Mangalore

ಕಡಬ: ಹೃದಯಾಘಾತಕ್ಕೆ ಕಡಬದ ಯೋಧ ಬಲಿ ➤ ಇಂದು ಹುಟ್ಟೂರಿಗೆ ಪಾರ್ಥಿವ ಶರೀರ ರವಾನೆ

(ನ್ಯೂಸ್ ಕಡಬ)newskadaba.com  ಕಡಬ, ಮಾ.28. ಕಡಬ ಮೂಲದ ಯೋಧರೊಬ್ಬರು ಮದ್ರಾಸ್ ರಿಜಿಮೆಂಟ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗಲೇ ಹೃದಯಾಘಾತಕ್ಕೆ ಬಲಿಯಾದ ಘಟನೆ ವರದಿಯಾಗಿದೆ. ಕಡಬ ತಾಲೂಕಿನ  ಕುಟ್ರುಪ್ಪಾಡಿ ಗ್ರಾಮದ ತರಪ್ಪೇಳ್‌ ನಿವಾಸಿ ಜೋನಿ ಎಂಬವರ ಮಗ  ಲಿಜೇಶ್ ಕುರಿಯನ್ ಮೃತ ಯೋಧರಾಗಿದ್ದಾರೆ. ಮಾ.26 ರಂದು ಕೊಯಂಬತ್ತೂರು ಮದ್ರಾಸ್ ರಿಜಿಮೆಂಟ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಹೃದಯಾಘಾತ ಕ್ಕೆ ಒಳಗಾಗಿ ಚಿಕಿತ್ಸೆ ಫಲಿಸದೆ  ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.  ಇವರ ಪಾರ್ಥಿವ ಶರೀರ ಇಂದು ಬೆಳಗ್ಗೆ ಕಡಬ ತಲುಪಲಿದೆ. 11:30ಕ್ಕೆ ಕುಟ್ರುಪ್ಪಾಡಿ ಸಂತ ಮೇರಿಸ್ […]

ಕಡಬ: ಹೃದಯಾಘಾತಕ್ಕೆ ಕಡಬದ ಯೋಧ ಬಲಿ ➤ ಇಂದು ಹುಟ್ಟೂರಿಗೆ ಪಾರ್ಥಿವ ಶರೀರ ರವಾನೆ Read More »

ಕರಾವಳಿ

ಕಾರ್ಕಳ: ಅನಾರೋಗ್ಯದಿಂದ ಪುತ್ರ ಮೃತ್ಯು ➤ ನೊಂದು ತಾಯಿ ಆತ್ಮಹತ್ಯೆ

(ನ್ಯೂಸ್ ಕಡಬ)newskadaba.com  ಕಾರ್ಕಳ, ಮಾ.28. ಮಗನನ್ನು ಕಳೆದುಕೊಂಡ ನೋವಿನಲ್ಲಿ ತಾಯಿಯೊಬ್ಬರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳ ತಾಲೂಕಿನ ಕೆರ್ವಾಶೆ ಗ್ರಾಮದ ಬಂಗ್ಲೆಗುಡ್ಡೆಯಲ್ಲಿ ನಡೆದಿದೆ. ರತ್ನಾವತಿ ನಾಯಕ್ (85) ಆತ್ಮಹತ್ಯೆ ಮಾಡಿಕೊಂಡವರು ಎಂದು ಗುರುತಿಸಲಾಗಿದೆ. ಇದೇ ನೋವಿನಿಂದ ರತ್ನಾವತಿ ನಾಯಕ್ ಅವರು ಮನೆಯ ಸಮೀಪದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಿರಿಮಗ ಚಂದ್ರಶೇಖರ್ ನಾಯಕ್ ನೀಡಿದ ದೂರಿನಂತೆ ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ    

ಕಾರ್ಕಳ: ಅನಾರೋಗ್ಯದಿಂದ ಪುತ್ರ ಮೃತ್ಯು ➤ ನೊಂದು ತಾಯಿ ಆತ್ಮಹತ್ಯೆ Read More »

ಕರಾವಳಿ

ಮಂಗಳೂರು: ‘ರಂಗ್‌‌ದ ಬರ್ಸಾ’ ಕಾರ್ಯಕ್ರಮಕ್ಕೆ ಅಡ್ಡಿ ಪ್ರಕರಣ ➤ ಆರು ಮಂದಿ ಆರೋಪಿಗಳಿಗೆ ಜಾಮೀನು

(ನ್ಯೂಸ್ ಕಡಬ)newskadaba.com  ಮಂಗಳೂರು, ಮಾ.28. ಮರೋಳಿಯಲ್ಲಿ ಹೋಳಿ ಪ್ರಯುಕ್ತ ಆಯೋಜಿಸಲಾಗಿದ್ದ ರಂಗ್‌‌ದ ಬರ್ಸಾ ಕಾರ್ಯಕ್ರಮಕ್ಕೆ ದಾಳಿ ನಡೆಸಿ ಬ್ಯಾನರ್ ಹರಿದು ಹಾಕಿ ವಸ್ತುಗಳನ್ನು ಪುಡಿಗೈದಿದ್ದ ಬಜರಂಗ ದಳ ಕಾರ್ಯಕರ್ತರಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಯುವಕ-ಯುವತಿಯರು ಅಶ್ಲೀಲವಾಗಿ ನಡೆದುಕೊಳ್ಳುತ್ತಾರೆ, ಅನ್ಯಕೋಮಿನ ಯುವಕರು ಕೂಡ ಪಾಲ್ಗೊಳ್ಳುತ್ತಾರೆ ಎಂದು ಆರೋಪಿಸಿ ಬಜರಂಗದಳದ ಆರು ಮಂದಿ ಕಾರ್ಯಕರ್ತರು ಸ್ಥಳಕ್ಕೆ ತೆರಳಿ ಆಯೋಜಕರನ್ನು ತರಾಟೆಗೆ ತೆಗೆದುಕೊಂಡಿದ್ದರು. ಕಾರ್ಯಕ್ರಮಕ್ಕೆ ಹಾಕಲಾಗಿದ್ದ ಬ್ಯಾನರ್‌ ಹರಿದು ಹಾಕಿದ್ದರು. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ.  

ಮಂಗಳೂರು: ‘ರಂಗ್‌‌ದ ಬರ್ಸಾ’ ಕಾರ್ಯಕ್ರಮಕ್ಕೆ ಅಡ್ಡಿ ಪ್ರಕರಣ ➤ ಆರು ಮಂದಿ ಆರೋಪಿಗಳಿಗೆ ಜಾಮೀನು Read More »

ಕರಾವಳಿ

ಉಪ್ಪಿನಂಗಡಿ: ಬೈಕ್ ಗಳ ನಡುವೆ ಮುಖಾಮುಖಿ ಢಿಕ್ಕಿ ➤ ಯುವಕ ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ)newskadaba.com ಉಪ್ಪಿನಂಗಡಿ, ಮಾ.28. ಬೈಕ್‌ ಗಳೆರಡು ಮುಖಾಮುಖಿ ಢಿಕ್ಕಿಯಾಗಿ ಅಪಘಾತ ಸಂಭವಿಸಿ ಯುವಕನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಉಪ್ಪಿನಂಗಡಿಯ ಕಕ್ಕೆಪದವಿನಲ್ಲಿ ನಡೆದಿದೆ. ಮೃತ ಯುವಕನನ್ನು ಮಡಂತ್ಯಾರು ಸಮೀಪದ ಬಂಗೇರುಕಟ್ಟೆ ನಿವಾಸಿ ಫಯಾಝ್ (22) ಎಂದು ಗುರುತಿಸಲಾಗಿದೆ. ಫಯಾಝ್ ಕೆಲಸಕ್ಕೆ ಹೋಗಿ ಮನೆಗೆ ಹಿಂತಿರುಗುತ್ತಿದ್ದಾಗ ಅಪಘಾತ ಸಂಭವಿಸಿದ್ದು, ಅಪಘಾತದ ರಭಸಕ್ಕೆ ಫಯಾಝ್ ರಸ್ತೆಗೆ ಎಸೆಯಲ್ಪಟ್ಟಿದ್ದು, ತಲೆಯ ಭಾಗಕ್ಕೆ ಗಂಭೀರ ಗಾಯಗೊಂಡು ಮೃತಪಟ್ಟಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.      

ಉಪ್ಪಿನಂಗಡಿ: ಬೈಕ್ ಗಳ ನಡುವೆ ಮುಖಾಮುಖಿ ಢಿಕ್ಕಿ ➤ ಯುವಕ ಸ್ಥಳದಲ್ಲೇ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್

ಮಂಗಳೂರು: ಐಸ್ ಕ್ರೀಮ್ ದಾಸ್ತಾನು ಮಳಿಗೆಗೆ ತಗುಲಿದ ಬೆಂಕಿ..! ➤ ಲಕ್ಷಾಂತರ ಮೌಲ್ಯದ ಸೊತ್ತು ಬೆಂಕಿಗಾಹುತಿ

(ನ್ಯೂಸ್ ಕಡಬ)newskadaba.com ಮಂಗಳೂರು, ಮಾ.28. ಐಸ್ ಕ್ರೀಮ್ ದಾಸ್ತಾನು ಮಳಿಗೆಗೆ ಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ಸೊತ್ತುಗಳು ಬೆಂಕಿಗಾಹುತಿಯಾಗಿರುವ ಘಟನೆ ಮಂಗಳೂರು ಹೊರವಲಯದ ಅಡ್ಯಾರ್ ಬಳಿ ನಡೆದಿದೆ. ಮಧ್ಯರಾತ್ರಿ ಸುಮಾರು 2 ಗಂಟೆ ಹೊತ್ತಿಗೆ ಐಸ್ ಕ್ರೀಮ್ ದಾಸ್ತಾನು ಕೊಠಡಿಗೆ ಆರಂಭದಲ್ಲಿ ಬೆಂಕಿ ಹತ್ತಿಕೊಂಡಿದ್ದು, ಅದು ಸನಿಹದಲ್ಲಿದ್ದ ವಾಹನಕ್ಕೂ ತಗುಲಿ ವಾಹನ ಹಾಗೂ ದಾಸ್ತಾನು ಕೊಠಡಿ ಸಂಪೂರ್ಣ ಸುಟ್ಟು ಹೋಗಿದೆ ಎನ್ನಲಾಗಿದೆ. ಇನ್ನು ಮಾಹಿತಿ ಪಡೆದ ಪಾಂಡೇಶ್ವರ ಹಾಗೂ ಕದ್ರಿ ಅಗ್ನಿ ಶಾಮಕ ದಳದ  ತಂಡ ಸ್ಥಳಕ್ಕೆ

ಮಂಗಳೂರು: ಐಸ್ ಕ್ರೀಮ್ ದಾಸ್ತಾನು ಮಳಿಗೆಗೆ ತಗುಲಿದ ಬೆಂಕಿ..! ➤ ಲಕ್ಷಾಂತರ ಮೌಲ್ಯದ ಸೊತ್ತು ಬೆಂಕಿಗಾಹುತಿ Read More »

ಕರಾವಳಿ

ಬೆಳ್ತಂಗಡಿ: ಜೈಲಿನಿಂದ ತಪ್ಪಿಸಿಕೊಂಡ ಪೋಕ್ಸೋ ಪ್ರಕರಣದ ಆರೋಪಿ ➤ ಪತ್ತೆಗೆ ಸಹಕರಿಸುವಂತೆ ಮನವಿ

(ನ್ಯೂಸ್ ಕಡಬ)newskadaba.com ಬೆಳ್ತಂಗಡಿ, ಮಾ.28. ಕುಕ್ಕೇಡಿ ಗ್ರಾಮದ ಉಳ್ತೂರು ಮನೆ ನಿವಾಸಿಯಾಗಿರುವ, ಪೋಕ್ಸೋ ಪ್ರಕರಣದಲ್ಲಿ ಆರೋಪಿ ಅಸೀಂ(29) ತಲೆ ಮರೆಸಿಕೊಂಡಿದ್ದು, ಈತನ ಪತ್ತೆ ಹಚ್ಚುಲು ಸಹಕರಿಸುವಂತೆ ಪೊಲೀಸ್ ಇಲಾಖೆ ಪ್ರಕಟನೆ ಹೊರಡಿಸಿದೆ. ಆರೋಪಿ ಅಸೀಂ ಪೋಕ್ಸೋ ಪ್ರಕರಣದಲ್ಲಿ ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿದ್ದ ಎನ್ನಲಾಗಿದೆ. ಈ ವೇಳೆ ಜೈಲಿನಲ್ಲಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ಜೈಲಿನಿಂದ ತಪ್ಪಿಸಿಕೊಂಡು ತಲೆಮರೆಸಿಕೊಂಡಿದ್ದ. ಮಂಗಳೂರಿನ ಪೋಕ್ಸೊ ನ್ಯಾಯಾಲಯವು ಅಸೀಮ್ ವಿರುದ್ಧ ವಾರೆಂಟ್ ಜಾರಿ ಮಾಡಿದೆ.    

ಬೆಳ್ತಂಗಡಿ: ಜೈಲಿನಿಂದ ತಪ್ಪಿಸಿಕೊಂಡ ಪೋಕ್ಸೋ ಪ್ರಕರಣದ ಆರೋಪಿ ➤ ಪತ್ತೆಗೆ ಸಹಕರಿಸುವಂತೆ ಮನವಿ Read More »

ಕರಾವಳಿ, ಕ್ರೈಮ್ ನ್ಯೂಸ್

ಮನೆ ಬಾಗಿಲಿಗೆ ಮೀನು ಸರಬರಾಜು ➤ ಸುಳ್ಯದಲ್ಲಿ ಮತ್ಸ್ಯ ವಾಹಿನಿ ತ್ರಿಚಕ್ರ ವಾಹನ ಲೋಕಾರ್ಪಣೆ

(ನ್ಯೂಸ್ ಕಡಬ)newskadaba.com ಮಂಗಳೂರು, ಮಾ.27. ಮೀನು ಕೃಷಿಯಿಂದ ಉತ್ಪತ್ತಿಯಾಗುವ ಎಲ್ಲ ರೀತಿಯ ಮೀನುಗಳನ್ನು ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದಿಂದಲೇ ಖರೀದಿಸಲು ಯೋಜನೆ ರೂಪಿಸಲಾಗುವುದು ಮುಖ್ಯಮಂತ್ರಿಗಳು ಇದಕ್ಕೆ ಒಪ್ಪಿದ್ದಾರೆ ಎಂದು ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್‌.ಅಂಗಾರ ಹೇಳಿದರು. ಸುಳ್ಯದ ಯುವಜನ ಸಂಯುಕ್ತ ಮಂಡಳಿ ಮೈದಾನದಲ್ಲಿ ಮಾರ್ಚ್ 26 ರಂದು ನಡೆದ ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಮತ್ಸ್ಯಸಂಪದ ಯೋಜನೆಯಡಿ ಸ್ವಾವಲಂಬಿ ಬದುಕಿಗಾಗಿ ಸ್ವಉದ್ಯೋಗ-ಮನೆ ಬಾಗಿಲಿಗೆ ತಾಜಾ ಮೀನು ಸರಬರಾಜು ಮಾಡುವ ಮತ್ಸ್ಯವಾಹಿನಿ ತ್ರಿಚಕ್ರ ವಾಹನಗಳನ್ನು

ಮನೆ ಬಾಗಿಲಿಗೆ ಮೀನು ಸರಬರಾಜು ➤ ಸುಳ್ಯದಲ್ಲಿ ಮತ್ಸ್ಯ ವಾಹಿನಿ ತ್ರಿಚಕ್ರ ವಾಹನ ಲೋಕಾರ್ಪಣೆ Read More »

ಕರಾವಳಿ

ಮಡಿಕೇರಿ: ಕಾಲುಜಾರಿ ಬಿದ್ದು ಎನ್‍ಸಿಸಿ ಅಧಿಕಾರಿ ಮೃತ್ಯು

(ನ್ಯೂಸ್ ಕಡಬ)newskadaba.com ಮಡಿಕೇರಿ, ಮಾ.27. ಆಕಸ್ಮಿಕವಾಗಿ ಕಾಲುಜಾರಿ ಬಿದ್ದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ವಿರಾಜಪೇಟೆ ತಾಲ್ಲೂಕಿನ ಕಡಂಗದ ಮರೂರು ಗ್ರಾಮದಲ್ಲಿ ನಡೆದಿದೆ. ಅಲ್ಲಿನ ನಿವಾಸಿ, ಗೋಣಿಕೊಪ್ಪಲು ಕಾವೇರಿ ಕಾಲೇಜಿನಲ್ಲಿ ಎನ್‍ಸಿಸಿ ಅಧಿಕಾರಿಯಾಗಿದ್ದ ಡಾ. ಬಲ್ಯಂಡ ಬೀನಾ (52) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಡಾ. ಬಲ್ಯಂಡ ಬೀನಾ ಅವರು ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಕಾಲುಜಾರಿ ಬಿದ್ದಿದ್ದರು. ಪರಿಣಾಮ ತಲೆಯ ಭಾಗಕ್ಕೆ ಗಂಭೀರ ಸ್ವರೂಪದ ಗಾಯಗಳಾಗಿತ್ತು. ಈ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ

ಮಡಿಕೇರಿ: ಕಾಲುಜಾರಿ ಬಿದ್ದು ಎನ್‍ಸಿಸಿ ಅಧಿಕಾರಿ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್

ಉಳ್ಳಾಲ: ನೇತ್ರಾವತಿ ನದಿಗೆ ಕಾಲುಜಾರಿ ಬಿದ್ದು ಮೃತ್ಯು

(ನ್ಯೂಸ್ ಕಡಬ)newskadaba.com ಉಳ್ಳಾಲ, ಮಾ.27. ನೇತ್ರಾವತಿ ನದಿಗೆ ಕಾಲುಜಾರಿ ಬಿದ್ದು ಹರೇಕಳ ಬೈತಾರ್ ನಿವಾಸಿ ಪ್ರಕಾಶ್ ಗಟ್ಟಿ (46) ಎಂಬವರು ಸಾವನ್ನಪ್ಪಿರುವ ಘಟನೆ ಉಳ್ಳಾಲದಲ್ಲಿ ನಡೆದಿದೆ. ಹರೇಕಳದ ಉಳಿದೊಟ್ಟು ಬಳಿಯ ಕೊಡಮಣಿತ್ತಾಯ ದೈವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವ ನಡೆಯುತ್ತಿದ್ದು, ಅದಕ್ಕಾಗಿ ಪ್ರಕಾಶ್ ಅವರು ಸ್ನೇಹಿತರು ಹಾಗೂ ಸಂಬಂಧಿಕರನ್ನು ಮನೆಗೆ ಕರೆದಿದ್ದರು. ಸುಮಾರು 20ರಷ್ಟು ನೆಂಟರು ಸ್ನೇಹಿತರನ್ನು ಕರೆದುಕೊಂಡು ಪ್ರಕಾಶ್ ಅವರು ತಮ್ಮ ತೋಟದ ಬಳಿಯಿರುವ ನೇತ್ರಾವತಿ ನದಿ ತೀರಕ್ಕೆ ತೆರಳಿದ್ದರು. ಅಲ್ಲಿ ನದಿ ನೀರಿಗೆ ಅಡಿಕೆ ಮರವನ್ನು ಅಡ್ಡವಾಗಿ

ಉಳ್ಳಾಲ: ನೇತ್ರಾವತಿ ನದಿಗೆ ಕಾಲುಜಾರಿ ಬಿದ್ದು ಮೃತ್ಯು Read More »

ಕರಾವಳಿ

ಮಂಗಳೂರು: ಜೂಜು ಅಡ್ಡೆಗೆ ದಾಳಿ 14 ಮಂದಿ ಅರೆಸ್ಟ್

(ನ್ಯೂಸ್ ಕಡಬ)newskadaba.com ಮಂಗಳೂರು, ಮಾ.27. ನಗರದ ಪಣಂಬೂರು ಠಾಣಾ ವ್ಯಾಪ್ತಿಯಲ್ಲಿ ಜೂಜು ಅಡ್ಡೆಗೆ ದಾಳಿ ನಡೆಸಿದ ಪೊಲೀಸರು 14 ಮಂದಿಯನ್ನು ಬಂಧಿಸಿದ್ದಾರೆ. ಅಕ್ರಮವಾಗಿ ಜೂಜು ಅಡ್ಡೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಜೂಜಿನಲ್ಲಿ ನಿರತರಾಗಿದ್ದ 14ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ ಬಂಧಿತರಿಂದ 78,810 ರೂ. ನಗದು, 2 ಬೈಕ್ ಗಳು ಹಾಗೂ 11 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಣಂಬೂರು

ಮಂಗಳೂರು: ಜೂಜು ಅಡ್ಡೆಗೆ ದಾಳಿ 14 ಮಂದಿ ಅರೆಸ್ಟ್ Read More »

ಕರಾವಳಿ
Scroll to Top