Mangalore

ಸರ್ಕಾರಿ ಮಹಿಳಾ ಕೈಗಾರಿಕಾ ಸಂಸ್ಥೆ ➤ ಕೈಗಾರಿಕಾ ತರಬೇತಿಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.20.ಸರ್ಕಾರಿ ಮಹಿಳಾ ಕೈಗಾರಿಕಾ ಸಂಸ್ಥೆಯಲ್ಲಿ ಐ.ಎಂ.ಸಿ (Management) ಕೋಟಾದಡಿಯಲ್ಲಿ ವೃತ್ತಿಗಳಲ್ಲಿ ತರಬೇತಿ ಪಡೆಯಲು ಸ್ಥಾನಗಳು ಖಾಲಿ ಇದ್ದು, ಈ ಖಾಲಿ ಸ್ಥಾನಗಳನ್ನು ಭರ್ತಿಗೊಳಿಸಲು ಈಗಾಗಲೇ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸದೆ ಇರುವ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳು ಪ್ರವೇಶ ಬಯಸಿದಲ್ಲಿ ತಕ್ಷಣ ಸಂಸ್ಥೆಗೆ ಹಾಜರಾಗಿ ಅರ್ಜಿ ಸಲ್ಲಿಸಿ ಪ್ರವೇಶ ಪಡೆದುಕೊಳ್ಳಹುದು. ಸರ್ಕಾರಿ ಮಹಿಳಾ ಐ.ಟಿ.ಐ ಕದ್ರಿ ಹಿಲ್ಸ್ ಮಂಗಳೂರು ಇಲ್ಲಿ ಐ.ಎಂ.ಸಿ(Management) ಖೋಟಾದಡಿಯಲ್ಲಿ ಲಭ್ಯವಿರುವ ವೃತ್ತಿಗಳ ವಿವರ ಇಂತಿವೆ:ಸಿ.ಒ.ಪಿ.ಎ […]

ಸರ್ಕಾರಿ ಮಹಿಳಾ ಕೈಗಾರಿಕಾ ಸಂಸ್ಥೆ ➤ ಕೈಗಾರಿಕಾ ತರಬೇತಿಗೆ ಅರ್ಜಿ ಆಹ್ವಾನ Read More »

ಕರಾವಳಿ

ಬೀಟ್ ಪೊಲೀಸರಿಂದ ಕಾಲೋನಿಯಲ್ಲಿ ಸಭೆ ➤ ಕುಡಿತದ ಚಟದಿಂದ ದೂರವಿರಿ – ಕೆ. ಚಿನ್ನಪ್ಪ

(ನ್ಯೂಸ್ ಕಡಬ) newskadaba.com ಕಲ್ಲುಗುಡ್ಡೆ, ಆಗಸ್ಟ್.19.  ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆ ದೋಂತಿಲಡ್ಕ ಬಾಬು ರವರ ಮನೆಯಲ್ಲಿ ನೂಜಿಬಾಳ್ತಿಲ ಬೀಟ್ ಪೋಲಿಸರ ಸಭೆ ಆದಿತ್ಯವಾರ ನಡೆಯಿತು. ಕಡಬ ಪೊಲೀಸ್ ಠಾಣಾ ಹೆಡ್‍ಕಾನ್ಸ್‍ಸ್ಟೇಬಲ್, ನೂಜಿಬಾಳ್ತಿಲ ಬೀಟ್ ಅಧಿಕಾರಿ ಕೆ. ಚಿನ್ನಪ್ಪರವರು ಅಧ್ಯಕ್ಷತೆ ವಹಿಸಿ ಮಾತನಾಡಿ, ನಿಮ್ಮ ಯಾವುದೇ ಸಮಸ್ಯೆಗಳಿದ್ದಲ್ಲಿ ತಕ್ಷಣ ನನಗೆ ಅಥವಾ ದಲಿತ ಮುಖಂಡರಿಗೆ ತಿಳಿಸಿದಲ್ಲಿ ಕ್ರಮಕೈಗೊಳ್ಳಲಾಗುವುದು, ಮಧ್ಯಪಾನದಿಂದ ದೂರವಿರುವಂತೆ ಸಲಹೆ ನೀಡಿದ ಅವರು, ಕುಡಿತದ ಚಟದಿಂದ ಮನೆಯ ನೆಮ್ಮದಿ ಕೆಡುವುದರೊಂದಿಗೆ, ತಮ್ಮ ಮಕ್ಕಳ ಭವಿಷ್ಯಕ್ಕೆ ಹೊಡೆತ ಬೀಳಲಿದೆ

ಬೀಟ್ ಪೊಲೀಸರಿಂದ ಕಾಲೋನಿಯಲ್ಲಿ ಸಭೆ ➤ ಕುಡಿತದ ಚಟದಿಂದ ದೂರವಿರಿ – ಕೆ. ಚಿನ್ನಪ್ಪ Read More »

ಕರಾವಳಿ

ಬಿಜೆಪಿ ವತಿಯಿಂದ ರಸ್ತೆ ದುರಸ್ಥಿಗೆ ಶ್ರಮದಾನ

(ನ್ಯೂಸ್ ಕಡಬ) newskadaba.com ಕಲ್ಲುಗುಡ್ಡೆ, ಆಗಸ್ಟ್.19.ಮರ್ದಾಳ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಬೂತ್ ಸಂಖ್ಯೆ 101ರಲ್ಲಿ ಆದಿತ್ಯವಾರ ಶ್ರಮದಾನದ ಮೂಲಕ ರಸ್ತೆ ದುರಸ್ಥಿಗೊಳಿಸಲಾಯಿತು. 102 ನೆಕ್ಕಿಲಾಡಿಯ ಡೆಪ್ಪುಣಿ – ಗುರಿಯಡ್ಕ ರಸ್ತೆಯು ಮಳೆಯಿಂದ ಕೆಸರುಮಯಗೊಂಡು ಸಂಚಾರಕ್ಕೆ ತೊಂದರೆಯಾಗಿತ್ತು, ಇದನ್ನು ಮನಗಂಡು ಬಿಜೆಪಿಯ ಕಾರ್ಯಕರ್ತರು ಶ್ರಮದಾನದ ಮೂಲಕ ರಸ್ತೆ ದುರಸ್ಥಿ ಮಾಡಿ ಸಂಚಾರಕ್ಕೆ ಯೋಗ್ಯವಾಗುವಲ್ಲಿ ಸಹಕರಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮರ್ದಾಳ ಶಕ್ತಿ ಕೇಂದ್ರದ ಉಸ್ತುವಾರಿ ಉಮೇಶ್ ಶೆಟ್ಟಿ ಸಾಯಿರಾಂ, ಎಪಿಎಂಸಿ ಸದಸ್ಯರಾದ ಮೇದಪ್ಪ ಗೌಡ ಡೆಪ್ಪುಣಿ, ಬಾಲಕೃಷ್ಣ

ಬಿಜೆಪಿ ವತಿಯಿಂದ ರಸ್ತೆ ದುರಸ್ಥಿಗೆ ಶ್ರಮದಾನ Read More »

ಕರಾವಳಿ

ರೆಂಜಿಲಾಡಿ ಸಾಂತೋಮ್ ವಿದ್ಯಾನಿಕೇತನ್ ಆಂಗ್ಲ ಮಾದ್ಯಮ ಶಾಲೆ ➤ ರಕ್ಷಕ ಶಿಕ್ಷಕ ಸಮಿತಿ ಅಧ್ಯಕ್ಷರಾಗಿ ವಸಂತ ಪೂಜಾರಿ

(ನ್ಯೂಸ್ ಕಡಬ) newskadaba.com ಕಲ್ಲುಗುಡ್ಡೆ, ಆಗಸ್ಟ್.19.ರೆಂಜಿಲಾಡಿ ಸಾಂತೋಮ್ ವಿದ್ಯಾನಿಕೇತನ್ ಆಂಗ್ಲ ಮಾದ್ಯಮ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾಗಿ ನೂಜಿಬಾಳ್ತಿಲ ಗ್ರಾ.ಪಂ. ಮಾಜಿ ಅಧ್ಯಕ್ಷ ವಸಂತ ಪೂಜಾರಿ ಬದಿಬಾಗಿಲು ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಕಡಬ ತಾಲೂಕು ಮಹಿಳಾ ಮಂಡಲದ ಅಧ್ಯಕ್ಷೆ ಜಯಶ್ರೀ ಹೊಸಮಠ, ಸದಸ್ಯರಾಗಿ ಸಜಿ ಒ.ಕೆ., ಶ್ರೀಧರ್ ಮಿತ್ತೋಡಿ, ವಿನೋಧ ಎನ್ಕಾಜೆ, ಖುಷ ಕುಮಾರ್, ಪ್ರಫುಲ್ಲಾ ರೈ, ರಾಜು, ಕೇಶವ ಕೊಡಂಕೀರಿ, ರೋಯಿ ಟಿ.ಜೆ., ಪ್ರಮೀಳಾ ಕೆ., ಯಶೋಧಾ ಸಂಕೇಶ ಆಯ್ಕೆಯಾಗಿದ್ದಾರೆ. ಶಾಲಾ ಸಂಚಾಲಕ

ರೆಂಜಿಲಾಡಿ ಸಾಂತೋಮ್ ವಿದ್ಯಾನಿಕೇತನ್ ಆಂಗ್ಲ ಮಾದ್ಯಮ ಶಾಲೆ ➤ ರಕ್ಷಕ ಶಿಕ್ಷಕ ಸಮಿತಿ ಅಧ್ಯಕ್ಷರಾಗಿ ವಸಂತ ಪೂಜಾರಿ Read More »

ಕರಾವಳಿ

ದೇವರಹಳ್ಳಿ: ಗಣೇಶೋತ್ಸವ ಸಮಿತಿ ರಚನೆ

(ನ್ಯೂಸ್ ಕಡಬ) newskadaba.comಕಡಬ, ಆಗಸ್ಟ್.19.ಕಡಬ ತಾಲೂಕು ಯೇನೆಕಲ್ಲು ಗ್ರಾಮದ ದೇವರಹಳ್ಳಿಯಲ್ಲಿ 23 ನೇ ವರ್ಷದ ಗಣೇಶೋತ್ಸವವನ್ನು ಆಚರಿಸುವ ಸಲುವಾಗಿ ಸಮಿತಿಯನ್ನು ರಚಿಸಲಾಯಿತು. ದೇವರಹಳ್ಳಿಯ ಭಜನಾ ಮಂದಿರದಲ್ಲಿ ನಡೆದ ಸಭೆಯಲ್ಲಿ, ಸಮಿತಿಯ ಅಧ್ಯಕ್ಷರಾಗಿ ಮಿಥುನ್ ಮಾಣಿಬೈಲು, ಕಾರ್ಯದರ್ಶಿಯಾಗಿ ಹರ್ಷಿತ್ ಉಪ್ಪಳಿಕೆ, ಖಜಾಂಜಿಯಾಗಿ ಹರ್ಷಿತ್ ಆಚಾರ್ಯ ಕಲ್ಲಾಜೆ ಆಯ್ಕೆಯಾದರು. ನಂತರ ಸಭೆಯಲ್ಲಿ ಕಾರ್ಯಕ್ರಮದ ರೂಪುರೇಶೆಗಳನ್ನು ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ವಸಂತ ಗೌಡ ಕುಜುಂಬಾರು, ಮಹೇಶ್ ಎಂ.ಪಿ ಮಾಣಿಬೈಲು, ಯಶೋಧರ ಮಾಣಿಬೈಲು, ಶ್ರೀಕುಮಾರ ಭಟ್ ಅಲೆಪ್ಪಾಡಿ, ತೀರ್ಥರಾಮ ಮಾಣಿಬೈಲು, ಪ್ರವೀಣ್ ಮಾಣಿಬೈಲು,

ದೇವರಹಳ್ಳಿ: ಗಣೇಶೋತ್ಸವ ಸಮಿತಿ ರಚನೆ Read More »

ಕರಾವಳಿ

ಆವರಣ ಗೋಡೆ ಉದ್ಘಾಟನೆ, ಸಮ್ಮಾನ

(ನ್ಯೂಸ್ ಕಡಬ) newskadaba.com ರೆಂಜಿಲಾಡಿ, ಆಗಸ್ಟ್.19.ಗೋಳಿಯಡ್ಕ ರೆಂಜಿಲಾಡಿ ಸ.ಹಿ.ಪ್ರಾ.ಶಾಲೆಯಲ್ಲಿ ಸ್ವಾತಂತ್ರೋತ್ಸವ ಹಾಗೂ ಸಮ್ಮಾನ ಕಾರ್ಯಕ್ರಮ ನಡೆಯಿತು. ಧ್ವಜಾರೋಹಣವನ್ನು ದಾನಿಗಳೂ, ವಕೀಲರೂ ಆದ ವರ್ಗೀಸ್ ಈಶೋ ಅವರು ನೆರವೇರಿಸಿದರು. ಜಿ.ಪಂ. ಸದಸ್ಯ ಪಿ.ಪಿ. ವರ್ಗೀಸ್ ಉದ್ಯೋಗ ಖಾತರಿ ಯೋಜನೆಯಡಿ ನಿರ್ಮಾಣಗೊಂಡ ಶಾಲಾ ಆವರಣಗೋಡೆಯನ್ನು ಉದ್ಘಾಟಿಸಿದರು. ನೂಜಿಬಾಳ್ತಿಲ ಗ್ರಾ.ಪಂ. ಅನುದಾನದಲ್ಲಿ ನಿರ್ಮಾಣವಾಗಲಿರುವ ಮಳೆನೀರು ಕೊಯ್ಲು ಘಟಕಕ್ಕೆ ತಾ.ಪಂ. ಸದಸ್ಯ ಗಣೇಶ್ ಕೈಕುರೆ ಶಂಕು ಸ್ಥಾಪನೆ ನೆರವೇರಿಸಿದರು. ಮುಖ್ಯ ಶಿಕ್ಷಕ ಮೇದಪ್ಪ ಗೌಡ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ಸುವರ್ಣಲತಾ ಸ್ವಾಗತಿಸಿ,

ಆವರಣ ಗೋಡೆ ಉದ್ಘಾಟನೆ, ಸಮ್ಮಾನ Read More »

ಕರಾವಳಿ

ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಇಲಾಖಾವತಿಯಿಂದ ➤ ವಿಶೇಷ ಆರೋಗ್ಯ ತಪಾಸಣಾ ಶಿಬಿರ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.19.ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಇಲಾಖೆ ವತಿಯಿಂದ ವಿಶೇಷ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮಗಳು ನಡೆಯಲಿವೆ. ಶಿಬಿರಗಳು ಆಗಸ್ಟ್ 20 ರಂದು ಬೆಳ್ತಂಗಡಿ ತಾಲೂಕಿನ ಕಣಿಯೂರು, ಪುತ್ತೂರು ತಾಲೂಕಿನ ಉಪ್ಪಿನಂಗಡಿ, ಕೊೈಲ, ಸುಳ್ಯ ತಾಲೂಕಿನ ಬೆಳ್ಳಾರೆ, ಆಗಸ್ಟ್ 21 ರಂದು ಬೆಳ್ತಂಗಡಿ ತಾಲೂಕಿನ ಕೊಕ್ಕಡದಲ್ಲಿ ನಡೆಯಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಪ್ರಕಟಣೆ ತಿಳಿಸಿದೆ.

ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಇಲಾಖಾವತಿಯಿಂದ ➤ ವಿಶೇಷ ಆರೋಗ್ಯ ತಪಾಸಣಾ ಶಿಬಿರ Read More »

ಕರಾವಳಿ

ಜಾಕ್ವೆಲ್ ಶುಚಿ ಕಾರ್ಯ ನೀರು ಪೂರೈಕೆ ಸ್ಥಗಿತ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.19.ಮಂಗಳೂರು ಮಹಾನಗರ ಪಾಲಿಕೆಯ ನೀರು ಸರಬರಾಜು ವ್ಯವಸ್ಥೆಯ ತುಂಬೆ LLPS-1 18 MGD ರೇಚಕ ಸ್ಥಾವರದ ಜಾಕ್ವೆಲ್ ನ ಶುಚಿ ಕಾರ್ಯ ನಡೆಯುತಿದ್ದು  ನೀರು ಪೂರೈಕೆ ಸ್ಥಗಿತಗೊಳಿಸಲಾಗಿದೆ. ಜಾಕ್‍ವೆಲ್‍ನಲ್ಲಿ ಮರಳು ಕಸಕಡ್ಡಿಗಳು ಮಡ್ಡಿ ಇತ್ಯಾದಿಗಳು ಶೇಖರಣೆಗೊಂಡಿದ್ದು, ನೀರೆತ್ತುವ ಪಂಪ್ ಚಾಲನೆಯಲ್ಲಿ ಅಡೆತಡೆ ಉಂಟಾಗುತ್ತಿರುವುದನ್ನು ಸರಿಪಡಿಸಲು ಜಾಕ್‍ವೆಲ್‍ನ್ನು ಶುಚಿಗೊಳಿಸಲು ಆಗಸ್ಟ್ 20 ರಂದು ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ಹಮ್ಮಿಕೊಂಡಿದೆ. ಸದ್ರಿ ಅವಧಿಯಲ್ಲಿ ಬೆಂದೂರು ರೇಚಕ ಸ್ಥಾವರದಿಂದ ನೀರು ಸರಬರಾಜು

ಜಾಕ್ವೆಲ್ ಶುಚಿ ಕಾರ್ಯ ನೀರು ಪೂರೈಕೆ ಸ್ಥಗಿತ Read More »

ಕರಾವಳಿ

ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿ ಕಾಮಗಾರಿ ಪರಿಶೀಲನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.19.ಬಸ್ ನಿಲ್ದಾಣವನ್ನು ಜನತೆಯ ಅನೂಕೂಲಕ್ಕೆ ತಕ್ಕಂತೆ, ಸಾರ್ವಜನಿಕರ ಅಭಿಪ್ರಾಯ ಪಡೆದು ಸುಸಜ್ಜಿತವಾಗಿ ನಿರ್ಮಾಣ ಮಾಡಬೇಕು ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರು ಸೂಚಿಸಿದರು. ಇಂದು ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ ಹಾಲ್‍ನಲ್ಲಿ ನಡೆದ ಸ್ಮಾರ್ಟ್ ಸಿಟಿ ಯೋಜನೆಯ 7ನೇ ನಗರ ಮಟ್ಟದ ಸಲಹಾ ಸಭೆಯಲ್ಲಿ ಮಾತನಾಡಿದ ಅವರು ಈಗಾಗಲೇ 17 ಬಸ್ ನಿಲ್ದಾಣಗಳ ಕಾಮಗಾರಿ ಪೂರ್ಣಗೊಂಡಿದ್ದು, ಸಾರ್ವಜನಿಕರಿಗೆ ಬಸ್ ನಿಲ್ದಾಣಗಳು ಹೆಚ್ಚಾಗಿ ಮಳೆಗಾಲದ ಸಮಯದಲ್ಲಿ ಉಪಯೋಗವಾಗುವುದರಿಂದ ಇನ್ನು ಮುಂದಿನ ಬಸ್ ನಿಲ್ದಾಣದ ಕಾಮಗಾರಿಯಲ್ಲಿ

ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿ ಕಾಮಗಾರಿ ಪರಿಶೀಲನೆ Read More »

ಕರಾವಳಿ

ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಇವರ ವತಿಯಿಂದ ➤ ಶೇಕಡಾ 2% ಸೇವಾ ಶುಲ್ಕದ ಆಧಾರದ ದರದಲ್ಲಿ ಸಾಲ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.19.ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ (ನಿ) ಇವರ ವತಿಯಿಂದ ಆರ್ಥಿಕವಾಗಿ ಬಡ ಹಿಂದುಳಿದ ಮುಸ್ಲಿಂ, ಕ್ರಿಶ್ಚಿಯನ್ಸ್, ಜೈನ್ಸ್ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸ್ ಗಳನ್ನು ಮುಂದುವರೆಸಲು ಇಚ್ಚಿಸುವ ವಿದ್ಯಾರ್ಥಿಗಳಿಗೆ ಸಾಲ ಸೌಲಭ್ಯವನ್ನು ಒದಗಿಸಿಕೊಡಲಾಗುವುದು. ಬಿ.ಎ, ಬಿ.ಕಾಂ, ಬಿ.ಎಸ್ಸಿ, ಬಿಸಿಎ, ಬಿ.ಬಿ.ಎಮ್, ಡಿಪ್ಲೋಮಾ, ಎಂ.ಬಿ.ಎ, ಎಂ.ಕಾಂ. ,ಬಿ.ಇ, ಎಂ.ಬಿ.ಬಿ.ಎಸ್, ಎಂ.ಡಿ.ಎಸ್, ಎಂ.ಟೆಕ್, ಎಂ.ಡಿ. ಎಂ.ಸಿ.ಎ. ಐ.ಟಿ.ಐ ಹಾಗೂ ಇನ್ನಿತರ ವೃತ್ತಿಪರ ಕೋರ್ಸ್ ಮಾಡುತ್ತಿರುವ ವಿದ್ಯಾರ್ಥಿಗಳಿಗೆ (ಫ್ಯಾಶನ್ ಡಿಸೈನ್ ಮತ್ತು ಸಿ.ಎ ಹೊರತುಪಡಿಸಿ) ಪ್ರತಿ ವರ್ಷ

ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಇವರ ವತಿಯಿಂದ ➤ ಶೇಕಡಾ 2% ಸೇವಾ ಶುಲ್ಕದ ಆಧಾರದ ದರದಲ್ಲಿ ಸಾಲ Read More »

ಕರಾವಳಿ
Scroll to Top