Mangalore

ಮಂಗಳೂರು: ಬುದ್ಧಿಮಾಂದ್ಯೆಯ ಮೇಲೆ ಅತ್ಯಾಚಾರ ➤ 65 ವರ್ಷದ ವೃದ್ದನ ವಿರುದ್ಧ ಪ್ರಕರಣ ದಾಖಲು

(ನ್ಯೂಸ್ ಕಡಬ)newskadaba.com ಮಂಗಳೂರು, ಏ.05. ಬುದ್ಧಿಮಾಂದ್ಯೆಯನ್ನು ಅತ್ಯಾಚಾರಗೈದ ಆರೋಪದಲ್ಲಿ 65 ವರ್ಷದ ವೃದ್ಧನ ವಿರುದ್ಧ ನಗರದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 65 ವರ್ಷ ಪ್ರಾಯದ ರಾಜ್‌ ಭಟ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ. ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಸೂರಿಂಜೆ ಮೂಲದ ಆರೋಪಿ ರಾಜ್‌ಭಟ್ ಬ್ರೋಕರ್ ಕೆಲಸ ಮಾಡಿಕೊಂಡಿದ್ದು, ಆತನು ಮಂಗಳೂರು ಹೊರವಲಯದ ಸುರತ್ಕಲ್ ಪ್ರದೇಶದ ಬುದ್ಧಿಮಾಂದ್ಯೆಯನ್ನು ಆಕೆಯ ಮನೆಯಲ್ಲಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಆರೋಪಿಯು ವಿವಾಹಿತನಾಗಿದ್ದು, ಪತ್ನಿ ಮತ್ತು ಮಕ್ಕಳಿಂದ ದೂರವಾಗಿದ್ದಾನೆ ಎಂದು ತಿಳಿದುಬಂದಿದೆ.

ಮಂಗಳೂರು: ಬುದ್ಧಿಮಾಂದ್ಯೆಯ ಮೇಲೆ ಅತ್ಯಾಚಾರ ➤ 65 ವರ್ಷದ ವೃದ್ದನ ವಿರುದ್ಧ ಪ್ರಕರಣ ದಾಖಲು Read More »

ಕರಾವಳಿ

ಉಜಿರೆ: ಯುವಕನ ಮೇಲೆ ಹಲ್ಲೆ ಪ್ರಕರಣ ➤ ನಾಲ್ವರ ವಿರುದ್ಧ ಕೇಸ್ ದಾಖಲು

 (ನ್ಯೂಸ್ ಕಡಬ)newskadaba.com ಬೆಳ್ತಂಗಡಿ, ಏ.05. ಬಸ್ಸಿನಲ್ಲಿ ಪರಿಚಯಸ್ಥ ಸಹಪ್ರಯಾಣಿಕ ಯುವತಿಯೊಂದಿಗೆ ಮಾತನಾಡಿದ್ದಕ್ಕೆ ಬಸ್ ತಡೆದು ಯುವಕನ ಮೇಲೆ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿ ನಾಲ್ವರ ಮೇಲೆ ಕೇಸ್ ದಾಖಲಾಗಿರುವ ಬಗ್ಗೆ ವರದಿಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ನಿತೇಶ್, ಸಚಿನ್, ಅವಿನಾಸ್ ಮತ್ತು ದಿನೇಶ್ ಮೇಲೆ ಕೇಸ್ ದಾಖಲಿಸಲಾಗಿದೆ.  

ಉಜಿರೆ: ಯುವಕನ ಮೇಲೆ ಹಲ್ಲೆ ಪ್ರಕರಣ ➤ ನಾಲ್ವರ ವಿರುದ್ಧ ಕೇಸ್ ದಾಖಲು Read More »

ಕರಾವಳಿ

ಪುತ್ತೂರು: ವಿವಾಹಿತ ವ್ಯಕ್ತಿ ಆತ್ಮಹತ್ಯೆ

 (ನ್ಯೂಸ್ ಕಡಬ)newskadaba.com ಪುತ್ತೂರು, ಏ.05. ನೆರೆಮನೆಯ ವಿವಾಹಿತ ಮಹಿಳೆಯೊಂದಿಗಿನ ತನ್ನ ಅಕ್ರಮ‌ ಸಂಬಂಧ ತಿಳಿಯಿತೆಂದು ಮರ್ಯಾದೆಗೆ ಅಂಜಿ ವಿವಾಹಿತ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನೆಟ್ಟಣಿಗೆ ಮೂಡ್ನೂರು ಗ್ರಾಮದ ವಜ್ರಮೂಲೆ ಎಂಬಲ್ಲಿ ನಡೆದಿದೆ. ನೆಟ್ಟಣಿಗೆ ಮುಡ್ನೂರು ಗ್ರಾಮದ ವಜ್ರಮೂಲೆ ದಿ. ಕೊರಗರವರ ಪುತ್ರ ಶೀನಪ್ಪ(50)ಆತ್ಮಹತ್ಯೆ ಮಾಡಿಕೊಂಡವರು ಎಂದು ಗುರುತಿಸಲಾಗಿದೆ.  

ಪುತ್ತೂರು: ವಿವಾಹಿತ ವ್ಯಕ್ತಿ ಆತ್ಮಹತ್ಯೆ Read More »

ಕರಾವಳಿ

ಸುಳ್ಯ: ಕೋಳಿ ಪದಾರ್ಥಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯ ➤ ಮಗನನ್ನು ಹೊಡೆದು ಕೊಂದ ಪಾಪಿ ತಂದೆ

(ನ್ಯೂಸ್ ಕಡಬ)newskadaba.com ಸುಳ್ಯ, ಏ.05. ಕೋಳಿ ಪದಾರ್ಥಕ್ಕೆ ನಡೆದ ಜಗಳ‌ಕೊಲೆಯಲ್ಲಿ ಅಂತ್ಯವಾದ ಶಾಕಿಂಗ್ ಘಟನೆ ಕರಾವಳಿಯ ಸುಳ್ಯ ತಾಲೂಕಿನಲ್ಲಿ ನಡೆದಿದೆ. ಶಿವರಾಮ(32) ಮೃತರು ಎಂದು ಗುರುತಿಸಲಾಗಿದೆ. ಮೊಗ್ರ ಏರಣಗುಡ್ಡೆಯ ಮಾತೃಮಜಲು ನಿವಾಸಿ ಶೀನ ಅವರ ಮನೆಯಲ್ಲಿ ಕೋಳಿ ಪದಾರ್ಥ ಮಾಡಲಾಗಿತ್ತು. ‌ಮಗ ಶಿವರಾಮ ರಾತ್ರಿ ತಡವಾಗಿ ಬಂದಾಗ ಪದಾರ್ಥ ಖಾಲಿಯಾಗಿತ್ತು.‌ ಈ ಹಿನ್ನೆಲೆ‌ ಶಿವರಾಮ ಮನೆಯಲ್ಲಿ ಗಲಾಟೆ ಮಾಡಿದ್ದಾರೆ. ಇದಕ್ಕೆ ಕೋಪಗೊಂಡ ಶೀನ ಮಗನಿಗೆ ದೊಣ್ಣೆಯಿಂದ ತಲೆಗೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಶಿವರಾಮ ಅವತ ತಲೆಗೆ

ಸುಳ್ಯ: ಕೋಳಿ ಪದಾರ್ಥಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯ ➤ ಮಗನನ್ನು ಹೊಡೆದು ಕೊಂದ ಪಾಪಿ ತಂದೆ Read More »

ಕರಾವಳಿ, ಕ್ರೈಮ್ ನ್ಯೂಸ್

ಬಂಟ್ವಾಳ: ಹೆಚ್ಚುವರಿ ತಪಾಸಣಾ ಕೇಂದ್ರ ➤ ಪರಿಶೀಲನೆ ಇನ್ನಷ್ಟು ಬಿಗಿ

(ನ್ಯೂಸ್ ಕಡಬ)newskadaba.com ಬಂಟ್ವಾಳ, ಏ.05. ಚುನಾವಣಾ ನೀತಿ ಜಾರಿಯಾಗುತ್ತಿದ್ದಂತೆ ತಪಾಸಣಾ ಕೇಂದ್ರಗಳನ್ನು ಅಳವಡಿಸಲಾಗಿದೆ. ಶಾಶ್ವತವಾದ ಚೆಕ್ ಪೋಸ್ಟ್ ಹೊರತಾಗಿ ಬಿಟ್ಟಿರುವ ರಸ್ತೆಗಳನ್ನು ಸೇರಿಸಿ ಒಳ ಮಾರ್ಗಗಳಿಗೆ ಹೆಚ್ಚುವರಿ ತಪಾಸಣಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಮುಂದಿನ ಎರಡು ದಿನದಲ್ಲಿ ಪ್ಯಾರಾ ಮಿಲಿಟರಿಯನ್ನು ಕರೆಸಿಕೊಳ್ಳಲಾಗುತ್ತಿದ್ದು, ಅವರಿಂದಲೂ ತಪಸಣಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಪಶ್ಚಿಮ ವಲಯ ಐ.ಜಿ. ಡಾ. ಚಂದ್ರಗುಪ್ತ ಹೇಳಿದರು ಎನ್ನಲಾಗಿದೆ.  

ಬಂಟ್ವಾಳ: ಹೆಚ್ಚುವರಿ ತಪಾಸಣಾ ಕೇಂದ್ರ ➤ ಪರಿಶೀಲನೆ ಇನ್ನಷ್ಟು ಬಿಗಿ Read More »

ಕರಾವಳಿ

ಮಂಗಳೂರು: ವಿವಿಧ ಠಾಣೆಗಳಲ್ಲಿ ದ್ವಿಚಕ್ರ ವಾಹನ ಕಳವು ಪ್ರಕರಣ ➤ ನಾಲ್ವರ ಬಂಧನ, ಸೊತ್ತು ವಶಕ್ಕೆ

(ನ್ಯೂಸ್ ಕಡಬ)newskadaba.com ಕಾಪು, ಏ.05. ರಾಷ್ಟ್ರೀಯ ಹೆದ್ದಾರಿ 66ರ ಉಳಿಯಾರಗೋಳಿ ಕೋತಲ ಕಟ್ಟೆಯಲ್ಲಿ ಕಾರಿಗೆ ಲಾರಿ ಢಿಕ್ಕಿ ಹೊಡೆದು ಕಾರು ಜಖಂಗೊಂಡ ಘಟನೆ ನಡೆದಿದೆ. ಮಂಗಳೂರಿನಿಂದ ಉಡುಪಿ ಕಡೆಗೆ ತೆರಳುತ್ತಿದ್ದ ಕಾರಿಗೆ ಲಾರಿ ಢಿಕ್ಕಿ ಹೊಡೆದಿದ್ದು ಲಾರಿ ಢಿಕ್ಕಿ ಹೊಡೆದ ರಭಸಕ್ಕೆ ಕಾರು ಡಿವೈಡರ್ ಮೇಲೇರಿ, ಉಡುಪಿ – ಮಂಗಳೂರು ರಸ್ತೆಗೆ ಅಡ್ಡಲಾಗಿ ನಿಂತು ಬಿಟ್ಟಿದೆ. ಎದುರಿನಿಂದ ಯಾವುದೇ ವಾಹನಗಳು ಬಾರದೇ ಇದ್ದುದರಿಂದ ಕಾರು ಚಾಲಕ ಪವಾಢ ಸಧೃಢ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾಪು ಪೊಲೀಸರು ಸ್ಥಳಕ್ಕೆ

ಮಂಗಳೂರು: ವಿವಿಧ ಠಾಣೆಗಳಲ್ಲಿ ದ್ವಿಚಕ್ರ ವಾಹನ ಕಳವು ಪ್ರಕರಣ ➤ ನಾಲ್ವರ ಬಂಧನ, ಸೊತ್ತು ವಶಕ್ಕೆ Read More »

ಕರಾವಳಿ

ಬೆಳ್ತಂಗಡಿ: ಯುವತಿಯ ಜೊತೆ ಮಾತನಾಡಿದ್ದಕ್ಕೆ ತಂಡದಿಂದ ಯುವಕನೋರ್ವನಿಗೆ ಹಲ್ಲೆ

(ನ್ಯೂಸ್ ಕಡಬ)newskadaba.com ಬೆಳ್ತಂಗಡಿ, ಏ.05. ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭ ಪರಿಚಯಸ್ಥ ಸಹ ಪ್ರಯಾಣಿಕೆಯೊಂದಿಗೆ ಮಾತನಾಡಿದ್ದನ್ನೇ ನೆಪವಾಗಿರಿಸಿ ಯುವಕರ ಗುಂಪೊಂದು ಯುವತಿಗೆ ಹಲ್ಲೆ ನಡೆಸಿದ ಘಟನೆ ತಾಲೂಕಿನ ಉಜಿರೆಯಲ್ಲಿ ವರದಿಯಾಗಿದೆ. ಕಕ್ಕಿಂಜೆ ನಿವಾಸಿ ಶಾಹಿಲ್ (22) ಹಲ್ಲೆಗೆ ಒಳಗಾದ ಯುವಕ ಎಂದು ಗುರುತಿಸಲಾಗಿದೆ. ಈತ ಮಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದು, ಬಸ್ಸಿನಲ್ಲಿ ಬರುತ್ತಿದ್ದ ವೇಳೆ ತನ್ನ ಪರಿಚಯದ ಯುವತಿಯೊಂದಿಗೆ ಮಾತನಾಡುತ್ತಾ ಪ್ರಯಾಣಿಸುತ್ತಿದ್ದ ಎನ್ನಲಾಗಿದೆ. ಯುವತಿ ಬೆಳ್ತಂಗಡಿಯಲ್ಲಿ ಇಳಿದಿದ್ದು, ಬಸ್ಸಿನಲ್ಲಿ ಇವರನ್ನು ಗಮನಿಸಿ ಯಾರೋ ಯುವಕರಿಗೆ ಮಾಹಿತಿ ನೀಡಿದ್ದು, ಈತನನ್ನು ಉಜಿರೆಯಲ್ಲಿ

ಬೆಳ್ತಂಗಡಿ: ಯುವತಿಯ ಜೊತೆ ಮಾತನಾಡಿದ್ದಕ್ಕೆ ತಂಡದಿಂದ ಯುವಕನೋರ್ವನಿಗೆ ಹಲ್ಲೆ Read More »

ಕರಾವಳಿ, ಕ್ರೈಮ್ ನ್ಯೂಸ್

ಕಾರವಾರ: ಕಂದಕಕ್ಕೆ ಉರುಳಿ ಬಿದ್ದ ಬಸ್

(ನ್ಯೂಸ್ ಕಡಬ)newskadaba.com ಕಾರವಾರ, ಏ. 04. ಚಲಿಸುತ್ತಿದ್ದ ಬಸ್ ನ ಸ್ಟಿಯರಿಂಗ್ ತುಂಡಾಗಿ ಅದು ಕಂದಕಕ್ಕೆ ಉರುಳಿದ ಘಟನೆ ಸಿದ್ದಾಪುರ ತಾಲೂಕಿನ 16ನೇ ಮೈಲಿಕಲ್ ಬಳಿ ನಡೆದಿದ್ದು ಪ್ರಯಾಣಿಕರು ಸಿನಿಮೀಯ ರೀತಿಯಲ್ಲಿ ಪಾರಾಗಿದ್ದಾರೆ. ಹಳಿಯಾಳದಿಂದ ಸಾಗರಕ್ಕೆ ಹೋಗುತ್ತಿದ್ದ ಬಸ್‍ನಲ್ಲಿ 47 ಜನ ಪ್ರಯಾಣಿಸುತ್ತಿದ್ದರು. ಕಂದಕಕ್ಕೆ ಉರುಳಿದ ಬಸ್ ಮರಕ್ಕೆ ಡಿಕ್ಕಿ ಹೊಡೆದಿದ್ದರಿಂದ ಅಲ್ಲಿಯೇ ನಿಂತು ಪ್ರಯಾಣಿಕರು ಪಾರಾಗಿದ್ದಾರೆ.

ಕಾರವಾರ: ಕಂದಕಕ್ಕೆ ಉರುಳಿ ಬಿದ್ದ ಬಸ್ Read More »

ಕರಾವಳಿ

ಉಡುಪಿ: ಘಾಟ್ ನಲ್ಲಿ ವಾಹನ ಸಂಚಾರ ಎ.15 ವರೆಗೆ ನಿಷೇಧ ವಿಸ್ತರಣೆ

(ನ್ಯೂಸ್ ಕಡಬ)newskadaba.com ಉಡುಪಿ, ಏ.04. ತೀರ್ಥಹಳ್ಳಿ-ಕುಂದಾಪುರ ರಾಜ್ಯ ಹೆದ್ದಾರಿ 52 ರ ಬಾಳೆಬರೆ ಘಾಟ್‌ ನಲ್ಲಿ ಕಾಂಕ್ರೀಟ್‌ ಪೇವ್‌ ಮೆಂಟ್‌ ಕಾಮಗಾರಿ ಹಿನ್ನಲೆಯಲ್ಲಿ ಬಾಳೆಬರೆ ಘಾಟ್ ನಲ್ಲಿ ವಾಹನ ಸಂಚಾರಕ್ಕೆ ಇದ್ದ ನಿಷೇಧವನ್ನು 10 ದಿನಗಳ ಕಾಲ ಹೆಚ್ಚುವರಿಯಾಗಿ ಮುಂದುವರೆಸಿ ಉಡುಪಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಈ ಮೊದಲು ಎ. 05 ರ ವರೆಗೆ ವಾಹನ ಸಂಚಾರಕ್ಕೆ ನಿಷೇಧ ಹೇರಲಾಗಿತ್ತು, ಇದೀಗ ಕಾಮಗಾರಿ ವಿಳಂವಾಗಿರುವ ಕಾರಣ ಈ ವಾಹನ ಸಂಚಾರದ ನಿಷೇಧವನ್ನು ಎಪ್ರಿಲ್ 15 ರವರೆಗೆ ಮುಂದುವರೆಸಲಾಗಿದ್ದು,

ಉಡುಪಿ: ಘಾಟ್ ನಲ್ಲಿ ವಾಹನ ಸಂಚಾರ ಎ.15 ವರೆಗೆ ನಿಷೇಧ ವಿಸ್ತರಣೆ Read More »

ಕರಾವಳಿ

ಉಪ್ಪಿನಂಗಡಿ: ಬಟ್ಟೆ ಅಂಗಡಿಯಲ್ಲಿ ಅಗ್ನಿ ಅವಘಡ

(ನ್ಯೂಸ್ ಕಡಬ)newskadaba.com ಉಪ್ಪಿನಂಗಡಿ, ಏ.04. ಬಟ್ಟೆ ಅಂಗಡಿಯಲ್ಲಿ ಅಗ್ನಿ ಅವಘಡ ಸಂಭವಿಸಿದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ. ಉಪ್ಪಿನಂಗಡಿಯ ವಿವಾ ಫ್ಯಾಶನ್ ಗೆ ಬೆಂಕಿ ಬಿದ್ದು ಅಗ್ನಿ ಅವಘಡ ಸಂಭವಿಸಿದೆ ಎನ್ನಲಾಗಿದೆ. ಘಟನೆಯಲ್ಲಿ ಬಟ್ಟೆಗಳು ಬೆಂಕಿಗೆ ಆಹುತಿಯಾಗಿರುವ ಬಗ್ಗೆ ಮಾಹಿತಿ ಇದೆ. ಸ್ಥಳದಲ್ಲಿ ಬೆಂಕಿ‌ ನಂದಿಸುವ ಕಾರ್ಯ ನಡೆಯುತ್ತಿದೆ. ಬಹುಮಡಿ ಕಟ್ಟಡದ ಒಂದು ಮತ್ತು ಎರಡನೇ ಹಂತಸ್ತಿನಲ್ಲಿ ಬಟ್ಟೆ ಅಂಗಡಿ ಇದೆ.‌ಬೆಳಿಗ್ಗೆ ಮಳಿಗೆಯಿಂದ ಹೊಗೆ ಬರುವುದು ಕಂಡು ಜನರು ಮಾಹಿತಿ ನೀಡಿದ್ದಾರೆ. ಇದೇ ಬಿಲ್ಡಿಂಗ್ ನ ನೆಲ‌ ಹಂತಸ್ತಿನಲ್ಲಿ

ಉಪ್ಪಿನಂಗಡಿ: ಬಟ್ಟೆ ಅಂಗಡಿಯಲ್ಲಿ ಅಗ್ನಿ ಅವಘಡ Read More »

ಕರಾವಳಿ
Scroll to Top