ಕಾರ್ಕಳ ಬೆಂಕಿಗೆ ಆಹುತಿಯಾದ ಲಕ್ಷಾಂತರ ಮೌಲ್ಯದ ಚಿನ್ನಾಭರಣದ ಬಾಕ್ಸ್
(ನ್ಯೂಸ್ ಕಡಬ) newskadaba.com.ಕಾರ್ಕಳ,ಜು.10: ಚಿನ್ನಾಭರಣಗಳ ಬಾಕ್ಸ್ ತಯಾರಿಕ ಫ್ಯಾಕ್ಟರಿಯಲ್ಲಿ ಆಕಸ್ಮಕಿ ಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ಸೊತ್ತು ಸುಟ್ಟು ಭಸ್ಮವಾದ ಘಟನೆ ಇಂದು ಬೆಳಗ್ಗೆ ಮುಂಡ್ಕೂರಿನಲ್ಲಿ ನಡೆದಿದೆ. ಕಾರ್ಕಳದ ತಾಲೂಕಿನ ಮುಂಡ್ಕೂರು ಗ್ರಾಮದ ಸುಧೀರ್ ಶೆಣೈ ಎಂಬವರಿಗೆ ಸೇರಿದ ಫ್ಯಾಕ್ಟರಿಯಾಯಲ್ಲಿ ಮುಂಜಾನೆ ಆಕಸ್ಮಿಕವಾಗಿ ಕಾಣಿಸಿ ಕೊಂಡ ಬೆಂಕಿ ನೋಡನೋಡುತ್ತಲೆ ಹಬ್ಬಿ ಅಪಾರ ಸೊತ್ತುಗಳು ನಾಶವಾಗಿವೆ. ತಕ್ಷಣ ಘಟನಾ ಸ್ಥಳಕ್ಕೆ ಸ್ಥಳೀಯರು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ಬಂದು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಾರ್ಕಳ ಬೆಂಕಿಗೆ ಆಹುತಿಯಾದ ಲಕ್ಷಾಂತರ ಮೌಲ್ಯದ ಚಿನ್ನಾಭರಣದ ಬಾಕ್ಸ್ Read More »
ಕರಾವಳಿ








