Mangalore

ಮಂಗಳೂರು: ಗೃಹರಕ್ಷಕ ಕ್ಷೇಮಾಭಿವೃದ್ದಿ ನಿಧಿಯಿಂದ ಚೆಕ್ ಹಸ್ತಾಂತರ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 06. ಗೃಹರಕ್ಷಕ ಕ್ಷೇಮಾಭಿವೃದ್ಧಿ ನಿಧಿಯಿಂದ ಗೃಹರಕ್ಷಕರ ಮಕ್ಕಳ ವಿದ್ಯಾಭ್ಯಾಸ ಹಾಗೂ ಗೃಹರಕ್ಷಕರ ಮತ್ತು ಅವರ ಕುಟುಂಬದವರಿಗೆ ವೈದ್ಯಕೀಯ ವೆಚ್ಚ ಸಹಾಯಧನವನ್ನು ನೀಡಲಾಗುತ್ತದೆ. ಮಂಗಳೂರು ಘಟಕದ ಗೃಹರಕ್ಷಕಿ ಸುಲೋಚನಾ ಅವರ ಮಗಳಾದ ಶ್ರೇಯಾ ಎಸ್. ಶೆಟ್ಟಿ ಅವರು ಎರಡನೇ ವರ್ಷದ ಬಿ.ಇ. (ಇಂಜಿನಿಯರಿಂಗ್) ವ್ಯಾಸಂಗಕ್ಕಾಗಿ 12,000 ರೂ. ಗಳು ಕೇಂದ್ರ ಕಚೇರಿಯಿಂದ ಸಹಾಯ ಧನ ಮಂಜೂರಾಗಿದ್ದು, ಮೇರಿಹಿಲ್‍ ನಲ್ಲಿರುವ ಜಿಲ್ಲಾ ಗೃಹರಕ್ಷಕದಳ ಕಚೇರಿಯಲ್ಲಿ ಶುಕ್ರವಾರದಂದು ಗೃಹರಕ್ಷಕದಳದ ಸಮಾದೇಷ್ಟ ಡಾ. ಮುರಲೀ ಮೋಹನ್ […]

ಮಂಗಳೂರು: ಗೃಹರಕ್ಷಕ ಕ್ಷೇಮಾಭಿವೃದ್ದಿ ನಿಧಿಯಿಂದ ಚೆಕ್ ಹಸ್ತಾಂತರ Read More »

ಕರಾವಳಿ

ಜ. 21ರಂದು ಮಾಣಿಲ ಗ್ರಾಮದಲ್ಲಿ ಜಿಲ್ಲಾಧಿಕಾರಿಯವರ ಗ್ರಾಮ ವಾಸ್ತವ್ಯ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 06. ಇದೇ ತಿಂಗಳ ಮೂರನೇ ಶನಿವಾರ (ಜ. 21ರ) ಬೆಳಗ್ಗೆ 11 ಗಂಟೆಯಿಂದ ಬಂಟ್ವಾಳ ತಾಲೂಕಿನ ಮಾಣಿಲ ಗ್ರಾಮದ ಮುರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಅವರು ಗ್ರಾಮ ವಾಸ್ತವ್ಯ ಮಾಡಲಿದ್ದಾರೆ. ಅಲ್ಲಿನ ಗ್ರಾಮಸ್ಥರಿಂದ ಅಹವಾಲು ಸ್ವೀಕರಿಸಿ, ಕೆಲವೊಂದು ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆಹರಿಸಲಿದ್ದಾರೆ. ಆದಕಾರಣ ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳು ಕಡ್ಡಾಯವಾಗಿ ಅಲ್ಲಿ ಹಾಜರಿರುವಂತೆ ಅಪರ ಜಿಲ್ಲಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜ. 21ರಂದು ಮಾಣಿಲ ಗ್ರಾಮದಲ್ಲಿ ಜಿಲ್ಲಾಧಿಕಾರಿಯವರ ಗ್ರಾಮ ವಾಸ್ತವ್ಯ Read More »

ಕರಾವಳಿ

ಗ್ರಾಮೀಣ ಕ್ರೀಡೆಗಳ ಪ್ರೋತ್ಸಾಹಕ್ಕೆ ಜಿಲ್ಲಾ ಮಟ್ಟದ ಕ್ರೀಡಾಕೂಟಗಳ ಸಹಕಾರ ಅಗತ್ಯ ➤ ಡಿಸಿ ರವಿಕುಮಾರ್

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 06. ಗ್ರಾಮೀಣ ಕ್ರೀಡೆಗಳ ಪ್ರೋತ್ಸಾಹಕ್ಕೆ ಜಿಲ್ಲಾ ಮಟ್ಟದ ಗ್ರಾಮೀಣ ಕ್ರೀಡಾಕೂಟಗಳು ಅತ್ಯಂತ ಉಪಯುಕ್ತವಾಗಿವೆ ಎಂದು ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್ ಹೇಳಿದರು. ಅವರು ಶುಕ್ರವಾರದಂದು ನಗರದ ಕರಾವಳಿ ಮೈದಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಮತ್ತು ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಗ್ರಾಮೀಣ ಕ್ರೀಡಾಕೂಟ 2022-23ಕ್ಕೆ ಚಾಲನೆ ನೀಡಿ ಮಾತನಾಡಿದರು. ಹಲವಾರು ಗ್ರಾಮೀಣ ಕ್ರೀಡೆಗಳು ನಶಿಸಿ ಹೋಗುತ್ತಿರುವ

ಗ್ರಾಮೀಣ ಕ್ರೀಡೆಗಳ ಪ್ರೋತ್ಸಾಹಕ್ಕೆ ಜಿಲ್ಲಾ ಮಟ್ಟದ ಕ್ರೀಡಾಕೂಟಗಳ ಸಹಕಾರ ಅಗತ್ಯ ➤ ಡಿಸಿ ರವಿಕುಮಾರ್ Read More »

ಕರಾವಳಿ

ದ.ಕ. ಮತ್ತು ಉಡುಪಿ ಜಿಲ್ಲೆಗಳು ಹಿಂದುತ್ವದ ಫ್ಯಾಕ್ಟರಿಗಳಾಗಿ ಬಿಟ್ಟಿವೆ ➤  ಸಿದ್ದರಾಮಯ್ಯ ಆರೋಪ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 06. ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ವಿಧಾನಸಭೆ ಕ್ಷೇತ್ರದ ಹರೇಕಳದಲ್ಲಿ ಆಯೋಜಿಸಿದ್ದ ಜನ ಜಾಗೃತಿ ಸಮಾವೇಶದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಪಾಲ್ಗೊಂಡು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಾಡಿಗೆ ದ್ರೋಹ ಬಗೆಯುತ್ತಿವೆ ಎಂದು ಆರೋಪಿಸಿದರು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ಹಿಂದುತ್ವದ ಫ್ಯಾಕ್ಟರಿಗಳಾಗಿವೆ. ಕೋಮುವಾದ ಹುಟ್ಟಿರುವುದೇ ದ.ಕ ಜಿಲ್ಲೆಯಲ್ಲಿ. ಕೋಮುವಾದ ಬೆಳೆಸಲು ಮಂಗಳೂರನ್ನು ಪ್ರಯೋಗಾಲಯ ರೀತಿ ಬಳಸಿಕೊಳ್ಳಲಾಗುತ್ತಿದೆ ಎಂದು ಸರಕಾರದ ವಿರುದ್ಧ ಅವರು ಆರೋಪಿಸಿದ್ದಾರೆ.

ದ.ಕ. ಮತ್ತು ಉಡುಪಿ ಜಿಲ್ಲೆಗಳು ಹಿಂದುತ್ವದ ಫ್ಯಾಕ್ಟರಿಗಳಾಗಿ ಬಿಟ್ಟಿವೆ ➤  ಸಿದ್ದರಾಮಯ್ಯ ಆರೋಪ Read More »

ಕರಾವಳಿ, ಕರ್ನಾಟಕ

ದ.ಕ. ಜಿಲ್ಲಾ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷರಾಗಿ ಡಾ.ದೀಪಕ್ ರೈ ಆಯ್ಕೆ

(ನ್ಯೂಸ್ ಕಡಬ) newskadaba.com ಪುತ್ತೂರು, ಜ. 06. ದ.ಕ ಜಿಲ್ಲಾ ಸರ್ಕಾರಿ ವೈದ್ಯಾಧಿಕಾರಿ ಸಂಘದ ಅಧ್ಯಕ್ಷರಾಗಿ ಪುತ್ತೂರು ತಾಲೂಕು ಆರೋಗ್ಯಧಿಕಾರಿ ಡಾ.ದೀಪಕ್ ರೈ ಅವರನ್ನು ಮಂಗಳೂರಿನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಆಯ್ಕೆ ಮಾಡಲಾಯಿತು. ಕಾರ್ಯದರ್ಶಿಯಾಗಿ ಪುತ್ತೂರು ತಾಲೂಕಿನ ಈಶ್ವರಮಂಗಲ ಪ್ರಾಥಮಿಕ ಕೇಂದ್ರದ ವೈದ್ಯಾಧಿಕಾರಿಯಾಗಿ ಡಾ.ನಿಖಿಲ್ ಕೆ, ಉಪಾಧ್ಯಕ್ಷರಾಗಿ ಬಂಟ್ವಾಳ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ.ಪ್ರಶಾಂತ್, ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರದ ಡಾ.ಕೃಷ್ಣಾನಂದ ಕೆ ಮತ್ತು ಜಿಲ್ಲಾ ವೆನ್ಲಾಕ್

ದ.ಕ. ಜಿಲ್ಲಾ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷರಾಗಿ ಡಾ.ದೀಪಕ್ ರೈ ಆಯ್ಕೆ Read More »

ಕರಾವಳಿ, ಕರ್ನಾಟಕ

ಮೀನುಗಾರಿಕೆಯ ವೇಳೆ ಸಮುದ್ರ ನೀರಿಗೆ ಬಿದ್ದು ವಿಟ್ಲ ಮೂಲದ ವ್ಯಕ್ತಿ ಮೃತ್ಯು

(ನ್ಯೂಸ್ ಕಡಬ) newskadaba.com ಕಾಪು, ಜ. 06. ಮೀನುಗಾರಿಕೆ ನಡೆಸಿ ಹಿಂತಿರುಗುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ನಾಪತ್ತೆಯಾಗಿದ್ದ ವಿಟ್ಲ ಮೂಲದ ಮೀನುಗಾರನ ಮೃತದೇಹವು ಕಾಪು ಸಮುದ್ರ ತೀರದಲ್ಲಿ ಪತ್ತೆಯಾಗಿದೆ. ಮೃತರನ್ನು ವಿಟ್ಲ ಪೆರುವಾಯಿ ಮೂಲದ ಆನಂದ ಎಂದು ಗುರುತಿಸಲಾಗಿದೆ. ಇವರು ಜ. 04 ರಂದು ಮಂಗಳೂರು ಬಂದರಿನಿಂದ ಮೀನುಗಾರಿಕೆಗೆ ಹೋಗಿ ವಾಪಸ್ಸಾಗುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಸಮುದ್ರದ ನೀರಿಗೆ ಬಿದ್ದು ನಾಪತ್ತೆಯಾಗಿದ್ದರು. ಇದೀಗ ಅವರ ಮೃತದೇಹ ಪತ್ತೆಯಾಗಿದ್ದು, ಈ ಬಗ್ಗೆ ಮಾಹಿತಿ

ಮೀನುಗಾರಿಕೆಯ ವೇಳೆ ಸಮುದ್ರ ನೀರಿಗೆ ಬಿದ್ದು ವಿಟ್ಲ ಮೂಲದ ವ್ಯಕ್ತಿ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್

ದ.ಕ ಜಿಲ್ಲೆಯ ಮತದಾರರ ಅಂತಿಮ ಪಟ್ಟಿ ಪ್ರಕಟ ➤ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 06. ದ.ಕ. ಜಿಲ್ಲೆಯ ಮತದಾರರ ಅಂತಿಮ ಪಟ್ಟಿಯನ್ನು ದ.ಕ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್ ಪ್ರಕಟಿಸಿದ್ದಾರೆ. ಈ ಕುರಿರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 23,57,852 ಜನಸಂಖ್ಯೆ ಇದ್ದು, ಅದರಲ್ಲಿ 17,37,688 ಮತದಾರರಿದ್ದಾರೆ. ಈ ಪೈಕಿ 8,50,552 ಪುರುಷ ಮತ್ತು 8,87,060 ಮಹಿಳಾ ಹಾಗೂ 76 ಮಂಗಳಮುಖಿಯರಿದ್ದಾರೆ ಎಂದು ತಿಳಿಸಿದರು. ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಅತೀ ಹೆಚ್ಚು 2,42,186 ಮತ್ತು ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಅತೀ ಕಡಿಮೆ 2,01,976 ಮತದಾರರಿದ್ದಾರೆ

ದ.ಕ ಜಿಲ್ಲೆಯ ಮತದಾರರ ಅಂತಿಮ ಪಟ್ಟಿ ಪ್ರಕಟ ➤ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್ Read More »

ಕರಾವಳಿ, ಕರ್ನಾಟಕ

ಪುತ್ತೂರು: ವಿದ್ಯಾರ್ಥಿನಿ ಅಪ್ರಾಪ್ತೆಯಾಗಿದ್ದ ಸಂದರ್ಭ ಲೈಂಗಿಕ ಕಿರುಕುಳ ಆರೋಪ ➤ ಯುವಕನ ವಿರುದ್ದ ಪೋಕ್ಸೋ ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com ಪುತ್ತೂರು, ಜ. 06. ವಿದ್ಯಾರ್ಥಿನಿಯೋರ್ವಳು ಅಪ್ರಾಪ್ತೆಯಾಗಿದ್ದ ಸಂದರ್ಭ ಆಕೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಕೋಡಿಯಡ್ಕ ನಿವಾಸಿ ಯುವಕನ ವಿರುದ್ಧ ಸಂಪ್ಯ ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿದ ಘಟನೆ ವರದಿಯಾಗಿದೆ. ಆರೋಪಿ ಕೋಳಿ ಅಂಗಡಿ ಹೊಂದಿರುವ ಕೋಡಿಯಡ್ಕ ನಿವಾಸಿ ರಾಹುಲ್ ಎಂದು ಗುರುತಿಸಲಾಗಿದೆ. ಆರೋಪಿ ರಾಹುಲ್, ವಿದ್ಯಾರ್ಥಿನಿ ಅಪ್ರಾಪ್ತೆಯಾಗಿದ್ದ ಸಂದರ್ಭ ಆಕೆಗೆ ಕೋಳಿ ಫಾರಂನಲ್ಲಿ ಲೈಂಗಿಕ ಕಿರುಕುಳ ನೀಡಿರುವುದಾಗಿ ಮತ್ತು ಆಕೆಗೆ ಬೆದರಿಕೆಯೊಡ್ಡಿರುವುದಾಗಿ ಪುತ್ತೂರು ನಿವಾಸಿ ಸದ್ಯ ಮಂಗಳೂರಿನ ಕಾಲೇಜೊಂದರ ವಿದ್ಯಾರ್ಥಿನಿ ನೀಡಿದ

ಪುತ್ತೂರು: ವಿದ್ಯಾರ್ಥಿನಿ ಅಪ್ರಾಪ್ತೆಯಾಗಿದ್ದ ಸಂದರ್ಭ ಲೈಂಗಿಕ ಕಿರುಕುಳ ಆರೋಪ ➤ ಯುವಕನ ವಿರುದ್ದ ಪೋಕ್ಸೋ ಪ್ರಕರಣ ದಾಖಲು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಕುಕ್ಕರ್ ಸ್ಫೋಟ ಪ್ರಕರಣ ➤ ಮಂಗಳೂರಿನ ಖಾಸಗಿ ಇಂಜಿನಿಯರಿಂಗ್ ಕಾಲೇಜಿಗೆ ಎನ್ಐಎ ದಾಳಿ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 05. ಕುಕ್ಕರ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ನಗರದ ಖಾಸಗಿ ಇಂಜಿನಿಯರಿಂಗ್ ಕಾಲೇಜೊಂದರ ಮೇಲೆ ಎನ್ಐಎ ಅಧಿಕಾರಿಗಳ ತಂಡ ದಾಳಿ ಮಾಡಿ, ಪರಿಶೀಲನೆ ನಡೆಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.   ಎನ್ಐಎ ವಶದಲ್ಲಿರುವ ಆರೋಪಿ ಮಾಝ್ ಮುನೀರ್ ಎಂಬಾತ ಇದೇ ಶಿಕ್ಷಣ ಸಂಸ್ಥೆಯಿಂದ ಇಂಜಿನಿಯರಿಂಗ್‌‌ ಪದವಿ‌ಯನ್ನು ಪಡೆದಿದ್ದ, ಹಿನ್ನೆಲೆ, ಬೆಂಗಳೂರಿನಿಂದ ಬಂದಿದ್ದ ಏಳು ಮಂದಿಯ ಎನ್ಐಎ ತಂಡವು ಶಿಕ್ಷಣ ಸಂಸ್ಥೆಯಲ್ಲಿ ತನಿಖೆ ನಡೆಸಿದೆ ಎಂದು ತಿಳಿದು ಬಂದಿದೆ.

ಕುಕ್ಕರ್ ಸ್ಫೋಟ ಪ್ರಕರಣ ➤ ಮಂಗಳೂರಿನ ಖಾಸಗಿ ಇಂಜಿನಿಯರಿಂಗ್ ಕಾಲೇಜಿಗೆ ಎನ್ಐಎ ದಾಳಿ Read More »

ಕರ್ನಾಟಕ

ಬಜ್ಪೆ : ಪ್ಲ್ಯಾಟ್ ನಲ್ಲಿ ಬೆಂಕಿ ➤ 30 ಮಂದಿಯ ರಕ್ಷಣೆ…!!!        

(ನ್ಯೂಸ್ ಕಡಬ) newskadaba.com  ಬಜ್ಪೆ, ಜ.05. ಕಂದಾವರ ಗ್ರಾಮ ಪಂಚಾಯತ್‌ ಬಳಿ ಫ್ಲ್ಯಾಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ರಾತ್ರಿ ಸುಮಾರು 9.45ರ ವೇಳೆ ನೆಲ ಮಹಡಿಯಲ್ಲಿ ಬೆಂಕಿ ಉಂಟಾಗಿ ದಟ್ಟವಾಗಿ ಹೊಗೆ ಮೇಲಿನ ಮಹಡಿಗೆ ಆವರಿಸಿದೆ ಎಂದು ತಿಳಿದುಬಂದಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಸಿಲುಕಿದ್ದ 30 ಮಂದಿಯನ್ನು ಸ್ಥಳೀಯರು ರಕ್ಷಿಸಿದ್ದಾರೆ ಎನ್ನಲಾಗಿದೆ. ಫ್ಲ್ಯಾಟ್‌ ಪೂರ್ತಿ ಹೊಗೆ ಆವರಿಸಿದ್ದರಿಂದ ಅಲ್ಲಿದ್ದವರನ್ನು ರಕ್ಷಿಸುವುದು ಸವಾಲಿನ ಕೆಲಸವಾಗಿತ್ತು. ಕೂಡಲೇ ಗುರುಪುರದ ರಫೀಕ್‌ ಅವರನ್ನು ಕರೆಸಿ ಸ್ಥಳೀಯರೂ ಜೊತೆ ಸೇರಿ ಅಪಾಯಕ್ಕೆ ಸಿಲುಕಿದ್ದ ಎಲ್ಲ

ಬಜ್ಪೆ : ಪ್ಲ್ಯಾಟ್ ನಲ್ಲಿ ಬೆಂಕಿ ➤ 30 ಮಂದಿಯ ರಕ್ಷಣೆ…!!!         Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್
Scroll to Top