karnataka

ಹಳೆಯಂಗಡಿ ಕಾಲು ಜಾರಿ ಬಾವಿಗೆ ಬಿದ್ದು ವ್ಯಕ್ತಿ ಮೃತ್ಯು

(ನ್ಯೂಸ್ ಕಡಬ) newskadaba.com.ಹಳೆಯಂಗಡಿ,ಆ.1:  ಪಡುಪಣಂಬೂರು ಗ್ರಾಮಪಂಚಾಯತ್ ವ್ಯಾಪ್ತಿಯ  ಕೆರೆಕಾಡು ಗ್ರಾಮದ ವಿಶ್ವನಾಥ್ ಬಿ ದೇವಾಡಿಗ (36) ಇವರು ತಮ್ಮ ಮನೆಯ ಹತ್ತಿರ ಇರುವ ಆವರಣವಿಲ್ಲದ ಬಾವಿಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ ಘಟನೆ ಇಂದು ಬೆಳಿಗ್ಗೆ ನಡೆದಿದೆ. ರಾತ್ರಿ ಸ್ಥಳೀಯ ಭಜನ ಮಂದಿರದಲ್ಲಿ ವರಮಹಾಲಕ್ಷ್ಮಿ ಪೂಜೆಯ ಕಾರ್ಯಕ್ರಮವನ್ನು ಮುಗಿಸಿಕೊಂಡು ಬರುತ್ತಿದ್ದಾಗ ಮನೆ ಹತ್ತಿರವಿದ್ದ ಬಾವಿಗೆ ಬಿದ್ದಿರಬಹುದೆಂದು ಸಂಶಯಿಸಲಾಗಿದೆ. ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಳೆಯಂಗಡಿ ಕಾಲು ಜಾರಿ ಬಾವಿಗೆ ಬಿದ್ದು ವ್ಯಕ್ತಿ ಮೃತ್ಯು Read More »

ಕರಾವಳಿ

ಮಂಗಳೂರಿನ ಸೂಸೈಡ್ ಬ್ರಿಡ್ಜ್​ಗೆ ಕೊನೆಗೂ ತಡೆಗೋಡೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆ 01: ಮಂಗಳೂರಿನ ಸೂಸೈಡ್ ಬ್ರಿಡ್ಜ್ ಎಂದೇ ಕುಖ್ಯಾತಿ ಗಳಿಸಿದ ಮಂಗಳೂರು-ತೊಕ್ಕೊಟ್ಟು ನಡುವಿನ ನೇತ್ರಾವತಿ ಸೇತುವೆಗೆ ಕೊನೆಗೂ ತಡೆಬೇಲಿ ಹಾಕಲಾಗಿದೆ. ಬಹುಕೋಟಿ ಉದ್ಯಮಿ, ಕೆಫೆ ಕಾಫಿ ಡೇ ಮಾಲೀಕ ವಿ.ಜಿ. ಸಿದ್ದಾರ್ಥ್ ಆತ್ಮಹತ್ಯೆ ಮಾಡಿಕೊಂಡಿದ್ದ ಸೇತುವೆಗೆ ತಡೆಬೇಲಿ ಭಾಗ್ಯ ಒದಗಿಬಂದಿದೆ. ಸೇತುವೆಯ ಉದ್ದಕ್ಕೂ ರಕ್ಷಣಾ ಬೇಲಿ ಅಳವಡಿಸುವ ಕಾರ್ಯ ಭರದಿಂದ ಸಾಗಿದೆ.ಕೆಫೆ ಕಾಫಿ ಡೇ ಸಂಸ್ಥಾಪಕ ವಿ.ಜಿ. ಸಿದ್ದಾರ್ಥ್ ಆತ್ಮಹತ್ಯೆ ಮಾಡಿಕೊಂಡು ಇಂದಿಗೆ ಒಂದು ವರ್ಷ ಕಳೆದಿದೆ.      

ಮಂಗಳೂರಿನ ಸೂಸೈಡ್ ಬ್ರಿಡ್ಜ್​ಗೆ ಕೊನೆಗೂ ತಡೆಗೋಡೆ Read More »

ಕರಾವಳಿ, ಕರ್ನಾಟಕ

ಸ್ಕೂಟರ್- ಕಾರು ಡಿಕ್ಕಿ ➤ಯುವಕ ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com.ಉಡುಪಿ,ಆ.1: ದ್ವಿಚಕ್ರ ವಾಹನ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಸ್ಕೂಟರ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಶುಕ್ರವಾರ ತಡರಾತ್ರಿ ಉಡುಪಿಯ ಬ್ರಹ್ಮಾವರ ಸಮೀಪದ ಕೆಜಿ ರೋಡ್ ಬಳಿ ನಡೆದಿದೆ. ಮೃತ ಯುವಕನ್ನು ಗರಡಿ ಮಜಲ್ ನಿವಾಸಿ ಪ್ರವೀಣ್ (24) ಎಂದು ಗುರುತಿಸಲಾಗಿದೆ. ದ್ವಿಚಕ್ರ ಸವಾರ ಡಿವೈಡರ್ ಮೇಲಿನಿಂದ ರಸ್ತೆ ದಾಟಲು ಪ್ರಯತ್ನಿಸುತ್ತಿದ್ದ ವೇಳೆ ಮತ್ತೊಂದು ಬದಿಯಲ್ಲಿ ಬಂದ ಬೆಲೋನಾ ಕಾರು ಅಚಾನಕ್ ಆಗಿ ಢಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಸ್ಕೂಟರ್ ಸಂಪೂರ್ಣ

ಸ್ಕೂಟರ್- ಕಾರು ಡಿಕ್ಕಿ ➤ಯುವಕ ಸ್ಥಳದಲ್ಲೇ ಮೃತ್ಯು Read More »

ಕರಾವಳಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  ಒಂದೇ ವಾರದಲ್ಲಿ ಕೊರೊನಾಗೆ 50 ಸಾವು ➤ 1315 ಪಾಸಿಟಿವ್ ಪ್ರಕರಣ

(ನ್ಯೂಸ್ ಕಡಬ) newskadaba.com ಮಂಗಳೂರು: ಆ.01.,ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಕಳೆದ ಒಂದು ವಾರದಲ್ಲಿ ಜಿಲ್ಲೆಯಲ್ಲಿ 1315 ಪಾಸಿಟಿವ್ ಕೇಸ್ ದೃಢಪಟ್ಟಿದೆ. ವಾರದಲ್ಲಿ ಪ್ರತಿ ದಿನ ಸರಾಸರಿ 150 ಪಾಸಿಟಿವ್ ಪ್ರಕರಣ ಹಾಗೂ ಒಂದೇ ವಾರದ ಅವಧಿಯಲ್ಲಿ 50 ಮಂದಿ ಕೊರೊನಾ ಪೀಡಿತರಾಗಿ ಮೃತಪಟ್ಟಿದ್ದಾರೆ. ಜಿಲ್ಲಾಡಳಿತ ನೀಡಿರುವ ಮಾಹಿತಿಯಂತೆ ಜು.23 ರಿಂದ ಜು.29 ರವರೆಗೆ 1315 ಕೊರೊನಾ ದೃಢಪಟ್ಟಿದ್ದು ಈ ಪೈಕಿ 383 ಮಂದಿಗೆ ಕೊರೊನಾ ಹೇಗೆ ತಗುಲಿದೆ ಎಂದೇ ತಿಳಿದುಬಂದಿಲ್ಲ. ಸೋಂಕಿತರ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  ಒಂದೇ ವಾರದಲ್ಲಿ ಕೊರೊನಾಗೆ 50 ಸಾವು ➤ 1315 ಪಾಸಿಟಿವ್ ಪ್ರಕರಣ Read More »

ಕರಾವಳಿ

ಬೆಳ್ತಂಗಡಿ : ಆಶಾ ಕಾರ್ಯಕರ್ತೆ ಮೇಲೆ ಪತಿಯಿಂದಲೇ ಹಲ್ಲೆ

(ನ್ಯೂಸ್ ಕಡಬ) newskadaba.com  ಬೆಳ್ತಂಗಡಿ, ಆ.01: ಕೊವೀಡ್ -19 ಹಿನ್ನಲೆಯಲ್ಲಿ ಆರೋಗ್ಯ ಇಲಾಖೆಯ ಆದೇಶದಂತೆ ಸರ್ವೆಗೆ ಹೋಗುತ್ತಿದ್ದ ಆಶಾ ಕಾರ್ಯಕರ್ತೆ ಯ ಮೇಲೆ ಅವರ ಪತಿಯೇ ಹಲ್ಲೆ ನಡೆಸಿದ ಘಟನೆ ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದ ಪೇಲತ್ತಳಿಕೆಯಲ್ಲಿ ನಡೆದಿದೆ. ಪುದುವೆಟ್ಟು ಗ್ರಾಮದ ಅರಸೋಲಿಗೆ ನೆರೋಳುಪಳಿಕೆ ನಿವಾಸಿ ಆಶಾ ಕಾರ್ಯಕರ್ತೆ ಶ್ರೀ ಮತಿ ಭವಾನಿ ಹಲ್ಲೆಗೊಳಗಾಗಿದ್ದು, ತಲೆಗೆ ಗಂಭೀರಾ ಗಾಯಗೊಂಡು ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳಿಯ ಗ್ರಾಮದ ಗೇರು ಕಟ್ಟೆ ಬಾಕಿಮಾರು ನಿವಾಸಿ ಸುರೇಶ್ ಸುರೇಶ್ ಹಲ್ಲೆ ನಡೆಸಿದವರೆಂದು

ಬೆಳ್ತಂಗಡಿ : ಆಶಾ ಕಾರ್ಯಕರ್ತೆ ಮೇಲೆ ಪತಿಯಿಂದಲೇ ಹಲ್ಲೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಉಡುಪಿ ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣ➤ ಆರೋಪಿ ನಿರಂಜನ್ ಭಟ್ ಜಾಮೀನು ಅರ್ಜಿ ಹೈಕೋರ್ಟ್‍ನಲ್ಲಿ ತಿರಸ್ಕøತ

(ನ್ಯೂಸ್ ಕಡಬ) newskadaba.com.ಉಡುಪಿ ,ಆ.1: ಉಡುಪಿ ಮತ್ತು ದುಬೈನಲ್ಲಿ ಉದ್ಯಮಮಾಡಿಕೊಂಡಿದ್ದ ಕರಾವಳಿಯ ಎನ್‍ಆರ್‍ಐ ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಧಿಸಿದಂತೆ. ಆರೋಪಿ ನಿರಂಜನ ಭಟ್ ಹೈಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿ ತಿರಸ್ಕೃತಗೊಂಡಿದೆ. ನಾಲ್ಕು ವರ್ಷಗಳ ಹಿಂದೆ ನಡೆದ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ನಿರಂಜನ್ ಭಟ್ 2019ರ ಅ.28 ರಂದು ಸೆಶನ್ಸ್ ಕೋರ್ಟ್ ನಲ್ಲಿ ಜಾಮೀನು ಅರ್ಜಿ ತಿರಸ್ಕೃತಗೊಂಡಿತ್ತು. ಅನಂತರ 2020 ರ ಫೆ.10ರಂದು ಆರೋಪಿಯೂ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಜು .27 ರಂದು ಆ

ಉಡುಪಿ ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣ➤ ಆರೋಪಿ ನಿರಂಜನ್ ಭಟ್ ಜಾಮೀನು ಅರ್ಜಿ ಹೈಕೋರ್ಟ್‍ನಲ್ಲಿ ತಿರಸ್ಕøತ Read More »

ಕರಾವಳಿ

ಮಡಿಕೇರಿಯಲ್ಲಿ ಅಕ್ಟೀವಾ – ಕಾರು ನಡುವೆ ಅಪಘಾತ ➤ ಅಂಬಿಕಾ ವಿದ್ಯಾರ್ಥಿ ಶ್ರೇಯಸ್ ಮೃತ್ಯು

(ನ್ಯೂಸ್ ಕಡಬ) newskadaba.com ಕೊಡಗು, ಅ.01: ಸಿಇಟಿ ಪರೀಕ್ಷೆ ಬರೆದು ವಾಪಾಸ್ ಆಗುತ್ತಿದ್ದ ವೇಳೆ ರಸ್ತೆ ಅಪಘಾತದಲ್ಲಿ ಪುತ್ತೂರು ಅಂಬಿಕಾ ವಿದ್ಯಾಸಂಸ್ಥೆಯ ಪ್ರತಿಭಾನ್ವಿತ ವಿದ್ಯಾರ್ಥಿ ಮೃತಪಟ್ಟ ಘಟನೆ ಶುಕ್ರವಾರ ಮಡಿಕೇರಿ ನಗರದ ಚೈನ್ ಗೇಟ್ ಬಳಿ ನಡೆದಿದೆ.     ಪುತ್ತೂರು ಪ್ರತಿಷ್ಠಿತ ಅಂಬಿಕಾ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಶ್ರೇಯಸ್, ಕೋವಿಡ್ ಕಾರಣದಿಂದ ಮಡಿಕೇರಿಯಲ್ಲೇ ಸಿಇಟಿ ಪರೀಕ್ಷೆ ಬರೆದು ತನ್ನ ಸೋಮವಾರಪೇಟೆ ತಾಲೂಕಿನ ನಂಜರಾಯಪಟ್ಟಣದ ಮನೆಗೆ ವಾಪಸ್ ಆಗುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಶ್ರೇಯಸ್ ಜೊತೆಗಿದ್ದ ಮತ್ತೊಬ್ಬ ವಿದ್ಯಾರ್ಥಿ

ಮಡಿಕೇರಿಯಲ್ಲಿ ಅಕ್ಟೀವಾ – ಕಾರು ನಡುವೆ ಅಪಘಾತ ➤ ಅಂಬಿಕಾ ವಿದ್ಯಾರ್ಥಿ ಶ್ರೇಯಸ್ ಮೃತ್ಯು Read More »

ಕರಾವಳಿ, ಕರ್ನಾಟಕ

ಇಂದು ಕಡಬದಲ್ಲಿ ಉಚಿತ ಕೊವೀಡ್ -19 ಪರೀಕ್ಷೆ

(ನ್ಯೂಸ್ ಕಡಬ) newskadaba.com ಕಡಬ ಅ.01: ಇಂದು ಕಡಬದ ಸರಕಾರಿ ಮಾದರಿ ಶಾಲೆಯಲ್ಲಿ ಬೆಳಗ್ಗೆ ಗಂಟೆ 10 ರಿಂದ ಕೊವೀಡ್ -19 ಪರೀಕ್ಷೆ ನಡೆಯಲಿದೆ.   ಉಚಿತ ಕೊರೋನಾ ಪರೀಕ್ಷೆ ನಡೆಯಲಿದ್ದು, ಎಲ್ಲರೂ ಈ ಕೊರೋನಾ ಪರೀಕ್ಷೆಯ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳುವಂತೆ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ .    

ಇಂದು ಕಡಬದಲ್ಲಿ ಉಚಿತ ಕೊವೀಡ್ -19 ಪರೀಕ್ಷೆ Read More »

ಕರಾವಳಿ, ಕರ್ನಾಟಕ

ಕಡಬದಲ್ಲಿ 17 ಮಂದಿಯಲ್ಲಿ ಕೊರೋನಾ ದೃಢ ➤ ತಾಲೂಕು ಆರೋಗ್ಯ ಇಲಾಖಾ ವರದಿ

(ನ್ಯೂಸ್ ಕಡಬ) newskadaba.com ಪುತ್ತೂರು, ಜು.31: ಪುತ್ತೂರು ಮತ್ತು ಕಡಬ ತಾಲೂಕುಗಳಲ್ಲಿ ಆ.1ರಂದು ತಾಲೂಕು ಆರೋಗ್ಯ ಇಲಾಖೆಯ ವರದಿಯಂತೆ 17 ಮಂದಿಯಲ್ಲಿ ಕೊರೋನಾ ದೃಢಪಟ್ಟಿರುವ ಕುರಿತು ವರದಿಯಾಗಿದೆ. ಜು.31ಕ್ಕೆ ಕೋಡಿಂಬಾಡಿ ಮತ್ತು ನೆಲ್ಯಾಡಿಯಲ್ಲಿ ರ್‍ಯಾಪಿಡ್ ಆಂಟಿಜನ್ ಪರೀಕ್ಷೆ ಮಾಡಲಾಗಿತ್ತು. ಆ ಪರೀಕ್ಷೆಯಲ್ಲಿ ಕೊರೋನಾ ದೃಢಗೊಂಡವರ ಪಟ್ಟಿ ಸೇರಿ ಮತ್ತು ಸರಕಾರಿ ಹಾಗೂ ಮಂಗಳೂರು ಆಸ್ಪತ್ರೆಯಲ್ಲಿ ದೃಢಗೊಂಡ ಕೊರೋನಾ ಪ್ರಕರಣಗಳ ಮಾಹಿತಿ ನೀಡಲಾಗಿದೆ. ಬೆಳ್ಳಿಪ್ಪಾಡಿ ಗ್ರಾಮದ ಒಂದೇ ಮನೆಯ 48 ವರ್ಷದ ವ್ಯಕ್ತಿ, 38 ವರ್ಷದ ಮಹಿಳೆ, ಕೊಡಿಪ್ಪಾಡಿ

ಕಡಬದಲ್ಲಿ 17 ಮಂದಿಯಲ್ಲಿ ಕೊರೋನಾ ದೃಢ ➤ ತಾಲೂಕು ಆರೋಗ್ಯ ಇಲಾಖಾ ವರದಿ Read More »

ಕರಾವಳಿ, ಕರ್ನಾಟಕ

ಮಂಗಳೂರು: ಕರಾವಳಿಯಾದ್ಯಂತ ಇಂದು ಸರಳ ಬಕ್ರೀದ್‌ ಆಚರಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜು.31:  ಮುಸ್ಲಿಮ್‌ ಸಮುದಾಯದ ಪ್ರಮುಖ ಹಬ್ಬವಾದ ಬಕ್ರೀದ್‌ನ್ನು ಕರಾವಳಿಯಲ್ಲಿ ಆಚರಿಸಲಾಯಿತು.  ಈ ವರ್ಷ ಕೊರೊನಾ ಕಾರಣದಿಂದ ಸರಳವಾಗಿ ಆಚರಿಸಲಾಗುತ್ತಿದೆ. ಐವರ್ನಾಡಿನ ಮೊಹಿಯುದ್ದೀನ್ ಜುಮ್ಮಾ ಮಸೀದಿ, ಅತಿಕರಮಜಲು ಜಮ್ಮಾ ಮಸೀದಿಯಲ್ಲು ಸಾಮಾಜಿಕ ಅಂತರ ಕಾಯ್ದುಕೊಂಡು ಸರಳವಾಗಿ ಬಕ್ರೀದ್ ಆಚರಣೆಯನ್ನ ಮಾಡಲಾಯಿತು. ಬಕ್ರೀದ್‌ ಹಬ್ಬವನ್ನು ಪ್ರವಾದಿ ಇಬ್ರಾಹಿಂ (ಅ) ಮತ್ತು ಅವರ ಪುತ್ರ ಇಸ್ಮಾಯಿಲ್‌ (ಅ) ಅವರ ತ್ಯಾಗ ಮತ್ತು ಬಲಿದಾನದ ಸಂಕೇತವಾಗಿ ಆಚರಿಸಲಾಗುತ್ತಿದ್ದು ಈ ವರ್ಷ ಕೊರೊನಾ ಕಾರಣದಿಂದಾಗಿ ಈದ್ಗಾ ಮಸೀದಿ, ಝೀನತ್

ಮಂಗಳೂರು: ಕರಾವಳಿಯಾದ್ಯಂತ ಇಂದು ಸರಳ ಬಕ್ರೀದ್‌ ಆಚರಣೆ Read More »

ಕರಾವಳಿ
Scroll to Top