Manglore

ಮಂಗಳೂರು: ಕೋಟೆಕರ್ ಬ್ಯಾಂಕ್ ದರೋಡೆ: ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಿಎಂ ತುರ್ತು ಸಭೆ- ಶೀಘ್ರ ಆರೋಪಿಗಳ ಪತ್ತೆಗೆ ಖಡಕ್ ಸೂಚನೆ

(ನ್ಯೂಸ್ ಕಡಬ) newskadaba.com: ಕೋಟೆಕರ್ ಉಲ್ಲಾಳದ ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣದ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ತುರ್ತು ಸಭೆ ನಡೆಸಿದ ಮುಖ್ಯಮಂತ್ರಿಗಳು ಶೀಘ್ರ ಆರೋಪಿಗಳ ಪತ್ತೆಗೆ ಖಡಕ್ ಸೂಚನೆ ನೀಡಿದರು. ವೈದ್ಯಕೀಯ ಶಿಕ್ಷಣ ಇಲಾಖೆಯ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಪಶ್ಚಿಮ ರೇಂಜ್ ನ ಐಜಿ ಅಮಿತ್, ಪೊಲೀಸ್ ಆಯುಕ್ತ ಸಿಂಗ್, ಅನುಪಮ್ ಅಗರವಾಲ್, ಎಸ್.ಪಿ ಯತೀಶ್ , ಡಿವೈಎಸ್ ಪಿ ಸೇರಿ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಘಟನೆಯ ಕುರಿತಂತೆ ಸಮಗ್ರ ಮಾಹಿತಿ ಪಡೆದ […]

ಮಂಗಳೂರು: ಕೋಟೆಕರ್ ಬ್ಯಾಂಕ್ ದರೋಡೆ: ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಿಎಂ ತುರ್ತು ಸಭೆ- ಶೀಘ್ರ ಆರೋಪಿಗಳ ಪತ್ತೆಗೆ ಖಡಕ್ ಸೂಚನೆ Read More »

ಕರಾವಳಿ

ಮಂಗಳೂರು ಪೊಲೀಸರಿಂದ 6 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಡ್ರಗ್ಸ್ ವಿಲೇವಾರಿ

(ನ್ಯೂಸ್ ಕಡಬ) newskadaba.com: ಮಂಗಳೂರು: ಮಂಗಳೂರು ಪೊಲೀಸರು ಕಳೆದ ವರ್ಷ ನಗರ ವ್ಯಾಪ್ತಿಯಲ್ಲಿ ವಶಪಡಿಸಿಕೊಂಡ ಸುಮಾರು 6 ಕೋಟಿ 80 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಿಲೇವಾರಿ ಮಾಡಿದ್ದಾರೆ. ಮಂಗಳೂರು ಪೊಲೀಸರು ಮೂಲ್ಕಿ ಕೈಗಾರಿಕಾ ಪ್ರದೇಶದಲ್ಲಿ ಮಾದಕ ವಸ್ತುಗಳನ್ನು ವಿಲೇವಾರಿ ಮಾಡಿದ್ದಾರೆ. “ಇಂದು, ನ್ಯಾಯಾಲಯದ ಅನುಮತಿಯೊಂದಿಗೆ, ನಾವು 2024 ರಲ್ಲಿ ಮತ್ತು 2023 ರಿಂದ ವಶಪಡಿಸಿಕೊಂಡ ಕೆಲವು ಮಾದಕ ವಸ್ತುಗಳನ್ನು ವಿಲೇವಾರಿ ಮಾಡುತ್ತಿದ್ದೇವೆ. ನಾವು ಪ್ರತಿ ವರ್ಷವೂ ಹೀಗೆ ಮಾಡುತ್ತೇವೆ” ಎಂದು ಮಂಗಳೂರು ಪೊಲೀಸ್ ಆಯುಕ್ತ ಅನುಪಮ್

ಮಂಗಳೂರು ಪೊಲೀಸರಿಂದ 6 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಡ್ರಗ್ಸ್ ವಿಲೇವಾರಿ Read More »

ಕರಾವಳಿ

ಮಂಗಳೂರು: ಮುಕುಂದ್ ಎಂಜಿಎಂ ರಿಯಾಲ್ಟಿಯವರಿಂದ ಮತ್ತೆರಡು ಬಿಸಿನೆಸ್ ಸೆಂಟರ್‌ಗಳು ಶೀಘ್ರದಲ್ಲೇ ಪ್ರಾರಂಭ

(ನ್ಯೂಸ್ ಕಡಬ)com ಜ.15: ಇದೀಗ ಕೆಲ ವರ್ಷಗಳಿಂದ, ಅದರಲ್ಲೂ ಕೋವಿಡ್ ನಂತರದ ಸನ್ನಿವೇಶ ಬದಲಾಗಿದೆ. ಊರಿನಿಂದ ದೂರ ಉಳಿದು ವಿದೇಶದಲ್ಲಿ ಕೆಲಸ ಮಾಡುತ್ತಿದ್ದ ಮಾಹಿತಿ ತಂತ್ರಜ್ಞಾನ (ಐಟಿ) ಕ್ಷೇತ್ರದ ಸಾವಿರಾರು ಉದ್ಯೋಗಿಗಳು ಕೋವಿಡ್ ಬಳಿಕ ಮತ್ತೆ ಊರಿಗೆ ಮರಳಿದ್ದು ಅದೇ ಕಂಪೆನಿಯಡಿ ಮಂಗಳೂರಿನಲ್ಲೇ ಕೆಲಸ ನಿರ್ವಹಿಸುತ್ತಿದ್ದಾರೆ.ವರ್ಕ್ ಪ್ರಮ್ ಹೋಮ್ ಮಾಡುತ್ತಿದ್ದ ಅವರಿಗೆ ಹೈಸ್ಪೀಡ್ ಇಂಟರ್ನೆಟ್, ತಡೆರಹಿತ ವಿದ್ಯುತ್ ಕನೆಕ್ಷನ್ ಮೊದಲಾದ ಸಮಸ್ಯೆ ಉಂಟಾಗಿತ್ತು. ಈ ಸಂಧರ್ಭ ‘ವರ್ಟೆಕ್ಸ್ ವರ್ಕ್ಸ್ಪೇಸ್” ಹೊಸ -ಅವಕಾಶ ಕಲ್ಪಿಸಿತು ಮಾತ್ರವಲ್ಲದೆ ಬೇಕಾದ ಎಲ್ಲಾ ಉಪಕರಣಗಳು

ಮಂಗಳೂರು: ಮುಕುಂದ್ ಎಂಜಿಎಂ ರಿಯಾಲ್ಟಿಯವರಿಂದ ಮತ್ತೆರಡು ಬಿಸಿನೆಸ್ ಸೆಂಟರ್‌ಗಳು ಶೀಘ್ರದಲ್ಲೇ ಪ್ರಾರಂಭ Read More »

ಕರಾವಳಿ

ಡೀಸೆಲ್ ಕಳ್ಳತನ ಮತ್ತು ಅಕ್ರಮ ಸಂಗ್ರಹಣೆ – ನಾಲ್ವರ ಬಂಧನ

(ನ್ಯೂಸ್ ಕಡಬ) newskadaba.com ಜ.15 :  ಬಾಲಾ ಪ್ರದೇಶದಲ್ಲಿ ಟ್ಯಾಂಕರ್ ಲಾರಿಗಳಿಂದ ಡೀಸೆಲ್ ಕಳ್ಳತನ ಮಾಡಿ ಅಕ್ರಮವಾಗಿ ಸಂಗ್ರಹಿಸುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಮಾಹಿತಿಯ ಆಧಾರದ ಮೇಲೆ, ಬಾಲಾದ ಟ್ಯಾಂಕರ್ ಯಾರ್ಡ್‌ನಲ್ಲಿ ದಾಳಿ ನಡೆಸಿದ ಪೊಲೀಸರು, ಆರೋಪಿಗಳನ್ನು ಟ್ಯಾಂಕರ್‌ನಿಂದ ಡೀಸೆಲ್ ಹೊರತೆಗೆದು ಹತ್ತಿರದ ಶೆಡ್‌ನಲ್ಲಿ ಅಕ್ರಮವಾಗಿ ಸಂಗ್ರಹಿಸುತ್ತಿರುವುದನ್ನು ಪತ್ತೆಹಚ್ಚಿದರು. ಸಂತೋಷ್ (42), ಕುಳಾಯಿಗುಡ್ಡೆ, ರಿತೇಶ್ ಮೆನೆಜಸ್ (36), ಕಟಿಪಳ್ಳ, ಸುರತ್ಕಲ್, ನಾರಾಯಣ (23), ಕಡಿರುದ್ಯಾವರ, ಬೆಳ್ತಂಗಡಿ ರವಿ ಜನಾರ್ಧನ್ ಪುತ್ರನ್ (59) ಹೆಜಮಾಡಿ, ಬಂಧಿತ ಆರೋಪಿಗಳು. ದಾಳಿಯ ವೇಳೆ

ಡೀಸೆಲ್ ಕಳ್ಳತನ ಮತ್ತು ಅಕ್ರಮ ಸಂಗ್ರಹಣೆ – ನಾಲ್ವರ ಬಂಧನ Read More »

ಕರಾವಳಿ

ಪಿಸ್ತಾ ಸಿಪ್ಪೆ ಗಂಟಲಲ್ಲಿ ಸಿಲುಕಿ 2 ವರ್ಷದ ಮಗು ಮೃತ್ಯು

(ನ್ಯೂಸ್ ಕಡಬ) newskadaba.com ಜ.13 ಮಂಗಳೂರು: ಪಿಸ್ತಾ ತಿನ್ನುವಾಗ ಸಿಪ್ಪೆ ಗಂಟಲಲ್ಲಿ ಸಿಲುಕಿ 2 ವರ್ಷದ ಮಗುವೊಂದು ಸಾವನ್ನಪ್ಪಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಕುಂಬಳೆಯ ಭಾಸ್ಕರ್ ನಗರ ನಿವಾಸಿ ಅನ್ವರ್ – ಮೆಹರುನ್ನೀಸಾ ದಂಪತಿಯ ಪುತ್ರ ಅನಾಸ್ ಮೃತಪಟ್ಟ ಬಾಲಕ. ಮನೆಯಲ್ಲಿ ಪಿಸ್ತಾದ ಸಿಪ್ಪೆ ತೆಗೆದು ತಿನ್ನುವಾಗ ಮಗುವಿನ ಗಂಟಲಿಗೆ ಪಿಸ್ತಾ ಸಿಲುಕಿಕೊಂಡಿತ್ತು. ಅದನ್ನು ಗಂಟಲಿಗೆ ಬೆರಳು ಹಾಕಿ ತೆಗೆಯಲಾಗಿತ್ತು. ಆದರೂ ಮಗುವಿನ ಉಸಿರಾಟದಲ್ಲಿ ತೊಂದರೆ ಕಂಡುಬಂದಾಗ ಕುಂಬಳೆ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಶನಿವಾರ ರಾತ್ರಿ ಮಗುವಿಗೆ

ಪಿಸ್ತಾ ಸಿಪ್ಪೆ ಗಂಟಲಲ್ಲಿ ಸಿಲುಕಿ 2 ವರ್ಷದ ಮಗು ಮೃತ್ಯು Read More »

ಕರಾವಳಿ

ಮಂಗಳೂರು : ಧರ್ಮಗಳ ನಡುವಿನ ಜಗಳ ಪುಕಾರು ಸುಳ್ಳು ಸುದ್ದಿ – ಪೊಲೀಸರ ಸ್ಪಷ್ಟನೆ

(ನ್ಯೂಸ್ ಕಡಬ) newskadaba.com ಜ.13 ಬೆಂಗಳೂರು: ಹೊರವಲಯದ ಕೋಡಿ ಬೆಂಗ್ರೆ ಯಲ್ಲಿ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವಿನ ಗಲಾಟೆಯನ್ನು ಧರ್ಮಗಳ ನಡುವಿನ ಜಗಳ ಎಂಬಂತೆ ಬಿಂಬಿಸಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಿಯಬಿಡಲಾಗಿದೆ. ವಾಟ್ಸ್ಯಾಪ್ ಗಳಲ್ಲಿ ಬಂದ ವಿಚಾರವು ಸುಳ್ಳು ಸುದ್ದಿಯಾಗಿದೆ ಎಂದು ಮಂಗಳೂರು ನಗರ ಪೊಲೀಸರು ಸ್ಪಷ್ಟೀಕರಣ ನೀಡಿದ್ದಾರೆ. ಜನವರಿ 12ರಂದು ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಗಣೇಶ್ ಕಟ್ಟೆ ಬಳಿ ಯುವಕರ ಎರಡು ಗುಂಪುಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದಿತ್ತು. ಪ್ರಕರಣಕ್ಕೆ

ಮಂಗಳೂರು : ಧರ್ಮಗಳ ನಡುವಿನ ಜಗಳ ಪುಕಾರು ಸುಳ್ಳು ಸುದ್ದಿ – ಪೊಲೀಸರ ಸ್ಪಷ್ಟನೆ Read More »

ಕರಾವಳಿ

ಮಂಗಳೂರು: ಎಚ್‌ಎಂಪಿವಿ ವೈರಸ್ ಬಗ್ಗೆ ಭಯಪಡುವ ಅಗತ್ಯವಿಲ್ಲ- ಡಿಎಚ್‌ಒ ಸಾರ್ವಜನಕರಿಗೆ ಮನವಿ

(ನ್ಯೂಸ್ ಕಡಬ) newskadaba.com ಜ.07: ಹ್ಯೂಮನ್ ಮೆಟಾಪ್ನ್ಯೂಮೋವೈರಸ್ (ಎಚ್‌ಎಂಪಿವಿ) ಬಗ್ಗೆ ಸಾರ್ವಜನಿಕರು ಭಯಪಡಬೇಡಿ ಎಂದು ಜಿಲ್ಲಾ ಆರೋಗ್ಯಾಧಿಕಾರಿ (ಡಿಎಚ್‌ಒ) ಡಾ.ತಿಮ್ಮಯ್ಯ ಅವರು ಸಾರ್ವಜನಿಕರಿಗೆ ಮನವಿ ಮಾಡಿದರು. ಈ ವೈರಸ್‌ ಇದು ತೀವ್ರವಾಗಿಲ್ಲ ಮತ್ತು ಮರಣ ಪ್ರಮಾಣವು ಪರಿಣಾಮಕಾರಿಯಾಗಿ ಶೂನ್ಯವಾಗಿರುತ್ತದೆ ಎಂದು ಭರವಸೆ ನೀಡಿದರು. ವೈರಸ್‌ನ ಸ್ವರೂಪವನ್ನು ವಿವರಿಸಿದ ಅವರು, “HMPV ದೀರ್ಘಕಾಲದಿಂದಲೂ ಅಸ್ತಿತ್ವದಲ್ಲಿದ್ದ ಉಸಿರಾಟದ ವೈರಸ್ ಆಗಿದೆ. ಇದು ಸಾಮಾನ್ಯವಾಗಿ ಮೇಲ್ಭಾಗದ ಉಸಿರಾಟದ ಸೋಂಕನ್ನು ಉಂಟುಮಾಡುತ್ತದೆ, ಸಾಮಾನ್ಯ ಶೀತದಂತೆಯೇ. ಸಾರ್ವಜನಿಕರು ಇದನ್ನು ವಾಡಿಕೆಯ ವೈರಸ್ ಎಂದು ಪರಿಗಣಿಸಬೇಕು

ಮಂಗಳೂರು: ಎಚ್‌ಎಂಪಿವಿ ವೈರಸ್ ಬಗ್ಗೆ ಭಯಪಡುವ ಅಗತ್ಯವಿಲ್ಲ- ಡಿಎಚ್‌ಒ ಸಾರ್ವಜನಕರಿಗೆ ಮನವಿ Read More »

ಕರಾವಳಿ

ಮಂಗಳೂರಿನಲ್ಲಿ ರಾಜ್ಯದ ಮೊದಲ ಸಿ ಬ್ಯಾಂಡ್ ಹವಾಮಾನ ರಾಡಾರ್ ಅಳವಡಿಕೆ

(ನ್ಯೂಸ್ ಕಡಬ) newskadaba.com ಜ.07 ಬೆಂಗಳೂರು: ನಗರದಲ್ಲಿ ಕರ್ನಾಟಕದ ಮೊದಲ ಸಿ ಬ್ಯಾಂಡ್ ಹವಾಮಾನ ರಾಡಾರ್(DWR) ಅಳವಡಿಕೆ ಕಾರ್ಯ ಕೆಲವೇ ದಿನಗಳಲ್ಲಿ ಸಂಪೂರ್ಣಗೊಳ್ಳಲಿದೆ. ತಾಂತ್ರಿಕ ತೊಂದರೆಗಳಿಂದ ಸ್ವಲ್ಪ ವಿಳಂಬವಾದರೂ ಜನವರಿ ಅಂತ್ಯದ ವೇಳೆಗೆ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಬೆಂಗಳೂರು ಕೇಂದ್ರದ ಮುಖ್ಯಸ್ಥ ಎನ್ ಪುವಿಯರಸನ್ ತಿಳಿಸಿದ್ದಾರೆ. ಇಲಾಖೆಯ 150ನೇ ವಾರ್ಷಿಕೋತ್ಸವದ ಅಂಗವಾಗಿ TMD ಬೆಂಗಳೂರು ಶನಿವಾರ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದ ಪುವಿಯರಸನ್ ಅವರು, ಆರಂಭದಲ್ಲಿ ಜನವರಿ 15 ರೊಳಗೆ ಪೂರ್ಣಗೊಳಿಸಲು ಯೋಜಿಸಲಾಗಿದ್ದ

ಮಂಗಳೂರಿನಲ್ಲಿ ರಾಜ್ಯದ ಮೊದಲ ಸಿ ಬ್ಯಾಂಡ್ ಹವಾಮಾನ ರಾಡಾರ್ ಅಳವಡಿಕೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಂಗಳೂರು : ಜಿಲ್ಲಾ ಕಾರಾಗೃಹಕ್ಕೆ ಮೊಬೈಲ್, ಸಿಗರೇಟ್ ಎಸೆಯಲು ಯತ್ನ – ಯುವಕನ ಬಂಧನ

(ನ್ಯೂಸ್ ಕಡಬ) newskadaba.com ಜ.07 ಬೆಂಗಳೂರು: ನಗರದ ಜಿಲ್ಲಾ ಕಾರಾಗೃಹದ ಆವರಣಕ್ಕೆ ಮೊಬೈಲ್ ಫೋನ್ ಮತ್ತು ಸಿಗರೇಟ್ ಎಸೆಯಲು ಯತ್ನಿಸಿದ ಆರೋಪದ ಮೇಲೆ 21 ವರ್ಷದ ಯುವಕನನ್ನು ಬಂಧಿಸಲಾಗಿದೆ. ಆರೋಪಿಯನ್ನು ಪಂಜಿಮೊಗರು ನಿವಾಸಿ ಪ್ರಜ್ವಲ್ ಎಂದು ಗುರುತಿಸಲಾಗಿದೆ. ಆತ ಜೈಲಿನ ಗಡಿಯ ಮೇಲೆ ಕೆಂಪು ಟೇಪ್‌ನಲ್ಲಿ ಸುತ್ತಿದ ಮೊಹರು ಬಂಡಲ್‌ಗಳನ್ನು ಎಸೆಯಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ. ಆತನ ಕೃತ್ಯವನ್ನು ಗಮನಿಸಿದ ಕೆಎಸ್‌ಐಎಸ್‌ಎಫ್ ಸಿಬ್ಬಂದಿ ಕೂಡಲೇ ಆತನನ್ನು ಬಂಧಿಸಿದ್ದಾರೆ. ಪರಿಶೀಲನೆ ನಡೆಸಿದಾಗ, ಬಂಡಲ್‌ಗಳಲ್ಲಿ ಎರಡು ಕೀಪ್ಯಾಡ್ ಮೊಬೈಲ್ ಫೋನ್‌ಗಳು ಮತ್ತು ಎರಡು

ಮಂಗಳೂರು : ಜಿಲ್ಲಾ ಕಾರಾಗೃಹಕ್ಕೆ ಮೊಬೈಲ್, ಸಿಗರೇಟ್ ಎಸೆಯಲು ಯತ್ನ – ಯುವಕನ ಬಂಧನ Read More »

ಕರಾವಳಿ

ಮಂಗಳೂರು: ಮಹಿಳೆಗೆ ಚೂರಿ ತೋರಿಸಿ ಸುಲಿಗೆ ಪ್ರಕರಣ: ಆರೋಪಿ ಸೆರೆ

(ನ್ಯೂಸ್ ಕಡಬ) newskadaba.com ಜ.03 ಮಂಗಳೂರು: ನಗರದ ನಾಗುರಿ ಮೆಡಿಕಲ್ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಉದ್ಯೋಗಿಗೆ ಚೂರಿ ತೋರಿಸಿ, ಕೈಯಿಂದ ಹಲ್ಲೆ ಮಾಡಿ, ಶಾಪ್‌ನ ಕ್ಯಾಶ್ ಡ್ರಾವರ್ ನಲ್ಲಿದ್ದ ರೂ. 19,300 ನಗದು ಹಣ ದೋಚಿದ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಸುನೀಲ್ ಫೆ. 28ರಂದು ಮಧ್ಯಾಹ್ನ ಸುಲಿಗೆ ಮಾಡಿಕೊಂಡು ಹೋಗಿರುವ ಬಗ್ಗೆ ಪ್ರಕರಣ ದಾಖಲಾಗಿತ್ತು. ಆರೋಪಿ ಸುನೀಲ್‌ನನ್ನು ದಸ್ತಗಿರಿ ಮಾಡಿ ದೋಚಿದ್ದ ರೂ. 17,500 ನಗದು ಹಣವನ್ನು ಹಾಗೂ ಸುಲಿಗೆ ಮಾಡಲು ಬಳಸಿದ ಸ್ಕೂಟರ್

ಮಂಗಳೂರು: ಮಹಿಳೆಗೆ ಚೂರಿ ತೋರಿಸಿ ಸುಲಿಗೆ ಪ್ರಕರಣ: ಆರೋಪಿ ಸೆರೆ Read More »

ಕರಾವಳಿ
Scroll to Top