karnataka

ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ವಂಚನೆ   ದೂರು ದಾಖಲು               

(ನ್ಯೂಸ್ ಕಡಬ)newskadaba.com ಬೆಂಗಳೂರು , ಆ.07.  ತಮಿಳಿನ ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ಹೇಳಿ, ಸಿನಿಮಾದ ಕ್ಯಾಸ್ಟಿಂಗ್ ನಿರ್ದೇಶಕನ ಸೋಗಿನಲ್ಲಿ ಸ್ಯಾಂಡಲ್‌ವುಡ್ ನಟಿಯೊಬ್ಬರಿಗೆ ಸೈಬರ್ ವಂಚಕರು 1.7 ಲಕ್ಷ ರೂ. ವಂಚಿಸಿದ್ದಾರೆ ಎಂದು ತಿಳಿದುಬಂದಿದೆ. ಸ್ಯಾಂಡಲ್‌ವುಡ್ ನಟಿ ನಂದಿತ ಕೆ.ಶೆಟ್ಟಿ (21) ವಂಚನೆಗೊಳಗಾದವರು ಎನ್ನಲಾಗಿದೆ. ಈ ಸಂಬಂಧ ಕೋಣನಕುಂಟೆ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ವಂಚಕರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ವಂಚನೆ   ದೂರು ದಾಖಲು                Read More »

ಕರ್ನಾಟಕ, ಕ್ರೈಮ್ ನ್ಯೂಸ್

ಸುಳ್ಯ: ರಬ್ಬರ್ ಸ್ಮೋಕ್ ಹೌಸಿಗೆ ತಗುಲಿದ ಬೆಂಕಿ ಅಪಾರ ನಷ್ಟ

(ನ್ಯೂಸ್ ಕಡಬ)newskadaba.com ಸುಳ್ಯ, ಆ.07. ರಬ್ಬರ್ ಸ್ಮೋಕ್ ಹೌಸಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ, ರಬ್ಬರ್ ಸ್ಕ್ರಾಪ್, ಶೀಟು ಸೇರಿದಂತೆ ಸ್ಮೋಕ್ ಹೌಸ್ ಪೆಟ್ಟಿಗೆಗೆ ಹಾನಿಯಾಗಿ ಅಪಾರ ನಷ್ಟ ಸಂಭವಿಸಿದ ಘಟನೆ ಸಂಪಾಜೆಯಲ್ಲಿ ನಡೆದಿದೆ. ಕೊಡಗು ಸಂಪಾಜೆ ಗ್ರಾಮ ಪಂಚಾಯತಿ ಅಧ್ಯಕ್ಷೆ ರಮಾದೇವಿ ಬಾಲಚಂದ್ರ ಕಳಗಿ ಅವರ ಮನೆಯ ಸಮೀಪದಲ್ಲಿರುವ ರಬ್ಬರ್ ಸ್ಮೋಕ್ ಹೌಸ್ ನಲ್ಲಿ ಆಕಸ್ಮಿಕವಾಗಿ ಬೆಂಕಿ ರಬ್ಬರ್ ಸ್ಕ್ರಾಪ್ ಹಾಗೂ ಶೀಟುಗಳಿಗೆ ತಗುಲಿದ್ದು, ಸ್ಮೋಕ್ ಹೌಸ್ ಪೆಟ್ಟಿಗೆಗೆ ಹಾನಿಯಾಗಿದೆ. ಕೂಡಲೇ ರಮಾದೇವಿ ಕಳಗಿ ಅವರು ಸ್ಥಳೀಯರಿಗೆ

ಸುಳ್ಯ: ರಬ್ಬರ್ ಸ್ಮೋಕ್ ಹೌಸಿಗೆ ತಗುಲಿದ ಬೆಂಕಿ ಅಪಾರ ನಷ್ಟ Read More »

ಕರಾವಳಿ

ಬಂಟ್ವಾಳ: ಮನೆಯ ಬಾಗಿಲು ಒಡೆದು ಚಿನ್ನಾಭರಣ, ನಗದು ಕಳವು     ಪ್ರಕರಣ ದಾಖಲು

(ನ್ಯೂಸ್ ಕಡಬ)newskadaba.comಬಂಟ್ವಾಳ, ಆ.07. ಮನೆಮಂದಿ ಸಂಬಂಧಿಕರ ಮನೆಗೆ ತೆರಳಿದ್ದ ವೇಳೆ ಬಾಗಿಲು ಒಡೆದು ಒಳನುಗ್ಗಿದ ಕಳ್ಳರು ಚಿನ್ನದ ಆಭರಣಗಳ ಸಹಿತ ನಗದನ್ನು ದೋಚಿದ ಘಟನೆ ವರದಿಯಾಗಿದೆ. ಅಗರಿ ನಿವಾಸಿ ಜಗನ್ನಾಥ್ ರವರ ಮನೆಯಲ್ಲಿ ಈ ಕಳ್ಳತನ ಕೃತ್ಯ ನಡೆದಿದ್ದು, ಜಗನ್ನಾಥ್‌ರವರು ಕೆಲಸದ ನಿಮಿತ್ತ ವಿದೇಶದಲ್ಲಿದ್ದು ಮನೆಯಲ್ಲಿ ಅವರ ಪತ್ನಿ ವಿಜಯ ಜಗನ್ನಾಥ್‌ ಹಾಗೂ ಇಬ್ಬರು ಮಕ್ಕಳು ಮಾತ್ರ ಅಗರಿಯ ಮನೆಯಲ್ಲಿ ವಾಸವಾಗಿದ್ದರು.ವಿಜಯ ತನ್ನ ಮಕ್ಕಳೊಂದಿಗೆ ಈಶ್ವರಮಂಗಲ ಪಂಚೋಡಿಯಲ್ಲಿರುವ ತಮ್ಮ ತವರು ಮನೆಗೆ ತೆರಳಿದ್ದು ಮರಳಿ ಮನೆಗೆ ಬಂದಾಗ

ಬಂಟ್ವಾಳ: ಮನೆಯ ಬಾಗಿಲು ಒಡೆದು ಚಿನ್ನಾಭರಣ, ನಗದು ಕಳವು     ಪ್ರಕರಣ ದಾಖಲು Read More »

ಕರ್ನಾಟಕ

‘ಇಂಧನ ಅಭಿವೃದ್ಧಿ ನಮ್ಮ ಧ್ಯೇಯ’          ಪ್ರಲ್ಹಾದ್ ಜೋಶಿ ಘೋಷಣೆ       

(ನ್ಯೂಸ್ ಕಡಬ)newskadaba.com ನವದೆಹಲಿ, ಆ.07. ಅಭಿವೃದ್ಧಿ ಹೊಂದಿದ ಭಾರತ ನಮ್ಮ ಧ್ಯೇಯ, ಇಂಧನ ಅಭಿವೃದ್ಧಿ ನಮ್ಮ ಧ್ಯೇಯ ಎಂದು ಕೇಂದ್ರ ನೂತನ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್ ಜೋಶಿ ಘೊಷಿಸಿದ್ದಾರೆ.ಅವರು ಇಂದು ರಾಜ್ಯಸಭೆಯಲ್ಲಿ ಇಂಧನ ಸಚಿವಾಲಯದ ಕಾರ್ಯವನ್ನು ಎತ್ತಿ ತೋರಿಸಿದ್ದಾರೆ. ನವೀಕರಿಸಬಹುದಾದ ಇಂಧನವು ಕೇವಲ ಒಂದು ಆಯ್ಕೆಯಲ್ಲ, ಅದು ರಾಷ್ಟ್ರದ ಸ್ಥಿರತೆಗೆ ಅವಶ್ಯಕವಾಗಿದೆ. ಇದು ದೇಶದ ಪ್ರಗತಿ ಮತ್ತು ಅಭಿವೃದ್ಧಿಗೆ ಕಾರಣವಾಗುತ್ತದೆ. ವಿಶ್ವದ ದೊಡ್ಡ ಆರ್ಥಿಕತೆ ಹೊಂದಿರುವ ಎಲ್ಲಾ ದೇಶಗಳಲ್ಲಿ ನವೀಕರಿಸಬಹುದಾದ ಇಂಧನ ಕ್ಷೇತ್ರವು ವಿಶೇಷ

‘ಇಂಧನ ಅಭಿವೃದ್ಧಿ ನಮ್ಮ ಧ್ಯೇಯ’          ಪ್ರಲ್ಹಾದ್ ಜೋಶಿ ಘೋಷಣೆ        Read More »

ಕರ್ನಾಟಕ, ರಾಷ್ಟ್ರೀಯ ನ್ಯೂಸ್

ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ಮತ್ತೊಂದು ದೂರು

(ನ್ಯೂಸ್ ಕಡಬ)newskadaba.com ಬೆಂಗಳೂರು, ಆ.06. ಮುಡಾ ಹಗರಣಕ್ಕೆ ಸಂಬಂಧಿಸಿ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ಮತ್ತೊಂದು ದೂರು ದಾಖಲಾಗಿದೆ. ಮುಡಾ ಹಗರಣಕ್ಕೆ ಸಂಬಂಧಿಸಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯಪಾಲರಿಗೆ ದಾಖಲೆ ಸಮೇತ ಮತ್ತೊಂದು ದೂರು ದಾಖಲಾಗಿದ್ದು, ತಮ್ಮ ಪ್ರಭಾವ ಬಳಸಿ ಅಕ್ರಮವಾಗಿ ಜಮೀನು ಡಿನೋಟಿಫೈ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ಮತ್ತೊಂದು ದೂರು Read More »

ಕರ್ನಾಟಕ

ಜೀವ ಭಯದಲ್ಲಿ ಭಾರತಕ್ಕೆ ಶೇಕ್ ಹಸೀನಾ ಪರಾರಿ ಬಾಂಗ್ಲಾದೇಶ ಸೇನೆ ವಶಕ್ಕೆ                           

(ನ್ಯೂಸ್ ಕಡಬ)newskadaba.com ಢಾಕಾ, ಆ.06. ನೆರೆಯ ಬಾಂಗ್ಲಾದೇಶದಲ್ಲಿನ ಹಿಂಸಾಚಾರ, ಪ್ರಕ್ಷುಬ್ಧತೆಗೆ ಬೆದರಿದ ಶೇಕ್ ಹಸೀನಾ ಜೀವ ಭಯದಲ್ಲಿ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ, ಭಾರತಕ್ಕೆ ಪರಾರಿಯಾದ ನಂತರ ಸೇನೆಯು ಮಧ್ಯಂತರ ಸರ್ಕಾರವನ್ನು ಸ್ಥಾಪಿಸಲಿದೆ ಎಂದು ಅಲ್ಲಿನ ಸೇನಾ ಮುಖ್ಯಸ್ಥ ವಾಕರ್-ಉಜ್-ಝಮಾನ್ ಘೋಷಿಸಿದ್ದಾರೆ. ರಾಜೀನಾಮೆಗೆ ಒತ್ತಡ ಹೆಚ್ಚಾದ ನಂತರ ಶೇಕ್ ಹಸೀನಾ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ, ದೇಶದಿಂದ ಪರಾರಿಯಾಗಿದ್ದಾರೆ. ಢಾಕಾ ತೊರೆದ ನಂತರ ಅವರು ಸಿ -130 ಸೇನಾ ವಿಮಾನದಲ್ಲಿ ಗಾಜಿಯಾಬಾದ್‌ನ ಹಿಂಡನ್ ವಾಯುನೆಲೆಗೆ ಬಂದಿಳಿದಿದ್ದಾರೆ.

ಜೀವ ಭಯದಲ್ಲಿ ಭಾರತಕ್ಕೆ ಶೇಕ್ ಹಸೀನಾ ಪರಾರಿ ಬಾಂಗ್ಲಾದೇಶ ಸೇನೆ ವಶಕ್ಕೆ                            Read More »

ಕರ್ನಾಟಕ, ರಾಷ್ಟ್ರೀಯ ನ್ಯೂಸ್

ಪುತ್ತೂರು: ಕೆರೆಗೆ ಹಾರಿ ಆಟೋ ಚಾಲಕ ಆತ್ಮಹತ್ಯೆ

(ನ್ಯೂಸ್ ಕಡಬ)newskadaba.com ಪುತ್ತೂರು, ಆ.06.  ಆಟೋ ಚಾಲಕನೋರ್ವ ಕೆರೆಗೆ ಹಾರಿ ಆತ್ಮಹತ್ಯೆಗೈದ ಘಟನೆ ಪುತ್ತೂರಿನಲ್ಲಿ ವರದಿಯಾಗಿದೆ. ಸಂಪ್ಯದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಮೃತಪಟ್ಟವರನ್ನು ಮಹಮ್ಮದ್(48) ಎಂದು ಗುರುತಿಸಲಾಗಿದೆ. ಆತ್ಮಹತ್ಯೆ ಗೆ ನಿಖರ ಕಾರಣ ತಿಳಿದುಬಂದಿಲ್ಲ ಎನ್ನಲಾಗಿದೆ. ಮೃತರು ಪತ್ನಿ ಹಾಗೂ ಮಕ್ಕಳನ್ನು ಅಗಲಿದ್ದಾರೆ ಎಂದು ವರದಿ ತಿಳಿಸಿದೆ.

ಪುತ್ತೂರು: ಕೆರೆಗೆ ಹಾರಿ ಆಟೋ ಚಾಲಕ ಆತ್ಮಹತ್ಯೆ Read More »

ಕರಾವಳಿ, ಕ್ರೈಮ್ ನ್ಯೂಸ್

ಸಿಂಹಧಾಮದ 18 ವರ್ಷದ ಆರ್ಯ ಹೆಸರಿನ ಸಿಂಹ ಸಾವು

(ನ್ಯೂಸ್ ಕಡಬ)newskadaba.com ಶಿವಮೊಗ್ಗ,ಆ.06. ತ್ಯಾವರೆಕೊಪ್ಪದ ಹುಲಿ ಸಿಂಹಧಾಮದಲ್ಲಿ ಆರ್ಯ ಹೆಸರಿನ ಸಿಂಹ ಮೃತಪಟ್ಟಿದೆ. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ 18 ವರ್ಷ ವಯಸ್ಸಿನ ಸಿಂಹ ವಯೋಸಹಜ ಕಾಯಿಲೆಯಿಂದ ಸಾವನ್ನಪ್ಪಿದೆ. ಆರ್ಯ ಕಳೆದ 3 ದಿನಗಳಿಂದ ಆಹಾರ ತ್ಯಜಿಸಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಸಿಬಂದಿಗಳು ಹುಲಿ ಸಿಂಹಧಾಮದಲ್ಲೇ ಆರ್ಯ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.

ಸಿಂಹಧಾಮದ 18 ವರ್ಷದ ಆರ್ಯ ಹೆಸರಿನ ಸಿಂಹ ಸಾವು Read More »

ಕರ್ನಾಟಕ

ವಯನಾಡು ಭೂಕುಸಿತ        ಸಂತ್ರಸ್ತರಿಗೆ 25 ಲಕ್ಷ ರೂ. ದೇಣಿಗೆ ನೀಡಿದ ಅಲ್ಲು ಅರ್ಜುನ್

(ನ್ಯೂಸ್ ಕಡಬ)newskadaba.com ತಿರುವನಂತಪುರಂ,ಆ.06. ಭೂಕುಸಿತದಿಂದ ವಯನಾಡು ಅಕ್ಷರಶಃ ನಲುಗಿ ಹೋಗಿದ್ದು, ನೂರಾರು ಮಂದಿ ಸಾವನ್ನಪ್ಪಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಈ ನಡುವೆ ತೆಲುಗಿನ ಸ್ಟಾರ್ ನಟ ಅಲ್ಲು ಅರ್ಜುನ್ ಸಂತ್ರಸ್ತರಿಗೆ ನೆರವಾಗಲು ಮುಂದಾಗಿದ್ದಾರೆ. ವಯನಾಡು ಭೂಕುಸಿತ ದುರಂತದಿಂದಾಗಿ ಸಮಕಷ್ಟದಲ್ಲಿರುವವರಿಗೆ ರಶ್ಮಿಕಾ ಮಂದಣ್ಣ, ಮೋಹನ್ ಲಾಲ್ ಅವರು ಸಹಾಯ ಮಾಡಿದ್ದಾರೆ. ಇದೀಗ ಅಲ್ಲು ಅರ್ಜುನ್ 25 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಈ ಕುರಿತು ಸ್ವತಃ ನಟ ಅಲ್ಲು ಅರ್ಜುನ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ವಯನಾಡು ಭೂಕುಸಿತ        ಸಂತ್ರಸ್ತರಿಗೆ 25 ಲಕ್ಷ ರೂ. ದೇಣಿಗೆ ನೀಡಿದ ಅಲ್ಲು ಅರ್ಜುನ್ Read More »

ಕರ್ನಾಟಕ

ಮಂಗಳೂರು – ಬೆಂಗಳೂರು ನಡುವಿನ ರೈಲು ಸಂಚಾರ ಆ.8ರವರೆಗೆ ರದ್ದು

(ನ್ಯೂಸ್ ಕಡಬ)newskadaba.com ಮಂಗಳೂರು,ಆ.06. ಸಕಲೇಶಪುರದ ಎಡಕುಮೇರಿ ಮತ್ತು ಕಡಗರಳ್ಳಿ ನಡುವಿನ ದೋಣಿಗಲ್‌ ನಲ್ಲಿ ಭೂಕುಸಿತದಿಂದ ಸ್ಥಗಿತಗೊಂಡಿರುವ ಮಂಗಳೂರು-ಬೆಂಗಳೂರು ನಡುವಿನ ರೈಲು ಸಂಚಾರ ಆಗಸ್ಟ್ 8ರ ನಂತರವೇ ಪುನರಾರಂಭಗೊಳ್ಳಲಿದೆ ಎಂದು ಮೈಸೂರು ರೈಲ್ವೆ ವಿಭಾಗ ಮಾಹಿತಿ ನೀಡಿದೆ. ಭಾರೀ ಭೂಕುಸಿತದಿಂದ ಹಳಿಯ ಮೇಲೆ ಮಣ್ಣು ಬಿದ್ದಿತ್ತು. ಪರಿಣಾಮ 12 ರೈಲುಗಳ ಸೇವೆಗಳನ್ನು ರದ್ದುಗೊಳಿಸಲಾಗಿದೆ. ಜೊತೆಗೆ ಕೆಲವು ರೈಲುಗಳ ಸಂಚಾರ ಮಾರ್ಗವನ್ನು ಬದಲಾವಣೆ ಮಾಡಲಾಗಿತ್ತು. ಘಟನಾ ಸ್ಥಳದ ಪಕ್ಕದಲ್ಲಿ ರಿಟೈನರ್ ವಾಲ್ ನಿರ್ಮಾಣ ಕಾರ್ಯವು ತ್ವರಿತ ಗತಿಯಲ್ಲಿ ಸಾಗುತ್ತಿದೆ. ಟ್ರ್ಯಾರಕ್

ಮಂಗಳೂರು – ಬೆಂಗಳೂರು ನಡುವಿನ ರೈಲು ಸಂಚಾರ ಆ.8ರವರೆಗೆ ರದ್ದು Read More »

ಕರಾವಳಿ
Scroll to Top