News Kadaba

ಉಪ್ಪಿನಂಗಡಿ: ಆಂಕರ್ ರಕ್ಷಿತ್ ಶೆಟ್ಟಿಗೆ ಬೆಸ್ಟ್ ಪ್ರೈಂಟೈಮ್ ಆಂಕರ್ ಪ್ರಶಸ್ತಿ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ನ. 07: ದಿಗ್ವಿಜಯ ನ್ಯೂಸ್ ಚಾನೆಲ್ ನ ಆಂಕರ್ ಆಗಿರುವ ಉಪ್ಪಿನಂಗಡಿಯ ರಕ್ಷತ್ ಶೆಟ್ಟಿವರಿಗೆ ಪತ್ರಿಕೋದ್ಯಮ ಕ್ಷೇತ್ರದ ಪ್ರತಿಷ್ಠಿತ ನ್ಯಾಷನಲ್ ಟೆಲಿವಿಷನ್ ಅವಾರ್ಡ್‍ನಲ್ಲಿ ಬೆಸ್ಟ್ ಪ್ರೈಂ ಟೈಮ್ ಆಂಕರ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.     ಇವರು ನಿರೂಪಕರಾಗಿ, ಕಾರ್ಯಕ್ರಮ ನಿರ್ಮಾಪಕರಾಗಿರುವ ಮೆಗಾ ಡಿಬೇಟ್ ಕಾರ್ಯಕ್ರಮಕ್ಕೆ ಅತ್ಯುತ್ತಮ ಚರ್ಚಾ ಕಾರ್ಯಕ್ರಮ ಪ್ರಶಸ್ತಿ, ಒಟ್ಟು 2 ರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿದೆ. ಇವರು ಉಪ್ಪಿನಂಗಡಿ ನಿವಾಸಿಯಾಗಿರುವ ರಕ್ಷತ್ ಶೆಟ್ಟಿ ಪುತ್ತೂರು ವಿವೇಕಾನಂದ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದಾರೆ. ಇವರು […]

ಉಪ್ಪಿನಂಗಡಿ: ಆಂಕರ್ ರಕ್ಷಿತ್ ಶೆಟ್ಟಿಗೆ ಬೆಸ್ಟ್ ಪ್ರೈಂಟೈಮ್ ಆಂಕರ್ ಪ್ರಶಸ್ತಿ Read More »

ಕರಾವಳಿ

ಉಡುಪಿ: ಹಿರಿಯ ಯಕ್ಷಗಾನ ಕಲಾವಿದ ವಾಸುದೇವ ಸಾಮಗ ನಿಧನ

(ನ್ಯೂಸ್ ಕಡಬ) newskadaba.com ಉಡುಪಿ, ನ. 07: ಯಕ್ಷಗಾನ ಕ್ಷೇತ್ರದ ಹಿರಿಯ ಕಲಾವಿದ ಮಲ್ಪೆ ವಾಸುದೇವ ಸಾಮಗ(1) ಅವರು ಅಲ್ಪ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಇಂದು ನಿಧನರಾಗಿದ್ದಾರೆ.       ವಾಸುದೇವ ಸಾಮಗ ಅವರು ತೆಂಕು-ಬಡಗುತಿಟ್ಟಿನ ಸವ್ಯಸಾಚಿ ಕಲಾವಿದರೆಂದು ಗುರುತಿಸಲ್ಪಟ್ಟಿದ್ದು, ಅನೇಕ ಪ್ರಸಂಗಗಳಲ್ಲಿ ನಾಯಕ, ಪ್ರತಿನಾಯಕ, ಹಾಸ್ಯ ಸ್ತ್ರೀವೇಷವನ್ನು ನಿರ್ವಹಿಸಿದ್ದಾರೆ. ಇವರು ಕುಂದಾಪುರದ ಕೋಟೇಶ್ವರದಲ್ಲಿ ನೆಲೆಸಿದ್ದು, ವಿಭಿನ್ನ ನಿಲುವಿನ ಕೈಕೆ, ದಶರಥ, ದೇವವ್ರತ-ಭೀಷ್ಮ ಕಂಸ ಕೃಷ್ಣ, ರುಕ್ಮಾಂಗದ-ಮೋಹಿನಿ, ಅಂಬೆ-ಪರಶುರಾಮ, ಮಂಥರೆ ಮುಂತಾ ಪಾತ್ರಗಳಲ್ಲಿಯೂ ಸೈ ಎನಿಸಿಕೊಂಡಿದ್ದಾರೆ.  

ಉಡುಪಿ: ಹಿರಿಯ ಯಕ್ಷಗಾನ ಕಲಾವಿದ ವಾಸುದೇವ ಸಾಮಗ ನಿಧನ Read More »

ಕರಾವಳಿ

ಕೊಲ್ಲಮೊಗ್ರ: ಮನೆ – ಮನೆಗಳಿಗೆ ಭೇಟಿ ನೀಡಿ ಕೊರೋನಾ ಟೆಸ್ಟ್

(ನ್ಯೂಸ್ ಕಡಬ) newskadaba.com ಕೊಲ್ಲಮೊಗ್ರ, ನ. 07: ಕೊಲ್ಲಮೊಗ್ರ ಭಾಗಗಳಲ್ಲಿ ಮನೆ ಮನೆಗಳಿಗೆ ಭೇಟಿ ನೀಡಿ ಕೊರೋನಾ ಪರೀಕ್ಷೆಯನ್ನು ನಡೆಸಲಾಗುತ್ತಿದೆ.     ಕೊಲ್ಲಮೊಗ್ರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ, ಆರೋಗ್ಯ ಸಹಾಯಕರು, ಆಶಾ ಕಾರ್ಯಕರ್ತೆಯರು ಭೇಟಿ ನೀಡಿದ ಮನೆಯಲ್ಲಿ ಪ್ರತಿಯೊಬ್ಬ ಸದಸ್ಯರ ಕೊರೋನಾ ಪರೀಕ್ಷೆಯನ್ನು ಮಾಡಲಾಗುತ್ತಿದೆ.  

ಕೊಲ್ಲಮೊಗ್ರ: ಮನೆ – ಮನೆಗಳಿಗೆ ಭೇಟಿ ನೀಡಿ ಕೊರೋನಾ ಟೆಸ್ಟ್ Read More »

ಕರಾವಳಿ

ಕೇರಳ: ಪರಿಶಿಷ್ಟ ಪಂಗಡ ವ್ಯಕ್ತಿಯನ್ನು ಅರ್ಚಕರಾಗಿ ನೇಮಿಸುತ್ತಿರುವ ದೇವಸ್ವಂ ಬೋರ್ಡ್

(ನ್ಯೂಸ್ ಕಡಬ) newskadaba.com ಕೇರಳ ನ. 07:  ಮೊದಲನೆ ಬಾರಿಗೆ ಕೇರಳದ ತಿರುವಾಂಕೂರು ದೇವಸ್ವಂ ಬೋರ್ಡ್(TDB)ನ ಅಡಿಯಲ್ಲಿ ನಿರ್ವಹಣೆಯಾಗುತ್ತಿರುವ ದೇವಾಲಯವೊಂದಕ್ಕೆ ಪರಿಶಿಷ್ಟ ಪಂಗಡದ ವ್ಯಕ್ತಿ ಅರ್ಚಕರಾಗಿ ನೇಮಕವಾಗಲಿದ್ದಾರೆ.   TDB ಯೂ ಸ್ವಾಯತ್ತ ಸಂಸ್ಥೆಯಾಗಿದ್ದು, ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನ ಸೇರಿದಂತೆ ಕೇರಳದ ದಕ್ಷಿಣದಲ್ಲಿ 1,200 ದೇವಾಲಯಗಳನ್ನು ನಿರ್ವಹಿಸುತ್ತಿದೆ. ಈ ದೇವಾಲಯಗಳಲ್ಲಿ 18 ಪರಿಶಿಷ್ಟ ಜಾತಿ ಹಾಗೂ 1 ಪರಿಶಿಷ್ಟ ಪಂಗಡದ ಅರ್ಚಕರು ಸೇರಿ ಒಟ್ಟು 19 ಜನರನ್ನು ನೇಮಿಸಲು ತಿರುವಾಂಕೂರು ದೇವಸ್ವಂ ಬೋರ್ಡ್ ನಿರ್ಧರಿಸಿದೆ.”TDB ಅಡಿಯಲ್ಲಿ ಬರುವ

ಕೇರಳ: ಪರಿಶಿಷ್ಟ ಪಂಗಡ ವ್ಯಕ್ತಿಯನ್ನು ಅರ್ಚಕರಾಗಿ ನೇಮಿಸುತ್ತಿರುವ ದೇವಸ್ವಂ ಬೋರ್ಡ್ Read More »

ರಾಷ್ಟ್ರೀಯ ನ್ಯೂಸ್

ಉಳ್ಳಾಲ : ಮೂರೇ ಘಂಟೆಯಲ್ಲಿ ಸರಗಳ್ಳನ ಅರೇಸ್ಟ್

(ನ್ಯೂಸ್ ಕಡಬ) newskadaba.com ಉಳ್ಳಾಲ ನ. 07: ಕೆಲಸ ಮುಗಿಸಿ ಬರುತ್ತಿದ್ದ ಯುವತಿಯ ಚಿನ್ನದ ಸರ ಎಗರಿಸಿದ್ದ ಖದೀಮನನ್ನು ಉಳ್ಳಾಲ ಪೊಲೀಸರು ಘಟನೆ ನಡೆದ ಮೂರೇ ಘಂಟೆಯಲ್ಲಿ ಬಂದಿಸಿದ್ದಾರೆ.ಆರೋಪಿಯನ್ನು ಕೇರಳ ಮೂಲದ ಸುಲ್ತಾನ್ (28) ಎಂದು ತಿಳಿದು ಬಂದಿದೆ.   ಶುಕ್ರವಾರ ಸಂಜೆ ವೇಳೆಕೆಲಸ ಮುಗಿಸಿ ಮನೆ ಕಡೆಗೆ ತೆರಳುತ್ತಿದ್ದ ಯುವತಿಯ ಕುತ್ತಿಗೆಯಿಂದ ಒಂದು ಪವನ್ ಬೆಲೆಬಾಳುವ ಚಿನ್ನದ ಸರವನ್ನು ಬುಲೆಟ್ ಬೈಕಿನಲ್ಲಿ ಬಂದ ಆರೋಪಿ ಸುಲ್ತಾನ್ ಕಳವು ನಡೆಸಿದ್ದ. ಈತನ ಕಳವು ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

ಉಳ್ಳಾಲ : ಮೂರೇ ಘಂಟೆಯಲ್ಲಿ ಸರಗಳ್ಳನ ಅರೇಸ್ಟ್ Read More »

ಕರಾವಳಿ

ಬೆಳ್ಳಂ ಬೆಳಿಗ್ಗೆ ಕೆಎಎಸ್ ಅಧಿಕಾರಿಗೆ ಎಸಿಬಿಯಿಂದ ಶಾಕ್.!

(ನ್ಯೂಸ್ ಕಡಬ) newskadaba.com ಬೆಂಗಳೂರು ನ. 07: ಬೆಳ್ಳಂ ಬೆಳಿಗ್ಗೆ  ಕೆಎಎಸ್ ಅಧಿಕಾರಿಗೆ ಎಸಿಬಿ ಶಾಕ್ ನೀಡಿದ್ದಾರೆ ಕೆಎಎಸ್ ಅಧಿಕಾರಿ ಡಾ. ಬಿ. ಸುಧಾ ಅವರ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ ಆಡಳಿತಾಧಿಕಾರಿಯಾಗಿರುವ ಸುಧಾ ಅವರ ಕೊಡಿಗೇನಹಳ್ಳಿಯಲ್ಲಿರುವ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ಯಲಹಂಕದಲ್ಲಿರುವ ಫ್ಲಾಟ್, ಬ್ಯಾಟರಾಯನಪುರದ ಮನೆ, ಬಿಇಎಂಎಲ್ ನಲ್ಲಿರುವ ನಿವಾಸ, ಶಾಂತಿನಗರದಲ್ಲಿರುವ ಕಚೇರಿ ಹಾಗೂ ಉಡುಪಿ ಜಿಲ್ಲೆಯ ಹೆಬ್ರಿಯ ತಂಕಬಟ್ಟಿನ ಮನೆಯ ಮೇಲೆ ದಾಳಿ ನಡೆಸಲಾಗಿದೆ.

ಬೆಳ್ಳಂ ಬೆಳಿಗ್ಗೆ ಕೆಎಎಸ್ ಅಧಿಕಾರಿಗೆ ಎಸಿಬಿಯಿಂದ ಶಾಕ್.! Read More »

ಕರಾವಳಿ

ಉಡುಪಿ: ಬಸ್ ಮಾಲಕನ ಹತ್ಯೆ ಯತ್ನ ಪ್ರಕರಣ ➤ 9 ಮಂದಿ ಪೊಲೀಸರ ವಶಕ್ಕೆ

(ನ್ಯೂಸ್ ಕಡಬ) newskadaba.com ಉಡುಪಿ, ನ. 07: ಎಕೆಎಂಎಸ್ ಬಸ್ ಮಾಲಕನ ಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಣಿಪಾಲ ಪೋಲಿಸರು ಒಂಬತ್ತು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.       ಬಂಧಿತ ಆರೋಪಿಗಳನ್ನು ದರ್ಶನ್ ದೇವಯ್ಯ ವಿರಾಜಪೇಟೆ, ಸೌಭಾಗ್ಯ, ಅನಿಲ್ ಕುಮಾರ್, ಮಹೇಶ್ ಬಾಬು ಹಿರಿಯಪಟ್ಣ, ಸೋಮು ಕೆ.ಆರ್.ನಗರ, ಸುಕೇಶ್ ಪೂಜಾರಿ, ಮೋಹನ್ ಬೆಳ್ತಂಗಡಿ, ಗೋಪಾಲ್ ಮೂಡುಬಿದಿರೆ, ಸಂತೋಷ್ ಮುಡುಮನೆ ಎಂದು ಗುರುತಿಸಲಾಗಿದೆ. ೨ ದಿನಗಳ ಹಿಂದೆ ಎಕೆಎಂಎಸ್ ಬಸ್ ಮಾಲಿಕ ಸೈಫುದ್ದೀನ್ ಹತ್ಯೆಗೆ ಯತ್ನ ನಡೆದಿತ್ತು.

ಉಡುಪಿ: ಬಸ್ ಮಾಲಕನ ಹತ್ಯೆ ಯತ್ನ ಪ್ರಕರಣ ➤ 9 ಮಂದಿ ಪೊಲೀಸರ ವಶಕ್ಕೆ Read More »

ಕರಾವಳಿ, ಕ್ರೈಮ್ ನ್ಯೂಸ್

ಕುಂದಾಪುರ : ನಿಷೇಧವಿದ್ದರೂ ಬುಲ್‌ ಟ್ರಾಲ್‌ ಫಿಶಿಂಗ್, ಬೋಟ್‌ ವಶಕ್ಕೆ

(ನ್ಯೂಸ್ ಕಡಬ) newskadaba.com ಕುಂದಾಪುರ ನ. 07: ಗಂಗೊಳ್ಳಿಯಿಂದ 8 ನಾಟಿಕಲ್‌ ಮೈಲು ದೂರದಲ್ಲಿ ಮಂಗಳೂರು ಮೂಲದ ಅಲ್‌ ಮಸುಲ್‌ ಬಹಾರ್‌ ಹೆಸರಿನ ಎರಡು ಬುಲ್‌ ಟ್ರಾಲ್‌ ಬೋಟುಗಳು ಕದ್ದು ಮುಚ್ಚಿ ಮೀನುಗಾರಿಕೆ ಮಾಡುತ್ತಿರುವ ಕುರಿತು ಗಂಗೊಳ್ಳಿ ಬಂದರಿನ ನಾಡದೋಣಿ ಮೀನುಗಾರರು ಕೋಸ್ಟ್‌ಗಾರ್ಡ್‌ ಸಿಬ್ಬಂದಿ ನೆರವಿನಿಂದ ಬೋಟನ್ನು ವಶಕ್ಕೆ ಪಡೆದು ಬಂದರಿಗೆ ಎಳೆದು ತಂದಿದ್ದು, 10 ಲಕ್ಷ ರೂ. ಮೌಲ್ಯದ ಮೀನನ್ನು ವಶಕ್ಕೆ ಪಡೆಯಲಾಗಿದೆ. ಗುರುವಾರ ಮುಂಜಾನೆ ನಾಡದೋಣಿ ಮೀನುಗಾರರು ಮೀನುಗಾರಿಕೆಗೆ ತೆರಳಿದ್ದಾಗ ಈ ವಿಚಾರ ಬೆಳಕಿಗೆ ಬಂದಿದೆ

ಕುಂದಾಪುರ : ನಿಷೇಧವಿದ್ದರೂ ಬುಲ್‌ ಟ್ರಾಲ್‌ ಫಿಶಿಂಗ್, ಬೋಟ್‌ ವಶಕ್ಕೆ Read More »

ಕರಾವಳಿ

ಮೈಸೂರು:ಮಹಾತ್ಮ ಗಾಂಧಿ ಪ್ರತಿಮೆಯನ್ನು ವಿರೂಪಗೊಳಿಸಿದ ಕಿಡಿಗೇಡಿಗಳು

(ನ್ಯೂಸ್ ಕಡಬ) newskadaba.com ಮೈಸೂರು, ನ. 06: ಸ್ವಾತಂತ್ರ್ಯ ಉದ್ಯಾನವನದಲ್ಲಿರುವ ರಾಷ್ಟ್ರಪಿತ ಮಹಾತ್ಮ ಗಾಂಧಿ ಪ್ರತಿಮೆಯನ್ನು ದುಷ್ಕರ್ಮಿಗಳು ವಿರೂಪ ಮಾಡಿರುವ ಘಟನೆ ಇಂದು ನಡೆದಿದೆ.     ಗಾಂಧಿ ಪ್ರತಿಮೆಯಲ್ಲಿದ್ದ ಕಂಚಿನ ಊರುಗೋಲನ್ನು ಕಿಡಿಗೇಡಿಗಳು ಕಿತ್ತುಕೊಂಡು ಹೋಗಿದ್ದು, ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೈಸೂರಿನ ಸುಬ್ಬರಾಯನ ಕೆರೆಯ ಮಧ್ಯ ಭಾಗದಲ್ಲಿದ್ದ ಸ್ವಾತಂತ್ರ್ಯ ಹೋರಾಟಗಾರರ ದಂಡಿಯಾತ್ರೆಯ ಸ್ಮಾರಕವನ್ನು ದುಷ್ಕರ್ಮಿಗಳು ವಿರೂಪಗೊಳಿಸಿದ್ದು, ಗಾಂಧೀಜಿ ಪ್ರತಿಮೆಯ ಕೈಯಲ್ಲಿ‌ ಹಿಡಿದಿರುವ ಕೋಲು, ಕನ್ನಡಕ ಮತ್ತು ಎಡಗೈಯನ್ನು ಹಾನಿ ಮಾಡಿದ್ದಾರೆ. ಸೂಕ್ತವಾದ ಭದ್ರತೆಯಿಲ್ಲದೆ ಈ ರೀತಿಯಾದ ಘಟನೆ

ಮೈಸೂರು:ಮಹಾತ್ಮ ಗಾಂಧಿ ಪ್ರತಿಮೆಯನ್ನು ವಿರೂಪಗೊಳಿಸಿದ ಕಿಡಿಗೇಡಿಗಳು Read More »

ಕರ್ನಾಟಕ

ಪೋಷಕರು ಮೊಬೈಲ್ ಕಸಿದುಕೊಂಡಿದ್ದಕ್ಕೆ ಬಾಲಕ ಆತ್ಮಹತ್ಯೆ.!!

(ನ್ಯೂಸ್ ಕಡಬ) newskadaba.com ಮಧುರೈ ನ. 06: ಮೊಬೈಲ್‍ನಲ್ಲಿ ಹೆಚ್ಚು ಗೇಮ್ ಆಡಬೇಡ ಎಂದು ಬುದ್ಧಿವಾದ ಹೇಳಿದ್ದಕ್ಕೆ 16 ವರ್ಷದ ಬಾಲಕ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ.ತಮಿಳುನಾಡಿನ ಮಧುರೈ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಯಾವಾಗಲೂ ಗೇಮ್ ಆಡುವುದಕ್ಕೆ ಪೋಷಕರು ಮೊಬೈಲ್ ಕಸಿದುಕೊಂಡಿದ್ದು, ಇದರಿಂದ ಅಸಮಾಧಾನಗೊಂಡ ಬಾಲಕ ಆತ್ಮಹತ್ಯೆಗೆ ಶರಣಾಗಿದ್ದಾನೆ.     ಸಂಬಾಕುಲಂನ ಗಾಂಡಿ 2ನೇ ರಸ್ತೆಯ ನಿವಾಸಿಯಾಗಿದ್ದ ಬಾಲಕ ಮೊಬೈಲ್ ಗೇಮಿಂಗ್ ವ್ಯಸನಿಯಾಗಿದ್ದ ಇತ್ತೀಚೆಗೆ ಪೋಷಕರು ಮೊಬೈಲ್ ಕಸಿದುಕೊಂಡಿದ್ದರು. ಇದರಿಂದಾಗಿ ಬಾಲಕ ತೀರಾ ಅಸಮಾಧಾನಗೊಂಡಿದ್ದ.

ಪೋಷಕರು ಮೊಬೈಲ್ ಕಸಿದುಕೊಂಡಿದ್ದಕ್ಕೆ ಬಾಲಕ ಆತ್ಮಹತ್ಯೆ.!! Read More »

ಕ್ರೈಮ್ ನ್ಯೂಸ್
Scroll to Top