Mangalore

ಬ್ಲ್ಯಾಕ್​, ವೈಟ್, ಯೆಲ್ಲೋ ಆಯ್ತು…. ಈಗ ಗ್ರೀನ್​ ಫಂಗಸ್​ ಪತ್ತೆ..!

(ನ್ಯೂಸ್ ಕಡಬ) newskadaba,ಇಂದೋರ್ ಜೂ.16:ಕೊರೋನಾ ಸೋಂಕಿನಿಂದ ಗುಣಮುಖರಾದವರಲ್ಲಿ ಮೊದಲಿಗೆ ಬ್ಲ್ಯಾಕ್​ ಫಂಗಸ್ Black Fungus (ಕಪ್ಪು ಶಿಲೀಂಧ್ರ)​ ಕಾಣಿಸಿಕೊಂಡಿತು. ಬಳಿಕ ವೈಟ್ ಫಂಗಸ್ White Fungus ​(ಬಿಳಿ ಶಿಲೀಂಧ್ರ) , ಆನಂತರ ಯೆಲ್ಲೋ ಫಂಗಸ್ Yellow Fungus​(ಹಳದಿ ಶಿಲೀಂಧ್ರ) ಪತ್ತೆಯಾಗಿತ್ತು. ಈಗ ಹೊಸದಾಗಿ ಗ್ರೀನ್ ಫಂಗಸ್ Green Fungus(ಹಸಿರು ಶಿಲೀಂಧ್ರ)​ ಸೋಂಕು ಕಾಣಿಸಿಕೊಳ್ಳಲು ಶುರುವಾಗಿದೆ. ಹೌದು, ಮಧ್ಯಪ್ರದೇಶದ ಇಂದೋರ್(Indore)​​ನಲ್ಲಿ ಕೊರೋನಾ ಸೋಂಕಿನಿಂದ ಚೇತರಿಸಿಕೊಂಡ ವ್ಯಕ್ತಿಯಲ್ಲಿ ಗ್ರೀನ್​ ಫಂಗಸ್(Green Fungus)​ ಪತ್ತೆಯಾಗಿರುವುದು ಖಚಿತವಾಗಿದೆ.   34 ವರ್ಷದ ಕೋವಿಡ್​(COVID-19) ಗುಣಮುಖ […]

ಬ್ಲ್ಯಾಕ್​, ವೈಟ್, ಯೆಲ್ಲೋ ಆಯ್ತು…. ಈಗ ಗ್ರೀನ್​ ಫಂಗಸ್​ ಪತ್ತೆ..! Read More »

ಕರಾವಳಿ

ಕಿನ್ನಿಗೋಳಿ: ತೈಲ ಬೆಲೆಯೇರಿಕೆ ವಿರುದ್ಧ ಕಾಂಗ್ರೆಸ್ಸಿನಿಂದ ಪ್ರತಿಭಟನೆ

(ನ್ಯೂಸ್ ಕಡಬ) newskadaba,ಕಿನ್ನಿಗೋಳಿ ಜೂ.16: ಮುಲ್ಕಿ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಕಿನ್ನಿಗೋಳಿ ಪಟ್ಟಣ ಪಂಚಾಯತ್ ಕಾಂಗ್ರೆಸ್ ಸಮಿತಿ ವತಿಯಿಂದ ಕಿನ್ನಿಗೋಳಿ ಪಂಚಾಯತ್ ಎದುರು ಪೆಟ್ರೋಲ್ ಪಂಪ್ ಬಳಿ ಕೇಂದ್ರ ಸರಕಾರದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ವಿರುದ್ಧ ಬೃಹತ್ ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ಕಾಂಗ್ರೆಸ್ ಯುವ ನಾಯಕ ಮಿಥುನ್ ರೈ ಮಾತನಾಡಿ ಕೊರೋನಾ ದಿನಗಳಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯಿಂದ ಸಾಮಾನ್ಯ ಜನರು ತತ್ತರಿಸುತ್ತಿದ್ದಾರೆ.ನಾವು ಸಂಕಷ್ಟಕ್ಕೀಡಾದವರಿಗೆ ನ್ಯಾಯ ದೊರಕಿಸಿಕೊಡಲು ಪ್ರತಿಭಟನೆ ನಡೆಸುತ್ತಿದ್ದೇವೆ ವಿನಃ ಅಂಧ ಭಕ್ತರಿಗೆ ಅಲ್ಲಎಂದ್ದರು.

ಕಿನ್ನಿಗೋಳಿ: ತೈಲ ಬೆಲೆಯೇರಿಕೆ ವಿರುದ್ಧ ಕಾಂಗ್ರೆಸ್ಸಿನಿಂದ ಪ್ರತಿಭಟನೆ Read More »

ಕರ್ನಾಟಕ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಕೊರೊನಾ ಏರಿಕೆ..!

(ನ್ಯೂಸ್ ಕಡಬ) newskadaba,ಮಂಗಳೂರು ಜೂ.16:ಜಿಲ್ಲೆಯಲ್ಲಿ ಇಂದು 790 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 966 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಇದೇ ಸಮಯದಲ್ಲಿ 10 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 85,665ಕ್ಕೆ ಏರಿಕೆಯಾಗಿದ್ದು, ಸೋಂಕಿನಿಂದ ಸುಧಾರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದವರ ಸಂಖ್ಯೆ 78,073ಕ್ಕೆ ಏರಿಕೆಯಾಗಿದೆ.    

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಕೊರೊನಾ ಏರಿಕೆ..! Read More »

ಕರಾವಳಿ

ಮಳೆಯಿಂದ ರಸ್ತೆಗೆ ಬಿದ್ದ ವಿದ್ಯುತ್ ಕಂಬಗಳು ➤ಬೆಳ್ತಂಗಡಿಯಲ್ಲಿ ಸಂಚಾರಕ್ಕೆ ಅಡ್ಡಿ

(ನ್ಯೂಸ್ ಕಡಬ) newskadaba,ಬೆಳ್ತಂಗಡಿ ಜೂ.16: ನೆರಿಯ ಗ್ರಾಮದ ಅಣಿಯೂರಿನಿಂದ ಕಾಟಾಜೆ, ಪರ್ಪಳಕ್ಕೆ ಸಂಪರ್ಕಿಸುವ ರಸ್ತೆ ಕಾಮಗಾರಿ ಕಳೆದ ತಿಂಗಳಿನಿಂದ ನಡೆಯುತ್ತಿದೆ. ಈ ನಡುವೆ ಭಾರಿ ಮಳೆಗೆ ವಿದ್ಯುತ್ ಕಂಬಗಳು ರಸ್ತೆಗೆ ಸಾಲಾಗಿ ಬಿದ್ದಿವೆ. ಈ ರಸ್ತೆಯ ಪಕ್ಕದಲ್ಲಿ ವಿದ್ಯುತ್ ಕಂಬಗಳು ಸೇರಿದಂತೆ ಖಾಸಗಿ ವಿದ್ಯುತ್ ಉತ್ಪಾದನಾ ಘಟಕಗಳ ವಿದ್ಯುತ್ ಪೂರೈಕೆ ಕಂಬಗಳು ಇವೆ. ವಿದ್ಯುತ್ ಕಂಬಗಳ ಬುಡದವರೆಗೂ ರಸ್ತೆ ನಿರ್ಮಾಣಕ್ಕೆ ಗುಡ್ಡ ಕೊರೆದು ಗುತ್ತಿಗೆದಾರರು ಬೇಜವಾಬ್ದಾರಿ ವಹಿಸಿದ್ದಾರೆ ಎನ್ನಲಾಗಿದೆ. ವಾರದಿಂದ ಮಳೆ ಸುರಿಯುತ್ತಿದ್ದು, ಕಾಟಾಚಾರದ ಕಾಮಗಾರಿಯಿಂದ ವಿದ್ಯುತ್ ಕಂಬಗಳು

ಮಳೆಯಿಂದ ರಸ್ತೆಗೆ ಬಿದ್ದ ವಿದ್ಯುತ್ ಕಂಬಗಳು ➤ಬೆಳ್ತಂಗಡಿಯಲ್ಲಿ ಸಂಚಾರಕ್ಕೆ ಅಡ್ಡಿ Read More »

ಕರಾವಳಿ

ಪರೀಕ್ಷೆ ಇಲ್ಲದೇ ಪಾಸ್ ➤ ಕುಂಬಳಕಾಯಿ ಹೊಡೆದು ಪಿಯು ವಿದ್ಯಾರ್ಥಿಗಳ ಸಂಭ್ರಮ

(ನ್ಯೂಸ್ ಕಡಬ) newskadaba,ತುಮಕೂರು ಜೂ.16: ಕೊರೊನಾ ವೈರಸ್ ಅಬ್ಬರದ ಹಿನ್ನೆಲೆಯಲ್ಲಿ ಪಿಯುಸಿ ಪರೀಕ್ಷೆ ಬರೆಯದೇ ಪಾಸ್ ಆಗಿದ್ದಕ್ಕೆ ತುಮಕೂರಿನಲ್ಲಿ ಪಿಯುಸಿ ವಿದ್ಯಾರ್ಥಿಗಳು ಕುಂಬಳಕಾಯಿ ಹೊಡೆದು ಸಂಭ್ರಮಿಸಿದ್ದಾರೆ.ತಿಪಟೂರು ನಗರದ ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜಿನ ಗೇಟ್ ಮುಂದೆ ಕುಂಬಳಕಾಯಿ ಹೊಡೆದು, ಪಟಾಕಿ ಸಿಡಿಸಿ ವಿದ್ಯಾರ್ಥಿಗಳು ಸಂಭ್ರಮಾಚರಣೆ ಮಾಡಿದ್ದಾರೆ.   ಸಂಭ್ರಮಾಚರಣೆ ಬಳಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್‌ ಅವರಿಗೆ ವಿದ್ಯಾರ್ಥಿಗಳು ಜೈಕಾರ ಹಾಕಿದ್ದು, ವೀಡಿಯೋ ಚಿತ್ರೀಕರಿಸಿ ಅದನ್ನ ರಿಮೇಕ್ ಮಾಡಿ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. 10ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಂಭ್ರಮಾಚರಣೆ ಮಾಡಿರುವ

ಪರೀಕ್ಷೆ ಇಲ್ಲದೇ ಪಾಸ್ ➤ ಕುಂಬಳಕಾಯಿ ಹೊಡೆದು ಪಿಯು ವಿದ್ಯಾರ್ಥಿಗಳ ಸಂಭ್ರಮ Read More »

ಕರ್ನಾಟಕ

ಪ್ರೇಮಿಗಾಗಿ ಗಾಂಜಾ ತಲುಪಿಸುವಾಗ ಸಿಕ್ಕಿಬಿದ್ದ ಇಂಜಿನಿಯರಿಂಗ್ ಪದವೀಧರೆ

(ನ್ಯೂಸ್ ಕಡಬ) newskadaba,ಬೆಂಗಳೂರು ಜೂ.16: ಪ್ರಿಯಕರನಿಗಾಗಿ ಗಾಂಜಾ ತಲುಪಿಸುತ್ತಿದ್ದ ಇಂಜಿನಿಯರಿಂಗ್ ಪದವೀಧರೆಯನ್ನು ಬೆಂಗಳೂರಿನ ಸದಾಶಿವನಗರ ಪೊಲೀಸರು ಬಂಧಿಸಿ ಎರಡೂವರೆ ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.ಅಂಧ್ರಪ್ರದೇಶದಿಂದ ಬಂದು ನಗರದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ರೇಣುಕಾ ಬಂಧಿತ ಆರೋಪಿ. ಚೆನ್ನೈನ ಖಾಸಗಿ‌ ಕಾಲೇಜಿನಲ್ಲಿ ಸಿದ್ದಾರ್ಥ್ ಎಂಬಾತನನ್ನು ಪ್ರೇಮಿಸಿದ್ದ ರೇಣುಕಾ, ಸಿದ್ದಾರ್ಥ್ ಕೊಡುತ್ತಿದ್ದ ಗಾಂಜಾವನ್ನು ಗ್ರಾಹಕರಿಗೆ ತಲುಪಿಸುತ್ತಿದ್ದಳು.ಬೆಂಗಳೂರಿನ ಮುಖ್ಯರಸ್ತೆಗಳಲ್ಲಿರುವ ಓಯೋ ರೂಮ್ ಮಾಡುತ್ತಿದ್ದ ರೇಣುಕಾ, ಸಿದ್ದಾರ್ಥ್ ಜೊತೆ ಕಾನ್ಫರೆನ್ಸ್ ಕಾಲ್ ನಲ್ಲಿ ಮಾತನಾಡಿ ಗ್ರಾಹಕರನ್ನು ರೂಮ್ ಬಳಿ ಕರೆಸಿಕೊಂಡು ಗಾಂಜಾ ಪೂರೈಸಲಾಗುತಿತ್ತು. ತಾನು

ಪ್ರೇಮಿಗಾಗಿ ಗಾಂಜಾ ತಲುಪಿಸುವಾಗ ಸಿಕ್ಕಿಬಿದ್ದ ಇಂಜಿನಿಯರಿಂಗ್ ಪದವೀಧರೆ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಗಂಗೆಯಲ್ಲಿ ತೇಲಿ ಬಂದ ಪೆಟ್ಟಿಗೆಯಲ್ಲಿತ್ತು 21 ದಿನದ ಕಂದಮ್ಮ..?!

(ನ್ಯೂಸ್ ಕಡಬ) newskadaba,ಗಾಜಿಪುರ ಜೂ.15: ನವಜಾತ ಶಿಶುವನ್ನು ಪೆಟ್ಟಿಗೆಯಲ್ಲಿಟ್ಟು ಗಂಗಾನದಿಯಲ್ಲಿ ತೇಲಿ ಬಿಟ್ಟಿರುವ ಘಟನೆ ದಾದ್ರಿಘಾಟ್​ ಬಳಿ ನಡೆದಿದೆ. ಗಾಳಿ ಜೋರಾಗಿ ಬೀಸಿದ್ದರಿಂದ ಮರದ ಪೆಟ್ಟಿಗೆಯು ದಡಕ್ಕೆ ಬಂದಿತ್ತು. ಅದರಲ್ಲಿ ಮಗು ಅಳುವ ಶಬ್ದ ಕೇಳಿ ಬಂದಿದ್ದು, ಸ್ಥಳೀಯರು ಆ ಬಾಕ್ಸ್​ ಅನ್ನು ತೆರೆದು ನೋಡಿದಾಗ ಅದರಲ್ಲಿ ಮಗು ಇರುವುದು ಪತ್ತೆಯಾಗಿದೆ. 21 ದಿನದ ಮಗುವಿದ್ದ ಆ ಪೆಟ್ಟಿಗೆಯಲ್ಲಿ ದುರ್ಗಾದೇವಿ ಮತ್ತು ವಿಷ್ಣುವಿನ ಫೋಟೋಗಳಿದ್ದವು. ಇದರೊಂದಿಗೆ ಮಗುವಿನ ಜಾತಕ ಕೂಡ ಇದೆ ಎಂದು ಸ್ಥಳೀಯರು ತಿಳಿಸಿದ್ದಾರೆ.ಪೆಟ್ಟಿಗೆಯಲ್ಲಿ ಮಗುವನ್ನು ಯಾರಿಟ್ಟರು,

ಗಂಗೆಯಲ್ಲಿ ತೇಲಿ ಬಂದ ಪೆಟ್ಟಿಗೆಯಲ್ಲಿತ್ತು 21 ದಿನದ ಕಂದಮ್ಮ..?! Read More »

ಕರಾವಳಿ

ಅಕ್ಷತಾ ಪಾಂಡವಪುರಗೆ “ನ್ಯೂಯಾರ್ಕ್ ಇಂಡಿಯನ್ ಫಿಲ್ಮ್” ಪ್ರಶಸ್ತಿ

(ನ್ಯೂಸ್ ಕಡಬ) newskadaba,ಬೆಂಗಳೂರು ಜೂ.15: ಸ್ಯಾಂಡಲ್‍ವುಡ್ ನಟಿ, ರಂಗಭೂಮಿ ಕಲಾವಿದೆ ಅಕ್ಷತಾ ಪಾಂಡವಪುರ ಅವರಿಗೆ ಪ್ರತಿಷ್ಠಿತ ನ್ಯೂಯಾರ್ಕ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್ (ಎನ್‍ವೈಐಎಫ್‍ಎಫ್)ನಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿದೆ.ಪಿಂಕಿ ಎಲ್ಲಿ? ಚಿತ್ರದಲ್ಲಿನ ನಟನೆಗಾಗಿ ಅಕ್ಷತಾ ಈ ಪ್ರಶಸ್ತಿ ಪಡೆದಿದ್ದಾರೆ.     ಇದೇ ಸಿನಿಮಾಕ್ಕೆ ಚಿತ್ರಕತೆ ಬರೆದ ಕನ್ನಡದ ಚಿತ್ರ ನಿರ್ದೇಶಕ ಪೃಥ್ವಿ ಕೋಣನೂರ್ ಅವರಿಗೆ ಅತ್ಯುತ್ತಮ ಚಿತ್ರಕತೆ ಪ್ರಶಸ್ತಿ ಲಭಿಸಿದೆ. ಜೂನ್ 4ರಿಂದ 13ರವರೆಗೆ ವರ್ಚುವಲ್ ಮಾಧ್ಯಮದಲ್ಲಿ 2021ನೇ ಸಾಲಿನ ಎನ್‍ವೈಐಎಫ್‍ಎಫ್ ನಡೆಯಿತು. ಪ್ರಶಸ್ತಿ ವಿಜೇತರಿಗೆ

ಅಕ್ಷತಾ ಪಾಂಡವಪುರಗೆ “ನ್ಯೂಯಾರ್ಕ್ ಇಂಡಿಯನ್ ಫಿಲ್ಮ್” ಪ್ರಶಸ್ತಿ Read More »

ಸಿನಿಮಾ

ಇಬ್ಬರು ಯುವಕರಿಗೆ “ಸಂಚಾರಿ ವಿಜಯ್” ಕಣ್ಣು ಜೋಡಣೆ

(ನ್ಯೂಸ್ ಕಡಬ) newskadaba,ಬೆಂಗಳೂರು ಜೂ.15: ಸಂಚಾರಿ ವಿಜಯ್ ಅವರ ನಿಧನಕ್ಕೆ ಇಡೀ ರಾಜ್ಯವೇ ಕಂಬನಿ ಮಿಡಿಯುತ್ತಿದೆ. ಅವರ ಸಾಮಾಜಿಕ ಕಾರ್ಯ, ನಟನೆ, ಒಳ್ಳೆಯ ಗುಣ ಇರುವಂತಹ ನಟನನ್ನ ಕಳೆದುಕೊಂಡು ಕನ್ನಡಿಗರು ಕಣ್ಣೀರು ಹಾಕುತ್ತಾ ಇದ್ದಾರೆ. ಆದರೆ ಈಗ ಅವರ ನಿಧನದ ನಂತರ ಮಾಡಿರುವ ಮಹಾತ್ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ. ಅವರ ಅಂಗಾಂಗ ದಾನದ ನಿರ್ಧಾರಕ್ಕೆ ವೈದ್ಯರು ಅವರ ಪೋಷಕರಿಗೆ ಧನ್ಯವಾದ ತಿಳಿಸುತ್ತಾ ಇದ್ದಾರೆ. ಸಂಚಾರಿ ವಿಜಯ್ ಅವರ ಕಣ್ಣುಗಳನ್ನ ಮಿಂಟೋ ಆಸ್ಪತ್ರೆಯಲ್ಲಿ ಇಬ್ಬರು ಯುವಕರಿಗೆ

ಇಬ್ಬರು ಯುವಕರಿಗೆ “ಸಂಚಾರಿ ವಿಜಯ್” ಕಣ್ಣು ಜೋಡಣೆ Read More »

ಕರಾವಳಿ

ಭಾರತದಲ್ಲಿ ಕೊರೋನಾ 2ನೇ ಅಲೆ ಇಳಿಮುಖ

(ನ್ಯೂಸ್ ಕಡಬ) newskadaba,ನವದೆಹಲಿ ಜೂ.15:ಭಾರತದಲ್ಲಿ ಕೊರೋನಾ 2ನೇ ಅಲೆಯ ತೀವ್ರತೆ ಮತ್ತಷ್ಟು ಕಡಿಮೆಯಾಗಿದೆ. ಮಂಗಳವಾರ 60,471 ಜನರಲ್ಲಿ ಸೋಂಕು ಕಂಡು ಬಂದಿದ್ದು, ಇದು 75 ದಿನಗಳಲ್ಲೇ ಕನಿಷ್ಟವಾಗಿದೆ. ಇದೇ ಅವಧಿಯಲ್ಲಿ ದೇಶದಲ್ಲಿ 2,726 ಮಂದಿ ಸಾವನ್ನಪ್ಪಿದ್ದಾರೆಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. ಶನಿವಾರದ ಅಂಕಿ ಸಂಖ್ಯೆಯೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,95,70,881ಕ್ಕೆ ತಲುಪಿದ್ದು, ಸಾವಿನ ಸಂಖ್ಯೆ 3,77,031ಕ್ಕೆ ಏರಿಕೆಯಾಗಿದೆ.  ದೇಶದಲ್ಲಿ ದೈನಂದಿನ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿರುವ ನಡುವಲ್ಲೇ ಸಕ್ರಿಯ ಪ್ರಕರಣಗಳ ಸಂಖ್ಯೆ

ಭಾರತದಲ್ಲಿ ಕೊರೋನಾ 2ನೇ ಅಲೆ ಇಳಿಮುಖ Read More »

ಕರಾವಳಿ
Scroll to Top