karavali

ಆಟೋ ಚಾಲಕ ಆತ್ಮಹತ್ಯೆಗೆ ಶರಣು..!

(ನ್ಯೂಸ್ ಕಡಬ) newskadaba.com ಮಂಗಳೂರು, ಅ. 01. ನಗರದ ಹೊರವಲಯದ ಎದುರು ಪದವಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಪತ್ತೆಯಾಗಿದೆ. ಮೂಡುಶೆಡ್ಡೆ ನಿವಾಸಿಯಾಗಿರುವ ಸಂತೋಷ್ ನೇಣಿಗೆ ಶರಣಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಆಟೋ ಚಾಲಕರಾಗಿ ದುಡಿಯುತ್ತಿದ್ದ ಅವರ ಆತ್ಯಹತ್ಯೆಗೆ ನಿಖರ ಕಾರಣ ತಿಳಿಯಬೇಕಾಗಿದೆ. ಸ್ಥಳಕ್ಕೆ ಕಾವೂರು ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಆಟೋ ಚಾಲಕ ಆತ್ಮಹತ್ಯೆಗೆ ಶರಣು..! Read More »

ಕರಾವಳಿ, ಕ್ರೈಮ್ ನ್ಯೂಸ್

ಸುಳಿಗೆ ಸಿಲುಕಿ ನೀರುಪಾಲಾಗಿದ್ದ ಇಬ್ಬರು ಯುವಕರು ಓರ್ವ ಯುವಕನ ಮೃತದೇಹ ಪತ್ತೆ..!

(ನ್ಯೂಸ್ ಕಡಬ) newskadaba.com ಮಂಗಳೂರು, ಅ. 01. ಈಜಲು ತೆರಳಿದ್ದ ನಾಲ್ಕು ಮಂದಿ ಸ್ನೇಹಿತರ ಪೈಕಿ ಇಬ್ಬರು ನೀರಿನ ಸುಳಿಗೆ ಸಿಲುಕಿ ನೀರುಪಾಲಾದ ಘಟನೆಗೆ ಸಂಬಂಧಿಸಿದಂತೆ ಓರ್ವ ಯುವಕನ ಮೃತದೇಹ ಪತ್ತೆಯಾಗಿದೆ. ಉರ್ವಸ್ಟೋರಿನ ಅನೀಶ್ (19) ಅವರ ಮೃತದೇಹ ಸೋಮವಾರ ಬೆಳಗ್ಗೆ ಪತ್ತೆಯಾಗಿದೆ. ಅನೀಶ್ ಅವರ ಮೃತದೇಹವನ್ನು ಬೆಂಗ್ರೆಯ ಮುಳುಗು ತಜ್ಞರು ಮೇಲೆಕ್ಕೆತ್ತಿದ್ದಾರೆ. ಕೊಟ್ಟಾರ ಚೌಕಿಯ ಸುಮಿತ್ (20) ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಸುಳಿಗೆ ಸಿಲುಕಿ ನೀರುಪಾಲಾಗಿದ್ದ ಇಬ್ಬರು ಯುವಕರು ಓರ್ವ ಯುವಕನ ಮೃತದೇಹ ಪತ್ತೆ..! Read More »

ಕರಾವಳಿ, ಕ್ರೈಮ್ ನ್ಯೂಸ್

ಮೃತ ವ್ಯಕ್ತಿ ಹೆಸರಿನಲ್ಲಿದ್ದ ಕೋಟ್ಯಾಂತರ ರೂ. ಷೇರು ವಂಚನೆ: ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com ಕಾರ್ಕಳ, ಸೆ.30. ಮೃತ ವ್ಯಕ್ತಿಯೊಬ್ಬರ ಹೆಸರಿನಲ್ಲಿದ್ದ ಕೋಟ್ಯಾಂತರ ರೂ. ಷೇರುಗಳನ್ನು ಮಾರಾಟ ಮಾಡಿ ಸ್ವಂತಕ್ಕೆ ಉಪಯೋಗಿಸಿಕೊಂಡು ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಸೆನ್ ಅಪರಾಧ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಅಶೋಕ್ ಜು.13ರಂದು ಮೃತಪಟ್ಟಿದ್ದರೂ ಮೃತರ ಅಣ್ಣ ಮೋಹನ್‌ರವರ ಮಗ ದಿನೇಶ್ ಎಂಬಾತನು 2020ರ ಜು.15ರಿಂದ ಆ.18ರ ಮಧ್ಯಾವಧಿ ಯಲ್ಲಿ ಮೃತ ಅಶೋಕ್ ಅವರಿಗೆ ಸೇರಿದ ವಿವಿಧ ಕಂಪೆನಿಗಳ ಸೇರಿದ ಒಟ್ಟು 4,24,90,548.90ರೂ. ಮೌಲ್ಯದ 14,970 ಪೇರುಗಳನ್ನು ಮೃತರ ಮೊಬೈಲ್ ಸಂಖ್ಯೆ ಮತ್ತು ಈ-ಮೇಲ್ ಐ.ಡಿ ದುರ್ಬಳಕೆ

ಮೃತ ವ್ಯಕ್ತಿ ಹೆಸರಿನಲ್ಲಿದ್ದ ಕೋಟ್ಯಾಂತರ ರೂ. ಷೇರು ವಂಚನೆ: ಪ್ರಕರಣ ದಾಖಲು Read More »

ಕರಾವಳಿ, ಕ್ರೈಮ್ ನ್ಯೂಸ್

ಆಯ ತಪ್ಪಿ ಬಾವಿಗೆ ಬಿದ್ದು  ವ್ಯಕ್ತಿ ಮೃತ್ಯು..!

(ನ್ಯೂಸ್ ಕಡಬ) newskadaba.com ಉಳ್ಳಾಲ, ಸೆ.30. ಬಾವಿಯ ಆವರಣ ಗೋಡೆ ಸ್ವಚ್ಛ ಮಾಡುತ್ತಿದ್ದ ವೇಳೆ ವ್ಯಕ್ತಿಯೋರ್ವರು ಆಯ ತಪ್ಪಿ ಜಾರಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಕೋಟೆಕಾರು ನೆಲ್ಲಿಸ್ಥಳ ಕಾಳಿಕಾಂಬ ದೇವಸ್ಥಾನದ ಬಳಿಯ ನೆತ್ತಿಲ ಎಂಬಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ನವೀನ್ ಬೆಳ್ಚಾಡ(48) ಎಂದು ಗುರುತಿಸಲಾಗಿದೆ. ನವೀನ್ ಅವರು ರವಿವಾರ ಸಂಜೆ ಮನೆಯ ಹಿಂಭಾಗದ ಬಾವಿಯ ಆವರಣ ಗೋಡೆಯನ್ನು ಸ್ವಚ್ಛಗೊಳಿಸುತ್ತಿದ್ದರು.ಈ ವೇಳೆ ಆಯ ತಪ್ಪಿ ಬಾವಿಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಆಯ ತಪ್ಪಿ ಬಾವಿಗೆ ಬಿದ್ದು  ವ್ಯಕ್ತಿ ಮೃತ್ಯು..! Read More »

ಕರಾವಳಿ, ಕ್ರೈಮ್ ನ್ಯೂಸ್

’ತುಳುವರ ಹೃದಯ ವೈಶಾಲ್ಯತೆ ದೇಶಕ್ಕೆ ಮಾದರಿ’- ಕೆ.ಎಂ.ಹೆಗ್ಡೆ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ.30. ತುಳುನಾಡಿನ ಜನತೆ ತುಳು ಭಾಷೆಯ ಜತೆ ಇತರ ಭಾಷೆಗಳನ್ನು ಗೌರವಿಸುತ್ತಾರೆ. ಎಲ್ಲ ಜನರನ್ನು ತಮ್ಮವರಂತೆ ನೋಡಿಕೊಳ್ಳುವ ತುಳುವರ ಹೃದಯ ವೈಶಾಲ್ಯತೆ ದೇಶಕ್ಕೆ ಮಾದರಿಯಾಗಿದೆ ಎಂದು ರೋಟರಿ ಜಿಲ್ಲೆ 3181 ಇದರ ಅಸಿಸ್ಟೆಂಟ್ ಗವರ್ನರ್ ಕೆ.ಎಂ.ಹೆಗ್ಡೆ ಹೇಳಿದ್ದಾರೆ. ತುಳುವೆರೆ ಕಲ ಇದರ ವತಿಯಿಂದ ಪರಿಸರ ಅಧ್ಯಯನ ಕೇಂದ್ರ ನೆಲ್ಲಿಗುಡ್ಡೆ ಮತ್ತು ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಸಹಯೋಗದಲ್ಲಿ ರವಿವಾರ ನಗರದ ಲಾಲ್‌ಬಾಗ್‌ನ ಇಂದಿರಾ ಪ್ರಿಯದರ್ಶಿನಿ ವನಿತಾಪಾರ್ಕ್‌ನಲ್ಲಿ ನಡೆದ ‘ಪಚ್ಚೆ ಸಿರಿ’ ತುಳು

’ತುಳುವರ ಹೃದಯ ವೈಶಾಲ್ಯತೆ ದೇಶಕ್ಕೆ ಮಾದರಿ’- ಕೆ.ಎಂ.ಹೆಗ್ಡೆ Read More »

ಕರಾವಳಿ
crime, arrest, suspected

ಮಸೀದಿ ಕಚೇರಿಗೆ ನುಗ್ಗಿ ಕಳವಿಗೆ ಯತ್ನ: ಆರೋಪಿ ಅರೆಸ್ಟ್

(ನ್ಯೂಸ್ ಕಡಬ) newskadaba.com ಮಲ್ಪೆ, ಸೆ.30. ಸೈಯದ್ ಅಬೂಬಕ್ಕರ್ ಸಿದ್ದಿಕ್ ಜಾಮಿಯಾ ಮಸೀದಿಯ ಕಚೇರಿ ಒಳಗೆ ನುಗ್ಗಿ ಕಳವಿಗೆ ಯತ್ನಿಸುತ್ತಿದ್ದ ಆರೋಪಿಯನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಸೆ.28ರಂದು ಮಧ್ಯರಾತ್ರಿ ವೇಳೆ ನಡೆದಿದೆ. ಬಂಧಿತ ಆರೋಪಿಯನ್ನು ಬಿಹಾರ ರಾಜ್ಯದ ಬಿನೋದ್ ರಿಶಿ(40) ಎಂದು ಗುರುತಿಸಲಾಗಿದೆ. ಈತ ಕಚೇರಿಯ ಎದುರಿನ ಕಬ್ಬಿಣದ ಶೆಟರ್‌ನ ಬೀಗವನ್ನು ಮುರಿದು ಒಳನುಗ್ಗಿದ್ದು, ಆಫೀಸಿನ ಗೋಡೆಯ ಮೇಲೆ ಇರಿಸಿದ್ದ ಸಿಸಿ ಕ್ಯಾಮರಾವನ್ನು ಒಡೆದು ಹಾಕಿದ್ದಾನೆ. ಬಳಿಕ ಒಳಗೆ ಹೋಗಿ ಕಚೇರಿಯ ಕಬ್ಬಿಣದ ಕಪಾಟಿನ

ಮಸೀದಿ ಕಚೇರಿಗೆ ನುಗ್ಗಿ ಕಳವಿಗೆ ಯತ್ನ: ಆರೋಪಿ ಅರೆಸ್ಟ್ Read More »

ಕರಾವಳಿ, ಕ್ರೈಮ್ ನ್ಯೂಸ್

ಸ್ಕೂಟರ್ ಮೇಲೆ ವಿದ್ಯುತ್ ತಂತಿ ಬಿದ್ದು ಗಾಯಗೊಂಡಿದ್ದ ಯುವಕ ಮೃತ್ಯು..!

(ನ್ಯೂಸ್ ಕಡಬ) newskadaba.com ಉಡುಪಿ, ಸೆ.30. ಕುಂಜಾರುಗಿರಿ ನಿವಾಸಿ, ಮಣಿಪಾಲ ಪ್ರಸ್‌ ನ ಯುನಿಟ್ 5ರಲ್ಲಿ ಉದ್ಯೋಗದಲ್ಲಿದ್ದ ಕುಂಜಾರುಗಿರಿ ಶಶಿಧರ್ ಶೆಟ್ಟಿ (42) ಸೆ. 27ರಂದು ಮೃತಪಟ್ಟಿದ್ದಾರೆ. ಶಶಿಧರ್ ಅವರು ಜುಲೈನಲ್ಲಿ ಮಣಿಪಾಲದ ಕೈಗಾರಿಕಾ ಪ್ರದೇಶದಲ್ಲಿ ಸ್ಕೂಟರ್‌ನಲ್ಲಿ ಚಲಿಸುತ್ತಿದ್ದ ವೇಳೆ ಗಾಳಿ-ಮಳೆಗೆ ವಿದ್ಯುತ್ ತಂತಿ ತುಂಡಾಗಿ ಬಿದ್ದು ಗಂಭೀರವಾಗಿ ಗಾಯಗೊಂಡು, ಕಳೆದ 2 ತಿಂಗಳಿನಿಂದ ಮಣಿಪಾಲ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.  

ಸ್ಕೂಟರ್ ಮೇಲೆ ವಿದ್ಯುತ್ ತಂತಿ ಬಿದ್ದು ಗಾಯಗೊಂಡಿದ್ದ ಯುವಕ ಮೃತ್ಯು..! Read More »

ಕರಾವಳಿ, ಕ್ರೈಮ್ ನ್ಯೂಸ್
Death, deadbody, Waterfall

ಕೆರೆಗೆ ಬಿದ್ದು 3 ವರ್ಷದ ಬಾಲಕ ಮೃತ್ಯು..!

(ನ್ಯೂಸ್ ಕಡಬ) newskadaba.com ಕಾಸರಗೋಡು, ಸೆ.30. ಕೆರೆಗೆ ಬಿದ್ದು ಮೂರು ವರ್ಷದ ಬಾಲಕ ಮೃತಪಟ್ಟ ಘಟನೆ ಬೆದ್ರಡ್ಕ ಕಂಬಾರ್ ನಲ್ಲಿ ಭಾನುವಾರ ಸಂಜೆ ನಡೆದಿದೆ. ಮೃತಪಟ್ಟ ಬಾಲಕನನ್ನು  ಕಂಬಾರಿನ ನೌಶಾದ್ ರವರ ಪುತ್ರ ಮುಹಮ್ಮದ್ ಎಂದು ಗುರುತಿಸಲಾಗಿದೆ. ಸೋಹಾನ್ ಹಬೀಬ್ ಮನೆಯಂಗಳದಲ್ಲಿ ಆಟವಾಡುತ್ತಿದ್ದ ಮುಹಮ್ಮದ್ ಸೋಹಾನ್ ಹಬೀಬ್ ದಿಢೀರ್ ನಾಪತ್ತೆಯಾಗಿದ್ದಾನೆ. ಈ ವೇಳೆ ಸಂಬಂಧಿಕರು ಮನೆಯೊಳಗೆ ಹಾಗೂ ಪರಿಸರದ ಮನೆಗಳಲ್ಲಿ ಆತನಿಗಾಗಿ ಹುಡುಕಾಟ ನಡೆಸಿದ್ದಾರೆ. ಬಾಲಕ ಪತ್ತೆಯಾಗದ ಹಿನ್ನಲೆಯಲ್ಲಿ ಸಂಬಂಧಿಕರು, ಶೋಧ ನಡೆಸಿದಾಗ ಮನೆ ಸಮೀಪದ 200 ಮೀಟರ್

ಕೆರೆಗೆ ಬಿದ್ದು 3 ವರ್ಷದ ಬಾಲಕ ಮೃತ್ಯು..! Read More »

ಕರಾವಳಿ, ಕ್ರೈಮ್ ನ್ಯೂಸ್

ಪಿ.ಎ. ಫಾರ್ಮಸಿಯ ಕಾಲೇಜು ವತಿಯಿಂದ ಯೆನೆಪೋಯ ಆರ್ಯುವೇದಿಕ್ ಆಸ್ಪತ್ರೆ ರೋಗಿಗಳಿಗೆ ಉಚಿತ ಗಾಲಿ ಕುರ್ಚಿ ವಿತರಣೆ

(ನ್ಯೂಸ್ ಕಡಬ) newskadaba.com ದೇರಳಕಟ್ಟೆ, ಸೆ. 27. ಪಿ.ಎ. ಕಾಲೇಜ್ ಆಫ್ ಫಾರ್ಮಸಿಯ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳ ವತಿಯಿಂದ “ವಿಶ್ವ ಔಷಧ ತಜ್ಞರ ದಿನ”ದ ಅಂಗವಾಗಿ ನರಿಂಗಾನ ಗ್ರಾಮದ ಕಲ್ಲೊರ ಕೋಡಿಯಲ್ಲಿರುವ ಯೆನೆಪೋಯ ಆರ್ಯುವೇದಿಕ್ ಆಸ್ಪತ್ರೆಯ ರೋಗಿಗಳಿಗೆ ಉಚಿತ ಗಾಲಿ ಕುರ್ಚಿ ಹಾಗೂ ಹಣ್ಣುಹಂಪಲುಗಳನ್ನು ವಿತರಿಸಲಾಯಿತು. ಬಳಿಕ ಸೋಮೇಶ್ವರದಲ್ಲಿರುವ ಪಶ್ಚಿಮ್ ರಿಹಾಬಿಲೇಶನ್ ಸೆಂಟರ್ ಮಾನಸಿಕ ಪುನಶ್ಚೇತನ ಕೇಂದ್ರದಲ್ಲಿರುವ ಆಶ್ರಮ ನಿವಾಸಿಗಳಿಗೆ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಿ, ಆರೋಗ್ಯ ಸಂರಕ್ಷಣೆಯ ಮಾಹಿತಿಗಳನ್ನು ನೀಡಿ, ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಮಾಡಲಾಯಿತು.

ಪಿ.ಎ. ಫಾರ್ಮಸಿಯ ಕಾಲೇಜು ವತಿಯಿಂದ ಯೆನೆಪೋಯ ಆರ್ಯುವೇದಿಕ್ ಆಸ್ಪತ್ರೆ ರೋಗಿಗಳಿಗೆ ಉಚಿತ ಗಾಲಿ ಕುರ್ಚಿ ವಿತರಣೆ Read More »

ಕರಾವಳಿ

ಅ.02 ರಂದು “ಸ್ನೇಹಾಲಯ ವ್ಯಸನ ಮುಕ್ತ ಕೇಂದ್ರ” ಲೋಕಾರ್ಪಣೆ

(ನ್ಯೂಸ್ ಕಡಬ) newskadaba.com ಮಂಜೇಶ್ವರ, ಸೆ. 28. ಸ್ನೇಹಾಲಯ ಚಾರಿಟೆಬಲ್ ಟ್ರಸ್ಟ್ ನ ಆಶ್ರಯದಲ್ಲಿ “ಸ್ನೇಹಾಲಯ ವ್ಯಸನ ಮುಕ್ತ ಕೇಂದ್ರ” ಅ. 02 ರಂದು ಲೋಕಾರ್ಪಣೆಗೊಳ್ಳಲಿದೆ. ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಸ್ನೇಹಾಲಯದ ಮ್ಯಾನೇಜಿಂಗ್ ಟ್ರಸ್ಟಿ ಜೋಸೆಫ್ ಕ್ರಾಸ್ತಾ ಅವರು, ಅನಿವಾಸಿ ಉದ್ಯಮಿ ಮೈಕಲ್ ಡಿ ಸೋಜ ಅವರು ಸ್ನೇಹಾಲಯ ವ್ಯಸನ ಮುಕ್ತ ಕೇಂದ್ರವನ್ನು ಉದ್ಘಾಟಿಸಲಿದ್ದು, ಕಾರ್ಯಕ್ರಮದಲ್ಲಿ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ವಂ. ಡೊ. ಪೀಟರ್ ಪಾವ್ಲ್ ಸಲ್ದಾನ್ಹಾ ಇವರು ಆಶೀರ್ವಚನ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.

ಅ.02 ರಂದು “ಸ್ನೇಹಾಲಯ ವ್ಯಸನ ಮುಕ್ತ ಕೇಂದ್ರ” ಲೋಕಾರ್ಪಣೆ Read More »

ಕರಾವಳಿ
Scroll to Top