Mardala

ಮರ್ಧಾಳ ಸೈಂಟ್ ಮೇರೀಸ್ ಪ್ರೌಢಶಾಲಾ ವಾರ್ಷಿಕೋತ್ಸವ ► ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಕಡಬ, ಡಿ.17. ಓರ್ವ ವಿದ್ಯಾರ್ಥಿಯ ಭವಿಷ್ಯದ ಅಡಿಪಾಯವು ತನ್ನ ಪ್ರೌಢಶಿಕ್ಷಣದಿಂದ ಆರಂಭವಾಗುತ್ತದೆ. ಪ್ರತಿಯೋರ್ವ ವಿದ್ಯಾರ್ಥಿಯೂ ಪ್ರೌಢಶಾಲೆಯಲ್ಲಿ ಕಲಿಯುವಂತಹ ವಿದ್ಯೆಯನ್ನು ತನ್ನ ಜೀವನದಲ್ಲಿ ರೂಪಿಸಿಕೊಂಡಾಗ ಜೀವನ ಯಶಸ್ವಿಯಾಗುತ್ತದೆ ಎಂದು ಕೊಕ್ಕಡ ಸರಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾದ ವಿಶ್ವನಾಥ್ ರೈ ಪೆರ್ಲ ಹೇಳಿದರು. ಅವರು ಭಾನುವಾರದಂದು ಮರ್ಧಾಳ ಸೈಂಟ್ ಮೇರೀಸ್ ಪ್ರೌಢಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು‌. ವಿದ್ಯಾರ್ಥಿಗಳು ಸಮಾಜದ ಮುನ್ನೆಲೆಗೆ ಬರುವಲ್ಲಿ ತನ್ನ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಅತ್ಯಗತ್ಯವಾದುದು. ಆದುದರಿಂದ […]

ಮರ್ಧಾಳ ಸೈಂಟ್ ಮೇರೀಸ್ ಪ್ರೌಢಶಾಲಾ ವಾರ್ಷಿಕೋತ್ಸವ ► ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ Read More »

ಕರಾವಳಿ

ಮರ್ಧಾಳ: ಬಾರ್ ನ ಸಪ್ಲಾಯರ್ ಗೆ ಸೋಡಾ ಬಾಟ್ಲಿಯಿಂದ ಹಲ್ಲೆ ► ಗಾಯಾಳು‌ ಸಪ್ಲಾಯರ್ ಆಸ್ಪತ್ರೆಗೆ ದಾಖಲು

(ನ್ಯೂಸ್ ಕಡಬ) newskadaba.com ಕಡಬ, ಡಿ.15. ಊಟ ಮತ್ತು ಮದ್ಯಪಾನ ಸೇವಿಸುತ್ತಿದ್ದಾಗ ಬಿಲ್ ಕೇಳಿದ್ದ ಕಾರಣಕ್ಕಾಗಿ ಸಪ್ಲಾಯರ್ ಓರ್ವರಿಗೆ ತಂಡವೊಂದು ಸೋಡಾ ಬಾಟಲ್ ನಿಂದ ಹಲ್ಲೆ ನಡೆಸಿದ ಘಟನೆ ಮರ್ಧಾಳದ ಸುರಭಿ ಬಾರ್ & ರೆಸ್ಟೋರೆಂಟ್ ನಲ್ಲಿ ಗುರುವಾರ ರಾತ್ರಿ ನಡೆದಿದೆ. ಗಾಯಾಳುವನ್ನು ಸುರಭಿ ರೆಸ್ಟೋರೆಂಟಿನ ಸಪ್ಲಾಯರ್ ಬೆಳ್ತಂಗಡಿ ತಾಲೂಕಿನ ಕುಕ್ಕಲ ಗ್ರಾಮದ ಅಟ್ಟತ್ತೋಡಿ ನಿವಾಸಿ ನಾರಾಯಣ ಶೆಟ್ಟಿ ಎಂಬವರ ಪುತ್ರ ಯೋಗಿಶ್ ಶೆಟ್ಟಿ (40) ಎಂದು ಗುರುತಿಸಲಾಗಿದೆ. ಗುರುವಾರ ರಾತ್ರಿ ಮೂರು ಜನರ ತಂಡವೊಂದು ಬಾರ್

ಮರ್ಧಾಳ: ಬಾರ್ ನ ಸಪ್ಲಾಯರ್ ಗೆ ಸೋಡಾ ಬಾಟ್ಲಿಯಿಂದ ಹಲ್ಲೆ ► ಗಾಯಾಳು‌ ಸಪ್ಲಾಯರ್ ಆಸ್ಪತ್ರೆಗೆ ದಾಖಲು Read More »

ಕರಾವಳಿ

ಮರ್ಧಾಳ: ಕ್ಯಾನ್ಸರ್ ಪೀಡಿತ ಬಾಲಕನ ಚಿಕಿತ್ಸೆಗೆ ► ಬೇಕಾಗಿದೆ ದಾನಿಗಳ ಸಹಾಯಹಸ್ತ

(ನ್ಯೂಸ್ ಕಡಬ) newskadaba.com ಕಡಬ, ಡಿ.05. ಶಾಲೆಗೆ ಹೋಗಿ ಶಿಕ್ಷಣ ಕಲಿತು ಉನ್ನತ ಮಟ್ಟಕ್ಕೇರಬೇಕಿದ್ದ ಬಾಲಕನೋರ್ವ ಕ್ಯಾನ್ಸರ್ ಎಂಬ ಮಹಾಮಾರಿಗೆ ತುತ್ತಾಗಿ ಇದೀಗ ಆಸ್ಪತ್ರೆಯಲ್ಲಿ ದಿನದೂಡುತ್ತಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ದಾನಿಗಳ ಸಹಾಯಹಸ್ತ ಬೇಕಾಗಿದೆ. ಪುತ್ತೂರು ತಾಲೂಕಿನ ಬಂಟ್ರ ಗ್ರಾಮದ ಕಂಪ ನಿವಾಸಿ ಸುರೇಶ್ ಗೌಡ ಹಾಗೂ ಲಲಿತಾ ದಂಪತಿಯ ಪ್ರಥಮ ಪುತ್ರ ಮರ್ಧಾಳ ಸೈಂಟ್ ಮೇರೀಸ್ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿ ರಾಜೇಶ್ ಕ್ಯಾನ್ಸರ್ ರೋಗಕ್ಕೀಡಾಗಿ ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ. 2014 ರಲ್ಲಿ ಮೈ

ಮರ್ಧಾಳ: ಕ್ಯಾನ್ಸರ್ ಪೀಡಿತ ಬಾಲಕನ ಚಿಕಿತ್ಸೆಗೆ ► ಬೇಕಾಗಿದೆ ದಾನಿಗಳ ಸಹಾಯಹಸ್ತ Read More »

ಕರಾವಳಿ

ಕಡಬ: ರೀಜನಲ್ ಎಸ್‍ಎಂಎ ಸಮಾವೇಶ ►ಪೂರ್ವಭಾವಿ ಸಭೆ

(ನ್ಯೂಸ್ ಕಡಬ) newskadaba.com ಕಡಬ, ನ.14. ಸುನ್ನೀ ಮೆನೇಜ್‍ಮೆಂಟ್ ಅಸೋಶಿಯೇಶನ್‍ನ ಕಡಬ ರೀಜನಲ್ ಸಮಾವೇಶವು ನ.17ರಂದು ಶುಕ್ರವಾರ ಕಡಬ ಕೇಂದ್ರ ಜುಮ್ಮಾ ಮಸೀದಿಯಲ್ಲಿ ನಡೆಯಲಿದ್ದು ಅದರ ಪೂರ್ವಭಾವಿ ಸಭೆಯು ಆದಿತ್ಯವಾರ ಅಡ್ಡಗದ್ದೆ ಅಲ್‍ಮದೀನ ಮಸೀದಿಯಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಕಡಬ ರೀಜನಲ್ ಉಪಾಧ್ಯಕ್ಷರಾದ ಖಾದರ್ ಸಾಹೇಬ್ ಕಲ್ಲುಗುಡ್ಡೆಯವರು ವಹಿಸಿ ಮಾತನಾಡಿ ಇದೇ ನ.21 ರಂದು ಪುತ್ತೂರು ಟೌನ್‍ಹಾಲ್‍ನಲ್ಲಿ ಜಿಲ್ಲಾ ಮಟ್ಟದ ಸಮಾವೇಶವು ನಡೆಯಲಿದ್ದು ಈಗಾಗಲೇ ನಮ್ಮ ರೀಜನಲ್ ವ್ಯಾಪ್ತಿಯ ಎಲ್ಲಾ ಮದರಸಗಳಲ್ಲಿ ರಕ್ಷಕ-ಶಿಕ್ಷಕ ಸಭೆ ನಡೆಸಲಾಗಿದೆ. ಹಾಗೂ ಇದೇ

ಕಡಬ: ರೀಜನಲ್ ಎಸ್‍ಎಂಎ ಸಮಾವೇಶ ►ಪೂರ್ವಭಾವಿ ಸಭೆ Read More »

ಕರಾವಳಿ

ಮರ್ದಾಳ ಗ್ರಾ.ಪಂ. ಮಕ್ಕಳ ಗ್ರಾಮ ಸಭೆ ► ವಿದ್ಯಾರ್ಥಿಗಳ ಸಮಸ್ಯೆಗಳ ಕುರಿತು ಚರ್ಚೆ

(ನ್ಯೂಸ್ ಕಡಬ) newskadaba.com ಕಡಬ, ನ.14. ಮರ್ದಾಳ ಗ್ರಾ.ಪಂ.ನ 2017-18ನೇ ಸಾಲಿನ ಮಕ್ಕಳ ಗ್ರಾಮಸಭೆಯು ಮರ್ದಾಳ ಸೈಂಟ್ ಮೇರಿಸ್ ಪ್ರೌಢಶಾಲಾ ವಿದ್ಯಾರ್ಥಿ ನಾಯಕ ನಿತೇಶ್ ಕೆ.ಎಂ.ರವರ ಅಧ್ಯಕ್ಷತೆಯಲ್ಲಿ ಮರ್ದಾಳ ಅಂಬೇಡ್ಕರ್ ಭವನದಲ್ಲಿ ನಡೆಯಿತು. ಮರ್ದಾಳ ಗ್ರಾ.ಪಂ.ಅಧ್ಯಕ್ಷೆ ಲಲಿತಾ ಎಂ ಮಾತನಾಡಿ ಮಕ್ಕಳೇ ಮುಂದಿನ ಭವಿಷ್ಯದ ಆಸ್ತಿಯಾಗಿದ್ದು ಮಕ್ಕಳಿಂದಲೇ ಸಮಾಜವನ್ನು ತಿದ್ದುವ ಕೆಲಸಗಳಾಗಬೇಕಿದೆ. ತಾವು ಗ್ರಾಮ ಸಭೆಯಲ್ಲಿ ಭಾಗವಹಿಸುವುದರ ಮೂಲಕ ವಿವಿಧ ಸಮಸ್ಯೆಗಳನ್ನು ತಿಳಿಸಿ ಇತ್ಯರ್ಥ ಪಡಿಸುವಂತೆ ವಿನಂತಿಸಿಕೊಂಡಿದ್ದೀರಿ, ತಮ್ಮ ಬೇಡಿಕೆಗನುಗುಣವಾಗಿ ಆದ್ಯತೆ ನೆಲೆಯಲ್ಲಿ ಗ್ರಾ.ಪಂ.ನಿಂದ ಸಾಧ್ಯವಾದಷ್ಟು ಅಭಿವೃದ್ದಿ ಪಡಿಸಲಾಗುವುದು

ಮರ್ದಾಳ ಗ್ರಾ.ಪಂ. ಮಕ್ಕಳ ಗ್ರಾಮ ಸಭೆ ► ವಿದ್ಯಾರ್ಥಿಗಳ ಸಮಸ್ಯೆಗಳ ಕುರಿತು ಚರ್ಚೆ Read More »

ಕರಾವಳಿ

ಬಂಟ್ರ: ಕಾಂಗ್ರೆಸ್‍ನಿಂದ ಮನೆಮನೆ ಭೇಟಿ ಕಾರ್ಯಕ್ರಮ ►ರಾಜ್ಯ ಸರಕಾರದ ಸಾಧನಾ ಕೈಪಿಡಿ ವಿತರಣೆ 

(ನ್ಯೂಸ್ ಕಡಬ) newskadaba.com ಕಡಬ, ನ.13. ಕಾಂಗ್ರೆಸ್ ವತಿಯಿಂದ ರಾಜ್ಯ ಸರಕಾರದ ಸಾಧನೆಯನ್ನು ಮನೆಮನೆಗೆ ಭೇಟಿ ನೀಡಿ ತಿಳಿಸುವ ಕಾರ್ಯಕ್ರಮ ಹಾಗೂ ಸಾಧನೆಗಳ ಕೈಪಿಡಿ ಹಂಚುವ ಕಾರ್ಯಕ್ರಮ ಬಂಟ್ರ ಗ್ರಾಮದಲ್ಲಿ ನಡೆಸಲಾಯಿತು. ಬಂಟ್ರ ಗ್ರಾಮದ ಚಾಕೋಟೆಕೆರೆಯಲ್ಲಿ ಮರ್ದಾಳ ಗ್ರಾ.ಪಂ.ಮಾಜಿ ಉಪಾಧ್ಯಕ್ಷರಾದ ಮಹಮ್ಮದ್‍ರವರಿಗೆ ಜಿ.ಪಂ.ಸದಸ್ಯ ಪಿ.ಪಿ ವರ್ಗೀಸ್‍ರವರು ಸಾಧನಾ ಕೈಪಿಡಿ ನೀಡಿಚಾಲನೆ ನೀಡಿ ಮಾತನಾಡಿದ ಅವರು, ಚುನಾವಣಾ ಸಂದರ್ಭದಲ್ಲಿ ನೀಡಿದ ಭರವಸೆಗಳನ್ನು ಚಾಚೂ ತಪ್ಪದೆ ಜನರಿಗೆ ನೀಡಿದ ಕಾಂಗ್ರೆಸ್‍ನ ಸಿದ್ದರಾಮಯ್ಯ ಸರಕಾರ ಅನೇಕ ಜನಪರ ಯೋಜನೆಗಳನ್ನು ನೀಡಿದೆ. ಪಕ್ಷದ

ಬಂಟ್ರ: ಕಾಂಗ್ರೆಸ್‍ನಿಂದ ಮನೆಮನೆ ಭೇಟಿ ಕಾರ್ಯಕ್ರಮ ►ರಾಜ್ಯ ಸರಕಾರದ ಸಾಧನಾ ಕೈಪಿಡಿ ವಿತರಣೆ  Read More »

ಕರಾವಳಿ

ಮರ್ಧಾಳದಲ್ಲಿ ಮದ್ಯದಂಗಡಿಗೆ ಅನುಮತಿ ನೀಡಿರುವುದು ಕಾನೂನು ಬಾಹಿರ ► ವಾರದೊಳಗೆ ಅನುಮತಿ ರದ್ದುಗೊಳಿಸದಿದ್ದಲ್ಲಿ ಉಗ್ರ ಪ್ರತಿಭಟನೆಯ ಎಚ್ಚರಿಕೆ

(ನ್ಯೂಸ್ ಕಡಬ) newskadaba.com ಕಡಬ, ನ.09. ಇಲ್ಲಿನ ಬಂಟ್ರ ಗ್ರಾಮದ ಚಾಕೋಟೆಕರೆ ಎಂಬಲ್ಲಿ ಕಾನೂನು ಬಾಹಿರವಾಗಿ ಬಾರ್ & ರೆಸ್ಟೋರೆಂಟನ್ನು ತೆರೆಯಲಾಗಿದ್ದು, ವಾರದೊಳಗೆ ಪರವಾನಿಗೆಯನ್ನು ರದ್ದುಗೊಳಿಸದಿದ್ದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಕಡಬ ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ಎ.ಬಿ. ಮನೋಹರ್ ರೈ ಹೇಳಿದ್ದಾರೆ. ಅವರು ಗುರುವಾರದಂದು ಕಡಬದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಅಬಕಾರಿ ಕಾನೂನಿನಲ್ಲಿ ಮದ್ಯದಂಗಡಿಯು ರಾಜ್ಯ ಹೆದ್ದಾರಿಯಿಂದ 220 ಮೀಟರ್ ಹಾಗೂ ಪರಿಶಿಷ್ಟ ಜಾತಿ/ಪಂಗಡದ ಕಾಲನಿಯಿಂದ 100 ಮೀಟರ್ ದೂರದಲ್ಲಿರಬೇಕೆಂಬ ನಿಯಮವಿದ್ದರೂ, ಚಾಕೋಟೆಕರೆಯಲ್ಲಿ ಪರಿಶಿಷ್ಟ ಜಾತಿ

ಮರ್ಧಾಳದಲ್ಲಿ ಮದ್ಯದಂಗಡಿಗೆ ಅನುಮತಿ ನೀಡಿರುವುದು ಕಾನೂನು ಬಾಹಿರ ► ವಾರದೊಳಗೆ ಅನುಮತಿ ರದ್ದುಗೊಳಿಸದಿದ್ದಲ್ಲಿ ಉಗ್ರ ಪ್ರತಿಭಟನೆಯ ಎಚ್ಚರಿಕೆ Read More »

ಕರಾವಳಿ

ವಿರೋಧದ ನಡುವೆ ಮರ್ದಾಳದಲ್ಲಿ ಮದ್ಯದಂಗಡಿ ಆರಂಭ ► ಗ್ರಾಮಸ್ಥರಿಗೆ ಚಳ್ಳೆಹಣ್ಣು ತಿನ್ನಿಸಿದ ಅಬಕಾರಿ ಅಧಿಕಾರಿಗಳು

(ನ್ಯೂಸ್ ಕಡಬ) newskadaba.com ಕಡಬ, ನ.09. ಗ್ರಾಮಸ್ಥರ ವಿರೋಧದ ನಡುವೆಯೂ ಇಲ್ಲಿನ ಮರ್ಧಾಳ ಸಮೀಪದ ಚಾಕಟೆಕರೆ ಎಂಬಲ್ಲಿ ಗುರುವಾರದಂದು ಮದ್ಯದಂಗಡಿ ಆರಂಭಗೊಂಡಿದೆ. ಮದ್ಯದಂಗಡಿಯನ್ನು ವಿರೋಧಿಸಿ ಮರ್ಧಾಳ ಪರಿಸರದ ಗ್ರಾಮಸ್ಥರು ಕಾನೂನಾತ್ಮಕ ಹೋರಾಟಕ್ಕಿಳಿದಿದ್ದು, ಅಬಕಾರಿ ಇಲಾಖಾ ಅಧಿಕಾರಿಗಳಿಗೆ ಹಲವು ಮನವಿಗಳನ್ನು ಅರ್ಪಿಸಿದ್ದರು. ಒಂದೆಡೆ ಅಬಕಾರಿ ಅಧಿಕಾರಿಗಳು ಮದ್ಯದಂಗಡಿಯ ಬಗ್ಗೆ ಯಾವುದೇ ಅರ್ಜಿಗಳು ಇಲಾಖೆಗೆ ಬಂದಿಲ್ಲ ಎಂದು ಗ್ರಾಮಸ್ಥರನ್ನು ನಂಬಿಸಿ ಇನ್ನೊಂದೆಡೆ ಮದ್ಯದಂಗಡಿಗೆ ಅನುಮತಿ ನೀಡುವ ಮೂಲಕ ಗ್ರಾಮಸ್ಥರಿಗೆ ಚಳ್ಳೆಹಣ್ಣು ತಿನ್ನಿಸಿದ್ದಾರೆ. ರಾಜ್ಯ ಹೆದ್ದಾರಿಯಿಂದ 100 ಮೀಟರ್ ಹಾಗೂ ಪರಿಶಿಷ್ಟ

ವಿರೋಧದ ನಡುವೆ ಮರ್ದಾಳದಲ್ಲಿ ಮದ್ಯದಂಗಡಿ ಆರಂಭ ► ಗ್ರಾಮಸ್ಥರಿಗೆ ಚಳ್ಳೆಹಣ್ಣು ತಿನ್ನಿಸಿದ ಅಬಕಾರಿ ಅಧಿಕಾರಿಗಳು Read More »

ಕರಾವಳಿ

ಮರ್ಧಾಳ: ಮದ್ಯದಂಗಡಿ ವಿರೋಧಿಸಿ ಗ್ರಾಮಸ್ಥರಿಂದ ಸಭೆ ► ಕಾನೂನು ಹೋರಾಟ ಮಾಡಲು ತೀರ್ಮಾನ

(ನ್ಯೂಸ್ ಕಡಬ) newskadaba.com ಕಡಬ, ನ.08. ಇಲ್ಲಿನ ಮರ್ಧಾಳ ಸಮೀಪದ ಚಾಕಟೆಕರೆ ಎಂಬಲ್ಲಿ ಮದ್ಯದಂಗಡಿ ತೆರೆಯಲಾಗುತ್ತಿದ್ದು ಅದನ್ನು ವಿರೋಧಿಸಿ ಮರ್ಧಾಳ ಪರಿಸರದ ನಾಗರೀಕರು ಸಭೆ ಸೇರಿ ಮುಂದಿನ ಹೆಜ್ಜೆಯ ಬಗ್ಗೆ ಮಾತುಕತೆ ನಡೆಸಲಾಯಿತು. ಮರ್ಧಾಳ ಗ್ರಾಮದಲ್ಲಿ ಇಷ್ಟರವರೆಗೆ ಮದ್ಯದಂಗಡಿ ಇಲ್ಲದೆ ಇರುವಾಗ ಇದೀಗ ಹಠಾತ್ತಾಗಿ ಮದ್ಯದಂಗಡಿಯನ್ನು ಪ್ರಾರಂಭಿಸುವುದು ಸರಿಯಲ್ಲ. ಎಲ್ಲರೂ ಕಾನೂನು ಮೂಲಕ ಹೋರಾಡಲು ತೀರ್ಮಾನಿಸಲಾಯಿತು. ಸಭೆಯಲ್ಲಿ ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಎ.ಬಿ.ಮನೋಹರ ರೈ, ಮರ್ಧಾಳ ಗ್ರಾ.ಪಂ. ಸದಸ್ಯ ಹರೀಶ್ ಕೋಡಂದೂರು, ಪ್ರಮುಖರಾದ ವಾಸುದೇವ ಬೈಪಾಡಿತ್ತಾಯ, ಗಣೇಶ್,

ಮರ್ಧಾಳ: ಮದ್ಯದಂಗಡಿ ವಿರೋಧಿಸಿ ಗ್ರಾಮಸ್ಥರಿಂದ ಸಭೆ ► ಕಾನೂನು ಹೋರಾಟ ಮಾಡಲು ತೀರ್ಮಾನ Read More »

ಕರಾವಳಿ

ಮರ್ಧಾಳದಲ್ಲಿ ನಡೆಯುತ್ತಿದೆ ಮದ್ಯದಂಗಡಿ ತೆರೆಯುವ ಹುನ್ನಾರ ► ಪ್ರಬಲಗೊಳ್ಳುತ್ತಿದೆ ಮದ್ಯದಂಗಡಿ ವಿರೋಧಿ ಹೋರಾಟ

(ನ್ಯೂಸ್ ಕಡಬ) newskdaba.com ಕಡಬ, ನ.01. ಧರ್ಮಸ್ಥಳ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಬಂಟ್ರ ಗ್ರಾಮದ ಮರ್ಧಾಳ ಸಮೀಪ ಚಾಕಟೆಕರೆ ಎಂಬಲ್ಲಿ ಮದ್ಯದಂಗಡಿ ತೆರೆಯುವ ಹುನ್ನಾರ ನಡೆಯುತ್ತಿದ್ದು, ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದೆಂದು ತಾಲೂಕು ಪಂಚಾಯತ್ ಸದಸ್ಯೆ ಕುಸುಮಾರವರು ಅಬಕಾರಿ ಇಲಾಖೆಗೆ ಸೂಚಿಸಿದ್ದಾರೆ. ಅವರು ಪುತ್ತೂರು ತಾಲೂಕು ಪಂಚಾಯತ್ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ಮಾತನಾಡಿ, ಮರ್ಧಾಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಯಾವುದೇ ಕಾರಣಕ್ಕೂ ಮದ್ಯದಂಗಡಿ ತೆರೆಯಲು ಅನುಮತಿ ನೀಡಬಾರದೆಂದು ಅಬಕಾರಿ ಇಲಾಖೆಯ ಸಬ್ ಇನ್ಸ್ಪೆಕ್ಟರ್ ಸುಜಾತ್ರವರಲ್ಲಿ

ಮರ್ಧಾಳದಲ್ಲಿ ನಡೆಯುತ್ತಿದೆ ಮದ್ಯದಂಗಡಿ ತೆರೆಯುವ ಹುನ್ನಾರ ► ಪ್ರಬಲಗೊಳ್ಳುತ್ತಿದೆ ಮದ್ಯದಂಗಡಿ ವಿರೋಧಿ ಹೋರಾಟ Read More »

ಕರಾವಳಿ
Scroll to Top