karavara

ಕಾರವಾರ: ಕೆಎಸ್ಸಾರ್ಟಿಸಿ ಬಸ್ ಢಿಕ್ಕಿ; ಮೂವರು ಮೃತ್ಯು

(ನ್ಯೂಸ್ ಕಡಬ) newskadaba.com ಡಿ.31: ಕಾರವಾರ: ಕೆಎಸ್ಸಾರ್ಟಿಸಿ ಬಸ್ ಢಿಕ್ಕಿಯಾಗಿ ಮೂವರು ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಹೊನ್ನಾವರದ ಶರಾವತಿ ಸೇತುವೆ ಮೇಲೆ ನಡೆದಿದೆ. ಮೃತರನ್ನು ಕಾರವಾರ ತಾಲ್ಲೂಕಿನ ಮಾವಿನಕುರ್ವದ ರಾಘವೇಂದ್ರ ಸೋಮಯ್ಯ ಗೌಡ (34), ಸಂಶಿಯ ಗೌರೀಶ ( 25), ಖರ್ವಾದ ರಮೇಶ (22) ಎಂದು ಗುರುತಿಸಲಾಗಿದೆ. ವಿಜಯಪುರದಿಂದ ಮಂಗಳೂರಿಗೆ ಸಾಗುತ್ತಿದ್ದ ಸಾರಿಗೆ ಸಂಸ್ಥೆ ಬಸ್ ಹಾಗೂ ಬೈಕ್‌ನಲ್ಲಿದ್ದವರು ಮಂಕಿ ಕಡೆಯಿಂದ ಹೊನ್ನಾವರ ಪಟ್ಟಣಕ್ಕೆ ಹೊರಟಿದ್ದರು ಎನ್ನಲಾಗಿದ್ದು, ಬೈಕ್ ಮತ್ತು ಬಸ್ […]

ಕಾರವಾರ: ಕೆಎಸ್ಸಾರ್ಟಿಸಿ ಬಸ್ ಢಿಕ್ಕಿ; ಮೂವರು ಮೃತ್ಯು Read More »

ಕರಾವಳಿ

ಕಾರವಾರ: ಉದ್ಯಮಿಯ ಹತ್ಯೆ ಪತ್ನಿಗೆ ಗಂಭೀರ ಗಾಯ-ದುಷ್ಕರ್ಮಿಗಳ ದಾಳಿ

(ನ್ಯೂಸ್ ಕಡಬ) newskadaba.com ಕಾರವಾರ ಸೆ.23: ಕಾರವಾರ ತಾಲೂಕಿನ ಹಣಕೋಣ ಗ್ರಾಮದಲ್ಲಿ ಇಂದು ಮುಂಜಾನೆ ಅಪರಿಚಿತ ದುಷ್ಕರ್ಮಿಗಳು ಮನೆಯೊಂದಕ್ಕೆ ನುಗ್ಗಿ ಉದ್ಯಮಿ ವಿನಾಯಕ ನಾಯ್ಕ (54) ಅವರನ್ನು ಹತ್ಯೆಗೈದು, ಅವರ ಪತ್ನಿ ವೈಶಾಲಿ ಅವರನ್ನು ಗಂಭೀರವಾಗಿ ಗಾಯಗೊಳಿಸಿದ ಘಟನೆ ನಡೆದಿದೆ.ವಿನಾಯಕ ಮತ್ತು ವೈಶಾಲಿ ದಂಪತಿ ಪುಣೆ ನಗರದಲ್ಲಿ ವಾಸವಿದ್ದು, ಕೈಗಾರಿಕೋದ್ಯಮ ನಡೆಸುತ್ತಿದ್ದರು. ಅವರು ಇತ್ತೀಚೆಗೆ ಸಾತೇರಿ ದೇವಿ ಜಾತ್ರೆಯ ಹಿನ್ನೆಲೆಯಲ್ಲಿ ಹಣಕೋಣಕ್ಕೆ ಬಂದಿದ್ದು, ತಮ್ಮ ಮನೆಯಲ್ಲಿಯೇ ವಾಸವಿದ್ದರು. ಇಂದು ಮುಂಜಾನೆ ದರೋಡೆಕೋರರು ದಂಪತಿಯ ಮೇಲೆ ದಾಳಿ ನಡೆಸಿದ್ದಾರೆ.

ಕಾರವಾರ: ಉದ್ಯಮಿಯ ಹತ್ಯೆ ಪತ್ನಿಗೆ ಗಂಭೀರ ಗಾಯ-ದುಷ್ಕರ್ಮಿಗಳ ದಾಳಿ Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

 ದೇವಸ್ಥಾನ ಕಳ್ಳತನ ಮಾಡಿ ಓಡಿ ಹೋಗುವಾಗ ಅಪಘಾತದಲ್ಲಿ ಸಿಕ್ಕಿಬಿದ್ದ ಕಳ್ಳರು

(ನ್ಯೂಸ್ ಕಡಬ)newskadaba.com ಕಾರವಾರ,ಫೆ.07. ದೇವಸ್ಥಾನದಲ್ಲಿ ಕಳ್ಳತನ ಮಾಡಿ ಬಳಿಕ ತಪ್ಪಿಸಿಕೊಳ್ಳಲು ಹೋಗಿ ಅಪಘಾತವಾಗಿ ಕಳ್ಳರು  ಸಿಕ್ಕಿಬಿದ್ದಿರುವಂತಹ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುಟ್ಟಳ್ಳಿ ಗ್ರಾಮಪಂಚಾಯ್ತಿ ವ್ಯಾಪ್ತಿಯ ಎಕ್ಕೆಗೋಳಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆದಿದೆಎಂದು ವರದಿಯಾಗಿದೆ. . ಶಿವಮೊಗ್ಗ ಮೂಲದ ಇರ್ಫಾನ್ ಹಾಗೂ ಆರೀಫ್ ಬಂಧನಕ್ಕೊಳಗಾದ ಕಳ್ಳರು. ದೇವಸ್ಥಾನದ ಬೀಗ ಮುರಿದು 55 ಸಾವಿರ ರೂ. ಹಣ ಮತ್ತು ದೇವರ ಪರಿಕರಗಳನ್ನು ಕಳ್ಳರು ಕಳ್ಳತನ ಮಾಡಿದರು . ಜನರು ಅಟ್ಟಿಸಿಕೊಂಡು ಬಂದಾಗ ತಪ್ಪಿಸಿಕೊಂಡು ಹೋಗಿದ್ದ ಕಳ್ಳರ ಬೈಕ್ ನಿಯಂತ್ರಣ

 ದೇವಸ್ಥಾನ ಕಳ್ಳತನ ಮಾಡಿ ಓಡಿ ಹೋಗುವಾಗ ಅಪಘಾತದಲ್ಲಿ ಸಿಕ್ಕಿಬಿದ್ದ ಕಳ್ಳರು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಜಾನುವಾರುಗಳಿಗೆ ಚರ್ಮಗಂಟು ಕಾಯಿಲೆ ಭೀತಿ ➤  ʼಜಾತ್ರೆಗೆ ಎತ್ತಿನಗಾಡಿ ನಿಷೇಧʼ !

(ನ್ಯೂಸ್ ಕಡಬ)newskadaba.com  ಕಾರವಾರ, ಜ.24. ರಾಜ್ಯದಲ್ಲಿ ಜಾನುವಾರುಗಳಿಗೆ ಸಾಂಕ್ರಾಮಿಕ ಚರ್ಮಗಂಟು ರೋಗ ಸಮಸ್ಯೆ ಎದುರಾಗುತ್ತಿದ್ದಂತೆ ಕಾರವಾರದ ಇತಿಹಾಸ ಪ್ರಸಿದ್ಧ ಉಳವಿ ಚನ್ನಬಸವೇಶ್ವರ ಜಾತ್ರೆಗೆ ಎತ್ತಿನಗಾಡಿ ನಿಷೇಧ ಮಾಡಲಾಗಿದೆ. ಉಳವಿ ಚನ್ನಬಸವೇಶ್ವರ ಸ್ವಾಮಿ ಜಾತ್ರೆಯೂ ಜ. 28ರಿಂದ ಫೆ. 8ರವರೆಗೆ ನಡೆಯಲಿದ್ದು, ದಿನಗಣನೆ ಆರಂಭವಾಗಿದೆ. ಜಾತ್ರೆಯ ಪ್ರಮುಖ ಆಕರ್ಷಣೆಯ ಕೇಂದ್ರವಾಗಿದ್ದ ಎತ್ತಿನಬಂಡಿಗೆ ವಿಶೇಷ ರೀತಿಯಲ್ಲಿ ಸಿಂಗರಿಸುವುದು ಮಾಡುವುದೇ ಇಲ್ಲಿನ ಪರಂಪರೆಯಾಗಿದೆ. ಉಳವಿ ಚನ್ನಬಸವೇಶ್ವರ ಜಾತ್ರೆ ಸಿದ್ದತೆಯಲ್ಲಿದ್ದ ಜನರಿಗೆ ಉತ್ತರ ಕನ್ನಡ ಜಿಲ್ಲಾಡಳಿತ ನಿಷೇಧ ಹೇರಿದ ಬೆನ್ನಲ್ಲೇ ಭಕ್ತರ ನಿರಾಸೆ

ಜಾನುವಾರುಗಳಿಗೆ ಚರ್ಮಗಂಟು ಕಾಯಿಲೆ ಭೀತಿ ➤  ʼಜಾತ್ರೆಗೆ ಎತ್ತಿನಗಾಡಿ ನಿಷೇಧʼ ! Read More »

ಕರಾವಳಿ

ಕಾರವಾರ: ವೀಸಾ ಉಲ್ಲಂಘನೆ ಮಾಡಿದ ಪಾಕಿಸ್ತಾನಿ ಮಹಿಳೆಗೆ ಶಿಕ್ಷೆ ಪ್ರಕಟಿಸಿದ ನ್ಯಾಯಾಲಯ…!!!

(ನ್ಯೂಸ್ ಕಡಬ)newskadaba.com  ಕಾರವಾರ, ಜ.07.  ಕಾನೂನು ಉಲ್ಲಂಘಿಸಿ ದೆಹಲಿಗೆ ವೀಸಾ ವಿಸ್ತರಣೆಗೆ ತೆರಳಿದ್ದ ಪಾಕಿಸ್ತಾನಿ ಮಹಿಳೆ ಹಾಗೂ ಆಕೆಯ ಪತಿಗೆ ಶಿಕ್ಷೆ ವಿಧಿಸಿ ಜಿಲ್ಲಾ ನ್ಯಾಯಾಲಯ ಆದೇಶ ಹೊರಡಿಸಿದೆ ಎಂದು ತಿಳಿದುಬಂದಿದೆ. ಮೂಲತಃ ಪಾಕಿಸ್ತಾನದ ಕರಾಚಿ ಯವಳಾದ ನಾರಾ ಪರವೀನ್ ಮಹ್ಮದ್ ಇಲಿಯಾಸ್ ಭಟ್ಕಳದ ಮೌಲಾನಾ ಆಜಾದ್ ರೋಡ್‌ನ ನಿವಾಸಿಯಾಗಿದ್ದು, ತನ್ನ ಪತಿ ಮಹ್ಮದ್ ಇಲಿಯಾಸ್ ಮಹ್ಮದ್ ಇಸ್ಮಾಯಿಲ್ ಪಿಲ್ಲೂರ ಅವರ ಜತೆಗೆ ಸ್ಥಳೀಯ ಪೊಲೀಸ್ ಠಾಣೆಗೆ, ಎಫ್‌ಆರ್‌ಒಗೆ ಮಾಹಿತಿ ನೀಡದೇ ದೆಹಲಿಗೆ ವಿಸಾ ವಿಸ್ತರಣೆಗೆ ತೆರಳಿದ್ದಳು.

ಕಾರವಾರ: ವೀಸಾ ಉಲ್ಲಂಘನೆ ಮಾಡಿದ ಪಾಕಿಸ್ತಾನಿ ಮಹಿಳೆಗೆ ಶಿಕ್ಷೆ ಪ್ರಕಟಿಸಿದ ನ್ಯಾಯಾಲಯ…!!! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ರಾಜ್ಯದ ಐವರು ಪೊಲೀಸರಿಗೆ ಕೇಂದ್ರ ಗೃಹಮಂತ್ರಿ ವಿಶೇಷ ಕಾರ್ಯಚರಣೆ ಪದಕ ಪ್ರದಾನ

(ನ್ಯೂಸ್ ಕಡಬ) newskadaba.com ಕಾರವಾರ, ಜ.07.  ‘ಕೇಂದ್ರ ಗೃಹಮಂತ್ರಿ ವಿಶೇಷ ಕಾರ್ಯಚರಣೆ ಪದಕ’ಕ್ಕೆ ರಾಜ್ಯದ ಐವರು ಪೊಲೀಸರು ಭಾಜನರಾಗಿದ್ದಾರೆ ಎಂದು ವರದಿ ತಿಳಿಸಿದೆ. ಕೇಂದ್ರ ಗೃಹ ಮಂತ್ರಿಗಳ ವಿಶೇಷ ಕಾರ್ಯಾಚರಣೆ ಪದಕಕ್ಕೆ ಆಯ್ಕೆಯಾಗಿವರನ್ನು ಹೊನ್ನಾವರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಎಸ್.ಆರ್.ಶ್ರೀಧರ್, ಸಿವಿಲ್ ಹೆಡ್ ಕಾನ್ಸ್‌ಟೇಬಲ್ ಕೃಷ್ಣ ಗೌಡ, ಬೆಂಗಳೂರು ಕಾಟನ್‌ಪೇಟೆ ಪಿಐ ಜಿ.ಬಾಲರಾಜು, ಬೆಂಗಳೂರಿನ ನಿವೃತ್ತ ಎಎಸ್‌ಐ ಎಂ.ಶೌಕತ್ ಅಲಿ, ಬೆಂಗಳೂರು ಐಎಸ್‌ಡಿ ಹೆಡ್ ಕಾನ್ಸ್ಟೇಬಲ್ ಪಿ.ಸೋಮಶೇಖರ  ಎಂದು ಗುರುತಿಸಲಾಗಿದೆ. ಅವರಿಗೆ  ಕೋರಮಂಗಲ ಪರೇಡ್ ಮೈದಾನದಲ್ಲಿ

ರಾಜ್ಯದ ಐವರು ಪೊಲೀಸರಿಗೆ ಕೇಂದ್ರ ಗೃಹಮಂತ್ರಿ ವಿಶೇಷ ಕಾರ್ಯಚರಣೆ ಪದಕ ಪ್ರದಾನ Read More »

ಕರ್ನಾಟಕ

ಕ್ಷುಲ್ಲಕ ಕಾರಣಕ್ಕೆ ಬಸ್ ಚಾಲಕ ಮತ್ತು ನಿರ್ವಾಹಕನಿಗೆ ಮನಬಂದಂತೆ ಥಳಿಸಿದ ಬೈಕ್ ಸವಾರ 

(ನ್ಯೂಸ್ ಕಡಬ) newskadaba.com ಕಾರವಾರ, ಡಿ. 31. ಕ್ಷುಲ್ಲಕ ಕಾರಣಕ್ಕೆ ಅಪರಿಚಿತ ಬೈಕ್ ಸವಾರನೋರ್ವ ಕೆ.ಎಸ್.ಆರ್.ಟಿ.ಸಿ ಚಾಲಕ ಹಾಗೂ ನಿರ್ವಾಹಕನ ಮೇಲೆ ಮನಬಂದಂತೆ ಥಳಿಸಿ ಹಲ್ಲೆ ನಡೆಸಿರುವ ಘಟನೆ ಹೊನ್ನಾವರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರ ಕಾಸರಗೋಡು ಟೊಂಕಾ ಬಳಿ ಸಂಭವಿಸಿದೆ. ಹಲ್ಲೆಗೊಳಗಾದವರನ್ನು ಬಸ್ ಚಾಲಕ ಕೃಷ್ಣ ನಾಯ್ಕ ಹಾಗೂ ನಿರ್ವಾಹಕ ಮರಿಯಪ್ಪ ಎಂದು ಗುರುತಿಸಲಾಗಿದೆ. ಹಲ್ಲೆ ನಡೆಸಿದ ಬೈಕ್ ಸವಾರನ ಕುರಿತು ಮಾಹಿತಿ ತಿಳಿದುಬಂದಿಲ್ಲ. ಕುಮಟಾದಿಂದ ಭಟ್ಕಳಕ್ಕೆ ತೆರಳುತ್ತಿದ್ದ ಬಸ್ ನಲ್ಲಿ ಕಾಸರಗೋಡು ಬಳಿ ಪ್ರಯಾಣಿಕರು

ಕ್ಷುಲ್ಲಕ ಕಾರಣಕ್ಕೆ ಬಸ್ ಚಾಲಕ ಮತ್ತು ನಿರ್ವಾಹಕನಿಗೆ ಮನಬಂದಂತೆ ಥಳಿಸಿದ ಬೈಕ್ ಸವಾರ  Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಕಾರವಾರ : ಕಾರಿನ ಬಾನೆಟ್ ಗೆ ನುಗ್ಗಿದ ಕಾಳಿಂಗ ಸರ್ಪ   

(ನ್ಯೂಸ್ ಕಡಬ) newskadaba.com   ಕಾರವಾರ, ಡಿ.20  ಕಾರಿನ ಬಾನಟ್ ಗೆ ಅಚಾನಕ್ ನುಗ್ಗಿದ 10 ಅಡಿ ಉದ್ದದ ಕಾಳಿಂಗ ಸರ್ಪವು ಆತಂಕ ಮೂಡಿಸಿದ ಘಟನೆ ಕಾರವಾರ ದಲ್ಲಿ ಸಂಭವಿಸಿದೆ. ಅರಣ್ಯ ಇಲಾಖೆಯ ಸಿಬ್ಬಂದಿ  ಸತತ ನಾಲ್ಕು ಗಂಟೆ ಕಾರ್ಯಾಚರಣೆ ಮಾಡಿ ಹಾವನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟರು ಎಂದು ತಿಳಿದುಬಂದಿದೆ. ಜೈಸಿಂಗ್ ಎಂಬುವವರು ಮಧ್ಯಾಹ್ನ ತಮ್ಮ ಕಾರಿನಲ್ಲಿ ಬರುತ್ತಿದ್ದರು. ಆಗ ಕುಚೇಗಾರ್ ಹತ್ತಿರ ಕಾಳಿಂಗ ಸರ್ಪವು ಬಾನೆಟ್ ನೊಳಗೆ ನುಗ್ಗಿತ್ತು ಎನ್ನಲಾಗಿದೆ. ಕಾರ್ಯಾಚರಣೆಯಲ್ಲಿ ಸಿಬ್ಬಂದಿ ರಜತ್ ಗೋವೇಕರ್,

ಕಾರವಾರ : ಕಾರಿನ ಬಾನೆಟ್ ಗೆ ನುಗ್ಗಿದ ಕಾಳಿಂಗ ಸರ್ಪ    Read More »

ಕರ್ನಾಟಕ

ಸಮುದ್ರದ ಅಲೆಗೆ ಸಿಳುಕಿ ► ಇಬ್ಬರು ಬಾಲಕರು ನೀರುಪಾಲು

(ನ್ಯೂಸ್ ಕಡಬ) newskadaba.com ಕಾರವಾರ,ಅ.03. ಸಮುದ್ರಕ್ಕೆ ಆಟವಾಡಲು ತೆರಳಿದ್ದ ಬಾಲಕರಿಬ್ಬರು ಶವವಾಗಿ ಪತ್ತೆಯಾಗಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರ್ಡೇಶ್ವರದ ಸಣ್ಣಬಾವಿ ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದೆ. ಗಣೇಶ ನಾಯ್ಕ(10) ಮತ್ತು ವಿನಾಯಕ ನಾಯ್ಕ(09) ಮೃತ ದುರ್ದೈವಿಗಳು. ಸೋಮವಾರ ಸಂಜೆ ನೀರಲ್ಲಿ ಆಟವಾಡುತ್ತಿದ್ದ ವೇಳೆ ಇಬ್ಬರು ಬಾಲಕರು ಸಮುದ್ರದ ಅಲೆಗಳಿಗೆ ಸಿಳುಕಿ ಕೊಚ್ಚಿ ಹೋಗಿದ್ದರು. ತಡರಾತ್ರಿ ಹುಡುಕಾಟ ನಡೆಸಿದರೂ ಇಬ್ಬರು ಬಾಲಕರ ಸುಳಿವು ಸಿಕ್ಕಿರಲಿಲ್ಲ. ಇಂದು ಬೆಳಿಗ್ಗೆ ಗ್ರಾಮದ ಕಡಲತೀರದಲ್ಲಿ ಬಾಲಕರ ಶವ ಪತ್ತೆಯಾಗಿದೆ. ಸ್ಥಳಕ್ಕೆ ಪೊಲೀಸರು

ಸಮುದ್ರದ ಅಲೆಗೆ ಸಿಳುಕಿ ► ಇಬ್ಬರು ಬಾಲಕರು ನೀರುಪಾಲು Read More »

ಕರಾವಳಿ
Scroll to Top