೆ ಮತ್ತೆ ಜೈಲುವಾಸ

(ನ್ಯೂಸ್ ಕಡಬ) newskadaba.com ಬೆಂಗಳೂರು ನ. 03: ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿದ್ದ ನಟಿ ರಾಗಿಣಿ ಹಾಗೂ ಸಂಜನಾ ಗಲ್ರಾನಿ ಜಾಮೀನು ಅರ್ಜಿಯನ್ನ ಹೈಕೋರ್ಟ್ ವಜಾಗೊಳಿಸಿದೆ. ರಾಗಿಣಿ ಮತ್ತು ಸಂಜನಾ ಸೇರಿದಂತೆ ಒಟ್ಟು ಆರೋಪಿಗಳು ಇಂದು ಜಾಮೀನು ಸಿಗುವ ನಿರೀಕ್ಷೆಯಲ್ಲಿದ್ದರು.ಮಾದಕ ದ್ರವ್ಯ ವ್ಯಸನಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 4 ರಂದು ಸಿಸಿಬಿ ಪೊಲಿಸರು ಮೊದಲು ನಟಿ ರಾಗಿಣಿ ಮನೆ ಮೇಲೆ ದಾಳಿ ಮಾಡಿದ್ದರು. ರಾಗಿಣಿ ನಿವಾಸದ ಮೇಲೆ ದಾಳಿ ನಡೆಸಿದ್ದು ಅಧಿಕಾರಿಗಳು ವಿಚಾರಣೆಗಾಗಿ ನಟಿಯನ್ನ ಸಿಸಿಬಿ ಕಚೇರಿಗೆ ಕರೆ

ನಟಿಮಣಿಯರ ಜಾಮೀನು ಅರ್ಜಿ ವಜಾ ➤ ರಾಗಿಣಿ, ಸಂಜನಾಗೆ ಮತ್ತೆ ಜೈಲುವಾಸ Read More »

ಕರಾವಳಿ

ಮಂಗಳೂರು: ನಾಳೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರ ಆಗಮನ

(ನ್ಯೂಸ್ ಕಡಬ) newskadaba.com ಮಂಗಳೂರು, ನ. 03. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಬಿಜೆಪಿ ರಾಜ್ಯ ಕಾರ್ಯಕಾರಣಿ ಸಭೆಯಲ್ಲಿ ಭಾಗವಹಿಸಲು ನಾಳೆ (ನ. 04) ರಾತ್ರಿ ಮಂಗಳೂರಿಗೆ ಆಗಮಿಸಲಿದ್ದಾರೆ.     ನವೆಂಬರ್ 5 ರಂದು ಮಂಗಳೂರು ಕೊಡಿಯಾಲ್ ಬೈಲ್​ನಲ್ಲಿರುವ ಟಿ.ವಿ.ರಮಣ ಪೈ ಸಭಾಂಗಣದಲ್ಲಿ ರಾಜ್ಯ ಬಿಜೆಪಿಯ ವಿಶೇಷ ಸಭೆಯನ್ನು ಉದ್ಘಾಟಿಸಲಿದ್ದು, ಈ ಸಭೆಯಲ್ಲಿ ಭಾಗವಹಿಸಲು ಒಂದು ದಿನ ಮುಂಚಿತವಾಗಿಯೇ ಮುಖ್ಯಮಂತ್ರಿಗಳು ಮಂಗಳೂರಿಗೆ ಆಗಮಿಸಲಿದ್ದಾರೆ. ಬೆಳಗ್ಗೆ 11.30ಕ್ಕೆ ಹೋಟೆಲ್ ಓಷಿಯನ್ ಪರ್ಲ್​ನಲ್ಲಿ ಬಿಜೆಪಿ ರಾಜ್ಯ ಕೋರ್ ಕಮಿಟಿ ಸಭೆಯಲ್ಲಿಪಾಲ್ಗೊಳ್ಳಲಿದ್ದಾರೆ.

ಮಂಗಳೂರು: ನಾಳೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರ ಆಗಮನ Read More »

ಕರಾವಳಿ
Scroll to Top