Mangalore

ಕಡ್ಯ-ಕೊಣಾಜೆ: ಯೋಗ ದಿನಾಚರಣೆ

(ನ್ಯೂಸ್ ಕಡಬ) newskadaba.com ಕಲ್ಲುಗುಡ್ಡೆ, ಜೂನ್.22. ಕೊಣಾಜೆ ಉನ್ನತ ಹಿ.ಪ್ರಾ. ಶಾಲಾ ವತಿಯಿಂದ ಕಡ್ಯ-ಕೊಣಾಜೆ ಶ್ರೀ ದುರ್ಗಾಂಬಿಕಾ ಭಜನಾ ಮಂದಿರದಲ್ಲಿ ವಿಶ್ವ ಯೋಗದಿನಾಚರಣೆಯನ್ನು ಶುಕ್ರವಾರ ಆಚರಿಸಲಾಯಿತು. ಕಾರ್ಯಕ್ರಮವನ್ನು ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಶಿವಪ್ಪ ಗೌಡ ದೀಪ ಬೆಳಗಿಸಿ ಉದ್ಘಾಟಿಸಿದರು. ಯೋಗ ಶಿಕ್ಷಕರಾದ ವಾಸುದೇವ ಭಟ್ ಕಡ್ಯ ಯೋಗ ಪ್ರಾತ್ಯಕ್ಷಿಕೆ ಮೂಲಕ ಮಕ್ಕಳಿಗೆ ಯೋಗಾಭ್ಯಾಸ ಮಾಡಿಸಿದರು. ಶಾಲಾ ಮುಖ್ಯ ಶಿಕ್ಷಕ ರಾಮಕೃಷ್ಣ ಕೆ. ಯೋಗದ ಮಹತ್ವವನ್ನು ವಿವರಿಸಿದರು. ಶಿಕ್ಷಕರಾದ ಹಾಲೇಶ್, ನಾಗವೇಣಿ, ಪ್ರಮೀಳಾ, ಲತಾ ಸಹಕರಿಸಿದರು. ಅಜಿತ್ ಜೈನ್ ವಂದಿಸಿದರು. […]

ಕಡ್ಯ-ಕೊಣಾಜೆ: ಯೋಗ ದಿನಾಚರಣೆ Read More »

ಕರಾವಳಿ

ಅಡೆಂಜ ಶಾಲೆ: ಯೋಗದಿನಾಚರಣೆ

(ನ್ಯೂಸ್ ಕಡಬ) newskadaba.com ಕಲ್ಲುಗುಡ್ಡೆ, ಜೂನ್.22.ನೂಜಿಬಾಳ್ತಿಲ ಗ್ರಾಮದ ಅಡೆಂಜ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಶುಕ್ರವಾರ ಆಚರಿಸಾಯಿತು. ಶಾಲಾ ಮಕ್ಕಳು ಸಾಮೂಹಿಕವಾಗಿ ಯೋಗಾಸನಗಳನ್ನು ಮಾಡಿದರು. ಮುಖ್ಯ ಶಿಕ್ಷಕಿ ಏಲಿಯಮ್ಮ ಯೋಗದ ಬಗ್ಗೆ ಮಾಹಿತಿ ನೀಡಿದರು. ಶಿಕ್ಷಕರಾದ ರವಿಕುಮಾರ್ ಜಿ.ಆರ್. ಸ್ವಾಗತಿಸಿ ವಂದಿಸಿದರು. ಶಿಕ್ಷಕಿ ವೀಣಾ ಸಹಕರಿಸಿದರು.

ಅಡೆಂಜ ಶಾಲೆ: ಯೋಗದಿನಾಚರಣೆ Read More »

ಕರಾವಳಿ

ಎಂ. ಗೋಪಾಲ ಸ್ವಾಮಿ ಪ್ರವಾಸ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.22.ಎಂ. ಗೋಪಾಲ ಸ್ವಾಮಿ ಮಾನ್ಯ ಸಂಸದೀಯ ಕಾರ್ಯದರ್ಶಿಗಳು, ಜಲಸಂಪನ್ಮೂಲ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವರ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ ಇಂತಿವೆ. ಜೂನ್ 24 ರಂದು ಬೆಳಿಗ್ಗೆ 10.30 ಗಂಟೆಗೆ ಮಂಗಳೂರಿನ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಗೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 12.30 ಗಂಟೆಗೆ ಮಂಗಳೂರಿನಿಂದ ಉಡುಪಿಗೆ ತೆರಳುವರು.

ಎಂ. ಗೋಪಾಲ ಸ್ವಾಮಿ ಪ್ರವಾಸ Read More »

ಕರಾವಳಿ

ಪೆರ್ನಾಲ್ ಸಂದೋಲ ಮತ್ತು ಕಿನಾದಿ ಬ್ಯಾರಿ ಘಝಲ್ ➤ಸಿಡಿ ಬಿಡುಗಡೆ ಸಮಾರಂಭ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.22.ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ವತಿಯಿಂದ 2019 ಜೂನ್ 24 ರಂದು ಸಂಜೆ 4.30 ಗಂಟೆಗೆ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ “ಪೆರ್ನಾಲ್ ಸಂದೋಲ” ಮತ್ತು “ಕಿನಾದಿ” ಬ್ಯಾರಿ ಘಝಲ್ ಸಿಡಿ ಬಿಡುಗಡೆ’ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ನಗರಾಭಿವೃದ್ದಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ ರವರು ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಅಕಾಡೆಮಿಯ ಅಧ್ಯಕ್ಷರಾದ ಕರಂಬಾರ್ ಮಹಮದ್ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿರುವರು. ಬೋಳಂಗಡಿ ಹವ್ವಾ ಜುಮಾ ಮಸ್ಜಿದ್

ಪೆರ್ನಾಲ್ ಸಂದೋಲ ಮತ್ತು ಕಿನಾದಿ ಬ್ಯಾರಿ ಘಝಲ್ ➤ಸಿಡಿ ಬಿಡುಗಡೆ ಸಮಾರಂಭ Read More »

ಕರಾವಳಿ

ಡಿ ದೇವರಾಜ ಅರಸು ಅಭಿವೃದ್ದಿ ನಿಗಮದ ಅಧ್ಯಕ್ಷರ ಪ್ರವಾಸ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.22.ಡಿ ದೇವರಾಜ ಅರಸು ಅಭಿವೃದ್ದಿ ನಿಗಮದ ಅಧ್ಯಕ್ಷ ಡಾ ಕೆ ಅನ್ನದಾನಿ ಇವರ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ ಇಂತಿವೆ. ಜೂನ್ 22 ರಂದು ಬೆಳಿಗ್ಗೆ 8.40 ಗಂಟೆಗೆ ವಿಮಾನದ ಮೂಲಕ ಬಜ್ಪೆ ವಿಮಾನ ನಿಲ್ದಾಣಕ್ಕೆ ಆಗಮಿಸಿ, ಬೆಳಿಗ್ಗೆ 11 ಗಂಟೆಗೆ ಶ್ರೀ ಧರ್ಮಸ್ಥಳ ದೇವಾಸ್ಥಾನಕ್ಕೆ ಭೇಟಿ ನೀಡಿ ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಅಪರಾಹ್ನ 3.30 ಗಂಟೆಗೆ ಉಡುಪಿಗೆ ತೆರಳಿ ವಾಸ್ತವ್ಯ. ಜೂನ್ 24 ರಂದು ಶ್ರೀ ಕುಕ್ಕೆ ಸುಬ್ರಮಣ್ಯ ದೇವಾಸ್ಥಾನಕ್ಕೆ

ಡಿ ದೇವರಾಜ ಅರಸು ಅಭಿವೃದ್ದಿ ನಿಗಮದ ಅಧ್ಯಕ್ಷರ ಪ್ರವಾಸ Read More »

ಕರಾವಳಿ

ಬಹಿರಂಗ ಹರಾಜು ಪ್ರಕಟಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.22.ಮಂಗಳೂರು ನಗರ ಪೊಲೀಸ್ ಘಟಕಕ್ಕೆ ಸೇರಿದ ಹಳೇಯ ನಾಲ್ಕು ವಾಹನಗಳನ್ನು ಹರಾಜಿನ ಮೂಲಕ ವಿಲೇವಾರಿ ಮಾಡಲು ಜೂನ್ 27 ರಂದು ಬೆಳಗ್ಗೆ 11 ಗಂಟೆಗೆ ಮಂಗಳೂರು ಸಶಸ್ತ್ರ ಮೀಸಲು ಪಡೆಯ ಆವರಣದಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ. ಬಹಿರಂಗ ಹರಾಜು ಮಾಡುವ ವಾಹನಗಳು – ಕೆ.ಎ. 19 ಜಿ-237 ಮಹೇಂದ್ರ ಕಮಾಂಡರ್ ಮಾದರಿ 2002, ಕೆ.ಎ. 19 ಜಿ-238 ಮಹೇಂದ್ರ ಕಮಾಂಡರ್ ಮಾದರಿ 2002, ಕೆ.ಎ. 19 ಜಿ-220 ಮಹೇಂದ್ರ ಕಮಾಂಡರ್ ಮಾದರಿ

ಬಹಿರಂಗ ಹರಾಜು ಪ್ರಕಟಣೆ Read More »

ಕರಾವಳಿ

ನೇತ್ರ ಪರೀಕ್ಷಾ ಶಿಬಿರ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.22.ಜಿಲ್ಲಾ ಸಂಚಾರಿ ನೇತ್ರ ಘಟಕ, ವೆನ್‍ಲಾಕ್ ಜಿಲ್ಲಾ ಆಸ್ಪತ್ರೆ, ಮಂಗಳೂರು ಇಲ್ಲಿನ ಜೂನ್ ತಿಂಗಳಲ್ಲಿ ನಡೆಸಲ್ಪಡುವ ನೇತ್ರ ಪರೀಕ್ಷಾ ಶಿಬಿರ ಇಂತಿವೆ. ಜೂನ್ 28 ರಂದು ಡಾ. ಗೌರಿ ಪೈ ಕಡೆ ಶಿವಾಲಯ ದಲ್ಲಿ ಬೆಳಿಗ್ಗೆ 7.30 ಗಂಟೆಗೆ ಶಿಬಿರ ನಡೆಯಲಿದ್ದು ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆಯುವಂತೆ ಜಿಲ್ಲಾ ಶಸ್ತ್ರಚಿಕಿತ್ಸಕರು ಮತ್ತು ಅಧೀಕ್ಷಕರು, ವೆನ್‍ಲಾಕ್ ಜಿಲ್ಲಾ ಆಸ್ಪತ್ರೆ, ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

ನೇತ್ರ ಪರೀಕ್ಷಾ ಶಿಬಿರ Read More »

ಕರಾವಳಿ

ಕಂದಾಯ ಇಲಾಖೆಯ ಮಹಾಸಭೆ ಮತ್ತು ಅಭಿನಂದನಾ ಸಮಾರಂಭ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.22.ಕಂದಾಯ ಇಲಾಖಾ ನೌಕರರ ಸಂಘ(ರಿ) ಬೆಂಗಳೂರು ದಕ್ಷಿಣ ಕನ್ನಡ ಜಿಲ್ಲಾ ಶಾಖೆ ಮಂಗಳೂರು, ಕಂದಾಯ ಭವನ, ದ.ಕ ಜಿಲ್ಲಾಧಿಕಾರಿಯವರ ಕಚೇರಿ ಆವರಣ, ಸ್ಟೇಟ್ ಬ್ಯಾಂಕ್ ಬಳಿ, ಮಂಗಳೂರು ಇದರ ಮಹಾಸಭೆ ಮತ್ತು ಅಭಿನಂದನಾ ಸಮಾರಂಭ ಜೂನ್ 22 ರಂದು ಅಪರಾಹ್ನ 12 ಗಂಟೆಗೆ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ನಂದಿನಿ ಸಭಾಭವನದಲ್ಲಿ ನಡೆಯಲಿದೆ.

ಕಂದಾಯ ಇಲಾಖೆಯ ಮಹಾಸಭೆ ಮತ್ತು ಅಭಿನಂದನಾ ಸಮಾರಂಭ Read More »

ಕರಾವಳಿ

ವಿದ್ಯಾರ್ಥಿ ಪಾಸುಗಳ ದರ ನಿಗಧಿ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.22.ಕರ್ನಾಟಕ ರಾಜ್ಯ ರಸ್ತೆಸಾರಿಗೆ ನಿಗಮದ ವತಿಯಿಂದ 2019-20ನೇ ಸಾಲಿನ ವಿದ್ಯಾರ್ಥಿ ಬಸ್ ಪಾಸುಗಳನ್ನು ಜೂನ್ 19 ರಿಂದ ವಿತರಿಸಲಾಗುತ್ತಿದೆ. ಹಾಗೂ 2018-19ನೇ ಸಾಲಿನ ಪಾಸುಗಳ ದರಪಟ್ಟಿಯೇ, ಪ್ರಸಕ್ತ ವರ್ಷ 2019-20 ಕ್ಕೆ ಅನ್ವಯಿಸಲಾಗುವುದು. ಬಸ್ ಪಾಸುಗಳ ದರಗಳು – ಪ್ರಾಥಮಿಕ ತರಗತಿಗಳ ವಿದ್ಯಾರ್ಥಿಗಳಿಗೆ 10 ತಿಂಗಳಿಗೆ (ಸಾಮಾನ್ಯ) ರೂ. 150/- (ಎಸ್.ಸಿ/ಎಸ್.ಟಿ) ರೂ. 150/-, ಪ್ರೌಢಶಾಲೆ ವಿದ್ಯಾರ್ಥಿಗಳಿಗೆ 10 ತಿಂಗಳಿಗೆ (ಸಾಮಾನ್ಯ) ರೂ. 750/- (ಎಸ್.ಸಿ/ಎಸ್.ಟಿ) ರೂ. 150/-, ಪ್ರೌಢಶಾಲೆ ವಿದ್ಯಾರ್ಥಿನಿಯರಿಗೆ

ವಿದ್ಯಾರ್ಥಿ ಪಾಸುಗಳ ದರ ನಿಗಧಿ Read More »

ಕರಾವಳಿ

ದ.ಕ ಜಿಲ್ಲಾ ಪಂಚಾಯತ್ನ 16ನೇ ಸಾಮಾನ್ಯ ಸಭೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.22.ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‍ನ 16ನೇ ಸಾಮಾನ್ಯ ಸಭೆ ಜಿಲ್ಲಾ ಪಂಚಾಯತ್ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಜೂನ್ 27 ರಂದು ಪೂರ್ವಾಹ್ನ 11 ಗಂಟೆಗೆ ದ.ಕ ಜಿಲ್ಲಾ ಪಂಚಾಯತ್ ನ ನೇತ್ರಾವತಿ ಸಭಾಂಗಣದಲ್ಲಿ ನಡೆಯಲಿದೆ.

ದ.ಕ ಜಿಲ್ಲಾ ಪಂಚಾಯತ್ನ 16ನೇ ಸಾಮಾನ್ಯ ಸಭೆ Read More »

ಕರಾವಳಿ
Scroll to Top