Mangalore

ಮಂಗಳೂರು: ಮೈನಾ ಸದಾನಂದ ಶೆಟ್ಟಿ ಇನ್ನಿಲ್ಲ..!

(ನ್ಯೂಸ್ ಕಡಬ)Newskadaba.com ಮಂಗಳೂರು,ಮೇ.04 ಶ್ರೀದೇವಿ ವಿದ್ಯಾ ಸಮೂಹ ಸಂಸ್ಥೆಗಳ ಮುಖ್ಯಸ್ಥ, ಖ್ಯಾತ ಹೋಟೆಲ್ ಉದ್ಯಮಿ, ಇಂಟರ್‌ ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ನ ಸ್ಥಾಪಕಧ್ಯಕ್ಷ ಎ. ಸದಾನಂದ ಶೆಟ್ಟಿ ಅವರ ಪತ್ನಿ ಮುಲ್ಕಿ ಕುಬೆವೂರು ದೊಡ್ಡಮನೆ ಮೈನಾ ಎಸ್ ಶೆಟ್ಟಿ (75) ಅವರು ಅಲ್ಪ ಕಾಲದ ಆಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮುಲ್ಕಿ ಕುಬೆವೂರು ದೊಡ್ಡಮನೆಯ ಕುಟುಂಬ ಸ್ನೇಹ ಮಿಲನ ವ್ಯವಸ್ಥೆಯಲ್ಲಿ ಮುಂಚೂಣಿಯಲ್ಲಿದ್ದರು. ಜಿಲ್ಲೆಯ ಹಲವಾರು ಪ್ರತಿಷ್ಠಿತ ಕೇಟರಿಂಗ್, ಹೋಟೆಲ್ ಉದ್ಯಮಿಗಳಿಗೆ ಮಾರ್ಗದರ್ಶಿಯಾಗಿದ್ದರು. ಬೆಂಗಳೂರು, ಮಂಗಳೂರಿನಲ್ಲಿ […]

ಮಂಗಳೂರು: ಮೈನಾ ಸದಾನಂದ ಶೆಟ್ಟಿ ಇನ್ನಿಲ್ಲ..! Read More »

ಕರಾವಳಿ

ಬಿಜೆಪಿ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ನಡೆಸಿ, ಕಾಂಗ್ರೆಸ್ ವಿರುದ್ಧ ಕಿಡಿ..!‌ ➤ ಮೂಲ್ಕಿಯಲ್ಲಿ ಅಬ್ಬರಿಸಿದ ಮೋದಿ

(ನ್ಯೂಸ್ ಕಡಬ)Newskadaba.com ಮಂಗಳೂರು,ಮೇ..03 ಪ್ರಧಾನಿ ನರೇಂದ್ರ ಮೋದಿಯವರು ಕರಾವಳಿಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ನಡೆಸಿ, ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದರು.ಮೂಲ್ಕಿಯ ಕಾರ್ನಾಡಿನ ಗುಂಡಾಲು ಪ್ರದೇಶದಲ್ಲಿ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಪರಶುರಾಮ ಸೃಷ್ಟಿ ಎಂದು ತುಳುವಿನಲ್ಲಿ ಮಾತನಾಡಿದರು. “ಪರಶುರಾಮ ಕ್ಷೇತ್ರ ದ ಯೆನ್ನ ಮೋಕೆದ ತುಳುವಪ್ಪೆ ಜೋಕುಲೆಗ್ ಮೋಕೆದ ಸೊಲ್ಮೆಲ್” ಎಂದರು. ಹಿಂದಿನ ಕಾಂಗ್ರೆಸ್‌ ಸರ್ಕಾರಕ್ಕೆ ಮೀನುಗಾರರ ಸಂಕಷ್ಟಗಳು ಕಣ್ಣಿಗೆ ಕಾಣಲಿಲ್ಲ. ಉಡುಪಿಯಲ್ಲಿ ನನ್ನ ಸಹೋದರರ ಮೀನುಗಾರರ ಕುಟುಂಬಗಳಿವೆ ಎಂದು ಮೋದಿಗೆ

ಬಿಜೆಪಿ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ನಡೆಸಿ, ಕಾಂಗ್ರೆಸ್ ವಿರುದ್ಧ ಕಿಡಿ..!‌ ➤ ಮೂಲ್ಕಿಯಲ್ಲಿ ಅಬ್ಬರಿಸಿದ ಮೋದಿ Read More »

ಕರಾವಳಿ

ಪುತ್ತೂರಿನ ಯುವತಿ ವಿಷ ಸೇವಿಸಿ ಬೆಂಗಳೂರಿನಲ್ಲಿ ಆತ್ಮಹತ್ಯೆ..!​

(ನ್ಯೂಸ್ ಕಡಬ)Newskadaba.com ಪುತ್ತೂರು,ಮೇ.03 ಪುತ್ತೂರಿನ ಯುವತಿಯೋರ್ವರು ಬೆಂಗಳೂರಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.ಕೆಯ್ಯೂರು ಗ್ರಾಮದ ಮಾಡಾವು ಸ್ಥಾನತ್ತಾರು ಚಂದ್ರಶೇಖರ ರೈ ಮತ್ತು ಆಶಾ ಕಾರ್ಯಕರ್ತೆ ಸೋಮಾವತಿ ರೈ ದಂಪತಿಯ ಪುತ್ರಿ ಶ್ರುತಿ ಸಿ.ರೈ(22)ಮೃತಪಟ್ಟವರು.ಬೆಂಗಳೂರುನಲ್ಲಿ ಆನಿಮೇಷನ್ ಶಿಕ್ಷಣ ಪಡೆಯುತ್ತಿದ್ದ ಶ್ರುತಿ ಕೋರ್ಸ್ ಮುಗಿಸಿ ಉದ್ಯೋಗದ ಹುಡುಕಾಟದಲ್ಲಿದ್ದರು. ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು,ವಿಷಯ ತಿಳಿದು ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಮೃತದೇಹವನ್ನು ಹುಟ್ಟೂರಿಗೆ  ತಂದು ಅಂತ್ಯಸಂಸ್ಕಾರ ನಡೆಸಲಾಗಿದೆ.    

ಪುತ್ತೂರಿನ ಯುವತಿ ವಿಷ ಸೇವಿಸಿ ಬೆಂಗಳೂರಿನಲ್ಲಿ ಆತ್ಮಹತ್ಯೆ..!​ Read More »

ಕರಾವಳಿ

ವರ್ಕ್‌ ಫ್ರಂ ಹೋಮ್‌ ನೆಪದಲ್ಲಿ 1.45 ಲಕ್ಷ ರೂ. ವಂಚನೆ ಮಾಡಿದ ಅಪರಿಚಿತ ವ್ಯಕ್ತಿ..! ➤ ದೂರು ದಾಖಲು

(ನ್ಯೂಸ್ ಕಡಬ)Newskadaba.com ಮಂಗಳೂರು,ಮೇ.02 ವರ್ಕ್‌ ಫ್ರಂ ಹೋಮ್‌ ಹೆಸರಿನಲ್ಲಿ ಲಿಂಕ್‌ ಕಳುಹಿಸಿ ಟಾಸ್ಕ್ ನೀಡಿ 1.45 ಲಕ್ಷ ರೂ. ವಂಚಿಸಿರುವ ಬಗ್ಗೆ ಮಂಗಳೂರಿನ ಸೆನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಫೆ. 20ರಂದು ಫೇಸ್‌ಬುಕ್‌ನಲ್ಲಿ “ವರ್ಕ್‌ ಫ್ರಂ ಹೋಮ್‌ ವಿದ್‌ ಅಮೆಜಾನ್‌’ ಎಂಬ ಜಾಹೀರಾತು ಕಂಡ ವ್ಯಕ್ತಿಯೊಬ್ಬರು ಅದನ್ನು ಕ್ಲಿಕ್‌ ಮಾಡಿದಾಗ ವಾಟ್ಸ್‌ಆ್ಯಪ್‌ ಪೇಜ್‌ ತೆರೆದುಕೊಂಡಿತ್ತು. ಅದರಲ್ಲಿ ಲಿಂಕ್‌ವೊಂದನ್ನು ಕಳುಹಿಸಲಾಗಿತ್ತು. ಫೆ.21ರಂದು ಲಿಂಕ್‌ನ್ನು ಕ್ಲಿಕ್‌ ಮಾಡಿ ಅದರಲ್ಲಿ ತಿಳಿಸಿದಂತೆ ನೋಂದಣಿ ಮೊತ್ತವಾಗಿ 200 ರೂ. ಪಾವತಿಸಿದ್ದರು.ಇನ್ನು ಟೆಲಿಗ್ರಾಂನಲ್ಲಿ ದೂರುದಾರ

ವರ್ಕ್‌ ಫ್ರಂ ಹೋಮ್‌ ನೆಪದಲ್ಲಿ 1.45 ಲಕ್ಷ ರೂ. ವಂಚನೆ ಮಾಡಿದ ಅಪರಿಚಿತ ವ್ಯಕ್ತಿ..! ➤ ದೂರು ದಾಖಲು Read More »

ಕರಾವಳಿ, ಕರ್ನಾಟಕ

ಹಳ್ಳ ದಾಟುತ್ತಿದ್ದ ಒಂದೇ ಕುಟುಂಬದ ಮೂವರು ನೀರುಪಾಲು

ನ್ಯೂಸ್ ಕಡಬ) newskadaba.com. ಬೀದರ್, ಮೇ.1. ಹಳ್ಳ ದಾಟುತ್ತಿದ್ದಾಗ ಒಂದೇ ಕುಟುಂಬದ ಮೂವರು ನೀರಿನಲ್ಲಿ ಕೊಚ್ಚಿ ಹೋದ ಘಟನೆ ಔರಾದ್‌ನಲ್ಲಿ​ ನಡೆದಿದೆ. ಜಿಲ್ಲೆಯಲ್ಲಿ ಅಕಾಲಿಕ ಮಳೆ ಮುಂದುವರೆದಿದೆ. ಸುರಿದ ಭಾರಿ ಮಳೆಗೆ ಹಳ್ಳಗಳು ನದಿಯಂತಾಗಿವೆ. ಒಂದೇ ಕುಟುಂಬದ ಮೂವರು ಹಳ್ಳ ದಾಟುತ್ತಿದ್ದಾಗ ನೀರಿನ ಸೆಳೆತಕ್ಕೆ ಸಿಕ್ಕು ಕೊಚ್ಚಿ ಹೋದ ಘಟನೆ ಔರಾದ್ ತಾಲೂಕಿನ ಹೆಡಗಾಪೂರ್ ಗ್ರಾಮದಲ್ಲಿ ಸಂಜೆ ನಡೆದಿದೆ.  ಸುನಂಧಾ ಸಂಗಪ್ಪ ಲದ್ದೆ, ಮಗ ಸುಮಿತ್​ ಹಾಗೂ ಮಗಳು ಐಶ್ವರ್ಯ ನಾಪತ್ತೆಯಾಗಿದ್ದಾರೆ. ಸಂಗಪ್ಪ ಲದ್ದೆ ಜೊತೆ ಜಮೀನಿಗೆ

ಹಳ್ಳ ದಾಟುತ್ತಿದ್ದ ಒಂದೇ ಕುಟುಂಬದ ಮೂವರು ನೀರುಪಾಲು Read More »

ಕರ್ನಾಟಕ

ಮಂಗಳೂರಿನ ಕಡಲಿನಲ್ಲಿ ಭಾರತದಲ್ಲೇ ಮೊದಲ ಬಾರಿಗೆ ಸೂಟಿ ಶಿಯರ್ ವಾಟರ್ ಹಕ್ಕಿ ಪತ್ತೆ

(ನ್ಯೂಸ್ ಕಡಬ)newskadaba.com ಮಂಗಳೂರು, ಏ.29. ಭೂಗೋಳದ ದಕ್ಷಿಣ ಭಾಗದಲ್ಲಿ ಕಾಣಸಿಗುವ ಸೂಟಿ ಶಿಯರ್ ವಾಟರ್ ಪಕ್ಷಿಯು ಭಾರತದಲ್ಲೇ ಮೊದಲ ಬಾರಿಗೆ ಮಂಗಳೂರಿನ ಕರಾವಳಿ ಭಾಗದ ಸಮುದ್ರದಲ್ಲಿ ಕಾಣಿಸಿಕೊಂಡಿದೆ. ಸಮುದ್ರದ ಪಕ್ಷಿಗಳನ್ನು ವೀಕ್ಷಿಸಿ ದಾಖಲು ಮಾಡುವ ಕರಾವಳಿ ಬರ್ಡ್ ವಾಚರ್ ನೆಟ್ ವರ್ಕ್ ಇದೇ ಮೊದಲ ಬಾರಿಗೆ ಭಾರತಲ್ಲಿ ಸೂಟಿಶಿಯರ್ ವಾಟರ್ ಎಂಬ ಅಪರೂಪದ ಪಕ್ಷಿಯನ್ನ ಪತ್ತೆ ಮಾಡಿದ್ದು, ಈ ತಂಡದ ಸದಸ್ಯರು ಪ್ರತಿ ವರ್ಷವು ಸಮುದ್ರ ಪಕ್ಷಿಗಳ ಸಮೀಕ್ಷೆ ನಡೆಸುತ್ತಾರೆ.  

ಮಂಗಳೂರಿನ ಕಡಲಿನಲ್ಲಿ ಭಾರತದಲ್ಲೇ ಮೊದಲ ಬಾರಿಗೆ ಸೂಟಿ ಶಿಯರ್ ವಾಟರ್ ಹಕ್ಕಿ ಪತ್ತೆ Read More »

ಕರಾವಳಿ

ಬೆಳ್ತಂಗಡಿ: 9ನೇ ತರಗತಿಯ ಬಾಲಕ ಆತ್ಮಹತ್ಯೆ

(ನ್ಯೂಸ್ ಕಡಬ)newskadaba.com ಬೆಳ್ತಂಗಡಿ, ಏ.29. ತಾಲೂಕು ಪಂಚಾಯತ್ ಕ್ವಾಟ್ರಸ್ ನಲ್ಲಿ ಬಾಲಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ಚಿತ್ರದುರ್ಗದಲ್ಲಿ 9ನೇ ತರಗತಿ‌ ಓದುತ್ತಿದ್ದ ಬಾಲಕ ಶಿವಪ್ರಸಾದ್(15) ಆತ್ಮಹತ್ಯೆ ಮಾಡಿಕೊಂಡ ಬಾಲಕ ಎಂದು ಗುರುತಿಸಲಾಗಿದೆ. ‌ಶಿವಪ್ರಸಾದ್ ಶಾಲೆಗೆ ರಜೆ ಹಿನ್ನೆಲೆ ದೊಡ್ಡಮ್ಮ ಮಂಜುಳ ಎಂಬವರ ಬೆಳ್ತಂಗಡಿಯ ಮನೆಗೆ ಬಂದಿದ್ದರು. ಮಂಜುಳಾ ಅವರು ಬೆಳ್ತಂಗಡಿಯ ಶಿಕ್ಷಣ ಇಲಾಖೆಯ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರು ತಾಲೂಕು ಪಂಚಾಯತ್ ಪಕ್ಕದ ಸರಕಾರಿ ಕ್ವಾಟ್ರಸ್ ನಲ್ಲಿ ವಾಸವಿದ್ದರು. ಇಂದು‌ ಮಂಜುಳ ಕೆಲಸಕ್ಕೆ ಹೋಗಿದ್ದರು. ಅವರ

ಬೆಳ್ತಂಗಡಿ: 9ನೇ ತರಗತಿಯ ಬಾಲಕ ಆತ್ಮಹತ್ಯೆ Read More »

ಕರಾವಳಿ

ಸುಳ್ಯ: ಸಾರ್ವಜನಿಕ ಸ್ಥಳದಲ್ಲಿ ಇಬ್ಬರ ಮೇಲೆ ಹಲ್ಲೆ

(ನ್ಯೂಸ್ ಕಡಬ)newskadaba.com ಸುಳ್ಯ, ಏ.29. ಸರಕಾರಿ ಬಸ್‌ ನಿಲ್ದಾಣದ ಬಳಿ ಇಬ್ಬರು ಕೂಲಿ ಕಾರ್ಮಿಕರನ್ನು ವ್ಯಕ್ತಿಯೋರ್ವರು ಥಳಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ವೈರಲ್ ವಿಡಿಯೋದಲ್ಲಿ ಸುಳ್ಯ KSRTC ಬಸ್‌ ನಿಲ್ದಾಣ ಮುಂಭಾಗದಲ್ಲಿರುವ ನಂದಿನಿ ಮಿಲ್ಕ್ ಸ್ಟೋರ್‌ ಬಳಿ ಇಬ್ಬರು ಕಾರ್ಮಿಕರು ಕುಳಿತಿದ್ದು, ಓರ್ವ ವ್ಯಕ್ತಿ ಅಲ್ಲೆ ಪಕ್ಕದಲ್ಲಿರುವ ಬ್ಯಾಗ್‌ ಒಂದನ್ನು ತೋರಿಸಿ ಇದನ್ನು ಓಪನ್‌ ಮಾಡಿದವರು ಯಾರು ಎಂದು ಪ್ರಶ್ನಿಸಿ ಥಳಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.  

ಸುಳ್ಯ: ಸಾರ್ವಜನಿಕ ಸ್ಥಳದಲ್ಲಿ ಇಬ್ಬರ ಮೇಲೆ ಹಲ್ಲೆ Read More »

ಕರಾವಳಿ

ಮಂಗಳೂರು: ನಾಳೆ(ಏ.30)ಅಮಿತ್ ಶಾ ರೋಡ್ ಶೋ     ➤ ವಾಹನ ಸಂಚಾರದಲ್ಲಿ ಬದಲಾವಣೆ

(ನ್ಯೂಸ್ ಕಡಬ)newskadaba.com ಮಂಗಳೂರು, ಏ.29. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗಂಟೆಯವರೆಗೆ ಮಂಗಳೂರು ನಗರದ ಟೌನ್‌ಹೌಲ್‌ನಿಂದ ನವಭಾರತ ಸರ್ಕಲ್‌ವರೆಗೆ ರೋಡ್‌ ಶೋ ನಡೆಸಲಿರುವ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆಯನ್ನು ಮಾಡಲಾಗಿದೆ. ಉಡುಪಿ-ಮಂಗಳೂರು ರಸ್ತೆಯಲ್ಲಿ ಸಂಚರಿಸುವ ಎಲ್ಲ ಬಸ್‌ಗಳು ಕೊಟ್ಟಾರಚೌಕಿ-ಕೆಪಿಟಿ-ನಂತೂರು-ಶಿವಭಾಗ್-ಬೆಂದೂರ್‌ವೆಲ್-ಕರಾವಳಿ ಸರ್ಕಲ್-ಕಂಕನಾಡಿ ಸರ್ಕಲ್-ವೆಲೆನ್ಸಿಯಾ-ಮಂಗಳಾದೇವಿವರೆಗೆ ಸಂಚರಿಸಬೇಕು ಮತ್ತು ಅದೇ ಮಾರ್ಗದಲ್ಲಿ ವಾಪಸ್ ಹೋಗಬೇಕು. ಉಡುಪಿ ಕಡೆಯಿಂದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಬರುವ ಬಸ್‌ಗಳು ಕೊಟ್ಟಾರಚೌಕಿ-ಕೆಪಿಟಿ-ಬಟ್ಟಗುಡ್ಡೆ, ಬಿಜೈ-ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಹೋಗಬೇಕು. ತಲಪಾಡಿ ಮತ್ತು ಪಡೀಲ್ ಕಡೆಯಿಂದ

ಮಂಗಳೂರು: ನಾಳೆ(ಏ.30)ಅಮಿತ್ ಶಾ ರೋಡ್ ಶೋ     ➤ ವಾಹನ ಸಂಚಾರದಲ್ಲಿ ಬದಲಾವಣೆ Read More »

ಕರಾವಳಿ

ಪುತ್ತೂರು: ಹರಿವೆ ಸೊಪ್ಪಿನ ಪದಾರ್ಥ ಸೇವಿ ಮೂವರು ಅಸ್ವಸ್ಥ       ➤ ಆಸ್ಪತ್ರೆಗೆ ದಾಖಲು

(ನ್ಯೂಸ್ ಕಡಬ)newskadaba.com ಪುತ್ತೂರು, ಏ.29. ಮನೆಯಲ್ಲೇ ಬೆಳೆದ ಹರಿವೆ ಸೊಪ್ಪಿನ ಪದಾರ್ಥ ಸೇವಿಸಿ ಅಸ್ವಸ್ಥಗೊಂಡು ಮೂವರು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಬೆಳ್ಳಿಪ್ಪಾಡಿ ಗ್ರಾಮದ ಕೈಲಾಜೆ ಎಂಬವಲ್ಲಿ ನಡೆದಿದೆ. ಬೆಳ್ಳಿಪ್ಪಾಡಿಯ ಕೈಲಾಜೆ ಕೊರಗಪ್ಪ ಗೌಡ ಹಾಗೂ ಅವರ ಪತ್ನಿ ಲಲಿತಾ ಹಾಗೂ ಮನೆಗೆ ಬಂದಿದ್ದ ರಮೇಶ ಅಡ್ಕರಗುರಿ ಆಸ್ಪತ್ರೆಗೆ ದಾಖಲಾದವರು ಎಂದು ವರದಿಯಾಗಿದೆ.  

ಪುತ್ತೂರು: ಹರಿವೆ ಸೊಪ್ಪಿನ ಪದಾರ್ಥ ಸೇವಿ ಮೂವರು ಅಸ್ವಸ್ಥ       ➤ ಆಸ್ಪತ್ರೆಗೆ ದಾಖಲು Read More »

ಕರಾವಳಿ
Scroll to Top