madhyapradesh

ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಮತ್ತೊಂದು ಹೆಣ್ಣು ಚೀತಾ ಧಾತ್ರಿ ಸಾವು

(ನ್ಯೂಸ್ ಕಡಬ)newskadaba.com ಮಧ್ಯಪ್ರದೇಶ, ಆ.02. ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ನಿರಂತರವಾಗಿ ಚೀತಾಗಳು ಸಾವನ್ನಪ್ಪುತ್ತಿದ್ದು, ಇದೀಗ ಉದ್ಯಾನವನದಲ್ಲಿ ಹೆಣ್ಣು ಚಿರತೆ ‘ಧಾತ್ರಿ’ ಶವವಾಗಿ ಪತ್ತೆಯಾಗಿದೆ. ಸಾವಿಗೆ ಕಾರಣ ತಿಳಿಯಲು, ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ ಎಂದು ವರದಿ ತಿಳಿಸಿದೆ. ಪ್ರಾಜೆಕ್ಟ್ ಚೀತಾ ಎಂದು ಕರೆಯಲ್ಪಡುವ ಮಹತ್ವಾಕಾಂಕ್ಷೆಯ ಉಪಕ್ರಮದ ಭಾಗವಾಗಿ ದಕ್ಷಿಣ ಆಫ್ರಿಕಾ ಮತ್ತು ನಮೀಬಿಯಾದಿಂದ 20 ಚಿರತೆಗಳನ್ನು ಆಮದು ಮಾಡಿಕೊಳ್ಳಲಾದ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಚಿರತೆಯ ಸಾವಿನ ಸರಣಿಯಲ್ಲಿ ಇದು ಕೂಡ ಒಂದು. ಸುಮಾರು ಏಳು ದಶಕಗಳ ಹಿಂದೆ ದೇಶದಲ್ಲಿ […]

ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಮತ್ತೊಂದು ಹೆಣ್ಣು ಚೀತಾ ಧಾತ್ರಿ ಸಾವು Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಭಾರೀ ಮಳೆಗೆ ಬಿದ್ದ ಮದುವೆ ಮನೆಯ ಪೆಂಡಲ್ ➤ 8 ಮಂದಿಗೆ ಗಾಯ

(ನ್ಯೂಸ್ ಕಡಬ) newskadaba.com ಮಧ್ಯಪ್ರದೇಶ, ಜೂ. 26. ಭಾರೀ ಮಳೆ ಮತ್ತು ಬಿರುಸಿನ ಗಾಳಿಯಿಂದಾಗಿ ಪೆಂಡಾಲ್ ಕುಸಿದು ಬಿದ್ದು ಮದುವೆಯಲ್ಲಿ ಭಾಗವಹಿಸಿದ್ದ ಎಂಟು ಮಂದಿ ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದ ದಾಮೋಹ್‌ ನಲ್ಲಿ ನಡೆದಿದೆ. ಅಧಿಕಾರಿಗಳ ಪ್ರಕಾರ, ಭಾನುವಾರದಂದು ರಾತ್ರಿ ಭಾರೀ ಮಳೆ, ಗಾಳಿಯಿಂದಾಗಿ ದಾಮೋಹ್‌ ನಲ್ಲಿ ಪೆಂಡಾಲ್ ಕುಸಿದು  ಬಿದ್ದು ಸುಮಾರು 8 ಜನರು ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಓರ್ವ ಗಂಭೀರ ಸ್ಥಿತಿಯಲ್ಲಿದ್ದು, ಅವರನ್ನು ಜಬಲ್‌ ಪುರಕ್ಕೆ ದಾಖಲಿಸಿರುವುದಾಗಿ ತಿಳಿದುಬಂದಿದೆ.

ಭಾರೀ ಮಳೆಗೆ ಬಿದ್ದ ಮದುವೆ ಮನೆಯ ಪೆಂಡಲ್ ➤ 8 ಮಂದಿಗೆ ಗಾಯ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ತಂದೆಯ ಸಾವಿನ ಸುದ್ದಿ ತಿಳಿದ ಬಳಿಕ ಬಾವಿಗೆ ಹಾರಿದ 11 ವರ್ಷದ ಬಾಲಕಿ

(ನ್ಯೂಸ್ ಕಡಬ)newskadaba.com  ಮಧ್ಯಪ್ರದೇಶ, ಜ.21. ಮಧ್ಯಪ್ರದೇಶದ ಅಶೋಕನಗರ ಜಿಲ್ಲೆಯಲ್ಲಿ ತಂದೆಯ ಸಾವಿನ ಸುದ್ದಿ ತಿಳಿದ 11 ವರ್ಷದ ಬಾಲಕಿ ಬಾವಿಗೆ ಹಾರಿ ಮೃತಪಟ್ಟಿದ್ದಾಳೆಂದು ಪೊಲೀಸರು ತಿಳಿಸಿದ್ದಾರೆ. ಬರ್ಖೇಡಾ ಜಾಗೀರ್ ಗ್ರಾಮದಲ್ಲಿ ಘಟನೆ ನಡೆದಿದೆ ಎಂದು ದೇಹತ್ ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್ಸ್ಪೆಕ್ಟರ್ ಪಹಲ್ವಾನ್ ಚೌಹಾನ್ ಹೇಳಿದ್ದಾರೆ. ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬಾಲಕಿಯ ತಂದೆಯನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಆಸ್ಪತ್ರೆಗೆ ಬರುವಷ್ಟರಲ್ಲಿ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವರ ಸಾವಿನ ಸುದ್ದಿಯನ್ನು ಅವರ

ತಂದೆಯ ಸಾವಿನ ಸುದ್ದಿ ತಿಳಿದ ಬಳಿಕ ಬಾವಿಗೆ ಹಾರಿದ 11 ವರ್ಷದ ಬಾಲಕಿ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Crime

ಆಸ್ಪತ್ರೆಯಲ್ಲಿ ವೈದ್ಯನ ಮೇಲೆಯೇ ಚಾಕುವಿನಿಂದ ಹಲ್ಲೆ ನಡೆಸಿದ ರೋಗಿ..!! ➤ ರೋಗಿಯ ವಿರುದ್ದ ಎಫ್ಐಆರ್ ದಾಖಲು..!    

(ನ್ಯೂಸ್ ಕಡಬ)newskadaba.com  ಮಹಾರಾಷ್ಟ್ರ, ಜ.07. ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಯೊಬ್ಬರು ವೈದ್ಯರೊಬ್ಬರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ. ರಾತ್ರಿ 9 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಆಸ್ಪತ್ರೆಯ ಶಸ್ತ್ರಚಿಕಿತ್ಸಾ ವಿಭಾಗಕ್ಕೆ ದಾಖಲಾಗಿದ್ದ ರೋಗಿಯನ್ನು ಪರೀಕ್ಷಿಸಲು ವೈದ್ಯರು ತೆರಳಿದ್ದರು. ಈ ವೇಳೆ ವೈದ್ಯರೊಬ್ಬರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ‌. ದಾಳಿಯಿಂದ ತನ್ನ ಸಹೋದ್ಯೋಗಿಯನ್ನು ರಕ್ಷಿಸಲು ಯತ್ನಿಸಿದ ಮತ್ತೊಬ್ಬ ವೈದ್ಯನ ಬೆರಳಿಗೆ ಗಾಯಗಳಾಗಿವೆ. ಆರೋಪಿ ಸೂರಜ್ ಮಾನಸಿಕ ಅಸ್ವಸ್ಥ ಎಂದು ಹೇಳಲಾಗಿದೆ. ಆರೋಪಿ ಎರಡು ದಿನಗಳ ಹಿಂದೆ

ಆಸ್ಪತ್ರೆಯಲ್ಲಿ ವೈದ್ಯನ ಮೇಲೆಯೇ ಚಾಕುವಿನಿಂದ ಹಲ್ಲೆ ನಡೆಸಿದ ರೋಗಿ..!! ➤ ರೋಗಿಯ ವಿರುದ್ದ ಎಫ್ಐಆರ್ ದಾಖಲು..!     Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಆಕಸ್ಮಿಕವಾಗಿ ಕೊಳವೆಬಾವಿಗೆ ಬಿದ್ದಿದ್ದ ಬಾಲಕ ಮೃತ್ಯು

(ನ್ಯೂಸ್ ಕಡಬ) newskadaba.com ಮಧ್ಯಪ್ರದೇಶ, ಡಿ. 10.  ಕೊಳವೆಬಾವಿಗೆ ಬಿದ್ದಿದ್ದ ಎಂಟು ವರ್ಷದ ಬಾಲಕ ಮೃತಪಟ್ಟ ಘಟನೆ ಶನಿವಾರದಂದು ಮಧ್ಯಪ್ರದೇಶದ ಬೇತುಲ್ ನಲ್ಲಿ ನಡೆದಿದೆ.     ಮೃತ ಬಾಲಕನನ್ನು ತನ್ಮಯ್ ಎಂದು ಗುರುತಿಸಲಾಗಿದೆ. ಈತ ಡಿ. 06ರಂದು ಸಂಜೆ ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ತೆರೆದಿಟ್ಟಿದ್ದ ಕೊಳವೆಬಾವಿಗೆ ಬಿದ್ದಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಿ ಹೊರತೆಗೆದರೂ ಪ್ರಯೋಜನವಾಗಲಿಲ್ಲ ಎನ್ನಲಾಗಿದೆ. ಬಾಲಕನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.  

ಆಕಸ್ಮಿಕವಾಗಿ ಕೊಳವೆಬಾವಿಗೆ ಬಿದ್ದಿದ್ದ ಬಾಲಕ ಮೃತ್ಯು Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ವಿಧವೆಯರನ್ನು ವಿವಾಹವಾಗುವ ವ್ಯಕ್ತಿಗೆ ಸಿಗಲಿದೆ ► 2 ಲಕ್ಷ ರೂಪಾಯಿ ಪ್ರೋತ್ಸಾಹ ಧನ..!!!

(ನ್ಯೂಸ್ ಕಡಬ) newskadaba.com ಭೋಪಾಲ್, ಅ.9. 45ಕ್ಕಿಂತ ಕಡಿಮೆ ವಯಸ್ಸಿನ ವಿಧವೆಯನ್ನು ಪುನರ್‌ ವಿವಾಹವಾಗುವ ವ್ಯಕ್ತಿಗೆ 2 ಲಕ್ಷ ರೂಪಾಯಿ ಪ್ರೋತ್ಸಾಹ ಧನ ನೀಡುವ ಹೊಸ ಯೋಜನೆಯೊಂದನ್ನು ಮಧ್ಯ ಪ್ರದೇಶ ಸರ್ಕಾರ ರೂಪಿಸಿದೆ. ವಿಧವೆಯರ ಬಾಳು ಬಂಗಾರವಾಗಲಿ ಎಂಬ ಉದ್ಧೇಶದೊಂದಿಗೆ ಈ ಯೋಜನೆಯನ್ನು ತರಲಾಗಿದೆ. ಇದು ದೇಶದಲ್ಲಿಯೇ ಮೊದಲ ಪ್ರಯತ್ನವಾಗಿದ್ದು, ಈ ಯೋಜನೆ ಅನುಷ್ಠಾನಗೊಂಡು ಬಳಿಕ ಪ್ರತಿ ವರ್ಷ ಒಂದು ಸಾವಿರ ವಿಧವೆಯರ ಬಾಳು ಬೆಳಗಲಿದೆ ಎಂದು ಸರಕಾರ ವಿಶ್ವಾಸ ವ್ಯಕ್ತಪಡಿಸಿದೆ. ವಿಧವಾ ಪುನರ್‌ ವಿವಾಹ ಪ್ರೋತ್ಸಾಹಿಸುವ ನೀತಿಯನ್ನು ರಚಿಸುವಂತೆ ಜುಲೈ ತಿಂಗಳಲ್ಲಿ

ವಿಧವೆಯರನ್ನು ವಿವಾಹವಾಗುವ ವ್ಯಕ್ತಿಗೆ ಸಿಗಲಿದೆ ► 2 ಲಕ್ಷ ರೂಪಾಯಿ ಪ್ರೋತ್ಸಾಹ ಧನ..!!! Read More »

ಕರ್ನಾಟಕ
Scroll to Top