karnataka

ಸುಳ್ಯ :ವಿವಾಹಿತ ಮಹಿಳೆಯೊಂದಿಗೆ ಅನೈತಿಕ ಸಂಬಂಧ ➤ ಗೂಸ ತಿಂದ ಮುಖಂಡ

(ನ್ಯೂಸ್ ಕಡಬ) newskadaba.com ಸುಳ್ಯ, ಜು.21:  ವಿವಾಹಿತ ಮಹಿಳೆಯೊಂದಿಗೆ ಚೆಲ್ಲಾಟವಾಡುತ್ತಿದ್ದ ಸಮಯದಲ್ಲಿ ಪಕ್ಷದ ಮುಖಂಡನೋರ್ವ ಧರ್ಮದೇಟು ತಿಂದ ಘಟನೆ ಪೆರುವಾಜೆ ಗ್ರಾಮದ ಕುಂಡಡ್ಕದಿಂದ ವರದಿಯಾಗಿದೆ. ಸುಳ್ಯ ಶಾಸಕರ ಮಾಜಿ ಆಪ್ತ ಕಾರ್ಯದರ್ಶಿ ಎನ್ನಲಾದ ಹಾಗೂ ಪಕ್ಷವೊಂದರಲ್ಲಿ ಸಕ್ರಿಯವಾಗಿರುವ ವ್ಯಕ್ತಿಯೋರ್ವ ವಿವಾಹಿತ ಮಹಿಳೆಯೊಬ್ಬರ ಜತೆ ಇರುವುದನ್ನು ಕಂಡು ಆ ಮಹಿಳೆಯ ಪತಿಯ ಸಹೋದರ ಕೈಯಲ್ಲಿದ್ದ ದೊಣ್ಣೆಯಿಂದ ಅವರಿಗೆ ಬಾರಿಸಿದರೆಂದು ಗಾಯಗೊಂಡ ಆತ ಅಲ್ಲಿಂದ ಓಡಿ ತಪ್ಪಿಸಿಕೊಂಡರೆಂದು ಹೇಳಲಾಗಿದೆ.ಅನೈತಿಕ ಸಂಬಂಧದ ವಿರುದ್ಧ ಈ ಹಿಂದೆಯೂ ಹಲವು ಬಾರಿ ಇವರಿಗೆ ಎಚ್ಚರಿಕೆ […]

ಸುಳ್ಯ :ವಿವಾಹಿತ ಮಹಿಳೆಯೊಂದಿಗೆ ಅನೈತಿಕ ಸಂಬಂಧ ➤ ಗೂಸ ತಿಂದ ಮುಖಂಡ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಗರ್ಭಿಣಿಯರ ಚಿಕಿತ್ಸೆ ನೀಡದಿದ್ದರೆ ಕಠಿಣ ಕ್ರಮ ➤ ದ.ಕ ಉಸ್ತುವರಿ ಸಚಿವರಿಂದ ಎಚ್ಚರಿಕೆ

(ನ್ಯೂಸ್ ಕಡಬ) newskadaba.com ಮಂಗಳೂರು , ಜು.21:  ಖಾಸಗಿ ಆಸ್ಪತ್ರೆಗಳಲ್ಲಿ ಯಾವುದೇ ಸಂದರ್ಭದಲ್ಲಿ ಕೋವಿಡ್ ಸೋಂಕಿತರೆಂಬ ಕಾರಣಕ್ಕೆ ಗರ್ಭಿಣಿಯರಿಗೆ ಚಿಕಿತ್ಸೆ ನೀಡದೆ ಬೇರೆಡೆಗೆ ಕಳುಹಿಸುವಂತಿಲ್ಲ. ಹೆರಿಗೆ ವಿಚಾರದಲ್ಲಿ ಖಾಸಗೀ ಆಸ್ಪತ್ರೆಗಳು ಸತಾಯಿಸದೆ ಹೆರಿಗೆ ಮಾಡಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದ್ದಾರೆ. ಗರ್ಭಿಣಿಯರಿಗೆ ಖಾಸಗೀ ಆಸ್ಪತ್ರೆಗಳು ಚಿಕಿತ್ಸೆ ನೀಡಲು ಸತಾಯಿಸಿದರೆ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ವ್ಯವಸ್ಥಿತವಾಗಿ ಹೆರಿಗೆ ಮಾಡಿಸಲು ಆಯಾ ಆಸ್ಪತ್ರೆಗಳು ಸೂಕ್ತ ಸಿದ್ಧತೆ ಮಾಡಿಕೊಳ್ಳಬೇಕು.

ಗರ್ಭಿಣಿಯರ ಚಿಕಿತ್ಸೆ ನೀಡದಿದ್ದರೆ ಕಠಿಣ ಕ್ರಮ ➤ ದ.ಕ ಉಸ್ತುವರಿ ಸಚಿವರಿಂದ ಎಚ್ಚರಿಕೆ Read More »

ಕರಾವಳಿ, ಕರ್ನಾಟಕ

ಲಾಕ್ ಡೌನ್ ವಿಸ್ತರಣೆಯಿಲ್ಲ, ನೈಟ್ ಕರ್ಫ್ಯೂ ಮುಂದುವರಿಕೆ ➤ ವೈದ್ಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟನೆ

(ನ್ಯೂಸ್ ಕಡಬ) newskadaba.com ಬೆಂಗಳೂರು , ಜು.21:  ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಲಾಕ್‌ಡೌನ್‌ ವಿಸ್ತರಿಸದಿರಲು ಸಿಎಂ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಆದರೆ, ರಾಜ್ಯಾದ್ಯಂತ ನೈಟ್‌ ಕರ್ಫ್ಯೂ ಮುಂದುವರಿಯಲಿದೆ. ಬೆಂಗಳೂರಿನಲ್ಲಿ ಕೋವಿಡ್‌ ನಿಯಂತ್ರಣದ ಉಸ್ತುವಾರಿ ಸಚಿವರೊಂದಿಗೆ ಸಿಎಂ ಅವರು ಸೋಮವಾರ ಮ್ಯಾರಾಥಾನ್ ಸಭೆ ನಡೆಸಿದರು. ಪ್ರತಿ ವಲಯದ ಪರಿಸ್ಥಿತಿ,ಆಸ್ಪತ್ರೆ, ಕೋವಿಡ್‌ ಕೇರ್‌ ಸೆಂಟರ್‌ಗಳ ನಿರ್ವಹಣೆಗೆ ಖುದ್ದಾಗಿ ಮುತುವರ್ಜಿ ವಹಿಸಲಾಗಿದೆ ಎಂದು ಸಚಿವರುಗಳೂ ಮಾಹಿತಿ ನೀಡಿದರು. ಆಗ ಲಾಕ್‌ಡೌನ್‌ ವಿಸ್ತರಣೆ ಮಾಡದಿರುವ ನಿರ್ಧಾರ ತೆಗೆದುಕೊಳ್ಳಲಾಯಿತು.     ಲಾಕ್‌ಡೌನ್‌ ವಿಸ್ತರಣೆ

ಲಾಕ್ ಡೌನ್ ವಿಸ್ತರಣೆಯಿಲ್ಲ, ನೈಟ್ ಕರ್ಫ್ಯೂ ಮುಂದುವರಿಕೆ ➤ ವೈದ್ಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟನೆ Read More »

ಕರಾವಳಿ, ಕರ್ನಾಟಕ

ಸುಳ್ಯ : ಲಾಕ್ ಡೌನ್ ಮಧ್ಯೆಯೂ ಹೆಚ್ಚಿದ ಜನಸಂದಣಿ

(ನ್ಯೂಸ್ ಕಡಬ) newskadaba.com ಸುಳ್ಯ ,ಜು.20: ಜಿಲ್ಲೆಯಲ್ಲಿ ಲಾಕ್ ಡೌನ್ ಮಧ್ಯೆಯೂ ಸೋಮವಾರ ಸುಳ್ಯ ನಗರದಲ್ಲಿ ಹೆಚ್ಚಿನ ಜನಸಂದಣಿ ಕಂಡು ಬಂದಿತ್ತು. ಬೆಳಗ್ಗೆ 8 ಗಂಟೆಯಿಂದ 11 ಗಂಟೆಯ ತನಕ ಅಗತ್ಯ ವಸ್ತುಗಳ ಅಂಗಡಿಗಳು ತೆರೆದಿದ್ದರೂ ಲಾಕ್ ಡೌನ್ ಘೋಷಣೆಯ ಆರಂಭದ ದಿನಗಳಲ್ಲಿ ಜನಸಂದಣಿ ತೀರಾ ವಿರಳವಾಗಿತ್ತು. ಆದರೆ ಸೋಮವಾರ ಬೆಳಗ್ಗಿನಿಂದ 11 ಗಂಟೆಯ ತನಕ ಪೇಟೆಯಲ್ಲಿ ಜನ ಸಂದಣಿ ಅಧಿಕವಾಗಿತ್ತು.   ದಿನಸಿ, ತರಕಾರಿ ಅಂಗಡಿಗಳ ಮುಂದೆ ಮತ್ತು ಮೆಡಿಕಲ್ ಶಾಪ್ ಎದುರಿನಲ್ಲಿ ಜನ ದಟ್ಟಣೆ

ಸುಳ್ಯ : ಲಾಕ್ ಡೌನ್ ಮಧ್ಯೆಯೂ ಹೆಚ್ಚಿದ ಜನಸಂದಣಿ Read More »

ಕರಾವಳಿ, ಕರ್ನಾಟಕ

ಒಂದೇ ಮನೆಯ ಐವರಲ್ಲಿ ಸೋಂಕು ಪತ್ತೆ ➤ 13 ಅಂಗಡಿಗಳು ಸೀಲ್ ಡೌನ್

(ನ್ಯೂಸ್ ಕಡಬ) newskadaba.com ಬ್ರಹ್ಮಾವರ , ಜು.20: ಬಾರಕೂರು ರಥ ಬೀದಿಯಲ್ಲಿನ ಮನೆಯೊಂದರಲ್ಲಿ ವಾಸವಿರುವ ವ್ಯಕ್ತಿಯೋಬ್ಬರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿತ್ತು. ಒಂದೇ ಮನೆಯ ಐವರರಲ್ಲಿ ಸೋಂಕು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ  19 ಅಂಗಡಿಗಳನ್ನು ಸೀಲ್ ಡೌನ್ ಮಾಡಲಾಗಿದೆ. ಬ್ರಹ್ಮಾವರ ತಾಲೂಕಿನ ಕೋಡಿಬೆಂಗ್ರೆ ನಿವಾಸಿ ವೃದ್ದೆಯೋರ್ವರು ಮಣಿಪಾಲದ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಗೆ ಚಿಕಿತ್ಸೆ ಪಡೆಯುತ್ತಿದ್ದರು. ಅವರು ಗುಣಮುಖರಾಗಿ ಸಂಬಂಧಿಕರ ಮನೆಗೆ ಬರುತ್ತಿದ್ದಂತೆಯೇ ಅವರಲ್ಲಿ ಕೊರೊನಾ ಲಕ್ಷಣಗಳು ಕಂಡು ಬಂದಿದ್ದು, ಗಂಟಲು ದ್ರವ ಪರೀಕ್ಷೆಗೆ ಒಳಪಡಿಸಿದಾಗ ಕೊರೊನಾ ಇರುವುದು ದೃಢಪಟ್ಟಿದೆ.

ಒಂದೇ ಮನೆಯ ಐವರಲ್ಲಿ ಸೋಂಕು ಪತ್ತೆ ➤ 13 ಅಂಗಡಿಗಳು ಸೀಲ್ ಡೌನ್ Read More »

ಕರಾವಳಿ, ಕರ್ನಾಟಕ

ಮುಂದಿನ ಮೂರು ದಿನವೂ ಕರ್ನಾಟಕ ರಾಜ್ಯಾದ್ಯಂತ ಮಳೆ ➤ ಹವಾಮಾನ ಮುನ್ಸೂಚನೆ

(ನ್ಯೂಸ್ ಕಡಬ) newskadaba.com ಬೆಂಗಳೂರು,ಜು.20:  ರಾಜ್ಯಾದ್ಯಂತ ಮಳೆಯ ಆರ್ಭಟ ಮುಂದುವರಿಯಲಿದೆ. ಇವತ್ತೂ ಸೇರಿ ಇನ್ನೂ 4 ದಿನ ಮಳೆಯ ನರ್ತನ ಮುಂದುವರಿಯಲಿದೆ. ಜುಲೈ 23ರವರೆಗೂ ಐಎಂಡಿಬಿಯ ಹವಾಮಾನ ಮುನ್ಸೂಚನೆಯ ಪ್ರಕಾರ ಬಹುತೇಕ ಎಲ್ಲಾ ಜಿಲ್ಲೆಗಳಲ್ಲೂ ಮಳೆಯಾಗಲಿದೆ. ಹಲವು ದಿನಗಳಿಂದಲೂ ರಾಜ್ಯಾದ್ಯಂತ ಮಳೆಯಾಗುತ್ತಿದೆ. ಅದರಲ್ಲೂ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗಿದೆ. ಇಲ್ಲಿ ಮುಂದಿನ ಮೂರು ದಿನಗಳೂ ಭರ್ಜರಿ ಮಳೆ ಮುಂದುವರಿಯಲಿದೆ. ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಕೋಲಾರ ಜಿಲ್ಲೆಗಳಲ್ಲಿ ಇವತ್ತು ದೊಡ್ಡ ಪ್ರಮಾಣದಲ್ಲಿ

ಮುಂದಿನ ಮೂರು ದಿನವೂ ಕರ್ನಾಟಕ ರಾಜ್ಯಾದ್ಯಂತ ಮಳೆ ➤ ಹವಾಮಾನ ಮುನ್ಸೂಚನೆ Read More »

ಕರಾವಳಿ, ಕರ್ನಾಟಕ

ಇಂದಿನಿಂದ ದೂರದರ್ಶನ ಚಂದನ ವಾಹಿನಿಯಲ್ಲಿ ಇ-ಕ್ಲಾಸ್ ಕಲಿಕಾ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಬೆಂಗಳೂರು,ಜು.20:  ಕೋವಿಡ್ ಸಂದರ್ಭದಲ್ಲಿ ಮಕ್ಕಳ ನಿರಂತರ ಕಲಿಕೆಗೆ ಯಾವುದೇ ಅಡಚಣೆಯುಂಟಾಗದಂತೆ ಕಲಿಕೆಯನ್ನು ಮುಂದುವರೆಸಲು, ಮಕ್ಕಳು ಮನೆಯಲ್ಲಿಯೇ ಇದ್ದರೂ ಕಲಿಕೆಯಲ್ಲಿ ಭಾಗವಹಿಸುವಂತೆ ಪ್ರೇರೇಪಿಸಲು ಇಂದಿನಿಂದ ಅಂದರೆ ಸೋಮವಾರದಿಂದ ದೂರದರ್ಶನದ ಚಂದನ ವಾಹಿನಿಯಲ್ಲಿ ಇ ಕ್ಲಾಸ್ ಕಲಿಕಾ ಕಾರ್ಯಕ್ರಮ ಆರಂಭಗೊಳ್ಳಲಿದೆ. ಇಂದಿನಿಂದ 20 ದಿನಗಳ ಅವಧಿಗೆ 8 ರಿಂದ 10ನೇ ತರಗತಿಯ ಮಕ್ಕಳಿಗೆ ಪ್ರಥಮ ಭಾಷೆ ಕನ್ನಡ, ಇಂಗ್ಲೀಷ್, ಸಂಸ್ಕೃತ, ಉರ್ದು, ದ್ವಿತೀಯ ಭಾಷೆ ಇಂಗ್ಲೀಷ್, ತೃತೀಯ ಭಾಷೆ ಹಿಂದಿ, ಕನ್ನಡ ಮಾಧ್ಯಮದಲ್ಲಿ ಗಣಿತ, ವಿಜ್ಞಾನ

ಇಂದಿನಿಂದ ದೂರದರ್ಶನ ಚಂದನ ವಾಹಿನಿಯಲ್ಲಿ ಇ-ಕ್ಲಾಸ್ ಕಲಿಕಾ ಕಾರ್ಯಕ್ರಮ Read More »

ಕರಾವಳಿ, ಕರ್ನಾಟಕ

ದ.ಕ. ಜಿಲ್ಲೆಯಲ್ಲಿ ಕೊರೊನಾಗೆ ಇಂದು ಐವರು ಬಲಿ

(ನ್ಯೂಸ್ ಕಡಬ) newskadaba.com ಮಂಗಳೂರು, ಜು.20: ಕರಾವಳಿಯಲ್ಲಿ ಕೊರೋನಾ ಭೀತಿ ಮಿತಿಮೀರುತ್ತಿದೆ. ದಿಕಳೆದಂತೆ ಸೋಂಕಿತರ ಸಂಖ್ಯೆಯ ಜೊತೆಗೆ ಕೊವೀಡ್ ನಿಂದ ಮೃತಪಡುತ್ತಿರುವವರ ಸಂಖ್ಯೆಯು ಹೆಚ್ಚುತ್ತಲೇ ಇದೆ. ಇಂದು ದ.ಕ. ಜಿಲ್ಲೆಯಲ್ಲಿ ಮತ್ತೆ ಐವರು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಮಂಗಳೂರು ಮೂಲದ 55 ವರ್ಷದ ವ್ಯಕ್ತಿ ಕೊರೊನಾಗೆ ಬಲಿಯಾಗಿದ್ದು, ಜುಲೈ 15ರಂದು ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದರು. ಮಂಗಳೂರು ನಿವಾಸಿಯಾಗಿರುವ 63 ವರ್ಷದ ವ್ಯಕ್ತಿ ಸೋಂಕಿಗೆ ಬಲಿಯಾಗಿದ್ದಾರೆ. ಇವರು ಜುಲೈ 18ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು, ಇನ್ನು ಬೆಳ್ತಂಗಡಿ ನಿವಾಸಿ

ದ.ಕ. ಜಿಲ್ಲೆಯಲ್ಲಿ ಕೊರೊನಾಗೆ ಇಂದು ಐವರು ಬಲಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಆಟಿ ಅಮವಾಸ್ಯೆ : ಬೆರಳೆಣಿಕೆ ಭಕ್ತರಿಂದ ಉಪ್ಪಿನಂಗಡಿಯಲ್ಲಿ ತೀರ್ಥಸ್ನಾನ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ,ಜು.20: ಕೊರಾನಾ ಲಾಕ್ ಡೌನ್ ಕಾರಣದಿಂದ ನೇತ್ರಾವತಿ ಹಾಗೂ ಕುಮಾರಧಾರ ನದಿ ಸಂಗಮ ಸ್ಥಳದಲ್ಲಿ ಆಟಿ ಅವiವಾಸ್ಯೆ ಪುಣ್ಯ ತೀರ್ಥ ಸ್ನಾನಕ್ಕೆ ಈ ವರುಷ ಅತೀ ಕಡಿಮೆ ಪ್ರಮಾಣದಲ್ಲಿ ಭಕ್ತರು ಆಗಮಿಸಿ ತೀಥ್ಸ್ನಾನ ಮಾಡಿದರು.   ಲಾಕ್ಡೌನ್ ಕಾರಣದಿಂದ ದೇವಳದ ವತಿಯಿಂದ ಯಾವುದೇ ವ್ಯವಸ್ಥೆಗಳು ಇಲ್ಲದಿದ್ದರೂ ಕಡಿಮೆ ಸಂಖ್ಯೆಯಲ್ಲಿ ಶ್ರದ್ದಾ ಭಕ್ತಿಯಿಂದ, ಭಕ್ತಾದಿಗಳು ನದಿಯಲ್ಲಿ ತೀರ್ಥ ಸ್ನಾನ ಮಾಡಿ ಆಟಿ ಅಮಾಸಾಸ್ಯೆ ಪಾರಂಪರಿಕ ಪದ್ದತಿಯಂತೆ ನವ ದಾನ್ಯಗಳನ್ನ ಗಂಗೆಗೆ ಅರ್ಪಿಸಿ, ಗತಿಸಿದ ಹಿರಿಯರಿಗೆ

ಆಟಿ ಅಮವಾಸ್ಯೆ : ಬೆರಳೆಣಿಕೆ ಭಕ್ತರಿಂದ ಉಪ್ಪಿನಂಗಡಿಯಲ್ಲಿ ತೀರ್ಥಸ್ನಾನ Read More »

ಕರಾವಳಿ, ಕರ್ನಾಟಕ

ನಟ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಗೂ ಕೊವಿಡ್​-19 ದೃಢ

(ನ್ಯೂಸ್ ಕಡಬ) newskadaba.com ಬೆಂಗಳೂರು ಜು.20: ನಟ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಗೂ ಕೂಡ ಕೊರೊನಾ ಸೋಂಕು ತಗುಲಿದೆ.ಐಶ್ವರ್ಯಾ ಅರ್ಜುನ್ ಸರ್ಜಾ ಅವರು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಈ ವಿಷಯವನ್ನು ಬರೆದುಕೊಂಡಿದ್ದಾರೆ. ಇತ್ತೀಚೆಗೆ ಕೊವಿಡ್​-19 ಟೆಸ್ಟ್​ಗೆ ಒಳಗಾಗಿದ್ದೆ. ಸೋಂಕು ತಗುಲಿದ್ದು ದೃಢಪಟ್ಟಿದೆ. ಮನೆಯಲ್ಲೇ ಕ್ವಾರಂಟೈನ್ ಆಗಿದ್ದೇನೆ. ವೃತ್ತಿಪರ ವೈದ್ಯಕೀಯ ತಂಡದ ಸಲಹೆ ಮೇರೆಗೆ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದೇನೆ. ಎಲ್ಲರೀತಿಯ ಮುನ್ನೆಚ್ಚರಿಕೆ ಕ್ರಮವನ್ನೂ ವಹಿಸಿದ್ದೇನೆ. ಕಳೆದ ಕೆಲವು ದಿನಗಳಿಂದ ನನ್ನ ಸಂಪರ್ಕಕ್ಕೆ ಬಂದವರು ಎಲ್ಲರೂ ಕೊವಿಡ್​-19 ಟೆಸ್ಟ್​ಗೆ ಒಳಗಾಗಿ. ಕಾಳಜಿ ವಹಿಸಿ,

ನಟ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಗೂ ಕೊವಿಡ್​-19 ದೃಢ Read More »

ಕರಾವಳಿ, ಕರ್ನಾಟಕ
Scroll to Top