ನಿಮಗೆ ಬ್ಯಾಂಕಿನಲ್ಲಿ ಸಾಲವಿದ್ದು ಕಂತು ಬಾಕಿಯಾಗಿದೆಯೇ…? ► ಇನ್ನು ಮುಂದೆ ಬ್ಯಾಂಕಿನವರು ಸಾಲ ಮರುಪಾವತಿ ಮಾಡಲು ಒತ್ತಡ ಹೇರುವಂತಿಲ್ಲ...
(ನ್ಯೂಸ್ ಕಡಬ) newskadaba.com ಹೊಸದಿಲ್ಲಿ, ಜು.24. ನೀವು ಬ್ಯಾಂಕಿನಿಂದ ಸಾಲ ತೆಗೆದುಕೊಂಡು ಮರುಪಾವತಿ ಮಾಡಲಾಗದೆ ಒದ್ದಾಡುತ್ತಿದ್ದೀರಾ..? ಬ್ಯಾಂಕಿನವರು ಸಾಲವನ್ನು ಮರುಪಾವತಿ ಮಾಡುವಂತೆ ನಿಮಗೆ ಒತ್ತಡ ಹೇರುತ್ತಿದ್ದಾರೆಯೇ…? ಇನ್ಮುಂದೆ ಇದೆಲ್ಲದಕ್ಕೂ ಬ್ರೇಕ್ ಬೀಳಲಿದೆ. ಬ್ಯಾಂಕ್‌ಗಳಿಂದ ಸಾಲ ಪಡೆದುಕೊಂಡು ತೀರಿಸಲಾಗದೇ ಒದ್ದಾಡುತ್ತಿರುವವರನ್ನು ದಿವಾಳಿ ಎಂದು ಘೋಷಿಸಲು ವಿಧಿವಿಧಾನವೊಂದನ್ನು ರೂಪಿಸುವ ನಿಟ್ಟಿನಲ್ಲಿ ಸರಕಾರವು ಹೊಸ ಕರಡನ್ನು ಸಿದ್ಧಲಡಿಸುತ್ತಿದೆ. ಇದು ಸಾಲಗಾರರು ಬ್ಯಾಂಕುಗಳ ಒತ್ತಡ ತಂತ್ರಗಳಿಗೆ ಸಿಲುಕಿ ನರಳುವುದರ ಬದಲು ತಮ್ಮ ಆರ್ಥಿಕ ಸಂಕಷ್ಟವನ್ನು ಬಗೆಹರಿಸಿ ಕೊಳ್ಳಲು ನೆರವಾಗಲಿದೆ. ಸುಸ್ತಿದಾರರು ವ್ಯವಸ್ಥಿತ ರೀತಿಯಲ್ಲಿ […]

