namma kadaba

ಮೇಲ್ಛಾವಣಿ ಸಮೇತ ನೆಲಕ್ಕುರುಳಿದ ಕಡಬದ ಸರಕಾರಿ ಕಾಲೇಜು ಕಟ್ಟಡ ► ವಿದ್ಯಾರ್ಥಿಗಳು ಇಲ್ಲದಿದ್ದರಿಂದ ತಪ್ಪಿದ ಸಂಭಾವ್ಯ ಅನಾಹುತ

(ನ್ಯೂಸ್ ಕಡಬ) newskadaba.com ಕಡಬ, ಜು.22. ಇಲ್ಲಿನ ಸರಕಾರಿ ಪ.ಪೂ.ಕಾಲೇಜಿನ ಗೋಡೆಯು ಈ ಹಿಂದೆ ಬಿರುಕು ಬಿಟ್ಟಿದ್ದು, ಶನಿವಾರದಂದು ಮೇಲ್ಛಾವಣಿ ಸಮೇತ ಗೋಡೆಯು ನೆಲಕ್ಕುರುಳಿ ಅಪಾರ ನಷ್ಟ ಉಂಟಾಗಿದೆ. ಮಳೆಗಾಲ ಪ್ರಾರಂಭದಲ್ಲಿಯೇ ಕಟ್ಟಡ ಕುಸಿಯುವ ಹಂತದಲ್ಲಿ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಿದ್ದು ಬದಲಿ ವ್ಯವಸ್ಥೆ ಮಾಡಿ ಪಾಠ ಪ್ರವಚನ ನಡೆಯುತ್ತಿದೆ. ಜಿ.ಪಂ. ಇಂಜಿನಿಯರ್ ಭರತ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮೊದಲೇ ಕಟ್ಟಡ, ಕೊಠಡಿ ಸ್ಥಳವಕಾಶದ ಕೊರತೆಯಿರುವ ಈ ಕಾಲೇಜಿನಲ್ಲಿ ಈಗ ಕಟ್ಟಡ ಕುಸಿದಿರುವುದರಿಂದ ಮತ್ತಷ್ಟು ಸಮಸ್ಯೆ ಎದುರಾಗಿದೆ. ಕಡಬ […]

ಮೇಲ್ಛಾವಣಿ ಸಮೇತ ನೆಲಕ್ಕುರುಳಿದ ಕಡಬದ ಸರಕಾರಿ ಕಾಲೇಜು ಕಟ್ಟಡ ► ವಿದ್ಯಾರ್ಥಿಗಳು ಇಲ್ಲದಿದ್ದರಿಂದ ತಪ್ಪಿದ ಸಂಭಾವ್ಯ ಅನಾಹುತ Read More »

ಕರಾವಳಿ

ಕಡಬ: ಒಂಟಿ ವೃದ್ದೆಯ ಮನೆಗೆ ನುಗ್ಗಿ ಚಿನ್ನ ಎಗರಿಸಿದ ಕಳ್ಳರು

(ನ್ಯೂಸ್ ಕಡಬ) newskadaba.com ಸವಣೂರು, ಜು.21. ಪೇಟೆಯ ಹೊರವಲಯದ ಕೊರುಂದೂರು ಎಂಬಲ್ಲಿ ಒಂಟಿ ಮಹಿಳೆ ಇದ್ದ ಮನೆಗೆ ನುಗ್ಗಿದ ಕಳ್ಳರು ವೃದ್ದೆಯ ಕೊರಳಲ್ಲಿದ್ದ ಚಿನ್ನದ ಸರವನ್ನು ಎಗರಿಸಿದ ಘಟನೆ ಶುಕ್ರವಾರ ಸಂಜೆ ನಡೆದಿದೆ. ಕೋರಂದೂರು ಹರೀಶ್ ಎಂಬವರ ತಾಯಿ ವಯೋವೃದ್ಧೆ 90 ರ ಹರೆಯದ ಸತ್ಯಭಾಮ ಎಂಬವರ ಕತ್ತಿನಲ್ಲಿದ್ದ ಸುಮಾರು ನಾಲ್ಕು ಪವನ್‍ನ ಚಿನ್ನದ ಸರವನ್ನು ಇಬ್ಬರು ಕಳ್ಳರು ಎಗರಿಸಿದ್ದಾರೆ. ಮನೆಯಲ್ಲಿ ಹರೀಶ್ ಮತ್ತು ಅವರ ತಾಯಿ ಇಬ್ಬರೇ ವಾಸವಾಗಿದ್ದು, ಹರೀಶ್ ಅವರು ಸಂಜೆ ವೇಳೆಗೆ ಕಡಬ

ಕಡಬ: ಒಂಟಿ ವೃದ್ದೆಯ ಮನೆಗೆ ನುಗ್ಗಿ ಚಿನ್ನ ಎಗರಿಸಿದ ಕಳ್ಳರು Read More »

ಕರಾವಳಿ

ಮತ್ತೆ ಮುಳುಗಿದ ಹೊಸ್ಮಠ ಸೇತುವೆ ► ಉಪ್ಪಿನಂಗಡಿ – ಕಡಬ ಸಂಚಾರ ಅಸ್ತವ್ಯಸ್ತ

(ನ್ಯೂಸ್ ಕಡಬ) newskadaba.com ಕಡಬ, ಜೂ.28. ಘಟ್ಟದ ತಪ್ಪಲಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕಡಬ ಸಮೀಪದ ಹೊಸಮಠ ಮುಳುಗು ಸೇತುವೆಯು ಗುರುವಾರ ಮಧ್ಯಾಹ್ನದ ಬಳಿಕ ಮತ್ತೆ ಮುಳುಗಡೆಯಾಗಿ ಸಂಚಾರ ಅಸ್ತವ್ಯಸ್ತಗೊಂಡಿದೆ. ಕಳೆದ ಕೆಲವು ದಿನಗಳಿಂದ ಕಡಬ ಭಾಗದಲ್ಲಿ ನಿರಂತರ ಮಳೆಯಾಗುತ್ತಿರುವುದರ ಪರಿಣಾಮ ನದಿ, ಹಳ್ಳ, ಹೊಳೆಗಳು ತುಂಬಿ ಹರಿಯತೊಡಗಿವೆ. ಗುರುವಾರ ಬೆಳಿಗ್ಗೆಯಿಂದಲೇ ಕಡಬ ಸಮೀಪದ ಹೊಸ್ಮಠದಲ್ಲಿ ಗುಂಡ್ಯ ಹೊಳೆಗೆ ನಿರ್ಮಾಣವಾಗಿದ್ದ ಮುಳುಗು ಸೇತುವೆಯ ಅಂಚಿಗೆ ನೀರು ಹೊಡೆಯುತ್ತಿತ್ತಾದರೂ ಮಧ್ಯಾಹ್ನ ವೇಳೆಗೆ ಮುಳುಗಡೆಯಾಗಿದೆ. ಘಾಟ್ ತಪ್ಪಲಿನಲ್ಲಿ ಮಳೆಯ ಅಬ್ಬರ

ಮತ್ತೆ ಮುಳುಗಿದ ಹೊಸ್ಮಠ ಸೇತುವೆ ► ಉಪ್ಪಿನಂಗಡಿ – ಕಡಬ ಸಂಚಾರ ಅಸ್ತವ್ಯಸ್ತ Read More »

ಕರಾವಳಿ

ಮರ್ಧಾಳ: ಅಡಿಕೆ ತೋಟದಲ್ಲಿ ಕುಸಿದು ಬಿದ್ದು ಯುವಕ ಮೃತ್ಯು

(ನ್ಯೂಸ್ ಕಡಬ) newskadaba.com ಕಡಬ, ಜೂ.27. ಹೃದಯಾಘಾತಕ್ಕೊಳಗಾಗಿ ಕುಸಿದು ಬಿದ್ದು ಯುವಕನೋರ್ವ ಮೃತಪಟ್ಟ ಘಟನೆ ಸಮೀಪದ ಐತ್ತೂರಿನಲ್ಲಿ ಬುಧವಾರ ಸಂಜೆ ನಡೆದಿದೆ. ಮೃತ ಯುವಕನನ್ನು ಐತ್ತೂರು ಗ್ರಾಮದ ಕೆರ್ಮಾಯಿ ನಿವಾಸಿ ದೇವಸ್ಯ ಎಂಬವರ ಪುತ್ರ ಪ್ರಿನ್ಸ್ ಪಿ.ಡಿ.(23) ಎಂದು ಗುರುತಿಸಲಾಗಿದೆ. ಈತ ಕೆರ್ಮಾಯಿ ಸೈಂಟ್ ಮೇರೀಸ್ ಚರ್ಚಿನ ತೋಟದಲ್ಲಿ ಕೂಲಿ ಕೆಲಸದಲ್ಲಿ ನಿರತನಾಗಿದ್ದ ವೇಳೆ ಹೃದಯಾಘಾತಕ್ಕೊಳಗಾಗಿ ಅಡಿಕೆ‌ ಮರದ ಗುಂಡಿಗೆ ಬಿದ್ದಿದ್ದಾನೆ ಎನ್ನಲಾಗಿದೆ. ತಕ್ಷಣವೇ ಉಳಿದ ಕೆಲಸಗಾರರು ಈತನನ್ನು ಕಡಬ ಸಮುದಾಯ ಆಸ್ಪತ್ರೆಗೆ ದಾಖಲಿಸಿದರಾದರೂ ಅದಾಗಲೇ ಮೃತಪಟ್ಟಿದ್ದಾಗಿ

ಮರ್ಧಾಳ: ಅಡಿಕೆ ತೋಟದಲ್ಲಿ ಕುಸಿದು ಬಿದ್ದು ಯುವಕ ಮೃತ್ಯು Read More »

ಕರಾವಳಿ

ಬೆಳ್ಳಾರೆ: ಹಾಡುಹಗಲೇ ಬಲಾತ್ಕಾರವಾಗಿ ಸಾಮೂಹಿಕ ಅತ್ಯಾಚಾರ ► ರಿಕ್ಷಾ ಚಾಲಕರು ಸೇರಿದಂತೆ ಮೂವರ ಬಂಧನ

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಜೂ.27. ಠಾಣಾ ವ್ಯಾಪ್ತಿಯ ಶೇಣಿಯಲ್ಲಿ ಯುವತಿಯೋರ್ವಳನ್ನು ಬಲವಂತದಿಂದ ಕರೆದೊಯ್ದು ಸರಣಿ ಅತ್ಯಾಚಾರಗೈದ ಪ್ರಕರಣದ ಮೂವರು ಆರೋಪಿಗಳನ್ನು ಬೆಳ್ಳಾರೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಅಮರ ಮೂಡ್ನೂರು ಗ್ರಾಮದ ಕುಡುಂಬಿಲ ನಿವಾಸಿ ಕುಂಇಪ್ಪ ನಾಯ್ಕ ಎಂಬವರ ಪುತ್ರ ಜಯಪ್ರಕಾಶ್ (25), ಚೊಕ್ಕಾಡಿಯ ನೇಣಾರು ನಿವಾಸಿ ಕೂಸಪ್ಪ ನಾಯ್ಕ ಎಂಬವರ ಪುತ್ರ ರಂಜಿತ್ (20), ಕುಕ್ಕುಜಡ್ಕದ ನೇರ್ಲಡ್ಕ ನಿವಾಸಿ ಗುಡ್ಡಪ್ಪನಾಯ್ಕ ಎಂಬವರ ಪುತ್ರ ರವೀಂದ್ರ (35) ಎಂದು ಗುರುತಿಸಲಾಗಿದೆ. ಆರೋಪಿಗಳು ಸೋಮವಾರ ಸಂಜೆ ಹಾಲು

ಬೆಳ್ಳಾರೆ: ಹಾಡುಹಗಲೇ ಬಲಾತ್ಕಾರವಾಗಿ ಸಾಮೂಹಿಕ ಅತ್ಯಾಚಾರ ► ರಿಕ್ಷಾ ಚಾಲಕರು ಸೇರಿದಂತೆ ಮೂವರ ಬಂಧನ Read More »

ಕರಾವಳಿ

ಮಂಗಳೂರು: 48 ಮೊಬೈಲ್ ಟವರ್ ಗಳ ಬ್ಯಾಟರಿ ಕಳ್ಳತನ ► ಬಿಳಿನೆಲೆ ನಿವಾಸಿ ಸೇರಿದಂತೆ ಮೂವರ ಬಂಧನ

(ನ್ಯೂಸ್ ಕಡಬ) newskadaba.com ಕಡಬ, ಜೂ.27. ಮೊಬೈಲ್ ಟವರ್ ಗಳಲ್ಲಿನ ಬ್ಯಾಟರಿ ಕಳವು ಪ್ರಕರಣವನ್ನು ಭೇದಿಸಿರುವ ಉರ್ವ ಠಾಣಾ ಪೊಲೀಸರು ಕಡಬದ ಬಿಳಿನೆಲೆ ನಿವಾಸಿ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಇಂಡಸ್ ಕಂಪೆನಿಗೆ ಸೇರಿದ 48 ಮೊಬೈಲ್ ಟವರ್‌ನ ಬ್ಯಾಟರಿಗಳು ಕಳವಾಗಿರುವ ಬಗ್ಗೆ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಜಾಡು ಹಿಡಿದ ಉರ್ವ ಠಾಣಾ ಪೊಲೀಸರು ಇಂಡಸ್ ಕಂಪೆನಿಯ ಬ್ಯಾಟರಿಗಳ ನಿರ್ವಹಣೆಯ ಗುತ್ತಿಗೆ ಪಡೆದಿದ್ದ ಸಂಸ್ಥೆಯೊಂದರ ಸಿಬ್ಬಂದಿಗಳಾದ ಕಡಬದ ಬಿಳಿನೆಲೆ ನಿವಾಸಿ ಆನಂದ್(28), ಕಡೂರಿನ ಸೋಮನಹಳ್ಳಿ

ಮಂಗಳೂರು: 48 ಮೊಬೈಲ್ ಟವರ್ ಗಳ ಬ್ಯಾಟರಿ ಕಳ್ಳತನ ► ಬಿಳಿನೆಲೆ ನಿವಾಸಿ ಸೇರಿದಂತೆ ಮೂವರ ಬಂಧನ Read More »

ಕರಾವಳಿ

ಕಡಬ: ಎಡೆಬಿಡದ ಮಳೆಗೆ ಗುಡ್ಡ ಕುಸಿದು ಧರೆಗುರುಳಿದ ವಿದ್ಯುತ್ ಕಂಬ ► ಕೆಲವೇ ಕ್ಷಣಗಳ ಅಂತರದಲ್ಲಿ ಅಪಾಯದಿಂದ ಪಾರಾದ ವಿದ್ಯಾರ್ಥಿಗಳು

(ನ್ಯೂಸ್ ಕಡಬ) newskadaba.com ಕಡಬ, ಜೂ.26. ಎಡೆಬಿಡದೆ ಮಳೆ‌ ಸುರಿಯುತ್ತಿರುವುದರಿಂದಾಗಿ ವಿದ್ಯುತ್ ಕಂಬದ ಜೊತೆಗೆ ಗುಡ್ಡ ಕುಸಿದು ಬಿದ್ದ ಘಟನೆ ಕಡಬದ ಮುಖ್ಯ ಪೇಟೆಯಲ್ಲಿ ಮಂಗಳವಾರ ಸಂಜೆ‌ ನಡೆದಿದೆ. ಇಲ್ಲಿನ ಮೀನು ಮಾರುಕಟ್ಟೆಯ ಸಮೀಪದದಲ್ಲಿನ ಗುಡ್ಡೆ ಕುಸಿದಿದ್ದು, ತುದಿಯಲ್ಲಿದ್ದ ವಿದ್ಯುತ್ ಕಂಬ ಧರೆಗುರುಳಿದೆ. ಇದರಿಂದಾಗಿ ಮೀನು ಮಾರುಕಟ್ಟೆಯ ಶೆಡ್ ಗೆ ಹಾನಿಯಾಗಿದೆ. ಎಲ್ಲಾ ದಿನಗಳಲ್ಲಿ ಈ ಸ್ಥಳದಲ್ಲಿ ವಾಹನಗಳನ್ನು ನಿಲುಗಡೆಗೊಳಿಸಲಾಗುತ್ತಿತ್ತಾದರೂ ಇಂದು ಯಾವುದೇ ವಾಹನಗಳಿರಲಿಲ್ಲ. ಅಲ್ಲದೆ ಘಟನೆ ನಡೆಯುವುದಕ್ಕಿಂತ ಕೆಲವೇ ಕ್ಷಣಗಳ ಮೊದಲು ಶಾಲಾ ವಿದ್ಯಾರ್ಥಿಗಳು ಇದೇ

ಕಡಬ: ಎಡೆಬಿಡದ ಮಳೆಗೆ ಗುಡ್ಡ ಕುಸಿದು ಧರೆಗುರುಳಿದ ವಿದ್ಯುತ್ ಕಂಬ ► ಕೆಲವೇ ಕ್ಷಣಗಳ ಅಂತರದಲ್ಲಿ ಅಪಾಯದಿಂದ ಪಾರಾದ ವಿದ್ಯಾರ್ಥಿಗಳು Read More »

ಕರಾವಳಿ

ಟೀಂ ಇಂಡಿಯಾದ ಆರಂಭಿಕ ಆಟಗಾರ ಕೆ.ಎಲ್.ರಾಹುಲ್ ಕುಕ್ಕೇ ಸುಬ್ರಹ್ಮಣ್ಯಕ್ಕೆ ಭೇಟಿ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಜೂ.22. ಟೀಮ್ ಇಂಡಿಯಾದ ಆರಂಭಿಕ ಆಟಗಾರ ಕೆ.ಎಲ್. ರಾಹುಲ್ ಕುಟುಂಬ ಸಮೇತರಾಗಿ ದಕ್ಷಿಣ ಭಾರತದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಕುಕ್ಕೇ ಸುಬ್ರಹ್ಮಣ್ಯಕ್ಕೆ ಗುರುವಾರದಂದು ಭೇಟಿ ನೀಡಿದರು. ರಾಹುಲ್ ಅವರನ್ನು ಶ್ರೀ ಕ್ಷೇತ್ರ ಸುಬ್ರಹ್ಮಣ್ಯ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಪ್ರಸಾದದೊಂದಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಈ ಸಂದರ್ಭ ಶ್ರೀ ದೇವಳದ ಶಿಷ್ಠಾಚಾರ ಅಧಿಕಾರಿ ಕೆ.ಎಂ.ಗೋಪಿನಾಥನ್ ನಂಬೀಶ, ಶಿಷ್ಠಾಚಾರ ವಿಭಾಗದ ಪ್ರಮೋದ್ ಕುಮಾರ್.ಎಸ್, ಹರೀಶ್, ತಾ.ಪಂ.ಸದಸ್ಯ ಅಶೋಕ್ ನೆಕ್ರಾಜೆ, ಸ್ಥಳೀಯರಾದ

ಟೀಂ ಇಂಡಿಯಾದ ಆರಂಭಿಕ ಆಟಗಾರ ಕೆ.ಎಲ್.ರಾಹುಲ್ ಕುಕ್ಕೇ ಸುಬ್ರಹ್ಮಣ್ಯಕ್ಕೆ ಭೇಟಿ Read More »

ರಾಷ್ಟ್ರೀಯ ನ್ಯೂಸ್

ಹದಗೆಟ್ಟ ಕಲ್ಲಾಜೆ – ಅಂತಿಬೆಟ್ಟು ರಸ್ತೆಗೆ ಊರವರಿಂದಲೇ ಕಾಯಕಲ್ಪ ► ಸಡಕ್ ರಸ್ತೆಗೆ ಕಾದು ಸುಸ್ತಾಗಿ ಕೊನೆಗೆ ಶ್ರಮದಾನದ ಮೊರೆ ಹೋದ ಗ್ರಾಮಸ್ಥರು

(ನ್ಯೂಸ್ ಕಡಬ) newskadaba.com ಕಡಬ, ಜೂ.17. ಮರ್ದಾಳ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಲ್ಲಾಜೆ ಅಂತಿಬೆಟ್ಟು ಮಾರ್ಗವಾಗಿ ಕೋರಿಯಾರ್ ಮೂಲಕ ಕೋಡಿಂಬಾಳ ಸೇರಬೇಕಾದ ಗ್ರಾಮ ಸಡಕ್ ರಸ್ತೆಯು ಮಂಜೂರಾಗಿ ವರ್ಷಗಳೇ ಕಳೆದರೂ ರಸ್ತೆ ಅಭಿವೃದ್ಧಿಯಾಗದ ಹಿನ್ನೆಲೆಯಲ್ಲಿ ಈ ಭಾಗದ ಗ್ರಾಮಸ್ಥರೆಲ್ಲ ಸೇರಿಕೊಂಡು ಕೆಸರುಮಯ, ಹೊಂಡ, ಗುಂಡಿಗಳಿಂದ ಕೂಡಿದ ರಸ್ತೆಯನ್ನು ಶ್ರಮದಾನದ ಮೂಲಕ ದುರಸ್ತಿಗೊಳಿಸಿದ ಘಟನೆ ಭಾನುವಾರದಂದು ‌ನಡೆದಿದೆ. ಕಲ್ಲಾಜೆಯಿಂದ ಅಂತಿಬೆಟ್ಟುವರೆಗಿನ ಸುಮಾರು ೫೦ಕ್ಕೂ ಮೆಲ್ಪಟ್ಟ ಗ್ರಾಮಸ್ಥರು ಒಟ್ಟಾಗಿ ಬೆಳಿಗ್ಗೆಯಿಂದ ಸಂಜೆಯ ತನಕ ಶ್ರಮದಾನದ ಮೂಲಕ ರಸ್ತೆಯನ್ನು ದುರಸ್ಥಿಗೊಳಿಸಿದ್ದಾರೆ.

ಹದಗೆಟ್ಟ ಕಲ್ಲಾಜೆ – ಅಂತಿಬೆಟ್ಟು ರಸ್ತೆಗೆ ಊರವರಿಂದಲೇ ಕಾಯಕಲ್ಪ ► ಸಡಕ್ ರಸ್ತೆಗೆ ಕಾದು ಸುಸ್ತಾಗಿ ಕೊನೆಗೆ ಶ್ರಮದಾನದ ಮೊರೆ ಹೋದ ಗ್ರಾಮಸ್ಥರು Read More »

ಕರಾವಳಿ
Scroll to Top