Manglore

ಮಂಗಳೂರು: ಸುರತ್ಕಲ್ ನ MRPL ಘಟಕದಲ್ಲಿ ಅನಿಲ ಸೋರಿಕೆ; ಇಬ್ಬರ ಸಾವು, ಓರ್ವನ ಸ್ಥಿತಿ ಗಂಭೀರ

(ನ್ಯೂಸ್ ಕಡಬ) newskadaba.com, ಜು. 10. ಮಂಗಳೂರು: ಎಂಆರ್‌ಪಿಎಲ್‌ ಘಟಕದಲ್ಲಿ ಹೈಡ್ರೋಜನ್ ಸಲ್ಫೈಡ್ ಅನಿಲ ಸೋರಿಕೆಯಾಗಿ ಇಬ್ಬರು ಕಾರ್ಮಿಕರು ಮೃತಪಟ್ಟು ಓರ್ವ ಅಸ್ವಸ್ಥಗೊಂಡಿರುವ ಘಟನೆ ಸಂಭವಿಸಿದೆ. ಎಂಆರ್ ಪಿಎಲ್ ನ OM‌‌‌‌&S ಘಟಕದ ಶೇಖರಣಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಪೆಟ್ರೋಲಿಯಂ ರಿಫೈನರಿಯಾಗಿ ಕಾರ್ಯನಿರ್ವಹಿಸುತ್ತಿರುವ ಎಂಆರ್‌ಪಿಎಲ್‌ ನ ತ್ಯಾಜ್ಯ ತೈಲ ಸಂಗ್ರಹಣ ಘಟಕದಲ್ಲಿ ಲೆವೆಲ್‌ ಬದಲಾವಣೆ ಪರಿಶೀಲನೆಗೆ ತೆರಳಿದ್ದ ಕಾರ್ಮಿಕ ವಾಪಾಸ್ ಬಾರದೇ ಇದ್ದುದನ್ನು ಕಂಡು ಇನ್ನಿಬ್ಬರು ಕಾರ್ಮಿಕರು ತೆರಳಿದ್ದಾರೆ ಈ ವೇಳೆ ಮೂವರು ಅಸ್ವಸ್ಥಗೊಂಡಿದ್ದಾರೆ. ಕೂಡಲೇ […]

ಮಂಗಳೂರು: ಸುರತ್ಕಲ್ ನ MRPL ಘಟಕದಲ್ಲಿ ಅನಿಲ ಸೋರಿಕೆ; ಇಬ್ಬರ ಸಾವು, ಓರ್ವನ ಸ್ಥಿತಿ ಗಂಭೀರ Read More »

ಕರಾವಳಿ

ಮಂಗಳೂರು: ಕೇಂದ್ರ ಬಸ್ ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸಲು ಮಂಜುನಾಥ್ ಭಂಡಾರಿ ಒತ್ತಾಯ

(ನ್ಯೂಸ್ ಕಡಬ) newskadaba.com, ಜೂ.06. ಮಂಗಳೂರು: ಮಂಗಳೂರು ನಗರ ಕೇಂದ್ರ ಬಸ್ ನಿಲ್ದಾಣವನ್ನು ಹೈಟೆಕ್ ಬಸ್ ನಿಲ್ದಾಣವಾಗಿ ಮೇಲ್ದರ್ಜೆಗೇರಿಸಿ ಅಭಿವೃದ್ಧಿಪಡಿಸುವುದು ಹಾಗೂ ಎಲೆಕ್ಟ್ರಿಕ್ ಬಸ್‌ಗಳ ಸಂಚಾರವನ್ನು ಪ್ರಾರಂಭಿಸಬೇಕೆಂದು ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ  ಅವರು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಪತ್ರ ಮುಖೇನ ಒತ್ತಾಯಿಸಿದ್ದಾರೆ. ಮಂಗಳೂರು ನಗರವು ದೇಶದ ಪ್ರಮುಖ ವಾಣಿಜ್ಯ ನಗರಗಳಲ್ಲಿ ಒಂದಾಗಿದ್ದು, ಅಭಿವೃದ್ಧಿಗೆ ಪೂರಕವಾದ ವಾಣಿಜ್ಯ ಚಟುವಟಿಗಳಿಂದಾಗಿ ಕರ್ನಾಟಕದ ಬಂದರು ನಗರಿಯಾಗಿ ಹಾಗೂ ಪ್ರಮುಖ ರೇವು ಪಟ್ಟಣವಾಗಿ ಕಾರ್ಯನಿರ್ವಹಿಸುತ್ತಿದೆ. ಪ್ರವಾಸೋದ್ಯಮ ಹಾಗೂ ಶೈಕ್ಷಣಿಕ ದೃಷ್ಟಿಯಿಂದ

ಮಂಗಳೂರು: ಕೇಂದ್ರ ಬಸ್ ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸಲು ಮಂಜುನಾಥ್ ಭಂಡಾರಿ ಒತ್ತಾಯ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಬಂಟ್ವಾಳ: ಅಬ್ದುಲ್ ರಹಿಮಾನ್ ಹತ್ಯೆ ಕೇಸ್; ಮತ್ತೆ ಇಬ್ಬರು ಆರೋಪಿಗಳು ಪೊಲೀಸರ ವಶಕ್ಕೆ

(ನ್ಯೂಸ್ ಕಡಬ) newskadaba.com ಕಡಬ, ಮೇ. 31. ಮೇ 27ರಂದು ರಂದು ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕುರಿಯಾಳ ಗ್ರಾಮದ ಈರಾಕೋಡಿ ಎಂಬಲ್ಲಿ ನಡೆದ ಅಬ್ದುಲ್ ರಹಿಮಾನ್ ಎಂಬವರ ಕೊಲೆ ಮತ್ತು ಕಲಂದರ್ ಶಾಫಿ ಎಂಬವರ ಮೇಲೆ ನಡೆದ ಗಂಭೀರ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೂವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಇದೀಗ ಶುಕ್ರವಾರ ಮತ್ತೆ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆಯಲಾಗಿದೆ. ಬಂಟ್ವಾಳದ ತೆಂಕಬೆಳ್ಳುರು ಗ್ರಾಮದ ಸುಮಿತ್ ಆಚಾರ್ಯ (27) ಹಾಗೂ ಬಂಟ್ವಾಳದ ಬಡಗಬೆಳ್ಳೂರು ಗ್ರಾಮದ ರವಿರಾಜ್

ಬಂಟ್ವಾಳ: ಅಬ್ದುಲ್ ರಹಿಮಾನ್ ಹತ್ಯೆ ಕೇಸ್; ಮತ್ತೆ ಇಬ್ಬರು ಆರೋಪಿಗಳು ಪೊಲೀಸರ ವಶಕ್ಕೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕಾಮಗಾರಿ ಹಿನ್ನೆಲೆ ಬೆಂಗಳೂರು-ಮಂಗಳೂರು ಮಾರ್ಗದ ರೈಲುಗಳು 5 ತಿಂಗಳು ಸಂಚಾರ ಸಂಪೂರ್ಣ ರದ್ದು

(ನ್ಯೂಸ್ ಕಡಬ) newskadaba.com , ಮೇ.17: ರೈಲ್ವೆ ಕಾಮಗಾರಿ ಹಿನ್ನೆಲೆ ಬೆಂಗಳೂರು – ಮಂಗಳೂರು, ಬೆಂಗಳೂರು – ಕಾರವಾರ ನಡುವೆ ಸಂಚಾರ ನಡೆಸುತ್ತಿದ್ದ 6 ರೈಲುಗಳು ಮುಂದಿನ 5 ತಿಂಗಳು ಸಂಪೂರ್ಣ ರದ್ದಾಗುತ್ತಿವೆ ಎಂದು ನೈರುತ್ಯ ರೈಲ್ವೆ ಇಲಾಖೆ ಮಾಹಿತಿ ನೀಡಿದೆ. ಸಕಲೇಶಪುರ – ಸುಬ್ರಹ್ಮಣ್ಯ ರೋಡ್ ಮಾರ್ಗದಲ್ಲಿ ಜೂನ್ 1 ರಿಂದ ನವೆಂಬರ್ 1 ರವರೆಗೆ ಸುರಕ್ಷತೆ ಮತ್ತು ರೈಲ್ವೆ ವಿದ್ಯುದ್ದೀಕರಣ ಕಾಮಗಾರಿ ನಡೆಯಲಿದೆ. ಈ ಹಿನ್ನೆಲೆ ಕೆಲವು ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ ಎಂದು

ಕಾಮಗಾರಿ ಹಿನ್ನೆಲೆ ಬೆಂಗಳೂರು-ಮಂಗಳೂರು ಮಾರ್ಗದ ರೈಲುಗಳು 5 ತಿಂಗಳು ಸಂಚಾರ ಸಂಪೂರ್ಣ ರದ್ದು Read More »

ಕರಾವಳಿ, ಕರ್ನಾಟಕ

ಮಂಗಳೂರಿನಿಂದ ಲಕ್ಷದ್ವೀಪಕ್ಕೆ ತೆರಳುತ್ತಿದ್ದ ಸರಕು ಹಡಗು ಮುಳುಗಡೆ – 6 ಮಂದಿಯ ರಕ್ಷಣೆ

(ನ್ಯೂಸ್ ಕಡಬ) newskadaba.com , ಮೇ.16. ಸಮುದ್ರ ಮಧ್ಯದಲ್ಲಿ ಲಕ್ಷದ್ವೀಪಕ್ಕೆ ತೆರಳುತ್ತಿದ್ದ ಸರಕು ಹಡಗು ಮಂಗಳೂರಿನಿಂದ 60 ನಾಟಿಕಲ್ ಮೈಲ್ ದೂರದಲ್ಲಿ ಮುಳುಗಡೆಯಾಗಿದೆ. ಎಂಎಸ್‌ವಿ ಸಲಾಮತ್ ಹೆಸರಿನ ಮಂಗಳೂರಿನ ಸರಕು ಸಾಗಣೆ ಹಡಗು ಮೇ 12ರಂದು ಮಂಗಳೂರು ಬಂದರಿನಿಂದ ಸಿಮೆಂಟ್ ಹಾಗೂ ನಿರ್ಮಾಣ ಸಾಮಾಗ್ರಿ ಹೊತ್ತುಕೊಂಡು ಲಕ್ಷದ್ವೀಪದತ್ತ ಪ್ರಯಾಣ ಆರಂಭಿಸಿತ್ತು. ಮೇ18 ರಂದು ಲಕ್ಷದ್ವೀಪದ ಕಡಮತ್ ದ್ವೀಪಕ್ಕೆ ತಲುಪಬೇಕಾಗಿತ್ತು. ದಾರಿ ಮಧ್ಯೆ ತಾಂತ್ರಿಕ ಸಮಸ್ಯೆಯಿಂದ ಒಳಗಡೆ ನೀರು ನುಗ್ಗಿ ಹಡಗು ಮುಳುಗಿದೆ. ಹಡಗಿನಲ್ಲಿ 6 ಭಾರತೀಯ ಸಿಬ್ಬಂದಿ ಪ್ರಯಾಣಿಸುತ್ತಿದ್ದರು.

ಮಂಗಳೂರಿನಿಂದ ಲಕ್ಷದ್ವೀಪಕ್ಕೆ ತೆರಳುತ್ತಿದ್ದ ಸರಕು ಹಡಗು ಮುಳುಗಡೆ – 6 ಮಂದಿಯ ರಕ್ಷಣೆ Read More »

ಕರಾವಳಿ, ಕರ್ನಾಟಕ

ಮಂಗಳೂರು: ಟಿಂಟ್‌ಡ್‌ ಗ್ಲಾಸ್‌ ಬಳಸಿ ವಾಹನ ಸಂಚಾರ – 504 ಕಾರುಗಳ ವಿರುದ್ದ ಕೇಸ್‌

(ನ್ಯೂಸ್ ಕಡಬ) newskadaba.com , ಮೇ.13. ನಗರದ ವ್ಯಾಪ್ತಿಯಲ್ಲಿ ಸಂಚಾರ ಪೊಲೀಸ್ ಅಧಿಕಾರಿಗಳು ಬ್ಲಾಕ್‌ ಫಿಲ್ಮ್‌( ಸನ್‌ ಫಿಲ್ಮ್‌) ಅಥವಾ ಟಿಂಟೆಡ್ ಗ್ಲಾಸ್‍ಗಳನ್ನು ಅಳವಡಿಸಿ ಸಂಚಾರಿಸುವ ವಾಹನಗಳನ್ನು ಪತ್ತೆ ಹಚ್ಚಿ ಕಾರುಗಳ ವಿರುದ್ದ ಪ್ರಕರಣ ದಾಖಲಿಸಿದ್ದಾರೆ. ಕಳೆದ 10 ದಿನಗಳಲ್ಲಿ ಅಂದರೆ ಮೇ 2 ರಿಂದ 11 ವರೆಗೆ ಒಟ್ಟು 504 ಕಾರುಗಳ ವಿರುದ್ದ ಪ್ರಕರಣವನ್ನು ದಾಖಲಿಸಿ ರೂ.2,53,000 ದಂಡ ವಿಧಿಸಲಾಗಿದೆ. ಅಲ್ಲದೇ ವಾಹನಗಳಿಗೆ ಅಳವಡಿಸಿರುವ ಟಿಂಟೆಡ್ ಗ್ಲಾಸ್ ಹಾಗೂ ಬ್ಲಾಕ್ ಫಿಲ್ಮಂ ಸ್ಟಿಕರ್‌ಗಳನ್ನು ವಾಹನ ಚಾಲಕರಿಂದ

ಮಂಗಳೂರು: ಟಿಂಟ್‌ಡ್‌ ಗ್ಲಾಸ್‌ ಬಳಸಿ ವಾಹನ ಸಂಚಾರ – 504 ಕಾರುಗಳ ವಿರುದ್ದ ಕೇಸ್‌ Read More »

ಕರಾವಳಿ

ಗುಂಪು ಹತ್ಯೆ ಘಟನೆಗೆ ಸಂಬಂಧಿಸಿದಂತೆ ಪ್ರಚೋದನಕಾರಿ ಸುಳ್ಳು ಪೋಸ್ಟ್: ಮಂಗಳೂರು ಪೊಲೀಸರಿಂದ 3 ಕೇಸ್ ದಾಖಲು

(ನ್ಯೂಸ್ ಕಡಬ) newskadaba.com ಮೇ.01: ಮಂಗಳೂರು: ಮಂಗಳೂರಿನ ಕುಡುಪುನಲ್ಲಿ ಇತ್ತೀಚೆಗೆ ನಡೆದ ಗುಂಪು ಹತ್ಯೆ ಘಟನೆಗೆ ಸಂಬಂಧಿಸಿದಂತೆ ನಗರದಲ್ಲಿ ಅಶಾಂತಿ ಉಂಟುಮಾಡುವ ಉದ್ದೇಶದಿಂದ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ನಕಲಿ ಮತ್ತು ಪ್ರಚೋದನಕಾರಿ ವಿಷಯ ಪೋಸ್ಟ್ ಮಾಡಿದವರ ವಿರುದ್ಧ ಮಂಗಳೂರು ನಗರ ಪೊಲೀಸರು ಪ್ರಕರಣಗಳನ್ನು ದಾಖಲಿಸಿದ್ದಾರೆ. ಕುಡುಪು ಬಳಿ ಇತ್ತೀಚೆಗೆ ನಡೆದ ದಿನಗೂಲಿ ಕಾರ್ಮಿಕನ ಹತ್ಯೆಗೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸುಳ್ಳು ಮತ್ತು ದಾರಿತಪ್ಪಿಸುವ ಮಾಹಿತಿ ಹರಿದಾಡುತ್ತಿರುವುದು ಕಂಡುಬಂದಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್

ಗುಂಪು ಹತ್ಯೆ ಘಟನೆಗೆ ಸಂಬಂಧಿಸಿದಂತೆ ಪ್ರಚೋದನಕಾರಿ ಸುಳ್ಳು ಪೋಸ್ಟ್: ಮಂಗಳೂರು ಪೊಲೀಸರಿಂದ 3 ಕೇಸ್ ದಾಖಲು Read More »

ಕರಾವಳಿ

ಮಂಗಳೂರು: ಗೋದಾಮಿನಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ 500 ಕ್ವಿಂಟಾಲ್ ಅಕ್ಕಿ ಜಪ್ತಿ

(ನ್ಯೂಸ್ ಕಡಬ) newskadaba.com ಎ. 30: ನಗರದ ಖಾಸಗಿ ಕಾಲೇಜಿನ ಹಿಂಭಾಗದಲ್ಲಿರುವ ಗೋದಾಮಿನಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಸುಮಾರು 500 ಕ್ವಿಂಟಾಲ್ ಅಕ್ಕಿಯನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಸಾರ್ವಜನಿಕರಿಂದ ಬಂದ ದೂರುಗಳ ಆಧಾರದ ಮೇಲೆ, ಇಲಾಖೆಯ ಉಪ ನಿರ್ದೇಶಕಿ ಅನಿತಾ ವಿ. ಮಡ್ಲೂರು ಅವರ ನೇತೃತ್ವದಲ್ಲಿ ದಾಳಿ ನಡೆಸಲಾಯಿತು. “ಬಾಡಿಗೆ ಗೋದಾಮಿನಲ್ಲಿ ಬಾಸುಮತಿ, ಸೋನಾ ಮಸೂರಿ, ಜೀರಾ ರೈಸ್ ಮತ್ತು ತೌಡು ಅಕ್ಕಿ ಸೇರಿದಂತೆ ವಿವಿಧ ಬ್ರಾಂಡ್‌ಗಳ ಅಕ್ಕಿ ಚೀಲಗಳಿದ್ದವು. ಇದರ ಜೊತೆಗೆ,

ಮಂಗಳೂರು: ಗೋದಾಮಿನಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ 500 ಕ್ವಿಂಟಾಲ್ ಅಕ್ಕಿ ಜಪ್ತಿ Read More »

ಕರಾವಳಿ

ಮಂಗಳೂರು : ಶನಿವಾರದ ಬಸ್ ಬಂದ್ ಗೆ ಸ್ಪಂದಿಸಲ್ಲ – ಕೆನರಾ, ದ.ಕ. ಬಸ್ ಮಾಲಕರ ಸಂಘ ಸ್ಪಷ್ಟನೆ

(ನ್ಯೂಸ್ ಕಡಬ) newskadaba.com ಮಾ. 21 : ಬೆಳಗಾವಿಯಲ್ಲಿ ಮರಾಠಿಗರ ಪುಂಡಾಡಿಕೆ ಖಂಡಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೆಲವು ಕನ್ನಡ ಪರ ಸಂಘಟನೆಗಳು ಮಾ.2 ರಂದು ರಾಜ್ಯ ಬಂದ್ ಗೆ ನೀಡಿರುವ ಕರೆಗೆ ದಕ್ಷಿಣ ಕನ್ನಡ ಬಸ್ ಮಾಲಕರ ಸಂಘ ಹಾಗೂ ಕೆನರಾ ಬಸ್ ಮಾಲಕರ ಸಂಘ ಸ್ಪಂದಿಸುವುದಿಲ್ಲ ಎಂದು ತಿಳಿಸಿದೆ. ಎಲ್ಲ ಸಂಘಟನೆಗಳ ಬೇಡಿಕೆಗೆ ನಮ್ಮ ಸಹಮತ, ಸಹಾನುಭೂತಿ ಇದೆ. ಬಸ್ ಮಾಲಕರು ಕೂಡ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಆದರೆ ಶನಿವಾರ ಬಸ್ ಬಂದ್ ಮಾಡುವುದಿಲ್ಲ. ಇತರ

ಮಂಗಳೂರು : ಶನಿವಾರದ ಬಸ್ ಬಂದ್ ಗೆ ಸ್ಪಂದಿಸಲ್ಲ – ಕೆನರಾ, ದ.ಕ. ಬಸ್ ಮಾಲಕರ ಸಂಘ ಸ್ಪಷ್ಟನೆ Read More »

ಕರಾವಳಿ

ಮಂಗಳೂರು: ಹೆಚ್ಚುತ್ತಿರುವ ತಾಪಮಾನ-ಮೀನು ಉದ್ಯಮದ ಮೇಲೆ ಪರಿಣಾಮ

(ನ್ಯೂಸ್ ಕಡಬ) newskadaba.com ಮಾ. 20 ಶಿವಮೊಗ್ಗ: ಮೀನು ಕದ್ದ ಆರೋಪದ ಮೇಲೆ ಮಲ್ಪೆಯಲ್ಲಿ ಮಹಿಳೆಯೊಬ್ಬರನ್ನು ಮರಕ್ಕೆ ಕಟ್ಟಿ ಥಳಿಸಲಾಗಿದೆ. ಹಲ್ಲೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಬುಧವಾರ, ಮಾರ್ಚ್ 19 ರಂದು ಈ ಘಟನೆ ಬೆಳಕಿಗೆ ಬಂದಿದೆ. ವೀಡಿಯೊದಲ್ಲಿ, ಮಲ್ಪೆ ಬಂದರಿನಲ್ಲಿ ಮೀನು ಇಳಿಸುವಾಗ ಮೀನುಗಾರ ಮಹಿಳೆಯೊಬ್ಬರು ಇನ್ನೊಬ್ಬ ಮಹಿಳೆಯನ್ನು ಹೊಡೆಯುತ್ತಾ ದೋಣಿಗಳಿಂದ ಮೀನು ಕದ್ದಿದ್ದಾರೆ ಎಂದು ಆರೋಪ ಕೇಳಿ ಬಂದಿದೆ. ಸೀಗಡಿ ಕಳ್ಳತನದ ಆರೋಪದ ಮೇಲೆ ದೋಣಿ ಸಿಬ್ಬಂದಿ ಮಹಿಳೆಯನ್ನು ಪ್ರಶ್ನಿಸಿದಾಗ ಅವರು ಆರಂಭದಲ್ಲಿ ಆರೋಪಗಳನ್ನು

ಮಂಗಳೂರು: ಹೆಚ್ಚುತ್ತಿರುವ ತಾಪಮಾನ-ಮೀನು ಉದ್ಯಮದ ಮೇಲೆ ಪರಿಣಾಮ Read More »

ಕರಾವಳಿ
Scroll to Top