News Kadaba

ಮಂಗಳೂರಿನ ರೀಲ್ಸ್ ಸ್ಟಾರ್ ಇನ್ನಿಲ್ಲ ಹಠಾತ್ ಹೃದಯಾಘಾತದಿಂದ ಇನ್‌ಸ್ಟಾಗ್ರಾಮ್ ಖ್ಯಾತಿಯ ಆಶಾ ಪಂಡಿತ್ ನಿಧನ.

(ನ್ಯೂಸ್‌ ಕಡಬ) newskadaba.com,ಜ,23 ಮಂಗಳೂರು: ಅಭಿಮಾನಿಗಳನ್ನು ಬೈಯುತ್ತಲೇ ಇನ್‌ಸ್ಟಾಗ್ರಾಮ್‌ನಲ್ಲಿ ಹವಾ ಸೃಷ್ಟಿಸಿದ್ದ ನಾಗುರಿಯ ನಿವಾಸಿ ಆಶಾ ಪಂಡಿತ್, ಜನವರಿ 23 ರ ಶುಕ್ರವಾರ ಬೆಳಗಿನ ಜಾವ ಹೃದಯಾಘಾತದಿಂದ ನಿಧನರಾದರು. ಆಶಾ ಪಂಡಿತ್ ತಮ್ಮ ಬೈಗುಳದ ರೀಲ್‌ಗಳಿಂದ ಇನ್‌ಸ್ಟಾಗ್ರಾಮ್‌ನಲ್ಲಿ ಜನಪ್ರಿಯತೆ ಗಳಿಸಿದ್ದರು. ಅವರು ಪಡೀಲ್ ಬಳಿ ಒಂದು ಸಣ್ಣ ಅಂಗಡಿಯನ್ನೂ ನಡೆಸುತ್ತಿದ್ದರು.ಕುಟುಂಬದ ಮೂಲಗಳ ಪ್ರಕಾರ, ಅವರಿಗೆ ನಿನ್ನೆ ರಾತ್ರಿ ವಾಂತಿ ಸಮಸ್ಯೆ ಉಂಟಾಗಿತ್ತು. ಶುಕ್ರವಾರ ಬೆಳಗಿನ ಜಾವ ಅವರಿಗೆ ಹೃದಯಾಘಾತವಾಗಿ ಮನೆಯ ಅಂಗಳದಲ್ಲಿ ಕುಸಿದು ಬಿದ್ದರು ಎಂದು ವರದಿಯಾಗಿದೆ. […]

ಮಂಗಳೂರಿನ ರೀಲ್ಸ್ ಸ್ಟಾರ್ ಇನ್ನಿಲ್ಲ ಹಠಾತ್ ಹೃದಯಾಘಾತದಿಂದ ಇನ್‌ಸ್ಟಾಗ್ರಾಮ್ ಖ್ಯಾತಿಯ ಆಶಾ ಪಂಡಿತ್ ನಿಧನ. Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಇಂದಿನ ರಾಜ್ಯದ ಹವಾಮಾನ ವರದಿ

(ನ್ಯೂಸ್‌ ಕಡಬ) newskadaba.com,ಜ,23 : ರಾಜ್ಯದಲ್ಲಿ ಮುಂದಿನ 6 ದಿನಗಳ ಕಾಲ ಒಣ ಹವೆ ಇರಲಿದ್ದು, ಚಳಿ ಮುಂದುವರೆಯಲಿದೆ. ಬೆಳಗಿನ ಜಾವ ಅಲ್ಲಲ್ಲಿ ಮಂಜಿನ ವಾತಾವರಣ ಇರುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 14 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಚಿಕ್ಕಬಳ್ಳಾಪುರದಲ್ಲಿ ಗರಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 13 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ…

ಇಂದಿನ ರಾಜ್ಯದ ಹವಾಮಾನ ವರದಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಪುತ್ತೂರು ಕೋರ್ಟ್‌ನಲ್ಲಿ ಘೋರ ಘಟನೆ ನ್ಯಾಯಾಧೀಶರ ಸಮ್ಮುಖದಲ್ಲೇ ಆತ್ಮಹತ್ಯೆಗೆ ಯತ್ನ.

(ನ್ಯೂಸ್‌ ಕಡಬ) newskadaba.com,ಜ.22  :ಪುತ್ತೂರಿನ 5ನೇ ಹೆಚ್ಚುವರಿ ನ್ಯಾಯಾಲಯದ ಆವರಣದಲ್ಲಿ ನ್ಯಾಯಾಧೀಶರ ಎದುರೇ ವ್ಯಕ್ತಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಗಳವಾರ ನಡೆದಿದೆ.ಪುತ್ತೂರು ತಾಲೂಕಿನ ಕಾವು ಮಣಿಯಡ್ಕ ನಿವಾಸಿ ರವಿ (35) ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಎಂದು ಗುರುತಿಸಲಾಗಿದೆ. ರವಿ ಹಾಗೂ ಆತನ ಪತ್ನಿ ವಿದ್ಯಾಶ್ರೀ ನಡುವೆ ದಾಂಪತ್ಯ ಕಲಹ ಉಂಟಾಗಿದ್ದು, ಎರಡು ದಿನಗಳ ಹಿಂದೆ ವಿದ್ಯಾಶ್ರೀ ಅವರ ಕುತ್ತಿಗೆ ಹಿಸುಕಿ ಕೊಲೆಗೆ ಯತ್ನಿಸಿದ್ದ ಆರೋಪವೂ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ಗಂಡ–ಹೆಂಡತಿ ಜಗಳ ಪೊಲೀಸ್ ಠಾಣೆ

ಪುತ್ತೂರು ಕೋರ್ಟ್‌ನಲ್ಲಿ ಘೋರ ಘಟನೆ ನ್ಯಾಯಾಧೀಶರ ಸಮ್ಮುಖದಲ್ಲೇ ಆತ್ಮಹತ್ಯೆಗೆ ಯತ್ನ. Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಆರ್‌ಬಿಐಯಲ್ಲಿದೆ ಬರೋಬ್ಬರಿ 572 ಹುದ್ದೆ ಎಸ್‌ಎಸ್‌ಎಲ್‌ಸಿ ತೇರ್ಗಡೆಯಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ

(ನ್ಯೂಸ್‌ ಕಡಬ) newskadaba.com,ಜ.22  ಬೆಂಗಳೂರು:. ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಖಾಲಿ ಇರುವ ಬರೋಬ್ಬರಿ 572 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ ..ಉದ್ಯೋಗ ಸ್ಥಳ: ಬೆಂಗಳೂರು ಸೇರಿ ಭಾರತಾದ್ಯಂತ ಎಸ್‌ಎಸ್‌ಎಲ್‌ಸಿ ತೇರ್ಗಡೆಯಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆಸಕ್ತರು ಆನ್‌ಲೈನ್‌ ಮೂಲಕ ಅಪ್ಲೈ ಮಾಡಬೇಕಿದ್ದು, ಕೊನೆಯ ದಿನ ಫೆಬ್ರವರಿ 4. ವಿದ್ಯಾರ್ಹತೆ ಆರ್‌ಬಿಐ ಅಟೆಂಡೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಶಿಕ್ಷಣ ಮಂಡಳಿಯಿಂದ 10ನೇ ತರಗತಿ ತೇರ್ಗಡೆಯಾದವರು ಅರ್ಜಿ ಸಲ್ಲಿಸಬಹುದು. ಪದವಿ ಅಥವಾ ಅದಕ್ಕಿಂತ

ಆರ್‌ಬಿಐಯಲ್ಲಿದೆ ಬರೋಬ್ಬರಿ 572 ಹುದ್ದೆ ಎಸ್‌ಎಸ್‌ಎಲ್‌ಸಿ ತೇರ್ಗಡೆಯಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

• ಕರ್ನಾಟಕ ರಾಜ್ಯಪಾಲರ ನಡೆ ಪ್ರಶ್ನಿಸಿ ಸುಪ್ರೀಂಗೆ ಮೊರೆ ಹೋಗಲು ಮುಂದಾದ ರಾಜ್ಯಸರ್ಕಾರ..!

(ನ್ಯೂಸ್‌ ಕಡಬ) newskadaba.com,ಜ.22  ಬೆಂಗಳೂರು : ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್ ರಾಜ್ಯ ಜಂಟಿ ಅಧಿವೇಶನದಲ್ಲಿ ರಾಜ್ಯ ಸರ್ಕಾರದ ಭಾಷಣವನ್ನು ಓದಲು ನಿರಾಕರಿಸಿರುವ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ಪ್ರಶ್ನಿಸಿ ಈಗ ಸುಪ್ರೀಂಕೋರ್ಟ್ ಗೆ ಮೊರೆ ಹೋಗಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ. ಮುಖ್ಯಮಂತ್ರಿಗಳ ನಿರ್ದೇಶನದ ಮೇರೆಗೆ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರು ನವದೆಹಲಿಗೆ ತೆರಳಿದ್ದಾರೆ.ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿ ಆ ಮೂಲಕ ರಾಜ್ಯಪಾಲರಿಗೆ ನಿರ್ದೇಶನ ನೀಡುವ ಸಾಧ್ಯತೆಗಳ ಬಗ್ಗೆ ಚರ್ಚೆಗಳು ನಡೆಯುತ್ತಿವೆ ಎನ್ನಲಾಗಿದೆ.ಈಗ ಸುಪ್ರೀಂ ಕೋರ್ಟ್‌ಗೆ

• ಕರ್ನಾಟಕ ರಾಜ್ಯಪಾಲರ ನಡೆ ಪ್ರಶ್ನಿಸಿ ಸುಪ್ರೀಂಗೆ ಮೊರೆ ಹೋಗಲು ಮುಂದಾದ ರಾಜ್ಯಸರ್ಕಾರ..! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಗಣರಾಜೋತ್ಸವದ ಕಣ್ಗಾವಲಿಗೆ ಎಐ ಪವರ್ ದೆಹಲಿ ಪೊಲೀಸರಿಗೆ ಹೊಸ ಬಲ

(ನ್ಯೂಸ್‌ ಕಡಬ) newskadaba.com,ಜ.22  : ಈ ಭಯೋತ್ಪಾದಕನನ್ನ ಮೊಹಮ್ಮದ್ ರೆಹಾನ್ ಎಂದು ಗುರುತಿಸಲಾಗಿದ್ದು, ಅಲ್-ಖೈದಾ ಇನ್ ಇಂಡಿಯನ್ ಸಬ್‌ಕಾಂಟಿನೆಂಟ್ ಸಂಘಟನೆಗೆ ಸೇರಿದ್ದಾನೆ ಎನ್ನಲಾಗಿದೆ. ರೆಹಾನ್ ದೆಹಲಿ ಪೊಲೀಸ್ ಹಾಗೂ ಕೇಂದ್ರೀಯ ಗುಪ್ತಚರ ಏಜೆನ್ಸಿಗಳ ಕಣ್ತಪ್ಪಿಸಿ ಬಹುಕಾಲದಿಂದ ತಲೆಮರಿಸಿಕೊಂಡಿದ್ದಾನೆ. ಗಣರಾಜ್ಯೋತ್ಸವದ ದಿನದಂದು ಭಯೋತ್ಪಾದಕ ದಾಳಿಯ ಎಚ್ಚರಿಕೆ ಇರುವುದರಿಂದ ಆತನ ಪೋಸ್ಟರ್‌ ಪ್ರಕಟಿಸಿರುವುದಾಗಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗಣರಾಜ್ಯೋತ್ಸವದ ಹಿನ್ನೆಲೆ ಕರ್ತವ್ಯ ಪಥ ಮತ್ತು ಸಂಪೂರ್ಣ ನವದೆಹಲಿ ಜಿಲ್ಲೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಬಹುಸ್ತರದ ಸುರಕ್ಷತಾ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ದೆಹಲಿ

ಗಣರಾಜೋತ್ಸವದ ಕಣ್ಗಾವಲಿಗೆ ಎಐ ಪವರ್ ದೆಹಲಿ ಪೊಲೀಸರಿಗೆ ಹೊಸ ಬಲ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಆಫರ್ ಬೆಲೆಗೆ ಮರುಳಾದ ಗ್ರಾಹಕ ಆನ್‌ಲೈನ್‌ನಲ್ಲಿ ವಾಚ್ ಆರ್ಡರ್ ಮಾಡಿದ ವ್ಯಕ್ತಿಗೆ ಸಿಕ್ಕಿತು ಆಲೂಗಡ್ಡೆ

(ನ್ಯೂಸ್‌ ಕಡಬ) newskadaba.com,ಜ.22   ರಾಯಚೂರು:ಸಾಮಾಜಿಕ ಜಾಲತಾಣಗಳಲ್ಲಿ ಶಾಪಿಂಗ್ (Online Shopping) ಮಾಡುವವರಿಗಿದು ಎಚ್ಚರಿಕೆಯ ಗಂಟೆ. ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂನಲ್ಲಿ ಕಾಣಿಸಿಕೊಂಡ ಭರ್ಜರಿ ಆಫರ್ ನಂಬಿ ವಾಚ್ ಆರ್ಡರ್ ಮಾಡಿದ ವ್ಯಕ್ತಿಗೆ ಕೈಗೆ ಬಂದಿದ್ದು ಆಲೂಗಡ್ಡೆ ಪಾರ್ಸಲ್! ಈ ಅಚ್ಚರಿಯ ಘಟನೆ ರಾಯಚೂರು ಜಿಲ್ಲೆಯ ಯರಮರಸ್ ಬಳಿ ನಡೆದಿದೆ. ಆಂಧ್ರಪ್ರದೇಶ ಮೂಲದ ದಗ್ಗುಬಾಟಿ ಬಾಬು ಎಂಬವರು ಕೆಲಸಕ್ಕಾಗಿ ರಾಯಚೂರಿಗೆ ಬಂದಿದ್ದು, ಯರಮರಸ್ ಸಮೀಪದ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಜನವರಿ 13ರಂದು ಸಾಮಾಜಿಕ ಜಾಲತಾಣದಲ್ಲಿ 5 ಸಾವಿರ

ಆಫರ್ ಬೆಲೆಗೆ ಮರುಳಾದ ಗ್ರಾಹಕ ಆನ್‌ಲೈನ್‌ನಲ್ಲಿ ವಾಚ್ ಆರ್ಡರ್ ಮಾಡಿದ ವ್ಯಕ್ತಿಗೆ ಸಿಕ್ಕಿತು ಆಲೂಗಡ್ಡೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಸುಳ್ಯ: ವಿಕಲಚೇತನರ ಸಮನ್ವಯ ಸಭೆ – ಸವಲತ್ತುಗಳ ಮಾಹಿತಿ ಕಾರ್ಯಾಗಾರ

(ನ್ಯೂಸ್‌ ಕಡಬ) newskadaba.com,ಜ.22  :ಸುಳ್ಯ ಪಟ್ಟಣ ಪಂಚಾಯಿತಿ ವತಿಯಿಂದ ಸುಳ್ಯ ನಗರ ವ್ಯಾಪ್ತಿಯ ವಿಕಲ ಚೇತನರ ಸಮನ್ವಯ ಸಭೆ ಮತ್ತು ಮಾಹಿತಿ ಕಾರ್ಯಾಗಾರ ಸುಳ್ಯ ಕೆವಿಜಿ ಪುರಭವನದಲ್ಲಿ ಸೋಮವಾರ ನಡೆಯಿತು. ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ. ಎಂ. ಶಹೀದ್ ತೆಕ್ಕಿಲ್ ಫಲಾನುಭವಿಗಳಿಗೆ ಚೆಕ್ ವಿತರಿಸಿದರು. ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಶಾಹುಲ್

ಸುಳ್ಯ: ವಿಕಲಚೇತನರ ಸಮನ್ವಯ ಸಭೆ – ಸವಲತ್ತುಗಳ ಮಾಹಿತಿ ಕಾರ್ಯಾಗಾರ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಂಗಳೂರು ಪೊಲೀಸರ ಎಚ್ಚರಿಕೆ: ‘ಮಿಡ್‌ನೈಟ್ ಚಾಟ್’ ಆಪ್‌ಗಳ ಮೂಲಕ ಯುವಕರಿಗೆ ಬಲೆ

(ನ್ಯೂಸ್‌ ಕಡಬ) newskadaba.com,ಜ.22  ಮಂಗಳೂರು:ಆನ್‌ಲೈನ್ ಬ್ಲ್ಯಾಕ್‌ಮೇಲ್ ಮತ್ತು ಸುಲಿಗೆಗಾಗಿ ಹೆಚ್ಚಾಗಿ ಬಳಕೆಯಾಗುತ್ತಿರುವ ‘ಮಿಡ್‌ನೈಟ್ ಚಾಟ್’ ಆ್ಯಪ್‌ಗಳ ಬಲೆಗೆ ಬೀಳದಂತೆ ಮಂಗಳೂರು ನಗರ ಪೊಲೀಸರು ಯುವಜನತೆಗೆ ಎಚ್ಚರಿಕೆ ನೀಡಿದ್ದಾರೆ. ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಆಕರ್ಷಕ ಮಹಿಳೆಯರ ಅಥವಾ ಎಐ ಮೂಲಕ ಸೃಷ್ಟಿಸಿದ ಪ್ರೊಫೈಲ್‌ಗಳ ಮೂಲಕ ಸ್ನೇಹದ ಆಮಿಷವೊಡ್ಡಿ ಯುವಕರನ್ನು ಸೆಳೆಯಲಾಗುತ್ತಿದೆ. ಹೀಗೆ ಯುವಕರ ನಂಬಿಕೆ ಗಳಿಸಿ, ನಂತರ ಅವರ ವೈಯಕ್ತಿಕ ವಿವರಗಳು ಮತ್ತು ಖಾಸಗಿ ಕ್ಷಣಗಳನ್ನು ಹಂಚಿಕೊಳ್ಳುವಂತೆ ಪ್ರಚೋದಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಭಾಷಣೆಗಳು

ಮಂಗಳೂರು ಪೊಲೀಸರ ಎಚ್ಚರಿಕೆ: ‘ಮಿಡ್‌ನೈಟ್ ಚಾಟ್’ ಆಪ್‌ಗಳ ಮೂಲಕ ಯುವಕರಿಗೆ ಬಲೆ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಆಂಧ್ರದಲ್ಲಿ ಭೀಕರ ರಸ್ತೆ ಅಪಘಾತ ಡಿಕ್ಕಿಯಾದ ಬೆನ್ನಲ್ಲೇ ಹೊತ್ತಿ ಉರಿದ ವಾಹನಗಳು

(ನ್ಯೂಸ್‌ ಕಡಬ) newskadaba.com,ಜ.22  ಅಮರಾವತಿ: ಟಯರ್ ಸ್ಫೋಟಗೊಂಡು ನಿಯಂತ್ರಣ ಕಳೆದುಕೊಂಡ ಬಸ್ ಕಂಟೈನರ್ ಲಾರಿಗೆ ಡಿಕ್ಕಿ ಹೊಡೆದು ಧಗಧಗನೆ ಹೊತ್ತಿ ಉರಿದ ಪರಿಣಾಮ ಮೂವರು ಸಜೀವ ದಹನವಾದ ಘಟನೆ ಗುರುವಾರ ಆಂಧ್ರದ ನಂದ್ಯಾಲ್ ಜಿಲ್ಲೆಯಲ್ಲಿ ನಡೆದಿದೆ.ಗುರುವಾರ ನಸುಕಿನ ಜಾವ 1:30 ರ ಸುಮಾರಿಗೆ ಸಂಭವಿಸಿದ್ದು, ದುರಂತದಲ್ಲಿ ಬಸ್ ಚಾಲಕ, ಕಂಟೈನರ್ ಚಾಲಕ ಹಾಗೂ ಲಾರಿ ಕ್ಲೀನರ್ ಸೇರಿ ಮೂವರು ಸಾವನ್ನಪ್ಪಿದ್ದಾರೆ. ಅಪಘಾತಕ್ಕೀಡಾದ ಖಾಸಗಿ ಬಸ್ ಆಂಧ್ರದ ನೆಲ್ಲೂರಿನಿಂದ ಹೈದರಾಬಾದ್‌ಗೆ ತೆರಳುತ್ತಿತ್ತು. ಈ ವೇಳೆ ಬಲಭಾಗದ ಟೈಯರ್ ಸ್ಫೋಟಗೊಂಡಿದೆ.

ಆಂಧ್ರದಲ್ಲಿ ಭೀಕರ ರಸ್ತೆ ಅಪಘಾತ ಡಿಕ್ಕಿಯಾದ ಬೆನ್ನಲ್ಲೇ ಹೊತ್ತಿ ಉರಿದ ವಾಹನಗಳು Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top