karavali

ಇಂದು ನಾಳೆ ಕರಾವಳಿ ಸೇರಿದಂತೆ ರಾಜ್ಯದ ವಿವಿಧೆಡೆ ಮಳೆ ಸಾಧ್ಯತೆ

(ನ್ಯೂಸ್ ಕಡಬ)newskadaba.com, ಅ. ನವದೆಹಲಿ 09: ಇಂದು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದ್ದು, ಉತ್ತರ ಕನ್ನಡ ಜಿಲ್ಲೆಯ ಹಲವೆಡೆ ಸಾಧಾರಣ ಮಳೆಯಾಗಲಿದೆ. ಇನ್ನು ಉತ್ತರ ಒಳನಾಡು ಜಿಲ್ಲೆಗಳಲ್ಲಿ ಹಾಗೂ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಹಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತ ಹವಾಮಾನ ಇಲಾಖೆ ತಿಳಿಸಿದೆ. ಅದೇ ರೀತಿ ಅ.10ರಂದು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹಲವೆಡೆ ಸಾಧಾರಣ ಮಳೆಯಾಗುವ ಸಂಭವವಿದ್ದು, ಉತ್ತರ […]

ಇಂದು ನಾಳೆ ಕರಾವಳಿ ಸೇರಿದಂತೆ ರಾಜ್ಯದ ವಿವಿಧೆಡೆ ಮಳೆ ಸಾಧ್ಯತೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬೈಕ್- ಸ್ಕೂಟರ್ ಢಿಕ್ಕಿ: ಓರ್ವ ಮೃತ್ಯು..!

(ನ್ಯೂಸ್ ಕಡಬ)newskadaba.com ಕಾಸರಗೋಡು, ಅ. 09. ಬೈಕ್ ಮತ್ತು ಸ್ಕೂಟರ್ ನಡುವೆ ಉಂಟಾದ ಅಪಘಾತದಲ್ಲಿ ಸ್ಕೂಟರ್ ಸವಾರ ಮೃತಪಟ್ಟ ಘಟನೆ ಮಂಗಳವಾರ ರಾತ್ರಿ ಮೈಲಾಟಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಮೃತಪಟ್ಟ ಯುವಕನನ್ನು ಪೊಯಿನಾಚಿಯ ಮಣಿಕಂಠ (24) ಎಂದು ಗುರುತಿಸಲಾಗಿದೆ. ಬೈಕ್ ಸವಾರ ಮೈಲಾಟಿಯ ಪ್ರಜ್ವಲ್ (23) ಗಾಯಗೊಂಡಿದ್ದು ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೇಕಲದ ಜ್ಯೂಸ್ ಅಂಗಡಿಯಲ್ಲಿ ಕೆಲಸ ಮುಗಿಸಿ ಮಣಿಕಂಠ ತೆರಳುತ್ತಿದ್ದ ಸ್ಕೂಟರ್ ಮತ್ತು ಎದುರಿನಿಂದ ಬರುತ್ತಿದ್ದ ಬೈಕ್ ನಡುವೆ ಅಪಘಾತ ನಡೆದಿದೆ ಎನ್ನಲಾಗಿದೆ.  

ಬೈಕ್- ಸ್ಕೂಟರ್ ಢಿಕ್ಕಿ: ಓರ್ವ ಮೃತ್ಯು..! Read More »

ಕರಾವಳಿ, ಕ್ರೈಮ್ ನ್ಯೂಸ್
crime, arrest, suspected

ಮುಮ್ತಾಜ್ ಅಲಿ ಆತ್ಮಹತ್ಯೆ ಪ್ರಕರಣ: ಮೂವರು ಆರೋಪಿಗಳು ಅರೆಸ್ಟ್..!

(ನ್ಯೂಸ್ ಕಡಬ)newskadaba.com ಮಂಗಳೂರು, ಅ. 09. ಮಾಜಿ ಶಾಸಕ ಮೊಹಿಯುದ್ದೀನ್ ಬಾವಾ ಅವರ ಸಹೋದರ, ಉದ್ಯಮಿ ಮುಮ್ತಾಜ್ ಅಲಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಮಂಗಳವಾರ ಮೂವರನ್ನು ಬಂಧಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿಗಳನ್ನು (ಎ1) ಆಯೇಷಾ ಅಲಿಯಾಸ್ ರೆಹಮತ್, ಆಕೆಯ ಪತಿ ಶೋಯೆಬ್ (ಎ5) ಮತ್ತು ಸಿರಾಜ್ ಎಂದು ಗುರುತಿಸಲಾಗಿದೆ. ಅಲಿ ನಾಪತ್ತೆಯಾದ ನಂತರ ರೆಹಮತ್ ಕೇರಳಕ್ಕೆ ಪರಾರಿಯಾಗಿದ್ದರು ಎನ್ನಲಾಗಿದೆ. ಆಕೆಯನ್ನು ಬಂಟ್ವಾಳದ ಕಲ್ಲಡ್ಕ ಬಳಿ ಪೊಲೀಸರು ಬಂಧಿಸಿದ್ದಾರೆ.

ಮುಮ್ತಾಜ್ ಅಲಿ ಆತ್ಮಹತ್ಯೆ ಪ್ರಕರಣ: ಮೂವರು ಆರೋಪಿಗಳು ಅರೆಸ್ಟ್..! Read More »

ಕರಾವಳಿ, ಕ್ರೈಮ್ ನ್ಯೂಸ್

ತಿರುಪತಿ-ಉಡುಪಿ ನಡುವೆ ನೇರ ರೈಲು ಸಂಚಾರಕ್ಕೆ ಚಾಲನೆ

(ನ್ಯೂಸ್ ಕಡಬ)newskadaba.com ಕುಂದಾಪುರ, ಅ. 09. ತಿರುಪತಿ ಮತ್ತು ಉಡುಪಿ ಕುಂದಾಪುರ ನಡುವೆ ನೇರ ರೈಲು ಸೇವೆ ಬೇಕು ಎನ್ನುವ ದಶಕಗಳ ಕನಸು ಉಡುಪಿ ಸಂಸದರ ಅವಿರತ ಪ್ರಯತ್ನದಿಂದ ನನಸಾಗಿದ್ದು, ಹೈದರಾಬಾದ್ ಮಹಾನಗರಿಯ ಜತೆಯೂ ಈ ಮೂಲಕ ರೈಲು ಸೇವೆ ಆರಂಭವಾಗಿದೆ. ಬುಧವಾರ ಮತ್ತು ಶನಿವಾರ ಸಂಜೆ 5ಕ್ಕೆ ಕುಂದಾಪುರ ಉಡುಪಿ ಮಾರ್ಗದ ಮೂಲಕ ಹೊರಡುವ ರೈಲು ಮರುದಿನ ಬೆಳಿಗ್ಗೆ 11ಗಂಟೆಗೆ ತಿರುಪತಿ ಬಳಿಯ ರೇಣಿಗುಂಟ ನಿಲ್ದಾಣದ ಮೂಲಕ ಹೈದರಾಬಾದಿನ ಕಾಚಿಗುಡ ತಲುಪಲಿದೆ.ಕಳೆದ ಒಂದು ದಶಕದಿಂದ ಕುಂದಾಪುರ

ತಿರುಪತಿ-ಉಡುಪಿ ನಡುವೆ ನೇರ ರೈಲು ಸಂಚಾರಕ್ಕೆ ಚಾಲನೆ Read More »

ಕರಾವಳಿ

​ಕಾರು- ಬೈಕ್ ಢಿಕ್ಕಿ; ಸವಾರ ಮೃತ್ಯು..!

(ನ್ಯೂಸ್ ಕಡಬ)newskadaba.com ಉಡುಪಿ, ಅ. 08. ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಅ.7 ಸೋಮವಾರ ರಾತ್ರಿ 10.30ರ ಸುಮಾರಿಗೆ ಉಡುಪಿ ಎಂಜಿಎಂ ಕಾಲೇಜು ಎದುರಿನ ಡೈವರ್ಶನ್ ಪಾಯಿಂಟ್‌ನಲ್ಲಿ ನಡೆದಿದೆ. ಮೃತರನ್ನು ಹಿರಿಯಡ್ಕ ನಿವಾಸಿ, ತೆಂಕನಿಡಿಯೂರು ಕಾಲೇಜಿನ ಪದವಿ ವಿದ್ಯಾರ್ಥಿ ವೀರಜ್(18) ಎಂದು ಗುರುತಿಸಲಾಗಿದೆ. ಉಡುಪಿ-ಮಣಿಪಾಲ ರಾಷ್ಟ್ರೀಯ ಹೆದ್ದಾರಿ -169ಎ ರಸ್ತೆಯ ಇಂದ್ರಾಳಿ ರೈಲ್ವೆ ಸೇತುವೆ ಕಾಮಗಾರಿ ಪ್ರಗತಿಯಲ್ಲಿರುವುದರಿಂದ ಎಂಜಿಎಂ ಕಾಲೇಜು ಎದುರು ಉಡುಪಿ ಕಡೆಯಿಂದ ಮಣಿಪಾಲ ಕಡೆಗೆ ಹಾದು ಹೋಗಿರುವ ಏಕಮುಖ

​ಕಾರು- ಬೈಕ್ ಢಿಕ್ಕಿ; ಸವಾರ ಮೃತ್ಯು..! Read More »

ಕರಾವಳಿ, ಕ್ರೈಮ್ ನ್ಯೂಸ್

​ಎ ಕೆ ಸಮೂಹ ಸಂಸ್ಥೆಯ ಅಧ್ಯಕ್ಷ ಎ ಕೆ ಅಹ್ಮದ್ ನಿಧನ

(ನ್ಯೂಸ್ ಕಡಬ)newskadaba.com ಮಂಗಳೂರು, ಅ. 08. ಪ್ರತಿಷ್ಠಿತ ಎ ಕೆ ಸಮೂಹ ಸಂಸ್ಥೆಗಳ ಸ್ಥಾಪಕ ಎ ಕೆ ಅಹ್ಮದ್ ಅವರು ಮಂಗಳವಾರ ಬೆಳಗ್ಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಹೈಲ್ಯಾಂಡ್ ನ ಇಹ್ಸಾನ್ ಮಸೀದಿಯ ಸ್ಥಾಪಕಾಧ್ಯಕ್ಷರಾಗಿದ್ದ ಅವರು ಸಾಮಾಜಿಕ, ಧಾರ್ಮಿಕ ಸೇವಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದರು. ಸರಳ ಸಜ್ಜನ ವ್ಯಕ್ತಿತ್ವದ ಪರೋಪಕಾರಿ ಮನೋಭಾವದವರಾಗಿದ್ದರು. ಎ ಕೆ ಗ್ರೂಪ್ ಅನ್ನು ಪ್ರಾರಂಭಿಸಿ ಯಶಸ್ಸಿನ ಉತ್ತುಂಗಕ್ಕೆ ಒಯ್ದು ಪ್ರತಿಷ್ಠಿತ ಬ್ರ್ಯಾಂಡ್ ಆಗಿ ಪರಿವರ್ತಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು.  

​ಎ ಕೆ ಸಮೂಹ ಸಂಸ್ಥೆಯ ಅಧ್ಯಕ್ಷ ಎ ಕೆ ಅಹ್ಮದ್ ನಿಧನ Read More »

ಕರಾವಳಿ, ಕ್ರೈಮ್ ನ್ಯೂಸ್

ಹಜ್ ಯಾತ್ರೆ-2025: ಆಯ್ಕೆಯಾದ ಯಾತ್ರಿಕರ ತಾತ್ಕಾಲಿಕ ಪಟ್ಟಿ ಪ್ರಕಟ

(ನ್ಯೂಸ್ ಕಡಬ)newskadaba.com ಮಂಗಳೂರು, ಅ. 08. ಭಾರತೀಯ ಹಜ್ ಕಮಿಟಿ ಮೂಲಕ 2025ರಲ್ಲಿ ಹಜ್ ಯಾತ್ರೆ ಕೈಗೊಳ್ಳಲು ರಾಜ್ಯ ಹಜ್ ಸಮಿತಿ ಮೂಲಕ ಅರ್ಜಿ ಸಲ್ಲಿಸಿದವರ ಪೈಕಿ ಆಯ್ಕೆಯಾದ ಯಾತ್ರಿಕರ ತಾತ್ಕಾಲಿಕ ಪಟ್ಟಿ ಪ್ರಕಟಗೊಂಡಿದೆ. ಆಯ್ಕೆಯಾದ ಎಲ್ಲಾ ಯಾತ್ರಿಕರು ಆರಂಭದಲ್ಲಿ ಮುಂಗಡ ಹಜ್ ಮೊತ್ತ ರೂ.1,28,000, ಮರುಪಾವತಿಸಲಾಗದ ಸಂಸ್ಕರಣಾ ಶುಲ್ಕ 300 ರೂ. ಮತ್ತು ಇತರ ವೆಚ್ಚಗಳಿಗೆ 2,000 ರೂ. ಸೇರಿದಂತೆ ಒಟ್ಟು 1,30,300 ರೂ.ಗಳನ್ನು 2024 ಅಕ್ಟೋಬರ್ 8 ರಿಂದ ಅ.21ರೊಳಗಾಗಿ ಪಾವತಿಸಬೇಕಾಗಿದೆ. 1,30,300 ರೂ.

ಹಜ್ ಯಾತ್ರೆ-2025: ಆಯ್ಕೆಯಾದ ಯಾತ್ರಿಕರ ತಾತ್ಕಾಲಿಕ ಪಟ್ಟಿ ಪ್ರಕಟ Read More »

ಕರಾವಳಿ
crime, arrest, suspected

ಅಕ್ರಮ ಮರ ಸಾಗಾಟ ಆರೋಪ: 4 ಮಂದಿ ಅರೆಸ್ಟ್

(ನ್ಯೂಸ್ ಕಡಬ)newskadaba.com ಪುತ್ತೂರು, ಅ. 08. ಅರಣ್ಯ ವಿಭಾಗ ವ್ಯಾಪ್ತಿಯ ಕಲೆಂಜಿಮಲೆ ರಕ್ಷಿತಾರಣ್ಯದಿಂದ ಅಕ್ರಮವಾಗಿ ದೂಪದ ಮರದಿಂದ ಸಂಗ್ರಹಿಸಲಾದ ಹಾಲುಮಡ್ಡಿ ಶೇಖರಿಸಿ ಸಾಗಾಟ ಮಾಡುತ್ತಿದ್ದ 4 ಮಂದಿಯನ್ನು ಸೋಮವಾರ ಪುತ್ತೂರು ಅರಣ್ಯ ಇಲಾಖೆಯ ಅಧಿಕಾರಿಗಳು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದು, ಸಾಗಾಟ ನಡೆಸುತ್ತಿದ್ದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತ ಆರೋಪಿಗಳನ್ನು ಬಂಟ್ವಾಳ ತಾಲೂಕಿನ ಕೆದಿಲ ಗ್ರಾಮದ ಪಾಟ್ರಕೋಡಿ ಬಾಯಬೆ ನಿವಾಸಿ ಉಮ್ಮರ್ ಫಾರೂಕ್ (44), ಪಾಟ್ರಕೋಡಿ ನಿವಾಸಿಗಳಾದ ಆಲಿ ಹೈದರ್ ಎಂ.ಕೆ(24), ಹಸೈನಾರ್(30) ಮತ್ತು ತಾಳಿಪಡ್ಪು ನಿವಾಸಿ ಉಮ್ಮರ್

ಅಕ್ರಮ ಮರ ಸಾಗಾಟ ಆರೋಪ: 4 ಮಂದಿ ಅರೆಸ್ಟ್ Read More »

ಕರಾವಳಿ, ಕ್ರೈಮ್ ನ್ಯೂಸ್

ಭಾರೀ ಮಳೆಗೆ 2 ಕಿ.ಮೀ. ಕೊಚ್ಚಿ ಹೋದ 91ರ ವೃದ್ಧೆ..!

(ನ್ಯೂಸ್ ಕಡಬ)newskadaba.com ಉಡುಪಿ, ಅ. 08. ಜಿಲ್ಲೆಯ ಹೆಬ್ರಿ ತಾಲೂಕು ಕಬ್ಬಿನಾಲೆ ವ್ಯಾಪ್ತಿಯ ಬಲ್ಲಾಡಿ ಗುಮ್ಮಗುಂಡಿ ತೋಡು ಹಾಗೂ ಕೆಲಕಿಲ ನದಿಯಲ್ಲಿ ಭಾನುವಾರ ಉಂಟಾದ ಭಾರಿ ಪ್ರವಾಹದಲ್ಲಿ ವೃದ್ದೆಯೊಬ್ಬಳು ಕೊಚ್ಚಿ ಹೋಗಿದ್ದು, ಆಕೆಯ ಮೃತದೇಹ ಸುಮಾರು ಎರಡು ಕಿ.ಮೀ. ದೂರದ ಬಲ್ಲಾಡಿಯ ಅರ್ಧನಾರೀಶ್ವರ ದೇವಸ್ಥಾನದ ಬಳಿ ಸೋಮವಾರ ಪತ್ತೆಯಾಗಿದೆ. ಮೃತರನ್ನು ಬಲ್ಲಾಡಿ ಬೆಂಡುಗುಡ್ಡೆಯ ಚಂದ್ರು ಗೌಡ್ತಿ (91) ಎಂದು ಗುರುತಿಸಲಾಗಿದೆ. ಬಲ್ಲಾಡಿ ಗುಡ್ಡ ಪ್ರದೇಶದಲ್ಲಿ ಭಾನುವಾರ ಮಧ್ಯಾಹ್ನ 2.30ಕ್ಕೆ ಗಾಳಿ, ಗುಡುಗು ಸಹಿತ ಭಾರಿ ಮಳೆ ಸುರಿದಿತ್ತು.

ಭಾರೀ ಮಳೆಗೆ 2 ಕಿ.ಮೀ. ಕೊಚ್ಚಿ ಹೋದ 91ರ ವೃದ್ಧೆ..! Read More »

ಕರಾವಳಿ, ಕ್ರೈಮ್ ನ್ಯೂಸ್

ರಾಜ್ಯ ಎಸ್ಡಿಎಂಸಿ ಸಮನ್ವಯ ಕೇಂದ್ರ ವೇದಿಕೆ ರಾಜ್ಯ ನಿರ್ದೇಶಕರಾಗಿ ಅಬ್ದುಲ್ ಸಲಾಂ ಚಿತ್ತೂರು ನೇಮಕ

(ನ್ಯೂಸ್ ಕಡಬ)newskadaba.com ಕುಂದಾಪುರ, ಅ. 08. ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ಕೇಂದ್ರ ವೇದಿಕೆಯ ಇದರ ರಾಜ್ಯ ನಿರ್ದೇಶಕರಾಗಿ ಅಬ್ದುಲ್ ಸಲಾಂ ಚಿತ್ತೂರು ನೇಮಕ ಮಾಡಲಾಗಿದೆ. ಕುಂದಾಪುರ ತಾಲೂಕು ಉಡುಪಿ ಜಿಲ್ಲೆ ಇವರನ್ನು ಕರ್ನಾಟಕ ರಾಜ್ಯ ಎಸ್ಡಿಎಂಸಿ ಸಮನ್ವಯ ಕೇಂದ್ರ ವೇದಿಕೆಯ ಸಂಚಾಲಕ ಮೊಯಿದಿನ್ ಕುಟ್ಟಿ ಅವರು ಮುಂದಿನ ಅದೇಶದವರೆಗೆ ನೇಮಕ ಮಾಡಿ ಆದೇಶಿಸಲಾಗಿದೆ.  

ರಾಜ್ಯ ಎಸ್ಡಿಎಂಸಿ ಸಮನ್ವಯ ಕೇಂದ್ರ ವೇದಿಕೆ ರಾಜ್ಯ ನಿರ್ದೇಶಕರಾಗಿ ಅಬ್ದುಲ್ ಸಲಾಂ ಚಿತ್ತೂರು ನೇಮಕ Read More »

ಕರಾವಳಿ
Scroll to Top