ಮಂಗಳೂರು-ಸುಬ್ರಹ್ಮಣ್ಯ ಪ್ಯಾಸೆಂಜರ್ ರೈಲು ಕಾಣಿಯೂರು ರೈಲು ನಿಲ್ದಾಣದಲ್ಲಿ ಪ್ಲಾಟ್‌ಫಾರ್ಮ್ ದಾಟಿ ನಿಂತಿದ್ದರಿಂದ ಪ್ರಯಾಣಿಕರಿಗೆ ತೀವ್ರ ತೊಂದರೆ
(ನ್ಯೂಸ್ ಕಡಬ) newskadaba.com, ನ.01 : ಅಕ್ಟೋಬರ್ 29 ರಂದು ಮಂಗಳೂರು-ಸುಬ್ರಹ್ಮಣ್ಯ ಪ್ಯಾಸೆಂಜರ್ ರೈಲು ಪ್ರತಿದಿನ ರಾತ್ರಿ 7:30 ರ ಸುಮಾರಿಗೆ ನಿಲ್ದಾಣ ತಲುಪಬೇಕಿತ್ತು.ದಿನನಿತ್ಯದಂತೆ ಕಾಣಿಯೂರು ನಿಲ್ದಾಣಕ್ಕೆ ಆಗಮಿಸಬೇಕಿದ್ದ ರೈಲನ್ನು, ಲೋಕೋ ಪೈಲಟ್ (ಚಾಲಕ) ಅತಿಯಾದ ವೇಗದಲ್ಲಿ ಚಲಾಯಿಸಿದ್ದರಿಂದ ಪ್ಲಾಟ್‌ಫಾರ್ಮ್‌ನಲ್ಲಿ ನಿಲ್ಲಿಸಲು ಸಾಧ್ಯವಾಗಲಿಲ್ಲ. ಪರಿಣಾಮವಾಗಿ, ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್ ಅನ್ನು ದಾಟಿ, ನಿಲ್ದಾಣದ ಆಚೆ ಭಾಗದಲ್ಲಿ ನಿಂತಿತು. ರೈಲು ಸರಿಯಾದ ಸ್ಥಳದಲ್ಲಿ ನಿಲ್ಲದ ಕಾರಣ, ರೈಲಿನಿಂದ ಇಳಿಯಬೇಕಿದ್ದ ಪ್ರಯಾಣಿಕರು ತೀವ್ರ ಅನಾನುಕೂಲಕ್ಕೆ ಒಳಗಾದರು. ಮುಖ್ಯವಾಗಿ ರಾತ್ರಿಯ ಸಮಯವಾಗಿದ್ದರಿಂದ, […]

