Mangalore

ಸಿಎಂ ಆಗಿ ಮುಂದುವರಿಯುವ ನೈತಿಕ ಹಕ್ಕನ್ನು ಸಿದ್ದರಾಮಯ್ಯ ಕಳೆದುಕೊಂಡಿದ್ದಾರೆ ಸಂಸದ ಕ್ಯಾ. ಬ್ರಿಜೇಶ್ ಚೌಟ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 19. ಕರ್ನಾಟಕದ ಘನತೆವೆತ್ತ ರಾಜ್ಯಪಾಲರಾದ  ಥಾವರ್ ಚಂದ್ ಗೆಹ್ಲೋಟ್ ಅವರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ ಬಳಿಕ ರಾಜ್ಯದ ಮುಖ್ಯಮಂತ್ರಿ ಆಗಿ ಮುಂದುವರಿಯುವ ಎಲ್ಲಾ ನೈತಿಕ ಹಕ್ಕನ್ನು ಸಿದ್ದರಾಮಯ್ಯ ಅವರು ಕಳೆದುಕೊಂಡಿದ್ದಾರೆ. ಅವರಿಗೆ ಕರ್ನಾಟಕದ ಜನತೆಯ ಹಾಗೂ ನಮ್ಮ ಸಂವಿಧಾನದ ಬಗ್ಗೆ ಕಿಂಚಿತ್ತು ಕಾಳಜಿ ಇದ್ದರೆ,  ಹುದ್ದೆಯ ಪಾವಿತ್ರ್ಯತೆಯನ್ನು ಗೌರವಿಸಿ ಅವರು ತಕ್ಷಣ ರಾಜೀನಾಮೆ ಸಲ್ಲಿಸಬೇಕು ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಒತ್ತಾಯಿಸಿದ್ದಾರೆ.   “ಸಿಎಂ ಸಿದ್ದರಾಮಯ್ಯ […]

ಸಿಎಂ ಆಗಿ ಮುಂದುವರಿಯುವ ನೈತಿಕ ಹಕ್ಕನ್ನು ಸಿದ್ದರಾಮಯ್ಯ ಕಳೆದುಕೊಂಡಿದ್ದಾರೆ ಸಂಸದ ಕ್ಯಾ. ಬ್ರಿಜೇಶ್ ಚೌಟ Read More »

ಕರ್ನಾಟಕ

ಸ್ಕೂಟರ್-ಕಾರ್ ಅಪಘಾತ..!              ಶಿಕ್ಷಕಿ ಮೃತ್ಯು..!                            

(ನ್ಯೂಸ್ ಕಡಬ) newskadaba.c0m ಮಂಗಳೂರು, ಆ. 17.  ಸ್ಕೂಟಿಗೆ ಕಾರೊಂದು ಢಿಕ್ಕಿ ಹೊಡೆದ ಘಟನೆ ನಗರದ ಮೀನುಗಾರಿಕಾ ಬಂದರಿನಲ್ಲಿ ನಡೆದಿದೆ. ಮೃತಪಟ್ಟವರನ್ನು ಉಳ್ಳಾಲ ಎಎಸ್‌ಐ ಪತ್ನಿ, ಶಿಕ್ಷಕಿ ಶಾಹಿದಾ (47) ಎಂದು ಗುರುತಿಸಲಾಗಿದೆ. ಶಾಹಿದಾ ತನ್ನ ಸ್ಕೂಟಿಯಲ್ಲಿ ಶಾಲೆಯ ಕಡೆಗೆ ಹೋಗುತ್ತಿದ್ದಳು. ಈ ವೇಳೆ ಆಕೆಗೆ ಕಾರೊಂದು ಢಿಕ್ಕಿ ಹೊಡೆದಿದ್ದು, ತಕ್ಷಣ ಅವರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಸ್ಕೂಟರ್-ಕಾರ್ ಅಪಘಾತ..!              ಶಿಕ್ಷಕಿ ಮೃತ್ಯು..!                             Read More »

ಕರಾವಳಿ, ಕ್ರೈಮ್ ನ್ಯೂಸ್

ಆಗಸ್ಟ್ 22 ರಂದು ಬೋಳಿಯಾರು ಗ್ರಾಮ ಸಭೆ

(ನ್ಯೂಸ್ ಕಡಬ) newskadaba.com ಮಂಗಳೂರು,ಆ. 17. ಉಳ್ಳಾಲ ತಾಲೂಕು ಬೋಳಿಯಾರು ಗ್ರಾಮ ಪಂಚಾಯತ್ ನ 2024-25ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯು ಆಗಸ್ಟ್ 22ರಂದು ಗುರುವಾರ ಬೆಳಿಗ್ಗೆ 10.30 ಗಂಟೆಗೆ ಬೋಳಿಯಾರು ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಲಿದೆ ಎಂದು ಪಂಚಾಯತ್ ಪ್ರಕಟಣೆ ತಿಳಿಸಿದೆ.

ಆಗಸ್ಟ್ 22 ರಂದು ಬೋಳಿಯಾರು ಗ್ರಾಮ ಸಭೆ Read More »

ಕರಾವಳಿ, ಕರ್ನಾಟಕ

‘ವಿದೇಶದಲ್ಲಿ ಉದ್ಯೋಗಾಕಾಂಕ್ಷಿಗಳ ವಂಚನೆ ಜಾಲ ಪತ್ತೆ’..! ಭಾರತದ 250 ಮಂದಿ ಸೇರಿ ದ.ಕ ಜಿಲ್ಲೆಯ ಮೂವರ ರಕ್ಷಣೆ..!              

(ನ್ಯೂಸ್ ಕಡಬ) newskadaba.c0m ಮಂಗಳೂರು, ಆ. 17. ಸಾಫ್ಟ್ ವೇರ್‌ ಕಂಪೆನಿಗಳಲ್ಲಿ ಉದ್ಯೋಗವಿದೆ ಎಂದು ಭಾರತೀಯ ಸಮುದಾಯದ ಉದ್ಯೋಗಾಕಾಂಕ್ಷಿಗಳನ್ನೇ ಟಾರ್ಗೆಟ್ ಮಾಡಿ ಬಲೆ ಬೀಸುವ ಕಾಂಬೋಡಿಯಾದ ಸೈಬರ್ ಅಪರಾಧಿಗಳು ಭಾರತೀಯರನ್ನು ಬಳಸಿಕೊಂಡು ಭಾರತೀಯರನ್ನೇ ದೋಚುತ್ತಿದ್ದಾರೆ. ಈ ವಂಚನೆಯ ಜಾಲವನ್ನು ವಿದೇಶಾಂಗ ಇಲಾಖೆ ಪತ್ತೆ ಹಚ್ಚಿದೆ ಮತ್ತು ಭಾರತದ ಸುಮಾರು 250 ಮಂದಿಯನ್ನು ರಕ್ಷಣೆ ಮಾಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಮೂವರು ಸೇರಿದ್ದಾರೆ ಎಂದು  ವರದಿ ತಿಳಿದುಬಂದಿದೆ. ದ.ಕ. ಮೂಲದ ಮೂವರು ಕೆಲ ತಿಂಗಳುಗಳ ಹಿಂದೆ ಆಂಧ್ರಪ್ರದೇಶದ ಏಜೆಂಟ್‌

‘ವಿದೇಶದಲ್ಲಿ ಉದ್ಯೋಗಾಕಾಂಕ್ಷಿಗಳ ವಂಚನೆ ಜಾಲ ಪತ್ತೆ’..! ಭಾರತದ 250 ಮಂದಿ ಸೇರಿ ದ.ಕ ಜಿಲ್ಲೆಯ ಮೂವರ ರಕ್ಷಣೆ..!               Read More »

ಕರಾವಳಿ

ಕಡಬ: ಸೈಂಟ್ ಜೋಕಿಮ್ಸ್ ವಿದ್ಯಾಸಂಸ್ಥೆಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ

(ನ್ಯೂಸ್ ಕಡಬ) newskadaba.com ಕಡಬ, ಆ. 17. ಕಡಬ ಸೈಂಟ್ ಜೋಕಿಮ್ಸ್ ವಿದ್ಯಾಸಂಸ್ಥೆಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ವಿದ್ಯುಕ್ತವಾಗಿ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿವೃತ್ತ ಯೋಧರಾದ ಶ್ರೀ ಅನೀಶ್ ಡಿ ಎಲ್ ಅವರು ಧ್ವಜಾರೋಹಣಗೈದರು. ಜಾತಿ ಮತ ಧರ್ಮ ಭೇದಗಳ ನೆಲೆಯಲ್ಲಿ ಭಿನ್ನಾಭಿಪ್ರಾಯಗಳು ಮೂಡಲು ಅವಕಾಶ ನೀಡದೇ ಸಂವಿಧಾನದ ಶ್ರೇಷ್ಠ ಅಂಶಗಳನ್ನು ಭಾರತೀಯರೆಲ್ಲರೂ ಅನುಸರಿಸಬೇಕು ಅಲ್ಲದೇ ರಾಷ್ಟ್ರೀಯ ಸಮಗ್ರತೆಗೆ ಐಕ್ಯತಾಭಾವನೆ ನಮ್ಮ ಮೂಲ ಮಂತ್ರವಾಗಬೇಕು ಎಂದು ಅವರು ಅತಿಥಿ ಭಾಷಣದಲ್ಲಿ ಹೇಳಿದರು.   ಕಾರ್ಯಕ್ರಮದ ಅಧ್ಯಕ್ಷತೆಯನ್ನು

ಕಡಬ: ಸೈಂಟ್ ಜೋಕಿಮ್ಸ್ ವಿದ್ಯಾಸಂಸ್ಥೆಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ Read More »

ಕರಾವಳಿ, ಕರ್ನಾಟಕ

ಸೈಬರ್ ಕ್ರೈಮ್- ಮಂಗಳೂರು: ಒಂದೇ ವರ್ಷದಲ್ಲಿ 11 ಕೋಟಿ ರೂ. ವಂಚನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 16. ಕಳೆದ ಒಂದು ವರ್ಷದಲ್ಲಿ ನಡೆದ ಸೈಬರ್ ವಂಚನೆ ಪ್ರಕರಣಗಳ ಪೈಕಿ ನಗರದ ಕಮಿಷನರೇಟ್ ವ್ಯಾಪ್ತಿಯಲ್ಲಿಯೇ ವಂಚನೆಗೊಳಗಾದ ಸಂತ್ರಸ್ತರು ಸುಮಾರು 11 ಕೋಟಿ ರೂ.ಗಳಷ್ಟು ನಷ್ಟ ಅನುಭವಿಸಿದ್ದಾರೆ. ಇಂತಹ ವಂಚನೆಗಳ ಬಗ್ಗೆ ಜನ ಜಾಗೃತರಾಗಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್‌ ಹೇಳಿದರು. ಅವರು ಗುರುವಾರದಂದು ನಗರ ಪೊಲೀಸ್ ಕಮಿಷನರೇಟ್ ವತಿಯಿಂದ ಆಯೋಜಿಸಲಾಗಿದ್ದ ಸೈಬರ್ ಅಪರಾಧವನ್ನು ತಡೆಯುವ ಕುರಿತ ಜಾಗೃತಿ ಜಾಥಾ ಸಮಾರೋಪದಲ್ಲಿ ಭಾಗವಹಿಸಿ ಮಾತನಾಡಿದರು.

ಸೈಬರ್ ಕ್ರೈಮ್- ಮಂಗಳೂರು: ಒಂದೇ ವರ್ಷದಲ್ಲಿ 11 ಕೋಟಿ ರೂ. ವಂಚನೆ Read More »

ಕರಾವಳಿ, ಕರ್ನಾಟಕ

’ಟೀನ್ ಸೂಪರ್ ಗ್ಲೋಬ್’- ಪ್ರಶಸ್ತಿ  ಅಂತಾರಾಷ್ಟ್ರೀಯ ಮಟ್ಟದ ಫ್ಯಾಷನ್ ಲೋಕದಲ್ಲಿ ಜಯಗಳಿಸಿದ ಬಾಲಕ

(ನ್ಯೂಸ್ ಕಡಬ) newskadaba.c0m ಮಂಗಳೂರು, ಆ. 16.  ಥೈಲ್ಯಾಂಡಿನಲ್ಲಿ ನಡೆದ ಮಿಸ್ಟರ್ ಟೀನ್ ಸೂಪರ್ ಗ್ಲೋಬ್ ಪ್ರಶಸ್ತಿಯನ್ನು ಗೆದ್ದು ಮಂಗಳೂರಿಗೆ ಮತ್ತೊಂದು ಗರಿಮೆ ತಂದ 13ರ ಹರೆಯ ಬಾಲಕ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಫ್ಯಾಷನ್ ಲೋಕದಲ್ಲಿ ನಡೆಯುವ ಸ್ಪರ್ಧೆ ಆಗಸ್ಟ್ 7ರಿಂದ 10ರವರೆಗೆ ಥೈಲ್ಯಾಂಡ್ ನಲ್ಲಿ ನಡೆದಿತ್ತು. ಅಮೇರಿಕಾ, ಲೆಬನಾನ್, ಅರ್ಮೇನಿಯಾ, ಯುಎಇ, ಒಮಾನ್, ಥೈಲ್ಯಾಂಡ್, ಮಲೇಶಿಯಾ, ಶ್ರೀಲಂಕಾ, ಇಂಡೋನೇಷ್ಯಾ, ವಿಯೆಟ್ನಾಂ ಕ್ಯಾಲಿಕಟ್ ನಲ್ಲಿ ನಡೆದ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಆಯ್ಕೆಯಾಗಿದ್ದಾರೆ. ವರುಣ್, ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತವನ್ನು

’ಟೀನ್ ಸೂಪರ್ ಗ್ಲೋಬ್’- ಪ್ರಶಸ್ತಿ  ಅಂತಾರಾಷ್ಟ್ರೀಯ ಮಟ್ಟದ ಫ್ಯಾಷನ್ ಲೋಕದಲ್ಲಿ ಜಯಗಳಿಸಿದ ಬಾಲಕ Read More »

ಕರಾವಳಿ

ಮಂಗಳೂರು: ಕಮಾನು ಸೇತುವೆ ದುರಸ್ಥಿ ಕಾರ್ಯ        ವಾಹನಗಳ ಸಂಚಾರ ನಿರ್ಬಂಧ        

(ನ್ಯೂಸ್ ಕಡಬ) newskadaba.c0m ಮಂಗಳೂರು, ಆ. 16.  ಉಡುಪಿ – ಮಂಗಳೂರು ಸಂಪರ್ಕದ ಕೂಳೂರು ಹಳೆಯ ಕಮಾನು ಸೇತುವೆಯ ದುರಸ್ತಿ ಘನ ವಾಹನಗಳ ಸಂಚಾರವನ್ನು ಆ. 19, ರಿಂದ 21ರವರೆಗೆ, 3 ದಿನಗಳ ಕಾಲ ದಕ್ಷಿಣ ಕನ್ನಡ ಜಿಲ್ಲಾಡಳಿತ ನಿರ್ಬಂಧಿಸಿದೆ. ಮೂರು ದಿನಗಳ ಕಾಲ ಬೆಳಗ್ಗೆ 6ರಿಂದ 11ರ ವರೆಗೆ ಹಾಗೂ ಅಪರಾಹ್ನ 3ರಿಂದ ರಾತ್ರಿ 10 ಗಂಟೆಯವರೆಗೆ ಉಡುಪಿಯಿಂದ ಕೇರಳ ಕಡೆಗೆ ಸಾಗುವ ಘನ ವಾಹನಗಳು ಮೂಲ್ಕಿ- ಸುರತ್ಕಲ್‌- ಎಂಆರ್‌ಪಿಎಲ್‌, ಬಜ್ಪೆ, ಕೆಪಿಟಿ, ನಂತೂರು ಮಾರ್ಗವಾಗಿ

ಮಂಗಳೂರು: ಕಮಾನು ಸೇತುವೆ ದುರಸ್ಥಿ ಕಾರ್ಯ        ವಾಹನಗಳ ಸಂಚಾರ ನಿರ್ಬಂಧ         Read More »

ಕರಾವಳಿ

ಮಾದಕ ದ್ರವ್ಯ ಸೇವನೆ..! ಶೇ.30 ರಷ್ಟು ಪ್ರಕರಣ ದಾಖಲು..!

(ನ್ಯೂಸ್ ಕಡಬ) newskadaba.c0m ಮಂಗಳೂರು, ಆ. 15.  ಈ ವರ್ಷದ ಆರಂಭದಿಂದ ಜುಲೈ 10 ರವರೆಗೆ ರಾಜ್ಯದಲ್ಲಿ ಮಾದಕ ದ್ರವ್ಯ ಕಾಯ್ದೆಯಡಿ ದಾಖಲಾದ ಎಲ್ಲಾ ಪ್ರಕರಣಗಳಲ್ಲಿ ಮಂಗಳೂರು ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಂದ ಶೇ.30 ರಷ್ಟು ಪ್ರಕರಣಗಳು ವರದಿಯಾಗಿವೆ ಎನ್ನಲಾಗಿದೆ. ದಾಖಲಾದ 1,791 ಪ್ರಕರಣಗಳಲ್ಲಿ 521 ಕರಾವಳಿ ನಗರದಿಂದ ಬಂದಿವೆ. ಇದು ಬೆಂಗಳೂರನ್ನು ಹಿಂದಿಕ್ಕಿದೆ ಮತ್ತು ಅತಿ ಹೆಚ್ಚು ಮಾದಕ ದ್ರವ್ಯ ಸೇವನೆ ಪ್ರಕರಣಗಳನ್ನು ದಾಖಲಿಸಿದೆ. ವರ್ಷದ ಮೊದಲಾರ್ಧದಲ್ಲಿ 231 ಪ್ರಕರಣಗಳೊಂದಿಗೆ ಬೆಂಗಳೂರು ಎರಡನೇ ಸ್ಥಾನದಲ್ಲಿದೆ. ಆದಾಗ್ಯೂ,

ಮಾದಕ ದ್ರವ್ಯ ಸೇವನೆ..! ಶೇ.30 ರಷ್ಟು ಪ್ರಕರಣ ದಾಖಲು..! Read More »

ಕರಾವಳಿ

 ಉಡುಪಿ: ಪ್ಲಾಸ್ಟಿಕ್ ರಾಷ್ಟ್ರ ಧ್ವಜಗಳ ಬಳಕೆ ನಿಷೇಧಾಜ್ಞೆ

(ನ್ಯೂಸ್ ಕಡಬ) newskadaba.com ಉಡುಪಿ, ಆ. 13.  ರಾಜ್ಯ ಸರ್ಕಾರದ ಅಧಿಸೂಚನೆಯಂತೆ ರಾಜ್ಯಾದ್ಯಂತ ಪ್ಲಾಸ್ಟಿಕ್ ಬಾವುಟ ಸೇರಿದಂತೆ ಕೆಲವು ಪ್ಲಾಸ್ಟಿಕ್ ಪದಾರ್ಥಗಳ ಬಳಕೆಯನ್ನು ನಿಷೇಧಿಸಲಾಗಿದೆ. ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಭಾರತ ಸರ್ಕಾರ ಇವರ ಅಧಿಸೂಚನೆಯಲ್ಲಿಯೂ ಸಹ ಏಕ ಬಳಕೆಯ ಪ್ಲಾಸ್ಟಿಕ್‌ನಿಂದ ತಯಾರಿಸಿದ ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಲಾಗಿರುತ್ತದೆ. ಕೇಂದ್ರ ಸರ್ಕಾರದ ಗೃಹ ಮಂತ್ರಾಲಯದ ನಿರ್ದೇಶನದಂತೆ ರಾಷ್ಟ್ರೀಯ ಗೌರವ ಕಾಯ್ದೆ, 1971 ಮತ್ತು ಭಾರತದ ಧ್ವಜ ಸಂಹಿತೆ 2002 ರ ಅಡಿ ಎಲ್ಲಾ ಸರ್ಕಾರಿ

 ಉಡುಪಿ: ಪ್ಲಾಸ್ಟಿಕ್ ರಾಷ್ಟ್ರ ಧ್ವಜಗಳ ಬಳಕೆ ನಿಷೇಧಾಜ್ಞೆ Read More »

ಕರಾವಳಿ
Scroll to Top