News Kadaba

ನೆಲ್ಯಾಡಿ :ಗ್ರಾ.ಪಂ.ಅಭ್ಯರ್ಥಿ ಅಬ್ದುಲ್ ಹಮೀದ್ ಹೃದಯಾಘಾತದಿಂದ ನಿಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.23: ಗ್ರಾ. ಪಂ ಚುನಾವಣೆಗೆ ಸಂಬಂಧಿಸಿದಂತೆ ನೆಲ್ಯಾಡಿ ಗ್ರಾ.ಪಂ ನ ಎರಡನೇ ವಾರ್ಡ್‍ನ ಸಾಮಾನ್ಯ ಸ್ಥಾನಕ್ಕೆ ಸ್ಪರ್ಧಿಸಿದ್ದ ನೆಲ್ಯಾಡಿ ಗ್ರಾಮದ ಮೊರಂಕಳ ನಿವಾಸಿ ಅಬ್ದುಲ್ ಹಮೀದ್ ಪೈಂಟರ್ (60) ರವರು ಹೃದಯಾಘಾತದಿಂದ ನಿಧನರಾದರು. ಡಿ,22ರ ಕಳೆದ ದಿನ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದ ಅಬ್ದುಲ್ ಹಮೀದ್ ರವರಿಗೆ ತಡರಾತ್ರಿ ವೇಳೆ ಎದೆನೋವು ಕಾಣಿಸಿಕೊಂಡಿದ್ದು ಮನೆಯವರು ತಕ್ಷಣ ಆಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಂತೆ ದಾರಿಮಧ್ಯೆ ಅವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಅಬ್ದುಲ್ ಹಮೀದ್ ರವರು […]

ನೆಲ್ಯಾಡಿ :ಗ್ರಾ.ಪಂ.ಅಭ್ಯರ್ಥಿ ಅಬ್ದುಲ್ ಹಮೀದ್ ಹೃದಯಾಘಾತದಿಂದ ನಿಧನ Read More »

ಕರಾವಳಿ

ಕಾಲಿಗೆ ಸರಪಳಿ ಬಿಗಿದು ಪದ್ಮಾಸನ ಭಂಗಿಯಲ್ಲಿ ಈಜಾಟ ➤ ಹೊಸ ದಾಖಲೆ ಬರೆದ ಶಿಕ್ಷಕ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.23: ಪದ್ಮಾಸನ ಭಂಗಿಯಲ್ಲಿ ಕಾಲಿಗೆ ಸರಪಳಿ ಸಹಿತ ಬೀಗ ಹಾಕಿಕೊಂಡು ಸಮುದ್ರದಲ್ಲಿ ಒಂದು ಕಿ.ಮೀ. ಈಜಿದ ಶಿಕ್ಷಕ ನಾಗರಾಜ್ ಖಾರ್ವಿಯವರು ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲೆ ಬರೆದಿದ್ದಾರೆ.ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕುಂಚುಗೋಡು ನಿವಾಸಿಯಾಗಿರುವ ನಾಗರಾಜ ಖಾರ್ವಿಯವರು ಬಂಟ್ವಾಳ ತಾಲೂಕಿನ ಕಲ್ಮಂಜದ ಸ.ಹಿ.ಪ್ರಾಥಮಿಕ ಶಾಲೆಯಲ್ಲಿ ಪದವೀಧರ ಶಿಕ್ಷಕರಾಗಿದ್ದಾರೆ.   ಈಜಿನ ಮೂಲಕ ಹಲವಾರು ಸಾಹಸವನ್ನು ಮಾಡಿರುವ ಶಿಕ್ಷಕ ನಾಗರಾಜ ಖಾರ್ವಿಯವರು ತಣ್ಣೀರು ಬಾವಿಯ ಅರಬ್ಬಿ ಸಮುದ್ರದಲ್ಲಿ ಶುಕ್ರವಾರ ಬೆಳಗ್ಗೆ

ಕಾಲಿಗೆ ಸರಪಳಿ ಬಿಗಿದು ಪದ್ಮಾಸನ ಭಂಗಿಯಲ್ಲಿ ಈಜಾಟ ➤ ಹೊಸ ದಾಖಲೆ ಬರೆದ ಶಿಕ್ಷಕ Read More »

ಕರಾವಳಿ

ಸರ ಮತ್ತು ಬೈಕ್‌ ಕಳ್ಳತನ ಪ್ರಕರಣ ➤ ಮೂವರು ಆರೋಪಿಗಳು ಪೊಲೀಸರ ಬಲೆಗೆ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.23:  ನಗರದ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಸರಕಳ್ಳತನ ಮತ್ತು ಬೈಕ್‌ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ನಗರ ಅಪರಾಧ ಪತ್ತೆದಳ ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಿದ್ದಾರೆ.   ಪೆರ್ಮನ್ನೂರು ಚೆಂಬುಗುಡ್ಡೆಯ ಬಿ.ಕೆ.ಕಾಟೇಜ್‌ ನಿವಾಸಿ ಹಬೀಬ್‌ ಹಸನ್‌ ಆಲಿಯಾಸ್‌ ಅಬ್ಬಿ(39), ಬಿ.ಸಿ.ರೋಡ್‌ ಪಲ್ಲಮಜಲು ನಿವಾಸಿ ಅಬ್ದುಲ್‌ ಮನ್ನಾನ್‌ ಆಲಿಯಾಸ್‌ ಅಬ್ದುಲ್‌ ಮುನಾಫ್‌(32) ಮತ್ತು ಉಡುಪಿ ಪೆರ್ಡೂರು ಗ್ರಾಮ ಹಿರಿಯಡಕ ಅಲಂಕಾರು ಮನೆಯ ಮೊಹಮ್ಮದ್‌ ತೌಸಿಫ್‌ ಆಲಿಯಾಸ್‌ ಶೈಲು ಆಲಿಯಾಸ್‌ ಮುನ್ನ(28) ಬಂಧಿತರು.ಬಂಧಿತರಿಂದ ಒಟ್ಟು ಅಂದಾಜು

ಸರ ಮತ್ತು ಬೈಕ್‌ ಕಳ್ಳತನ ಪ್ರಕರಣ ➤ ಮೂವರು ಆರೋಪಿಗಳು ಪೊಲೀಸರ ಬಲೆಗೆ Read More »

ಕರಾವಳಿ

ಬೆಳ್ತಂಗಡಿಯ ಕೊಕ್ಕಡದಲ್ಲಿ ನಡೆದ ದರೋಡೆ ಪ್ರಕರಣ ➤ ತನಿಖೆ ಎರಡು ತಂಡ ರಚನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.23:  ಬೆಳ್ತಂಗಡಿಯ ಕೊಕ್ಕಡದಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ದರೋಡೆಕೋರರ ಪತ್ತೆಗೆ 2ತಂಡಗಳನ್ನು ರಚಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್ ಹೇಳಿದ್ದಾರೆ .   ಮಂಗಳೂರಿನಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು, ಇದು ಏಳರಿಂದ ಎಂಡು ಮಂದಿ ಮುಸುಕುಧಾರಿಗಳು ನಡೆಸಿರುವ ಕೃತ್ಯವಾಗಿದ್ದು ಪ್ರಕರಣದ ತನಿಖೆ ನಡೆಸಲಾಗುತ್ತಿದೆ ಎಂದರು . ದರೋಡೆ ಸಂದರ್ಭ ಚೂರಿ ಇರಿತಕ್ಕೊಳಗಾದ ಗೀತಾ ಶೆಟ್ಟಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಉಪ್ಪಿನಂಗಡಿ ಠಾಣಾ ಇನ್ಸ್ ಪೆಕ್ಟರ್ ನೇತೃತ್ವದಲ್ಲಿ

ಬೆಳ್ತಂಗಡಿಯ ಕೊಕ್ಕಡದಲ್ಲಿ ನಡೆದ ದರೋಡೆ ಪ್ರಕರಣ ➤ ತನಿಖೆ ಎರಡು ತಂಡ ರಚನೆ Read More »

ಕರಾವಳಿ, ಕ್ರೈಮ್ ನ್ಯೂಸ್

ದ.ಕ. ಜಿಲ್ಲೆಯಲ್ಲಿ ಕೊರೊನಾದ 2ನೇ ಅಲೆ ➤ ಬ್ರಿಟನ್‌ನಿಂದ ಮಂಗಳೂರಿಗೆ 56 ಪ್ರಯಾಣಿಕರ ಆಗಮನ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.23:  ಬ್ರಿಟನ್ ನಲ್ಲಿ ಕೊರೊನಾ ಮಾದರಿಯ ಎರಡನೇ ಅಲೆ ಎದ್ದಿದ್ದು, ಎಲ್ಲ ರಾಷ್ಟ್ರಗಳು ಮುನ್ನೆಚ್ಚರಿಕೆ ವಹಿಸಿವೆ. ಇದೇ ವೇಳೆ ಬ್ರಿಟನ್‌ನಿಂದ ಮಂಗಳೂರಿಗೆ 56 ಮಂದಿ ಆಗಮಿಸಿದ್ದು, ದ.ಕ. ಜಿಲ್ಲೆಯಲ್ಲಿ ಕೊರೊನಾದ 2ನೇ ಅಲೆ ಭೀತಿ ಹುಟ್ಟಿಸಿದೆ. ಬ್ರಿಟನ್ ಸಹಿತ ಹಲವು ದೇಶಗಳಿಂದ ಭಾರತೀಯರು ವಾಪಸಾಗುತ್ತಿದ್ದು, ಮಂಗಳೂರಿಗೂ 56 ಮಂದಿ ಬಂದಿದ್ದಾರೆ. ಇವರೆಲ್ಲರೂ ಕೋವಿಡ್ ನೆಗೆಟಿವ್ ಸರ್ಟಿಫಿಕೇಟ್‌ನೊಂದಿಗೆ ತಾಯ್ನಾಡು ಪ್ರವೇಶಿಸಿದ್ದಾರೆ. ಎಲ್ಲರನ್ನೂ ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ

ದ.ಕ. ಜಿಲ್ಲೆಯಲ್ಲಿ ಕೊರೊನಾದ 2ನೇ ಅಲೆ ➤ ಬ್ರಿಟನ್‌ನಿಂದ ಮಂಗಳೂರಿಗೆ 56 ಪ್ರಯಾಣಿಕರ ಆಗಮನ Read More »

ಕರಾವಳಿ, ಕರ್ನಾಟಕ

ಸವಣೂರು : ಇನ್ಸ್ಟಾಗ್ರಾಂ ಮೂಲಕ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಮೆಸ್ಕಂ ಉದ್ಯೋಗಿ ➤ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com ಕಡಬ, ಡಿ.22: ಕಡಬದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿಯಲ್ಲಿ ಮೇಸ್ಕಂ ಸಿಬ್ಬಂದಿ ಸೊಯೂಬ್ ಕೊತ್ವಾಲ್ ವಿರುದ್ಧ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಡಬ ತಾಲೂಕಿನ ಸವಣೂರು ಗ್ರಾಮದ ಮಣೆಮಜಲು ನಿವಾಸಿ ಪಿಯುಸಿ ವ್ಯಾಸಂಗ ಮಾಡುತ್ತಿರುವ ಬಾಲಕಿಗೆ ಮೆಸ್ಕಾಂ ಉದ್ಯೋಗಿ ಸೊಯೂಬ್ ಕೊತ್ವಾಲ್ ಎಂಬಾತ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ.  ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಂ ಮೂಲಕ ಫ್ರೆಂಡ್ ರಿಕ್ವೆಸ್ಟ್ ಕಳಿಸಿ ಆಕೆಯ ಬಳಿ ತನ್ನನ್ನು ಪ್ರೀತಿಸುವಂತೆ ಒತ್ತಡ ಹೇರಿದ್ದಾನೆ, ಬಳಿಕ

ಸವಣೂರು : ಇನ್ಸ್ಟಾಗ್ರಾಂ ಮೂಲಕ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಮೆಸ್ಕಂ ಉದ್ಯೋಗಿ ➤ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲು Read More »

ಕರಾವಳಿ

ಗ್ರಾ.ಪಂ. ಸಾರ್ವತ್ರಿಕ ಚುನಾವಣೆ ➤ ಅನಗತ್ಯ ಕೆಲಸಕ್ಕೆ ನಿಷೇಧಾಜ್ಞೆ ಜಾರಿ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.22:ಗ್ರಾಮ ಪಂಚಾಯತ್‍ಗಳ ಸಾರ್ವತ್ರಿಕ ಚುನಾವಣೆ-2020ಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಡಿಸೆಂಬರ್ 22 ರ ಇಂದು ಮೊದಲ ಹಂತದ ಚುನಾವಣೆ ಬಂಟ್ವಾಳ ತಾಲೂಕಿನಲ್ಲಿ ನಡೆಯಲಿರುವುದರಿಂದ, ಇಂದು  ಸಂಜೆ 5 ಗಂಟೆಯವರೆಗೆ ಹಾಗೂ ಎರಡನೇ ಹಂತದ ಚುನಾವಣೆ ಡಿಸೆಂಬರ್ 27 ರಂದು ಬೆಳ್ತಂಗಡಿ, ಪುತ್ತೂರು, ಸುಳ್ಯ ಮತ್ತು ಕಡಬ ತಾಲೂಕಿನಲ್ಲಿ ನಡೆಯಲಿರುವುದರಿಂದ, ಡಿಸೆಂಬರ್ 25 ರಂದು ಸಂಜೆ 5 ಗಂಟೆಯಿಂದ 27 ರಂದು ಸಂಜೆ 5 ಗಂಟೆಯವರೆಗೆ ಮತದಾನ ಕೇಂದ್ರಗಳ 200 ಮೀ. ವ್ಯಾಪ್ತಿಯಲ್ಲಿ ದಂಡ

ಗ್ರಾ.ಪಂ. ಸಾರ್ವತ್ರಿಕ ಚುನಾವಣೆ ➤ ಅನಗತ್ಯ ಕೆಲಸಕ್ಕೆ ನಿಷೇಧಾಜ್ಞೆ ಜಾರಿ Read More »

ಕರಾವಳಿ

ಕಡಬ :ಡಿ.22 ರ ಇಂದಿನ ಕೊರೋನಾ ಅಪ್‍ಡೇಟ್

(ನ್ಯೂಸ್ ಕಡಬ) newskadaba.com ಕಡಬ, ಡಿ.22: ಕಡಬ ಮತ್ತು ಪುತ್ತೂರು ತಾಲುಕಿನಲ್ಲಿ ಆರೋಗ್ಯ ಇಲಾಖೆಯ ವರದಿಯಂತೆ ಒಟ್ಟು 23 ಮಂದಿಯಲ್ಲಿ ಕೋರೋನಾ ದೃಢಗೊಂಡಿದೆ. ಪುತ್ತೂರಿನ ಸರ್ವೆ ನಿವಾಸಿ 51 ವರ್ಷದ ಮಹಿಳೆ, ಕಡಬ ತಾಲೂಕಿನ ಕಾಯ್ಮಣ ನಿವಾಸಿ 30 ವರ್ಷದ ಮಹಿಳೆ, 35 ವರ್ಷದ ಮಹಿಳೆ, ಚಾರ್ವಕ ಎಣ್ಮೂರು ನಿವಾಸಿ 16 ವರ್ಷದ ಯುವಕ, ಬೀರೊಳಿಗೆ ನಿವಾಸಿ 45 ವರ್ಷದ ವ್ಯಕ್ತಿ, ಮುದ್ವ ನಿವಾಸಿಗಳಾದ 59 ವರ್ಷದ ಮಹಿಳೆ, 50 ವರ್ಷದ ಮಹಿಳೆ, 4 ವರ್ಷದ ಬಾಲಕ,

ಕಡಬ :ಡಿ.22 ರ ಇಂದಿನ ಕೊರೋನಾ ಅಪ್‍ಡೇಟ್ Read More »

ಕರಾವಳಿ

ಕಲಾ ಸಾಮ್ರಾಟ್ ನಟ, ನಿರ್ದೇಶಕ ಎಸ್.ನಾರಾಯಣ್ ಅವರಿಗೆ ಡಾಕ್ಟರೇಟ್ ಪ್ರದಾನ

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ.22: ಕಲಾ ಸಾಮ್ರಾಟ್​, ನಟ, ನಿರ್ದೇಶಕ ಎಸ್.ನಾರಾಯಣ್ ಅವರಿಗೆ ಯೂನಿವರ್ಸಲ್ ಡೆವಲಪ್‍ಮೆಂಟ್ ಕೌನ್ಸಿಲ್ ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಿ ಗೌರವಿಸಿದೆ.ಕನ್ನಡ ಚಿತ್ರರಂಗದಲ್ಲಿ ನಾರಾಯಣ್ ಅವರ ಸೇವೆಯನ್ನು ಗುರುತಿಸಿರುವ ಯೂನಿವರ್ಸ್‍ಲ್ ಡೆವಲಪ್‍ಮೆಂಟ್ ಕೌನ್ಸಿಲ್ ಗೌರವ ಡಾಕ್ಟರೇಟನ್ನು ನೀಡಿದೆ. ನಿರ್ದೇಶಕರಾಗಿ, ನಟರಾಗಿ, ನಿರ್ಮಾಪಕರಾಗಿ ಎಸ್. ನಾರಾಯಣ್ ಚಿತ್ರರಂಗದಲ್ಲಿ ಅಗ್ರಮಾನ್ಯ ಸೇವೆ ಸಲ್ಲಿಸಿರುವ ಕಾರಣ ಗೌರವ ಸಲ್ಲಿಸಲಾಗಿದೆ. ರಘುವೀರ್ ನಟನೆಯ ಚೈತದ ಪ್ರೇಮಾಂಜಲಿ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಎಸ್.ನಾರಾಯಣ್ ಅವರು ಹಲವಾರು ಚಿತ್ರಗಳಲ್ಲಿ ನಟಿಸಿದ್ದು, 49ಕ್ಕೂ

ಕಲಾ ಸಾಮ್ರಾಟ್ ನಟ, ನಿರ್ದೇಶಕ ಎಸ್.ನಾರಾಯಣ್ ಅವರಿಗೆ ಡಾಕ್ಟರೇಟ್ ಪ್ರದಾನ Read More »

ಕರ್ನಾಟಕ

ರಾಜ್ಯದಲ್ಲಿ ನೈಟ್ ಕರ್ಪ್ಯೂ ಜಾರಿ ಇಲ್ಲ : ಸಿಎಂ ಬಿಎಸ್​ವೈ

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ.22: ಕೊರೊನಾ ಕಾರಣಕ್ಕೆ ರಾಜ್ಯದಲ್ಲಿ ನೈಟ್ ಕರ್ಪ್ಯೂ ಜಾರಿ ಬಗ್ಗೆ ಸಿಎಂ ಬಿ.ಎಸ್. ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.ರಾಜ್ಯದಲ್ಲಿ ನೈಟ್ ಕರ್ಪ್ಯೂ ಜಾರಿ ಮಾಡಲ್ಲ. ಜನರು ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದ್ದಾರೆ.   ಕೊರೊನಾ ರೂಪಾಂತರ ಜನರನ್ನು ಆತಂಕಕ್ಕೀಡು ಮಾಡಿದ್ದು, ಬೆಂಗಳೂರಿನಲ್ಲಿ ಹೊಸ ವರ್ಷದಂದು ದೊಡ್ಡ ಪ್ರಮಾಣದಲ್ಲಿ ಆಚರಣೆ ಮಾಡಲು ಅವಕಾಶ ನೀಡಲ್ಲ ಎಂದು ಹೇಳಿದ್ದಾರೆ.ವಿದೇಶಗಳಿಂದ ಬರುವ ಪ್ರಯಾಣಿಕರನ್ನು ತಪಾಸಣೆ ಮಾಡಲಾಗುವುದು. ಮುಂಬೈ ಮಾದರಿಯಲ್ಲಿ ರಾಜ್ಯದಲ್ಲಿ ನೈಟ್ ಕರ್ಪ್ಯೂ ಜಾರಿ ಮಾಡಲ್ಲ ಎಂದು

ರಾಜ್ಯದಲ್ಲಿ ನೈಟ್ ಕರ್ಪ್ಯೂ ಜಾರಿ ಇಲ್ಲ : ಸಿಎಂ ಬಿಎಸ್​ವೈ Read More »

ಕರಾವಳಿ
Scroll to Top