karanataka

ಬೋನಿಗೆ ಬಿದ್ದ ಚಿರತೆ

 (ನ್ಯೂಸ್ ಕಡಬ) newskadaba.com ಮಂಡ್ಯ, ಜ.05.  ಚಿರತೆಯೊಂದು ಅರಣ್ಯಾಧಿಕಾರಿಗಳು ಇಟ್ಟಿದ್ದ ಬೋನಿ ಬಿದ್ದ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಸಬ್ಬನಕುಪ್ಪೆ ಗ್ರಾಮದ ದಲ್ಲಿ ವರದಿಯಾಗಿದೆ. ಸಬ್ಬನಕುಪ್ಪೆ ವ್ಯಾಪ್ತಿಯಲ್ಲಿ ಚಿರತೆ ಆಗಾಗ್ಗೆ ಕಾಣಿಸಿಕೊಳ್ಳುತ್ತಿತ್ತು. ಇದರಿಂದಾಗಿ ಭೀತಿಗೊಂಡ ಜನರು ಚಿರತೆ ಸೆರೆಗೆ ಅರಣ್ಯಾಧಿಕಾರಿಗಳನ್ನು ಒತ್ತಾಯಿಸಿದ್ದರು. ಅದರಂತೆ ಸಬ್ಬನಕುಪ್ಪೆ ನಿವಾಸಿ ಬಾಲು ಎಂಬುವವರ ತೋಟದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಇರಿಸಿದ್ದ ಬೋನಿಗೆ ಇಂದು ಬೆಳಿಗ್ಗೆ ಆಹಾರ ಅರಸಿಕೊಂಡು ಜಮೀನಿಗೆ ಬಂದ ಚಿರತೆ ಬೋನಿನೊಳಗಿದ್ದ ಆಹಾರ ತಿನ್ನಲು ಹೋಗಿ ಸೆರೆಯಾಗಿದೆ. ಚಿರತೆ […]

ಬೋನಿಗೆ ಬಿದ್ದ ಚಿರತೆ Read More »

ಕರ್ನಾಟಕ

ಕೆನರಾ ಬ್ಯಾಂಕ್ ನ ಎಟಿಎಂನಲ್ಲಿ ಬೆಂಕಿ

(ನ್ಯೂಸ್ ಕಡಬ) newskadaba.com ಬಳ್ಳಾರಿ, ಜ. 04.  ಕೆನಾರ್ ಬ್ಯಾಂಕ್ ನ ಎಟಿಎಂನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡು ಘಟನೆ ಬಳ್ಳಾರಿ ಯ ಹಳೇ ಬಸ್ ನಿಲ್ದಾಣದ ಬಳಿ ವರದಿಯಾಗಿದೆ. ಕೂಡಲೇ ಘಟನೆ ನಡೆದ ಸ್ಥಳ ಅಗ್ನಿಶಾಮಕ ದಳ ಸಿಬ್ಬಂದಿಗಳು ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ.

ಕೆನರಾ ಬ್ಯಾಂಕ್ ನ ಎಟಿಎಂನಲ್ಲಿ ಬೆಂಕಿ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಹಿರಿಯ ಸಂಗೀತ ನಿರ್ದೇಶಕ ಮನೋರಂಜನ್ ವಿಧಿವಶ

(ನ್ಯೂಸ್ ಕಡಬ) newskadaba.com  ಬೆಂಗಳೂರು , ಡಿ. 16. ಹಿರಿಯ ಸಂಗೀತ ನಿರ್ದೇಶಕ ಮನೋರಂಜನ್ ಅಲ್ಪ ಕಾಲದ ಅಸೌಖ್ಯದಿಂದ ಕೊನೆಯುಸಿರೆಳೆದಿದ್ದಾರೆ. ಅವರು ಪತ್ನಿ ಹಾಗೂ ಪುತ್ರ, ಪುತ್ರಿಯನ್ನು ಅಗಲಿದ್ದಾರೆ. ಇವರು ಸಂಗೀತ ಕುಟುಂಬದಿಂದ ಬಂದವರು, ಇವರ ತಂದೆ ಪಂಡಿತ್ ಬಿ. ಎನ್.ಪಾರ್ಥಸಾರಥಿ ನಾಯ್ಡ ಸಂಗೀತ ವಿದ್ವಾಂಸ. 70ರ ದಶಕದಲ್ಲಿ ಕ್ಷೇತ್ರಕ್ಕೆ ಕಾಲಿಟ್ಟ ಮನೋರಂಜನ್, 800ಕ್ಕೂ ಹೆಚ್ಚು ಸಂಗೀತ ಆಲ್ಬಂ ರಚಿಸಿದ್ದಾರೆ. ‘ಕಂಡಕ್ಟರ್ ಕರಿಯಪ್ಪ’ ಧಾರಾವಾಹಿಯಲ್ಲಿ ನಟಿಸಿದ್ದ ಇವರು, ಹಿನ್ನಲೆ ಗಾಯಕರಾಗಿಯೂ ಗುರುತಿಸಿಕೊಂಡಿದ್ದಾರೆ. ಕಾರ್ತಿಕ ದೀಪ ಸೇರಿದಂತೆ ಕೆಲವು

ಹಿರಿಯ ಸಂಗೀತ ನಿರ್ದೇಶಕ ಮನೋರಂಜನ್ ವಿಧಿವಶ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಕರಡಿ ದಾಳಿ ➤ ರೈತ ಗಂಭೀರ

(ನ್ಯೂಸ್ ಕಡಬ) newskadaba.com  ಚಾಮರಾಜನಗರ, ಡಿ. 15. ಹನೂರು ತಾಲೂಕಿನ ಮಾರ್ಟಳ್ಳಿ ಸಮೀಪ ದನಗಳನ್ನು ಮೇಯಿಸುವಾಗ, ವ್ಯಕ್ತಿಯ ಮೇಲೆ ಕರಡಿ ದಾಳಿ ಮಾಡಿದೆ.  ಗಾಯಾಳುವನ್ನು ಬೆಳ್ಳಿತಂಬಡಿ ಎಂದು ಗುರುತಿಸಲಾಗಿದೆ. ಗಾಯಾಳುವನ್ನು ಚಿಕಿತ್ಸೆಗಾಗಿ ಚಾಮರಾಜನಗರದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.    

ಕರಡಿ ದಾಳಿ ➤ ರೈತ ಗಂಭೀರ Read More »

ಕರ್ನಾಟಕ

ಪೊಲೀಸರಿಂದ ಭರ್ಜರಿ ಡ್ರಗ್ಸ್ ಬೇಟೆ ➤ ನಾಲ್ವರು ಆರೋಪಿಗಳ ಬಂಧನ

(ನ್ಯೂಸ್ ಕಡಬ) newskadaba.com ಬೆಂಗಳೂರು , ಡಿ.14 : ಸಿಸಿಬಿ ಪೊಲೀಸರು ಒಂದೇ ದಿನ ಮೂರು ಕಡೆ ದಾಳಿ ಮಾಡಿ ನಾಲ್ವರು ಆರೋಪಿಗಳ ಬಳಿ ಇದ್ದ 35 ಲಕ್ಷ ಡ್ರಗ್ಸ್ ಗಳನ್ನು ವಶಕ್ಕೆ ಪಡೆದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಆರೋಪಿಗಳನ್ನು ಅಮರ್ ಮೊಹಮ್ಮದ್ , ಅಬ್ದುಲ್ , ಶಬ್ಬೀರ್ , ಯಾಸೀನ್ ,ರಮೇಶ್ ಎಂದು ಗುರುತಿಸಲಾಗಿದೆ. ಇವರು ಸಿಂಥೆಟಿಕ್ ಡ್ರಗ್ಸ್ ಮಾರಾಟ ಮಾಡುತ್ತಿದ್ದು, ಇವರ ಬಳಿಯಿದ್ದ 240 ಗ್ರಾಂ MDMA ವಶಕ್ಕೆ ಪಡೆಯಲಾಗಿದೆ.ಆರೋಪಿಗಳು ಡ್ರಗ್ಸ್ ನ್ನು ಗ್ಯಾಂಗ್

ಪೊಲೀಸರಿಂದ ಭರ್ಜರಿ ಡ್ರಗ್ಸ್ ಬೇಟೆ ➤ ನಾಲ್ವರು ಆರೋಪಿಗಳ ಬಂಧನ Read More »

ಕರ್ನಾಟಕ

ವಿದ್ಯುತ್ ತಂತಿ ತುಳಿದು ರೈತ ಮೃತ್ಯು

(ನ್ಯೂಸ್ ಕಡಬ) newskadaba.com ರಿಪ್ಪನ್ ಪೇಟೆ , ಡಿ.13. ರೈತರೋರ್ವರು ವಿದ್ಯುತ್ ತಂತಿ ತುಳಿದು ಮೃತಪಟ್ಟ ಘಟನೆ ಹೋಬಳಿಯ ನಂಜವಳ್ಳಿ ಗ್ರಾಮದಲ್ಲಿ ನಡೆದಿದೆ.   ಮೃತರನ್ನು ಗ್ರಾಮದ ವೆಡ್ಡಿನಬೈಲು ಶೇಷಗಿರಿ (45) ಎಂದು ಗುರುತಿಸಲಾಗಿದೆ. ಶೇಷಗಿರಿ ಅವರ ಮನೆಯ ಬೇಲಿಗೆ ವಿದ್ಯುತ್ ಸಂಪರ್ಕಿಸಲಾಗಿತ್ತು. ಅವರ ಪತ್ನಿ ಬೆಳಿಗ್ಗೆ ಬೇಲಿಯಲ್ಲಿದ್ದ ಹೂ ಕೀಳಲೆಂದು ಹೋದಾಗ ವಿದ್ಯುತ್ ತಂತಿ ತಗುಲಿದ್ದು, ಈ ವೇಳೆ ಅವರು ಕೂಗಿಕೊಂಡಾಗ ಬಂದ ಶೇಷಗಿರಿ ಅವರು ಆಕಸ್ಮಿಕವಾಗಿ ವಿದ್ಯುತ್ ತಂತಿ ಸ್ಪರ್ಶಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ವಿದ್ಯುತ್ ತಂತಿ ತುಳಿದು ರೈತ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

ನಟ ಶಿವರಾಜ್ ಕುಮಾರ್ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಡಿ.10  ಕನ್ನಡದ ಖ್ಯಾತ ಚಿತ್ರ ನಟ ಡಾ|| ಶಿವರಾಜ್ ಕುಮಾರ್ ರವರು ಧರ್ಮಸ್ಥಳದ ಶ್ರೀ ಮಂಜುನಾಥನ ಸನ್ನಿಧಾನಕ್ಕೆ ಕುಟುಂಬ ಸಮೇತ ಭೇಟಿ ನೀಡಿ ದೇವರ ದರ್ಶನ ಪಡೆದರು.   ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿದ ಅವರು ಶ್ರೀ  ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿ ಮಂಜುನಾಥ ಸ್ವಾಮಿಯ ದರ್ಶನ ಪಡೆದು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ ಪತ್ನಿ ಗೀತಾ ಶಿವರಾಜ್ ಕುಮಾರ್, ಪುತ್ರಿಯರಾದ ನಿರುಪಮ ರಾಜ್ ಕುಮಾರ್ , ನಿವೇದಿತ ರಾಜ್ ಕುಮಾರ್

ನಟ ಶಿವರಾಜ್ ಕುಮಾರ್ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ Read More »

ಕರಾವಳಿ, ಕರ್ನಾಟಕ

60ನೇ ಅಖಿಲ ಭಾರತ ಗೃಹರಕ್ಷಕದಳದ ಉತ್ತಾನ ದಿನಾಚರಣೆ ಹಿನ್ನೆಲೆ ರಕ್ತದಾನ ಶಿಬಿರ ➤ ರಕ್ತದಾನವೇ ಶ್ರೇಷ್ಠದಾನ- ಡಾ. ಕಿಶನ್ ರಾವ್

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 06. ರಕ್ತವನ್ನು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ. ಸಕಾಲದಲ್ಲಿ ರಕ್ತದಾನ ಮಾಡುವುದರಿಂದ ರೋಗಿಯ ಜೀವ ಉಳಿಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ನಿರಂತರವಾಗಿ ವರ್ಷಕ್ಕೆ ಕನಿಷ್ಠ ಎರಡು ಬಾರಿಯಾದರೂ ರಕ್ತದಾನ ಮಾಡಬೇಕು. ಹೀಗೆ ಮಾಡುವುದರಿಂದ ಸಮಾಜದಲ್ಲಿ ರಕ್ತದ ಕೊರತೆ ಉಂಟಾಗುವುದಿಲ್ಲ ಮತ್ತು ಎಲ್ಲ ಅಗತ್ಯ ರೋಗಿಗಳಿಗೆ ಸಕಾಲದಲ್ಲಿ ರಕ್ತ ದೊರೆತರೆ ರೋಗಿಯ ಜೀವ ಉಳಿಸುವಲ್ಲಿ ವೈದ್ಯರಿಗೆ ಅನುಕೂಲವಾಗಲಿದೆ. ಈ ಹಿನ್ನಲೆಯಲ್ಲಿ ನಿಷ್ಕಾಮ ಸೇವೆ ಸಲ್ಲಿಸುವ ಗೃಹರಕ್ಷಕರು ರಕ್ತದಾನ ಶಿಬಿರ ಆಯೋಜಿಸಿ ರಕ್ತದಾನಕ್ಕೆ

60ನೇ ಅಖಿಲ ಭಾರತ ಗೃಹರಕ್ಷಕದಳದ ಉತ್ತಾನ ದಿನಾಚರಣೆ ಹಿನ್ನೆಲೆ ರಕ್ತದಾನ ಶಿಬಿರ ➤ ರಕ್ತದಾನವೇ ಶ್ರೇಷ್ಠದಾನ- ಡಾ. ಕಿಶನ್ ರಾವ್ Read More »

ಕರಾವಳಿ, ಕರ್ನಾಟಕ

ಅಜ್ಜಾವರ ಚೈತನ್ಯ ಸೇವಾಶ್ರಮದಲ್ಲಿ ಗೀತಾಜಯಂತಿ ಕಾರ್ಯಕ್ರಮ ➤ ಪ್ರತಿಭೆ ಯಾವುದೇ ಧರ್ಮ ಜಾತಿಯ ಸೊತ್ತಲ್ಲ- ಡಾ. ಪ್ರಭಾಕರ್

(ನ್ಯೂಸ್ ಕಡಬ) newskadaba.com ಸುಳ್ಯ, ಡಿ. 05. ಪ್ರತಿಭೆ ಎನ್ನುವುದು ಯಾವುದೇ ಜಾತಿ ಧರ್ಮ ಬಣ್ಣದ ಸೊತ್ತಲ್ಲ ಎಂದು ಸುಳ್ಯದ ವಿಶ್ರಾಂತ ಪ್ರಾಂಶುಪಾಲ ಹಾಗೂ ಖ್ಯಾತ ಲೇಖಕ ಡಾ.ಪ್ರಭಾಕರ ಶಿಶಿಲ ಹೇಳಿದರು. ಅವರು ಅಜ್ಜಾವರ ಚೈತನ್ಯ ಸೇವಾಶ್ರಮದಲ್ಲಿ ಗೀತಾಜಯಂತಿ ಕಾರ್ಯಕ್ರಮ ಹಾಗೂ ಆಶ್ರಮದ ಸ್ವಾಮೀಜಿ ಶ್ರೀ ಯೋಗೇಶ್ವರಾನಂದ ಸರಸ್ವತಿಯವರ 187 ನೇ ಕೃತಿ ಧ್ಯಾನದಿಂದ ಆತ್ಮದರ್ಶನ’ವನ್ನು ಬಿಡುಗಡೆಗೊಳಿಸಿ ಮಾತನಾಡಿದರು.     ಭಗವದ್ಗೀತೆ ಜಗತ್ತಿಗೆ ಶ್ರೇಷ್ಠ ಸಂದೇಶ ನೀಡಿದೆ. ಇದು ನನ್ನ ವೈಯಕ್ತಿಕ ಜೀವನದಲ್ಲೂ ಪ್ರಯೋಜನವಾಗಿದೆ. ಮೇಲು

ಅಜ್ಜಾವರ ಚೈತನ್ಯ ಸೇವಾಶ್ರಮದಲ್ಲಿ ಗೀತಾಜಯಂತಿ ಕಾರ್ಯಕ್ರಮ ➤ ಪ್ರತಿಭೆ ಯಾವುದೇ ಧರ್ಮ ಜಾತಿಯ ಸೊತ್ತಲ್ಲ- ಡಾ. ಪ್ರಭಾಕರ್ Read More »

ಕರಾವಳಿ, ಕರ್ನಾಟಕ
Scroll to Top