News Kadaba

ಭಾರತೀಯ ವಾಯುಪಡೆಯಲ್ಲಿ ಅಗ್ನಿವೀರ್ ನೇಮಕಾತಿ

(ನ್ಯೂಸ್‌ ಕಡಬ) newskadaba.com,ಜ.27 : ಕೇಂದ್ರ ರಕ್ಷಣಾ ಸಚಿವಾಲಯದ ಘಟಕವಾದ ಭಾರತೀಯ ವಾಯುಪಡೆ 2026ರ ಅಗ್ನಿಪಥ್ ಯೋಜನೆಯಡಿಯಲ್ಲಿ ಅಗ್ನಿವೀರ್ ವಾಯು ನೇಮಕಾತಿಗೆ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ನೇಮಕಾತಿಗೆ ಅರ್ಹರಾದ ಅವಿವಾಹಿತ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ದೇಶಸೇವೆಯೊಂದಿಗೆ ಶಿಸ್ತು, ಗೌರವ ಮತ್ತು ಭವಿಷ್ಯದ ವೃತ್ತಿಜೀವನವನ್ನು ಕಟ್ಟಿಕೊಳ್ಳಲು ಬಯಸುವ ಯುವಜನರಿಗೆ ಅಗ್ನಿವೀರ್ ವಾಯು ನೇಮಕಾತಿ ಒಂದು ಮಹತ್ವದ ಅವಕಾಶವಾಗಿದೆ. ಅರ್ಜಿ ಪ್ರಕ್ರಿಯೆ ಮತ್ತು ಕೊನೆಯ ದಿನಾಂಕ: ಅಗ್ನಿವೀರ್ ವಾಯು ನೇಮಕಾತಿಗೆ ಆನ್‌ಲೈನ್ […]

ಭಾರತೀಯ ವಾಯುಪಡೆಯಲ್ಲಿ ಅಗ್ನಿವೀರ್ ನೇಮಕಾತಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಉಡುಪಿ : ಸಮುದ್ರದಲ್ಲಿ ಅಲೆಗಳ ಅಬ್ಬರಕ್ಕೆ ಪ್ರವಾಸಿಗರ ದೋಣಿ ಮಗುಚಿ ಇಬ್ಬರ ಸಾವು

(ನ್ಯೂಸ್‌ ಕಡಬ) newskadaba.com,ಜ.27 ಉಡುಪಿ:  ಸಮುದ್ರದಲ್ಲಿ ಅಲೆಗಳ ಅಬ್ಬರಕ್ಕೆ ಪ್ರವಾಸಿಗರ ದೋಣಿ ಮಗುಚಿ ಸಂಭವಿಸಿದ ದುರಂತದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಉಡುಪಿಯ ಡೆಲ್ಟಾ ಬೀಚ್‌ ಕೋಡಿಬೆಂಗ್ರೆಯಲ್ಲಿ ಈ ಘಟನೆ ನಡೆದಿದೆ.ಮೃತರನ್ನು ಮೈಸೂರಿನ ಶಂಕರಪ್ಪ( 22) ಹಾಗೂ ಸಿಂಧು (23) ಎಂದು ಗುರುತಿಸಲಾಗಿದೆ.ಉಡುಪಿಯ ಸಮುದ್ರ ವಿಹಾರಕ್ಕೆ ಬಂದಿದ್ದ 28 ಜನರ ಪೈಕಿ ಇಬ್ಬರು ಸಾವನ್ನಪ್ಪಿದ್ದು, ಇನ್ನಿಬ್ಬರ ಸ್ಥಿತಿ ಗಂಭೀರವಾಗಿದೆ. ಮೈಸೂರಿನ ಬಿಪಿಒ ಕಾಲ್‌ ಸೆಂಟರ್‌ವೊಂದರ 28 ಮಂದಿ ಪ್ರವಾಸಿಗರ ತಂಡ ಇಲ್ಲಿಗೆ ಬಂದಿತ್ತು.ಎರಡು ಪ್ರವಾಸಿ ಬೋಟುಗಳಲ್ಲಿ 28 ಮಂದಿ ಕಡಲಿಗೆ

ಉಡುಪಿ : ಸಮುದ್ರದಲ್ಲಿ ಅಲೆಗಳ ಅಬ್ಬರಕ್ಕೆ ಪ್ರವಾಸಿಗರ ದೋಣಿ ಮಗುಚಿ ಇಬ್ಬರ ಸಾವು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಚಿನ್ನದ ಬೆಲೆಯಲ್ಲಿ ಏರಿಕೆ

(ನ್ಯೂಸ್‌ ಕಡಬ) newskadaba.com,ಜ.27: ಮಂಗಳವಾರದ ಫ್ಯೂಚರ್ಸ್ ವಹಿವಾಟಿನಲ್ಲಿ ಬೆಳ್ಳಿ ಬೆಲೆ ಪ್ರತಿ ಕೆಜಿಗೆ 3.59 ಲಕ್ಷ ರೂ.ಗೆ ದಾಖಲೆಯ ಏರಿಕೆ ಕಂಡಿದ್ದು, ನಿರಂತರ ಭೌಗೋಳಿಕ ರಾಜಕೀಯ ಮತ್ತು ಆರ್ಥಿಕ ಅನಿಶ್ಚಿತತೆಯ ನಡುವೆ ಹೂಡಿಕೆದಾರರ ಬಲವಾದ ಬೇಡಿಕೆಯಿಂದಾಗಿ ಚಿನ್ನ 10 ಗ್ರಾಂಗೆ 1.59 ಲಕ್ಷ ರೂ.ಗೆ ಗರಿಷ್ಠ ಮಟ್ಟವನ್ನು ತಲುಪಿದೆ. ಮಲ್ಟಿ ಕಮಾಡಿಟಿ ಎಕ್ಸ್ಚೇಂಜ್ (MCX) ನಲ್ಲಿ, ಮಾರ್ಚ್ ವಿತರಣೆಯ ಬೆಳ್ಳಿ ಪ್ರತಿ ಕಿಲೋಗ್ರಾಂಗೆ 25,101 ರೂ. ಅಥವಾ ಶೇಕಡಾ 7.5 ರಷ್ಟು ಹೆಚ್ಚಾಗಿ 3,59,800 ರೂ.ಗೆ ದಾಖಲೆಯನ್ನು

ಚಿನ್ನದ ಬೆಲೆಯಲ್ಲಿ ಏರಿಕೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಪದ್ಮಶ್ರೀ ಪುರಸ್ಕೃತರಾದ ಹರೇಕಳ ಹಾಜಬ್ಬ ರವರಿಂದ ಕಳಾರ ಸರಕಾರಿ ಶಾಲಾ ಎಲ್ ಕೆ. ಜಿ. ಮತ್ತು ಯು.ಕೆ.ಜಿ ಕೋಠಡಿ ಉದ್ಘಾಟನೆ.

(ನ್ಯೂಸ್‌ ಕಡಬ) newskadaba.com,ಜ.27: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ,ಕಳಾರ ಇದರ ಪೂರ್ವ ಪ್ರಾಥಮಿಕ( ಎಲ್. ಕೆ. ಜಿ. ಮತ್ತು ಯು. ಕೆ. ಜಿ) ಸ್ಮಾರ್ಟ್ (ತಂತ್ರಜ್ಞಾನ ಆಧಾರಿತ) ತರಗತಿ ಉದ್ಘಾಟನಾ ಸಮಾರಂಭವು ಜರಗಿತು. ನೂತನ ಕೋಠಡಿ ಉದ್ಘಾಟನೆಯನ್ನು ಪದ್ಮಶ್ರೀ ಪುರಸ್ಕೃತರಾದ ಶ್ರೀ ಹರೆಕಳ ಹಾಜಬ್ಬನವರು ನೆರವೇರಿಸಿದರು. ನಂತರ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಎಸ್. ಡಿ. ಎಂ. ಸಿ ಅಧ್ಯಕ್ಷರಾದ ಶ್ರೀ ಕೆ. ಎಚ್.ಹಂಝ ಕಳಾರ ವಹಿಸಿದರು. ನೆರೆದಿರುವ ಎಲ್ಲ ಗಣ್ಯರು ಮತ್ತು  ಸಭೀಕರನ್ನು ಪ್ರಭಾರ ಮುಖ್ಯೋಪಾಧ್ಯಾಯರಾದ

ಪದ್ಮಶ್ರೀ ಪುರಸ್ಕೃತರಾದ ಹರೇಕಳ ಹಾಜಬ್ಬ ರವರಿಂದ ಕಳಾರ ಸರಕಾರಿ ಶಾಲಾ ಎಲ್ ಕೆ. ಜಿ. ಮತ್ತು ಯು.ಕೆ.ಜಿ ಕೋಠಡಿ ಉದ್ಘಾಟನೆ. Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಎಟಿಎಂಗಳಿಗೆ ಠೇವಣಿ ಹಾಕಬೇಕಿದ್ದ ರೂ. 1 ಕೋಟಿಗೂ ಅಧಿಕ ನಗದು ದೋಚಿ ಸಿಬ್ಬಂದಿಯೇ ಪರಾರಿ

(ನ್ಯೂಸ್‌ ಕಡಬ) newskadaba.com,ಜ.27 ಬೆಂಗಳೂರು: ಎಟಿಎಂಗಳಿಗೆ ನಗದು ಠೇವಣಿ ಮಾಡುವ ನೆಪದಲ್ಲಿ ಒಂದು ಕೋಟಿಗೂ ಅಧಿಕ ಹಣವನ್ನು ದೋಚಿ, ಸಿಬ್ಬಂದಿಯೇ ಪರಾರಿಯಾದ ಘಟನೆ ಬೆಂಗಳೂರಿನ ಕೋರಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. 400 ಕೋಟಿ ರೂಪಾಯಿ ನಗದು ದರೋಡೆ ಪ್ರಕರಣದ ಕುರಿತ ಚರ್ಚೆ ಇನ್ನೂ ತೀವ್ರವಾಗಿರುವ ಸಂದರ್ಭದಲ್ಲೇ ಮತ್ತೊಂದು ದೊಡ್ಡ ನಗದು ಕಳವು ಪ್ರಕರಣ ಬಹಿರಂಗವಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಹಿಟಾಚಿ ಪೇಮೆಂಟ್ ಸರ್ವಿಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಕೆಲ ಸಿಬ್ಬಂದಿಯೇ ಈ ಕೃತ್ಯ ಎಸಗಿರುವ

ಎಟಿಎಂಗಳಿಗೆ ಠೇವಣಿ ಹಾಕಬೇಕಿದ್ದ ರೂ. 1 ಕೋಟಿಗೂ ಅಧಿಕ ನಗದು ದೋಚಿ ಸಿಬ್ಬಂದಿಯೇ ಪರಾರಿ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ರಾಜ್ಯದಲ್ಲಿ ಪ್ರಥಮ ಪಿಪಿಪಿ ಡ್ರೈನೇಜ್ ಸ್ಕೀಮ್ ಪುತ್ತೂರಿನಲ್ಲಿ ನಿರ್ಮಾಣ ಮುಂದಿನ ವಾರ ರಾಜ್ಯ ಸರ್ಕಾರದಿಂದ ಮಂಜೂರಾಗುವ ಸಾಧ್ಯತೆ

(ನ್ಯೂಸ್‌ ಕಡಬ) newskadaba.com,ಜ.27 ಪುತ್ತೂರು: ಸಮಗ್ರ ಒಳಚರಂಡಿ ನಿರ್ಮಾಣ ಯೋಜನೆ ಬೇಡಿಕೆಯಿರುವ ಪುತ್ತೂರು ನಗರಕ್ಕೆ ಇದೀಗ ರಾಜ್ಯದ ಪ್ರಥಮ ಪಿಪಿಪಿ ಡ್ರೈನೇಜ್‌ ಸ್ಕೀಂ ಮಂಜೂರುಗೊಳ್ಳುವ ಹಂತದಲ್ಲಿದೆ.ಸರಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ (ಪಬ್ಲಿಕ್‌ ಪ್ರೈವೇಟ್‌ ಪಾರ್ಟಿಸಿಪೇಶನ್‌-ಪಿಪಿಪಿ) ಸಮಗ್ರ ಒಳಚರಂಡಿ ರಚಿಸುವ 100 ಕೋಟಿ ರೂ.ಗಳ ಮೆಗಾ ಯೊಜನೆ ಇದಾಗಿದ್ದು, ಇನ್ನೊಂದು ವಾರದಲ್ಲಿ ಸರಕಾರದಿಂದ ಮಂಜೂರುಗೊಳ್ಳಲಿದೆ. ಒಳಚರಂಡಿ ಅನಿವಾರ್ಯತೆ ಮಂಗಳೂರು ಹೊರತುಪಡಿಸಿ ಜಿಲ್ಲೆಯ 2ನೇ ಅತಿದೊಡ್ಡ ನಗರವಾಗಿರುವ ಪುತ್ತೂರಿನಲ್ಲಿ ಮಳೆ ನೀರು ಹರಿಯುವ ಚರಂಡಿ ವ್ಯವಸ್ಥೆ ಇದ್ದರೂ, ಮನೆ ಮನೆಗಳ, ವಾಣಿಜ್ಯ

ರಾಜ್ಯದಲ್ಲಿ ಪ್ರಥಮ ಪಿಪಿಪಿ ಡ್ರೈನೇಜ್ ಸ್ಕೀಮ್ ಪುತ್ತೂರಿನಲ್ಲಿ ನಿರ್ಮಾಣ ಮುಂದಿನ ವಾರ ರಾಜ್ಯ ಸರ್ಕಾರದಿಂದ ಮಂಜೂರಾಗುವ ಸಾಧ್ಯತೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕೊಹ್ಲಿಯನ್ನು ಹಿಂದಿಕ್ಕಿದ ಸೂರ್ಯಕುಮಾರ್ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ವಿಶೇಷ ದಾಖಲೆ

(ನ್ಯೂಸ್‌ ಕಡಬ) newskadaba.com,ಜ.27 ಮುಂಬೈ: ಟಿ20 ಕ್ರಿಕೆಟ್​ನಲ್ಲಿ ಟೀಮ್ ಇಂಡಿಯಾದ ಗೆಲುವು ಮುಂದುವರಿದಿದೆ. ನ್ಯೂಝಿಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಮೂರು ಪಂದ್ಯಗಳಲ್ಲೂ ಟೀಮ್ ಇಂಡಿಯಾ ಗೆಲುವು ದಾಖಲಿಸಿದೆ.ನ್ಯೂಝಿಲೆಂಡ್ ವಿರುದ್ಧದ ಸರಣಿ ಗೆಲುವಿನೊಂದಿಗೆ ಸೂರ್ಯಕುಮಾರ್ ಯಾದವ್ ಟಿ20 ಕ್ರಿಕೆಟ್​ನಲ್ಲಿ ಭಾರತ ತಂಡದ 3ನೇ ಯಶಸ್ವಿ ನಾಯಕ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಮೂರನೇ ಸ್ಥಾನದಲ್ಲಿ ವಿರಾಟ್ ಕೊಹ್ಲಿ ಕಾಣಿಸಿಕೊಂಡಿದ್ದರು. ಇದೀಗ ಕೊಹ್ಲಿಯನ್ನು ಸೂರ್ಯ ಹಿಂದಿಕ್ಕಿದ್ದಾರೆ.ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಟೀಮ್ ಇಂಡಿಯಾ 52 ಟಿ20 ಪಂದ್ಯಗಳಲ್ಲಿ ಕಣಕ್ಕಿಳಿದಿದೆ.

ಕೊಹ್ಲಿಯನ್ನು ಹಿಂದಿಕ್ಕಿದ ಸೂರ್ಯಕುಮಾರ್ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ವಿಶೇಷ ದಾಖಲೆ Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಜನವರಿ 26ಕ್ಕೆ ಮಾತ್ರ ಗಣರಾಜ್ಯೋತ್ಸವ ಸೀಮಿತವಲ್ಲ-ಜನವರಿ 29ಕ್ಕಿದೆ ಮತ್ತೊಂದು ಆಚರಣೆ!

(ನ್ಯೂಸ್‌ ಕಡಬ) newskadaba.com,ಜ.27 ನವದೆಹಲಿ: 1950ರಲ್ಲಿ ಭಾರತೀಯ ಸಂವಿಧಾನ ಜಾರಿಗೆ ಬಂದ ದಿನವನ್ನು ಸ್ಮರಿಸಲು ಭಾರತವು ಪ್ರತಿವರ್ಷ ಜನವರಿ 26ರಂದು ಗಣರಾಜ್ಯೋತ್ಸವವನ್ನು ಆಚರಿಸುತ್ತದೆ. ಆದರೆ, ಈ ರಾಷ್ಟ್ರೀಯ ಹಬ್ಬದ ಆಚರಣೆಗಳು ಜನವರಿ 26ರಂದೇ ಮುಗಿಯುವುದಿಲ್ಲ. 3 ದಿನಗಳ ಬಳಿಕ , ಜನವರಿ 29ರಂದು ನವದೆಹಲಿಯಲ್ಲಿ ನಡೆಯುವ ಬೀಟಿಂಗ್ ರಿಟ್ರೀಟ್ ಸಮಾರಂಭದೊಂದಿಗೆ ಗಣರಾಜ್ಯೋತ್ಸವಕ್ಕೆ ಔಪಚಾರಿಕ ತೀರ್ಮಾನ ಬರುತ್ತದೆ. ಗಣರಾಜ್ಯೋತ್ಸವದ ಮಹತ್ವ : ಭಾರತವು ಆಗಸ್ಟ್ 15, 1947ರಂದು ಸ್ವಾತಂತ್ರ್ಯ ಪಡೆದರೂ, ಜನವರಿ 26, 1950ರಂದು ಸಂವಿಧಾನ ಜಾರಿಗೆ ಬಂದ ನಂತರವೇ

ಜನವರಿ 26ಕ್ಕೆ ಮಾತ್ರ ಗಣರಾಜ್ಯೋತ್ಸವ ಸೀಮಿತವಲ್ಲ-ಜನವರಿ 29ಕ್ಕಿದೆ ಮತ್ತೊಂದು ಆಚರಣೆ! Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಮಂಗಳೂರು : ಉದ್ಯೋಗ ಸಿಗದೆ ಬೇಸತ್ತು ಆತ್ಮಹತ್ಯೆ ಗೈಯಲು ಮರವೇರಿದ ತರುಣ

(ನ್ಯೂಸ್‌ ಕಡಬ) newskadaba.com,ಜ.27 ಮಂಗಳೂರು:  ಕೆಲಸ ಸಿಗದ ಹಿನ್ನೆಲೆಯಲ್ಲಿ ಯುವಕನೊಬ್ಬ ಮರವೇರಿ ಕುಳಿತು, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳುತ್ತಾ ಕೆಲಹೊತ್ತು ಆತಂಕ ಸೃಷ್ಟಿಸಿರುವ ಘಟನೆ ನಗರದ ಕರಂಗಲ್ಪಾಡಿಯಲ್ಲಿ ಸೋಮವಾರ ಸಂಜೆ ನಡೆದಿದೆ. ಬಾಗಲಕೋಟೆಯ ಭೀಮಪ್ಪ(24) ಮರ ಏರಿ ಆತ್ಮಹತ್ಯೆಗೆ ಯತ್ನಿಸಿದ ಯುವಕ ಎಂದು ತಿಳಿದು ಬಂದಿದೆ. ಪೊಲೀಸರು, ಅಗ್ನಿಶಾಮಕ ದಳದವರು, ಸ್ಥಳೀಯರ ನೆರವಿನಿಂದ ಆತನನ್ನು ಸುರಕ್ಷಿತವಾಗಿ ಕೆಳಗಿಳಿಸಿದರು. ಉದ್ಯೋಗ ಹುಡುಕಿಕೊಂಡು ಸ್ನೇಹಿತರೊಂದಿಗೆ ಮಂಗಳೂರಿಗೆ ಬಂದಿದ್ದ ಈತ ಕೆಲಸ ಸಿಗದ ಕಾರಣಕ್ಕಾಗಿ ಮನನೊಂದು ಮರವೇರಿ ಆತ್ಮಹತ್ಯೆ ಮಾಡುವ ಯೋಚನೆ ಮಾಡಿದ್ದ

ಮಂಗಳೂರು : ಉದ್ಯೋಗ ಸಿಗದೆ ಬೇಸತ್ತು ಆತ್ಮಹತ್ಯೆ ಗೈಯಲು ಮರವೇರಿದ ತರುಣ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಇಂದಿನ ರಾಜ್ಯದ ಹವಾಮಾನ ವರದಿ

(ನ್ಯೂಸ್‌ ಕಡಬ) newskadaba.com,ಜ.27:  ರಾಜ್ಯದಲ್ಲಿ ಮುಂದಿನ 4 ದಿನಗಳ ಕಾಲ ಒಣ ಹವೆ ಇರಲಿದ್ದು, ಚಳಿ ಮುಂದುವರೆಯಲಿದೆ. ಬೆಳಗಿನ ಜಾವ ಅಲ್ಲಲ್ಲಿ ಮಂಜಿನ ವಾತಾವರಣ ಇರುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.. ದಕ್ಷಿಣ ಒಳನಾಡು ಮತ್ತು ಮಲೆನಾಡು ಭಾಗಗಳಲ್ಲಿ ಮುಂದಿನ 3 ರಿಂದ 4 ದಿನಗಳವರೆಗೆ ಕನಿಷ್ಠ ತಾಪಮಾನ ಸಾಮಾನ್ಯಕಿಂತ ಕಡಿಮೆಯಿರಲಿದೆ ಎಂದು ವರದಿ ಮಾಡಿದೆ. ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

ಇಂದಿನ ರಾಜ್ಯದ ಹವಾಮಾನ ವರದಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top