Mangalore

ಬೆಳ್ತಂಗಡಿ: ಹರೀಶ್ ಪೂಂಜಾರ ಜಯದ ಹಾದಿಗೆ ಮುಳ್ಳಾದ ಬಿಲ್ಲಾವರ ಒಗ್ಗಟ್ಟು ?    

(ನ್ಯೂಸ್ ಕಡಬ)newskadaba.com  ಬೆಳ್ತಂಗಡಿ, ಏ.27. ಈ ಬಾರಿ ರಕ್ಷಿತ್ ಶಿವರಾಂ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು ಅವರನ್ನು ಗೆಲ್ಲಿಸಬೇಕೆಂದು ಬಿಲ್ಲವ ಸಮುದಾಯ ಪ್ರಯತ್ನ ಪಡುತ್ತಿದೆ. ಹಾಗಾಗಿ ಬಿಜೆಪಿ ಅಭ್ಯರ್ಥಿ, ಹಾಲಿ ಶಾಸಕ ಹರೀಶ್ ಪೂಂಜಾ ಅವರಿಗೆ ಈ ಬಾರಿ ಗೆಲುವಿನ ದಾರಿ ಕಠಿಣವಾಗಲಿದೆ ಎನ್ನಲಾಗುತ್ತಿದೆ. ರಕ್ಷಿತ್ ಶಿವರಾಂ ಅವರು ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿದ್ದು, ಈ ಬಾರಿ ಚುನಾವಣಾ ಕಣಕ್ಕೆ ಇಳಿಯುವ ಉದ್ದೇಶದಿಂದ ಸಾಕಷ್ಟು ಮೊದಲೇ ಹೋಂ ವರ್ಕ್ ಕೂಡಾ ಮಾಡಿದ್ದರು.  

ಬೆಳ್ತಂಗಡಿ: ಹರೀಶ್ ಪೂಂಜಾರ ಜಯದ ಹಾದಿಗೆ ಮುಳ್ಳಾದ ಬಿಲ್ಲಾವರ ಒಗ್ಗಟ್ಟು ?     Read More »

ಕರಾವಳಿ

ಬ್ರಹ್ಮಾವರ: ಸ್ಕೂಟರ್ ಮತ್ತು ಬೈಕ್ ನಡುವೆ ಅಪಘಾತ ➤ ಓರ್ವ ಮೃತ್ಯು, ಮತ್ತೋರ್ವ ಗಂಭೀರ

(ನ್ಯೂಸ್ ಕಡಬ)newskadaba.com  ಬ್ರಹ್ಮಾವರ, ಏ.27. ಸ್ಕೂಟರೊಂದು ಬೈಕಿಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಯಡ್ತಾಡಿ ಗ್ರಾಮದ ಮಹಾತ್ಮಾ ಗಾಂಧಿ ಪ್ರೌಢ ಶಾಲೆಯ ಹತ್ತಿರ ನಡೆದಿದೆ ಎಂದು ತಿಳಿದುಬಂದಿದೆ. ಮೃತರನ್ನು ಹೈಕಾಡಿಯ ಮುಹಮ್ಮದ್ ಸಫ್ರಾನ್ ಎ.ಕೆ.(27) ಎಂದು ಗುರುತಿಸಲಾಗಿದೆ. ಸ್ಕೂಟರ್ ಸವಾರ ಭುಜಂಗ ಶೆಟ್ಟಿ (68) ಎಂಬವರು ತೀವ್ರವಾಗಿ ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  

ಬ್ರಹ್ಮಾವರ: ಸ್ಕೂಟರ್ ಮತ್ತು ಬೈಕ್ ನಡುವೆ ಅಪಘಾತ ➤ ಓರ್ವ ಮೃತ್ಯು, ಮತ್ತೋರ್ವ ಗಂಭೀರ Read More »

ಕರಾವಳಿ, ಕ್ರೈಮ್ ನ್ಯೂಸ್

ಜೆಡಿಎಸ್ ಅಭ್ಯರ್ಥಿ ನಾಮಪತ್ರ ಹಿಂಪಡೆದ ಪ್ರಕರಣ         ➤ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ದೂರು ದಾಖಲು

(ನ್ಯೂಸ್ ಕಡಬ)newskadaba.com ಉಳ್ಳಾಲ, ಏ.27. ಮಂಗಳೂರು ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಅಲ್ತಾಫ್ ಕುಂಪಲ ಎಂಬವರನ್ನು ಜೀವ ಬೆದರಿಕೆಯೊಡ್ಡಿ ನಾಮಪತ್ರ ವಾಪಸ್ ಪಡೆದಿರುವ ಘಟನೆಗೆ ಸಂಬಂಧಿಸಿ ಕಾಂಗ್ರೆಸ್ ಬೆಂಬಲಿತ ಮಾಜಿ ಕೌನ್ಸಿಲರುಗಳಿಬ್ಬರು ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಳ್ಳಾಲ ಪುರಸಭೆಯ ಕಾಂಗ್ರೆಸ್ ಬೆಂಬಲಿತ ಮಾಜಿ ಕೌನ್ಸಿಲರುಗಳಾದ ಮುಸ್ತಾಫ ಯಾನೆ ಖಬುರು ಮುಸ್ತಾಫ, ಉಸ್ಮಾನ್ ಕಲ್ಲಾಪು , ರಿಯಾಝ್ ಸೇರಿದಂತೆ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ.  

ಜೆಡಿಎಸ್ ಅಭ್ಯರ್ಥಿ ನಾಮಪತ್ರ ಹಿಂಪಡೆದ ಪ್ರಕರಣ         ➤ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ದೂರು ದಾಖಲು Read More »

ಕರಾವಳಿ

ಏ.29ರಂದು ಮಂಗಳೂರಿನಲ್ಲಿ ಅಮಿತ್‌ ಷಾ ಬೃಹತ್‌ ರೋಡ್‌ ಶೋ         

(ನ್ಯೂಸ್ ಕಡಬ)newskadaba.com ಮಂಗಳೂರು, ಏ.27. ಕರ್ನಾಟಕ ವಿಧಾನಸಭಾ ಚುನಾವಣಾ ಹಿನ್ನೆಲೆ ಇದೇ ಏ.29 ರಂದು ಕೇಂದ್ರ ಗೃಹ ಸಚಿವ ಅಮಿತ್‌ ಷಾ ಮಂಗಳೂರು ನಗರದಲ್ಲಿ ರೋಡ್‌ ಷೋ ನಡೆಸಲಿದ್ದಾರೆ ಎಂದು ವರದಿಯಾಗಿದೆ. ಏ.29 ರಂದು ಸಂಜೆ 4 ಗಂಟೆಗೆ  ಪುರಭವನದ ಕ್ಲಾಕ್‌ ಟವರ್‌ನಿಂದ ಪ್ರಾರಂಭವಾಗಿ ಹಂಪನಕಟ್ಟೆ ವೃತ್ತದ ಮೂಲಕ ಕೆ.ಎಸ್‌ ರಾವ್‌ ರಸ್ತೆಯಲ್ಲಿ ಸಾಗಿ ಮಂಜೇಶ್ವರ ಗೋವಿಂದ ಪೈ ವೃತ್ತದ ವರೆಗೆ ಬೃಹತ್‌ ರೋಡ್‌ ಷೋ ನಡೆಯಲಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಏ.29ರಂದು ಮಂಗಳೂರಿನಲ್ಲಿ ಅಮಿತ್‌ ಷಾ ಬೃಹತ್‌ ರೋಡ್‌ ಶೋ          Read More »

ಕರಾವಳಿ

ಕೀಟ ನಾಶಕ ಸೇವಿಸಿದ ನವ ವಿವಾಹಿತೆ ➤ ಚಿಕಿತ್ಸೆ ಫಲಿಸದೇ ಮೃತ್ಯು..!

(ನ್ಯೂಸ್ ಕಡಬ)newskadaba.com ಪುತ್ತೂರು, ಏ.27. ನವ ವಿವಾಹಿತೆಯೋರ್ವರು ಎರಡು ತಿಂಗಳ ಹಿಂದೆಯಷ್ಟೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಈಕೆ ತವರು ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಬಂಟ್ವಾಳ ತಾಲೂಕು ಕೆದಿಲ ಗ್ರಾಮದ ಗುಡ್ಡಕೋಡಿ ಬಾಳಪ್ಪ ಪೂಜಾರಿಯವರ ಪುತ್ರಿ ಹರ್ಷಿತಾ(28ವ.) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಮದುವೆಯಾದ ಬಳಿಕ ಗಂಡನ ಮನೆಯಲ್ಲಿ ವಾಸ್ತವ್ಯವಿದ್ದ ಹರ್ಷಿತಾರವರು ತನ್ನ ತಾಯಿ ಮನೆಯ ನೆರೆಮನೆಯಲ್ಲಿ ನಡೆದ ಮದುವೆ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಹೋಗಲೆಂದು ಪತಿ ಮನೆಯಿಂದ ತಾಯಿ ಮನೆಗೆ ಹೋಗಿದ್ದರು.

ಕೀಟ ನಾಶಕ ಸೇವಿಸಿದ ನವ ವಿವಾಹಿತೆ ➤ ಚಿಕಿತ್ಸೆ ಫಲಿಸದೇ ಮೃತ್ಯು..! Read More »

ಕರಾವಳಿ, ಕ್ರೈಮ್ ನ್ಯೂಸ್

ಬೆಳ್ತಂಗಡಿ: ಗಾಂಜಾ ಸೇವನೆ ಮಾಡುತ್ತಿದ್ದ ಆರೋಪಿ ಅರೆಸ್ಟ್ !      ➤ 10 ಸಾವಿರ ರೂ. ಮೌಲ್ಯದ ಗಾಂಜಾ ವಶ

(ನ್ಯೂಸ್ ಕಡಬ)newskadaba.com ಬೆಳ್ತಂಗಡಿ, ಏ.27. ಗುರುವಾಯನಕೆರೆ ಇಲ್ಲಿನ ಸರಕಾರಿ ಪ್ರೌಢ ಶಾಲೆಯ ಹತ್ತಿರ ಗಾಂಜಾ ಸೇವನೆ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿರುವ ಘಟನೆ ಬೆಳ್ತಂಗಡಿಯಲ್ಲಿ ವರದಿಯಾಗಿದೆ. ಬೆಳ್ತಂಗಡಿ ಪೊಲೀಸರು ಕಾರ್ಯಚರಣೆ ನಡೆಸಿ ಕುವೆಟ್ಟು ಗ್ರಾಮದ ಮನ್ಸೂರ್ ಎಂಬವರ ಪುತ್ರ ಮೊಹಮ್ಮದ್ ಅಶ್ರಫ್ ಎಂದು ಗುರುತಿಸಲಾಗಿದೆ. ಇವರಿಂದ ಹತ್ತು ಸಾವಿರ ರೂ ಮೌಲ್ಯದ ಗಾಂಜಾ ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಬೆಳ್ತಂಗಡಿ: ಗಾಂಜಾ ಸೇವನೆ ಮಾಡುತ್ತಿದ್ದ ಆರೋಪಿ ಅರೆಸ್ಟ್ !      ➤ 10 ಸಾವಿರ ರೂ. ಮೌಲ್ಯದ ಗಾಂಜಾ ವಶ Read More »

ಕರಾವಳಿ

ಸಚಿವ ಎಸ್. ಅಂಗಾರಗೆ ಅನಾರೋಗ್ಯ    ➤ ಮಂಗಳೂರು ಆಸ್ಪತ್ರೆಗೆ ದಾಖಲು

(ನ್ಯೂಸ್ ಕಡಬ)newskadaba.com ಮಂಗಳೂರು, ಏ.27. ಅನಾರೋಗ್ಯದ ಹಿನ್ನಲೆಯಲ್ಲಿ ಸುಳ್ಯ ಶಾಸಕ ಹಾಗೂ ಸಚಿವ ಎಸ್.ಅಂಗಾರ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಗುರುತಿಸಲಾಗಿದೆ. ಸಚಿವ ಅಂಗಾರ ಅವರು ಕಳೆದ ಎರಡು ದಿನಗಳಿಂದ ಅವರು ಆಸ್ಪತ್ರೆಯಲ್ಲಿದ್ದು, ಚೇತರಿಸಿಕೊಳ್ಳುತ್ತಿರುವುದಾಗಿ ತಿಳಿದು ಬಂದಿದೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಕೆಲವು ದಿನಗಳ ಕಾಲ ಅವರಿಗೆ ವಿಶ್ರಾಂತಿ ಬೇಕಾಗಿದೆ ಎಂದು ಹೇಳಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.  

ಸಚಿವ ಎಸ್. ಅಂಗಾರಗೆ ಅನಾರೋಗ್ಯ    ➤ ಮಂಗಳೂರು ಆಸ್ಪತ್ರೆಗೆ ದಾಖಲು Read More »

ಕರಾವಳಿ

ಬೆಳ್ತಂಗಡಿ: ನದಿ ನೀರಿಗೆ ವಿಷಪ್ರಾಷನ      ➤ನೀರು ಸರಬರಾಜು ಸ್ಥಗಿತ, ಮೀನುಗಳ ಮಾರಣಹೋಮ

(ನ್ಯೂಸ್ ಕಡಬ)newskadaba.com ಬೆಳ್ತಂಗಡಿ, ಏ.27. ನಗರ ಪಂಚಾಯತ್ ವ್ಯಾಪ್ತಿಯಲ್ಲಿ 11 ವಾರ್ಡ್ ಗಳಿಗೆ ನೀರು ಪೂರೈಸುತ್ತಿದ್ದ ಸೋಮಾವತಿ ನದಿ ನೀರಿಗೆ ದುಷ್ಕರ್ಮಿಗಳು ವಿಷ ಬೆರೆಸಿರುವ ಪರಿಣಾಮ ಸಾವಿರಾರು ಮೀನುಗಳ ಮಾರಣಹೋಮವಾಗಿವೆ. ನಗರಕ್ಕೆ ಕುಡಿಯುವ ನೀರಿನ ಪ್ರಮುಖ ಆಶ್ರಯವಾಗಿದೆ. ನಗರಕ್ಕೆ ಪ್ರಸಕ್ತ ಪ್ರತಿ ದಿನ 10 ಲಕ್ಷ ಲೀಟರ್ ನೀರಿನ ಅವಶ್ಯಕತೆಯಿದ್ದು ಇದೇ ನೀರನ್ನು ಅವಲಂಬಿಸಲಾಗಿತ್ತು. ಆದರೆ ವಿಷ ಪ್ರಾಶನವಾಗಿರುವ ಪರಿಣಾಮ ನೀರು ಸರಬರಾಜನ್ನು ಸ್ಥಗಿತಗೊಳಿಸಲಾಗಿದೆ ಎಂದು ವರದಿ ತಿಳಿಸಿದೆ.  

ಬೆಳ್ತಂಗಡಿ: ನದಿ ನೀರಿಗೆ ವಿಷಪ್ರಾಷನ      ➤ನೀರು ಸರಬರಾಜು ಸ್ಥಗಿತ, ಮೀನುಗಳ ಮಾರಣಹೋಮ Read More »

ಕರಾವಳಿ

SDPI ರಾಷ್ಟ್ರೀಯ ನಾಯಕರಿಂದ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ

(ನ್ಯೂಸ್ ಕಡಬ)newskadaba.com ಮಂಗಳೂರು, ಏ.26. ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಫೈಝಿ ಹಾಗೂ ರಾಷ್ಟ್ರೀಯ ಕಾರ್ಯದರ್ಶಿ ಫೈಝಲ್ ಈಝ್ಝುದ್ದೀನ್ ರವರು (ಏ.25) ಮತ್ತು (ಏ.26) ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಬಂಟ್ವಾಳ, ಮೂಡಬಿದ್ರೆ ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಈ ಕ್ಷೇತ್ರದಲ್ಲಿ ಪಕ್ಷದ ಕಾರ್ಯಕರ್ತರನ್ನು, ಸಮಾಜದ ವಿವಿಧ ಮುಖಂಡರನ್ನು ಭೇಟಿಯಾಗಿ ಚರ್ಚೆ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಪಕ್ಷದ ರಾಜ್ಯ, ಜಿಲ್ಲಾ ಹಾಗೂ ಸ್ಥಳೀಯ ನಾಯಕರು ರಾಷ್ಟ್ರೀಯ ಮುಖಂಡರಿಗೆ ಸಾತ್

SDPI ರಾಷ್ಟ್ರೀಯ ನಾಯಕರಿಂದ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ Read More »

ಕರಾವಳಿ

ಬಂಟ್ವಾಳ:  ದಾಖಲೆ ರಹಿತ ನಗದು ಸಾಗಾಟ

(ನ್ಯೂಸ್ ಕಡಬ)newskadaba.com ಬಂಟ್ವಾಳ, ಏ.26. ಫರಂಗಿಪೇಟೆ ಚೆಕ್ ಪೋಸ್ಟ್ ನಲ್ಲಿ ಚುನಾವಣಾ ತಪಾಸಣೆ ನಡೆಯುತ್ತಿದ್ದ ಸಂದರ್ಭ ವಾಹನ ತಪಾಸಣೆ ವೇಳೆ ದಾಖಲೆ ರಹಿತ ನಗದು ಸಾಗಾಟ ಪ್ರಕರಣ ಪತ್ತೆಯಾಗಿದೆ. ಒಟ್ಟು 3 ಲಕ್ಷ ರೂ ವಾಹನದಲ್ಲಿದ್ದು, ಈ ಕುರಿತು ವಾಹನದವರಲ್ಲಿ ದಾಖಲೆ ಕೇಳಿದಾಗ ಸಮರ್ಪಕ ಉತ್ತರ ದೊರೆಯಲಿಲ್ಲ. ಈ ಹಿನ್ನೆಲೆಯಲ್ಲಿ ತಪಾಸಣಾಧಿಕಾರಿಗಳು ನಗದನ್ನು ವಶಪಡಿಸಿಕೊಂಡಿದ್ದಾರೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿ ತಪಾಸಣೆ ನಡೆಸುತ್ತಿದ್ದ ವೇಳೆ ನಗದು ಕಂಡುಬಂದಿದ್ದು, ಕೂಡಲೇ ಅದನ್ನು ಚುನಾವಣಾ ಸಂಬಂಧಿ ಪರಿಶೀಲನಾ ಸಮಿತಿಗೆ

ಬಂಟ್ವಾಳ:  ದಾಖಲೆ ರಹಿತ ನಗದು ಸಾಗಾಟ Read More »

ಕರಾವಳಿ
Scroll to Top