Mangalore

ಲಿಕ್ಕರ್ ಶಾಪ್ ಓಪನ್ ➤ ಬಾಟಲಿಗೆ ಆರತಿ ಮಾಡಿ, ಮುತ್ತಿಟ್ಟ ಮದ್ಯಪ್ರಿಯರು

(ನ್ಯೂಸ್ ಕಡಬ) newskadaba, ತಮಿಳುನಾಡು ಜೂ.15: ತಮಿಳುನಾಡಿನಲ್ಲಿ ಕೊರೋನಾ ಕೇಸುಗಳು ಕಡಿಮೆಯಾಗದ ಹಿನ್ನೆಲೆಯಲ್ಲಿ ಜೂನ್ 21ರವರೆಗೆ ಮತ್ತೆ ಲಾಕ್​ಡೌನ್ ವಿಸ್ತರಣೆ ಮಾಡಲಾಗಿದೆ. ಆದರೆ, ಇನ್ನು ಒಂದು ವಾರಗಳ ಕಾಲ ಲಾಕ್​ಡೌನ್ ನಿಯಮಗಳಲ್ಲಿ ಕೊಂಚ ಸಡಿಲಿಕೆಯನ್ನೂ ಮಾಡಲಾಗಿದೆ. ಅದರಂತೆ, ತಿಂಗಳುಗಳ ಬಳಿಕ ತಮಿಳುನಾಡಿನಲ್ಲಿ ಬಾರ್, ಮದ್ಯದಂಗಡಿಗಳನ್ನು ಓಪನ್ ಮಾಡಲು ಅನುಮತಿ ನೀಡಲಾಗಿದೆ. ಇದರಿಂದ ಮದ್ಯಪ್ರಿಯರು ಬಹಳ ಖುಷಿಯಾಗಿದ್ದು, ಮಧುರೈನ ರಸ್ತೆಯಲ್ಲಿ ವ್ಯಕ್ತಿಯೊಬ್ಬ ಆಲ್ಕೋಹಾಲ್ ಬಾಟಲಿಗೆ ಆರತಿ ಬೆಳಗಿ, ತನ್ನ ಸಂತೋಷವನ್ನು ಹಂಚಿಕೊಂಡ ವಿಡಿಯೋ ವೈರಲ್ ಆಗಿದೆ.     ಮಧುರೈನ ರಸ್ತೆಬದಿಯ […]

ಲಿಕ್ಕರ್ ಶಾಪ್ ಓಪನ್ ➤ ಬಾಟಲಿಗೆ ಆರತಿ ಮಾಡಿ, ಮುತ್ತಿಟ್ಟ ಮದ್ಯಪ್ರಿಯರು Read More »

ರಾಷ್ಟ್ರೀಯ ನ್ಯೂಸ್

ರಾಜ್ಯದ ಹೊಸ ಕೊರೊನಾ ಕೇಸ್‌ 5 ಸಾವಿರಕ್ಕೆ ಇಳಿಕೆ

(ನ್ಯೂಸ್ ಕಡಬ) newskadaba,ಬೆಂಗಳೂರು ಜೂ.15: ರಾಜ್ಯದಲ್ಲಿ ಹೊಸ ಕೊರೊನಾ ಸೋಂಕು ಇಳಿಕೆಯ ಹಾದಿಯಲ್ಲಿದ್ದು ಮಂಗಳವಾರ 5041 ಪ್ರಕರಣಗಳು ದೃಢಪಟ್ಟಿವೆ. ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 27,77,010ಕ್ಕೆ ಏರಿಕೆಯಾಗಿದೆ. 24 ಗಂಟೆಗಳ ಅವಧಿಯಲ್ಲಿ 1,32,600 ಸ್ಯಾಂಪಲ್‌ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು ಪಾಸಿಟಿವಿಟಿ ದರ ಶೇ. 3.80ಗೆ ಕುಸಿದಿದೆ. ಬೆಂಗಳೂರಿನಲ್ಲಿ ಹೊಸ ಕೇಸ್‌ ಸಂಖ್ಯೆ ಸಾವಿರಕ್ಕಿಂತ ಕೆಳಕ್ಕಿಳಿದಿದ್ದು ಮಂಗಳವಾರ 985 ಪ್ರಕರಣ ಬೆಳಕಿಗೆ ಬಂದಿದೆ. ಹಾಸನದಲ್ಲಿ 522, ಮೈಸೂರಿನಲ್ಲಿ 490, ದಕ್ಷಿಣ ಕನ್ನಡದಲ್ಲಿ 482, ತುಮಕೂರಿನಲ್ಲಿ 329 ಹೊಸ ಪ್ರಕರಣಗಳು ವರದಿಯಾಗಿವೆ.

ರಾಜ್ಯದ ಹೊಸ ಕೊರೊನಾ ಕೇಸ್‌ 5 ಸಾವಿರಕ್ಕೆ ಇಳಿಕೆ Read More »

ಕರಾವಳಿ

ಸೀಲ್ ಡೌನ್ ಮಧ್ಯೆಯೂ ಕುಕ್ಕೆ ಸುಬ್ರಹ್ಮಣ್ಯಕ್ಕೆ ನುಗ್ಗುತ್ತಿರುವ ಯಾತ್ರಾರ್ಥಿಗಳು

(ನ್ಯೂಸ್ ಕಡಬ) newskadaba,ಕುಕ್ಕೆ ಸುಬ್ರಹ್ಮಣ್ಯ ಜೂ.15: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಾಕ್ ಡೌನ್ ಮುಂದುವರಿದಿರುವ ನಡುವೆಯೇ, ಜಿಲ್ಲೆಯ 18 ಗ್ರಾಮ ಪಂಚಾಯಿತಿಗಳನ್ನು‌ ಸೀಲ್ ಡೌನ್ ಮಾಡಲಾಗಿದೆ. ನಾಡಿನ ನಂಬರ್ ವನ್ ಮುಜರಾಯಿ ದೇಗುಲವಾದ ಕುಕ್ಕೆ ಸುಬ್ರಹ್ಮಣ್ಯ ವ್ಯಾಪ್ತಿ ಇರುವ ಸುಬ್ರಹ್ಮಣ್ಯ ಪಂಚಾಯಿತಿ ಕೂಡಾ ಸೀಲ್ ಡೌನ್ ಆಗಿದ್ದು, ಇದರ ನಡುವೆಯೇ ರಾಜ್ಯದ ಕೆಲ ಜಿಲ್ಲೆಗಳಿಂದ ಭಕ್ತರು‌ ಸುಬ್ರಹ್ಮಣ್ಯಕ್ಕೆ ಬರುತ್ತಿರುವುದು ಸಮಸ್ಯೆಯಾಗಿ ಪರಿಣಮಿಸಿದೆ. ಏಪ್ರಿಲ್ 28ರಿಂದ ಕುಕ್ಕೆ ದೇವಳಕ್ಕೆ ಭಕ್ತರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಇದೀಗ ಇಡೀ ಪ್ರದೇಶ ಸೀಲ್ ಡೌನ್ ಗೆ ಒಳಗಾಗಿದೆ.

ಸೀಲ್ ಡೌನ್ ಮಧ್ಯೆಯೂ ಕುಕ್ಕೆ ಸುಬ್ರಹ್ಮಣ್ಯಕ್ಕೆ ನುಗ್ಗುತ್ತಿರುವ ಯಾತ್ರಾರ್ಥಿಗಳು Read More »

ಕರ್ನಾಟಕ

ಮರವೂರು ಸೇತುವೆ ದುರಸ್ತಿ ಬಗ್ಗೆ ಶೀಘ್ರವೇ ತಿರ್ಮಾನ ➤ ಸಚಿವ ಕೋಟ ಶ್ರೀನಿವಾಸ ಪೂಜಾರಿ

(ನ್ಯೂಸ್ ಕಡಬ) newskadaba,ಮಂಗಳೂರು ಜೂ.15:ಮಂಗಳವಾರ ಕುಸಿತಕ್ಕೆ ಒಳಗಾದ ಮರವೂರು ಸೇತುವೆಯ ಪುನರ್‌ ನಿರ್ಮಾಣ ಮಾಡಬೇಕೆ ಅಥವಾ ದುರಸ್ತಿ ಕೈಗೊಳ್ಳಬೇಕೆ ಎನ್ನುವುದಕ್ಕೆ ತಜ್ಞರನ್ನೊಳಗೊಂಡ ಸಮಿತಿ ಪರಿಶೀಲಿಸಿ ಇನ್ನೆರೆಡು ದಿನದೊಳಗೆ ವರದಿ ನೀಡಲಿದೆ. ವರದಿಯನ್ನಾಧರಿಸಿ, ಅಗತ್ಯ ಅನುದಾನವನ್ನು ಸಿಎಂ ಜತೆ ಮಾತನಾಡಿ ಬಿಡುಗಡೆ ಮಾಡಿಸಲಾಗುವುದು ಎಂದು ಜಿಲ್ಲಾಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಮರವೂರು ಸೇತುವೆಯ ಬಿರುಕನ್ನು ಪರಿಶೀಲಿಸಿದ ಅವರು ಈ ರಸ್ತೆಯ ಸೇತುವೆಯನ್ನು ನಾಲ್ಕು ಪಥಗಳ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲು 50 ಕೋಟಿ ರೂ. ಮಂಜೂರಾಗಿದ್ದು, ಹಾಲಿ ಸೇತುವೆಯ ಪಕ್ಕದಲ್ಲಿ

ಮರವೂರು ಸೇತುವೆ ದುರಸ್ತಿ ಬಗ್ಗೆ ಶೀಘ್ರವೇ ತಿರ್ಮಾನ ➤ ಸಚಿವ ಕೋಟ ಶ್ರೀನಿವಾಸ ಪೂಜಾರಿ Read More »

ಕರಾವಳಿ

ಜೂನ್‌ 21: ಬೆಂಗಳೂರಲ್ಲಿ 1 ಲಕ್ಷ ವಿದ್ಯಾರ್ಥಿಗಳಿಂದ ಯೋಗಾಭ್ಯಾಸ

(ನ್ಯೂಸ್ ಕಡಬ) newskadaba,ಬೆಂಗಳೂರು ಜೂ.15: ಜೂನ್‌ 21ರಂದು ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಕ್ರೀಡಾ ಮತ್ತು ಯುವಜನ ಸಬಲೀಕರಣ, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ವತಿಯಿಂದ ಒಂದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ವರ್ಚುಯಲ್‌ ವೇದಿಕೆ ಮೂಲಕ ಯೋಗಾಭ್ಯಾಸ ನಡೆಸಲಿದ್ದಾರೆ. ಈ ಕುರಿತು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ. ಸಿ. ಎನ್‌. ಅಶ್ವತ್ಥನಾರಾಯಣ ತಿಳಿಸಿದರು. ”ಕೋವಿಡ್‌ ಕಾರಣದಿಂದ ಈ ವರ್ಷದ ಸರಕಾರಿ ದಿನಾಚರಣೆ ಕೇವಲ 100 ಜನರ ಉಪಸ್ಥಿತಿಯಲ್ಲಿ ಕಂಠೀರವ ಸ್ಟೇಡಿಯಂನಲ್ಲಿ

ಜೂನ್‌ 21: ಬೆಂಗಳೂರಲ್ಲಿ 1 ಲಕ್ಷ ವಿದ್ಯಾರ್ಥಿಗಳಿಂದ ಯೋಗಾಭ್ಯಾಸ Read More »

ಕರ್ನಾಟಕ

ಲಾಕ್‍ಡೌನ್ ಎಫೆಕ್ಟ್‌ನಿಂದ ನಿರುದ್ಯೋಗ ➤ ನಟ ಆತ್ಮಹತ್ಯೆಗೆ ಯತ್ನ

(ನ್ಯೂಸ್ ಕಡಬ) newskadaba,ಕೊಲ್ಕತ್ತ ಜೂ.09:ಕೋವಿಡ್ ಸೋಂಕು ಎಷ್ಟೋ ಜನರ ಬದಕನ್ನೇ ಕಿತ್ತುಕೊಂಡಿದೆ. ಲಕ್ಷಾಂತರ ಜನರ ಉಸಿರನ್ನೇ ನಿಲ್ಲಿಸಿದೆ. ಇದೇ ಹಿನ್ನೆಲೆಯಲ್ಲಿ ಕೋವಿಡ್ ನಿಂದ ಕೆಲಸವಿಲ್ಲದೆ ನೊಂದ ನಟನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಲಾಕ್‍ಡೌನ್ ವೇಳೆ ಎಲ್ಲೂ ಕೆಲಸ ಸಿಗದೆ ನಿರುದ್ಯೋಗದಿಂದ ಬಳಲಿದ ಬೆಂಗಾಲಿ ನಟನೊಬ್ಬ ಕೊಲ್ಕತ್ತಾದಲ್ಲಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ. ಅದೃಷ್ಟವಶಾತ್ ಪೊಲೀಸರು ನಟನನ್ನು ಕಾಪಾಡಿದ್ದಾರೆ.ನಿದ್ದೆ ಮಾತ್ರೆಯನ್ನು ನುಂಗಿದ 31 ವರ್ಷದ ಧಾರವಾಹಿ ನಟ ಫೇಸ್ ಬುಕ್ ಲೈವ್ ಮಾಡಿದ್ದಾನೆ. ಇದನ್ನು ಗಮನಿಸಿದ ಕೆಲವರು ಸುದ್ದಿಯನ್ನು ಪೊಲೀಸರಿಗೆ ತಿಳಿಸಿದ್ದಾರೆ.

ಲಾಕ್‍ಡೌನ್ ಎಫೆಕ್ಟ್‌ನಿಂದ ನಿರುದ್ಯೋಗ ➤ ನಟ ಆತ್ಮಹತ್ಯೆಗೆ ಯತ್ನ Read More »

ರಾಷ್ಟ್ರೀಯ ನ್ಯೂಸ್

ತರಕಾರಿ ವಾಹನದಲ್ಲಿ ಮದ್ಯ ಸಾಗಾಟ ➤ ಇಬ್ಬರು ಆರೋಪಿಗಳು ಪೊಲೀಸ್ ವಶಕ್ಕೆ

(ನ್ಯೂಸ್ ಕಡಬ) newskadaba,ಬೆಂಗಳೂರು ಜೂ.09:ಬೆಂಗಳೂರಿನಿಂದ ತಮಿಳುನಾಡಿಗೆ ತರಕಾರಿ ಸಾಗಿಸುವ ವಾಹನದಲ್ಲಿ ಮದ್ಯ ಸಾಗಾಟ ಮಾಡುತ್ತಿದ್ದ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ನಗರದ ಕೆಆರ್ ಮಾರ್ಕೆಟ್ ನಲ್ಲಿ ನಡೆದಿದೆ. ಮಂಗಳವಾರ ತಡರಾತ್ರಿ ಪೊಲೀಸರು ತಪಾಸಣೆ ಮಾಡುವ ವೇಳೆ ತರಕಾರಿ ತುಂಬಿದ್ದ ಜೀಪ್ ಕಲಾಸಿಪಾಳ್ಯ ಕಡೆಯಿಂದ ಬರುತ್ತಿತ್ತು. ಇಡೀ ಜೀಪ್ ತುಂಬಾ ಬೇರೆ ಬೇರೆ ರೀತಿಯ ತರಕಾರಿಗಳು ತುಂಬಿದ್ದವು. ವಾಹನ ತಡೆದು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ತರಕಾರಿಗಳ ನಡುವೆ, ಎರಡು ಬಗೆಯ ಬರೋಬ್ಬರಿ ಐನೂರು ಲೀಟರ್ ಮದ್ಯ ಪತ್ತೆಯಾಗಿದೆ.ತಕ್ಷಣ

ತರಕಾರಿ ವಾಹನದಲ್ಲಿ ಮದ್ಯ ಸಾಗಾಟ ➤ ಇಬ್ಬರು ಆರೋಪಿಗಳು ಪೊಲೀಸ್ ವಶಕ್ಕೆ Read More »

ಕರ್ನಾಟಕ

ಕೊಡಗು:ವಾಕಿಂಗ್ ಗೆ ಹೋಗಿದ್ದ ವ್ಯಕ್ತಿ ಕಾಡಾನೆ ದಾಳಿಗೆ ಬಲಿ

(ನ್ಯೂಸ್ ಕಡಬ) newskadaba,ಮಡಿಕೇರಿ ಜೂ.08: ಬೆಳಗಿನ ಜಾವ ನಾಯಿಯೊಂದಿಗೆ ವಾಕಿಂಗ್ ಗೆ ಹೋಗಿದ್ದ ವ್ಯಕ್ತಿ ರಸ್ತೆ ಮಧ್ಯದಲ್ಲೇ ಕಾಡಾನೆ ದಾಳಿಗೆ ಮೃತಪಟ್ಟಿರುವ ಘಟನೆ ಕೊಡಗಿನಲ್ಲಿ ನಡೆದಿದೆ.ದಕ್ಷಿಣ ಕೊಡಗಿನ ಅರ್ವತೋಕ್ಲು ಗ್ರಾಮದಲ್ಲಿ ಈ ಘಟನೆ ವರದಿಯಗಿದ್ದು, ಮೃತ ವ್ಯಕ್ತಿಯನ್ನು ಪಿಹೆಚ್ಎಸ್ ಕಾಲೋನಿಯ ರಂಗಸ್ವಾಮಿ (52) ಎಂದು ಗುರುತಿಸಲಾಗಿದೆ.   ಎಂದಿನಂತೆ ಮನೆಯ ಬಳಿ ನಾಯಿಯ ಜೊತೆ ನಡೆದುಕೊಂಡು ಹೋಗುತ್ತಿರುವಾಗ, ರಂಗಸ್ವಾಮಿ ಅವರ ಮೇಲೆ ದಾಳಿ ನಡೆಸಿದ ಆನೆ ವ್ಯಕ್ತಿಯನ್ನು ಎಸೆದಿದ್ದು ಗಂಭೀರವಾಗಿ ಗಾಯಗೊಳಿಸಿದೆ.ಗಾಯಾಳು ವ್ಯಕ್ತಿಯನ್ನು ಹೆಚ್ಚಿನ ಚಿಕಿತ್ಸೆಗೆ ಆತನನ್ನು ಮಂಗಳೂರಿನ

ಕೊಡಗು:ವಾಕಿಂಗ್ ಗೆ ಹೋಗಿದ್ದ ವ್ಯಕ್ತಿ ಕಾಡಾನೆ ದಾಳಿಗೆ ಬಲಿ Read More »

ಕರ್ನಾಟಕ

ಕೋವಿಡ್-19: ರಾಜ್ಯದಲ್ಲಿ ಇಳಿಯದ ಸಾವಿನ ಪ್ರಕರಣ

(ನ್ಯೂಸ್ ಕಡಬ) newskadaba,ಬೆಂಗಳೂರು ಜೂ.08: ರಾಜ್ಯದಲ್ಲಿ ಹೊಸ ಸೋಂಕು ಪ್ರಕರಣಗಳು ಇಳಿಕೆಯಾದರೂ, ಸಾವಿನ ಪ್ರಮಾಣ ಮಾತ್ರ ಇಳಿಕೆಯಾಗುತ್ತಿಲ್ಲ. ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಕೊಪ್ಪಳ ಮೂಲದ 2 ವರ್ಷದ ಮಗು ಸೇರಿ 340 ಮಂದಿ ಸಾವನ್ನಪ್ಪಿದ್ದಾರೆ. ಈ ನಡುವೆ ರಾಜ್ಯದಲ್ಲಿ ಸೋಂಕಿನ ಪ್ರಮಾಣ ಇಳಿಕೆಯಾಗಿದ್ದು, ಸೋಮವಾರ 11,958 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 27,07,481ಕ್ಕೆ ತಲುಪಿದೆ. ರಾಜ್ಯದಲ್ಲಿ 0-9 ವರ್ಷದ 81,520 ಮಕ್ಕಳಿಕೆ ಸೋಂಕು ತಗುಲಿದ್ದು, 10-19 ವರ್ಷದ 2,03,526 ಮಕ್ಕಳಿಗೆ ಸೋಂಕು ತಗುಲಿರುವುದು

ಕೋವಿಡ್-19: ರಾಜ್ಯದಲ್ಲಿ ಇಳಿಯದ ಸಾವಿನ ಪ್ರಕರಣ Read More »

ಕರ್ನಾಟಕ

ಬೆಂಗಳೂರು ತಲುಪಿದ 29ನೇ ಆಕ್ಸಿಜನ್ ಎಕ್ಸ್ ಪ್ರೆಸ್

(ನ್ಯೂಸ್ ಕಡಬ) newskadaba,ಬೆಂಗಳೂರು ಜೂ.08:29ನೇ ಆಕ್ಸಿಜನ್ ಎಕ್ಸ್ ಪ್ರೆಸ್ ವಿಶೇಷ ರೈಲು ಇಂದು ಬೆಂಗಳೂರಿಗೆ ಆಗಮಿಸಿದೆ. 126.7 ಮೆಟ್ರಿಕ್ ಟನ್ ವೈದ್ಯಕೀಯ ಲಿಕ್ವಿಡ್ ಆಕ್ಸಿಜನ್ ಹೊತ್ತ ಈ ಎಕ್ಸ್ ಪ್ರೆಸ್ ರೈಲು ಬೆಂಗಳೂರಿನ ವೈಟ್ ಫೀಲ್ಡ್ ಕಂಟೈನರ್ ಡಿಪೋ ತಲುಪಿರುವುದಾಗಿ ಪ್ರಸಾರ ಭಾರತಿ ಟ್ವೀಟ್ ಮಾಡಿದೆ.   ಇದುವರೆಗೆ ರಾಜಧಾನಿ ಬೆಂಗಳೂರಿಗೆ 29 ರೈಲುಗಳ ಮೂಲಕ 3,340.69 ಟನ್ ದ್ರವ ವೈದ್ಯಕೀಯ ಆಮ್ಲಜನಕ ತರಲಾಗಿದೆ. ಈ ಮೂಲಕ ಕೋವಿಡ್-19 ರೋಗಿಗಳಿಗೆ ಅತ್ಯವಶ್ಯಕವಾದ ಪ್ರಾಣವಾಯು ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ.

ಬೆಂಗಳೂರು ತಲುಪಿದ 29ನೇ ಆಕ್ಸಿಜನ್ ಎಕ್ಸ್ ಪ್ರೆಸ್ Read More »

ಕರಾವಳಿ
Scroll to Top