ಇನ್ನೂ ಪತ್ತೆಯಾಗದ ಪುಳಿಕುಕ್ಕು ಸೇತುವೆಯಿಂದ ನದಿಗೆ ಹಾರಿದ ವ್ಯಕ್ತಿ ► ಶೋಧ ಕಾರ್ಯದಲ್ಲಿ ತೊಡಗಿದ ಅಗ್ನಿಶಾಮಕ ದಳ
(ನ್ಯೂಸ್ ಕಡಬ) newskadaba.com ಕಡಬ, ಜು.30. ಕೋಡಿಂಬಾಳ ಗ್ರಾಮದ ಪುಳಿಕುಕ್ಕು ಸೇತುವೆಯಿಂದ ಕುಮಾರಧಾರ ನದಿಗೆ ವ್ಯಕ್ತಿಯೋಬ್ಬರು ಹಾರಿದ್ದು, ಅವರು ನದಿ ನೀರಿನಲ್ಲಿ ನಾಪತ್ತೆಯಾದ ಘಟನೆ ಜು.29ರಂದು ಮಧ್ಯಾಹ್ನ ವೇಳೆ ನಡೆದಿತ್ತು. ಮೂಲತಃ ಎಡಮಂಗಲ ಗ್ರಾಮದ ಕೂಟಾಜೆ ನಿವಾಸಿ ದಿ.ಕುಶಾಲಪ್ಪ ಗೌಡರ ಪುತ್ರ ಧರ್ಮಪಾಲ(43ವ.) ಎಂಬವರೇ ನದಿಗೆ ಹಾರಿದ ವ್ಯಕ್ತಿ. ಈ ಬಗ್ಗೆ ಅವರ ಪತ್ನಿ ವಿಶಾಲಾಕ್ಷಿಯವರು ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಧರ್ಮಪಾಲರವರು ಬೆಂಗಳೂರಿನಲ್ಲಿ ಗಾರ್ಮೆಂಟ್ಸ್ ಒಂದರಲ್ಲಿ ಉದ್ಯೋಗದಲ್ಲಿದ್ದು ಒಂದು ವಾರದ ಹಿಂದೆಯಷ್ಟೆ ಊರಿಗೆ ಬಂದಿದ್ದರು. […]


