ಮಡಿಕೇರಿಯಲ್ಲಿ ಹೊತ್ತಿ ಉರಿದ ಪ್ರವಾಸಿ ಬಸ್
(ನ್ಯೂಸ್ ಕಡಬ) newskadaba.com, ಡಿ.15: ವಿರಾಜಪೇಟೆ ಮೌಲ್ಯತಿರುವ ಮಾಕುಟ್ಟ ಬಳಿ, ಮಗಡಿಪಾರೆ ಆಂಜನೇಯ ದೇವಾಲಯದ ಹತ್ತಿರ ಪ್ರವಾಸಿ ಬಸ್ಸೊಂದು ನಡು ರಸ್ತೆಯಲ್ಲೇ ಹೊತ್ತಿ ಉರಿದ ಘಟನೆ ನಡೆದಿದೆ. ಕೇರಳ ನೋಂದಣಿಯ ಖಾಸಗಿ ಬಸ್ ಆಗಿದ್ದು, ಮೈಸೂರಿನಿಂದ ಪ್ರವಾಸಿಗರನ್ನು ಇಳಿಸಿದ ನಂತರ ವಾಪಸ್ ತೆರಳುವ ವೇಳೆ ಈ ಅವಘಡ ಸಂಭವಿಸಿದೆ. ಬಸ್‌ನಲ್ಲಿ ಚಾಲಕ ಮತ್ತು ನಿರ್ವಾಹಕ ಇಬ್ಬರೇ ಇದ್ದರು. ಈ ಅವಘಡದಲ್ಲಿ ಯಾವುದೇ ಪ್ರಾಣಹಾನಿ ನಡೆದಿಲ್ಲ. ಪ್ರವಾಸಿಗರು ಬಸ್‌ನಲ್ಲಿ ಇದ್ದಿದ್ದರೆ, ಹೆಚ್ಚಿನ ಅನಾಹುತ ಸಂಭವಿಸುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. […]
ಮಡಿಕೇರಿಯಲ್ಲಿ ಹೊತ್ತಿ ಉರಿದ ಪ್ರವಾಸಿ ಬಸ್ Read More »
ಕರ್ನಾಟಕ, ಬ್ರೇಕಿಂಗ್ ನ್ಯೂಸ್







