News Kadaba

ಸ್ಟಾರ್ ನಟಿಯೊಂದಿಗೆ ಎರಡನೇ ಮದುವೆಗೆ ಸಜ್ಜಾದ ನಟ ಧನುಶ್

(ನ್ಯೂಸ್‌ ಕಡಬ) newskadaba.com,  ಜ.16 : ಬರೋಬ್ಬರಿ 20 ವರ್ಷಗಳ ಬಳಿಕ ವಿಚ್ಛೇದನ ಪಡೆದ ದಕ್ಷಿಣ ಭಾರತದ ಸ್ಟಾರ್ ನಟರಲ್ಲಿ ಒಬ್ಬರಾದ ಧನುಶ್ ಅವರು ಇದೀಗ ಸ್ಟಾರ್ ನಟಿಯೊಬ್ಬರ ಮದುವೆಯಾಗಲು ಸಜ್ಜಾಗಿದ್ದಾರೆ ಎನ್ನಲಾಗಿದೆ. ಧನುಶ್ ಅವರು ರಜನೀಕಾಂತ್ ಪುತ್ರಿ ಐಶ್ವರ್ಯ ಜೊತೆಗೆ 2004 ರಲ್ಲಿ ಮದುವೆಯಾಗಿದ್ದರು. ಇವಬ್ಬರಿಗೂ ಇಬ್ಬರು ಗಂಡು ಮಕ್ಕಳಿದ್ದಾರೆ. ತಾವು ಬೇರೆ ಆಗುತ್ತಿರುವುದಾಗಿ 2022 ರಲ್ಲಿ ಧನುಶ್ ಹಾಗೂ ಐಶ್ವರ್ಯಾ ಘೋಷಿಸಿದರು. 2024ರಲ್ಲಿ ಇವರಿಬ್ಬರಿಗೆ ನ್ಯಾಯಾಲಯವು ವಿಚ್ಛೇದನ ನೀಡಿತು. ಇದೀಗ ಧನುಶ್ ಬಹುಭಾಷಾ ನಟಿ […]

ಸ್ಟಾರ್ ನಟಿಯೊಂದಿಗೆ ಎರಡನೇ ಮದುವೆಗೆ ಸಜ್ಜಾದ ನಟ ಧನುಶ್ Read More »

ಸಿನಿಮಾ

ಅಂಚೆ ಇಲಾಖೆಯಲ್ಲಿ 44 ವರ್ಷಗಳ ಪ್ರಾಮಾಣಿಕ ಸೇವೆ-ಭಾವುಕ ಬೀಳ್ಕೊಡುಗೆ

(ನ್ಯೂಸ್‌ ಕಡಬ) newskadaba.com,  ಜ.16 : ಅಂಚೆ ಇಲಾಖೆಯಲ್ಲಿ ಬರೋಬ್ಬರಿ 44 ವರ್ಷಗಳ ಕಾಲ ನಿರಂತರವಾಗಿ, ದಕ್ಷತೆ ಹಾಗೂ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿದ ಕಡಬ ಉಪ ಅಂಚೆ ಕಚೇರಿಯ ಗ್ರಾಮೀಣ ಅಂಚೆ ಸಹಾಯಕ ಬಾಲಕೃಷ್ಣ ಎಂ. ಪೂಜಾರಿಯವರಿಗೆ ಜನವರಿ 15ರ ಗುರುವಾರದಂದು ಸಂಜೆ ಅದ್ದೂರಿ ಹಾಗೂ ಭಾವಪೂರ್ಣ ಬೀಳ್ಕೊಡುಗೆ ಕಾರ್ಯಕ್ರಮವನ್ನು ನೀಡಲಾಯಿತು. ಕಡಬ ಉಪ ಅಂಚೆ ಕಚೇರಿಯಲ್ಲಿ ನಡೆದ ಈ ಸಮಾರಂಭದಲ್ಲಿ ಸಹೋದ್ಯೋಗಿಗಳು ಹಾಗೂ ಗಣ್ಯರು ಅವರ ವೃತ್ತಿ ಬದುಕಿನ ಸಾಧನೆಯನ್ನು ಕೊಂಡಾಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ

ಅಂಚೆ ಇಲಾಖೆಯಲ್ಲಿ 44 ವರ್ಷಗಳ ಪ್ರಾಮಾಣಿಕ ಸೇವೆ-ಭಾವುಕ ಬೀಳ್ಕೊಡುಗೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಐಸಿಸಿ ಏಕದಿನ ಶ್ರೇಯಾಂಕದಲ್ಲಿ ನಂ. 1 ಸ್ಥಾನಕ್ಕೇರಿದ ವಿರಾಟ್ ಕೊಹ್ಲಿ

(ನ್ಯೂಸ್‌ ಕಡಬ) newskadaba.com,  ಜ.16 : ಕಳೆದ ಐದು ಇನ್ನಿಂಗ್ಸ್​ಗಳಲ್ಲಿಯೂ 50 ಪ್ಲಸ್ ಇನ್ನಿಂಗ್ಸ್ ಆಡಿರುವ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ 4 ವರ್ಷ 9 ತಿಂಗಳ ನಂತರ ಮತ್ತೊಮ್ಮೆ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ನಂ.1 ಬ್ಯಾಟರ್ ಆಗಿ ಹೊರಹೊಮ್ಮಿದ್ದಾರೆ. ಐಸಿಸಿ ಬುಧವಾರ ಬಿಡುಗಡೆ ಮಾಡಿರುವ ಇತ್ತೀಚಿನ ಏಕದಿನ ಶ್ರೇಯಾಂಕದಲ್ಲಿ ಅತ್ಯುತ್ತಮ ಫಾರ್ಮ್​ನಲ್ಲಿರುವ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ 1736 ದಿನಗಳ ನಂತರ ಮತ್ತೊಮ್ಮೆ ಏಕದಿನ ಕ್ರಿಕೆಟ್‌ನಲ್ಲಿ ನಂಬರ್ ಒನ್ ಬ್ಯಾಟ್ಸ್‌ಮನ್ ಆಗಿದ್ದಾರೆ. ವಿರಾಟ್ ಕೊಹ್ಲಿ ಏಪ್ರಿಲ್

ಐಸಿಸಿ ಏಕದಿನ ಶ್ರೇಯಾಂಕದಲ್ಲಿ ನಂ. 1 ಸ್ಥಾನಕ್ಕೇರಿದ ವಿರಾಟ್ ಕೊಹ್ಲಿ Read More »

ಕ್ರೀಡಾ ನ್ಯೂಸ್

ರಾಜ್ಯದಲ್ಲಿ ‘ಸೂರತ್’ ಸೀರೆಗಳ ಕಾರುಬಾರು: ಸಂಕಷ್ಟದಲ್ಲಿ ಸಿಲುಕಿದ ದೊಡ್ಡಬಳ್ಳಾಪುರ ಕೈಮಗ್ಗ ನೇಕಾರರು!

(ನ್ಯೂಸ್‌ ಕಡಬ) newskadaba.com,  ಜ.16 : ಬೆಂಗಳೂರು: ಒಂದು ಶತಮಾನಕ್ಕೂ ಹೆಚ್ಚು ಕಾಲ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಮತ್ತು ಸುತ್ತಮುತ್ತಲಿನ ಸಾವಿರಾರು ನೇಕಾರರು ತಮ್ಮ ಜೀವನೋಪಾಯಕ್ಕಾಗಿ ರೇಷ್ಮೆ ನೇಯ್ಗೆಯನ್ನೇ ಅವಲಂಬಿಸಿದ್ದರು ಆದರೆ ಅವರು ಈಗ ಅಂತಿಮ ಹಂತಕ್ಕೆ ತಲುಪಿದ್ದಾರೆ. ಕೈಮಗ್ಗದಿಂದ ಪವರ್ ಲೂಮ್‌ಗಳಿಗೆ ಮತ್ತು ಶುದ್ಧ ರೇಷ್ಮೆಯಿಂದ ಅರ್ಧ-ರೇಷ್ಮೆಗೆ ಬದಲಾಗಿದ್ದಾರೆ. ಗುಜರಾತ್ ಮೂಲದ ಗಿರಣಿ ಮಾಲೀಕರು ಸೂರತ್ ಸೀರೆಗಳನ್ನು ದೊಡ್ಡಬಳ್ಳಾಪುರ ರೇಷ್ಮೆ ಸೀರೆಗಳನ್ನು ಅನುಕರಿಸುವ ಆದರೆ ಕಡಿಮೆ ಬೆಲೆಗೆ ಉತ್ಪಾದಿಸುವುದರಿಂದ ಅವರು ಐಡೆಂಟಿಟಿ ಬಿಕ್ಕಟ್ಟಿನೊಂದಿಗೆ ಹೋರಾಡುತ್ತಿದ್ದಾರೆ. ಇದು

ರಾಜ್ಯದಲ್ಲಿ ‘ಸೂರತ್’ ಸೀರೆಗಳ ಕಾರುಬಾರು: ಸಂಕಷ್ಟದಲ್ಲಿ ಸಿಲುಕಿದ ದೊಡ್ಡಬಳ್ಳಾಪುರ ಕೈಮಗ್ಗ ನೇಕಾರರು! Read More »

ಕರ್ನಾಟಕ

ಸರ್ಕಾರದ ಪೂರ್ಣ ಬೆಂಬಲದೊಂದಿಗೆ ವೇಗ ಪಡೆದ ‘ಪುತ್ತೂರು ವಸತಿ ಯೋಜನೆ’: ಶಾಸಕರ ಕನಸು ಈಗ ನನಸಿನ ಹಾದಿಯಲ್ಲಿ

(ನ್ಯೂಸ್‌ ಕಡಬ) newskadaba.com,  ಜ.16 : ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ನಿವೇಶನ ರಹಿತ ಬಡ ಕುಟುಂಬಗಳ ಪಾಲಿಗೆ ಅತ್ಯಂತ ಸಂತಸದ ಸುದ್ದಿಯೊಂದು ಹೊರಬಿದ್ದಿದೆ. ಶಾಸಕ ಅಶೋಕ್ ರೈ ಅವರ ಮಹತ್ವಾಕಾಂಕ್ಷೆಯ ‘ಬಡವರಿಗೆ ನಿವೇಶನ ಹಂಚಿಕೆ’ ಕನಸಿಗೆ ಕರ್ನಾಟಕ ಸರ್ಕಾರವು ಪೂರ್ಣ ಬೆಂಬಲ ನೀಡಿದ್ದು, ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ಐತಿಹಾಸಿಕ ಸುತ್ತೋಲೆಯೊಂದನ್ನು ಹೊರಡಿಸಿದೆ. ಈ ಹೊಸ ಆದೇಶದನ್ವಯ, ಅರ್ಹ ಫಲಾನುಭವಿಗಳು ಕೇವಲ ತಮ್ಮ ಗ್ರಾಮದಲ್ಲಿ ಮಾತ್ರವಲ್ಲದೆ, ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸರ್ಕಾರಿ ಜಾಗ ಲಭ್ಯವಿರುವ

ಸರ್ಕಾರದ ಪೂರ್ಣ ಬೆಂಬಲದೊಂದಿಗೆ ವೇಗ ಪಡೆದ ‘ಪುತ್ತೂರು ವಸತಿ ಯೋಜನೆ’: ಶಾಸಕರ ಕನಸು ಈಗ ನನಸಿನ ಹಾದಿಯಲ್ಲಿ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ನೊಬೆಲ್ ಶಾಂತಿ ಪುರಸ್ಕಾರ

(ನ್ಯೂಸ್‌ ಕಡಬ) newskadaba.com,  ಜ.16 : ವೆನೆಜುವೆಲಾದ ವಿರೋಧ ಪಕ್ಷದ ನಾಯಕಿ ಮಾರಿಯಾ ಕೊರಿನಾ ಮಚಾದೊ ಅವರು ತಮ್ಮ ನೊಬೆಲ್ ಶಾಂತಿ ಪುರಸ್ಕಾರವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಗೌರವ ಸೂಚಕವಾಗಿ ಪ್ರದಾನ ಮಾಡಿದ್ದಾರೆ. ಈ ಮೂಲಕ ನೊಬೆಲ್ ಶಾಂತಿ ಪುರಸ್ಕಾರ ಪಡೆಯುವ ಟ್ರಂಪ್ ಅವರ ಬಹುದಿನಗಳ ಹೆಬ್ಬಯಕೆ ಈಡೇರಿದಂತಾಗಿದೆ. ಮಚಾದೊ ಅವರು ಟ್ರಂಪ್ ಅವರನ್ನು ಶ್ವೇತಭವನದಲ್ಲಿ ಭೇಟಿಯಾದರು. ಬಳಿಕ ವಾಷಿಂಗ್ಟನ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಚಾದೊ ಅವರು, “ಅಧ್ಯಕ್ಷ ಟ್ರಂಪ್‌ಗೆ ಪುರಸ್ಕಾರ ಪ್ರಧಾನ ಮಾಡಲಾಗಿದೆ. ವೆನೆಜುವೆಲಾದ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ನೊಬೆಲ್ ಶಾಂತಿ ಪುರಸ್ಕಾರ Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್

ತಮಿಳುನಾಡಿನಲ್ಲಿ ಚಂಡಮಾರುತ-ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ

(ನ್ಯೂಸ್‌ ಕಡಬ) newskadaba.com,  ಜ.16 : ತಮಿಳುನಾಡು ಕರಾವಳಿಯಲ್ಲಿ ಉಂಟಾದ ಚಂಡಮಾರುತದ ಪ್ರಭಾವದಿಂದಾಗಿ ಕರ್ನಾಟಕದ ಉಡುಪಿ, ಚಿಕ್ಕಮಗಳೂರು, ಬೆಂಗಳೂರು ಮತ್ತು ಮೈಸೂರು, ಕೊಡಗು, ಚಿಕ್ಕಮಗಳೂರು ಸೇರಿದಂತೆ ಕರಾವಳಿ ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ. ತಮಿಳುನಾಡು ಕರಾವಳಿಯಲ್ಲಿ ಬಲಗೊಳ್ಳುತ್ತಿರುವ ಚಂಡಮಾರುತದ ಪ್ರಭಾವದಿಂದ ಶುಕ್ರವಾರ ಕರ್ನಾಟಕದಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಮಳೆಯ ಜೊತೆಗೆ ವಿವಿಧ ಪ್ರದೇಶಗಳಲ್ಲಿ ತಾಪಮಾನವು ಮತ್ತೆ ಕುಸಿಯುವ ನಿರೀಕ್ಷೆಯಿದ್ದು, ಇದು ಚಳಿಯ ತೀವ್ರತೆಯನ್ನು ಮತ್ತಷ್ಟು ಹೆಚ್ಚಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ

ತಮಿಳುನಾಡಿನಲ್ಲಿ ಚಂಡಮಾರುತ-ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಉಡುಪಿ: ಅಂತರ್ ಜಿಲ್ಲಾ ಬೈಕ್ ಕಳ್ಳತನ ಪ್ರಕರಣ; ಇಬ್ಬರು ಆರೋಪಿಗಳು ಆರೆಸ್ಟ್

(ನ್ಯೂಸ್‌ ಕಡಬ) newskadaba.com,  ಜ.16 ಉಡುಪಿ: ಅಂತರ್ ಜಿಲ್ಲಾ ದ್ವಿಚಕ್ರ ವಾಹನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಉಡುಪಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಳೆದ ಅಕ್ಟೋಬರ್ 30 ರಂದು ಮಣಿಪಾಲದ ಕಾಯಿನ್ ಸರ್ಕಲ್ ಬಳಿ ನಿಲ್ಲಿಸಲಾಗಿದ್ದ ದ್ವಿಚಕ್ರ ವಾಹನವೊಂದು ಕಳುವಾದ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ಶಿವಮೊಗ್ಗ ಮೂಲದ ಕಿರಣ್ ಬಿ.ಎನ್ (32) ಮತ್ತು ಯೋಗೇಶ್ ನಾಯ್ಕ್ ಎನ್ (22) ಎಂಬುವವರನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಕಿರಣ್ ಬಿ.ಎನ್

ಉಡುಪಿ: ಅಂತರ್ ಜಿಲ್ಲಾ ಬೈಕ್ ಕಳ್ಳತನ ಪ್ರಕರಣ; ಇಬ್ಬರು ಆರೋಪಿಗಳು ಆರೆಸ್ಟ್ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಇಂದಿನ ರಾಜ್ಯದ ಹವಾಮಾನ ವರದಿ

(ನ್ಯೂಸ್‌ ಕಡಬ) newskadaba.com,  ಜ.16 :  ತಮಿಳುನಾಡಿನ ಕರಾವಳಿಯಲ್ಲಿ ಉಂಟಾಗಿರುವ ಚಂಡಮಾರುತದ ಪರಿಣಾಮವಾಗಿ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉಡುಪಿ, ಉತ್ತರ ಕನ್ನಡ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರಿನಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಾಗಲಕೋಟೆ, ಬೀದರ್, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ರಾಮನಗರ, ಶಿವಮೊಗ್ಗದಲ್ಲಿ ಒಣಹವೆ ಇರಲಿದೆ. ಬೆಂಗಳೂರಿನಲ್ಲಿ ಮೋಡಕವಿದ

ಇಂದಿನ ರಾಜ್ಯದ ಹವಾಮಾನ ವರದಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮತ್ತೆ ಭರ್ಜರಿ ಏರಿಕೆ

(ನ್ಯೂಸ್‌ ಕಡಬ) newskadaba.com,  ಜ.15 :  ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ  ಗುರುವಾರ (ಜನವರಿ 15) ಭರ್ಜರಿ ಏರಿಕೆ ಕಂಡಿದೆ. ರಾಜ್ಯದ ಕೆಲವು ಮಾರುಕಟ್ಟೆಯಲ್ಲಿ ರಾಶಿ ಅಡಿಕೆ 60 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿರುವುದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 57,100ರೂ.

ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮತ್ತೆ ಭರ್ಜರಿ ಏರಿಕೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top