Mangalore

ಉಪ್ಪಿನಂಗಡಿ: ಮನೆಗೆ ಮರ ಬಿದ್ದು ಅಪಾರ ನಷ್ಟ ➤ ಪಕ್ಷೇತರ ಅಭ್ಯರ್ಥಿ ಪುತ್ತಿಲ ಭೇಟಿ

(ನ್ಯೂಸ್ ಕಡಬ)Newskadaba.com ಉಪ್ಪಿನಂಗಡಿ, ಮೇ.13. ಉಪ್ಪಿನಂಗಡಿ ಅಡೆಕ್ಕಲ್ ಬೇರಿಕೆ ಶಾಂತಪ್ಪ ಪೂಜಾರಿಯವರ ಮನೆಗೆ ಮರ ಬಿದ್ದ ಪರಿಣಾಮ ಅಪಾರ ನಷ್ಟ ಉಂಟಾಗಿದೆ ಎಂದು ವರದಿ ತಿಳಿಸಿದೆ. ಸ್ಥಳಕ್ಕೆ ಪುತ್ತೂರು ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಭೇಟಿ ನೀಡಿ ಪರಿಶೀಲನೆ ನಡೆಸಿರುವುದಾಗಿ ವರದಿ ತಿಳಿಸಿದೆ.

ಉಪ್ಪಿನಂಗಡಿ: ಮನೆಗೆ ಮರ ಬಿದ್ದು ಅಪಾರ ನಷ್ಟ ➤ ಪಕ್ಷೇತರ ಅಭ್ಯರ್ಥಿ ಪುತ್ತಿಲ ಭೇಟಿ Read More »

ಕರಾವಳಿ

ಬೆಳ್ತಂಗಡಿ 4ನೇ ಸುತ್ತಿನ ಮತ ಎಣಿಕೆ ➤ ಹರೀಶ್ ಪೂಂಜಾ ಮುನ್ನಡೆ 

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ .13. ಕರಾವಳಿಯ ತಡಿಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳಿದ್ದು, ಮಂಗಳೂರು, ಮಂಗಳೂರು ದಕ್ಷಿಣ, ಮಂಗಳೂರು ಉತ್ತರ, ಪುತ್ತೂರು, ಬಂಟ್ವಾಳ, ಮೂಡಬಿದಿರೆ, ಬೆಳ್ತಂಗಡಿ ಮತ್ತು ಸುಳ್ಯ ಇಲ್ಲಿನ 8 ವಿಧಾನಸಭಾ ಕ್ಷೇತ್ರಗಳಿವೆ. ಸದ್ಯ ಮತ ಎಣಿಕೆ ನಡೆಯುತ್ತಿದ್ದು ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಎಷ್ಟು ಮತಗಳನ್ನು ಗಳಿಸಿದ್ದಾರೆ, ಯಾರು ಮುನ್ನಡೆಯಲ್ಲಿದ್ದಾರೆ ಎಂಬ ವಿವರ ಇಲ್ಲಿದೆ. ಬೆಳ್ತಂಗಡಿ :4th round ಬಿಜೆಪಿ – ಹರೀಶ್ ಪೂಂಜಾ -23643 ಕಾಂಗ್ರೆಸ್ –

ಬೆಳ್ತಂಗಡಿ 4ನೇ ಸುತ್ತಿನ ಮತ ಎಣಿಕೆ ➤ ಹರೀಶ್ ಪೂಂಜಾ ಮುನ್ನಡೆ  Read More »

ಕರಾವಳಿ

ಮಂಗಳೂರು: ‘ತುಡರ್’ ತುಳು ಸಿನಿಮಾದ ಪೋಸ್ಟರ್ ಬಿಡುಗಡೆ

(ನ್ಯೂಸ್ ಕಡಬ)newskadaba.com ಮಂಗಳೂರು, ಮೇ.12. ತುಳುನಾಡ ಮಾಣಿಕ್ಯ’ ಅರವಿಂದ್ ಬೋಳಾರ್ ಅವರು ‘ತುಡರ್’ ತುಳು ಚಲನಚಿತ್ರದ ಪೋಸ್ಟರ್ ಅನ್ನು ಬಿಡುಗಡೆಗೊಳಿಸಿದ್ದಾರೆ. ಸುಮುಖ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ವಿಲ್ಸನ್ ರೆಬೆಲ್ಲೋ ಅವರು ‘ತುಡರ್’ ಸಿನಿಮಾವನ್ನು ನಿರ್ಮಿಸಿದ್ದು,ಈ ಚಿತ್ರವನ್ನು ಎಲ್ಟನ್ ಮಸ್ಕರೇನಸ್ ಮತ್ತು ತೇಜಸ್ ಪೂಜಾರಿ ನಿರ್ದೇಶಿಸಿದ್ದಾರೆ. ಇನ್ನು ಸಂಭಾಷಣೆಯನ್ನು ಮೋಹನ್ ರಾಜ್ ಬರೆದಿದ್ದಾರೆ, ಸಂಗೀತವನ್ನು ಪ್ಯಾಟ್ಸನ್ ಪಿರೇರಾ, ಛಾಯಾಗ್ರಹಣವನ್ನು ವಿಜೇತ್ ಆರ್ ನಾಯಕ್ ಮಾಡಿದ್ದಾರೆ.

ಮಂಗಳೂರು: ‘ತುಡರ್’ ತುಳು ಸಿನಿಮಾದ ಪೋಸ್ಟರ್ ಬಿಡುಗಡೆ Read More »

ಕರಾವಳಿ

ಮಂಗಳೂರು: ಎನ್‌ಐಟಿಕೆ ಸ್ಟ್ರಾಂಗ್ ರೂಮ್ ಸುತ್ತ ಬಿಗಿ ಬಂದೋಬಸ್ತ್

(ನ್ಯೂಸ್ ಕಡಬ)newskadaba.com ಮಂಗಳೂರು, ಮೇ.12. ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆಗೆ ಆರು ಗಂಟೆಗೆ ಮತದಾನ ಮುಗಿದಿದ್ದು ಅಭ್ಯರ್ಥಿಗಳ ಭವಿಷ್ಯ ಇವಿಎಂನಲ್ಲಿ ಭದ್ರವಾಗಿದ್ದು ಇವುಗಳನ್ನು ಎನ್‌ಐಟಿಕೆ  ಸ್ಟ್ರಾಂಗ್ ರೂಮ್ ನಲ್ಲಿ ಇರಿಸಲಾಗಿದೆ. ಇವಿಎಂ ಯಂತ್ರಗಳಿರುವ ಎನ್‌ಐಟಿಕೆ  ಸ್ಟ್ರಾಂಗ್ ರೂಮ್ ಕೊಠಡಿಯನ್ನು ಸಂಪೂರ್ಣವಾಗಿ ಅಧಿಕಾರಿಗಳು ಸೀಲ್ ಮಾಡಿದ್ದಾರೆ. ಕಿಟಕಿ, ಬಾಗಿಲುಗಳನ್ನೂ ಮುಚ್ಚಿದ್ದಾರೆ. ಎನ್ ಐ ಟಿಕೆ ಸುತ್ತ ಪೊಲೀಸರು ಮತ್ತು ಅರೆಸೇನಾಪಡೆ ಹದ್ದಿನ ಕಣ್ಣಿರಿಸಿದ್ದಾರೆ.

ಮಂಗಳೂರು: ಎನ್‌ಐಟಿಕೆ ಸ್ಟ್ರಾಂಗ್ ರೂಮ್ ಸುತ್ತ ಬಿಗಿ ಬಂದೋಬಸ್ತ್ Read More »

ಕರಾವಳಿ

ಮಂಗಳೂರು: ತಪಾಸಣೆ ವೇಳೆ ಜೈಲು ಸಿಬ್ಬಂದಿ ಬಳಿ ಗಾಂಜಾ ಪತ್ತೆ

(ನ್ಯೂಸ್ ಕಡಬ)newskadaba.com ಮಂಗಳೂರು, ಮೇ.12. ನಗರದ ಜಿಲ್ಲಾ ಕಾರಾಗೃಹದ ಸಿಬ್ಬಂದಿಯೋರ್ವನ ಬಳಿ ಗಾಂಜಾ ಪತ್ತೆಯಾಗಿದೆ. ಕೆಐಎಸ್ಎ‌ಫ್‌ ನವರು ತಪಾಸಣೆ ಮಾಡುವಾಗ ಜೈಲಿನ ವೀಕ್ಷಕನೋರ್ವನ ಬಳಿ ಸುಮಾರು 50 ಗ್ರಾಂ ಗಾಂಜಾ ಪತ್ತೆಯಾಗಿದ್ದು, ಆತನನ್ನು ಬರ್ಕೆ ಪೊಲೀಸರು ವಶಕ್ಕೆ ಪಡೆದಿದ್ದಾರೆ‌ ಎಂದು ತಿಳಿದು ಬಂದಿದೆ.

ಮಂಗಳೂರು: ತಪಾಸಣೆ ವೇಳೆ ಜೈಲು ಸಿಬ್ಬಂದಿ ಬಳಿ ಗಾಂಜಾ ಪತ್ತೆ Read More »

ಕರಾವಳಿ, ಕ್ರೈಮ್ ನ್ಯೂಸ್

ಮಂಗಳೂರು: ಕದ್ರಿ ದೇಗುಲದಲ್ಲಿ ಆವರಣದಲ್ಲಿ ಅನುಮಾನಸ್ಪದ ಓಡಾಟ ➤ ಮೂವರು ಆರೋಪಿಗಳು ವಶಕ್ಕೆ

(ನ್ಯೂಸ್ ಕಡಬ)newskadaba.com ಮಂಗಳೂರು, ಮೇ.12. ಕದ್ರಿ ದೇವಸ್ಥಾನದ ಆವರಣದಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಮೂವರು ಯುವಕರನ್ನು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ. ದೇವಸ್ಥಾನದ ಆವರಣದಲ್ಲಿ ಅಪರಿಚಿತರು ಓಡಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಸ್ಥಳೀಯರು, ದೇವಸ್ಥಾನಕ್ಕೆ ಭೇಟಿ ನೀಡಿದ ಅವರನ್ನು ವಿಚಾರಿಸಿದ್ದಾರೆ. ಯುವಕರು ದೇವಸ್ಥಾನದ ಅಂಗಣಕ್ಕೆ ಬೈಕ್ ತಂದಿದ್ದಲ್ಲದೇ ಚಪ್ಪಲಿ ಧರಿಸಿ ಅಡ್ಡಾಡುತ್ತಿದ್ದದ್ದು ಭಕ್ತರ ಅಕ್ರೋಶಕ್ಕೆ ಕಾರಣವಾಗಿತ್ತು. ಯುವಕರನ್ನು ವಿಚಾರಿಸಿದಾಗ ತಾವು ಅಸೈಗೋಳಿಯಿಂದ ಕಾಟಿಪಳ್ಳಕ್ಕೆ ಹೋಗುವವರಾಗಿದ್ದು, ತಪ್ಪಾಗಿ ಗೂಗಲ್ ಮ್ಯಾಪ್ ನೋಡಿಕೊಂಡು ಹೋಗುವಾಗ ದಾರಿ ತಪ್ಪಿ ಇಲ್ಲಿಗೆ ಬಂದಿರುವುದಾಗಿ

ಮಂಗಳೂರು: ಕದ್ರಿ ದೇಗುಲದಲ್ಲಿ ಆವರಣದಲ್ಲಿ ಅನುಮಾನಸ್ಪದ ಓಡಾಟ ➤ ಮೂವರು ಆರೋಪಿಗಳು ವಶಕ್ಕೆ Read More »

ಕರಾವಳಿ

ಮೂಡಬಿದಿರೆ: ಕ್ಷುಲ್ಲಕ ಕಾರಣಕ್ಕೆ ಚೂರಿಯಿಂದ ಇರಿದು ಕೊಲೆ

(ನ್ಯೂಸ್ ಕಡಬ)newskadaba.com ಮೂಡಬಿದಿರೆ, ಮೇ.11. ಯುವಕನೋರ್ವನಿಗೆ ಚೂರಿಯಿಂದ ಇರಿದು ಕೊಲೆ‌ ಮಾಡಿರುವ ಘಟನೆ ಮೂಡುಬಿದಿರೆ ಪುರಸಭೆ ವ್ಯಾಪ್ತಿಯ ಗಂಟಾಲ್ಕಟ್ಟೆ ಎಂಬಲ್ಲಿ ನಡೆದಿದೆ. ಮೃತರನ್ನು ಜಮಾಲ್ ಎಂದು ಗುರುತಿಸಲಾಗಿದೆ. ಮೃತ ಜಮಾಲ್ ನ ತಂಗಿಯ ಗಂಡ, ಚಿಕ್ಕಮಗಳೂರು ಮೂಲದ ಸುಹೈಬ್ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ಮೂಡಬಿದಿರೆ: ಕ್ಷುಲ್ಲಕ ಕಾರಣಕ್ಕೆ ಚೂರಿಯಿಂದ ಇರಿದು ಕೊಲೆ Read More »

ಕರಾವಳಿ

ಪ್ರೇಕ್ಷಾ ಆತ್ಮಹತ್ಯೆ ಪ್ರಚೋದನೆ ಆರೋಪ ಎದುರಿಸುತ್ತಿದ್ದ ಯುವಕ ಸೂಸೈಡ್

(ನ್ಯೂಸ್ ಕಡಬ)newskadaba.com ಉಳ್ಳಾಲ, ಮೇ.11. ಎರಡು ವರುಷಗಳ ಹಿಂದೆ ಕುಂಪಲದ ಆಶ್ರಯ ಕಾಲನಿಯ ಮನೆಯಲ್ಲಿ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ರೂಪದರ್ಶಿ ಪ್ರೇಕ್ಷ ಸಾವಿಗೆ ಪ್ರಚೋದನೆ ನೀಡಿದ ಆರೋಪ ಎದುರಿಸುತ್ತಿದ್ದ ಯುವಕ ನೇಣು ಬಿಗಿದು ಆತ್ಮಹತ್ಯೆಗೈದಿದ್ದಾನೆ ಎಂದು ತಿಳಿದುಬಂದಿದೆ. ಕುತ್ತಾರು, ಮುಂಡೋಳಿ ನಿವಾಸಿ ಯತಿರಾಜ್ ಗಟ್ಟಿ(20)ಆತ್ಮ ಹತ್ಯೆಗೈದ ಯುವಕ. ಯತಿರಾಜ್ ತನ್ನ ಮನೆಯ ಹಿಂದಿನ ಚಿಕ್ಕಮ್ಮನ ಮನೆಯ ಎದುರಿನ ಸಿಟ್ ಔಟ್ನ ಕಬ್ಬಿಣದ ಹುಕ್ಸ್ ಒಂದಕ್ಕೆ ನೇಣು ಬಿಗಿದು ಆತ್ಮ ಹತ್ಯೆಗೈದಿದ್ದಾನೆ. ಸ್ಥಳಕ್ಕೆ ಬಂದ ಉಳ್ಳಾಲ ಪೊಲೀಸರು ಮೃತದೇಹವನ್ನ

ಪ್ರೇಕ್ಷಾ ಆತ್ಮಹತ್ಯೆ ಪ್ರಚೋದನೆ ಆರೋಪ ಎದುರಿಸುತ್ತಿದ್ದ ಯುವಕ ಸೂಸೈಡ್ Read More »

ಕರಾವಳಿ, ಕ್ರೈಮ್ ನ್ಯೂಸ್

ಉಡುಪಿ: ವಿಶೇಷ ಚೆಕ್ ಪೋಸ್ಟ್ ಗಳ ತೆರವು

(ನ್ಯೂಸ್ ಕಡಬ)newskadaba.com ಉಡುಪಿ, ಮೇ.11. ಜಿಲ್ಲೆಗಳಲ್ಲಿ  ಸಂಪೂರ್ಣವಾಗಿ ಮತದಾನ ಪ್ರಕ್ರಿಯೆ  ಮುಕ್ತಯಗೊಂಡಿದ್ದು , ಮುನ್ನೆಚ್ಚರಿಕೆ ಕ್ರಮದಿಂದ ನಿರ್ಮಿಸಿದ್ದ ಚೆಕ್‌ಪೋಸ್ಟ್‌ಗಳನ್ನು ತೆರವುಗೊಳಿಸಲಾಗಿದೆ. ಅರೆ ಸೇನಾಪಡೆಯ ಸುಮಾರು 19 ತಂಡಗಳು ಆಗಮಿಸಿದ್ದು,  ಸುಮಾರು 2 ಸಾವಿರ  ಸಿಬ್ಬಂದಿ ಜಿಲ್ಲೆಯಲ್ಲಿ ಕರ್ತವ್ಯದಲ್ಲಿದ್ದು, ಇದಲ್ಲದೇ ಮಹಾರಾಷ್ಟ್ರ ಹಾಗೂ ತಮಿಳುನಾಡು ಪೊಲೀಸರೂ ಆಗಮಿಸಿದ್ದರು.  

ಉಡುಪಿ: ವಿಶೇಷ ಚೆಕ್ ಪೋಸ್ಟ್ ಗಳ ತೆರವು Read More »

ಕರಾವಳಿ

ಸುಬ್ರಹ್ಮಣ್ಯ: ಮತದಾನ ಬಹಿಷ್ಕರಿಸಿ ಆಕ್ರೋಶ ➤ ಸಂಕ ನಿರ್ಮಿಸಲು ಶ್ರಮಸೇವೆ

(ನ್ಯೂಸ್ ಕಡಬ)newskadaba.com ಸುಬ್ರಮಣ್ಯ, ಮೇ.11. ಕಡಬ ತಾಲೂಕಿನ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಐನಕಿದು ಗ್ರಾಮದ ಕುಜುಂಬಾರ್ ನಲ್ಲಿ ಸೇತುವೆ ನಿರ್ಮಿಸುವಂತೆ ಹಲವಾರು ವರ್ಷಗಳಿಂದ ಬೇಡಿಕೆ ಇದ್ದರೂ ಅದನ್ನು ಈಡೇರಿಸದ ಹಿನ್ನಲೆಯಲ್ಲಿ ಆ ಭಾಗದ ಜನರು ಮತದಾನದಲ್ಲಿ ಭಾಗವಹಿಸದೆ ಹೊಳೆಗೆ ತಾತ್ಕಲಿಕ ಮರದ ಸಂಕ ನಿರ್ಮಿಸಿದಲು ಶ್ರಮಸೇವೆ ನಡೆಸಿದ ಘಟನೆ ನಡೆದಿದೆ. ಮತದಾನ ಬಹಿಷ್ಕರಿಸುವ ಬ್ಯಾನರ್ ಹಿಂದೆಯೇ ಅಳವಡಿಸಿದ್ದು ಅಧಿಕಾರಿಗಳು ಬಂದು ಮನವೊಲಿಸುವ ಪ್ರಯತ್ನ ಮಾಡಿದ್ದರು. ಆದರೆ ಯಾವುದೇ ಭರವಸೆ ನೀಡದ ಹಿನ್ನಲೆ ೩೦ ಕ್ಕೂ ಹೆಚ್ಚು

ಸುಬ್ರಹ್ಮಣ್ಯ: ಮತದಾನ ಬಹಿಷ್ಕರಿಸಿ ಆಕ್ರೋಶ ➤ ಸಂಕ ನಿರ್ಮಿಸಲು ಶ್ರಮಸೇವೆ Read More »

ಕರಾವಳಿ
Scroll to Top