Mangalore

ಕೊರೊನಾ ಹಿನ್ನೆಲೆ ಜುಲೈ 3ರಿಂದ 5ರ ತನಕ ದ.ಕ. ಜಿಲ್ಲಾಧಿಕಾರಿ ಕಚೇರಿ ಬಂದ್ ➤ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್

(ನ್ಯೂಸ್ ಕಡಬ) newskadaba.com ಮಂಗಳೂರು, ಜು.02., ಕೊರೊನಾ ಮುನ್ನೆಚ್ಚರಿಕಾ ಕ್ರಮವಾಗಿ ಜುಲೈ 3ರಿಂದ 5ರ ತನಕ ದ.ಕ. ಜಿಲ್ಲಾಧಿಕಾರಿ ಕಚೇರಿಯನ್ನು ಬಂದ್ ಮಾಡುವಂತೆ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಆದೇಶ ನೀಡಿದ್ದಾರೆ. ದ.ಕ. ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸೋಂಕು ಮತ್ತಷ್ಟು ಹರಡದಂತೆ ಜಿಲ್ಲಾಡಳಿತ ಆರೋಗ್ಯ ಇಲಾಖೆ ಹತ್ತು ಹಲವು ರೀತಿಯಲ್ಲಿ ಕ್ರಮ ಕೈಗೊಂಡಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಸಂಸದರು, ಸಚಿವರ ಕಚೇರಿ ಸೇರಿದಂತೆ ಸಂಪೂರ್ಣ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ಬಂದ್ ಮಾಡುವಂತೆ ಆದೇಶ […]

ಕೊರೊನಾ ಹಿನ್ನೆಲೆ ಜುಲೈ 3ರಿಂದ 5ರ ತನಕ ದ.ಕ. ಜಿಲ್ಲಾಧಿಕಾರಿ ಕಚೇರಿ ಬಂದ್ ➤ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ Read More »

ಕರಾವಳಿ

ಎಸ್‍ಎಸ್‍ಎಲ್‍ಸಿ ಹಲವು ಕಾರಣಗಳಿಂದ 285 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು

(ನ್ಯೂಸ್ ಕಡಬ) newskadaba.com.ಮಂಗಳೂರು.2: ಬುಧವಾರದ ಎಸ್ಸೆಸ್ಸೆಲ್ಸಿ ಸಮಾಜ ವಿಜ್ಞಾನ ಪರೀಕ್ಷೆಗೆ ದ.ಕ.ಜಿಲ್ಲೆಯಲ್ಲಿ 285 ವಿದ್ಯಾರ್ಥಿಗಳು ಹಲವು ಕಾರಣಗಳಿಂದ ಗೈರಾದರು. 28,161 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು ಅದರಲ್ಲಿ ,27,876 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಹಾಜರಾದವರಲ್ಲಿ ಅನಾರೋಗ್ಯ ಕಾರಣದಿಂದ ವಿಶೇಷ ಕೊಠಡಿಯಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಸಂಖ್ಯೆ 46. ನೆರೆರಾಜ್ಯಗಳಿಂದ ಒಟ್ಟು 367 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು ಎಂದು ದ.ಕ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ. ಇನ್ನೂ ಉಡುಪಿ ಜಿಲ್ಲೆಯಲ್ಲಿ ಬುಧವಾರ ಎಸ್ಸೆಸ್ಸೆಲ್ಸಿ ಸಮಾಜ ವಿಜ್ಞಾನ

ಎಸ್‍ಎಸ್‍ಎಲ್‍ಸಿ ಹಲವು ಕಾರಣಗಳಿಂದ 285 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು Read More »

ಕರಾವಳಿ

ದ.ಕದಲ್ಲಿ ಸಾವಿನ ಸಂಖ್ಯೆ 18ಕ್ಕೇರಿಕೆ ➤ 49 ವರ್ಷದ ವ್ಯಕ್ತಿ ಕೊರೊನಾಗೆ ಬಲಿ

(ನ್ಯೂಸ್ ಕಡಬ) newskadaba.com ಮಂಗಳೂರು,ಜು.02: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾಕ್ಕೆ ಜು.2 ರ ಗುರುವಾರ ಮತ್ತೊಂದು ಬಲಿಯಾಗಿದೆ. ಬಂಟ್ವಾಳ ತಾಲೂಕಿನ ಕಲ್ಕಡ್ಕ ನಿವಾಸಿಯಾಗಿರುವ 49 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 18ಕ್ಕೇರಿಕೆಯಾಗಿದೆ.   ಕಳೆದ 20 ದಿನಗಳಿಂದ ಮನೆಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದರು. ಈ ಹಿನ್ನಲೆಯಲ್ಲಿ ಅವರನ್ನು ಶನಿವಾರ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಿಡ್ನಿ, ಟಿ.ಬಿ.ಹಾಗೂ ಲಿವರ್ ನ ಸಮಸ್ಯೆಯಿಂದ ಬಳಲುತ್ತಿದ್ದ ಇವರಲ್ಲಿ ಸೊಂಕು ಪತ್ತೆಯಾಗಿತ್ತು.ಇನ್ನು ಬುಧವಾರಷ್ಟೇ ಜಿಲ್ಲೆಯಲ್ಲಿ ಕೊರೋನಾ ಮೂರು

ದ.ಕದಲ್ಲಿ ಸಾವಿನ ಸಂಖ್ಯೆ 18ಕ್ಕೇರಿಕೆ ➤ 49 ವರ್ಷದ ವ್ಯಕ್ತಿ ಕೊರೊನಾಗೆ ಬಲಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

 ಮೀನಿನ ಪರಿಮಳವನ್ನು ಹೀರುವವರ ಆರೋಗ್ಯ ಉತ್ತಮವಾಗಿರುತ್ತದೆ ➤ ಕೋಟ ಶ್ರೀನಿವಾಸ ಪೂಜಾರಿ

(ನ್ಯೂಸ್ ಕಡಬ) newskadaba.com ಮಂಗಳೂರು, ಜು.02. , ಮಂಗಳೂರಿನ ಮೀನುಗಾರಿಕಾ ಮಹಾವಿದ್ಯಾಲಯವು 50 ವರ್ಷಗಳನ್ನು ಪೂರೈಸಿದ ಸುಸಂದರ್ಭದಲ್ಲಿ ಮುದ್ರಿಸಲಾದ ಮೀನಿನ ಚಿತ್ರವಿರುವ ಭಾರತೀಯ ಅಂಚೆ ಚೀಟಿಯನ್ನು ಮೀನುಗಾರಿಕೆ, ಬಂದರು, ಒಳನಾಡು ಜಲ ಸಾರಿಗೆ ಮತ್ತು ದ.ಕ. ಜಿಲ್ಲೆಯ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಮಂಗಳವಾರ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಮೀನು ಉತ್ತಮ ಪೌಷ್ಟಿಕಾಂಶವನ್ನು ಹೊಂದಿರುವ ಅಹಾರವಾಗಿದೆ. ಮೀನನ್ನು ಸೇವಿಸುವವರು ಮತ್ತು ಅದರ ಪರಿಮಳವನ್ನು ಹೀರುವವರ ಆರೋಗ್ಯ ಉತ್ತಮವಾಗಿರುವುದಲ್ಲದೇ ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ

 ಮೀನಿನ ಪರಿಮಳವನ್ನು ಹೀರುವವರ ಆರೋಗ್ಯ ಉತ್ತಮವಾಗಿರುತ್ತದೆ ➤ ಕೋಟ ಶ್ರೀನಿವಾಸ ಪೂಜಾರಿ Read More »

ಕರಾವಳಿ

ಬೆಳ್ತಂಗಡಿ ಮೆಸ್ಕಾಂ ನೂತನ ಸಹಾಯಕ ಲೆಕ್ಕಾಧಿಕಾರಿಯಾಗಿ ಬುಶ್ರಾ ಅಬೂಬಕ್ಕರ್ ಪೆರಿಂಜೆ

(ನ್ಯೂಸ್ ಕಡಬ) newskadaba.com.ಬೆಳ್ತಂಗಡಿ,ಜು.2:  ಇಲ್ಲಿನ ಮೆಸ್ಕಾಂ ಇಲಾಖೆಯ ಸಹಾಯಕ ಲೆಕ್ಕಾಧಿಕಾರಿಯಾಗಿ (ಎ.ಎ.ಒ) ಬುಶ್ರಾ ಅಬೂಬಕ್ಕರ್‌ ಪೆರಿಂಜೆ ಅವರು ಅಧಿಕಾರ ವಹಿಸಿಕೊಂಡಿದ್ದಾರೆ. 2017 ರಲ್ಲಿ ಮೆಸ್ಕಾಂ ಇಲಾಖೆ ಮಂಗಳೂರು ಕಾರ್ಪೊರೇಟ್ ಕಚೇರಿಯಲ್ಲಿ ಎ.ಎ.ಒ ಆಗಿ ಅಧಿಕಾರ ವಹಿಸಿಕೊಂಡಿದ್ದರು. ಇದೀಗ ವರ್ಗಾವಣೆಗೊಂಡು ಬೆಳ್ತಂಗಡಿ ಕಚೇರಿಗೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಪೆರಿಂಜೆಯ ದಿ.‌ಇಬ್ರಾಹಿಂ ಕೆ ಮತ್ತು ಸಾರಮ್ಮ ದಂಪತಿಯ ಪುತ್ರಿಯಾಗಿರುವ ಬುಶ್ರಾ ಅವರು ಪದವಿ ಬಳಿಕ ಎಂ.ಕಾಂ ಸ್ನಾತಕೋತ್ತರ ಪದವಿ ವಿದ್ಯಾರ್ಹತೆ ಹೊಂದಿದ್ದಾರೆ. ಬಳಿಕ ವೇಣೂರು ವಿದ್ಯೋದಯ ಶಿಕ್ಷಣ ಸಂಸ್ಥೆಯಲ್ಲಿ‌ ಮೂರು ವರ್ಷಗಳ

ಬೆಳ್ತಂಗಡಿ ಮೆಸ್ಕಾಂ ನೂತನ ಸಹಾಯಕ ಲೆಕ್ಕಾಧಿಕಾರಿಯಾಗಿ ಬುಶ್ರಾ ಅಬೂಬಕ್ಕರ್ ಪೆರಿಂಜೆ Read More »

ಕರ್ನಾಟಕ

ಹಾಸ್ಯ ನಟ ಮಿಮಿಕ್ರಿ ರಾಜಗೋಪಾಲ್‌ ನಿಧನ ➤ ಚಿತ್ರರಂಗದ ಗಣ್ಯರ ಸಂತಾಪ

(ನ್ಯೂಸ್ ಕಡಬ) newskadaba.com ಬೆಂಗಳೂರು,ಜು.02: 650ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದ ಹಾಸ್ಯ ಕಲಾವಿದ ಮಿಮಿಕ್ರಿ ರಾಜಗೋಪಾಲ್‌ ಬುಧವಾರ  ರಾತ್ರಿ ಕೊನೆಯುಸಿರೆಳೆದರು. ಕಿಡ್ನಿ ಮತ್ತು ಅಸ್ತಮಾ ಸಮಸ್ಯೆಯಿಂದ ಬಳಲುತ್ತಿದ್ದ ಹಾಸ್ಯ ನಟ ಮಿಮಿಕ್ರಿ ರಾಜಗೋಪಾಲ್‌ ಅವರು ಜು.1ರ ರಾತ್ರಿ ನಿಧನರಾದರು. 650ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವುದು ಮಾತ್ರವಲ್ಲದೆ, ವೇದಿಕೆಗಳಲ್ಲಿ ಮಿಮಿಕ್ರಿ ಮಾಡುವ ಮೂಲಕವೂ ಅವರು ಫೇಮಸ್‌ ಆಗಿದ್ದರು. ಅವರಿಗೆ 69 ವರ್ಷ ವಯಸ್ಸಾಗಿತ್ತು.     ಕೆಂಗೇರಿಯ ಬಿಡಿಎ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದ ರಾಜಗೋಪಾಲ್‌ ಅವರು, ಮೂವರು ಪುತ್ರಿಯರನ್ನು ಅಗಲಿದ್ದಾರೆ.

ಹಾಸ್ಯ ನಟ ಮಿಮಿಕ್ರಿ ರಾಜಗೋಪಾಲ್‌ ನಿಧನ ➤ ಚಿತ್ರರಂಗದ ಗಣ್ಯರ ಸಂತಾಪ Read More »

ಕರಾವಳಿ, ಕರ್ನಾಟಕ

ಕಾರವಾರ ಮದುವೆಯಾಗಿ ಐದೇ ದಿನಕ್ಕೆ ವರ ಕೊರೊನಾಗೆ ಬಲಿ

(ನ್ಯೂಸ್ ಕಡಬ) newskadaba.com.ಕಾರವಾರ,ಜು .1: ಸಪ್ತಪದಿ ತುಳಿದು ಐದೇ ದಿನಕ್ಕೆ ನವ ವರ ಕೊರೊನಾಗೆ ಬಳಿಯಾದ ಘಟನೆ ಕಾರವಾರದಲ್ಲಿ ನಡೆದಿದೆ. ಇದರಿಂದಾಗಿ ವಿವಾಹ ಸಂಭ್ರಮದಲ್ಲಿ ಪಾಲ್ಗೊಂಡಿದ್ದ ಸುಮಾರು 100 ಜನರ ಪೈಕಿ 20 ಮಂದಿಗೆ ಸೋಂಕು ದೃಢಪಟ್ಟಿದೆ. ಇನ್ನೂ ಹಲವರ ಪರೀಕ್ಷಾ ವರದಿ ಇನ್ನಷ್ಟೆ ಬರಬೇಕಾಗಿದೆ. ಬೆಂಗಳೂರಿನಲ್ಲಿ ಇಂಜಿನಿಯರ್ ಆಗಿದ್ದ ಮಂಗಳೂರು ಮೂಲದ ಯುವಕನ ಮದುವೆ ಜೂ.25ರಂದು ಭಟ್ಕಳದಲ್ಲಿ ಇಲ್ಲಿನ ಯುವತಿಯೊಬ್ಬಳ ಜತೆ ನೆರವೇರಿತ್ತು. ಈ ಮದುವೆಯಲ್ಲಿ ನೂರಾರು ಮಂದಿ ಪಾಲ್ಗೊಂಡಿದ್ದರು. ವರನ ಕುಟುಂಬಸ್ಥರು ಮಂಗಳೂರಿನಲ್ಲಿದ್ದರು. ಮದುವೆ

ಕಾರವಾರ ಮದುವೆಯಾಗಿ ಐದೇ ದಿನಕ್ಕೆ ವರ ಕೊರೊನಾಗೆ ಬಲಿ Read More »

ಕರ್ನಾಟಕ

ಕಾರು ಅಪಘಾತ ➤ ದ. ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಪ್ರಾಣಪಾಯದಿಂದ ಪಾರು

(ನ್ಯೂಸ್ ಕಡಬ) newskadaba.com ಮೂಡಬಿದಿರೆ,ಜು.01: ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದಿರೆ ಅವರ ಕಾರು ಅಪಘಾತಗೊಂಡ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ. ಅದೃಷ್ಟಶವಾತ್ ಸುದರ್ಶನ್ ಮೂಡಬಿದಿರೆ ಅವರು ಅಪಾಯವಿಲ್ಲದೆ ಪಾರಾಗಿದ್ದಾರೆ. ಮೂಡಬಿದಿರೆಯ ಮಿಜಾರು ಸಮೀಪ ಅಪಘಾತ ನಡೆದಿದ್ದು,  ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ. ಸುದರ್ಶನ್ ಅವರು ಮೂಡಿಬಿದಿರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಂಗಳೂರಿಗೆ ಹೋಗುತ್ತಿದ್ದರು. ಈ ವೇಳೆ ಮಿಜಾರು ಬಳಿಯ ತೋಡಾರು ಸಮೀಪ ಒಳರಸ್ತೆಯಿಂದ ಬಂದ ಬೈಕ್ ಗೆ ಢಿಕ್ಕಿಯಾಗುವುದನ್ನು ತಪ್ಪಿಸಲ ಹೋಗಿ ಸುದರ್ಶನ್ ಅವರ ಇನ್ನೋವಾ

ಕಾರು ಅಪಘಾತ ➤ ದ. ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಪ್ರಾಣಪಾಯದಿಂದ ಪಾರು Read More »

ಕರಾವಳಿ, ಕರ್ನಾಟಕ

ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿಗೆ ಕೊರೋನಾ ಪಾಸಿಟಿವ್ .!

(ನ್ಯೂಸ್ ಕಡಬ) newskadaba.com ಉಡುಪಿ,ಜು.01: ಕೊರೋನಾ ಮಹಾಮಾರಿ ಜಿಲ್ಲೆಯಲ್ಲಿ ಹೆಚ್ಚಾಗುತ್ತಿದ್ದು, ಬುಧವಾರ ಮತ್ತೊಂದು ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿಗೆ ಕೊರೋನಾ ಸೋಂಕು ದೃಢಗೊಂಡಿದ್ದು ಒಟ್ಟು ಸೋಂಕಿತ ವಿದ್ಯಾರ್ಥಿಗಳ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. ಬೈಂದೂರು ತಾಲೂಕಿನ ವಿದ್ಯಾರ್ಥಿನಿಗೆ ಜ್ವರ ಇದ್ದು ಆಕೆಯ ಗಂಟಲ ದ್ರವ ಪರೀಕ್ಷೆಯ ವೇಳೆ ಕೊರೋನಾ ಪಾಸಿಟಿವ್ ಇರುವುದು ದೃಢಗೊಂಡಿದೆ ಎಂದು ಜಿಲ್ಲಾ ಶಿಕ್ಷಣಾಧಿಕಾರಿ ಶೇಷಶಯನ ಕಾರಿಂಜ ಮಾಹಿತಿ ಮಾಹಿತಿ ನೀಡಿದ್ದಾರೆ.    

ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿಗೆ ಕೊರೋನಾ ಪಾಸಿಟಿವ್ .! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕೊರೋನಾ ವಾರಿಯರ್ ಗೆ ಕೊರೊನಾ ಪಾಸಿಟಿವ್ ಹಿನ್ನಲೆ ➤ ಮರ್ಧಾಳದ ಚಿಕನ್ ಸೆಂಟರ್ ಸೀಲ್ ಡೌನ್

(ನ್ಯೂಸ್ ಕಡಬ) newskadaba.com ಕಡಬ,ಜು.01: ಮಂಗಳವಾರದಂದು ಕಡಬಕ್ಕೆ ಮತ್ತೆ ಕೊರೋನಾ ಅಘಾತ ಉಂಟಾಗಿದ್ದು, ಕಡಬದ ಕೊರೋನಾ ವಾರಿಯರ್ ಗೆ ಕೊರೊನಾ ಪಾಸಿಟಿವ್ ದೃಢ ಪಟ್ಟಿದೆ. ಇದರಿಂದಾಗಿ ಕೊರೋನಾ ಸೋಂಕಿತ ಮಹಿಳೆ ಭೇಟಿ ನಿಡೀದ್ದಾರೆ ಎನ್ನಲಾದ ಮರ್ಧಾಳದ ಚಿಕನ್ ಸೆಂಟರ್ ಅಂಗಡಿಯನ್ನ ಸೀಲ್ ಡೌನ್ ಮಾಡಿದ್ದಾರೆ.   ಕಡಬ ತಾಲೂಕಿನ 102 ನೆಕ್ಕಿಲಾಡಿ ಗ್ರಾಮದ ಕೊರೋನಾ ವಾರಿಯರ್, ಸುಳ್ಯದಲ್ಲಿ ಕರ್ತವ್ಯದಲ್ಲಿದ್ದ ನರ್ಸ್ ಓರ್ವರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಅವರು ಸುಳ್ಯದಿಂದ ಪ್ರತೀದಿನ ತನ್ನ ಮನೆಗೆ ಬರುತ್ತಿದ್ದರು ಎನ್ನಲಾಗಿದೆ. ಇಂದು

ಕೊರೋನಾ ವಾರಿಯರ್ ಗೆ ಕೊರೊನಾ ಪಾಸಿಟಿವ್ ಹಿನ್ನಲೆ ➤ ಮರ್ಧಾಳದ ಚಿಕನ್ ಸೆಂಟರ್ ಸೀಲ್ ಡೌನ್ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top