Mangalore

ದ.ಕ ಜಿಲ್ಲೆಯಲ್ಲಿ ಮೊದಲ ಕೊರೊನಾ ಪಾಸಿಟಿವ್ ಪತ್ತೆ…!! ➤ ವಿದೇಶದಿಂದ ಬಂದ ವ್ಯಕ್ತಿಗೆ ಕೋವಿಡ್ ದೃಢ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 28. ಸೌದಿ ಅರೇಬಿಯದಿಂದ ಆಗಮಿಸಿದ ಮಂಗಳೂರು ಮೂಲದ ವ್ಯಕ್ತಿಗೆ ಕೋವಿಡ್‌ ದೃಢಪಟ್ಟಿದ್ದು, ಈ ಮೂಲಕ ದ.ಕ ಜಿಲ್ಲೆಯಲ್ಲಿ ಮೊದಲ ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮಂಗಳೂರಿನ ವ್ಯಕ್ತಿಯನ್ನು ಅಲ್ಲಿ ಕೋವಿಡ್‌ ತಪಾಸಣೆಗೆ ಒಳಪಡಿಸಿದಾಗ ಕೋವಿಡ್‌ ದೃಢಪಟ್ಟಿತ್ತು. ಅವರ ಗಂಟಲ ದ್ರವ ಮಾದರಿಯನ್ನು ಜಿನೋಮಿಕ್‌ ಸೀಕ್ವೆನ್ಸಿಂಗ್‌ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಯಾವುದೇ ಗುಣಲಕ್ಷಣ ಹೊಂದಿರದ ಕಾರಣ ಅವರನ್ನು ಮಂಗಳೂರಿನ ಅವರ ಮನೆಯಲ್ಲಿ ಗೃಹ ನಿಗಾವಣೆಯಲ್ಲಿರಿಸಲಾಗಿದೆ ಎಂದು ಮೂಲಗಳು […]

ದ.ಕ ಜಿಲ್ಲೆಯಲ್ಲಿ ಮೊದಲ ಕೊರೊನಾ ಪಾಸಿಟಿವ್ ಪತ್ತೆ…!! ➤ ವಿದೇಶದಿಂದ ಬಂದ ವ್ಯಕ್ತಿಗೆ ಕೋವಿಡ್ ದೃಢ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಬಂಟ್ವಾಳ: ಕೆಲಸಕ್ಕೆಂದು ತೆರಳಿದ್ದ ಯುವಕ ನಾಪತ್ತೆ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಡಿ. 28. ಕೆಲಸಕ್ಕೆಂದು ಬೆಂಗಳೂರಿಗೆ ತೆರಳಿದ್ದ ಯುವಕನೋರ್ವ ನಾಪತ್ತೆಯಾದ ಘಟನೆ ಬಂಟ್ವಾಳದಿಂದ ವರದಿಯಾಗಿದೆ. ನಾಪತ್ತೆಯಾದ ಯುವಕನನ್ನು ಬಂಟ್ವಾಳ ತಾಲೂಕಿನ ಬಿ.ಮೂಡ ಗ್ರಾಮ ಮದ್ದ ನಿವಾಸಿ ಅಬೂಬಕ್ಕರ್ ಎಂಬವರ ಮಗ ಮಹಮ್ಮದ್ ನಿಜಾಮ್ ಎಂದು ಗುರುತಿಸಲಾಗಿದೆ. ಎಸ್ಸ್ಸೆಸ್ಸೆಲ್ಸಿ ತನಕ ವಿದ್ಯಾಭ್ಯಾಸ ಮಾಡಿದ್ದ ಈತ, ಪ್ರಸ್ತುತ ಕೂಲಿ ಕೆಲಸಕ್ಕೆ ಹೋಗುತ್ತಿದ್ದ. ಇತ್ತೀಚೆಗೆ ತನ್ನ ದೇರಳಕಟ್ಟೆಯ ಗೆಳೆಯನೊಂದಿಗೆ ಕೆಲಸಕ್ಕೆಂದು ಬೆಂಗಳೂರಿಗೆ ತೆರಳಿದ್ದು, ಆ ಬಳಿಕ ಯಾವುದೇ ರೀತಿಯ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿರುವುದಾಗಿ ಬಂಟ್ವಾಳ ಪೊಲೀಸ್‌ ಠಾಣೆಯಲ್ಲಿ

ಬಂಟ್ವಾಳ: ಕೆಲಸಕ್ಕೆಂದು ತೆರಳಿದ್ದ ಯುವಕ ನಾಪತ್ತೆ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಕೊರೋನಾ ಭೀತಿ ➤ ವೆನ್ಲಾಕ್ ಆಸ್ಪತ್ರೆಯಲ್ಲಿ ಐಸೋಲೇಶನ್ ವಾರ್ಡ್ ಸಿದ್ದ..!

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 28. ಚೀನಾ ಸೇರಿದಂತೆ ಕೆಲವು ದೇಶಗಳಲ್ಲಿ ಕೊರೋನಾ ರೂಪಾಂತರಿ ತಳಿಯ ಹಾವಳಿ ತೀವ್ರಗೊಂಡಿದ್ದ ಹಿನ್ನೆಲೆ, ಮುನ್ನೆಚ್ಚರಿಕಾ ಕ್ರಮವಾಗಿ ವಿದೇಶದಿಂದ ಆಗಮಿಸುವ ಪ್ರಯಾಣಿಕರಲ್ಲಿ ಕೋವಿಡ್ ಲಕ್ಷಣ ಕಂದುಬಂದಲ್ಲಿ ಅವರನ್ನು ಪ್ರತ್ಯೇಕಿಸುವ ನಿಟ್ಟಿನಲ್ಲಿ ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ 25 ಹಾಸಿಗೆಯ ಐಸೋಲೇಶನ್ ವಾರ್ಡ್ ಸಿದ್ದಗೊಳಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹೆಚ್ಚುತ್ತಿರು ಕೊರೋನಾ ಪ್ರಕರಣವನ್ನು ತಡೆಗಟ್ಟುವ ಸಲುವಾಗಿ ರಾಜ್ಯ ಸರಕಾರ ಮಾರ್ಗಸೂಚಿ ಬಿಡುಗಡೆ ಮಾಡಿದಲ್ಲದೇ, ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಆಗಮಿಸುವ ವಿದೇಶೀ ಪ್ರಯಾಣಿಕರನ್ನು

ಕೊರೋನಾ ಭೀತಿ ➤ ವೆನ್ಲಾಕ್ ಆಸ್ಪತ್ರೆಯಲ್ಲಿ ಐಸೋಲೇಶನ್ ವಾರ್ಡ್ ಸಿದ್ದ..! Read More »

ಕರಾವಳಿ

ಉಳ್ಳಾಲ: ಓವರ್ ಟೇಕ್ ಭರದಲ್ಲಿ ವಿದ್ಯಾರ್ಥಿ ಮೇಲೆ ಹರಿದ ಕಾರು ➤ ಬಾಲಕ ಮೃತ್ಯು

(ನ್ಯೂಸ್ ಕಡಬ) newskadaba.com ಉಳ್ಳಾಲ, ಡಿ. 27. ನಿಂತಿದ್ದ ಬಸ್ಸನ್ನು ಓವರ್ ಟೇಕ್ ಮಾಡುವ ಭರದಲ್ಲಿದ್ದ ಕಾರೊಂದು ಸ್ಕೂಟರ್, ರಿಕ್ಷಾಕ್ಕೆ ಡಿಕ್ಕಿ ಹೊಡೆದು ಶಾಲಾ ವಿದ್ಯಾರ್ಥಿ ಮೇಲೆ ಹರಿದ ಪರಿಣಾಮ ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟ ಘಟನೆ ಮುಡಿಪು ಜಂಕ್ಷನ್‌ನಲ್ಲಿ ನಡೆದಿದೆ. ಮೃತ ಬಾಲಕನನ್ನು ಬೋಳಿಯಾರು ಗ್ರಾಮದ ಬಟ್ರಬೈಲು ನಿವಾಸಿ ಹರಿಶ್ಚಂದ್ರ ಅರುಣಾಕ್ಷಿ ದಂಪತಿ ಪುತ್ರ ಕಾರ್ತಿಕ್ (14) ಎಂದು ಗುರುತಿಸಲಾಗಿದೆ. ಮೃತ ಕಾರ್ತಿಕ್ ಮುಡಿಪು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಎಂಟನೇ ತರಗತಿ ವಿದ್ಯಾರ್ಥಿಯಾಗಿದ್ದು, ಶಾಲೆ ಬಿಟ್ಟು ಮನೆಗೆ

ಉಳ್ಳಾಲ: ಓವರ್ ಟೇಕ್ ಭರದಲ್ಲಿ ವಿದ್ಯಾರ್ಥಿ ಮೇಲೆ ಹರಿದ ಕಾರು ➤ ಬಾಲಕ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಮಂಗಳೂರು: ಜಲೀಲ್ ಕೊಲೆ ಪ್ರಕರಣ ➤ ಮತ್ತೋರ್ವ ಆರೋಪಿಯ ಬಂಧನ

(ನ್ಯೂಸ್ ಕಡಬ) newskadaba.com ಸುರತ್ಕಲ್‌, ಡಿ. 27. ಕಾಟಿಪಳ್ಳ ಜಲೀಲ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನಾಲ್ಕನೇ ಆರೋಪಿಯನ್ನು ಸುರತ್ಕಲ್‌ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಕಾಟಿಪಳ್ಳ 4ನೇ ಬ್ಲಾಕ್‌ ನಿವಾಸಿ ಲಕ್ಷ್ಮೀಶ ದೇವಾಡಿಗ (28) ಎಂದು ಗುರುತಿಸಲಾಗಿದೆ. ಕಳೆದ ಶನಿವಾರದಂದು ರಾತ್ರಿ ಜಲೀಲ್‌ ಅವರನ್ನು ಕಾಟಿಪಳ್ಳ 4ನೇ ಬ್ಲಾಕ್‌ ನ ನೈತಂಗಡಿ ಎಂಬಲ್ಲಿರುವ ಅವರ ಫ್ಯಾನ್ಸಿ ಮತ್ತು ಚಪ್ಪಲಿಯ ಅಂಗಡಿಯ ಮುಂಭಾಗ ಚೂರಿಯಿಂದ ಇರಿದು ಕೊಲೆ ಮಾಡಲಾಗಿತ್ತು.

ಮಂಗಳೂರು: ಜಲೀಲ್ ಕೊಲೆ ಪ್ರಕರಣ ➤ ಮತ್ತೋರ್ವ ಆರೋಪಿಯ ಬಂಧನ Read More »

ಕರಾವಳಿ, ಕ್ರೈಮ್ ನ್ಯೂಸ್

ಮಂಗಳೂರು: ಇಂದು ನಡೆಯಲಿರುವ ಬೃಹತ್ ಹಕ್ಕೊತ್ತಾಯ ಸಭೆಗೆ SDPI ಜಿಲ್ಲಾ ಸಮಿತಿ ಸಂಪೂರ್ಣ ಬೆಂಬಲ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 27. ಸುರತ್ಕಲ್ ಜಲೀಲ್ ಹತ್ಯೆ ಖಂಡಿಸಿ ಹಾಗೂ ಸರ್ಕಾರ ನಡೆದುಕೊಂಡ ತಾರತಮ್ಯ ನೀತಿಯನ್ನು ವಿರೋಧಿಸಿ ಎಸ್ಎಸ್ಎಫ್ ಹಾಗೂ ಎಸ್ ವೈಎಸ್ ಸಂಘಟನೆ ವತಿಯಿಂದ ಇಂದು ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನೆಗೆ ಎಸ್‌ಡಿಪಿಐ ದ.ಕ ಜಿಲ್ಲಾ ಸಮಿತಿಯು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ ಎಂದು ಎಸ್ಡಿಪಿಐ ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದಾತ್ ಬಜತ್ತೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಡಿ. 27 ಮಂಗಳವಾರದಂದು ಸಂಜೆ 3 ಗಂಟೆಗೆ ಮಂಗಳೂರಿನ ಕ್ಲಾಕ್ ಟವರ್ ಮುಂಭಾಗದಲ್ಲಿ ಪ್ರಜಾಸತ್ತಾತ್ಮಕವಾಗಿ

ಮಂಗಳೂರು: ಇಂದು ನಡೆಯಲಿರುವ ಬೃಹತ್ ಹಕ್ಕೊತ್ತಾಯ ಸಭೆಗೆ SDPI ಜಿಲ್ಲಾ ಸಮಿತಿ ಸಂಪೂರ್ಣ ಬೆಂಬಲ Read More »

ಕರಾವಳಿ

ಸುಳ್ಯ: ಪಿಯುಸಿ ವಿದ್ಯಾರ್ಥಿನಿ ನೇಣಿಗೆ ಶರಣು

(ನ್ಯೂಸ್ ಕಡಬ) newskadaba.com ಸುಳ್ಯ, ಡಿ. 26. ಬೆಂಗಳೂರು ಮೂಲದ ವಿದ್ಯಾರ್ಥಿನಿಯೋರ್ವಳು ಹಾಸ್ಟೆಲ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಸುಳ್ಯದಲ್ಲಿ ಸೋಮವಾರದಂದು ನಡೆದಿದೆ. ಆತ್ಮಹತ್ಯೆಗೆ ಶರಣಾದವರನ್ನು ರಾಮನಾಥಪುರದ ಕಾರಮಂಗಲ ತಾಲೂಕಿನ ಮಾರ್ಲಮಂಗಲ ಪುರುಷೋತ್ತಮ ಎಂಬವರ ಪುತ್ರಿ ಸೋನಿಯಾ (18) ಎಂದು ಗುರುತಿಸಲಾಗಿದೆ. ಈಕೆ ಸುಳ್ಯದ ಖಾಸಗಿ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಯಾಗಿದ್ದು, ಕುರುಂಜಿಭಾಗ್ ಸಮೀಪದ ಬಿಸಿಎಂ ಹಾಸ್ಟೆಲ್‌ನಲ್ಲಿ ವಾಸವಾಗಿದ್ದಳು. ಸೋನಿಯಾ ಕಾಲೇಜಿಗೆ ಹೋಗದೆ ರೂಂನಲ್ಲಿಯೇ ಉಳಿದುಕೊಂಡಿದ್ದು, ಮಧ್ಯಾಹ್ನ ಊಟಕ್ಕೆ ತಟ್ಟೆ ತರಲೆಂದು ರೂಂ ಬಳಿ ಬಂದಿದ್ದ

ಸುಳ್ಯ: ಪಿಯುಸಿ ವಿದ್ಯಾರ್ಥಿನಿ ನೇಣಿಗೆ ಶರಣು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಮಂಗಳೂರು: ಕಾರಿನಲ್ಲಿ ಲಕ್ಷಾಂತರ ರೂ. ಮೌಲ್ಯದ ಗಾಂಜಾ ಸಾಗಾಟ ➤ ನಾಲ್ವರ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 26. ಕಾರಿನಲ್ಲಿ ಲಕ್ಷಾಂತರ ರೂ. ಮೌಲ್ಯದ ಗಾಂಜಾ ಸಾಗಾಟಕ್ಕೆ ಯತ್ನಿಸಿದ ನಾಲ್ವರು ಆರೋಪಿಗಳನ್ನು, ಸೊತ್ತುಗಳ ಸಹಿತ ಕೊಣಾಜೆ ಪೊಲೀಸರು ವಶಕ್ಕೆ ಪಡೆದ ಘಟನೆ ವರದಿಯಾಗಿದೆ. ಬಂಧಿತರನ್ನು ಮಹಮ್ಮದ್ ನೌಫಲ್, ಜಂಶೀರ್ ಎಂ, ಮಹಮ್ಮದ್ ಬಾತೀಶ್ ಹಾಗೂ ಮಹಮ್ಮದ್ ಅಶ್ರಫ್ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳಿಂದ 32 ಕೆಜಿ ತೂಕದ 3 ಲಕ್ಷ 19ಸಾವಿರ ಮೌಲ್ಯದ ನಿಷೇಧಿತ ಮಾದಕ ದ್ರವ್ಯ, ಆರೋಪಿಗಳು ಬಳಸಿದ 13 ಸಾವಿರ ಮೌಲ್ಯದ 4 ಮೊಬೈಲ್ ಗಳ

ಮಂಗಳೂರು: ಕಾರಿನಲ್ಲಿ ಲಕ್ಷಾಂತರ ರೂ. ಮೌಲ್ಯದ ಗಾಂಜಾ ಸಾಗಾಟ ➤ ನಾಲ್ವರ ಬಂಧನ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಪುತ್ತೂರು: ಕುಸಿದು ಬಿದ್ದು ವ್ಯಕ್ತಿ ಮೃತ್ಯು 

(ನ್ಯೂಸ್ ಕಡಬ) newskadaba.com ಪುತ್ತೂರು, ಡಿ. 26. ಮನೆಯ ಟೆರೇಸಿಗೆ ಹತ್ತುವ ಮೆಟ್ಟಿಲಿನ ಸಮೀಪ ಕುಸಿದು ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಸಾಲ್ಮರ ಮುದ್ದೋಡಿ ಎಂಬಲ್ಲಿ ಸಂಭವಿಸಿದೆ. ಮೃತಪಟ್ಟವರನ್ನು ಸಾಲ್ಮರ ಮುದ್ದೋಡಿ ನಿವಾಸಿ ನಾರಾಯಣ ನಾಯ್ಕ (64) ಎಂದು ಗುರುತಿಸಲಾಗಿದೆ. ಅವರು ಮನೆಯ ಟೆರೇಸಿಗೆ ಹತ್ತುವ ಮೆಟ್ಟಿಲಿನ ಸಮೀಪ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು ಪುತ್ತೂರು ನಗರ ಪೊಲೀಸ್ ಠಾನೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.  

ಪುತ್ತೂರು: ಕುಸಿದು ಬಿದ್ದು ವ್ಯಕ್ತಿ ಮೃತ್ಯು  Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಮಂಗಳೂರು: ಜಲೀಲ್ ಕೊಲೆ ಪ್ರಕರಣ ➤ ಮೂವರ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 26. ಕಾಟಿಪಳ್ಳ ಜಲೀಲ್ ಕೊಲೆ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ. ಬಂಧಿತರನ್ನು ನೈತಂಗಡಿ ಕೃಷ್ಣಾಪುರ ನಿವಾಸಿ ಶೈಲೇಶ್ ಯಾನೇ ಶೈಲೇಶ್ ಪೂಜಾರಿ, ಉಡುಪಿ ಹೆಜಮಾಡಿ ನಿವಾಸಿ ಸವೀನ್ ಕಾಂಚನ್ ಯಾನೇ ಮುನ್ನ, ಕೃಷ್ಣಾಪುರ 3ನೇ ಬ್ಲಾಕ್ ನಿವಾಸಿ ಪವನ್ ಅಲಿಯಾಸ್ ಪಚ್ಚು ಎಂದು ಗುರುತಿಸಲಾಗಿದೆ. ಸದ್ಯ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 14 ದಿನ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗುತ್ತದೆ.

ಮಂಗಳೂರು: ಜಲೀಲ್ ಕೊಲೆ ಪ್ರಕರಣ ➤ ಮೂವರ ಬಂಧನ Read More »

ಕರಾವಳಿ, ಕರ್ನಾಟಕ
Scroll to Top