ಸರ್ಕಾರಿ ಮಹಿಳಾ ಕೈಗಾರಿಕಾ ಸಂಸ್ಥೆ ➤ ಕೈಗಾರಿಕಾ ತರಬೇತಿಗೆ ಅರ್ಜಿ ಆಹ್ವಾನ



(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.20.ಸರ್ಕಾರಿ ಮಹಿಳಾ ಕೈಗಾರಿಕಾ ಸಂಸ್ಥೆಯಲ್ಲಿ ಐ.ಎಂ.ಸಿ (Management) ಕೋಟಾದಡಿಯಲ್ಲಿ ವೃತ್ತಿಗಳಲ್ಲಿ ತರಬೇತಿ ಪಡೆಯಲು ಸ್ಥಾನಗಳು ಖಾಲಿ ಇದ್ದು, ಈ ಖಾಲಿ ಸ್ಥಾನಗಳನ್ನು ಭರ್ತಿಗೊಳಿಸಲು ಈಗಾಗಲೇ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.







ಅರ್ಜಿ ಸಲ್ಲಿಸದೆ ಇರುವ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳು ಪ್ರವೇಶ ಬಯಸಿದಲ್ಲಿ ತಕ್ಷಣ ಸಂಸ್ಥೆಗೆ ಹಾಜರಾಗಿ ಅರ್ಜಿ ಸಲ್ಲಿಸಿ ಪ್ರವೇಶ ಪಡೆದುಕೊಳ್ಳಹುದು. ಸರ್ಕಾರಿ ಮಹಿಳಾ ಐ.ಟಿ.ಐ ಕದ್ರಿ ಹಿಲ್ಸ್ ಮಂಗಳೂರು ಇಲ್ಲಿ ಐ.ಎಂ.ಸಿ(Management) ಖೋಟಾದಡಿಯಲ್ಲಿ ಲಭ್ಯವಿರುವ ವೃತ್ತಿಗಳ ವಿವರ ಇಂತಿವೆ:ಸಿ.ಒ.ಪಿ.ಎ (ಕಂಪ್ಯೂಟರ್ ಅಪರೇಟರ್ ಆಂಡ್ ಪ್ರೋಗ್ರಾಮಿಂಗ್ ಅಸಿಸ್ಟೆಂಟ್) ತರಬೇತಿ ಅವಧಿ 1 ವರ್ಷ, ವಿದ್ಯಾರ್ಹತೆ ಎಸ್.ಎಸ್.ಎಲ್.ಸಿ, ಸ್ಥಾನಗಳು – 8. ಎಲೆಕ್ಟ್ರಾನಿಕ್ ಮೆಕ್ಯಾನಿಕ್, ತರಬೇತಿ ಅವಧಿ 2 ವರ್ಷ, ವಿದ್ಯಾರ್ಹತೆ ಎಸ್.ಎಸ್.ಎಲ್.ಸಿ, ಸ್ಥಾನಗಳು 8.ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0824-2216360 / 9845226485 ಸಂಪರ್ಕಿಸಬಹುದೆಂದು ಸರ್ಕಾರಿ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆ ಕದ್ರಿ ಹಿಲ್ಸ್ ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.






error: Content is protected !!
Scroll to Top