kerala

ಕೇರಳ: 2ನೇ ಮಂಕಿಫಾಕ್ಸ್ ಪ್ರಕರಣ ಪತ್ತೆ

 (ನ್ಯೂಸ್ ಕಡಬ) newskadaba.com ತಿರುವನಂತಪುರಂ ಸೆ.27: : ಯುನೈಟೆಡ್ ಅರಬ್ ಎಮಿರೇಟ್ಸ್(UAE)ನಿಂದ ಬಂದಿದ್ದ ಕೇರಳದ ಎರ್ನಾಕುಲಂನ 26 ವರ್ಷದ ಯುವಕನಿಗೆ ಮಂಕಿಪಾಕ್ಸ್ ಶುಕ್ರವಾರದಂದು ದೃಢಪಟ್ಟಿದೆ. ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಇದು ಈ ವರ್ಷ ರಾಜ್ಯದಲ್ಲಿ ಎರಡನೇ ಮತ್ತು ದೇಶದಲ್ಲಿ ಮೂರನೇ ಮಂಕಿಪಾಕ್ಸ್ ಪ್ರಕರಣವಾಗಿದೆ. ಈ ಹಿಂದೆ ಮಲಪ್ಪುರಂನ ಎಡವನ್ನಾ ಎಂಬ ಪ್ರದೇಶದ 38 ವರ್ಷದ ವ್ಯಕ್ತಿಗೆ ಸೆಪ್ಟೆಂಬರ್ 18 ರಂದು ಮಂಕಿಪಾಕ್ಸ್ ಕಂಡುಬಂದಿತ್ತು. ನಂತರ ಅವರ ಸೋಂಕಿಗೆ ವೈರಸ್‌ನ ಕ್ಲೇಡ್ 1 ಬಿ ಸ್ಟ್ರೈನ್ ಕಾರಣ ಎಂದು ತಿಳಿದುಬಂತು.

ಕೇರಳ: 2ನೇ ಮಂಕಿಫಾಕ್ಸ್ ಪ್ರಕರಣ ಪತ್ತೆ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕೇರಳ: ಹೆದ್ದಾರಿ ಮಧ್ಯೆ ಚಿನ್ನ ದರೋಡೆ

 (ನ್ಯೂಸ್ ಕಡಬ) newskadaba.com ಕೇರಳ(ಸೆ.27) :  ಕೇರಳದ ತ್ರಿಶ್ಶೂರ್ ಬಳಿಯ ಪೀಚಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ದರೋಡೆ ಪ್ರಕರಣದ ಡ್ಯಾಷ್ ಕ್ಯಾಮ್ ವಿಡಿಯೊ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹೆದ್ದಾರಿಯಲ್ಲಿ ಕಾರನ್ನು ತಡೆದ 12 ಮಂದಿಗಳ ಗುಂಪು ಆ ಕಾರಿನಲ್ಲಿದ್ದ ಇಬ್ಬರ ಸಹಿತ 2.5 ಕೆ.ಜಿ ಚಿನ್ನವನ್ನು ದರೋಡೆ ಮಾಡಿದೆ ಎಂದು ಪೊಲೀಸರು ಹೇಳಿದ್ದಾರೆ. ನಿರ್ಮಾಣ ಹಂತದ ಫ್ಲೈಓವರ್ ನಲ್ಲಿ ಕಾರೊದನ್ನು ಗುರಿಯಾಗಿಸಿ ಬಂದ ಮೂರು ಕಾರುಗಳು ಹೆದ್ದಾರಿಯಲ್ಲಿ ಬ್ಲಾಕ್ ಮಾಡಿವೆ. ಚಿನ್ನ ಸಾಗಿಸುತ್ತಿದ್ದ ಕಾರನ್ನು ಇತರ ಮೂರು

ಕೇರಳ: ಹೆದ್ದಾರಿ ಮಧ್ಯೆ ಚಿನ್ನ ದರೋಡೆ Read More »

ಬ್ರೇಕಿಂಗ್ ನ್ಯೂಸ್

ಲೈಂಗಿಕ ಕಿರುಕುಳ ಪ್ರಕರಣ- ನಟ ಮುಖೇಶ್ ಅರೆಸ್ಟ್

(ನ್ಯೂಸ್ ಕಡಬ) newskadaba.com ಸೆ. 24. ಮಲಯಾಳಂ ಸಿನಿಮಾರಂಗದಲ್ಲಿ ಆಂದೋಲನದ ಹಿನ್ನೆಲೆ ಲೈಂಗಿಕ ಕಿರುಕುಳದ ಪ್ರಕರಣವನ್ನು ದಾಖಲಿಸಿದ ಜನಪ್ರಿಯ ಮಲಯಾಳಂ ನಟ ಮತ್ತು ಸಿಪಿಐ(ಎಂ) ಶಾಸಕ ಮುಖೇಶ್ ಅವರನ್ನು ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಬಂಧಿಸಿದೆ. ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಹೈಕೋರ್ಟ್ ನಿಂದ ನಿರೀಕ್ಷಣಾ ಜಾಮೀನು ಪಡೆದಿರೋ ಮುಕೇಶ್ ಅವರ ಬಂಧನ ಹಲವು ಚರ್ಚೆಗೆ ಕಾರಣವಾಗಿದೆ.  

ಲೈಂಗಿಕ ಕಿರುಕುಳ ಪ್ರಕರಣ- ನಟ ಮುಖೇಶ್ ಅರೆಸ್ಟ್ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಮಲಯಾಳಂ ನಟ ಮುಖೇಶ್ ವಿರುದ್ದ ಅತ್ಯಾಚಾರ ಪ್ರಕರಣ ದಾಖಲು..!

(ನ್ಯೂಸ್ ಕಡಬ) newskadaba.com ಕೊಚ್ಚಿ, ಆ. 29. ಮಲಯಾಳಂ ಚಿತ್ರರಂಗದಲ್ಲಿ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ ಕುರಿತಂತೆ ಹೇಮಾ ಕಮಿಟಿ ವರದಿ ಬಳಿಕ ಇದೀಗ ಮಲೆಯಾಳಂ ಸಿನಿಮಾ ರಂಗದಲ್ಲಿ ಅಲ್ಲೋಲ ಕಲ್ಲೋಲ ಎದ್ದಿದೆ. ಇದೀಗ ನಟಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದ ಮೇಲೆ ಕೇರಳದ ಆಡಳಿತಾರೂಡ ಸಿಪಿಐ(ಎಂ) ಶಾಸಕ, ಮಲಯಾಳಂ ಚಿತ್ರರಂಗದ ಖ್ಯಾತ ನಟ ಮುಕೇಶ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಟಿಯೊಬ್ಬರು ಮುಕೇಶ್ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು

ಮಲಯಾಳಂ ನಟ ಮುಖೇಶ್ ವಿರುದ್ದ ಅತ್ಯಾಚಾರ ಪ್ರಕರಣ ದಾಖಲು..! Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಮೋಹನ್ ಲಾಲ್ ರಾಜೀನಾಮೆ

(ನ್ಯೂಸ್ ಕಡಬ) newskadaba.com ತಿರುವನಂತಪುರಂ, ಆ. 27. ನಟ ಮೋಹನ್ ಲಾಲ್ ಅವರು ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ (ಅಮ್ಮ) ಅಧ್ಯಕ್ಷ ಸ್ಥಾನಕ್ಕೆ ಮಂಗಳವಾರದಂದು ರಾಜೀನಾಮೆ ನೀಡಿದ್ದಾರೆ. ಅವರೊಂದಿಗೆ ಕಾರ್ಯಕಾರಿ ಸಮಿತಿಯ ಎಲ್ಲ ಸದಸ್ಯರು ಜಂಟಿಯಾಗಿ ರಾಜೀನಾಮೆ ಸಲ್ಲಿಸಿದರು. ಲೈಂಗಿಕ ಕಿರುಕುಳದ ಆರೋಪದ ನಂತರ ನಟ ಸಿದ್ದೀಕ್ ಹುದ್ದೆ ತೊರೆದ ನಂತರ ಜಗದೀಶ್ ಅವರನ್ನು ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಪರಿಗಣಿಸುತ್ತಿರುವಾಗಲೇ ಈ ಅನಿರೀಕ್ಷಿತ ಬೆಳವಣಿಗೆ ನಡೆದಿದೆ. ಅಸೋಸಿಯೇಷನ್ ​​ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ಅದರ ಕೆಲವು ಸದಸ್ಯರು

ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಮೋಹನ್ ಲಾಲ್ ರಾಜೀನಾಮೆ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕಾಸರಗೋಡು: ಗಾಂಜಾ ಪತ್ತೆ..!             ಆರೋಪಿ ಅರೆಸ್ಟ್..!                           

(ನ್ಯೂಸ್ ಕಡಬ) newskadaba.c0m ಕಾಸರಗೋಡು, ಆ. 20.  ಸುಮಾರು 5.970 ಕಿ.ಲೋ. ಗಾಂಜಾ ಸಹಿತ ಓರ್ವನನ್ನು ರೈಲ್ವೆ ಪೊಲೀಸರು ರೈಲ್ವೆ ನಿಲ್ದಾಣದಲ್ಲಿ ಬಂಧಿಸಿದ್ದಾರೆ. ಆರೋಪಿಯನ್ನು ಪೈವಳಿಕೆ ಬಾಯಿಕಟ್ಟೆ ಮಂಜತ್ತೊಡಿಯ ಅರುಣ್ ಕುಮಾರ್ (27) ಎಂದು ಗುರುತಿಸಲಾಗಿದೆ. ಕಾಸರಗೋಡು ರೈಲ್ವೆ ನಿಲ್ದಾಣದ ಒಂದನೇ ಫ್ಲಾಟ್ ಫಾಮ್ ನಲ್ಲಿ ಸಂಶಯಾಸ್ಪದಾಗಿ ನಿಂತುಕೊಂಡಿದ್ದ. ಈ ಸಂದರ್ಭ ಈತನನ್ನು ಪೊಲೀಸರು ವಿಚಾರಿಸಿದಾಗ ಸಂಶಯಾಸ್ಪದವಾಗಿ ಉತ್ತರ ನೀಡಿದ್ದಾನೆ. ಬಳಿಕ ಈತನ ಬಳಿ ಇದ್ದ ಪ್ಲಾಸ್ಟಿಕ್ ಕವರನ್ನು ಪರಿಶೀಲಸಿದಾಗ ಗಾಂಜಾ ಪತ್ತೆಯಾಗಿದೆ ಎಂದು ವರದಿ ತಿಳಿದುಬಂದಿದೆ.

ಕಾಸರಗೋಡು: ಗಾಂಜಾ ಪತ್ತೆ..!             ಆರೋಪಿ ಅರೆಸ್ಟ್..!                            Read More »

ಕರಾವಳಿ, ಕ್ರೈಮ್ ನ್ಯೂಸ್

ವಯನಾಡ್ ಗೆ ಪ್ರಧಾನಿ ಮೋದಿ ಭೇಟಿ 417 ಕ್ಕೆ ತಲುಪಿದ ಸಾವಿನ ಸಂಖ್ಯೆ  

(ನ್ಯೂಸ್ ಕಡಬ)newskadaba.com ವಯಾನಾಡು, ಆ.09. ಕೇರಳದ ಭೂಕುಸಿತ ಪೀಡಿತ ವಯನಾಡ್ ಜಿಲ್ಲೆಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದಾರೆ. ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ವಿಪತ್ತು ವಲಯದಲ್ಲಿ ಸೇನೆ ನಿರ್ಮಿಸಿದ ಪರಿಹಾರ ಶಿಬಿರ, ಆಸ್ಪತ್ರೆ ಮತ್ತು ಬೈಲಿ ಸೇತುವೆಯ ಬಳಿ ಮೋದಿ ಇಳಿಯಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೋದಿ ಅವರು ವಿಪತ್ತು ವಲಯದ ವೈಮಾನಿಕ ಸಮೀಕ್ಷೆಯನ್ನೂ ನಡೆಸಲಿದ್ದಾರೆ. ವಿಶೇಷ ವಿಮಾನದ ಮೂಲಕ ಕಣ್ಣೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಅವರು ಐಎಎಫ್ ಹೆಲಿಕಾಪ್ಟರ್ ಮೂಲಕ ವಯನಾಡ್ ಗೆ ತೆರಳಲಿದ್ದಾರೆ.

ವಯನಾಡ್ ಗೆ ಪ್ರಧಾನಿ ಮೋದಿ ಭೇಟಿ 417 ಕ್ಕೆ ತಲುಪಿದ ಸಾವಿನ ಸಂಖ್ಯೆ   Read More »

ಕರಾವಳಿ

ವಯನಾಡು ಭೂಕುಸಿತ        ಸಂತ್ರಸ್ತರಿಗೆ 25 ಲಕ್ಷ ರೂ. ದೇಣಿಗೆ ನೀಡಿದ ಅಲ್ಲು ಅರ್ಜುನ್

(ನ್ಯೂಸ್ ಕಡಬ)newskadaba.com ತಿರುವನಂತಪುರಂ,ಆ.06. ಭೂಕುಸಿತದಿಂದ ವಯನಾಡು ಅಕ್ಷರಶಃ ನಲುಗಿ ಹೋಗಿದ್ದು, ನೂರಾರು ಮಂದಿ ಸಾವನ್ನಪ್ಪಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಈ ನಡುವೆ ತೆಲುಗಿನ ಸ್ಟಾರ್ ನಟ ಅಲ್ಲು ಅರ್ಜುನ್ ಸಂತ್ರಸ್ತರಿಗೆ ನೆರವಾಗಲು ಮುಂದಾಗಿದ್ದಾರೆ. ವಯನಾಡು ಭೂಕುಸಿತ ದುರಂತದಿಂದಾಗಿ ಸಮಕಷ್ಟದಲ್ಲಿರುವವರಿಗೆ ರಶ್ಮಿಕಾ ಮಂದಣ್ಣ, ಮೋಹನ್ ಲಾಲ್ ಅವರು ಸಹಾಯ ಮಾಡಿದ್ದಾರೆ. ಇದೀಗ ಅಲ್ಲು ಅರ್ಜುನ್ 25 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಈ ಕುರಿತು ಸ್ವತಃ ನಟ ಅಲ್ಲು ಅರ್ಜುನ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ವಯನಾಡು ಭೂಕುಸಿತ        ಸಂತ್ರಸ್ತರಿಗೆ 25 ಲಕ್ಷ ರೂ. ದೇಣಿಗೆ ನೀಡಿದ ಅಲ್ಲು ಅರ್ಜುನ್ Read More »

ಕರ್ನಾಟಕ

ಕೇರಳದ ವಯನಾಡಿನಲ್ಲಿ ಭೀಕರ ಭೂಕುಸಿತ    ಹಲವಾರು ಮಂದಿ ಸಿಲುಕಿರುವ ಶಂಕೆ ರಕ್ಷಣಾ ಕಾರ್ಯ ಮುಂದುವರಿಕೆ    

(ನ್ಯೂಸ್ ಕಡಬ)newskadaba.com  ಕೇರಳ, ಜು.30. ಉತ್ತರ ಕನ್ನಡ ಶಿರೂರು ಬಳಿ ಭೂಕುಸಿತದ ಕಹಿ ಘಟನೆ ಮಾಸುವ ಮುನ್ನವೇ ಕೇರಳದ ವಯನಾಡಿನಲ್ಲಿ ಭೀಕರ ಭೂಕುಸಿತ ಸಂಭವಿಸಿದೆ ಎಂದು ತಿಳಿದುಬಂದಿದೆ. ನೂರಾರು ಮಂದಿ ಮಣ್ಣಿನೊಳಗೆ ಸಿಲುಕಿ ಹಾಕಿಕೊಂಡಿರುವ ಶಂಕೆಯಿದ್ದು ಹದಿನಾಲ್ಕು ಮಂದಿ ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ. ನಸುಕಿನ ಜಾವ ದುರ್ಘಟನೆ ಸಂಭವಿಸಿದ್ದು, ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (KSDMA) ಭೂಕುಸಿತವಾದ ಪ್ರದೇಶಕ್ಕೆ ಅಗ್ನಿಶಾಮಕ ದಳ ಮತ್ತು ಎನ್‌ಡಿಆರ್‌ಎಫ್ ತಂಡಗಳನ್ನು ನಿಯೋಜಿಸಲಾಗಿದೆ, ಹೆಚ್ಚುವರಿ ಎನ್‌ಡಿಆರ್‌ಎಫ್ ತಂಡ ವಯನಾಡ್‌ ಗೆ

ಕೇರಳದ ವಯನಾಡಿನಲ್ಲಿ ಭೀಕರ ಭೂಕುಸಿತ    ಹಲವಾರು ಮಂದಿ ಸಿಲುಕಿರುವ ಶಂಕೆ ರಕ್ಷಣಾ ಕಾರ್ಯ ಮುಂದುವರಿಕೆ     Read More »

ಕರಾವಳಿ

ಕೇರಳ: ನಿಫಾ ವೈರಸ್ ತಗಲಿದ್ದ ಬಾಲಕನೋರ್ವ ಮೃತ್ಯು     

(ನ್ಯೂಸ್ ಕಡಬ)newskadaba.com ಕೇರಳ, ಜು.22. ನಿಫಾ ಸೋಂಕು ತಗುಲಿದ್ದ 14 ವರ್ಷದ ಬಾಲಕ ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂದು ವರದಿಯಾಗಿದ್ದು, ಈ ಬಗ್ಗೆ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಪ್ರತಿಕ್ರಿಯೆ ನೀಡಿದ್ದು, ನಿಫಾ ಸೋಂಕು ತಗುಲಿದ್ದ ಬಾಲಕ ಇಂದು ಬೆಳಗ್ಗೆ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಬಾಲಕನಿಗೆ ನಿಫಾ ವೈರಸ್ ಇರುವುದು ದೃಢಪಡಿಸಿತ್ತು. ಬಾಲಕನನ್ನು ವೆಂಟಿಲೇಟರ್‌ನಲ್ಲಿಡಲಾಗಿತ್ತು. ಅಂತರಾಷ್ಟ್ರೀಯ ಪ್ರೋಟೋಕಾಲ್ ಪ್ರಕಾರ ಆತನ ಅಂತ್ಯಕ್ರಿಯೆ ನಡೆಯಲಿದೆ. ಜಿಲ್ಲಾಧಿಕಾರಿಗಳು ಬಾಲಕನ ಪೋಷಕರು ಮತ್ತು ಕುಟುಂಬದೊಂದಿಗೆ ಚರ್ಚೆ ನಡೆಸಿದ ಬಳಿಕ ಅಂತ್ಯಕ್ರಿಯೆಯ ಕುರಿತು ನಿರ್ಧಾರ

ಕೇರಳ: ನಿಫಾ ವೈರಸ್ ತಗಲಿದ್ದ ಬಾಲಕನೋರ್ವ ಮೃತ್ಯು      Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top