kolar

ಬಸ್ಸು-ಕ್ಯಾಂಟರ್ ನಡುವೆ ಡಿಕ್ಕಿ: ಕೋಲಾರ ಮೂಲದ ನಾಲ್ವರು ಸಾವು

(ನ್ಯೂಸ್ ಕಡಬ) newskadaba.com ಜ.09 ಕೋಲಾರ: ತಮಿಳುನಾಡಿನ ರಾಣಿಪೇಟೆ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕೋಲಾರ ಮೂಲದ ನಾಲ್ವರು ಮೃತಪಟ್ಟಿದ್ದಾರೆ. ಕೆಎಸ್​ಆರ್​ಟಿಸಿ ಬಸ್ ಹಾಗೂ ಕ್ಯಾಂಟರ್ ನಡುವೆ ಅಪಘಾತ ಸಂಭವಿಸಿ ಕ್ಯಾಂಟರ್​ನಲ್ಲಿದ್ದ ನಾಲ್ವರು ಮತ್ತು ಕೆಎಸ್​ಆರ್​ಟಿಸಿ ಬಸ್​ ಚಾಲಕ ಮೃತಪಟ್ಟಿದ್ದಾರೆ. ಕೆಎಸ್​ಆರ್​ಟಿಸಿ ಬಸ್​ನಲ್ಲಿದ್ದ ಓರ್ವ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ. ರಾಣಿಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಕ್ಯಾಂಟರ್ ಚಾಲಕ ಮಂಜುನಾಥ್, ಕ್ಲೀನರ್ ಶಂಕರ್, ಸಹಾಯಕ ಸೋಮಶೇಖರ್, ವೆಂಕಟೇಶ್ ನಗರ ಗ್ರಾಮದ ರೈತ ಕೃಷ್ಣಪ್ಪ ಮೃತಪಟ್ಟವರಾಗಿದ್ದಾರೆ. ನಲ್ಲೂರು […]

ಬಸ್ಸು-ಕ್ಯಾಂಟರ್ ನಡುವೆ ಡಿಕ್ಕಿ: ಕೋಲಾರ ಮೂಲದ ನಾಲ್ವರು ಸಾವು Read More »

ಕರ್ನಾಟಕ

ಕೋಲಾರದಲ್ಲಿ ಆತಂಕಕಾರಿ ಸೂಟ್ ಕೇಸ್ ಪತ್ತೆ

 (ನ್ಯೂಸ್ ಕಡಬ) newskadaba.com ಕೋಲಾರ(ಸೆ.25): ಕೋಲಾರದ ಹೆದ್ದಾರಿ ಪಕ್ಕದಲ್ಲಿ ಕಂಡು ಬಂದ ಸೂಟ್‌ಕೇಸ್‌ವೊಂದು ಪತ್ತೆಯಾಗಿದೆ. ನಗರ ಹೊರವಲಯದಲ್ಲಿ ಸೂಟ್ ಕೇಸ್ ಕಂಡು ಬಂದಿದ್ದು, ಸೂಟ್‌ಕೇಸ್‌ನಿಂದ ಶಬ್ದ ಹೊರ ಬರುತ್ತಿದೆ. ಸ್ಫೋಟಕ ಇರುವ ಅನುಮಾನದ ಹಿನ್ನೆಲೆಯಲ್ಲಿ ಸ್ಥಳೀಯರು ಆತಂಕದಲ್ಲಿದ್ದಾರೆ. ಕ್ರೌನ್ ಕಂಪನಿಯ ಸೂಟ್‌ಕೇಸ್ ಇದಾಗಿದ್ದು, ಸೆನ್ಸಾರ್ ಇರುವ ಸೂಟ್‌ಕೇಸ್ ಆಗಿರುವ ಕಾರಣ ಶಬ್ದ ಬರುತ್ತಿದೆ ಎಂದು ಪೊಲೀಸರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಇದೀಗ ಬಾಂಬ್ ತಜ್ಞರು ಹಾಗೂ ಕೋಲಾರ ಎಸ್ಪಿ ನಿಖಿಲ್.ಬಿ ಭೇಟಿ ನೀಡಿದ್ದಾರೆ ಹಾಗೂ ಶ್ವಾನ ದಳ,

ಕೋಲಾರದಲ್ಲಿ ಆತಂಕಕಾರಿ ಸೂಟ್ ಕೇಸ್ ಪತ್ತೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಹೆದ್ದಾರಿ ಪಕ್ಕದಲ್ಲಿ ಸೂಟ್ ಕೇಸ್ ಪತ್ತೆ – ವಿಚಿತ್ರ ಶಬ್ದದಿಂದ ಭಯಭೀತರಾದ ಜನತೆ

(ನ್ಯೂಸ್ ಕಡಬ) newskadaba.com ಸೆ. 25. ರಸ್ತೆ ಪಕ್ಕದಲ್ಲಿ ಸೂಟ್‌ಕೇಸ್‌ವೊಂದು ಪತ್ತೆಯಾಗಿರುವ ಕುರಿತು ನಗರ ಹೊರವಲಯದ ಟಮಕ ಬಳಿಯಿಂದ ವರದಿಯಾಗಿದೆ. ಸೂಟ್‌ಕೇಸ್‌ನಿಂದ ಶಬ್ದ ಹೊರ ಬರುತ್ತಿದ್ದು, ಇದರಿಂದಾಗಿ ಸ್ಫೋಟಕ ಇರುವ ಅನುಮಾನದ ಹಿನ್ನೆಲೆಯಲ್ಲಿ ಸ್ಥಳೀಯರು ಆತಂಕದಲ್ಲಿದ್ದಾರೆ. ಸೂಟ್‌ಕೇಸ್ ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಹೆಚ್ಚುವರಿ ಎಸ್ಪಿ ರವಿಶಂಕರ್, ಶ್ವಾನ ದಳ, ಬಾಂಬ್ ಸ್ಕ್ವಾಡ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿದ್ದಾರೆ. ಕ್ರೌನ್ ಕಂಪನಿಯ ಸೂಟ್‌ಕೇಸ್ ಇದಾಗಿದ್ದು, ಸೆನ್ಸಾರ್ ಇರುವ ಸೂಟ್‌ಕೇಸ್ ಆಗಿರುವ ಕಾರಣ

ಹೆದ್ದಾರಿ ಪಕ್ಕದಲ್ಲಿ ಸೂಟ್ ಕೇಸ್ ಪತ್ತೆ – ವಿಚಿತ್ರ ಶಬ್ದದಿಂದ ಭಯಭೀತರಾದ ಜನತೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕಾರಿನ ಮೇಲೆ ನಿಂತು ಬರ್ತ್ ಡೇ ಪಾರ್ಟಿ ➤ ಯುಟ್ಯೂಬರ್ ದೀಕ್ಷಿತ್ ಬಂಧನ

(ನ್ಯೂಸ್ ಕಡಬ) newskadaba.com ಕೋಲಾರ, ಮಾ. 17. ಕಾರಿನ ಮೇಲೆ ನಿಂತು ಹುಟ್ಟುಹಬ್ಬ ಆಚರಿಸಿಕೊಳ್ಳುವ ಮೂಲಕ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ಯುಟ್ಯೂಬರ್ ಪ್ರಿನ್ಸ್ ದೀಕ್ಷಿತ್ ಎಂಬಾತನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಪ್ರಿನ್ಸ್ ದೀಕ್ಷಿತ್ ರಾಷ್ಟ್ರೀಯ ಹೆದ್ದಾರಿ 24ರಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ನಿಂತು ಸ್ನೇಹಿತರೊಂದಿಗೆ ಪಾರ್ಟಿ ಮಾಡಿದ್ದರು. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿತ್ತು, ಬಳಿಕ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕಾಗಿ ದೀಕ್ಷೀತ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು.

ಕಾರಿನ ಮೇಲೆ ನಿಂತು ಬರ್ತ್ ಡೇ ಪಾರ್ಟಿ ➤ ಯುಟ್ಯೂಬರ್ ದೀಕ್ಷಿತ್ ಬಂಧನ Read More »

ಕರ್ನಾಟಕ

ದೆಹಲಿಯಲ್ಲಿ ಕೃಷಿ ವಿಜ್ಞಾನಿಯಾದ ಕನ್ನಡದ ಹಳ್ಳಿ ಹುಡುಗ                              

(ನ್ಯೂಸ್ ಕಡಬ)newskadaba.com ಕೋಲಾರ, ಜ.28. ಏನಾದರೂ ಸಾಧಿಸಲೇಬೇಕು ಎಂಬ ಹಠವಿದ್ದರೆ ಕಠಿಣ ಸವಾಲುಗಳನ್ನು ಎದುರಿಸಬೇಕಾಗುತ್ತೆ. ಆದ್ರೆ ಕಠಿಣ ಸವಾಲುಗಳಷ್ಟೇ ಅಲ್ಲ ಮನೆಯ ಆರ್ಥಿಕ ಪರಿಸ್ಥಿತಿ ಕಷ್ಟದಲ್ಲಿದ್ದರೂ ಸಹ ಆ ಕಷ್ಟಗಳನ್ನೇ ಮೆಟ್ಟಿಲಾಗಿಸಿಕೊಂಡು ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ ಈ ಯುವ ಕೃಷಿ ವಿಜ್ಞಾನಿ. ಕೋಲಾರ ತಾಲೂಕಿನ ಸುಗಟೂರು ಹೋಬಳಿಯ ಬೈಪನಹಳ್ಳಿ ಗ್ರಾಮದ ಪ್ರತಾಪ್ ವಿ. ಅವರು ನವದೆಹಲಿಯ ಭಾರತೀಯ ಕೃಷಿ ವಿಜ್ಞಾನ ನೇಮಕಾತಿ ಮಂಡಳಿಯು ನಡೆಸಿದ ಕೃಷಿ ಸಂಶೋಧನಾ ಸೇವೆ (ಎಆರ್ ಎಸ್) ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಭಾರತೀಯ

ದೆಹಲಿಯಲ್ಲಿ ಕೃಷಿ ವಿಜ್ಞಾನಿಯಾದ ಕನ್ನಡದ ಹಳ್ಳಿ ಹುಡುಗ                               Read More »

ಕರ್ನಾಟಕ

ಯುವ ಜೋಡಿಯ ಮೃತದೇಹ ಮಲಗಿದ ಸ್ಥಿತಿಯಲ್ಲೇ ಪತ್ತೆ ..!

(ನ್ಯೂಸ್ ಕಡಬ)newskadaba.com ಕೋಲಾರ, ಜ.15. ಮಲಗಿದ ಸ್ಥಿತಿಯಲ್ಲೇ ಯುವ ಜೋಡಿಯ ಮೃತದೇಹ ಪತ್ತೆಯಾದ ಘಟನೆ ಕುಕನೂರು ತಾಲೂಕಿನ ಬಳಗೇರಿ ಗ್ರಾಮದ ಮನೆಯೊಂದರಲ್ಲಿ ಸಂಭವಿಸಿದೆ. ಚಾಪೆ ಮೇಲೆ ಮಲಗಿದ ಸ್ಥಿತಿಯಲ್ಲೇ ರಕ್ತದ ಮಡುವಿನಲ್ಲಿ ಮೃತದೇಹ ಪತ್ತಯಾಗಿದೆ. ಪ್ರೀತಿ ಮಾಡುವಂತೆ ಸುಮಾಗೆ ಪ್ರಕಾಶ ಭಜಂತ್ರಿ ಆಗ್ರಹಿಸಿದ್ದ. ಆದರೆ ಆಕೆಯ ಮನೆಯವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಮನೆಯಲ್ಲಿ ಒಪ್ಪದ ಹಿನ್ನೆಲೆ ಸುಮಾ ಪ್ರೀತಿಯನ್ನು ನಿರಾಕರಿಸಿದ್ದಳು. ಇದಕ್ಕೆ ಕೋಪಗೊಂಡ ಪ್ರಕಾಶ ಯಾರೂ ಇಲ್ಲದ ವೇಳೆ ಸುಮಾಳ ಮನೆಗೆ ಆಗಮಿಸಿ, ಆಕೆಯನ್ನು ಕೊಂದು ಬಳಿಕ

ಯುವ ಜೋಡಿಯ ಮೃತದೇಹ ಮಲಗಿದ ಸ್ಥಿತಿಯಲ್ಲೇ ಪತ್ತೆ ..! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಕೋಲಾರದಿಂದ ಸ್ಪರ್ಧೆಗೆ ತೀರ್ಮಾನ ➤  ಸಿದ್ದರಾಮಯ್ಯ ಅಧಿಕೃತ ಘೋಷಣೆ

(ನ್ಯೂಸ್ ಕಡಬ)newskadaba.com  ಕೋಲಾರ, ಜ.09. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೋಲಾರದಿಂದ ಸ್ಪರ್ದಿಸುವುದಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಕೋಲಾರದಲ್ಲಿ ನಡೆದ ಕಾಂಗ್ರೆಸ್ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ನಾನು ಮುಂದಿನ ಚುನಾವಣೆಯಲ್ಲಿ ಕೋಲಾರದಿಂದ ಸ್ಪರ್ಧೆ ಮಾಡಲು ತೀರ್ಮಾನ ಮಾಡಿದ್ದೇನೆ ಎಂದು ಘೋಷಿಸಿದರು ಎನ್ನಲಾಗಿದೆ. ಎಲ್ಲಾ ನಾಯಕರು ಇಲ್ಲಿಂದಲೇ ಸ್ಪರ್ಧಿಸುವಂತೆ ಹೇಳುತ್ತಿದ್ದಾರೆ. ಎಲ್ಲರೂ ಒಕ್ಕೋರಲಿನಿಂದ ಒತ್ತಾಯಿಸುತ್ತಿದ್ದೀರಿ. ನಿಮ್ಮ ಪ್ರೀತಿ, ಅಭಿಮಾನ ತಿರಸ್ಕಾರ ಮಾಡಲು ಸಾದ್ಯವಿಲ್ಲ ಎಂದರು.      

ಕೋಲಾರದಿಂದ ಸ್ಪರ್ಧೆಗೆ ತೀರ್ಮಾನ ➤  ಸಿದ್ದರಾಮಯ್ಯ ಅಧಿಕೃತ ಘೋಷಣೆ Read More »

ಕರಾವಳಿ

ಬುದ್ದಿವಾದ ಹೇಳಿದ್ದಕ್ಕೆ 9ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಕೋಲಾರ, ಜ. 06. ಪೋಷಕರು ಬುದ್ದಿವಾದ ಹೇಳಿದ್ದಕ್ಕೆ ಮನನೊಂದ ಬಾಲಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೋಲಾರ ಜಿಲ್ಲೆಯ ಮುಳಬಾಗಲು ತಾಲ್ಲೂಕಿನ ಮುಷ್ಟೂರು ಗ್ರಾಮದಲ್ಲಿ ಸಂಭವಿಸಿದೆ. ಆತ್ಮಹತ್ಯೆ ಮಾಡಿಕೊಂಡ ಬಾಲಕನನ್ನು ಉದಯ್ ಕುಮಾರ್ ಎಂದು ಗುರುತಿಸಲಾಗಿದೆ. ಮನೆಯವರು ಈತನಿಗೆ ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನ ಕೊಡುವಂತೆ ಬುದ್ದಿವಾದ ಹೇಳಿದ್ದರಿಂದ ಮನನೊಂದು ಬಾಲಕ ವಿಷ ಸೇವಿಸಿದ್ದು, ಕೂಡಲೇ ಉದಯ್ ಕುಮಾರ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು

ಬುದ್ದಿವಾದ ಹೇಳಿದ್ದಕ್ಕೆ 9ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಎಲೆಕ್ಷನ್ ಹೊತ್ತಲ್ಲಿ ಟಿಕೆಟ್ ಪಡೆಯೋಕೆ ಹೊಸ ಪ್ಲ್ಯಾನ್ ► ಬೆಳಗ್ಗಿನ ಉಪಹಾರ ಉಚಿತ ► ಶೆಟ್ಟಿ ಕ್ಯಾಂಟೀನ್

(ನ್ಯೂಸ್ ಕಡಬ) newskadaba.com ಕೋಲಾರ, ಆ.31. ಕರ್ನಾಟಕದ ಮೂಲೆ ಮೂಲೆಯಿಂದಲೂ ಕ್ಯಾಂಟೀನ್ ಸದ್ದು ಜೋರಾಗಿದೆ. ಕಾಂಗ್ರೆಸ್ ಪಕ್ಷದಿಂದ “ಇಂದಿರಾ ಕ್ಯಾಂಟೀನ್”,  ಜೆಡಿಎಸ್‍ನ “ಅಪ್ಪಾಜಿ ಕ್ಯಾಂಟೀನ್”  ಇದೀಗ ಬಿಜೆಪಿ ಮುಖಂಡರ “ಕೃಷ್ಣಯ್ಯ ಶೆಟ್ಟಿ ಕ್ಯಾಂಟೀನ್” ಹೀಗೆ ಕ್ಯಾಂಟೀನ್ ಗಳ ಕಾರುಬಾರು ಜೋರಾಗಿಯೇ ಇದೆ. ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಟೇಕಲ್ ಗ್ರಾಮದ ರೈಲ್ವೆ ನಿಲ್ದಾಣದ ಬಳಿ ಬಿಜೆಪಿ ಮುಖಂಡ ಕೃಷ್ಣಯ್ಯ ಶೆಟ್ಟಿಯವರು, ತಮ್ಮದೇ ಹೆಸರಿನಲ್ಲಿ ಕ್ಯಾಂಟೀನ್ ಶುರು ಮಾಡಿದ್ದಾರೆ. ಕೆಲವು ಸಮಯದಿಂದ ಕ್ಷೇತ್ರದಿಂದ ದೂರ ಉಳಿದಿದ್ದ ಕೃಷ್ಣಯ್ಯಶೆಟ್ಟಿಯವರು ಮತ್ತೆ ಮಾಲೂರು ಕ್ಷೇತ್ರದಲ್ಲಿ

ಎಲೆಕ್ಷನ್ ಹೊತ್ತಲ್ಲಿ ಟಿಕೆಟ್ ಪಡೆಯೋಕೆ ಹೊಸ ಪ್ಲ್ಯಾನ್ ► ಬೆಳಗ್ಗಿನ ಉಪಹಾರ ಉಚಿತ ► ಶೆಟ್ಟಿ ಕ್ಯಾಂಟೀನ್ Read More »

ಕರಾವಳಿ

ಲಾರಿ ಮರಕ್ಕೆ ಢಿಕ್ಕಿ: ಮೂವರು ಮೃತ್ಯು ► ಆರು ಮಂದಿಗೆ ಗಂಭೀರ ಗಾಯ

(ನ್ಯೂಸ್ ಕಡಬ) newskadaba.com ಕೋಲಾರ, ಆ.12. ಲಾರಿಯೊಂದು‌ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿನ ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟು, ಓರ್ವ ಆಸ್ಪತ್ರೆಗೆ ಸಾಗಿಸುವ ಹಾದಿ ಮಧ್ಯೆ ಮೃತಪಟ್ಟ ಹೃದಯ ವಿದ್ರಾವಕ‌ ಘಟನೆ ಶನಿವಾರದಂದು ನಡೆದಿದೆ. ಮಾಲೂರಿನಿಂದ ಕೋಲಾರದ ಕಡೆಗೆ ತೆರಳುತ್ತಿದ್ದ ಲಾರಿಯಲ್ಲಿ ಒಟ್ಟು 9 ಮಂದಿಯಿದ್ದರು. ಘಟನೆಯಲ್ಲಿ ರಮೇಶ್(35) ಹಾಗೂ ನಾಗರಾಜ್ (34) ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ‌. ಲಾರಿಯ ಚಾಲಕ ಹಾಗೂ ನಿರ್ವಾಹಕ ಸೇರಿದಂತೆ ಇನ್ನುಳಿದ 6 ಮಂದಿಗೆ ಗಂಭೀರ ಗಾಯಗಳಾಗಿವೆ.

ಲಾರಿ ಮರಕ್ಕೆ ಢಿಕ್ಕಿ: ಮೂವರು ಮೃತ್ಯು ► ಆರು ಮಂದಿಗೆ ಗಂಭೀರ ಗಾಯ Read More »

ಕರ್ನಾಟಕ
Scroll to Top