Mangalore

ಕೆ. ಕಲ್ಯಾಣ್ ಬಾಳಲ್ಲಿ ಬಿರುಕು ಮೂಡಿಸಿದ್ದ ಗಂಗಾ ಕುಲಕರ್ಣಿ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಕೊಪ್ಪಳ ಅ. 29: ಚಿತ್ರ ಸಾಹಿತಿ ಕೆ. ಕಲ್ಯಾಣ್ ದಾಂಪತ್ಯದಲ್ಲಿ ಬಿರುಕು ಮೂಡಿಸಿದ್ದ ಗಂಗಾ ಕುಲಕರ್ಣಿ ಆತ್ಮಹತ್ಯೆಗೆ ಶರಣಾಗಿದ್ದಾರೆ.ಇಂದು ವಿಷಸೇವಿಸಿ ಕೊಪ್ಪಳ ಜಿಲ್ಲೆಯ ಕುಷ್ಟಗಿ ನ್ಯಾಯಾಲಯಕ್ಕೆ ಆಗಮಿಸಿದ್ದ ಗಂಗಾ ಕುಲಕರ್ಣಿ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದ್ರೂ, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.  ಕುಷ್ಟಗಿ ತಾಲೂಕಿನ ಕ್ಯಾದಿಗುಪ್ಪ ಗ್ರಾಮದಲ್ಲಿ ಕೆಲಸ ಕೊಡಿಸೋದಾಗಿ ಹೇಳಿ ಸಂತೋಷ್ ಕುಲಕರ್ಣಿ ಎಂಬವರಿಂದ ಮೂರು ಲಕ್ಷ ದೋಚಿದ್ರು. ಈ ಸಂಬಂಧ 2016 ರಲ್ಲಿ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಗಂಗಾ […]

ಕೆ. ಕಲ್ಯಾಣ್ ಬಾಳಲ್ಲಿ ಬಿರುಕು ಮೂಡಿಸಿದ್ದ ಗಂಗಾ ಕುಲಕರ್ಣಿ ಆತ್ಮಹತ್ಯೆ Read More »

ಕರ್ನಾಟಕ

ಗುಜರಾತಿನ ಮಾಜಿ ಸಿಎಂ ಕೇಶುಭಾಯ್ ಪಟೇಲ್ ಇನ್ನಿಲ್ಲ

(ನ್ಯೂಸ್ ಕಡಬ) newskadaba.com ನವದೆಹಲಿ ಅ. 29: ಗುಜರಾತ್ ಮಾಜಿ ಮುಖ್ಯಮಂತ್ರಿ ಕೇಶುಭಾಯ್ ಪಟೇಲ್ ತಮ್ಮ 92 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಎರಡು ಅವಧಿಗೆ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಅವರಿಗೆ 92 ವರ್ಷ ವಯಸ್ಸಾಗಿತ್ತು.     ಎದೆನೋವಿನಿಂದ ದೂರಿದ ನಂತರ ಅವರನ್ನು ಅಹಮದಾಬಾದ್‌ನ ಸ್ಟರ್ಲಿಂಗ್ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಅವರು ಹೃದಯಾಘಾತದಿಂದ ನಿಧನರಾದರು. ಕೇಶುಭಾಯ್ ಪಟೇಲ್ 1995 ಮತ್ತು 1998 ರಿಂದ 2001 ರವರೆಗೆ ಗುಜರಾತ್ ಸಿಎಂ ಆಗಿ ಸೇವೆ ಸಲ್ಲಿಸಿದರು.ಗುಜರಾತ್ ವಿಧಾನಸಭೆಯ ಸದಸ್ಯರಾಗಿ ಆರು ಬಾರಿ

ಗುಜರಾತಿನ ಮಾಜಿ ಸಿಎಂ ಕೇಶುಭಾಯ್ ಪಟೇಲ್ ಇನ್ನಿಲ್ಲ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಕಾರು ಗುದ್ದಿದ ಕಾರು ➤ ಚಾಲಕ ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ಮೈಸೂರು ಅ. 29: ಅತಿವೇಗವಾಗಿ ಚಲಿಸುತಿದ್ದ ಕಾರೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ಮರಕ್ಕೆ ಗುದ್ದಿ, ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಇಲ್ಲಿನ ಬೋಗಾದಿ ಜಂಕ್ಷನ್ ಬಳಿ ನಡೆದಿದೆ.   ಕಾರು ಕುಕ್ಕರಹಳ್ಳಿ ಕೆರೆಯ ಬಳಿಯಿಂದ ಬೋಗಾದಿ ಜಂಕ್ಷನ್ ಕಡೆ ಅತಿವೇಗವಾಗಿ ಚಲಿಸುತ್ತಿತ್ತು ಎನ್ನಲಾಗಿದೆ. ಘಟನೆಯಲ್ಲಿ ಕಾರು ಸಂಪೂರ್ಣ ನಜ್ಜು ಗುಜ್ಜಾಗಿದ್ದು ಚಾಲಕ ಚನ್ನಪಟ್ಟಣ ನಿವಾಸಿ ಅರುಣ್ ಕುಮಾರ್(23) ಸ್ಥಳದಲ್ಲೇ ಮೃತನಾಗಿದ್ದಾನೆ.ಕಾರಿನಲ್ಲಿ ಪ್ರಯಾಣಿಸುತಿದ್ದ ಇನ್ನೂ ಮೂವರು ಗಂಭಿರವ ಗಾಯಗೊಂಡಿದ್ದು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಕೆ.ಆರ್.ಸಂಚಾರಿ

ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಕಾರು ಗುದ್ದಿದ ಕಾರು ➤ ಚಾಲಕ ಸ್ಥಳದಲ್ಲೇ ಮೃತ್ಯು Read More »

ಕರ್ನಾಟಕ

ಸ್ಕೂಟರ್ – ಗೂಡ್ಸ್ ಟೆಂಪೋ ನಡುವೆ ಅಪಘಾತ ➤ ಸವಾರ ಮೃತ್ಯು

(ನ್ಯೂಸ್ ಕಡಬ) newskadaba.com  ಬಂಟ್ವಾಳ, ಅ. 29: ರಾ.ಹೆ 75ರ ಕಲಡ್ಕದಲ್ಲಿ ಸ್ಕೂಟರ್ ಮತ್ತು ಗೂಡ್ಸ್ ಟೆಂಪೋ ನಡುವೆ ಅಪಘಾತ ಸಂಭವಿಸಿ ಸ್ಕೂಟರ್ ಸವಾರ ಸಾವನ್ನಪ್ಪಿದ ಘಟನೆ ನಡೆದಿದೆ. ಅಪಘಾತದಲ್ಲಿ ಸಾವನ್ನಪ್ಪಿದ ವ್ಯಕ್ತಿ ಬಿ.ಸಿ ರೋಡಿನ ಸಿವಿಲ್ ಇಂಜಿನಿಯರ್ ವಸಂತ ಪೂಜಾರಿ ಎಂದು ತಿಳಿದು ಬಂದಿದೆ. ಸ್ಕೂಟರ್ ಮತ್ತು ಟೆಂಪೋ ನಡುವೆ ನಡೆದ ಅಪಘಾತದಲ್ಲಿ ವಸಂತ ಪೂಜಾರಿ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ

ಸ್ಕೂಟರ್ – ಗೂಡ್ಸ್ ಟೆಂಪೋ ನಡುವೆ ಅಪಘಾತ ➤ ಸವಾರ ಮೃತ್ಯು Read More »

ಕರಾವಳಿ

ಮಂಗಳೂರಿನಲ್ಲಿ ಕ್ರಿಕೆಟ್‌ ದಂಧೆ ➤ 16 ಆರೋಪಿಗಳ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಅ. 29. ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ 16 ಮಂದಿಯನ್ನು ಮಂಗಳೂರು ಪೊಲೀಸರು ಮಹತ್ವದ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ 28 ಮೊಬೈಲ್, 8 ಲಕ್ಷ ರೂಪಾಯಿ ಮೌಲ್ಯದ ಕಾರ್, 2.67 ಲಕ್ಷ ರೂ. ವಶಕ್ಕೆ ಪಡೆಯಲಾಗಿದೆ.     ಐಪಿಎಲ್ ನಡೆಯುತ್ತಿರುವುದರಿಂದ ಕ್ರಿಕೆಟ್ ಬೆಟ್ಟಿಂಗ್ ದಂಧೆ ಜೋರಾಗಿ ನಡೆಯುತ್ತಿದೆ. ಇದರಿಂದಾಗಿ ಮಂಗಳೂರಿನ ವಿವಿಧೆಡೆ ಕಾರ್ಯಾಚರಣೆ ನಡೆಸಲಾಗಿದ್ದು, 4 ಪ್ರಕರಣಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ಪೊಲೀಸರು ಕಟ್ಟುನಿಟ್ಟಿನ

ಮಂಗಳೂರಿನಲ್ಲಿ ಕ್ರಿಕೆಟ್‌ ದಂಧೆ ➤ 16 ಆರೋಪಿಗಳ ಬಂಧನ Read More »

ಕರಾವಳಿ

ಪುತ್ತೂರಿನಲ್ಲಿ ಕೆರೆಗೆ ಬಿದ್ದು ಯುವತಿ ಮೃತ್ಯು ಪ್ರಕರಣ ➤ ವಿವಾಹಿತ ಮಾಜಿ ಪ್ರಿಯತಮನಿಂದ ಕಿರುಕುಳ ಆರೋಪ

(ನ್ಯೂಸ್ ಕಡಬ) newskadaba.com ಪುತ್ತೂರು ಅ. 29: ಮಹಿಳೆಯೋರ್ವರು ಕೆರೆಗೆ ಬಿದ್ದು ಮೃತಪಟ್ಟ ಘಟನೆ ಆರ್ಯಾಪು ಗ್ರಾಮದ ಸಂಪ್ಯ ಸಮೀಪದ ಕೊಲ್ಯ ಎಂಬಲ್ಲಿ ನಡೆದಿತ್ತು.ಮೃತ ಮಹಿಳೆಯನ್ನು ಸುಳ್ಯ ತಾಲೂಕಿನ ಕಲ್ಲುಗುಂಡಿ‌ ನಿವಾಸಿ ಮಧುಶ್ರೀ ಎಂದು ಗುರುತಿಸಲಾಗಿದೆ.  ಇವರ, “ಮಾಜಿ ಪ್ರಿಯಕರ ನೀಡುತ್ತಿದ್ದ ಮಾನಸಿಕ ಕಿರುಕುಳ, ಜೀವ ಬೆದರಿಕೆಯಿಂದ ಮನನೊಂದು ಆತ್ಮ ಹತ್ಯೆ ಮಾಡಿಕೊಂಡಿರುವುದಾಗಿ” ಆಕೆ ತನ್ನ ಡೈರಿಯಲ್ಲಿ ಬೆರೆದುಕೊಂಡಿರುವ ಆಧಾರದಲ್ಲಿ ಮತ್ತು ಆಕೆಯ ಮಾವ ನೀಡಿದ ದೂರಿನ ಆಧಾರದಲ್ಲಿ ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈಕೆ ಪುತ್ತೂರಿನ ಖಾಸಗಿ

ಪುತ್ತೂರಿನಲ್ಲಿ ಕೆರೆಗೆ ಬಿದ್ದು ಯುವತಿ ಮೃತ್ಯು ಪ್ರಕರಣ ➤ ವಿವಾಹಿತ ಮಾಜಿ ಪ್ರಿಯತಮನಿಂದ ಕಿರುಕುಳ ಆರೋಪ Read More »

ಕರಾವಳಿ

ಕಾರವಾರ: ಅಕ್ರಮ ಮದ್ಯ ಸಾಗಾಟ, ಓರ್ವನ ಬಂಧನ.!!

(ನ್ಯೂಸ್ ಕಡಬ) newskadaba.com ಕಾರವಾರ ಅ. 29: ಗೋವಾದಿಂದ ಸಮುದ್ರ ಮಾರ್ಗದ ಮೂಲಕ ಮದ್ಯ ಸಾಗಾಟ ಮಾಡುತ್ತಿರುವ ವೇಳೆ ಪೊಲೀಸರು ದಾಳಿ ನಡೆಸಿದ ಘಟನೆ ಕಾರವಾರ ತಾಲೂಕಿನ ಕಡವಾಡದಲ್ಲಿ ನಡೆದಿದೆ. ದೋಣಿಯ ಮುಲಕ ಮದ್ಯ ಸಾಗಿಸುತ್ತಿದ್ದಾಗ ಪೊಲೀಸರು ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಕಡವಾಡದ ರೋಶನ್ ಬಾಂದೇಕರ್ ಎಂಬಾತನನ್ನ ಪೊಲೀಸರು ಬಂಧಿಸಿದ್ದಾರೆ. ಗೋವಾದಿಂದ ಸಮುದ್ರ ಮಾರ್ಗವಾಗಿ ದೋಣಿ ಮೂಲಕ ತಂದಿದ್ದ ಅಕ್ರಮ ಗೋವಾ ಮದ್ಯವನ್ನು ಸಾಗಿಸಲು ಯತ್ನಿಸುತ್ತಿರುವಾಗ ಪೊಲೀಸರು ದಾಳಿ ನಡೆಸಿದ್ದರು. ಸುಮಾರು16 ಸಾವಿರ ಮೌಲ್ಯದ 85 ಲೀಟರ್

ಕಾರವಾರ: ಅಕ್ರಮ ಮದ್ಯ ಸಾಗಾಟ, ಓರ್ವನ ಬಂಧನ.!! Read More »

ಕರಾವಳಿ, ಕರ್ನಾಟಕ

ಬಿಜೆಪಿ ಕಾರ್ಯಕರ್ತ, ಫೋಟೋಗ್ರಾಫರ್ ಕೊಲೆ ಯತ್ನ ಪ್ರಕರಣ ➤ ಮೂವರು ಆರೋಪಿಗಳ ಅರೇಸ್ಟ್

(ನ್ಯೂಸ್ ಕಡಬ) newskadaba.com ಫರಂಗಿಪೇಟೆ ಅ. 29: ಫರಂಗಿಪೇಟೆಯಲ್ಲಿ ಸ್ಥಳೀಯ ಬಿಜೆಪಿ ಮುಖಂಡ, ಪೊಟೋಗ್ರಾಫರ್ ಮೇಲೆ ತಲವಾರು ದಾಳಿ ನಡೆಸಿದ ಮೂವರನ್ನು ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ಕೂಡಲೇ ಕಾರ್ಯಪ್ರವೃತ್ತರಾಗಿ  ಆರೋಪಿಗಳನ್ನು ಬಂಧಿಸಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮುಹಮ್ಮದ್ ಅರ್ಷದ್, ಅಬ್ದುಲ್ ರೆಹಮಾನ್, ಮುಹಮ್ಮದ್ ಸೈಫುದ್ದೀನ್ ಬಂಧಿತ ಆರೋಪಿಗಳಾಗಿದ್ದಾರೆ.  ಬಂಟ್ವಾಳ ತಾಲ್ಲೂಕಿನ ಪುದು ಗ್ರಾಮದ ಫರಂಗಿಪೇಟೆಯಲ್ಲಿನ ದಿನೇಶ್ ರವರ ತೃಷಾ ಪೋಟೊ ಸ್ಟುಡಿಯೋಕ್ಕೆ 4 ಜನ ಯುವಕರು ಪೋಟೊ ತೆಗೆಸುವಂತೆ ಬಂದು ಪೊಟೋಗ್ರಾಫರ್,ಸ್ಥಳೀಯ ಬಿಜೆಪಿ ಮುಖಂಡ ದಿನೇಶ್ ಅವರ  ಕೈ, ಹೊಟ್ಟೆಗೆ

ಬಿಜೆಪಿ ಕಾರ್ಯಕರ್ತ, ಫೋಟೋಗ್ರಾಫರ್ ಕೊಲೆ ಯತ್ನ ಪ್ರಕರಣ ➤ ಮೂವರು ಆರೋಪಿಗಳ ಅರೇಸ್ಟ್ Read More »

ಕರಾವಳಿ, ಕ್ರೈಮ್ ನ್ಯೂಸ್

ಮಲ್ಪೆ ಬಂದರಿನಲ್ಲಿ 17 ಮಕ್ಕಳ ರಕ್ಷಣೆ.!

(ನ್ಯೂಸ್ ಕಡಬ) newskadaba.com ಮಲ್ಪೆ  ಅ. 29: ಮಲ್ಪೆ ಬಂದರಿನಲ್ಲಿ ಮೀನು ಆಯುವ ಬಳ್ಳಾರಿ ಮತ್ತು ಕೊಪ್ಪಳ ಮೂಲದ 17 ಮಕ್ಕಳನ್ನು ಗುರುವಾರ ಬೆಳಿಗ್ಗೆ ರಕ್ಷಣೆ ಮಾಡಲಾಗಿದೆ. ಮಕ್ಕಳ ರಕ್ಷಣಾ ಘಟಕ ಹಾಗು ಇತರೆ ಇಲಾಖೆ ಅಧಿಕಾರಿಗಳು ಇಂದು ಬೆಳಿಗ್ಗೆ ಮಲ್ಪೆ ಬಂದರಿಗೆ ದಾಳಿ ನಡೆಸಿ ಮೀನು ಆಯುವ ಕಾರ್ಯದಲ್ಲಿ ತೊಡಗಿದ್ದ 17 ಮಂದಿ ಬಾಲ ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಕಾರ್ಮಿಕ ಇಲಾಖೆ, ಸಾರ್ವಜನೀಕ

ಮಲ್ಪೆ ಬಂದರಿನಲ್ಲಿ 17 ಮಕ್ಕಳ ರಕ್ಷಣೆ.! Read More »

ಕರಾವಳಿ, ಕರ್ನಾಟಕ

ದೇಗುಲದಲ್ಲಿ ಪ್ರಸಾದ ಸೇವಿಸಿ 70 ಮಂದಿ ಅಸ್ವಸ್ಥ.!

(ನ್ಯೂಸ್ ಕಡಬ) newskadaba.com ಮಂಡ್ಯ ಅ. 29: ಮಾರಮ್ಮ ದೇವಿಯ ಪ್ರಸಾದ ಸೇವಿಸಿ 70 ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಲಿಂಗಪಟ್ಟಣ ಗ್ರಾಮದಲ್ಲಿ ಘಟನೆ ನಡೆದಿದೆ.   ಕಳೆದ ದಿನ ರಾತ್ರಿ ಗ್ರಾಮದ ಮಾರಮ್ಮನ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಲಾಗಿತ್ತು. ಪೂಜೆ ನೆರವೇರಿಸಿ ಪ್ರಸಾದಕ್ಕಾಗಿ ಪುಳಿಯೋಗರೆ ಮಾಡಲಾಗಿತ್ತು. ಇದನ್ನು ಸೇವಿಸಿದ 70ಕ್ಕೂ ಅಧಿಕ ಮಂದಿ ಅಸ್ವಸ್ಥರಾಗಿದ್ದಾರೆ. ದೇವಾಲಯದ ಪೂಜೆಗೆ ಭಾಗವಹಿಸಿದ್ದ 200 ಜನರಲ್ಲಿ ಸುಮಾರು 100 ಮಂದಿ ಪ್ರಸಾದ ಸೇವನೆ ಮಾಡಿದ್ದಾರೆ.

ದೇಗುಲದಲ್ಲಿ ಪ್ರಸಾದ ಸೇವಿಸಿ 70 ಮಂದಿ ಅಸ್ವಸ್ಥ.! Read More »

ಕರ್ನಾಟಕ
Scroll to Top