karnataka

ಮಂಗಳೂರಿನಲ್ಲಿ ಒಂದು ವೈಶಾಚಿಕ ಕೃತ್ಯ ➤ ಗುಂಡು ಹೊಡೆದು ಬೀದಿನಾಯಿ ಹತ್ಯೆ

(ನ್ಯೂಸ್ ಕಡಬ) newskadaba,ಮಂಗಳೂರು ಜು.02: ಬೀದಿನಾಯಿಯೊಂದನ್ನು ಅಮಾನವೀಯವಾಗಿ ಗುಂಡು ಹೊಡೆದು ಹತ್ಯೆ ಮಾಡಿರುವ ಹೇಯ ಕೃತ್ಯವೊಂದು ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಇತ್ತೀಚೆಗೆ ನಾಯಿಯನ್ನು ಬೈಕ್ ಗೆ ಕಟ್ಟಿ ಅಮಾನವೀಯವಾಗಿ ಎಳೆದೊಯ್ದ ಎರಡು ಪ್ರಕರಣಗಳು ಮಂಗಳೂರಿಗೆ ಕಪ್ಪು ಚುಕ್ಕೆಯಾಗಿ ಪರಿಣಮಿಸಿತ್ತು. ಅದರ ಬೆನ್ನಲ್ಲೇ ನಡೆದ ಈ ಕೃತ್ಯದಿಂದ ಎಲ್ಲರೂ ತಲೆತಗ್ಗಿಸುವಂತಾಗಿದೆ. ಮಂಗಳೂರು ನಗರದ ಶಿವಭಾಗ್‍ನ‌ ಬಳಿಯಿರುವ ಆಭರಣ ಜ್ಯುವೆಲ್ಲರ್ಸ್ ಮಳಿಗೆಯ ಹಿಂಭಾಗದ ರಸ್ತೆಯಲ್ಲಿ ಗುಂಡು ಹೊಡೆಸಿಕೊಂಡು ಬೀದಿ ನಾಯಿಯೊಂದನ್ನು ಸತ್ತು ಬಿದ್ದಿತ್ತು. ತಕ್ಷಣ ಸ್ಥಳಕ್ಕೆ ಭೇಟಿ ನೀಡಿರುವ ಅನಿಮಲ್ […]

ಮಂಗಳೂರಿನಲ್ಲಿ ಒಂದು ವೈಶಾಚಿಕ ಕೃತ್ಯ ➤ ಗುಂಡು ಹೊಡೆದು ಬೀದಿನಾಯಿ ಹತ್ಯೆ Read More »

ಕರಾವಳಿ, ಕ್ರೈಮ್ ನ್ಯೂಸ್

ತುಳುಭಾಷೆಯ ಪ್ರಪ್ರಥಮ ಆನ್ಲೈನ್ ಡಿಕ್ಷನರಿ ‘ಕೊಪ್ಪರಿಗೆ’ ಇಂದು ಅನಾವರಣ

(ನ್ಯೂಸ್ ಕಡಬ) newskadaba,ಮಂಗಳೂರು ಜು.02: ತುಳುಭಾಷೆಯ ಪ್ರಪ್ರಥಮ ಆನ್ಲೈನ್ ಡಿಕ್ಷನರಿ ಇಂದು ನಗರದ ಉರ್ವಸ್ಟೋರ್ ನಲ್ಲಿರುವ ಯುವವಾಹಿನಿ ಸಭಾಂಗಣದಲ್ಲಿ ಇಂದು ಅನಾವರಣಗೊಂಡಿತು. ರಾಜ್ಯ ಬಿಜೆಪಿ ವಕ್ತಾರ ಕ್ಯಾ.ಗಣೇಶ್ ಕಾರ್ಣಿಕ್ ಡಿಕ್ಷನರಿ ಅನಾವರಣಗೊಳಿಸಿ ಮಾತನಾಡಿ, ಕೊಪ್ಪರಿಗೆ ಡಿಕ್ಷನರಿಯಲ್ಲಿ ತುಳು ಭಾಷೆಯ 1200 ಪದಗಳಿಗಸ ಉಚ್ಚಾರ, ಅರ್ಥ ಸಹಿತ ವಿವರಿಸಿ ತಿಳಿದಲಾಗಿದೆ‌. ಅಲ್ಲದೆ ಇಂದಿನ ತಂತ್ರಜ್ಞಾನಕ್ಕೆ ಹೊಂದಾಣಿಕೆಯಾಗುವಂತೆ ಈ ಡಿಕ್ಷನರಿ ಆನ್ಲೈನ್ ಮೂಲಕ ಲಭ್ಯವಾಗುತ್ತಿರುವುದು ನಿಜವಾಗಿಯೂ ಸಂತೋಷದ ವಿಚಾರ ಎಂದು ತಿಳಿಸಿದರು.ಈ ಸಂದರ್ಭ ಜೈ ತುಳುನಾಡು ಸಂಘಟನೆಯ ಅಧ್ಯಕ್ಷ ಸುದರ್ಶನ್

ತುಳುಭಾಷೆಯ ಪ್ರಪ್ರಥಮ ಆನ್ಲೈನ್ ಡಿಕ್ಷನರಿ ‘ಕೊಪ್ಪರಿಗೆ’ ಇಂದು ಅನಾವರಣ Read More »

ಕರಾವಳಿ, ಕರ್ನಾಟಕ

ದುಬೈನಿಂದ ಬಂದ ಮಹಿಳೆಯಿಂದ 56 ಕೋಟಿ ಮೌಲ್ಯದ ಹೆರಾಯಿನ್ ವಶ

(ನ್ಯೂಸ್ ಕಡಬ) newskadaba,ಬೆಂಗಳೂರು ಜು.02: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಅತಿದೊಡ್ಡ ಮಾದಕ ಜಾಲ ಪತ್ತೆ ಮಾಡಿದ್ದಾರೆ. ದುಬೈನಿಂದ ಎಮಿರೇಟ್ಸ್ ವಿಮಾನದಲ್ಲಿ ನಗರದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ 35 ವರ್ಷದ ಮಹಿಳೆಯನ್ನು ತಪಾಸಣೆ ನಡೆಸಿದ್ದಾರೆ. ಈ ವೇಳೆ ಸೂಟ್ ಕೇಸ್ ತಳ ಭಾಗದಲ್ಲಿ ಮರೆಮಾಚಿ 8 ಕೆ.ಜಿ. ತೂಕದ 56 ಕೋಟಿ ರೂ. ಮೌಲ್ಯದ ಹೆರಾಯಿನ್ ಕಳ್ಳ ಸಾಗಣೆ ಮಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ.ಮಹಿಳೆಯನ್ನು ವಶಕ್ಕೆ ಪಡೆದಿರುವ ಕಸ್ಟಮ್ಸ್ ಅಧಿಕಾರಿಗಳು, ವಿಚಾರಣೆ ನಡೆಸಿದ್ದಾರೆ.

ದುಬೈನಿಂದ ಬಂದ ಮಹಿಳೆಯಿಂದ 56 ಕೋಟಿ ಮೌಲ್ಯದ ಹೆರಾಯಿನ್ ವಶ Read More »

ಕರಾವಳಿ

ಮಂಗಳೂರು ವಿಮಾನ ನಿಲ್ದಾಣದಲ್ಲಿ ಗುದನಾಳದಲ್ಲಿಟ್ಟು ಅಕ್ರಮ ಚಿನ್ನ ಸಾಗಾಟ..!!

(ನ್ಯೂಸ್ ಕಡಬ) newskadaba,ಮಂಗಳೂರು ಜು.02: ನಗರದ ಬಜ್ಪೆಯ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ಶುಕ್ರವಾರ ವಶಕ್ಕೆ ಪಡೆದಿದ್ದಾರೆ. ಕಾಸರಗೋಡಿನ ಪ್ರಯಾಣಿಕರೊಬ್ಬರು ದುಬೈನಿಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ಮೂಲಕ ಮಂಗಳೂರು ವಿಮಾನ‌ ನಿಲ್ದಾಣಕ್ಕೆ ಬಂದಿಳಿದಿದ್ದರು. ತಪಾಸಣೆ ವೇಳೆ ಈತ 430 ಗ್ರಾಂ ತೂಕದ ಚಿನ್ನವನ್ನು ಪೌಡರ್ ಅನ್ನು ಗುದನಾಳದಲ್ಲಿಟ್ಟು ಸಾಗಿಸುತ್ತಿರುವುದು ಪತ್ತೆಯಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಬಂಧಿತ ಪ್ರಯಾಣಿಕನಿಂದ ಒಟ್ಟು 20.89 ಲಕ್ಷ ರೂ ಮೌಲ್ಯದ ಅಕ್ರಮ ಚಿನ್ನವನ್ನು ವಶಕ್ಕೆ

ಮಂಗಳೂರು ವಿಮಾನ ನಿಲ್ದಾಣದಲ್ಲಿ ಗುದನಾಳದಲ್ಲಿಟ್ಟು ಅಕ್ರಮ ಚಿನ್ನ ಸಾಗಾಟ..!! Read More »

ಕರಾವಳಿ

ಪ್ರಸಿದ್ಧ ವಿಜ್ಞಾನ ಅಂಕಣಕಾರ ಸುಧೀಂದ್ರ ಹಾಲ್ದೊಡ್ಡೇರಿ ನಿಧನ

(ನ್ಯೂಸ್ ಕಡಬ) newskadaba,ಬೆಂಗಳೂರು ಜು.02:ಡಿಆರ್ ಡಿಒ ಮಾಜಿ ವಿಜ್ಞಾನಿ, ಹೆಚ್ಎಎಲ್ ಸಂಸ್ಥೆಯ ಹಿರಿಯ ನಿವೃತ್ತ ಇಂಜಿನಿಯರ್, ಅಂಕಣಕಾರ ಸುಧೀಂದ್ರ ಹಾಲ್ದೊಡ್ಡೇರಿ ಜುಲೈ 2 ರಂದು ಮಧ್ಯಾಹ್ನ ನಿಧನರಾಗಿದ್ದಾರೆ. ಅವರಿಗೆ 61 ವರ್ಷ ವಯಸ್ಸಾಗಿತ್ತು. ವಾರದ ಹಿಂದೆ ತೀವ್ರ ಹೃದಯಾಘಾತಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರ ಆರೊಗ್ಯ ಸ್ಥಿತಿಯ ಬಗ್ಗೆ ಮಾಹಿತಿ ನೀಡಿದ್ದ ವೈದ್ಯರು “ಸುಧೀಂದ್ರ ಹಾಲ್ದೊಡ್ಡೇರಿ ಅವರ ಆರೋಗ್ಯ ಸುಧಾರಣೆ ಪರಿಸ್ಥಿತಿ ಕಷ್ಟವಿದೆ” ಎಂಬ ಮಾಹಿತಿ ನೀಡಿದ್ದರು. ಸುಧೀಂದ್ರ ಹಾಲ್ದೊಡ್ಡೇರಿ ಅವರ ಮೆದುಳಿಗೆ ಆಮ್ಲಜನಕ ಪೂರೈಕೆಯಾಗುವುದು ಸ್ಥಗಿತಗೊಂಡಿದ್ದರಿಂದ ಅವರ ಮೆದುಳು

ಪ್ರಸಿದ್ಧ ವಿಜ್ಞಾನ ಅಂಕಣಕಾರ ಸುಧೀಂದ್ರ ಹಾಲ್ದೊಡ್ಡೇರಿ ನಿಧನ Read More »

ಕರ್ನಾಟಕ

ಪತಿಯ ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ನವ ವಿವಾಹಿತೆ ಹತ್ಯೆ!

(ನ್ಯೂಸ್ ಕಡಬ) newskadaba,ಚಿಕ್ಕಮಗಳೂರು ಜೂ.30:ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಮೂರು ತಿಂಗಳ ಹಿಂದೆಯಷ್ಟೇ ಮದುವೆ ಆಗಿದ್ದ ನವ ವಿವಾಹಿತೆಯನ್ನು ಪತಿಯೇ ಭೀಕರವಾಗಿ ಹತ್ಯೆ ಮಾಡಿದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.ಚಿಕ್ಕಮಗಳೂರು ನಗರದ ಪೆನ್ಷನ್ ಮೊಹಲ್ಲಾದಲ್ಲಿ ನೀರಿನ ಸಂಪ್ ಗೆ ಮುಳುಗಿಸಿ ಸಿಮ್ರಾನ್ (22) ಕೊಲೆ ಮಾಡಲಾಗಿದೆ. ಮೂರು ತಿಂಗಳ ಹಿಂದೆಯಷ್ಟೇ ಸಿಮ್ರಾನ್ ಅವರನ್ನು ಫೈರೋಜ್ ಗೆ ವಿವಾಹ ಮಾಡಿಕೊಡಲಾಗಿತ್ತು. ಆದರೆ ಮದುವೆಗೆ ಮೊದಲೇ ಅಕ್ರಮ ಸಂಬಂಧ ಹೊಂದಿದ್ದ ಫೈರೋಜ್ ಮದುವೆ ಆದ ಮೇಲೂ ಮುಂದುವರಿಸಿದ್ದ. ಇದಕ್ಕೆ ಹೆತ್ತವರು ಕೂಡ ಬೆಂಬಲ

ಪತಿಯ ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ನವ ವಿವಾಹಿತೆ ಹತ್ಯೆ! Read More »

ಕ್ರೈಮ್ ನ್ಯೂಸ್

ರಾಜ್ಯದಲ್ಲಿ ಇಂದು ಕೊರೋನಾ ಅಬ್ಬರ ➤ ಬೆಂಗಳೂರಿನಲ್ಲಿ 813 ಸೇರಿ 3,382 ಪ್ರಕರಣ ಪತ್ತೆ

(ನ್ಯೂಸ್ ಕಡಬ) newskadaba,ಬೆಂಗಳೂರು ಜೂ.30: ರಾಜ್ಯದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆಯಲ್ಲಿ ಸ್ವಲ್ಪ ಏರಿಕೆಯಾಗಿದ್ದು ಇಂದು 3,382 ಕೊರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 28,43,810ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ ಮಹಾಮಾರಿಗೆ 111 ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ 35,040ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯ ಪ್ರಕಟಿಸಿದೆ.   ಬೆಂಗಳೂರಿನಲ್ಲಿ ಇಂದು 813 ಮಂದಿಗೆ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ನಗರದಲ್ಲಿ ಸೋಂಕಿತರ ಸಂಖ್ಯೆ 12,13,559ಕ್ಕೆ ಏರಿಕೆಯಾಗಿದೆ. ಇನ್ನು ನಗರದಲ್ಲಿ ಸೋಂಕಿಗೆ 11 ಮಂದಿ ಬಲಿಯಾಗಿದ್ದಾರೆ.ರಾಜ್ಯದಲ್ಲಿ

ರಾಜ್ಯದಲ್ಲಿ ಇಂದು ಕೊರೋನಾ ಅಬ್ಬರ ➤ ಬೆಂಗಳೂರಿನಲ್ಲಿ 813 ಸೇರಿ 3,382 ಪ್ರಕರಣ ಪತ್ತೆ Read More »

ಕರ್ನಾಟಕ

ಮೀನು ಸಾಗಾಟದ ಕಂಟೈನರ್ ನಲ್ಲಿ 3 ಟನ್ ಗೋಮಾಂಸ ಸಾಗಟ ➤ ಆರೋಪಿ ಪೊಲೀಸ್ ವಶಕ್ಕೆ

(ನ್ಯೂಸ್ ಕಡಬ) newskadaba,ಕುಮಟಾ ಜೂ.30: ಮೀನಿನ ಬಾಕ್ಸ್’ಗಳಲ್ಲಿ ಇರಿಸಿ ಬರೋಬ್ಬರಿ ಮೂರು ಟನ್ ಗಿಂತಲೂ ಹೆಚ್ಚು ಗೋಮಾಂಸ ಸಾಗಾಟ ಮಾಡುತ್ತಿದ್ದ ಲಾರಿಯನ್ನು ಕುಮಟಾ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕುಮಟದ ಹೊಳೆಗದ್ದೆ ಟೋಲ್ ಗೇಟ್ ನಲ್ಲಿ ಪೊಲೀಸರು ವಾಹನ ತಪಾಸಣೆ ಮಾಡುವಾಗ ಅಕ್ರಮ ಗೋ ಮಾಂಸ ಸಾಗಟ ಮಾಡುತ್ತಿರುವುದು ಕಂಡು ಬಂದಿದೆ. ಕಂಟೈನರ್ ಚಾಲಕ ಮಹಮ್ಮದ್ ಶಾಹಿದ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಹಾನಗಲ್ ನಿಂದ ಮಂಗಳೂರಿಗೆ ಗೋ ಮಾಂಸ ಸಾಗಿಸುತ್ತಿರುವುದಾಗಿ ಆತ ಹೇಳಿದ್ದಾನೆ. ಆತನ ಹೇಳಿಕೆಯಿಂದ ಮಂಗಳೂರಿನಲ್ಲಿ ಗೋ

ಮೀನು ಸಾಗಾಟದ ಕಂಟೈನರ್ ನಲ್ಲಿ 3 ಟನ್ ಗೋಮಾಂಸ ಸಾಗಟ ➤ ಆರೋಪಿ ಪೊಲೀಸ್ ವಶಕ್ಕೆ Read More »

ಕರಾವಳಿ, ಕ್ರೈಮ್ ನ್ಯೂಸ್

ಮಂಗಳೂರು: ಮಹಿಳೆಯರ ಸಾಗಾಟ ಪ್ರಕರಣಕ್ಕೆ ತಿರುವು ➤ ಮೆಡಿಕಲ್ ಕಾಲೇಜ್‌ಗಳ ಕಳ್ಳಾಟ ಬಯಲು

(ನ್ಯೂಸ್ ಕಡಬ) newskadaba,ಮಂಗಳೂರು ಜೂ.30:ಕೊರೊನಾ ಲಸಿಕೆ ಕೊಡಿಸುವುದಾಗಿ ಹೇಳಿ ರಾತ್ರೋರಾತ್ರಿ ಮಹಿಳೆಯರನ್ನು ಸಾಗಾಟ ಮಾಡುತ್ತಿದ್ದ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ಖಾಲಿ ಇರುವ ಬೆಡ್‌ಗಳ ಭರ್ತಿಗಾಗಿ ನಕಲಿ ರೋಗಿಗಳನ್ನು ಕರೆತರುವ ಮೆಡಿಕಲ್ ಕಾಲೇಜ್‌ಗಳ ಕಳ್ಳಾಟದ ಸತ್ಯ ಪೊಲೀಸರ ತನಿಖೆ ವೇಳೆ ಬಯಲಾಗಿದೆ. ಇನ್ನೂ ಈ ಘಟನೆ ಮೂಡಬಿದ್ರೆ ತಾಲೂಕಿನ ಕುರ್ನಾಡು ಗ್ರಾಮದಲ್ಲಿ ನಡೆದಿದ್ದು, ಮಂಗಳೂರು ಹೊರವಲಯದ ಕಣಚೂರು ಆಸ್ಪತ್ರೆಯಲ್ಲಿ ಕೊರೊನಾ ಲಸಿಕೆ ಕೊಡಿಸುವುದಾಗಿ ಹೇಳಿ ಸುಮಾರು 85 ಮಹಿಳೆಯರನ್ನು ತಡರಾತ್ರಿ ಕಾಲೇಜು ಬಸ್‌ನಲ್ಲಿ ಕರೆದುಕೊಂಡು ಹೋಗಲಾಗುತ್ತಿತ್ತು. ಆದರೆ, ಪೊಲೀಸರ ತನಿಖೆ

ಮಂಗಳೂರು: ಮಹಿಳೆಯರ ಸಾಗಾಟ ಪ್ರಕರಣಕ್ಕೆ ತಿರುವು ➤ ಮೆಡಿಕಲ್ ಕಾಲೇಜ್‌ಗಳ ಕಳ್ಳಾಟ ಬಯಲು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ದೇರಳಕಟ್ಟೆಯಲ್ಲಿ 1.236 ಗ್ರಾಂ ಹೈಡೋವೀಡ್ ಗಾಂಜಾ ವಶಕ್ಕೆ ➤ ವೈದ್ಯ ವಿದ್ಯಾರ್ಥಿನಿ ಸಹಿತ ಇಬ್ಬರ ಬಂಧನ

(ನ್ಯೂಸ್ ಕಡಬ) newskadaba,ಮಂಗಳೂರು ಜೂ.30:ನಗರದ ಸಿಸಿಬಿ ಪೊಲೀಸರು ದೇರಳಕಟ್ಟೆಯಲ್ಲಿ ಬುಧವಾರ ನಡೆಸಿದ ಕಾರ್ಯಾಚರಣೆಯಲ್ಲಿ 1.236 ಗ್ರಾಂ ಹೈಡೋವೀಡ್ ಗಾಂಜಾ ವಶಕ್ಕೆ ಪಡೆಯಲಾಗಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಕಾಸರಗೋಡು ಜಿಲ್ಲೆಯ ಉಪ್ಪಳ ಮಂಗಲ್ಪಾಡಿ ನಿವಾಸಿ ಅಜ್ಮಲ್ ಟಿ. ಹಾಗೂ ಮೂಲತಃ ಕನ್ಯಾಕುಮಾರಿ ನಿವಾಸಿ, ಪ್ರಸ್ತುತ ಸುರತ್ಕಲ್‍ನಲ್ಲಿ ವಾಸವಿರುವ ಎಂಬಿಬಿಎಸ್ ವಿದ್ಯಾರ್ಥಿನಿ ಮಿನು ರಶ್ಮಿ ಬಂಧಿತ ಆರೋಪಿಗಳು. ಮಾರುಕಟ್ಟೆಯಲ್ಲಿ ಈ ಗಾಂಜಾ ಅಂದಾಜು 30 ಲಕ್ಷ ರೂ. ನಿಂದ ಒಂದು ಕೋಟಿ ರೂ. ವರೆಗೆ ಬೆಲೆಬಾಳುವಂತಹದ್ದು ಎಂದು ಮಂಗಳೂರು ನಗರ ಪೊಲೀಸ್

ದೇರಳಕಟ್ಟೆಯಲ್ಲಿ 1.236 ಗ್ರಾಂ ಹೈಡೋವೀಡ್ ಗಾಂಜಾ ವಶಕ್ಕೆ ➤ ವೈದ್ಯ ವಿದ್ಯಾರ್ಥಿನಿ ಸಹಿತ ಇಬ್ಬರ ಬಂಧನ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್
Scroll to Top