Mangalore

ಮುಲ್ಕಿ :ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಕೂಲಿಕಾರ್ಮಿಕ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.11:ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕೊಲ್ನಾಡು ಗುಡ್ಡೆ ಹಾಡಿಯಲ್ಲಿ ಕೂಲಿಕಾರ್ಮಿಕ ಮರಕ್ಕೆ ನೈಲಾನ್ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ವ್ಯಕ್ತಿಯನ್ನು ಮುಲ್ಕಿ ಕೆಎಸ್ ರಾವ್ ನಗರ ನಿವಾಸಿ ಕೃಷ್ಣ ಪೂಜಾರಿ (58) ಗುರುತಿಸಲಾಗಿದೆ. ಮೃತ ಕೃಷ್ಣ ಪೂಜಾರಿ ಕೂಲಿ ಕೆಲಸ ಮಾಡಿಕೊಂಡಿದ್ದು, ಕಳೆದ ತಿಂಗಳ ಹಿಂದೆ ಕೋಲ್ನಾಡು ಹೋಯಿಗೆ ಫ್ಯಾಕ್ಟರಿಯಲ್ಲಿ ಕೆಲಸಕ್ಕಿದ್ದು ಬಳಿಕ ಫ್ಯಾಕ್ಟರಿ ಮುಚ್ಚುಗಡೆಯಾದ ಬಳಿಕ ಪೈಪ್ ಕಂಪನಿಯೊಂದರಲ್ಲಿ ಮಾಡುತ್ತಿದ್ದರು.ಕಂಪನಿ ಮುಚ್ಚುಗಡೆಯಾದ ಬಳಿಕ ಆತಂಕಕ್ಕೆ ಒಳಗಾಗಿದ್ದರು ಎನ್ನಲಾಗಿದೆ. […]

ಮುಲ್ಕಿ :ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಕೂಲಿಕಾರ್ಮಿಕ Read More »

ಕರಾವಳಿ

ಬಂಟ್ವಾಳ :ಸಿಡಿಲು ಬಡಿದು ವ್ಯಕ್ತಿ ಮೃತ್ಯು

(ನ್ಯೂಸ್ ಕಡಬ) newskadaba.com ಬಂಟ್ವಾಳ, ಡಿ.11: ಬಂಟ್ವಾಳ ತಾಲೂಕಿನಲ್ಲಿ ಸಿಡಿಲು ಬಡಿದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ತಾಲೂಕಿನ ಗಡಿ ಭಾಗವಾಗಿರುವ ಕರೋಪಾಡಿ ಗ್ರಾಮದ ಸಾರ್ಥಕೋಡಿ ಎಂಬಲ್ಲಿ ಗುರುವಾರ ರಾತ್ರಿ ಘಟನೆ ನಡೆದಿದೆ. ಚಂದಪ್ಪ ಮೂಲ್ಯ ಮೃತಪಟ್ಟವರು.ರಾತ್ರಿ ಮನೆಗೆ ಸಿಡಿಲು ಬಡಿದಿದೆ, ಸುಮಾರು 12.30ರ ಬಳಿಕ ಘಟನೆ ನಡೆದಿದ್ದು, ಚಂದಪ್ಪ ಮೂಲ್ಯ ಅವರು ಸಿಡಿಲಾಘಾತದಿಂದ ತೀವ್ರ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಇದೇ ಸಂದರ್ಭ ಮನೆಗೂ ಸಿಡಿಲಾಘಾತದಿಂದ ಹಾನಿಗಳುಂಟಾಗಿವೆ. ವಿದ್ಯುತ್ ಉಪಕರಣಗಳು ಸುಟ್ಟುಹೋಗಿವೆ.

ಬಂಟ್ವಾಳ :ಸಿಡಿಲು ಬಡಿದು ವ್ಯಕ್ತಿ ಮೃತ್ಯು Read More »

ಕರಾವಳಿ

ಗೃಹರಕ್ಷಕರು ಚುನಾವಣಾ ಕರ್ತವ್ಯ ನಿರ್ವಹಿಸಿ- ಚೂಂತಾರು 

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.11: ಪ್ರತಿಯೊಬ್ಬ ಗೃಹರಕ್ಷಕರು ಚುನಾವಣಾ ಕರ್ತವ್ಯವನ್ನು ನಿರ್ವಹಿಸಬೇಕು ಮತ್ತು ಗುರುತಿನ ಚೀಟಿಯನ್ನು ಪಡೆಯದ ಗೃಹರಕ್ಷಕರು ಜಿಲ್ಲಾ ಗೃಹರಕ್ಷಕದಳ ಕಛೇರಿಗೆ ಬಂದು ಗುರುತಿನ ಚೀಟಿಯನ್ನು ಪಡೆದುಕೊಳ್ಳಬೇಕಾಗಿ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಸೂಚಿಸಿದರು. ಅವರು ಡಿಸೆಂಬರ್ 10 ರಂದು ಸುಳ್ಯ ಘಟಕಕ್ಕೆ ಭೇಟಿ ನೀಡಿ ಗ್ರಾಮ ಪಂಚಾಯತ್ ಚುನಾವಣಾ ಕರ್ತವ್ಯಕ್ಕೆ ಗೃಹರಕ್ಷಕರನ್ನು ನಿಯೋಜಿಸುವ ಬಗ್ಗೆ ಚರ್ಚಿಸಿದರು ಹಾಗೂ ಗೃಹರಕ್ಷಕರ ಕುಂದು ಕೊರತೆಗಳನ್ನು ಆಲಿಸಿದರು.ಸುಳ್ಯ ಘಟಕದ ಘಟಕಾಧಿಕಾರಿ ಜಯಂತ್

ಗೃಹರಕ್ಷಕರು ಚುನಾವಣಾ ಕರ್ತವ್ಯ ನಿರ್ವಹಿಸಿ- ಚೂಂತಾರು  Read More »

ಕರಾವಳಿ

ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನ ಹಾಗೂ ಪಾನ್ ಮಸಾಲಗಳನ್ನು ಜಗಿದು ಉಗುಳುವುದು ಶಿಕ್ಷಾರ್ಹ ಅಪರಾಧ ➤ ಡಾ. ರಾಜೇಂದ್ರ ಕೆ.ವಿ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.11:ಸಾರ್ವಜನಿಕ ಪ್ರದೇಶಗಳಲ್ಲಿ ಧೂಮಪಾನ ಸೇವನೆ ಹಾಗೂ ತಂಬಾಕು ಉತ್ಪನ್ನ ಜಗಿದು ಉಗಿಯುವುದು ಅಪರಾಧವಾಗಿದ್ದು, ಇಂತಹ ಪ್ರಕರಣಗಳು ಕಂಡು ಬಂದರೆ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಹೇಳಿದರು.  ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಮನ್ವಯ ಸಮಿತಿ ಸಭೆಯನ್ನುದ್ದೇಶಿ ಮಾತನಾಡಿದರು. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಿದ್ದು ಇದನ್ನು ಉಲ್ಲಂಘನೆ ಮಾಡಿದವರಿಗೆ ರೂ. 200 ಗಳ ದಂಡ

ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನ ಹಾಗೂ ಪಾನ್ ಮಸಾಲಗಳನ್ನು ಜಗಿದು ಉಗುಳುವುದು ಶಿಕ್ಷಾರ್ಹ ಅಪರಾಧ ➤ ಡಾ. ರಾಜೇಂದ್ರ ಕೆ.ವಿ Read More »

ಕರಾವಳಿ

ರೆಂಜಿಲಾಡಿ: ಕಾಡಾನೆ ದಾಳಿಗೆ ಅಪಾರ ಕೃಷಿ ಹಾನಿ

(ನ್ಯೂಸ್ ಕಡಬ) newskadaba.com ಕಲ್ಲುಗುಡ್ಡೆ, ಡಿ.11: ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ಮುಂದುವರಿದಿದ್ದು, ರೆಂಜಿಲಾಡಿ ಗ್ರಾಮದಲ್ಲಿ ಕಾಡಾನೆ ದಾಳಿಗೆ ಅಪಾರ ಪ್ರಮಾಣದ ಕೃಷಿ ಹಾನಿ ಉಂಟಾಗಿದೆ. ರೆಂಜಿಲಾಡಿ ಗ್ರಾಮದ ಕೃಷಿಕ ಕೆರೆತೋಟ ಮೃತ್ಯುಂಜಯ ಬೀಡೆ ಅವರ ಅಲಾಟ ಎಂಬಲ್ಲಿಯ ಕೃಷಿ ತೋಟಕ್ಕೆ ಡಿ.9ರ ರಾತ್ರಿ ಕಾಡಾನೆ ನುಗ್ಗಿ 250ಕ್ಕೂ ಅಧಿಕ ಅಡಿಕೆ ಮರ, 25ಕ್ಕೂ ಅಧಿಕ ಬಾಳೆ ಕೃಷಿಯನ್ನು ಪುಡಿಗೈದಿದೆ. ತಡೆ ಬೇಲಿ ಹಾಗೂ ನೀರಿನ ಪೈಪ್ ಕಾಡಾನೆ ದಾಳಿಗೆ ಹಾನಿಗೊಳಗಾಗಿದೆ.

ರೆಂಜಿಲಾಡಿ: ಕಾಡಾನೆ ದಾಳಿಗೆ ಅಪಾರ ಕೃಷಿ ಹಾನಿ Read More »

ಕರಾವಳಿ

ಕಾಸರಗೋಡು :ಯುವತಿಗೆ ಬೆದರಿಸಿ ಲಕ್ಷಾಂತರ ರೂ. ವಂಚಿಸಲು ಯತ್ನ ➤ ಆರೋಪಿ ಖಾಕಿ ಬಲೆಗೆ

(ನ್ಯೂಸ್ ಕಡಬ) newskadaba.com ವಿದ್ಯಾನಗರ, ಡಿ.09: ಯುವತಿಗೆ ಬೆದರಿಸಿ ಲಕ್ಷಾಂತರ ರೂ. ವಂಚಿಸಲು ಯತ್ನಿಸಿದ್ದ ಓರ್ವ ಆರೋಪಿಯನ್ನು ವಿದ್ಯಾನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಕೊಲ್ಲಂಪಾಡಿಯ ಅಬ್ದುಲ್ ಖಾದರ್ (31) ಎಂದು ಗುರುತಿಸಲಾಗಿದೆ. ಅಬ್ದುಲ್ ಖಾದರ್ ಸಾಮಾಜಿಕ ಜಾಲತಾಣದಲ್ಲಿ ಯುವತಿಯೊಬ್ಬಳಿಗೆ ಪರಿಚಯವಾಗಿದ್ದ. ಆಕೆಯ ಸ್ನೇಹ ಬೆಳೆಸಿ ಖಾಸಗಿ ಫೋಟೋವನ್ನು ಪಡೆದುಕೊಂಡಿದ್ದ. ಅವುಗಳನ್ನು ಸಾಮಾಜಿಕ ಜಾಲತಾಣದ ಮೂಲಕ ಬಹಿರಂಗಪಡಿಸುವುದಾಗಿ ಬೆದರಿಸಿದ್ದ ಆರೋಪಿಯು 25 ಲಕ್ಷ ರೂ. ಗೆ ಬೇಡಿಕೆ ಇಟ್ಟಿದ್ದ. ಈ ಸಂಬಂಧ ಯುವತಿಯು ವಿದ್ಯಾನಗರ ಠಾಣೆಗೆ ದೂರು

ಕಾಸರಗೋಡು :ಯುವತಿಗೆ ಬೆದರಿಸಿ ಲಕ್ಷಾಂತರ ರೂ. ವಂಚಿಸಲು ಯತ್ನ ➤ ಆರೋಪಿ ಖಾಕಿ ಬಲೆಗೆ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಪಂಜ : ಗ್ರಾಮ ಪಂಚಾಯತ್ ಮತದಾನ ಜಾಗೃತಿಗಾಗಿ ಬೀದಿನಾಟಕ

(ನ್ಯೂಸ್ ಕಡಬ) newskadaba.com ಪಂಜ, ಡಿ.09: ಪಂಜದಲ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಮತದಾನದ ಅರಿವು ಮೂಡಿಸುವ ಸಲುವಾಗಿ ಬೀದಿನಾಟಕ ಪಂಜ ಪೇಟೆಯಲ್ಲಿ ನಡೆಸಿದ್ದಾರೆ.   ರಾಜ್ಯಾದ್ಯಂತ ಗ್ರಾಮ ಪಂಚಾಯತಿ ಮಿನಿ ಸಮರಕ್ಕೆ ಭರದ ಸಿದ್ದತೆಗಳು ನಡೆದಿವೆ.ಗ್ರಾಮದಲ್ಲಿ ಸಮಸ್ಯೆಗಳಿಗೆ ಮುಕ್ತಿ ಸಿಗದ ಹಿನ್ನಲೆಯಲ್ಲಿ ಈಗಾಗಲೇ ಕರಾವಳಿಯಾ ಕೆಲ ಗ್ರಾಮಗಳು ಚುನಾವಣೆ ಬಹಿಷ್ಕ ಬ್ಯಾನರ್ ಹಾಕುವ ಮೂಲಕ ಈ ಬಾರಿಯ ಗ್ರಾ.ಪಂ ಚುನಾವಣೆಯನ್ನು ಬಹಿಷ್ಕರ

ಪಂಜ : ಗ್ರಾಮ ಪಂಚಾಯತ್ ಮತದಾನ ಜಾಗೃತಿಗಾಗಿ ಬೀದಿನಾಟಕ Read More »

ಕರಾವಳಿ

ದ.ಕ.‌ ಪ್ರಥಮ‌ ಹಂತದ ಗ್ರಾಪಂ ಚುನಾವಣೆ ➤ 68 ನಾಮಪತ್ರ ಸಲ್ಲಿಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.09:ದ.ಕ. ಜಿಲ್ಲೆಯಲ್ಲಿ ಡಿ.22ರಂದು ನಡೆಯಲಿರುವ ಮೊದಲ ಹಂತದ ಗ್ರಾಪಂ ಚುನಾವಣೆಗೆ ಎರಡನೆಯ ದಿನವಾದ ಮಂಗಳವಾರ 38 ನಾಮಪತ್ರಗಳು ಸಲ್ಲಿಕೆಯಾಗಿವೆ.   ಮಂಗಳೂರು ತಾಲೂಕಿನಲ್ಲಿ 8, ಮೂಡುಬಿದಿರೆ ತಾಲೂಕಿನಲ್ಲಿ 3 ಮತ್ತು ಬಂಟ್ವಾಳ ತಾಲೂಕಿನಲ್ಲಿ 27 ನಾಮಪತ್ರಗಳು ಸಲ್ಲಿಕೆಯಾಗಿವೆ. ನಾಮಪತ್ರಿಕೆಯ ಮೊದಲ ದಿನ ಒಟ್ಟು 22 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಮಂಗಳವಾರ ಸಲ್ಲಿಕೆಯಾದ 38 ನಾಮಪತ್ರಗಳು ಸೇರಿ ಈವರೆಗೆ ಒಟ್ಟು 68 ನಾಮಪತ್ರಗಳು ಸಲ್ಲಿಕೆಯಾಗಿದೆ. ಶುಕ್ರವಾರ ನಾಮಪತ್ರ ಸಲ್ಲಿಸಲು ಕೊನೇಯ ದಿನವಾಗಿದೆ.ಜಿಲ್ಲೆಯಲ್ಲಿ ಪ್ರಥಮ‌ ಹಂತದಲ್ಲಿ

ದ.ಕ.‌ ಪ್ರಥಮ‌ ಹಂತದ ಗ್ರಾಪಂ ಚುನಾವಣೆ ➤ 68 ನಾಮಪತ್ರ ಸಲ್ಲಿಕೆ Read More »

ಕರಾವಳಿ

ಸಾಲ್ಮರ :ಸಹೋದರಿ ಮನೆಯಲ್ಲಿದ್ದ ಅವಿವಾಹಿತೆ ನಾಪತ್ತೆ ಪ್ರಕರಣ ➤ ಮಂಗಳೂರಿನಲ್ಲಿ ಅವಿವಾಹಿತೆ ಪತ್ತೆ

(ನ್ಯೂಸ್ ಕಡಬ) newskadaba.com ಸಾಲ್ಮರ, ಡಿ.09: ಅವಿವಾಹಿತ ಮಹಿಳೆಯೊಬ್ಬರು ನಾಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಮಹಿಳೆಯನ್ನು ಮಂಗಳೂರಿನಲ್ಲಿ ಪತ್ತೆ ಮಾಡುವ ಮೂಲಕ ಪೊಲೀಸರು ಯಶಸ್ವಿಯಾಗಿದ್ದಾರೆ. ನಾಪತ್ತೆಯಾಗಿದ್ದ ಮಹಿಳೆ ಮಂಗಳೂರು ಬಸ್ ನಿಲ್ದಾಣದಲ್ಲಿ ಪತ್ತೆಯಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಶಾರದಾ ಅವರನ್ನು ಇಂದು (ಡಿ.09) ಮಂಗಳೂರಿನ ಬಸ್ ನಿಲ್ದಾಣದಲ್ಲಿ ಪತ್ತೆ ಮಾಡಿದ್ದಾರೆ.ನಗರದ ಪರ್ಲಡ್ಕ ಎಂಬಲ್ಲಿನ ನಿವಾಸಿ ಶಾರದಾ (55) ನಾಪತ್ತೆಯಾಗಿದ್ದರು. ಶಾರದಾ ಅವರು ಅವಿವಾಹಿತೆಯಾಗಿದ್ದು, ಕಳೆದ ಕೆಲ ಸಮಯಗಳಿಂದ ಸಾಲ್ಮರದಲ್ಲಿರುವ ಸಹೋದರಿ ಪುಷ್ಪಲತಾ ಎಂಬವರೊಂದಿಗೆ ವಾಸವಾಗಿದ್ದರು. ಸೋಮವಾರ ಪೇಟೆಗೆ ಹೋಗಿ

ಸಾಲ್ಮರ :ಸಹೋದರಿ ಮನೆಯಲ್ಲಿದ್ದ ಅವಿವಾಹಿತೆ ನಾಪತ್ತೆ ಪ್ರಕರಣ ➤ ಮಂಗಳೂರಿನಲ್ಲಿ ಅವಿವಾಹಿತೆ ಪತ್ತೆ Read More »

ಕರಾವಳಿ

ಕ್ರಿಕೆಟ್‌ಗೆ ವಿದಾಯ ಹೇಳಿದ ಪಾರ್ಥೀವ್ ಪಟೇಲ್.!

(ನ್ಯೂಸ್ ಕಡಬ) newskadaba.com ಮುಂಬೈ, ಡಿ.09: ಟೀಂ ಇಂಡಿಯಾ ಹಾಗೂ ಆರ್‍ಸಿಬಿ ತಂಡದ ವಿಕೆಟ್ ಕೀಪರ್ ಪಾರ್ಥೀವ್ ಪಟೇಲ್ ಅವರು ಇಂದು 17 ವರ್ಷಗಳ ಕ್ರಿಕೆಟ್ ಜೀವನಕ್ಕೆ ಗುಡ್‍ಬೈ ಹೇಳಿದ್ದಾರೆ. ಭಾರತೀಯ ಕ್ರಿಕೆಟ್ ಮಂಡಳಿಗೆ ಅವರು ರಾಜೀನಾಮೆ ಪತ್ರ ನೀಡುವ ಮೂಲಕ ತಾವು ಇನ್ನು ಮುಂದೆ ಯಾವುದೇ ಮಾದರಿಯ ಕ್ರಿಕೆಟ್‍ನಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಆರ್‍ಸಿಬಿ ತಂಡದ ಭರವಸೆಯ ಆಟಗಾರನಾಗಿದ್ದ ಪಾರ್ಥೀವ್ ಪಟೇಲ್‍ಗೆ 2013ರ ಐಪಿಎಲ್‍ನಲ್ಲಿ ಒಂದೇ ಒಂದು ಪಂದ್ಯ ಆಡಲು ಅವಕಾಶ ಸಿಕ್ಕಿರಲಿಲ್ಲ ಹಾಗೂ

ಕ್ರಿಕೆಟ್‌ಗೆ ವಿದಾಯ ಹೇಳಿದ ಪಾರ್ಥೀವ್ ಪಟೇಲ್.! Read More »

ರಾಷ್ಟ್ರೀಯ ನ್ಯೂಸ್
Scroll to Top