ಮರ್ಧಾಳ ಶೌರ್ಯ ಘಟಕದ ಮಾಸಿಕ ಸಭೆ- ಯೋಜನೆಯ ಕಾರ್ಯಕ್ರಮಗಳ ಸಂಪೂರ್ಣ ಅರಿವು ಘಟಕದ ಸ್ವಯಂ ಸೇವಕರಲ್ಲಿರಬೇಕು- ರವಿಪ್ರಸಾದ್ ಆಲಾಜೆ
(ನ್ಯೂಸ್ ಕಡಬ) newskadaba.com ಅ. 21. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಬಿಳಿನೆಲೆ ವಲಯದ ಮರ್ಧಾಳ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಅಕ್ಟೋಬರ್ ತಿಂಗಳ ಮಾಸಿಕ ಸಭೆಯು ಬಿಳಿನೆಲೆ ವಲಯದ ಕಛೇರಿಯಲ್ಲಿ ನಡೆಯಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಳಿನೆಲೆ ವಲಯ ಮೇಲ್ವೀಚಾರಕ ರವಿಪ್ರಸಾದ್ ಆಲಾಜೆ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಶೌರ್ಯಘಟಕದ ಸ್ವಯಂ ಸೇವಕರುಗಳು ಸಾಮಾಜಿಕ ಸೇವೆ ಹಾಗೂ ವಿಪತ್ತು ಸೇವೆಯಲ್ಲಿ ತೊಡಗಿಕೊಳ್ಳುವುದರಿಂದ ಬಿಳಿನೆಲೆ ವಲಯದ ಜನರಲ್ಲಿ ವಿಪತ್ತಿನ ಬಗ್ಗೆ ಭಯವನ್ನು ಹೋಗಲಾಡಿಸಿ ಬರವಸೆಯನ್ನು […]

