ಕಡಬದಲ್ಲಿ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಸ್ಥಳದ ಗಡಿಗುರುತು ► ತಿಂಗಳೊಳಗೆ ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ: ಪಿ.ಪಿ.ವರ್ಗೀಸ್
(ನ್ಯೂಸ್ ಕಡಬ) newskadaba.com ಕಡಬ, ಡಿ.15. ಕಡಬ ಅಂಬೇಡ್ಕರ್ ಭವನದ ಹತ್ತಿರ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಖಾದಿರಿಸಿದ 1.73 ಎಕ್ರೆ ಸ್ಥಳವನ್ನು ಭೂಮಾಪನಾ ಇಲಾಖೆಯಿಂದ ಸರ್ವೇ ಮಾಡಿ ಗಡಿ ಗುರುತು ಮಾಡುವ ಕಾರ್ಯ ಬುಧವಾರದಂದು ನಡೆಯಿತು. ಕಡಬ ತಹಶೀಲ್ದಾರ್ ಜಾನ್ ಪ್ರಕಾಶ್ ರವರ ನೇತೃತ್ವದಲ್ಲಿ ಭೂಮಾಪನಾ ಇಲಾಖೆ ಹಾಗೂ ಕೆಎಸ್ಆರ್ಟಿಸಿ ವತಿಯಿಂದ ಜಂಟಿ ಸರ್ವೇ ನಡೆಸಿ ಬಸ್ ನಿಲ್ದಾಣಕ್ಕೆ ಗಡಿ ಗುರುತು ಮಾಡುವುದರ ಮೂಲಕ ಭೂಮಿ ಕಾದಿರಿಸಲಾಯಿತು. ಈ ಸಂದರ್ಭ ಮಾತನಾಡಿದ ಕಡಬ ಜಿ.ಪಂ.ಸದಸ್ಯ ಪಿ.ಪಿ ವರ್ಗೀಸ್ […]










