Mangaluru

ದ.ಕ.ಜಿಲ್ಲಾ ಮಟ್ಟದ ಸ್ಕೇಟಿಂಗ್ ಸ್ಪರ್ಧೆಯಲ್ಲಿ 105 ಪದಕ ಗೆದ್ದ ಹೈಫ್ಲೈಯರ್ಸ್ ಕ್ಲಬ್

(ನ್ಯೂಸ್ ಕಡಬ) newskadaba.com ಮಂಗಳೂರು, ಅ. 24. ಕರ್ನಾಟಕ ರಾಜ್ಯ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಮಂಗಳೂರಿನ ಅಶೋಕನಗರದ ಫ್ರಾನ್ಸಿಸ್ ಡೋರಿಸ್ ಸ್ಕೇಟ್ ಸಿಟಿಯಲ್ಲಿ ಆಯೋಜಿಸಿದ ದ.ಕ ಜಿಲ್ಲಾ ಮಟ್ಟದ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಮಂಗಳೂರಿನ ಹೈ-ಫ್ಲೈಯರ್ ಸ್ಕೇಟಿಂಗ್ ಕ್ಲಬ್‌ನ ಸ್ಕೇಟರ್ ತಂಡವಾಗಿ ಪ್ರತಿನಿಧಿಸಿ 105 ಪದಕಗಳನ್ನು ಜಯಗಳಿಸಿದ್ದಾರೆ. ರಾಜ್ಯ ಮಟ್ಟಕ್ಕೆ ಕ್ಲಬ್ ನ 32 ಸ್ಕೇಟರ್ ಗಳು ಆಯ್ಕೆಯಾಗಿದ್ದಾರೆ. ಇವರು ಫ್ರಾನ್ಸಿಸ್ ಡೋರಿಸ್ ಸ್ಕೇಟ್ ಸಿಟಿಯಲ್ಲಿ ಮೋಹನ ದಾಸ್ ಕೆ., ಜಯರಾಜ್ ಮತ್ತು ರಮಾನಂದ ಅವರಿಂದ ತರಬೇತಿ ಪಡೆಯುತ್ತಿದ್ದಾರೆ. […]

ದ.ಕ.ಜಿಲ್ಲಾ ಮಟ್ಟದ ಸ್ಕೇಟಿಂಗ್ ಸ್ಪರ್ಧೆಯಲ್ಲಿ 105 ಪದಕ ಗೆದ್ದ ಹೈಫ್ಲೈಯರ್ಸ್ ಕ್ಲಬ್ Read More »

ಕರಾವಳಿ, ಕ್ರೀಡಾ ನ್ಯೂಸ್

ಪುತ್ತೂರು ವಿಭಾಗದ KSRTC ಬಸ್‌ಗಳಲ್ಲಿ ಕ್ಯಾಶ್‌ಲೆಸ್ ವ್ಯವಸ್ಥೆ

(ನ್ಯೂಸ್ ಕಡಬ) newskadaba.com ಪುತ್ತೂರು, ಅ.23. ಕೆಎಸ್‌ಆರ್‌ಟಿಸಿ ವಿಭಾಗದ ನಿರ್ವಾಹಕರಿಗೆ ಈಗಾಗಲೇ 570 ಅಂಡ್ರಾಯಿಡ್ ಮಿಷನ್ ಗಳನ್ನು ವಿತರಣೆ ಮಾಡಲಾಗಿದೆ. ಇನ್ನು ಮುಂದೆ ಪುತ್ತೂರು ವಿಭಾಗದ ಜಿಲ್ಲೆಯ 5 ತಾಲೂಕು ಹಾಗೂ ಕೊಡಗು ಜಿಲ್ಲೆಯ ಸರ್ಕಾರಿ ಬಸ್ಸು ನಿರ್ವಾಹಕರು ಯುಪಿಐ ಮೂಲಕ ಕ್ಯಾಶ್‌ಲೆಸ್ ವ್ಯವಸ್ಥೆಗೆ ತಮ್ಮನ್ನು ತಾವು ತೆರೆದುಕೊಳ್ಳಲಿದ್ದಾರೆ. ಪುತ್ತೂರು ವಿಭಾಗದಲ್ಲಿ 5 ತಾಲೂಕುಗಳಲ್ಲಿ ಒಟ್ಟು ನಾಲ್ಕು ಡಿಪೋ ಹಾಗೂ ಮಡಿಕೇರಿಯ ಒಂದು ಡಿಪೋದಲ್ಲಿ ಈ ಮೆಷಿನ್ ವಿತರಣೆಯಾಗಿದೆ. ಸುಮಾರು 715 ಮಂದಿ ನಿರ್ವಾಹಕರು ಇರುವ ಈ

ಪುತ್ತೂರು ವಿಭಾಗದ KSRTC ಬಸ್‌ಗಳಲ್ಲಿ ಕ್ಯಾಶ್‌ಲೆಸ್ ವ್ಯವಸ್ಥೆ Read More »

ಕರಾವಳಿ
crime, arrest, suspected

ಗಾಂಜಾ ಮಾರಾಟ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್..!

(ನ್ಯೂಸ್ ಕಡಬ) newskadaba.com ಮಂಗಳೂರು, ಅ.23. ಗಾಂಜಾ ಮಾರಾಟ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಸಿಇಎನ್ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಉಳ್ಳಾಲ ಓಲಪೇಟೆಯ ಟಿ.ಸಿ.ರಸ್ತೆ ನಿವಾಸಿ ಸಲೀಂ ಅಲಿಯಾಸ್ ಮಹಮ್ಮದ್ ಸಲೀಂ (38) ಎಂದು ಗುರುತಿಸಲಾಗಿದೆ. ಆರೋಪಿಯು 2019ರಲ್ಲಿ ಗಾಂಜಾ ಮಾರಾಟ ಪ್ರಕರಣದಲ್ಲಿ ಭಾಗಿಯಾಗಿ ನಾಲ್ಕು ವರ್ಷಗಳ ಕಾಲ ತಲೆಮರೆಸಿಕೊಂಡಿದ್ದ. ಸಲೀಂ ಬಂಧನದಿಂದ ನ್ಯಾಯಾಲಯದ ವಿಚಾರಣೆಯಿಂದ ತಪ್ಪಿಸಿಕೊಳ್ಳುತ್ತಿದ್ದರು ಎಂದು ತಿಳಿದುಬಂದಿದೆ.

ಗಾಂಜಾ ಮಾರಾಟ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್..! Read More »

ಕರಾವಳಿ, ಕ್ರೈಮ್ ನ್ಯೂಸ್

ಹೆಲ್ಮೆಟ್‌ ಕಳವು: ಸಿಸಿ ಕೆಮರಾದಲ್ಲಿ ಸೆರೆ

(ನ್ಯೂಸ್ ಕಡಬ) newskadaba.com ಮಂಗಳೂರು, ಅ.23. ನಗರದ ಹಲವೆಡೆ ಹೆಲ್ಮೆಟ್‌ ಕಳವು ಮಾಡಲಾಗುತ್ತಿದ್ದು, ಓರ್ವ ಹೆಲ್ಮೆಟ್‌ ಕಳ್ಳನ ಕೈ ಚಳಕದ ದೃಶ್ಯ ಸಿಸಿ ಕೆಮರಾದಲ್ಲಿ ಸೆರೆಯಾಗಿದೆ. ನಗರದ ವಾಣಿಜ್ಯ ಕಟ್ಟಡವೊಂದರ ಸಮೀಪ ನಿಲ್ಲಿಸಿದ್ದ ಬೈಕ್‌ನಲ್ಲಿದ್ದ ಹೊಸ ಹೆಲ್ಮೆಟನ್ನು ಕಳ್ಳ ಕಳವು ಮಾಡಿದ್ದು, ಆತನ ಬಳಿ ಇದ್ದ ಹಳೆಯ ಹೆಲ್ಮೆಟನ್ನು ಬೈಕ್‌ನ ಮೇಲಿಟ್ಟು ಹೋಗಿದ್ದಾನೆ. ಬಳಿಕ ತಾನು ಬಂದಿದ್ದ ಸ್ಕೂಟರ್‌ನಲ್ಲಿ ಮರಳಿದ್ದಾನೆ. ಈತ ಇದೇ ರೀತಿ ಹಲವೆಡೆ ಹೆಲ್ಮೆಟ್‌ ಕದ್ದಿರುವ ಶಂಕೆ ವ್ಯಕ್ತವಾಗಿದೆ.  

ಹೆಲ್ಮೆಟ್‌ ಕಳವು: ಸಿಸಿ ಕೆಮರಾದಲ್ಲಿ ಸೆರೆ Read More »

ಕರಾವಳಿ, ಕ್ರೈಮ್ ನ್ಯೂಸ್

ಏರ್ ಇಂಡಿಯಾ ವಿಮಾನಕ್ಕೆ ಬಾಂಬ್ ಬೆದರಿಕೆ: ದೂರು ದಾಖಲು

(ನ್ಯೂಸ್ ಕಡಬ) newskadaba.com ಮಂಗಳೂರು, ಅ. 21. ಭಾರತದ ವಿವಿಧ ಭಾಗಗಳ ಏರ್ ಇಂಡಿಯಾ ವಿಮಾನಗಳಿಗೆ ಬಾಂಬ್ ಬೆದರಿಕೆ ಸಂದೇಶ ಬಂದಿದ್ದು, ಈ ಪಟ್ಟಿಯಲ್ಲಿ ಭಾನುವಾರ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬೈಗೆ ಹೊರಟಿದ್ದ ವಿಮಾನವೂ ಸೇರಿದೆ. ಮಧ್ಯಾಹ್ನ 12:35 ರ ಸುಮಾರಿಗೆ ಸ್ಕಿಜೋಫ್ರೇನಿಯಾ 111 ಎಂಬ ಖಾತೆಯಿಂದ ಟ್ವಿಟರ್‌ನಲ್ಲಿ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ಭಾರತದ ವಿವಿಧ ಭಾಗಗಳಲ್ಲಿ ಆರು ಏರ್ ಇಂಡಿಯಾ ವಿಮಾನಗಳಲ್ಲಿ ಬಾಂಬ್‌ಗಳನ್ನು ಇರಿಸಲಾಗಿದೆ ಎಂದು ಸಂದೇಶದಲ್ಲಿ ತಿಳಿಸಲಾಗಿದೆ. ಮಂಗಳೂರಿನ ಏರ್ ಇಂಡಿಯಾ

ಏರ್ ಇಂಡಿಯಾ ವಿಮಾನಕ್ಕೆ ಬಾಂಬ್ ಬೆದರಿಕೆ: ದೂರು ದಾಖಲು Read More »

ಕರಾವಳಿ, ಕ್ರೈಮ್ ನ್ಯೂಸ್

ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆ..!

(ನ್ಯೂಸ್ ಕಡಬ) newskadaba.com ಮಂಗಳೂರು, ಅ. 21. ವಿಶೇಷ ಆರ್ಥಿಕ ವಲಯದಲ್ಲಿರುವ ಎಂಆರ್‌ಪಿಎಲ್ ಅಧೀನ ಸಂಸ್ಥೆ ಒಎಂಪಿಎಲ್ ಕಂಪೆನಿಯಿಂದ ನಾಪತ್ತೆಯಾಗಿದ್ದ ಯುವಕನ ಮೃತದೇಹ ಶನಿವಾರ ಒಎಂಪಿಎಲ್ ನ ಒಡಿಸಿ ಗೇಟ್‌ ಬಳಿ ಪತ್ತೆಯಾಗಿದೆ. ಮೃತ ಯುವಕನನ್ನು ಅಸ್ಸಾಂ ಮೂಲದ ಶಮಾನ್ ಅಲಿ (26) ಎಂದು ಗುರುತಿಸಲಾಗಿದೆ. ಒಎಂಪಿಎಲ್ ಸುಮಾರು 15 ಅಡಿ ಎತ್ತರದ ಕಾಂಪೌಂಡ್‌ ಹಾರಿ ಸುಮಾರು 300-400 ಮೀಟರ್‌ ದೂರಕ್ಕೆ ನಡೆದು ಬಂದು ಬಳಿಕ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ತದನಂತರ ಆತ ನಾಪತ್ತೆಯಾಗಿದ್ದು,

ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆ..! Read More »

ಕರಾವಳಿ, ಕ್ರೈಮ್ ನ್ಯೂಸ್

ಸ್ಕೂಟರ್- ಲಾರಿ ಡಿಕ್ಕಿ: ಯುವತಿ ಮೃತ್ಯು..!

(ನ್ಯೂಸ್ ಕಡಬ) newskadaba.com ಮಂಗಳೂರು, ಅ. 21. ಸ್ಕೂಟರ್‌ಗೆ ಟಿಪ್ಪರ್ ಲಾರಿ ಡಿಕ್ಕಿಯಾದ ಪರಿಣಾಮ ಯುವತಿಯೋರ್ವಳು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ನಂತೂರು ವೃತ್ತದ ಬಳಿಯ ಶಾಂತಿ ಕಿರಣ ಎದುರಿನಲ್ಲಿ ಭಾನುವಾರ ಸಂಜೆ ಸಂಭವಿಸಿದೆ. ಮೃತಪಟ್ಟ ಯುವತಿಯನ್ನು ಕೋಡಿಕಲ್ ನಿವಾಸಿ ಕ್ರಿಸ್ತಿ ಕ್ರಾಸ್ತಾ (27) ಎಂದು ಗುರುತಿಸಲಾಗಿದೆ. ಕ್ರಿಸ್ತಿ ಕ್ರಾಸ್ತಾ ಅವರು ಕೋಡಿಕಲ್ ವೆಲಂಕಣಿ ವಾರ್ಡಿನ ಸಿರಿಲ್ ಕ್ರಾಸ್ತಾ ಮತ್ತು ಸ್ಯಾಂಡ್ರಾ ಕ್ರಾಸ್ತಾ ದಂಪತಿಯ ಪುತ್ರಿ. ಕ್ರಿಸ್ತಿಯವರು ನಂತೂರು ವೃತ್ತದಿಂದ ಪಂಪೈಲ್ ಕಡೆಗೆ ಸ್ಕೂಟರಿನಲ್ಲಿ ತೆರಳುತ್ತಿದ್ದಾಗ ಹಿಂದಿನಿಂದ

ಸ್ಕೂಟರ್- ಲಾರಿ ಡಿಕ್ಕಿ: ಯುವತಿ ಮೃತ್ಯು..! Read More »

ಕರಾವಳಿ, ಕ್ರೈಮ್ ನ್ಯೂಸ್

ಅ. 31ರಂದು ಭಾವೈಕ್ಯತೆಯ ದೀಪಾವಳಿ ಆಚರಣೆ ದಶಮಾನ ಸಂಭ್ರಮದ ಅಂಗವಾಗಿ ವಿವಿಧ ಸ್ಪರ್ಧೆ

(ನ್ಯೂಸ್ ಕಡಬ) newskadaba.com ಮಂಗಳೂರು, ಅ. 19. ವಿಧಾನ ಪರಿಷತ್ ಶಾಸಕ ಐವನ್ ಡಿಸೋಜಾ ನೇತೃತ್ವದಲ್ಲಿ ಆಚರಿಸಲಾಗುವ ಸರ್ವಧರ್ಮಗಳ ಭಾವೈಕ್ಯದ ದೀಪಾವಳಿ ಆಚರಣೆ ದಶಮಾನ ಸಂಭ್ರಮದಲ್ಲಿದೆ. ಇದರ ಅಂಗವಾಗಿ ಅ. 31ರಂದು ಕುಣಿತ ಭಜನೆ, ಗೂಡುದೀಪ ರಚನೆ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಇಂದು ಸುದ್ದಿಗೋಷ್ಟಿಯಲ್ಲಿ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ ಶಾಸಕ ಐವನ್ ಡಿಸೋಜಾ, ಕದ್ರಿ ಪರ್ಕ್‌ಿನ ಸುವರ್ಣ ಕಲಾ ಮಂಟದಲ್ಲಿ ಅ. 31ರಂದು ಸಂಜೆ 3 ಗಂಟೆಯಿಂದ ಚಿತ್ರಕಲಾ ಸ್ಪರ್ಧೆ, ಗೂಡುದೀಪ

ಅ. 31ರಂದು ಭಾವೈಕ್ಯತೆಯ ದೀಪಾವಳಿ ಆಚರಣೆ ದಶಮಾನ ಸಂಭ್ರಮದ ಅಂಗವಾಗಿ ವಿವಿಧ ಸ್ಪರ್ಧೆ Read More »

ಕರಾವಳಿ

ದೀಪಾವಳಿ ಹಬ್ಬದ ಪ್ರಯುಕ್ತ ಮಂಗಳೂರು-ಬೆಂಗಳೂರು ನಡುವೆ ವಿಶೇಷ ರೈಲು ಸಂಚಾರ

(ನ್ಯೂಸ್ ಕಡಬ) newskadaba.com ಮಂಗಳೂರು, ಅ. 19. ದೀಪಾವಳಿ ಹಬ್ಬದ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರ ಮನವಿಗೆ ತುರ್ತು ಸ್ಪಂದಿಸಿರುವ ರೈಲ್ವೆ ಸಚಿವರಾದ ಅಶ್ವಿನ್‌ ವೈಷ್ಣವ್‌ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವರಾದ ವಿ. ಸೋಮಣ್ಣ ಅವರು ಸ್ಪಂದಿಸಿದ್ದು, ಇದೀಗ ನೈರುತ್ಯ ರೈಲ್ವೆಯು ಮಂಗಳೂರು-ಬೆಂಗಳೂರು ನಡುವೆ ವಿಶೇಷ ರೈಲು ಸಂಚಾರ ಆರಂಭಿಸಿದೆ. ಅದರಂತೆ ಯಶವಂತಪುರ-ಮಂಗಳೂರು(06565) ವಿಶೇಷ ರೈಲು ಅ.30ರಂದು ರಾತ್ರಿ 11.50ಕ್ಕೆ ಯಶವಂತಪುರದಿಂದ ಹೊರಟು ಮರುದಿನ ಬೆಳಗ್ಗೆ 11.45ಕ್ಕೆ ಮಂಗಳೂರು ತಲುಪಲಿದೆ.

ದೀಪಾವಳಿ ಹಬ್ಬದ ಪ್ರಯುಕ್ತ ಮಂಗಳೂರು-ಬೆಂಗಳೂರು ನಡುವೆ ವಿಶೇಷ ರೈಲು ಸಂಚಾರ Read More »

ಕರಾವಳಿ

ಪೆಟ್ರೋಲ್ ಚಾಲಿತ ಸ್ಕೂಟರ್‌ ಗೆ ಬೆಂಕಿ: ತಪ್ಪಿದ ಅನಾಹುತ

(ನ್ಯೂಸ್ ಕಡಬ) newskadaba.com ಮಂಗಳೂರು, ಅ. 19. ಕುಂಪಲ ಸಮೀಪದ ವಿದ್ಯಾನಗರ ಎಂಬಲ್ಲಿ ತಡರಾತ್ರಿ ಭಯಂಕರವಾದ ಘಟನೆ ನಡೆದಿದ್ದು, ವಸತಿ ಗೃಹದಲ್ಲಿ ನಿಲ್ಲಿಸಿದ್ದ ಪೆಟ್ರೋಲ್ ಚಾಲಿತ ಟಿವಿಎಸ್ ಎನ್‌ಟಾರ್ಕ್ ಸ್ಕೂಟರ್‌ಗೆ ಬೆಂಕಿ ಹೊತ್ತಿಕೊಂಡಿದೆ. ಎರಡು ತಿಂಗಳ ಹಿಂದೆಯಷ್ಟೇ ಸ್ಕೂಟರ್ ಖರೀದಿಸಿದ್ದ ಐಟಿಐ ವಿದ್ಯಾರ್ಥಿ ರಾಕೇಶ್ ಮಾಲೀಕತ್ವದ ಸ್ಕೂಟರ್ 12:30 ರ ಸುಮಾರಿಗೆ ಹೊತ್ತಿ ಉರಿದಿದ್ದು, ಮನೆಯ ಕಿಟಕಿ ಮತ್ತು ವಿದ್ಯುತ್ ತಂತಿಗಳಿಗೆ ವೇಗವಾಗಿ ಬೆಂಕಿ ವ್ಯಾಪಿಸಿದೆ. ಅದೃಷ್ಟವಶಾತ್, ಕುಟುಂಬವು ಆ ಸಮಯಕ್ಕೆ ಎಚ್ಚರವಾಯಿತು ಮತ್ತು ದೊಡ್ಡ ಅನಾಹುತ

ಪೆಟ್ರೋಲ್ ಚಾಲಿತ ಸ್ಕೂಟರ್‌ ಗೆ ಬೆಂಕಿ: ತಪ್ಪಿದ ಅನಾಹುತ Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top