Mangaluru

ಯುವತಿ ನಾಪತ್ತೆ..!

(ನ್ಯೂಸ್ ಕಡಬ) newskadaba.com ಸುರತ್ಕಲ್, ಸೆ. 20. ಸ್ನೇಹಿತೆಯೊಂದಿಗೆ ಮಂಗಳೂರಿಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ತೆರಳಿದ್ದ ಯುವತಿಯೋರ್ವಳು ಕಾಣೆಯಾಗಿರುವ ಬಗ್ಗೆ ಸುರತ್ಕಲ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಗಳಪೇಟೆಯಲ್ಲಿ ವಾಸವಿದ್ದ ಹನುಮಂತ ಹಾಗೂ ಲಕ್ಷ್ಮವ್ವ ಎಂಬವರ ಮಗಳು ಕುಮಾರಿ ಸುನೀತಾ (19) ಕಾಣೆಯಾದ ಯುವತಿ ಎಂದು ತಿಳಿದು ಬಂದಿದೆ. ಕಾಣೆಯಾಗಿರುವ ಸುನೀತಾ ಸಾಧಾರಣ ಶರೀರ ಹೊಂದಿದ್ದು, 4.5 ಅಡಿ ಎತ್ತರ ಇದ್ದಾರೆ. ಎಣ್ಣೆ ಕಪ್ಪು ಮೈಬಣ್ಣ, ದುಂಡು ಮುಖ ಹೊಂದಿದ್ದು, ಕನ್ನಡ, ತುಳು ಭಾಷೆ ಬಲ್ಲವರಾಗಿದ್ದಾರೆ. […]

ಯುವತಿ ನಾಪತ್ತೆ..! Read More »

ಕರಾವಳಿ

ದ.ಕ ಜಿಲ್ಲೆಯಲ್ಲಿ ನಿಪಾಹ್ ವೈರಸ್ ಗೆ ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ಸೂಚನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 19. ಮಂಗನ ಜ್ವರದ ಆತಂಕದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ (ದ.ಕ.) ಜಿಲ್ಲೆಯಲ್ಲಿ ವಿಶೇಷವಾಗಿ ನಿಪಾಹ್ ವೈರಸ್‌ನಿಂದಾಗಿ ಕೇರಳದಲ್ಲಿ ಸಾವು ಸಂಭವಿಸಿದ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ನಿಗಾ ವಹಿಸಲು ಆರೋಗ್ಯ ಇಲಾಖೆ ನಿರ್ಧರಿಸಿದೆ. ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ.ತಿಮ್ಮಯ್ಯ ಮಾತನಾಡಿ, ‘ಸದ್ಯ ಜಿಲ್ಲೆಯಲ್ಲಿ ಕೋತಿ ಜ್ವರದ ಪ್ರಕರಣಗಳು ವರದಿಯಾಗಿಲ್ಲ, ರಾಜ್ಯ ಸರ್ಕಾರದಿಂದ ಯಾವುದೇ ನಿರ್ದಿಷ್ಟ ಸೂಚನೆ ಬಂದಿಲ್ಲ.ಆದರೆ, ನಗರದ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಬಂದರುಗಳಿಗೆ ಆಗಮಿಸುವ ಪ್ರಯಾಣಿಕರು. ಮುನ್ನೆಚ್ಚರಿಕೆಯಾಗಿ ವೆನ್ಲಾಕ್

ದ.ಕ ಜಿಲ್ಲೆಯಲ್ಲಿ ನಿಪಾಹ್ ವೈರಸ್ ಗೆ ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ಸೂಚನೆ Read More »

ಆರೋಗ್ಯ ಮಾಹಿತಿ, ಕರಾವಳಿ

ರಾಜ್ಯಮಟ್ಟದ ಪವರ್ ಲಿಫ್ಟಿಂಗ್ ಬೆಂಚ್ ಪ್ರೆಸ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ನಾಗೇಶ್ ಶೆಟ್ಟಿ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 19.  ಸಾಲಿಗ್ರಾಮದಲ್ಲಿ ನಡೆದ ರಾಜ್ಯಮಟ್ಟದ ಪವರ್ ಲಿಫ್ಟಿಂಗ್ ಬೆಂಚ್ ಪ್ರೆಸ್ ಸ್ಪರ್ಧೆಯಲ್ಲಿ 66 ಕೆ.ಜಿ. ಮಾಸ್ಟರ್ ವಿಭಾಗದಲ್ಲಿ ನಿವೃತ್ತ ಬಿಎಸ್‌ಎನ್‌ಎಲ್ ಉದ್ಯೋಗಿ ನಾಗೇಶ್ ಶೆಟ್ಟಿ ಬಜ್ಪೆ ಚಿನ್ನದ ಪದಕ ಗಳಿಸಿದ್ದಾರೆ. ಬಾಲಾಂಜನೇಯ ಜಿಮಿನಿಷ್ಟ್ ಮಂಗಳೂರು ಇದರ ಸದಸ್ಯ ದಿ. ಜಯೇಂದ್ರ ನಾಯಕ್ ಅವರ ಶಿಷ್ಯ. ಹಾಗೂ ಇವರು ಗೋವಾದಲ್ಲಿ ನಡೆಯಲಿರುವ ರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.    

ರಾಜ್ಯಮಟ್ಟದ ಪವರ್ ಲಿಫ್ಟಿಂಗ್ ಬೆಂಚ್ ಪ್ರೆಸ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ನಾಗೇಶ್ ಶೆಟ್ಟಿ Read More »

ಕರಾವಳಿ

ಭಾರತ ಕಮ್ಯುನಿಸ್ಟ್ ಪಕ್ಷದ ಹಿರಿಯ ಮುಂದಾಳು ಬಿ.ಕೆ ಕೃಷ್ಣಪ್ಪ ನಿಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 18. ಸಿಪಿಐ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಮಿತಿಯ ಮಾಜಿ ಕಾರ್ಯದರ್ಶಿ ಬಿ.ಕೆ ಕೃಷ್ಣಪ ಸೆ.17 ನಿಧನರಾದರು. ಅವರಿಗೆ 91 ವರ್ಷ ವಯಸ್ಸಾಗಿತ್ತು. ಅವರು ಪತ್ನಿ, ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರು ಮತ್ತು ಅಪಾರ ಬಂಧು ಮತ್ತು ಅಭಿಮಾನಿಗಳನ್ನು ಅಗಲಿದ್ದಾರೆ. ಕೃಷ್ಣಪ್ಪ ಅವರು ಸಿಪಿಐ ಕರ್ನಾಟಕ ರಾಜ್ಯ ಸಮಿತಿ ಸದಸ್ಯ ಹಾಗೂ ರಾಜ್ಯ ಶಿಸ್ತು ಸಮಿತಿ ಸದಸ್ಯರಾಗಿಯೂ ದುಡಿದಿದ್ದಾರೆ. ಅವರು ಎಐಟಿಯುಸಿಯ ಜಿಲ್ಲಾ ಕಾರ್ಯದರ್ಶಿ ಹಾಗೂ ರಾಷ್ಟ್ರೀಯ

ಭಾರತ ಕಮ್ಯುನಿಸ್ಟ್ ಪಕ್ಷದ ಹಿರಿಯ ಮುಂದಾಳು ಬಿ.ಕೆ ಕೃಷ್ಣಪ್ಪ ನಿಧನ Read More »

ಕರಾವಳಿ, ಕ್ರೈಮ್ ನ್ಯೂಸ್

ಮನೆಗೆ ನುಗ್ಗಿ ಚಿನ್ನಾಭರಣ ಕಳವು ಪ್ರಕರಣ: ಆರೋಪಿ ಸೆರೆ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 18. ಎರಡೂವರೆ ವರ್ಷಗಳ ಹಿಂದೆ ನಗರದ ಕುಲಶೇಖರದ ಕಾಸ್ತಾಲಿನೊ ಕಾಲೋನಿ ಸೆಕ್ರೆಡ್ ಹಾರ್ಟ್ ಎಂಬಲ್ಲಿನ ಮನೆಯಿಂದ ಚಿನ್ನಾಭರಣ ಕಳವುಗೈದ ಪ್ರಕರಣದ ಆರೋಪಿಯನ್ನು ಕಂಕನಾಡಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಕಾರ್ಕಳದ ಬೆಳ್ಮಣ್ ನಿವಾಸಿ ರೋಹಿತ್ ಮಥಾಯಿಸ್ ಎಂದು ಗುರುತಿಸಲಾಗಿದೆ. ಆರೋಪಿ ಮಥಾಯಿಸ್ ಮುಂಬೈಗೆ ಪರಾರಿಯಾಗಿದ್ದನು. ಬಂಧಿತ ಆರೋಪಿಯಿಂದ 7 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರ ಪ್ರಕಟನೆ ತಿಳಿಸಿದೆ.

ಮನೆಗೆ ನುಗ್ಗಿ ಚಿನ್ನಾಭರಣ ಕಳವು ಪ್ರಕರಣ: ಆರೋಪಿ ಸೆರೆ Read More »

ಕರಾವಳಿ, ಕ್ರೈಮ್ ನ್ಯೂಸ್

ಆ್ಯಪಲ್ ಐಫೋನ್ ಸರ್ವಿಸ್ ಸೆಂಟರ್ ವಿರುದ್ಧ ಮೊಬೈಲ್ ರೀಟೇಲರ್ಸ್‌ರಿಂದ ಪ್ರತಿಭಟನೆ 

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 17. ಆ್ಯಪಲ್ ಐಒಎಸ್ ಅಪ್ಡೇಟ್ ಬಳಿಕ ಮೊಬೈಲ್‌ಸ್ಕ್ರೀನ್‌ನಲ್ಲಿ ಲೈನ್ ಅಥವಾ ಸ್ಕ್ರೀನ್ ಬ್ಲಾಂಕ್ ಆಗುವ ಸಮಸ್ಯೆಯಿಂದ ಗ್ರಾಹಕರು ತೊಂದರೆ ಅನುಭವಿಸುದ್ದು, ಅದನ್ನು ಬಗೆಹರಿಸುವಂತೆ ಒತ್ತಾಯಿಸಿ ಆ್ಯಪಲ್ ಐಫೋನ್ ಸರ್ವಿಸ್ ಸೆಂಟರ್ ವಿರುದ್ಧ ಮೊಬೈಲ್ ರೀಟೇಲರ್ಸ್‌ಗಳು ಇಂದು ಪ್ರತಿಭಟನೆ ನಡೆಸಿದರು. ಅಂಬೇಡ್ಕರ್ ಸರ್ಕಲ್‌ನಿಂದ ಆ್ಯಪಲ್ ನ ಸರ್ವಿಸ್ ಸೆಂಟರ್ ಮ್ಯಾಪಲ್‌ನ ಎದುರುಗಡೆಯಿಂದ ಕ್ಲಾಕ್‌ ಟವರ್ ವರಗೆ ಮೆರವಣಿಗೆಯಲ್ಲಿ ಸಾಗಿಬಂದ ಪ್ರತಿಭಟನಾಕಾರರು ಕ್ಲಾಕ್ ಟವರ್ ಬಳಿ ತಮ್ಮ ಬೇಡಿಕೆಗಳನ್ನು ಕೂಡಲೇ ಪೂರೈಸುವಂತೆ ಸಂಸ್ಥೆಯನ್ನು

ಆ್ಯಪಲ್ ಐಫೋನ್ ಸರ್ವಿಸ್ ಸೆಂಟರ್ ವಿರುದ್ಧ ಮೊಬೈಲ್ ರೀಟೇಲರ್ಸ್‌ರಿಂದ ಪ್ರತಿಭಟನೆ  Read More »

ಕರಾವಳಿ

ಆತ್ಮಹತ್ಯೆಗೆ ಶರಣಾಗಿದ್ದ ವಿದ್ಯಾರ್ಥಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ..!

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 17.  ಸುರತ್ಕಲ್‌ನ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಯೊಬ್ಬ ಸುರತ್ಕಲ್‌ನ ಪ್ರಗತಿನಗರದಲ್ಲಿರುವ ತನ್ನ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದು, ಅವರ ಮೃತದೇಹವು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿವೆ. ಮೃತ ಯುವಕನನ್ನು ಚಿಕ್ಕಬಳ್ಳಾಪುರ ಮೂಲದ ಮೋಹನ್ ಕುಮಾರ್ ಮೇಟಿ (22) ಎಂದು ಗುರುತಿಸಲಾಗಿದೆ. ಸೆ. 12ರಂದು ಮೋಹನ್ ಕುಮಾರ್ ಮೇಟಿ ಅವರ ತಾಯಿ ಆತನಿಗೆ ಕರೆ ಮಾಡಿದ್ದರು. ಮೋಹನ್ ಅವರನ್ನು ಸಂಪರ್ಕಿಸಲು ಹಲವು ಬಾರಿ ಪ್ರಯತ್ನಿಸಿದರೂ ಮೋಹನ್ ಕರೆ ಸ್ವೀಕರಿಸದ ಕಾರಣ, ಅವರ ತಾಯಿ ಗಾಬರಿಗೊಂಡು, ಆತ

ಆತ್ಮಹತ್ಯೆಗೆ ಶರಣಾಗಿದ್ದ ವಿದ್ಯಾರ್ಥಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ..! Read More »

ಕರಾವಳಿ, ಕ್ರೈಮ್ ನ್ಯೂಸ್

ನೇಣು ಬಿಗಿದು ಯುವಕ ಆತ್ಮಹತ್ಯೆ..!

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 13.  ಯುವಕನೋರ್ವ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಯ ಮಾಡೂರು ಎಂಬಲ್ಲಿ ನಡೆದಿದೆ. ತಾರಿಪಡ್ಪು ವೈದ್ಯನಾಥ ದೇವಸ್ಥಾನದ ಬಳಿಯ ನಿವಾಸಿ ಶ್ರವಣ್ ಆಳ್ವ (25) ಆತ್ಮಹತ್ಯೆಗೈದ ಯುವಕ ವೃತ್ತಿಯಲ್ಲಿ ಆತ ಎಲೆಕ್ಟ್ರೀಶಿಯನ್ ಆಗಿದ್ದ. ಮಾಹಿತಿಗಳ ಪ್ರಕಾರ ಶ್ರವಣ್ ಗುರುವಾರ ರಾತ್ರಿ ಸ್ನೇಹಿತನ್ನು ಭೇಟಿಯಾಗಿ ಮನೆಗೆ ಬಂದು ಊಟ ಮಾಡಿ ಟಿವಿ ವೀಕ್ಷಿಸಿ ಬಳಿಕ ಮಲಗಲು ತನ್ನ ಕೋಣೆಗೆ ಹೋಗಿದ್ದು ಮಧ್ಯರಾತ್ರಿ ಶ್ರವಣ್ ಅಣ್ಣ ಕೆಲಸ

ನೇಣು ಬಿಗಿದು ಯುವಕ ಆತ್ಮಹತ್ಯೆ..! Read More »

ಕರಾವಳಿ, ಕ್ರೈಮ್ ನ್ಯೂಸ್

ಮಾದಕ ವಸ್ತು ಗಾಂಜಾ ಮಾರಾಟ: ಇಬ್ಬರು ಸೆರೆ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 13.  ಒರಿಸ್ಸಾದಿಂದ ಮಂಗಳೂರು ನಗರಕ್ಕೆ ನಿಷೇದಿತ ಮಾದಕ ವಸ್ತುವಾದ ಗಾಂಜಾವನ್ನು ಸಾಗಾಟ/ಮಾರಾಟ ಮಾಡುತ್ತಿದ್ದವರನ್ನು ಪತ್ತೆ ಹಚ್ಚಿ 8.650 ಕೆಜಿ ಗಾಂಜಾವನ್ನು ವಶಪಡಿಸಿಕೊಳ್ಳುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿರುತ್ತಾರೆ. ಮಂಗಳೂರು ನಗರದ ಕರ್ನಾಟಕ-ಕೇರಳ ಗಡಿ ಪ್ರದೇಶದ ತಲಪಾಡಿ ದೇವಿಪುರ ರಸ್ತೆಯ ತಚ್ಚಾಣಿ ಪರಿಸರದಲ್ಲಿ ಅಕ್ರಮವಾಗಿ ಗಾಂಜಾ ಮಾದಕ ವಸ್ತುವನ್ನು ಹೊಂದಿಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಒರಿಸ್ಸಾದ ಬುಲುಬಿರೊ(24) ಹಾಗೂ ಪಶ್ಚಿಮ ಬಂಗಾಳದ ದಿಲ್ ದಾರ್ ಆಲಿ (28) ಎಂಬವರನ್ನು ವಶಕ್ಕೆ ಪಡೆದುಕೊಂಡು 

ಮಾದಕ ವಸ್ತು ಗಾಂಜಾ ಮಾರಾಟ: ಇಬ್ಬರು ಸೆರೆ Read More »

ಕರಾವಳಿ, ಕ್ರೈಮ್ ನ್ಯೂಸ್

ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಸೀಮೆಎಣ್ಣೆ ಕುಡಿದು ವ್ಯಕ್ತಿ ಮೃತ್ಯು..!

(ನ್ಯೂಸ್ ಕಡಬ) newskadaba.com ಮಲ್ಪೆ, ಸೆ. 13.  ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಬಾಯಿಗೆ ಸೀಮೆಎಣ್ಣೆ ಹಾಕಿ ಬೆಂಕಿ ಉಗುಳುತ್ತಿದ್ದ ವ್ಯಕ್ತಿಯೊಬ್ಬರು ತೀವ್ರವಾಗಿ ಅಸ್ವಸ್ಥಗೊಂಡು ಮೃತಪಟ್ಟ ಘಟನೆ ತೊಟ್ಟಂ ಎಂಬಲ್ಲಿ ನಡೆದಿದೆ. ಮೃತರನ್ನು ಮಲ್ಪೆಯ ಸತೀಶ(39) ಎಂದು ಗುರುತಿಸಲಾಗಿದೆ. ಮೃತ ವ್ಯಕ್ತಿ ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದು ಸೆ.9ರಂದು ರಾತ್ರಿ ತೊಟ್ಟಂನ ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಬಾಯಿಗೆ ಸೀಮೆಎಣ್ಣೆ ಹಾಕಿಕೊಂಡು ಬೆಂಕಿ ಉಗುಳುತ್ತಿದ್ದರು. ಈ ವೇಳೆ ಅವರು ಆಕಸ್ಮಿಕವಾಗಿ ಸೀಮೆಎಣ್ಣೆ ಕುಡಿದ ಪರಿಣಾಮ ತೀವ್ರವಾಗಿ ಅಸ್ವಸ್ಥಗೊಂಡರೆನ್ನಲಾಗಿದೆ. ಸೆ.10ರಂದು ಉಡುಪಿ ಜಿಲ್ಲಾ

ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಸೀಮೆಎಣ್ಣೆ ಕುಡಿದು ವ್ಯಕ್ತಿ ಮೃತ್ಯು..! Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top