karkala

ಬಾವಿಗೆ ಬಿದ್ದು ಚಿರತೆ ಮೃತ್ಯು

(ನ್ಯೂಸ್ ಕಡಬ) newskadaba.com  ಕಾರ್ಕಳ ,ಡಿ.14 :ಮನೆಯ ಬಾವಿಗೆ ಬಿದ್ದು ಚಿರತೆಯೊಂದು ಮೃತಪಟ್ಟ ಘಟನೆ ಕಾರ್ಕಳ ತಾಲ್ಲೂಕಿನ ಬೋಳ ಗ್ರಾಮದ ನೆಲ್ಲಿಗುರಿಯಲ್ಲಿ ಸಂಭವಿಸಿದೆ. ಜಿಲ್ಲಾ ಪಂಚಾಯತ್ ಸದಸ್ಯ ಮಾಜಿ ಸುಪ್ರೀತ್ ಶೆಟ್ಟಿ ಕೆದಿಂಜೆ ಸ್ಥಳಕ್ಕೆ ಭೇಟಿ ನೀಡಿ  ನಂತರ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಎಸಿಎಫ್ ಹಾಗೂ ಸಿಬ್ಬಂದಿ ಸಮ್ಮುಖದಲ್ಲಿ ಚಿರತೆಯ ಮೃತದೇಹವನ್ನು ಮೇಲಕ್ಕೆತ್ತಲಾಯಿತು.

ಬಾವಿಗೆ ಬಿದ್ದು ಚಿರತೆ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಖಾಸಗಿ ಬಸ್ಸು ಮತ್ತು ಕಾರು ಡಿಕ್ಕಿ➤ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ಕಾರ್ಕಳ, ಡಿ. 10. ಖಾಸಗಿ ಬಸ್ಸು ಹಾಗೂ ಕಾರಿನ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಮೂವರು ಮೃತಪಟ್ಟ ಘಟನೆ ಉಡುಪಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಬಜಗೋಳಿ ಎಂಬಲ್ಲಿ ನಡೆದಿದೆ.     ಮೃತಪಟ್ಟವರನ್ನು ಆಂಧ್ರದ ಮೂಲದವರೆಂದು ಗುರುತಿಸಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.  

ಖಾಸಗಿ ಬಸ್ಸು ಮತ್ತು ಕಾರು ಡಿಕ್ಕಿ➤ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಮೃತ್ಯು Read More »

ಕರ್ನಾಟಕ

ಕಾರ್ಕಳ :ಮಹಿಳೆಯ ಚಿನ್ನದ ಸರ ಕಸಿದು ಕಳ್ಳರು ಎಸ್ಕೇಪ್

(ನ್ಯೂಸ್ ಕಡಬ) newskadaba.com ಕಾರ್ಕಳ, ಅ. 05.ಕಾರ್ಕಳದ ಎರ್ಲಪಾಡಿ ಬಳಿಯ ಬುಕ್ಕಿಗುಡ್ಡೆ ಎಂಬಲ್ಲಿ ಮಹಿಳೆಯೋರ್ವರ ಕುತ್ತಿಯಿಂದ ಕಳ್ಳರು ಚೈನ್ ಎಳೆದ ಘಟನೆ ಇಂದು ಬೆಳಗ್ಗೆ ನೆಡೆದಿದೆ. ಬುಕ್ಕಿಗುಡ್ಡೆ ಕಮಲಾ(75) ಎಂಬುವವರು ಶಿವನೆಟ್ಟು ಮಣ್ಣು ರಸ್ತೆ ಬಳಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ಇಬ್ಬರು ಕಳ್ಳರು ಕಮಲಾ ರವರ ಕುತ್ತಿಯಲ್ಲಿದ್ದ 2 ಪವನ್ ಚೈನ್ ಸರವನ್ನು ಎಳೆದುಕೊಂಡು ಪರಾರಿಯಾಗಿದ್ದಾರೆ. ಕಳ್ಳರ ಪತ್ತೆಗಾಗಿ ಪೊಲೀಸರು ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ.  

ಕಾರ್ಕಳ :ಮಹಿಳೆಯ ಚಿನ್ನದ ಸರ ಕಸಿದು ಕಳ್ಳರು ಎಸ್ಕೇಪ್ Read More »

ಕರಾವಳಿ, ಕ್ರೈಮ್ ನ್ಯೂಸ್

ಪ್ರಿಯಕರನೊಂದಿಗೆ ನಾಪತ್ತೆಯಾಗಿದ್ದ ಕಾರ್ಕಳದ ಯುವತಿ ತಮಿಳುನಾಡಿನಲ್ಲಿ ಪತ್ತೆ

(ನ್ಯೂಸ್ ಕಡಬ) newskadaba.com ಕಾರ್ಕಳ, ಸೆ.05:  ಅಸ್ಸಾಂ ಮೂಲದ ಯುವಕನ ಜೊತೆ ನಿಗೂಢವಾಗಿ ನಾಪತ್ತೆಯಾಗಿದ್ದ ಕಾರ್ಕಳ ಮೂಲದ ಯುವತಿ ಇದೀಗಾ ತಮಿಳುನಾಡಿನ ಕೃಷ್ಣಗಿರಿ ಎಂಬಲ್ಲಿ ಪತ್ತೆಯಾಗಿದ್ದಾಳೆ.   ನಲ್ಲೂರು ಗ್ರಾಮದ ಬಾಹುಬಲಿ ಸ್ವೀಟ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಸಪ್ಪೆಂಬರ್ 9ರಂದು ನಾಪತ್ತೆಯಾಗಿದ್ದಳು.  ಆಕೆಗೆ ಲಾಕ್ ಡೌನ್ ಸಮಯದಲ್ಲಿ ಮನೆಯವರು ಬೇರೆ ಯುವಕನ ಜೊತೆ ವಿವಾಹ ನಿಶ್ಚಯಮಾಡಿದ್ದರು. ಆ ಯುವಕನೊಂದಿಗೆ ವಿವಾಹವಾಗಲು ಆಕೆಗೆ ಇಷ್ಟವಿರಲಿಲ್ಲ. ಈ ಕುರಿತು ಆಕೆ ತನ್ನ ತಂಗಿಗೆ ಕರೆ ಮಾಡಿ ನಿಶ್ಚಿತವಾದ ಹುಡುಗನೊಂದಿಗೆ

ಪ್ರಿಯಕರನೊಂದಿಗೆ ನಾಪತ್ತೆಯಾಗಿದ್ದ ಕಾರ್ಕಳದ ಯುವತಿ ತಮಿಳುನಾಡಿನಲ್ಲಿ ಪತ್ತೆ Read More »

ಕರ್ನಾಟಕ

ತಡರಾತ್ರಿ ಬೆಂಕಿಗಾಹುತಿಯಾದ ಮಾರುತಿ ಇಂಡಸ್ಟ್ರೀಸ್ ➤ 1.5 ಕೋಟಿ ರೂ ಮೌಲ್ಯದ ನಷ್ಟ

(ನ್ಯೂಸ್ ಕಡಬ) newskadaba.com ಕಾರ್ಕಳ. ಆ,25: ಕಾರ್ಕಳದ ಕುಕ್ಕುಂದೂರು ಗ್ರಾಮದ ಹಾರ್ಜೆಡ್ಡು ಎಂಬಲ್ಲಿ ಮಾರುತಿ ಇಂಡಸ್ಟ್ರೀಸ್ ಗೆ ಕಳೆದ ತಡರಾತ್ರಿ ಸುಮಾರು 1 ಗಂಟೆ ವೇಳೆಗೆ ಬೆಂಕಿ ತಗುಲಿದ್ದು ಅಪಾರ ಪ್ರಮಾಣದ ಹಾನಿಯಾಗಿ ನಷ್ಟವುಂಟಾಗಿದೆ.     ಪ್ರಕಾಶ್ ಪುತ್ರನ್ ಎಂಬುವರಿಗೆ ಸೇರಿದ ಮಾರುತಿ ಇಂಡಸ್ಟ್ರೀಸ್ ಇದು ಗೇರುಬೀಜದ ಎಣ್ಣೆ ತೆಗೆಯುವ ಕಂಪನಿಯಾಗಿದ್ದು, ಇದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಪರಿಣಾಮ ಫ್ಯಾಕ್ಟರಿ ಬೆಂಕಿಯ ಕೆನ್ನಾಲಿಗೆ ಆಹುತಿಯಾಗಿದೆ. ಇನ್ನು ಎರಡು ಲಾರಿಗಳು ಭಾಗಶ: ಭಸ್ಮವಾಗಿದೆ. ಸರಿ ಸುಮಾರು ಅಂದಾಜು

ತಡರಾತ್ರಿ ಬೆಂಕಿಗಾಹುತಿಯಾದ ಮಾರುತಿ ಇಂಡಸ್ಟ್ರೀಸ್ ➤ 1.5 ಕೋಟಿ ರೂ ಮೌಲ್ಯದ ನಷ್ಟ Read More »

ಕರಾವಳಿ, ಕರ್ನಾಟಕ

ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿಗೆ ಸೋಂಕು ದೃಢ ➤ ಕಾರ್ಕಳದಲ್ಲಿ ಹೆಚ್ಚಿದ ಆತಂಕ

(ನ್ಯೂಸ್ ಕಡಬ) newskadaba.com ಕಾರ್ಕಳ,ಜೂ.1: ಕಾರ್ಕಳ ತಾಲೂಕಿನ ಬೆಳ್ಮಣ್ ಪೆರಲ್ಪಾದೆ ಎಂಬಲ್ಲಿ ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿಯೋರ್ವನಿಗೆ ಕೋವಿಡ್-19 ಸೋಂಕು ದೃಢವಾಗಿದೆ. ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆ ಸೇರಿದ ಇವರಿಗೆ ಕೋವಿಡ್-19 ಸೋಂಕು ತಾಗಿರುವುದು ಪತ್ತೆಯಾಗಿದೆ. ಮಹಾರಾಷ್ಟ್ರದಿಂದ ಗುಂಪಿನೊಂದಿಗೆ ಬಂದಿದ್ದ ಇವರು ನಂದಳಿಕೆಯಲ್ಲಿ ಸರಕಾರಿ ಕ್ವಾರಂಟೈನ್ ನಲ್ಲಿದ್ದರು. ಆದರೆ ಇವರಿಗೆ ಉಸಿರಾಟದ ಸಮಸ್ಯೆ ಕಂಡುಬಂದ ಹಿನ್ನಲೆಯಲ್ಲಿ ಮರುದಿನವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು.   ಸದ್ಯ ಆತನ ಗಂಟಲು ದ್ರವ ಪರೀಕ್ಷೆ ವರದಿ ಬಂದಿದ್ದು, ಕೋವಿಡ್-19 ಸೋಂಕು ತಾಗಿರುವುದು ದೃಢವಾಗಿದೆ. ಇವರೊಂದಿಗೆ ಮಹಾರಾಷ್ಟ್ರದಿಂದ

ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿಗೆ ಸೋಂಕು ದೃಢ ➤ ಕಾರ್ಕಳದಲ್ಲಿ ಹೆಚ್ಚಿದ ಆತಂಕ Read More »

ಕರಾವಳಿ, ಕರ್ನಾಟಕ

ಕಾರ್ಕಳ: ಕಾಡಿನಿಂದ ನಾಡಿಗೆ ಆಗಮಿಸಿದ ಚಿರತೆ ► ಮನೆಯಂಗಳದಲ್ಲಿ ಎಲ್ಲರೆದುರೇ ವಿಲವಿಲನೆ ಒದ್ದಾಡಿ ಸಾವು

(ನ್ಯೂಸ್ ಕಡಬ) newskadaba.com ಕಾರ್ಕಳ, ಡಿ.22. ಕಾಡಿನಿಂದ ನಾಡಿಗೆ ಆಗಮಿಸಿದ ಹೆಣ್ಣು ಚಿರತೆಯೊಂದು ಮನೆಯಂಗಳದಲ್ಲಿ ವಿಲವಿಲನೆ ಒದ್ದಾಡಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಎರ್ಲಪ್ಪಾಡಿ ಎಂಬಲ್ಲಿ ಗುರುವಾರದಂದು ನಡೆದಿದೆ. ಗುರುವಾರದಂದು ಕಾರ್ಕಳ ತಾಲೂಕಿನ ಎರ್ಲಪ್ಪಾಡಿ ಗ್ರಾಮದ ಕಾಂತರಗೋಡಿಯ ವಿಲಿಯಂ ಎಂಬವರ ಮನೆಯ ಅಂಗಳಕ್ಕೆ ಏಕಾಏಕಿ ಆಗಮಿಸಿದ ದೊಡ್ಡ ಗಾತ್ರದ ಹೆಣ್ಣು ಚಿರತೆಯೊಂದು ಸುತ್ತು ಬಂದವರಂತೆ ಬೀಳುತ್ತಿತ್ತು. ಮತ್ತೆ ಏಳಲು ಪ್ರಯತ್ನ ಮಾಡಿ ಮತ್ತೆ ಮತ್ತೆ ಬೀಳುತ್ತಿತ್ತು. ಸುಮಾರು 10 ರಿಂದ 15 ನಿಮಿಷಗಳ ಕಾಲ ಎಲ್ಲರ ಕಣ್ಣಮುಂದೆಯೇ ಒದ್ದಾಡಿ,

ಕಾರ್ಕಳ: ಕಾಡಿನಿಂದ ನಾಡಿಗೆ ಆಗಮಿಸಿದ ಚಿರತೆ ► ಮನೆಯಂಗಳದಲ್ಲಿ ಎಲ್ಲರೆದುರೇ ವಿಲವಿಲನೆ ಒದ್ದಾಡಿ ಸಾವು Read More »

ಕರ್ನಾಟಕ

ಯಡಿಯೂರಪ್ಪ, ಶೋಭಾ ಕರಂದ್ಲಾಜೆಯ‌ ವಿರುದ್ಧ ವಾಟ್ಸಪ್ ನಲ್ಲಿ ಅವಹೇಳನ ► ಬಿಜೆಪಿಯ ಮೂವರ ವಿರುದ್ಧ ದೂರು ದಾಖಲು

(ನ್ಯೂಸ್ ಕಡಬ) newskadaba.com ಉಡುಪಿ, ನ.17. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹಾಗೂ ಸಂಸದೆ ಶೋಭಾ ಕರಂದ್ಲಾಜೆಯ ಫೋಟೊಗಳನ್ನು ಅಶ್ಲೀಲವಾಗಿ ಚಿತ್ರಿಸಿ ವಾಟ್ಸ್ಆ್ಯಪ್ ನಲ್ಲಿ ರವಾನಿಸಿದ ಆರೋಪದಲ್ಲಿ ಕುಂದಾಪುರದ ಮೂವರು ಬಿಜೆಪಿ ಮುಖಂಡರ ವಿರುದ್ಧ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಿಜೆಪಿ ಹಿಂದುಳಿದ ಮೋರ್ಚಾದ ಜಿಲ್ಲಾಧ್ಯಕ್ಷ ಹಾಗೂ ಕುಂದಾಪುರ ಪುರಸಭೆ ಉಪಾಧ್ಯಕ್ಷ ರಾಜೇಶ್ ಕಾವೇರಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಿ. ಕಿಶೋರ್ ಕುಮಾರ್, ಮುಖಂಡ ರಾಜು ಪೂಜಾರಿ ಹಾಗೂ ಇತರರ ವಿರುದ್ಧ ಕುಂದಾಪುರ ಬಿಜೆಪಿ

ಯಡಿಯೂರಪ್ಪ, ಶೋಭಾ ಕರಂದ್ಲಾಜೆಯ‌ ವಿರುದ್ಧ ವಾಟ್ಸಪ್ ನಲ್ಲಿ ಅವಹೇಳನ ► ಬಿಜೆಪಿಯ ಮೂವರ ವಿರುದ್ಧ ದೂರು ದಾಖಲು Read More »

ಕರ್ನಾಟಕ

ಕಾರ್ಕಳ: ಆವರಣವಿಲ್ಲದ 20 ಅಡಿ ಆಳದ ಬಾವಿಗೆ ಬಿದ್ದ ಕಾಡುಕೋಣ ► ಸ್ಥಳೀಯರಿಂದ ರಕ್ಷಣೆ

(ನ್ಯೂಸ್ ಕಡಬ) newskadaba.com ಕಾರ್ಕಳ, ನ.7. ಆವರಣ ಇಲ್ಲದ ಬಾವಿಯೊಂದಕ್ಕೆ ಕಾಡು ಕೋಣವೊಂದು ಬಿದ್ದ ಘಟನೆ ಈದು ಗ್ರಾಮದಲ್ಲಿ ಸೋಮವಾರ ಮುಂಜಾನೆ ಬೆಳಕಿಗೆ ಬಂದಿದೆ. ಈದು ಪರಿಸರದ ಮಲಂಜ ಆನಂದ ಪೂಜಾರಿ ಎಂಬವರಿಗೆ ಸೇರಿದ ಜಾಗದಲ್ಲಿ ಸುಮಾರು 20 ಅಡಿ ಆಳದ ಬಾವಿಯೊಳಗಿನಿಂದ ಪ್ರಾಣಿಯೊಂದರ ಕೂಗು ಕೇಳಿ ಬಂದ ಹಿನ್ನಲೆಯಲ್ಲಿ  ಹೋಗಿ ನೋಡಿದಾಗ ಕಾಡುಕೋಣ ಬಾವಿಯಲ್ಲಿರುವುದು ಬೆಳಕಿಗೆ ಬಂದಿದೆ. ತಕ್ಷಣ ಕಾರ್ಯಪ್ರವೃತ್ತರಾದ ಸ್ಥಳೀಯರು ಅರಣ್ಯ ಇಲಾಖೆಗೆ ಈ ಬಗ್ಗೆ ಮಾಹಿತಿ ನೀಡಿ ಜೆಸಿಬಿ ಮೂಲಕ ಬಾವಿಗೆ ಕಣಿ ತೋಡಿ ಕಾಡು ಕೋಣವನ್ನು ರಕ್ಷಿಸಿದರು.

ಕಾರ್ಕಳ: ಆವರಣವಿಲ್ಲದ 20 ಅಡಿ ಆಳದ ಬಾವಿಗೆ ಬಿದ್ದ ಕಾಡುಕೋಣ ► ಸ್ಥಳೀಯರಿಂದ ರಕ್ಷಣೆ Read More »

ಕರಾವಳಿ
Scroll to Top