karnataka

ಸಮುದ್ರಕ್ಕೆ ತೆರಳದಂತೆ – ಮೀನುಗಾರರಿಗೆ ಮುನ್ನೆಚ್ಚರಿಕೆ

(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.24.ಹವಾಮಾನ ಮುನ್ಸೂಚನೆಯಂತೆ ಅರಬ್ಬಿ ಸಮುದ್ರದಲ್ಲಿ ಮುಂದಿನ 24 ಗಂಟೆಗಳ ಕಾಲ ಸಮುದ್ರವು ಪ್ರಕ್ಷುಬ್ಧವಾಗುವ ಸಂಭವನೀಯತೆ ಇದೆ. ಆದ್ದರಿಂದ ಸೆಪ್ಟೆಂಬರ್ 23 ರಿಂದ 25 ರವರೆಗೆ ಮೀನುಗಾರಿಕೆಗಾಗಿ ಸಮುದ್ರಕ್ಕೆ ತೆರಳದಂತೆ ಎಲ್ಲಾ ಮೀನುಗಾರರಿಗೆ ಮುನ್ನೆಚ್ಚರಿಕೆ ನೀಡಲಾಗಿದೆ ಎಂದು ಮಂಗಳೂರು ಮೀನುಗಾರಿಕೆ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.

ಸಮುದ್ರಕ್ಕೆ ತೆರಳದಂತೆ – ಮೀನುಗಾರರಿಗೆ ಮುನ್ನೆಚ್ಚರಿಕೆ Read More »

ಕರಾವಳಿ

ಆಯುಷ್ಮಾನ್ ಭಾರತ್ ➤ ಜಾಥಾ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.24.ಆಯುಷ್ಮಾನ್ ಭಾರತ್- ಆರೋಗ್ಯ ಕರ್ನಾಟಕ ಯೋಜನೆ ಜಾರಿಗೆ ಬಂದು ಒಂದು ವರ್ಷ ಪೂರ್ಣಗೊಂಡ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ಯೋಜನೆಯ ಅರಿವು ಮೂಡಿಸಲು ಹಾಗೂ ಫಲಾನುಭವಿಗಳು ಈ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಲು ಜಾಗೃತಿ ಜಾಥ ಕಾರ್ಯಕ್ರಮ ನಡೆಯಿತು. ಸೋಮವಾರ ಬೆಳಿಗ್ಗೆ 9.30 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಜಾಥ ಆರಂಭಗೊಂಡಿದ್ದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧು ಬಿ ರೂಪೇಶ್ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು. ಬಳಿಕ ಜಾಥವು ಜಿಲ್ಲಾ ವೆನ್‍ಲಾಕ್ ಆಸ್ಪತ್ರೆ ಮಂಗಳೂರು ಇಲ್ಲಿಗೆ

ಆಯುಷ್ಮಾನ್ ಭಾರತ್ ➤ ಜಾಥಾ ಕಾರ್ಯಕ್ರಮ Read More »

ಕರಾವಳಿ

ರಾಷ್ಟ್ರೀಯ ಜಂತುಹುಳ ನಿವಾರಣಾ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.24.ದಕ್ಷಿಣ ಕನ್ನಡ ಜಿಲ್ಲೆಯ ರಾಷ್ಟ್ರೀಯ ಜಂತುಹುಳ ನಿವಾರಣಾ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮ ಆಯೋಜಿಸಲಾಗಿದೆ. ಸಪ್ಟೆಂಬರ್ 25 ರಂದು ಬೆಳಿಗ್ಗೆ 10 ಗಂಟೆಗೆ ಮಹಿಳಾ ಪದವಿ ಪೂರ್ವ ಕಾಲೇಜು ರಥಬೀದಿ ಮಂಗಳೂರು ಇಲ್ಲಿ ನಡೆಯಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಪ್ರಕಟಣೆ ತಿಳಿಸಿದೆ.

ರಾಷ್ಟ್ರೀಯ ಜಂತುಹುಳ ನಿವಾರಣಾ ಕಾರ್ಯಕ್ರಮ Read More »

ಕರಾವಳಿ

ಕೊಡಗು ಸೈನಿಕ ಶಾಲೆಯ 6 ಮತ್ತು 9 ನೇ ತರಗತಿಯ ಪ್ರವೇಶ ಪರೀಕ್ಷೆ ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ

(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.24.2020-21 ನೇ ಸಾಲಿನ ಅಖಿಲ ಭಾರತ ಸೈನಿಕ ಶಾಲೆಗಳ 6 ಮತ್ತು 9 ನೇ ತರಗತಿಯ ಪ್ರವೇಶ ಪರೀಕ್ಷೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಅಕ್ಟೋಬರ್ 10 ರವರೆಗೆ ಮುಂದೂಡಲಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ವೆಬ್‍ಸೈಟ್ ವಿಳಾಸ    www.sainikschooladmission.in   ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08276-278963, 08276-278965 ಸಂಪರ್ಕಿಸಬಹುದು ಎಂದು ಪ್ರಾಂಶುಪಾಲರು, ಸೈನಿಕ ಶಾಲೆ ಕೊಡಗು ಇವರ ಪ್ರಕಟಣೆ ತಿಳಿಸಿದೆ.

ಕೊಡಗು ಸೈನಿಕ ಶಾಲೆಯ 6 ಮತ್ತು 9 ನೇ ತರಗತಿಯ ಪ್ರವೇಶ ಪರೀಕ್ಷೆ ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ Read More »

ಕರಾವಳಿ

ಸಾಮೂಹಿಕ ಸ್ವಚ್ಚತಾ ಕಾರ್ಯಕ್ರಮ ಪರಿಣಾಮಕಾರಿ ➤ ಶಾಸಕ ವೇದವ್ಯಾಸ ಕಾಮತ್

(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.24.ಮಂಗಳೂರಿನ ಮಾತಾ ಅಮೃತಾನಂದಮಯಿ ಮಠದಲ್ಲಿ ಎಂ ಆರ್ ಪಿ ಎಲ್ ಸಹಯೋಗದೊಂದಿಗೆ ಭಾನುವಾರ ಸ್ವಚ್ಚತಾ ಜನ ಜಾಗರಣ ಅಭಿಯಾನ ಹಮ್ಮಿಕೊಳ್ಳಲಾಯಿತು. ಮಠದ ಮುಖ್ಯಸ್ಥರಾದ ಬ್ರಹ್ಮಚಾರಿಣಿ ಮಂಗಳಾಮೃತ ಚೈತನ್ಯ ಅಮೃತ ಜ್ಯೋತಿ ಬೆಳಗಿ ಚಾಲನೆ ನೀಡಿದರು. ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಈ ಸಂದರ್ಭದಲ್ಲಿ ಮಾತನಾಡಿ ಸ್ವಚ್ಚ ಭಾರತ, ಸ್ವಚ್ಚ ಮಂಗಳೂರಿನ ಬಗ್ಗೆ ಮಠಗಳ ಪ್ರಯತ್ನ ಶ್ಲಾಘನೀಯ, 2000 ಕ್ಕೂ ಅಧಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಜನಜಾಗೃತಿ ಮೂಡಿಸುತ್ತಿರುವ ಪರಿಣಾಮ ಇಂದು ಹೆಚ್ಚಿನ ಜನರಲ್ಲಿ

ಸಾಮೂಹಿಕ ಸ್ವಚ್ಚತಾ ಕಾರ್ಯಕ್ರಮ ಪರಿಣಾಮಕಾರಿ ➤ ಶಾಸಕ ವೇದವ್ಯಾಸ ಕಾಮತ್ Read More »

ಕರಾವಳಿ

ಬಾಲಭವನ ಸಂಸ್ಥೆಯ ವತಿಯಿಂದ ಕಲಾಶ್ರೀ ಆಯ್ಕೆ ಶಿಬಿರಕ್ಕೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.24.ಬಾಲಭವನ ಸಂಸ್ಥೆಯು 2019 ನೇ ಸಾಲಿನ ತಾಲೂಕು ಮಟ್ಟದ ಮಕ್ಕಳ ಕಲಾ ಉತ್ಸವ ಹಾಗೂ ಕಲಾಶ್ರೀ ಪ್ರಶಸ್ತಿ ಶಿಬಿರ ಹಮ್ಮಿಕೊಳ್ಳಲಾಗಿದೆ. ಈ ಶಿಬಿರದಲ್ಲಿ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಕಲಾ ಪ್ರತಿಭೆಯನ್ನು ಪ್ರೇರೇಪಿಸುವ ನಿಟ್ಟಿನಲ್ಲಿ ಪ್ರತಿಭಾವಂತ ಮಕ್ಕಳನ್ನು ಆರಿಸಿ ಕಲಾಶ್ರೀ ಪ್ರಶಸ್ತಿ ಪ್ರಧಾನ ಮಾಡುವ ಉದ್ದೇಶದಿಂದ ಒಕ್ಟೋಬರ್ 15 ರಂದು ಮಂಗಳಜ್ಯೋತಿ ಸಮಗ್ರ ಶಾಲೆ, ವಾಮಂಜೂರು ಇಲ್ಲಿ ನಡೆಯುವ ತಾಲೂಕು ಮಟ್ಟದ ಸ್ಪರ್ಧೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಸ್ಪರ್ಧೆಗಳ ವಿವರ ಇಂತಿವೆ : ಸೃಜನಾತ್ಮಕ ಕಲೆ-

ಬಾಲಭವನ ಸಂಸ್ಥೆಯ ವತಿಯಿಂದ ಕಲಾಶ್ರೀ ಆಯ್ಕೆ ಶಿಬಿರಕ್ಕೆ ಅರ್ಜಿ ಆಹ್ವಾನ Read More »

ಕರಾವಳಿ

ಹಳೆಯ ಕಡತ ಪೇಪರ್‍ಗಳ ಬಹಿರಂಗ ಹರಾಜು

(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.24.ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಕಚೇರಿಯ ರೆಕಾರ್ಡ್ ಕೊಠಡಿಗೆ ಸಂಬಂಧಿಸಿದ ಹಳೆಯ ಕಡತಗಳಲ್ಲಿರುವ ಎಲ್ಲಾ ವಿಧದ ಪೇಪರ್ ಗಳನ್ನು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಕಚೇರಿಯ ಆವರಣದಲ್ಲಿ ಅಕ್ಟೋಬರ್ 4 ರಂದು ಬೆಳಿಗ್ಗೆ 11 ಗಂಟೆಗೆ ಬಹಿರಂಗ ಹರಾಜು ಮೂಲಕ ವಿಲೇವಾರಿ ಮಾಡಲಾವುದು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಪೊಲೀಸ್ ಕಚೇರಿ, ದ.ಕ ಜಿಲ್ಲೆ ಮಂಗಳೂರು ಇವರನ್ನು ಸಂಪರ್ಕಿಸಲು ಪೊಲೀಸ್ ಅಧೀಕ್ಷಕರು ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

ಹಳೆಯ ಕಡತ ಪೇಪರ್‍ಗಳ ಬಹಿರಂಗ ಹರಾಜು Read More »

ಕರಾವಳಿ

ಬಸವನ ಹುಳು ನಿಯಂತ್ರಣಕ್ಕೆ ಸಲಹೆ

(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.24.ಆಫ್ರಿಕಾದ ದೈತ್ಯ ಬಸವನ ಹುಳು (Achatina fulica) ವಿಶ್ವದ ಅತಿದೊಡ್ಡ ಮತ್ತು ಹಾನಿಕಾರಕ ಭೂಮಿ ಬಸವನ ಕೀಟಗಳಲ್ಲಿ ಒಂದು. ಇದು ಮನುಷ್ಯನ ಹಿಡಿಯಷ್ಟು ದೊಡ್ಡ ಶಂಖದ ಆಕಾರದ ಚಿಪ್ಪುನಲ್ಲಿ ಇರುವಂತಹ ಜೀವಿ. ಕೈಯಲ್ಲಿ ಹಿಡಿದಾಗ ಆಮೆಯಂತೆ ಚಿಪ್ಪಿನೊಳಗೆ ಅಡಗಿಕೊಳ್ಳುತ್ತದೆ. ರಾತ್ರಿಯಿಡೀ ಎಚ್ಚರವಿದ್ದು ತೋಟದಲ್ಲಿರುವ ಎಲ್ಲಾ ರೀತಿಯ ಬೆಳೆಗಳನ್ನು ನಾಶ ಮಾಡುತ್ತದೆ, ದಿನದ ಹಗಲು ಸಮಯದಲ್ಲಿ ಗಿಡಗಳಲ್ಲಿ/ಪೊದೆಗಳಲ್ಲಿ ಅವಿತುಕೊಂಡು ರಾತ್ರಿ ಸಮಯದಲ್ಲಿ ಹೆಚ್ಚು ಚಟುವಟಿಕೆಯಿಂದ ಕೂಡಿರುತ್ತದೆ.ಬಸವನ ಹುಳುಗಳನ್ನು ಸಮಗ್ರವಾಗಿ ನಿಯಂತ್ರಣ ಮಾಡಬಹುದಾಗಿದ್ದು ಇದರಿಂದ ನಾವು

ಬಸವನ ಹುಳು ನಿಯಂತ್ರಣಕ್ಕೆ ಸಲಹೆ Read More »

ಕರಾವಳಿ

ತಣ್ಣೀರುಬಾವಿ ಬೀಚ್- ಪ್ಲಾಸ್ಟಿಕ್ ಬಳಕೆಯ ಅರಿವು ಜಾಥಾ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.24.ಮಂಗಳೂರಿನ ಮೀನುಗಾರಿಕಾ ಮಹಾವಿದ್ಯಾಲಯವು ಸೆಂಪ್ಟಂಬರ್ 21 ರಂದು ಅಂತರಾಷ್ಟ್ರೀಯ ಕರಾವಳಿ ಸ್ವಚ್ಚತಾ ದಿನದಂದು ಬೀಚ್ ಸ್ವಚ್ಚತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿತು. ನವದೆಹಲಿಯ ಭೂ ವಿಜ್ಞಾನ ಸಚಿವಾಲಯ ಮತ್ತು ಚೆನ್ನೈನ ರಾಷ್ಟ್ರೀಯ ಕಡಲ ಸಂಶೋಧನಾ ಸಂಸ್ಥೆಗಳ ನಿರ್ದೇಶನದಂತೆ, ಕರ್ನಾಟಕದ ಏಕೈಕ ಕಾಲೇಜಾದ ಮಂಗಳೂರಿನ ಮೀನುಗಾರಿಕಾ ಮಹಾವಿದ್ಯಾಲಯವು ಅಂತರಾಷ್ಟ್ರೀಯ ಕರಾವಳಿ ಸ್ವಚ್ಚತಾ ದಿನವನ್ನು ತಣ್ಣೀರುಭಾವಿ ಕಡಲ ಕಿನಾರೆಯಲ್ಲಿ ನಡೆಸಿತು. ಸಂಯೋಜಕರಾದ ಕಾಲೇಜಿನ ಅರ್ಥಶಾಸ್ತ್ರ, ಸಂಖ್ಯಾಶಾಸ್ತ್ರ ಮತ್ತು ವಿಸ್ತರಣೆ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಡಾ. ಎಸ್.ಆರ್.

ತಣ್ಣೀರುಬಾವಿ ಬೀಚ್- ಪ್ಲಾಸ್ಟಿಕ್ ಬಳಕೆಯ ಅರಿವು ಜಾಥಾ ಕಾರ್ಯಕ್ರಮ Read More »

ಕರಾವಳಿ

ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು ➤ ಪ್ಲಾಸ್ಟಿಕ್ ಪರ್ಯಾಯ ವಸ್ತುಗಳ ಪ್ರದರ್ಶನ

(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.24.ಮರುಬಳಕೆ ಮಾಡಲಾಗದ ಪ್ಲಾಸ್ಟಿಕ್ ವಿರುದ್ಧ ಜಾಗೃತಿ ಮತ್ತು ಪ್ಲಾಸ್ಟಿಕ್‍ಗೆ ಪರ್ಯಾಯವಾಗಬಹುದಾದ ವಸ್ತುಗಳ ಪ್ರದರ್ಶನ ಮತ್ತು ಮಾರಾಟವನ್ನು ವಿಶ್ವವಿದ್ಯಾನಿಲಯ ಕಾಲೇಜಿನ ಸೂಕ್ಷ್ಮಾಣು ಜೀವಿಶಾಸ್ರ್ತ ವಿಭಾಗ, ಎನ್‍ಎನ್‍ಎಸ್ ಘಟಕದ ಸಹಯೋಗದೊಂದಿಗೆ ರವೀಂದ್ರ ಕಲಾಭವನದ ಬಳಿ ಇತ್ತೀಚೆಗೆ ಆಯೋಜಿಸಿತ್ತು. ಬೀಜದ ಪೆನ್‍ಗಳು ಪೆನ್ಸಿಲ್‍ಗಳು, ನೆಡಬಹುದಾದ ಪೆನ್‍ಗಳು, ಪುನರ್ಬಳಕೆ ಮಾಡಿದ ಪೇಪರ್‍ನಿಂದ ತಯಾರಿಸಿದ ನೋಟ್‍ಬುಕ್‍ಗಳು, ಸೆಣಬಿನ ಬ್ಯಾಗ್, ಕೈಚೀಲಗಳು, ಬಾಳೆ ಎಲೆ, ಪೇಪರ್ ಬ್ಯಾಗ್, ಬಟ್ಟೆಯ ಚೀಲಗಳು, ವಿಭಾಗಗಳಿರುವ ಶಾಪಿಂಗ್ ಬ್ಯಾಗ್‍ಗಳು, ಅಡಿಕೆ ಹಾಳೆಯ ತಟ್ಟೆ, ಪ್ಲೇಟ್, ಬೌಲ್,

ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು ➤ ಪ್ಲಾಸ್ಟಿಕ್ ಪರ್ಯಾಯ ವಸ್ತುಗಳ ಪ್ರದರ್ಶನ Read More »

ಕರಾವಳಿ
Scroll to Top