karnataka

ಕಡಬ: ರೀಜನಲ್ ಎಸ್‍ಎಂಎ ಸಮಾವೇಶ ►ಪೂರ್ವಭಾವಿ ಸಭೆ

(ನ್ಯೂಸ್ ಕಡಬ) newskadaba.com ಕಡಬ, ನ.14. ಸುನ್ನೀ ಮೆನೇಜ್‍ಮೆಂಟ್ ಅಸೋಶಿಯೇಶನ್‍ನ ಕಡಬ ರೀಜನಲ್ ಸಮಾವೇಶವು ನ.17ರಂದು ಶುಕ್ರವಾರ ಕಡಬ ಕೇಂದ್ರ ಜುಮ್ಮಾ ಮಸೀದಿಯಲ್ಲಿ ನಡೆಯಲಿದ್ದು ಅದರ ಪೂರ್ವಭಾವಿ ಸಭೆಯು ಆದಿತ್ಯವಾರ ಅಡ್ಡಗದ್ದೆ ಅಲ್‍ಮದೀನ ಮಸೀದಿಯಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಕಡಬ ರೀಜನಲ್ ಉಪಾಧ್ಯಕ್ಷರಾದ ಖಾದರ್ ಸಾಹೇಬ್ ಕಲ್ಲುಗುಡ್ಡೆಯವರು ವಹಿಸಿ ಮಾತನಾಡಿ ಇದೇ ನ.21 ರಂದು ಪುತ್ತೂರು ಟೌನ್‍ಹಾಲ್‍ನಲ್ಲಿ ಜಿಲ್ಲಾ ಮಟ್ಟದ ಸಮಾವೇಶವು ನಡೆಯಲಿದ್ದು ಈಗಾಗಲೇ ನಮ್ಮ ರೀಜನಲ್ ವ್ಯಾಪ್ತಿಯ ಎಲ್ಲಾ ಮದರಸಗಳಲ್ಲಿ ರಕ್ಷಕ-ಶಿಕ್ಷಕ ಸಭೆ ನಡೆಸಲಾಗಿದೆ. ಹಾಗೂ ಇದೇ […]

ಕಡಬ: ರೀಜನಲ್ ಎಸ್‍ಎಂಎ ಸಮಾವೇಶ ►ಪೂರ್ವಭಾವಿ ಸಭೆ Read More »

ಕರಾವಳಿ

ಮರ್ದಾಳ ಗ್ರಾ.ಪಂ. ಮಕ್ಕಳ ಗ್ರಾಮ ಸಭೆ ► ವಿದ್ಯಾರ್ಥಿಗಳ ಸಮಸ್ಯೆಗಳ ಕುರಿತು ಚರ್ಚೆ

(ನ್ಯೂಸ್ ಕಡಬ) newskadaba.com ಕಡಬ, ನ.14. ಮರ್ದಾಳ ಗ್ರಾ.ಪಂ.ನ 2017-18ನೇ ಸಾಲಿನ ಮಕ್ಕಳ ಗ್ರಾಮಸಭೆಯು ಮರ್ದಾಳ ಸೈಂಟ್ ಮೇರಿಸ್ ಪ್ರೌಢಶಾಲಾ ವಿದ್ಯಾರ್ಥಿ ನಾಯಕ ನಿತೇಶ್ ಕೆ.ಎಂ.ರವರ ಅಧ್ಯಕ್ಷತೆಯಲ್ಲಿ ಮರ್ದಾಳ ಅಂಬೇಡ್ಕರ್ ಭವನದಲ್ಲಿ ನಡೆಯಿತು. ಮರ್ದಾಳ ಗ್ರಾ.ಪಂ.ಅಧ್ಯಕ್ಷೆ ಲಲಿತಾ ಎಂ ಮಾತನಾಡಿ ಮಕ್ಕಳೇ ಮುಂದಿನ ಭವಿಷ್ಯದ ಆಸ್ತಿಯಾಗಿದ್ದು ಮಕ್ಕಳಿಂದಲೇ ಸಮಾಜವನ್ನು ತಿದ್ದುವ ಕೆಲಸಗಳಾಗಬೇಕಿದೆ. ತಾವು ಗ್ರಾಮ ಸಭೆಯಲ್ಲಿ ಭಾಗವಹಿಸುವುದರ ಮೂಲಕ ವಿವಿಧ ಸಮಸ್ಯೆಗಳನ್ನು ತಿಳಿಸಿ ಇತ್ಯರ್ಥ ಪಡಿಸುವಂತೆ ವಿನಂತಿಸಿಕೊಂಡಿದ್ದೀರಿ, ತಮ್ಮ ಬೇಡಿಕೆಗನುಗುಣವಾಗಿ ಆದ್ಯತೆ ನೆಲೆಯಲ್ಲಿ ಗ್ರಾ.ಪಂ.ನಿಂದ ಸಾಧ್ಯವಾದಷ್ಟು ಅಭಿವೃದ್ದಿ ಪಡಿಸಲಾಗುವುದು

ಮರ್ದಾಳ ಗ್ರಾ.ಪಂ. ಮಕ್ಕಳ ಗ್ರಾಮ ಸಭೆ ► ವಿದ್ಯಾರ್ಥಿಗಳ ಸಮಸ್ಯೆಗಳ ಕುರಿತು ಚರ್ಚೆ Read More »

ಕರಾವಳಿ

ಸಬಳೂರು: ಶ್ರೀ ರಾಮ ಗೆಳೆಯರ ಬಳಗದ ವಾರ್ಷಿಕ ಸಭೆ ► ಅಧ್ಯಕ್ಷರಾಗಿ ಪ್ರಶಾಂತ್ ಕೊಲ್ಯ, ಪ್ರಧಾನ ಕಾರ್ಯದರ್ಶಿಯಾಗಿ ಜಯಪ್ರಕಾಶ್ ಆಯ್ಕೆ

(ನ್ಯೂಸ್ ಕಡಬ) newskadaba.com ಕಡಬ, ನ.13. ಪುತ್ತೂರು ತಾಲೂಕು ಕೊಯಿಲ ಗ್ರಾಮದ ಸಬಳೂರು ಅಯೋಧ್ಯಾನಗರ ಶ್ರೀ ರಾಮ ಗೆಳೆಯರ ಬಳಗದ ವಾರ್ಷಿಕ ಸಭೆಯು ಶ್ರೀ ರಾಮ ಭಜನಾ ಮಂದಿರದಲ್ಲಿ ಭಾನುವಾರ ನಡೆಯಿತು. ಸಂಘದ ವಾರ್ಷಿಕ ಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ನಡಯಿತು. ನೂತನ ಅಧ್ಯಕ್ಷರಾಗಿ ಪ್ರಶಾಂತ್ ಕೊಲ್ಯ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಜಯಪ್ರಕಾಶ್ ಕಡೆಂಬ್ಯಾಲು ಆಯ್ಕೆಯಾಗಿದ್ದಾರೆ. ಗೌರವಧ್ಯಕ್ಷರಾಗಿ ಪ್ರವೀಣ್ ಕುಮಾರ್ ನಿಡೇಲು, ಕೋಶಾಧಿಕಾರಿಯಾಗಿ ಪ್ರವೀಣ್‍ರಾಜ್ ಕೊಲ್ಯ, ಉಪಾಧ್ಯಕ್ಷರಾಗಿ ಮೋಹನ್ ಓಕೆ, ಗುರುಪ್ರಸಾದ್ ಪಟ್ಟೆದಮೂಲೆ, ಉಮೇಶ ಬುಡಲ್ಲೂರು, ಜೊತೆಕಾರ್ಯದರ್ಶಿಯಾಗಿ ನಾಗೇಶ್ ಕಡೆಂಬ್ಯಾಲು, ಬಾಲಕೃಷ್ಣ

ಸಬಳೂರು: ಶ್ರೀ ರಾಮ ಗೆಳೆಯರ ಬಳಗದ ವಾರ್ಷಿಕ ಸಭೆ ► ಅಧ್ಯಕ್ಷರಾಗಿ ಪ್ರಶಾಂತ್ ಕೊಲ್ಯ, ಪ್ರಧಾನ ಕಾರ್ಯದರ್ಶಿಯಾಗಿ ಜಯಪ್ರಕಾಶ್ ಆಯ್ಕೆ Read More »

ಕರಾವಳಿ

ಆಲಂಕಾರು: ರಬ್ಬರ್ ಮರಕ್ಕೆ ಬೇರು ರೋಗ ► ರಬ್ಬರ್ ಬೆಳೆಗಾರರಲ್ಲಿ ಆತಂಕ

(ನ್ಯೂಸ್ ಕಡಬ) newskadaba.com ಕಡಬ, ನ.13. ಪುತ್ತೂರು ತಾಲೂಕಿನ ಆಲಂಕಾರು  ಗ್ರಾಮದ ರೈತ ಪುಟ್ಟಣ್ಣ ಮುಗೇರ ರಬ್ಬರ್ ಮರದ ಬೇರಿನಲ್ಲಿ ರೋಗ ಕಾಣಿಸಿಕೊಂಡಿದ್ದು ಈ ಅಪರೂಪದ ರೋಗದಿಂದ  ರಬ್ಬರ್ ಬೆಳೆಗಾರರಲ್ಲಿ ಆತಂಕ ಮನೆಮಾಡಿದೆ. ಆಲಂಕಾರು ಗ್ರಾಮದ ಪುಟ್ಟಣ್ಣ ಮುಗೇರರವರ 600 ರಬ್ಬರ್ ಗಿಡಗಳ ಪ್ಲಾಂಟೇಶನ್‍ನಲ್ಲಿ ಈಗಾಗಲೇ ಸುಮಾರು  20ಕ್ಕೂ ಅಧಿಕ ಮರಗಳು ಈ ರೋಗಕ್ಕೆ ಬಲಿಯಾಗಿದೆ. ರೋಗಕ್ಕೆ ತುತ್ತಾದ ಮರ ಆರು ತಿಂಗಳಲ್ಲಿ ಯಾವುದೇ ರೀತಿಯ ಬದಲಾವಣೆಯು ಕಾಣುವುದಿಲ್ಲ. ಆರು ತಿಂಗಳು ಕಳೆದ ಬಳಿಕ ಮರದ ಎಲೆ ಹಳದಿ

ಆಲಂಕಾರು: ರಬ್ಬರ್ ಮರಕ್ಕೆ ಬೇರು ರೋಗ ► ರಬ್ಬರ್ ಬೆಳೆಗಾರರಲ್ಲಿ ಆತಂಕ Read More »

ಕರಾವಳಿ

ಬಂಟ್ರ: ಕಾಂಗ್ರೆಸ್‍ನಿಂದ ಮನೆಮನೆ ಭೇಟಿ ಕಾರ್ಯಕ್ರಮ ►ರಾಜ್ಯ ಸರಕಾರದ ಸಾಧನಾ ಕೈಪಿಡಿ ವಿತರಣೆ 

(ನ್ಯೂಸ್ ಕಡಬ) newskadaba.com ಕಡಬ, ನ.13. ಕಾಂಗ್ರೆಸ್ ವತಿಯಿಂದ ರಾಜ್ಯ ಸರಕಾರದ ಸಾಧನೆಯನ್ನು ಮನೆಮನೆಗೆ ಭೇಟಿ ನೀಡಿ ತಿಳಿಸುವ ಕಾರ್ಯಕ್ರಮ ಹಾಗೂ ಸಾಧನೆಗಳ ಕೈಪಿಡಿ ಹಂಚುವ ಕಾರ್ಯಕ್ರಮ ಬಂಟ್ರ ಗ್ರಾಮದಲ್ಲಿ ನಡೆಸಲಾಯಿತು. ಬಂಟ್ರ ಗ್ರಾಮದ ಚಾಕೋಟೆಕೆರೆಯಲ್ಲಿ ಮರ್ದಾಳ ಗ್ರಾ.ಪಂ.ಮಾಜಿ ಉಪಾಧ್ಯಕ್ಷರಾದ ಮಹಮ್ಮದ್‍ರವರಿಗೆ ಜಿ.ಪಂ.ಸದಸ್ಯ ಪಿ.ಪಿ ವರ್ಗೀಸ್‍ರವರು ಸಾಧನಾ ಕೈಪಿಡಿ ನೀಡಿಚಾಲನೆ ನೀಡಿ ಮಾತನಾಡಿದ ಅವರು, ಚುನಾವಣಾ ಸಂದರ್ಭದಲ್ಲಿ ನೀಡಿದ ಭರವಸೆಗಳನ್ನು ಚಾಚೂ ತಪ್ಪದೆ ಜನರಿಗೆ ನೀಡಿದ ಕಾಂಗ್ರೆಸ್‍ನ ಸಿದ್ದರಾಮಯ್ಯ ಸರಕಾರ ಅನೇಕ ಜನಪರ ಯೋಜನೆಗಳನ್ನು ನೀಡಿದೆ. ಪಕ್ಷದ

ಬಂಟ್ರ: ಕಾಂಗ್ರೆಸ್‍ನಿಂದ ಮನೆಮನೆ ಭೇಟಿ ಕಾರ್ಯಕ್ರಮ ►ರಾಜ್ಯ ಸರಕಾರದ ಸಾಧನಾ ಕೈಪಿಡಿ ವಿತರಣೆ  Read More »

ಕರಾವಳಿ

ನ.14ರಂದು( ನಾಳೆ) ಬಿಳಿನೆಲೆಯಲ್ಲಿ ದಿ| ಗೋಪಾಲರಾವ್ ರವರ ನುಡಿನಮನ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಕಡಬ, ನ.13. ಇತ್ತೀಚೆಗೆ ನಿಧನರಾದ, ರಾಷ್ಟ್ರಪ್ರಶಸ್ತಿ ವಿಜೇತ ಧಾರ್ಮಿಕ, ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳ ಹರಿಕಾರ ದಿ| ಗೋಪಾಲರಾವ್ ಬಿಳಿನೆಲೆರವರ ನುಡಿನಮನ ಕಾರ್ಯಕ್ರಮ ನ.14ರಂದು(ನಾಳೆ) ಸಂಜೆ 3 ಗಂಟೆಗೆ ಶ್ರಿ ಗೋಪಾಲಕೃಷ್ಣ ದೇವಸ್ಥಾನದ ಸಭಾಂಗಣದಲ್ಲಿ ನಡೆಯಲಿದೆ ಎಂದು ಬಿಳಿನೆಲೆ ಸಿಎ ಬ್ಯಾಂಕ್‍ನ ಅಧ್ಯಕ್ಷರಾದ ಬಾಲಕೃಷ್ಣ ಗೌಡ ವಾಲ್ತಾಜೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ನ.14ರಂದು( ನಾಳೆ) ಬಿಳಿನೆಲೆಯಲ್ಲಿ ದಿ| ಗೋಪಾಲರಾವ್ ರವರ ನುಡಿನಮನ ಕಾರ್ಯಕ್ರಮ Read More »

ಕರಾವಳಿ

ಬೆಳಗಾವಿ ಚಲೋ ಕಾರ್ಯಕ್ರಮದಲ್ಲಿ ಪುತ್ತೂರಿನ ವೈದ್ಯರುಗಳು ಭಾಗಿ..!!!

(ನ್ಯೂಸ್ ಕಡಬ) newskadaba.com ಪುತ್ತೂರು, ನ.13.: ರಾಜ್ಯ ಸರಕಾರವು ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ಕೆ.ಪಿ.ಎಂ.ಇ) ಕಾಯ್ದೆಗೆ ತಿದ್ದುಪಡಿ ತರುವುದನ್ನು ವಿರೋಧಿಸಿ ಖಾಸಗಿ ವಲಯದ ವೈದ್ಯರು ಇಂದು ಬೆಳಗಾವಿ ಚಲೋ ಕಾರ್ಯಕ್ರಮ ಹಮ್ಮಿಕೊಂಡಿದ್ದು ಪುತ್ತೂರಿನಿಂದಲೂ ವೈದ್ಯರುಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ಸೋಮವಾರ(ಇಂದಿನಿಂದ) ಬೆಳಗಾವಿಯಲ್ಲಿ ರಾಜ್ಯ ವಿಧಾನ ಮಂಡಲದ ಅಧಿವೇಶನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬೆಳಗಾವಿ ಚಲೋ ಕಾರ್ಯಕ್ರಮ ನಡೆಯಲಿದೆ. ಇದರಿಂದ ಆಸ್ಪತ್ರೆಯಲ್ಲಿ ವೈದ್ಯರು ಲಭ್ಯರಿರುವ ಸಾಧ್ಯತೆ ಕಡಿಮೆ ಇದ್ದು, ಹೊರರೋಗಿಗಳ ವಿಭಾಗವೂ ಮುಚ್ಚಿರುತ್ತದೆ. ಸರಕಾರದಿಂದ ಸ್ಪಂದನೆ ಸಿಗದಿದ್ದರೆ ಮಂಗಳವಾರ

ಬೆಳಗಾವಿ ಚಲೋ ಕಾರ್ಯಕ್ರಮದಲ್ಲಿ ಪುತ್ತೂರಿನ ವೈದ್ಯರುಗಳು ಭಾಗಿ..!!! Read More »

ಕರಾವಳಿ

ನಾಳೆ(ನ.14) ನೆಲ್ಯಾಡಿಯಲ್ಲಿ ಉಚಿತ ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ನ.13. ಶ್ರೀ ಕ್ಷೇ.ಧ.ಗ್ರಾ.ಯೋಜನೆ ನೆಲ್ಯಾಡಿ ಒಕ್ಕೂಟ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ನೆಲ್ಯಾಡಿ ವಲಯ, ಗ್ರಾಮ ಪಂಚಾಯತ್ ನೆಲ್ಯಾಡಿ, ಲಯನ್ಸ್ ಕ್ಲಬ್ ಕಡಬ, ಬಂಟರ ಸಂಘ ನೆಲ್ಯಾಡಿ, ಕಿರಣ್ ಮಹಿಳಾ ಒಕ್ಕೂಟ ಬೆಳ್ತಂಗಡಿ ಇದರ ಸಂಯುಕ್ತ ಆಶ್ರಯದಲ್ಲಿ ಪುತ್ತೂರು ಆನಂದಾಶ್ರಮ ಸೇವಾ ಟ್ರಸ್ಟ್, ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ಮಂಗಳೂರು, ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಮಂಗಳೂರು ಇದರ ಸಹಯೋಗದೊಂದಿಗೆ ತಜ್ಞ ವೈದ್ಯರಿಂದ ಉಚಿತ ನೇತ್ರ ಚಿಕಿತ್ಸಾ ಶಿಬಿರ ಮತ್ತು ಶಸ್ತ್ರ ಚಿಕಿತ್ಸಾ

ನಾಳೆ(ನ.14) ನೆಲ್ಯಾಡಿಯಲ್ಲಿ ಉಚಿತ ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರ Read More »

ಕರಾವಳಿ

ಬೆಳ್ತಂಗಡಿಯಲ್ಲೊಂದು ಅಪರೂಪದ ಘಟನೆ ► ನಾಯಿ ಮರಿಗಳಿಗೆ ಹಾಲುಣಿಸುತ್ತಿರುವ ಬೆಕ್ಕು..!!!

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ನ.13. ಬೆಕ್ಕು ಮತ್ತು ನಾಯಿ ಪರಮ ಶತ್ರುಗಳು ಅಂತಾ ಹಿರಿಯರು ಹೇಳುತ್ತಾರೆ. ಆದರೆ ಇಲ್ಲೊಂದು  ಅಚ್ಚರಿ ಎಂಬಂತೆ ಬೆಕ್ಕು ಸುಮಾರು 6 ನಾಯಿ ಮರಿಗಳಿಗೆ ಹಾಲುಣಿಸಿ ತಾಯಿಯ ಪ್ರೀತಿಯನ್ನು ತೋರಿಸುತ್ತಿದೆ. ಬೆಳ್ತಂಗಡಿ ತಾಲೂಕಿನ ಸೋಮಂತಡ್ಕ ನಿವಾಸಿ ಮೋಹನ್ ನಾಯ್ಕ್ ಎಂಬವರ ಮನೆಯ ಬೆಕ್ಕು ಪ್ರತಿದಿನ ಬೆಳಿಗ್ಗೆ ನಾಯಿಮರಿಗಳಿಗೆ ಹಾಲು ನೀಡುತ್ತಿದೆ. ಈ ಬೆಕ್ಕು ಸುಮಾರು 5 ರಿಂದ 6 ನಾಯಿಮರಿಗಳಿಗೆ ಪ್ರತಿದಿನ ಹಾಲನ್ನು ಕುಡಿಸುತ್ತದೆ. ತಾಯಿಯ ಮಮತೆಯನ್ನು ಬಯಸಿ ಬರುವ ನಾಯಿ ಮರಿಗಳಿಗೆ

ಬೆಳ್ತಂಗಡಿಯಲ್ಲೊಂದು ಅಪರೂಪದ ಘಟನೆ ► ನಾಯಿ ಮರಿಗಳಿಗೆ ಹಾಲುಣಿಸುತ್ತಿರುವ ಬೆಕ್ಕು..!!! Read More »

ಕರಾವಳಿ

ಕಡಬ: ಸಾಹಿತಿ ಗೋಪಾಲ್ ರಾವ್ ಅವರಿಗೆ ಶ್ರದ್ಧಾಂಜಲಿ ಸಭೆ

(ನ್ಯೂಸ್ ಕಡಬ) newskadaba.com ಕಡಬ, ನ.13. ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಇತ್ತೀಚೆಗೆ ನಿಧನರಾದ, ಗೋಪಾಲ್ ರಾವ್ ಅವರಿಗೆ ಶ್ರದ್ಧಾಂಜಲಿ ಸಭೆ ಶನಿವಾರ ಕಡಬ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಐತ್ತಪ್ಪ ನಾಯ್ಕ್ ಮಾತನಾಡಿ ಗೋಪಾಲ್ ರಾವ್ ಹಾಗೂ ತನ್ನ ಸುಧೀರ್ಘ ಒಡನಾಟದಲ್ಲಿ ನಡೆದ ಸಾಹಿತ್ಯ ಕೃಷಿಯ ಬಗ್ಗೆ ಮೆಲಕು ಹಾಕಿದರು. ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಜಗನ್ನಿವಾಸ ರಾವ್, ಜಿಲ್ಲಾ

ಕಡಬ: ಸಾಹಿತಿ ಗೋಪಾಲ್ ರಾವ್ ಅವರಿಗೆ ಶ್ರದ್ಧಾಂಜಲಿ ಸಭೆ Read More »

ಕರಾವಳಿ
Scroll to Top